Udayavni Special

ಮಾಸ್ಕಿಟೊ ಮ್ಯಾನ್‌


Team Udayavani, Aug 5, 2019, 5:00 AM IST

c-15

“ಪ್ಯಾಡ್‌ ಮ್ಯಾನ್‌’ ಖ್ಯಾತಿಯ ಅರುಣಾಚಲಂ- ಊರವರು, ಅಷ್ಟೇ ಯಾಕೆ ಮನೆಯವರು ಮತ್ತು ಬಹುರಾಷ್ಟ್ರೀಯ ಕಂಪನಿಗಳ ವಿರೋಧ ಕಟ್ಟಿಕೊಂಡು ಸ್ಯಾನಿಟರಿ ಪ್ಯಾಡ್‌ಅನ್ನು ಕಡಿಮೆ ದರದಲ್ಲಿ ಒದಗಿಸುವ ಕನಸನ್ನು ಸಾಕಾರಗೊಳಿಸಿದ್ದರು. ಅದೇ ಹಾದಿಯಲ್ಲಿ ದಶಕಗಳಿಂದ ನಡೆಯುತ್ತಿರುವವರು ಮಂಗಳೂರಿನ ಆರ್ವಿನ್‌ ನೊರೋನ್ಹಾ. ಅವರು ಅಭಿವೃದ್ಧಿ ಪಡಿಸಿರುವ ಸೊಳ್ಳೆ ಹಿಡಿಯುವ ಉಪಕರಣಕ್ಕೆ ನಮ್ಮಲ್ಲಿ ಸಿಗದೇ ಇದ್ದ ಮನ್ನಣೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊರೆಯುತ್ತಿದೆ…

ಯಾವುದೇ ಒಂದು ಹೊಸ ಉತ್ಪನ್ನವನ್ನು ಅಭಿವೃದ್ಧಿ ಪಡಿಸಿದಾಗ ಜನರು ಅದನ್ನು ಅನುಮಾನದ ದೃಷ್ಟಿಯಲ್ಲಿ ನೋಡುವುದು ಸಹಜ. ಆದರ ಜೊತೆಗೆ, ಅದೇ ಉದ್ಯಮದಲ್ಲಿ ದಶಕಗಳಿಂದ ತೊಡಗಿರುವ ದೊಡ್ಡ ದೊಡ್ಡ ಸಂಸ್ಥೆಗಳ ವಿರೋಧವೂ ಸಹಜವೇ. ಅವೆಲ್ಲವನ್ನೂ ಮೆಟ್ಟಿ ನಿಂತು ಮುಂದೆ ಮುಂದೆ ಸಾಗಿದವರಿಗೇ ಯಶಸ್ಸು ಕೈ ಹಿಡಿಯುತ್ತದೆ ಎಂಬ ಮಾತು ಸತ್ಯ. ಅದಕ್ಕೆ “ಪ್ಯಾಡ್‌ ಮ್ಯಾನ್‌’ ಖ್ಯಾತಿಯ ಅರುಣಾಚಲಂ ಮುರುಗನಾಥಂನಂಥವರು ಸಾಕ್ಷಿ. ಊರವರಿಂದ, ಅಷ್ಟೇ ಯಾಕೆ? ಮನೆಯವರಿಂದ ತಿರಸ್ಕೃತನಾದರೂ ಹಠ ಬಿಡದೆ, ಬಹುರಾಷ್ಟ್ರೀಯ ಕಂಪನಿಗಳ ಒತ್ತಡದ ನಡುವೆಯೂ ಸ್ಯಾನಿಟರಿ ಪ್ಯಾಡ್‌ಅನ್ನು ಕಡಿಮೆ ದರದಲ್ಲಿ ನೀಡುವ ಕನಸನ್ನು ಆತ ಸಾಕಾರಗೊಳಿಸಿದ್ದು ಕಡಿಮೆ ಸಾಧನೆಯಲ್ಲ. ಈ ವರ್ಗಕ್ಕೆ ಸೇರಿದವರು “ಮೋಝಿ ಕ್ವಿಟ್‌’ ಎನ್ನುವ ಸೊಳ್ಳೆ ಹಿಡಿಯುವ ಉಪಕರಣವನ್ನು ಅಭಿವೃದ್ಧಿಪಡಿಸಿದ ಮಂಗಳೂರಿನ ಆರ್ವಿನ್‌ ನೊರೋನ್ಹಾ. ತಾವು ಅಭಿವೃದ್ದಿ ಪಡಿಸಿರುವ ಉಪಕರಣ ಸಾರ್ವಜನಿಕರ ಬಳಕೆಗೆ ಲಭ್ಯವಾಗಬೇಕೆನ್ನುವುದು ಅವರ ಕನಸು. ಅದನ್ನು ನನಸು ಮಾಡಿಕೊಳ್ಳಲು ದಶಕಗಳಿಂದಲೂ ಹೋರಾಟ ನಡೆಸುತ್ತಿದ್ದಾರೆ. ಸಂಘಸಂಸ್ಥೆಗಳ ಪ್ರತಿರೋಧದ ನಡುವೆಯೂ ಅವರು ತಮ್ಮ ಕನಸನ್ನು ಕಳೆದುಕೊಂಡವರಲ್ಲ. ಇತ್ತೀಚಿಗಷ್ಟೆ ಸಾರ್ವಜನಿಕ ಬಳಕೆಗೆ ಪ್ರಧಾನಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿ ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ.

ಡೆಂಗ್ಯೂ, ಮಲೇರಿಯಾ, ಹಳದಿ ಜ್ವರ, ಪೈಲೇರಿಯಾ ಮತ್ತಿತರ ಕಾಯಿಲೆಗಳು ಸುದ್ದಿ ಮಾಡುತ್ತಿರುವ ಈ ದಿನಗಳಲ್ಲಿ ಮನೆಗಳನ್ನು ಸೊಳ್ಳೆಗಳಿಂದ ಮುಕ್ತವಾಗಿಸುವ ಕಾಯಿಲ್‌ಗ‌ಳು, ಮ್ಯಾಟ್‌ಗಳು, ಲೋಷನ್‌ಗಳು, ಬ್ಯಾಟ್‌ಗಳು ಮತ್ತಿತರ ಸಾಮಗ್ರಿಗೆ ಬೇಡಿಕೆಯೂ ಕುದುರುತ್ತಿದೆ. ಯಾವುದೇ ರಾಸಾಯನಿಕಗಳನ್ನು ಬಳಸದೆ ಜೈವಿಕವಾಗಿ ಸೊಳ್ಳೆಗಳಿಂದ ಮುಕ್ತಿ ಪಡೆಯುವ ತಂತ್ರ ಹೆಚ್ಚು ಪರಿಣಾಮಕಾರಿ ಹಾಗೂ ಸೂಕ್ತ ಎನ್ನುವುದು ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ವಿಜ್ಞಾನದ ಪ್ರತಿಪಾದನೆ. ಆದರೂ ನಾವ್ಯಾರೂ ಅದನ್ನು ಪಾಲಿಸುತ್ತಿಲ್ಲ ಎನ್ನುವುದು ವಿಪರ್ಯಾಸ. ಮಾಸ್ಕಿಟೋ ರೆಪಲ್ಲೆಂಟುಗಳ ಮಾರುಕಟ್ಟೆ ತುಂಬಾ ದೊಡ್ಡದು ಮತ್ತು ಪ್ರಭಾವಶಾಲಿಯೂ ಹೌದು. ಅವ್ಯಾವುದನ್ನೂ ಲೆಕ್ಕಿಸದೆ, ಆರೋಗ್ಯ ಇಲಾಖೆಯ ಪ್ರತಿಪಾದನೆಯಂತೆಯೇ ಸೊಳ್ಳೆ ಹಿಡಿಯುವ ಯಂತ್ರವನ್ನು ಅಭಿವೃದ್ಧಿಪಡಿಸಿದ್ದಾರೆ ಆರ್ವಿನ್‌ ನೊರೋನ್ಹಾ.

ಉಪಕರಣದ ಉಗಮ
ಇಗ್ನೇಶಿಯಸ್‌ ಒರ್ವಿನ್‌ ನೊರೋನ್ಹಾ ಅವರು ಓದಿದ್ದು ಬಿ.ಕಾಂ ಪದವಿ. ಆದರೆ ಅವರ ಆಸಕ್ತಿ ವಿಜ್ಞಾನ. ಅದರಲ್ಲೂ ಮುಖ್ಯವಾಗಿ ಸಂಶೋಧನಾ ಕ್ಷೇತ್ರ. ಅವರ ಸೊಳ್ಳೆ ವಿರುದ್ಧದ ಹೋರಾಟಕ್ಕೆ ಮುಖ್ಯ ಸ್ಫೂರ್ತಿ ತಾಯಿಯ ಅನಾರೋಗ್ಯ. ಅವರು ಸೊಳ್ಳೆ ಕಡಿತದಿಂದ ಬರುವ ಆನೆ ಕಾಲು (ಫೈಲೇರಿಯಾಸಿಸ್‌)ನಿಂದ ಬಳಲುತ್ತಿದ್ದರು. ಅದು ಅವರ ಮನಸ್ಸನ್ನು ತೀವ್ರವಾಗಿ ಕಾಡಿತ್ತು. ಸೊಳ್ಳೆ ಕಾಟ ನಿಯಂತ್ರಿಸಲು ಏನಾದರೂ ಮಾಡಬೇಕೆನ್ನುವ ನಿರ್ಧಾರವನ್ನು ಅವತ್ತೇ ಕೈಗೊಂಡರು.

2001ರಲ್ಲಿ ಹೈದರಾಬಾದ್‌ಗೆ ಹೋಗಿದ್ದಾಗ ಅಲ್ಲಿ ಅಮೆರಿಕಾದ ಬಯೋ ಫಿಸಿಕ್ಸ್‌ ಇನ್‌ಕಾರ್ಪೊರೇಶನ್‌ ಸಂಸ್ಥೆಯವರು ಸೊಳ್ಳೆಗಳನ್ನು ಕೊಲ್ಲುವ (ಮಾಸ್ಕಿಟೊ ಮ್ಯಾಗ್ನೆಟ್‌) ಉತ್ಪನ್ನದ ಪ್ರಾತ್ಯಕ್ಷಿಕೆ ಆಯೋಜಿಸಿದ್ದರು. ಆ ಯಂತ್ರದ ಬೆಲೆ 1,10,000 ರು. ಆಗಿತ್ತು. ಅಲ್ಲದೆ ತಿಂಗಳ ನಿರ್ವಹಣಾ ವೆಚ್ಚ 5,000 ರು. ಆರೋಗ್ಯಕ್ಕೆ ಹಾನಿಕರವಾದ ರಾಸಾಯನಿಕ “ಒಕ್ಟೆನಾಲ್‌’ನ್ನು ಅದರಲ್ಲಿ ಬಳಸಲಾಗುತ್ತಿತ್ತು. ಅ ಸಮಯದಲ್ಲಿ ಸೊಳ್ಳೆ ನಿರ್ಮೂಲನೆಗೆ ಇಷ್ಟೊಂದು ದುಬಾರಿಯಾದ ಯಂತ್ರ ಬೇಕೇ ಎನ್ನುವ ಪ್ರಶ್ನೆಯಿಂದ “ಮೋಝಿ ಕ್ವಿಟ್‌’ ಯಂತ್ರ ಆವಿಷ್ಕರಿಸಲು ಪ್ರೇರಣೆ ಸಿಕ್ಕಿತ್ತು. ಈ ಉಪಕರಣ ಎರಡು ಮಾಡೆಲ್‌ಗ‌ಳಲ್ಲಿ ಲಭ್ಯವಿದೆ.

ಜಾನುವಾರುಗಳ ಹಾಲು ಉತ್ಪಾದನೆ ಹೆಚ್ಚುತ್ತದೆ
ಮೋಝಿ ಕ್ವಿಟ್‌ ಉಪಕರಣ ಬಳಸುವುದಕ್ಕೂ, ಜಾನುವಾರುಗಳು ಹೆಚ್ಚಿನ ಪ್ರಮಾಣದಲ್ಲಿ ಹಾಲು ನೀಡುವುದಕ್ಕೂ ಏನು ಸಂಬಂಧ ಎಂದು ಮೊದಲಿಗೆ ಅನ್ನಿಸಬಹುದು. ಆದರೆ ಸೊಳ್ಳೆಗಳ ಕಾಟ ಕೇವಲ ಮನುಷ್ಯನಿಗೆ ಮಾತ್ರವಲ್ಲ, ಪ್ರಾಣಿಗಳಿಗೂ ಇದೆ. ಮೋಝಿ ಕ್ವಿಟ್‌ ಉಪಕರಣವನ್ನು ಹಟ್ಟಿಯಲ್ಲಿ ಇರಿಸುವುದರಿಂದ ಲಾಭವಿದೆ. ಸೊಳ್ಳೆಗಳು ಇಲ್ಲವಾದರೆ ಜಾನುವಾರುಗಳು ಯಾವುದೇ ತೊಂದರೆಯಿಲ್ಲದೆ ವಿಶ್ರಾಂತಿ ಪಡೆಯಬಹುದು, ನಿದ್ದೆ ಮಾಡಬಹುದು. ಇದರಿಂದ ಗೋವುಗಳ ದೇಹದ ತೂಕ ಜಾಸ್ತಿಯಾಗಿ ಹಾಲಿನ ಉತ್ಪಾದನೆ ಹೆಚ್ಚಿಸಿಕೊಳ್ಳಬಹುದು. ಬೀದರ್‌ನ ಕರ್ನಾಟಕ ಪಶು ವೈದ್ಯಕೀಯ ಮತ್ತು ಮೀನುಗಾರಿಕಾ ವಿಶ್ವವಿದ್ಯಾಲಯ ಈ ವಿಚಾರವಾಗಿ ಅಧ್ಯಯನ ನಡೆಸಿ ವರದಿ ನೀಡಿದೆ.

ಮುಖ್ಯ ತೊಡಕು ಇರುವುದು ಇಲ್ಲೇ…
ನ್ಯಾಶನಲ್‌ ಹೆಲ್ತ್‌ ರಿಸೋರ್ಸ್‌ ಸಿಸ್ಟಂ ಸೆಂಟರ್‌, 5 ವರ್ಷಗಳ ಹಿಂದೆ “ಮೋಝಿಕ್ವಿಟ್‌’ ಕೇವಲ ಶೈಕ್ಷಣಿಕ ಸಂಶೋಧನೆಯ ಉದ್ದೇಶಕ್ಕೆ ಬಳಸಲು ಮಾತ್ರ ಅರ್ಹವಾಗಿದೆಯೇ ಹೊರತು ರಾಷ್ಟ್ರೀಯ ಕಾರ್ಯಕ್ರಮಗಳಿಗೆ ಬಳಸಿಕೊಳ್ಳುವಂತಿಲ್ಲ’ ಎಂದು ಶಿಫಾರಸು ಮಾಡಿತ್ತು. ಇದರಿಂದಾಗಿ ಸರ್ಕಾರಿ ಅನುದಾನಗಳು ಕೈತಪ್ಪಿಹೋಗಿದ್ದವು. ಇದು ಯಾರದೋ ಒತ್ತಡಕ್ಕೆ ಮಣಿದು ನೀಡಿದ ವರದಿ ಎನ್ನುವುದು ಆರ್ವಿನ್‌ರ ದೂರು. ಒಂದೊಳ್ಳೆಯ ಉದ್ದೇಶವನ್ನು ಹೊಂದಿದ ಸಂಶೋಧನೆ ಜನರ ಬಳಿ ತಲುಪಲು ಎಷ್ಟೊಂದು ತೊಡಕುಗಳು ಬರುತ್ತವೆ ಎನ್ನುವುದು ಆರ್ವಿನ್‌ ಅವರಿಗೂ ಗೊತ್ತಿರಲಿಲ್ಲ. ಈಗ ಪ್ರಧಾನಿಯವರು ಬಿತ್ತಿರುವ “ಮೇಕ್‌ ಇನ್‌ ಇಂಡಿಯಾ’ ಬೀಜದ ನೆಪದಿಲ್ಲಾದರೂ ತಮ್ಮ ಕನಸು ಚಿಗುರೊಡೆಯಲಿದೆ, “ಮೋಝಿ ಕ್ವಿಟ್‌’ ಉತ್ಪನ್ನ ಸಾರ್ವಜನಿಕ ಬಳಕೆಗೆ ಲಭ್ಯವಾಗಲಿದೆ ಎಂಬ ಆಶಾಭಾವ ಆವರದು.

ಹೇಗೆ ಸೊಳ್ಳೆ ಹಿಡಿಯುತ್ತೆ?
ಸೊಳ್ಳೆಗಳಿರುವ ಕೊಠಡಿಯಲ್ಲಿ ಕೆಲವು ಸಮಯ ಲೈಟ್‌ ಆರಿಸಿ ಬಾಗಿಲು ಮುಚ್ಚಿ ಮೋಝಿ ಕ್ವಿಟ್‌ ಅನ್ನು ಕರೆಂಟ್‌ಗೆ ಪ್ಲಗ್‌ ಮಾಡಿ ಆನ್‌ಮಾಡಬೇಕು. ಈ ಉಪಕರಣ ಸುರಕ್ಷಿತವಾಗಿದ್ದು, ಪರಿಸರ ಸ್ನೇಹಿಯೂ ಆಗಿದೆ. ಇದರಲ್ಲಿ ರಾಸಾಯನಿಕ ಬಳಕೆ ಇಲ್ಲ. ಇದು, ಹೊಗೆ/ ಹಬೆಯನ್ನು ಹೊರಸೂಸುವುದಿಲ್ಲ. ಇದು ಬೆಳಕಿನ ಸಹಾಯದಿಂದ ಕಾರ್ಯಾಚರಿಸುತ್ತದೆ. ಆದರೆ ಅದು ಅಲ್ಟ್ರಾವಯಲೆಟ್‌ ಕಿರಣಗಳಲ್ಲ. ಈ ಉಪಕರಣದ ಸೀಕ್ರೆಟ್‌ ಇರುವುದು “ಫ‌ುಡ್‌ ಗ್ರೇಡ್‌ ಅಡಿಟಿವ್ಸ್‌’ನಲ್ಲಿ. ಅಂದರೆ ಸೇವಿಸಲು ಯೋಗ್ಯವಾದ ಪೌಡರ್‌ನಲ್ಲಿ.ಈ ವಸ್ತುವನ್ನು ಈ ಉಪಕರಣದ ಪ್ಲಾಸ್ಟಿಕ್‌ ಭಾಗಗಳ ತಯಾರಿಕೆಯ ಸಮಯದಲ್ಲಿ ಮಿಶ್ರಣ ಮಾಡಲಾಗುತ್ತದೆ. ಇದರಿಂದಾಗಿ ವಿಶೇಷ ರೀತಿಯ ಬೆಳಕು ಅದರಿಂದ ಉತ್ಪತ್ತಿಯಾಗುತ್ತದೆ. ಅಲ್ಲದೆ, ಉಪಕರಣದೊಳಗೆ ಒಂದು ಎಲೆಕ್ಟ್ರಾನಿಕ್‌ ಸರ್ಕ್ನೂಟ್‌ ಇದ್ದು, ಅದು ಮನುಷ್ಯ ದೇಹದ ತಾಪಮಾನದಷ್ಟೇ ತಾಪಮಾನವನ್ನು ಕೃತಕವಾಗಿ ಸೃಜಿಸುತ್ತದೆ.ಇವೆಲ್ಲದರಿಂದಾಗಿ ಸೊಳ್ಳೆಗಳು ಉಪಕರಣದತ್ತ ಆಕರ್ಷಿತಗೊಳ್ಳುತ್ತವೆ. ಈ ಸೊಳ್ಳೆಗಳು ಹತ್ತಿರ ಬಂದ ಕೂಡಲೆ; ಉಪಕರಣ ಅವನ್ನು ತನ್ನೊಳಗೆ ಸೆಳೆದುಕೊಂಡುಬಿಡುತ್ತದೆ. ವ್ಯಾಕ್ಯೂಮ್‌ ಕ್ಲೀನರ್‌ ರೀತಿ. ಹೇಗೆಂದರೆ, ಉಪಕರಣದಲ್ಲಿ ಒಂದು ಪುಟ್ಟ ಫ್ಯಾನ್‌ ಕೂಡಾ ಇದೆ. ಅದು ವ್ಯಾಕ್ಯೂಮ್‌ ಕ್ಲೀನರ್‌ನ ತಂತ್ರವನ್ನು ಅನುಸರಿಸುತ್ತದೆ. ಆದರೆ, ಇಲ್ಲಿ ಕಸಕ್ಕೆ ಬದಲಾಗಿ ಹತ್ತಿರ ಬಂದ ಸೊಳ್ಳೆಗಳನ್ನು ಒಳಕ್ಕೆಳೆದುಕೊಂಡು ಪುಟ್ಟ ಡಬ್ಬಿಯೊಳಕ್ಕೆ(ಕಂಟೈನರ್‌) ತಳ್ಳುತ್ತದೆ. ಅಲ್ಲಿ ಅವು ಸಾಯುತ್ತವೆ.

4 ಕೋಟಿ ಸೊಳ್ಳೆಗೆ 3 ಲಕ್ಷ ರು.
ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್‌(ಐಸಿಎಂಆರ್‌) ಮಹಾ ನಿರ್ದೇಶಕರಾಗಿದ್ದ ಡಾ| ಸೌಮ್ಯಾ ಸ್ವಾಮಿನಾಥನ್‌ ಅವರು ನಾಲ್ಕು ಪೆಟ್‌ ಜಾರ್‌ಗಳಲ್ಲಿ ತುಂಬಿದ್ದ 4 ಕೋಟಿಗಿಂತಲೂ ಹೆಚ್ಚಿನ ಸತ್ತ ಸೊಳ್ಳೆಗಳನ್ನು ಗಮನಿಸಿ 3 ಲಕ್ಷ ರೂ. ಅನುದಾನವನ್ನು ಬೆಂಗಳೂರಿನ ರಾಷ್ಟ್ರೀಯ ಮಲೇರಿಯಾ ಸಂಶೋಧನಾ ಸಂಸ್ಥೆ (ಎನ್‌ಐಎಂಆರ್‌) ಗೆ ಮಂಜೂರು ಮಾಡಿ ಮೋಝಿ ಕ್ವಿಟ್‌ ಯಂತ್ರದ ಬಗ್ಗೆ ಕ್ಷೇತ್ರ ಮೌಲ್ಯಮಾಪನ ವರದಿ ಸಲ್ಲಿಸಲು ಸೂಚನೆ ನೀಡಿದ್ದರು.

ಅಂತಾರಾಷ್ಟ್ರೀಯ ಮನ್ನಣೆ
ಎನ್‌ಐಎಂಆರ್‌ ವಿಜ್ಞಾನಿಗಳು ತಿಂಗಳುಗಳ ಕಾಲ “ಮೋಝಿ ಕ್ವಿಟ್‌’ ಮತ್ತು ಅಮೆರಿಕದಿಂದ ತರಿಸಲಾದ ಸೊಳ್ಳೆ ಹಿಡಿಯುವ ಯಂತ್ರವನ್ನು ಪರೀಕ್ಷೆಗೊಳಪಡಿಸಿದ್ದರು. ಅಮೆರಿಕಾದ ಯಂತ್ರಕ್ಕಿಂತ ಎರಡೂವರೆ ಪಟ್ಟು ಅಧಿಕ ಸೊಳ್ಳೆಗಳನ್ನು ಮೋಝಿ ಕ್ವಿಟ್‌ ಹಿಡಿಯುತ್ತದೆ ಹಾಗೂ ಎಲ್ಲಾ ರೀತಿಯ ರೋಗಗಳನ್ನು ಹರಡುವ ಎಲ್ಲಾ ಜಾತಿಯ ಸೊಳ್ಳೆಗಳನ್ನು ಹಿಡಿಯುಲು ಶಕ್ತವಾಗಿದೆ ಎಂಬ ವರದಿಯನ್ನು ವಿಜ್ಞಾನಿಗಳು ಸಲ್ಲಿಸಿದರು. ಸ್ವಿಟ್ಜರ್‌ಲ್ಯಾಂಡಿನ ಜಿನೇವಾದಲ್ಲಿ ನಡೆದ 14 ನೇ ವಾರ್ಷಿಕ ಅಧಿವೇಶನದಲ್ಲಿ ಮೋಝಿ ಕ್ವಿಟ್‌ ಪ್ರದರ್ಶನಗೊಂಡಿದೆ. ಇದೀಗ ವಿಶ್ವ ಆರೋಗ್ಯ ಸಂಸ್ಥೆಯು “ಮೋಝಿ ಕ್ವಿಟ್‌” ಉಪಕರಣವನ್ನು ಸಾರ್ವಜನಿಕ ಬಳಕೆಗೆ ಅರ್ಹವೆಂದು ತೀರ್ಪು ನೀಡಿದ್ದು 91 ಮಲೇರಿಯಾ ಪೀಡಿತ ದೇಶಗಳಲ್ಲಿ ಇದನ್ನು ವಿತರಣೆ ಮಾಡುವ ಬಗ್ಗೆ ಪರಿಶೀಲನೆ ನಡೆಸುತ್ತಿದೆ.

ನಿಖರವಾದ ಬೆಲೆ
ಮಿನಿ ಮತ್ತು ಮ್ಯಾಕ್ಸ್‌ ಎಂಬ ಎರಡು ಮಾಡೆಲ್‌ನಲ್ಲಿ ಉತ್ಪನ್ನ ದೊರೆಯುತ್ತಿದೆ. ಮ್ಯಾಕ್ಸ್‌ನಲ್ಲಿ ಸೊಳ್ಳೆಗಳನ್ನು ಹಿಡಿದಿಡುವ ಕಂಟೈನರ್‌ ದೊಡ್ಡದಿರುತ್ತದೆ ಎನ್ನುವುದು ಬಿಟ್ಟರೆ ಕಾರ್ಯಾಚರಣೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಮಿನಿಯ ಬೆಲೆ 1,800 ರು ಆಗಿದ್ದರೆ ಮ್ಯಾಕ್ಸ್‌ 3,300 ರು.ಗೆ ಸಿಗುತ್ತದೆ.

ಜಾಲತಾಣ: www.mozziquit.com

-1 ಟೈಮ್‌ ಪೇಮೆಂಟ್‌
– ರೀ ಫಿಲ್ಲಿಂಗ್‌ ಬೇಡ
– 10 ಪೈಸೆ- ದಿನದ ವಿದ್ಯುತ್‌ ಖರ್ಚು
– 5- 10 ವರ್ಷ ಬಾಳಿಕೆ
– ಝೀರೊ ಕೆಮಿಕಲ್‌ ಝೀರೊ UV ಕಿರಣ
– ಹಿಲರಿ ಕ್ರಾಸ್ತಾ

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಶ್ರೀರಂಗಪಟ್ಟಣ: ಕಾರಿಗೆ ಅಡ್ಡಗಟ್ಟಿ ಕಣ್ಣಿಗೆ ಖಾರದಪುಡಿ ಎರಚಿ ಯುವಕನ ಬರ್ಬರ ಹತ್ಯೆ

ಶ್ರೀರಂಗಪಟ್ಟಣ: ಕಾರಿಗೆ ಅಡ್ಡಗಟ್ಟಿ ಕಣ್ಣಿಗೆ ಖಾರದಪುಡಿ ಎರಚಿ ಯುವಕನ ಬರ್ಬರ ಹತ್ಯೆ

jee main exam in regional languages

ಇನ್ನು ಮುಂದೆ ಪ್ರಾದೇಶಿಕ ಭಾಷೆಗಳಲ್ಲೂ ಜೆಇಇ ಮೈನ್: ಕನ್ನಡದಲ್ಲೂ ಸಿಗುತ್ತಾ ಅವಕಾಶ?

ಭಾರತದಲ್ಲಿ ಗಾಳಿ ಕಲುಷಿತವಾಗಿದೆ: ಹವಾಮಾನ ಬದಲಾವಣೆ ಸಮರ್ಥನೆಗೆ ಭಾರತವನ್ನು ಟೀಕಿಸಿದ ಟ್ರಂಪ್

ಭಾರತದಲ್ಲಿ ಗಾಳಿ ಕಲುಷಿತವಾಗಿದೆ: ಹವಾಮಾನ ಬದಲಾವಣೆ ಸಮರ್ಥನೆಗೆ ಭಾರತವನ್ನು ಟೀಕಿಸಿದ ಟ್ರಂಪ್

swachh bharat mission

ಸ್ವಚ್ಛ ಭಾರತ್‌: ಪ್ರತಿ ಕುಟುಂಬಕ್ಕೆ 53000 ರೂ. ಉಳಿತಾಯ

ಭಾರತ-ಆಸೀಸ್‌ ಪಂದ್ಯಗಳಿಗೆ ಸಿಡ್ನಿ ಸಮ್ಮತಿ: ಆಸೀಸ್ ಗೆ ತೆರಳಲಿದೆ 32 ಸದಸ್ಯರ ಜಂಬೋ ತಂಡ

ಭಾರತ-ಆಸೀಸ್‌ ಪಂದ್ಯಗಳಿಗೆ ಸಿಡ್ನಿ ಸಮ್ಮತಿ: ಆಸೀಸ್ ಗೆ ತೆರಳಲಿದೆ 32 ಸದಸ್ಯರ ಜಂಬೋ ತಂಡ

ಮುಂಬೈ ಸಿಟಿ ಸೆಂಟರ್ ಮಾಲ್ ನಲ್ಲಿ ಅಗ್ನಿ ಅವಗಢ: 20 ಅಗ್ನಿಶಾಮಕ ವಾಹನಗಳು ದೌಡು

ಮುಂಬೈ ಸಿಟಿ ಸೆಂಟರ್ ಮಾಲ್ ನಲ್ಲಿ ಅಗ್ನಿ ಅವಗಢ: 20 ಅಗ್ನಿಶಾಮಕ ವಾಹನಗಳು ದೌಡು

ಪರೀಕ್ಷೆ ಬಿಡಿ; ಪಠ್ಯಕ್ರಮವೇ ಬಂದಿಲ್ಲ ! ಎಸೆಸೆಲ್ಸಿ ಇನ್ನೂ ಗೊಂದಲದ ಗೂಡು

ಪರೀಕ್ಷೆ ಬಿಡಿ; ಪಠ್ಯಕ್ರಮವೇ ಬಂದಿಲ್ಲ ! ಎಸೆಸೆಲ್ಸಿ ಇನ್ನೂ ಗೊಂದಲದ ಗೂಡು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

isiri-tdy-3

ಬಾಳು ಜೇನು! ಖರ್ಚು ಕಡಿಮೆ, ಲಾಭ ಜಾಸ್ತಿ…

isiri-tdy-2

ಭೂಮಿಗೆ ಸಿಗುತ್ತದೆ ಬಂಗಾರದ ಬೆಲೆ…

isiri-tdy-1

ಲೈಫ್ ಈಸ್‌ ಬುಟ್ಟಿ ಫ‌ುಲ್‌

isiri-tdy-5

ಕೀ ಬೋರ್ಡ್‌ ಮೇಲೆ ಸಿಟ್ಟಾಗಿ ಕುಟ್ಟಬೇಡಿ ಮಾರಾಯ್ರೇ.

ಆನ್‌ಲೈನ್ ‌ಕ್ಲಾಸಿಗೆ ಲ್ಯಾಪಿ

ಆನ್‌ಲೈನ್ ‌ಕ್ಲಾಸಿಗೆ ಲ್ಯಾಪಿ

MUST WATCH

udayavani youtube

ಮಲ್ಪೆ: ಬಲೆಗೆ ಬಿತ್ತು ಭಾರಿ ಗಾತ್ರದ ಎರಡು ಕೊಂಬು ತೊರಕೆ ಮೀನು

udayavani youtube

ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾರಂಭವಾಗಿರುವ ದೇಶಿ ಉತ್ಪನ್ನಗಳ ಮಳಿಗೆ

udayavani youtube

ಸ್ವಾಮಿತ್ವ: ಹೊಸ ಯೋಜನೆಯಿಂದ ನಮಗೆ ಏನು ಲಾಭ ?

udayavani youtube

ಚಿಕ್ಕಮಗಳೂರು : ಪುಷ್ಪ ಸಮರ್ಪಣೆ ವೇಳೆ ಮಗಳನ್ನ ನೆನೆದು ಕಣ್ಣೀರಿಟ್ಟ ಮೃತ ಪೇದೆ ತಾಯಿ

udayavani youtube

ಮಂಗಳೂರು: ಡ್ರಗ್ಸ್ ಜಾಗೃತಿ ಬರಹದಿಂದ ಗಮನಸೆಳೆಯುತ್ತಿದೆ ಸಿಟಿ ಬಸ್ಹೊಸ ಸೇರ್ಪಡೆ

ಶ್ರೀರಂಗಪಟ್ಟಣ: ಕಾರಿಗೆ ಅಡ್ಡಗಟ್ಟಿ ಕಣ್ಣಿಗೆ ಖಾರದಪುಡಿ ಎರಚಿ ಯುವಕನ ಬರ್ಬರ ಹತ್ಯೆ

ಶ್ರೀರಂಗಪಟ್ಟಣ: ಕಾರಿಗೆ ಅಡ್ಡಗಟ್ಟಿ ಕಣ್ಣಿಗೆ ಖಾರದಪುಡಿ ಎರಚಿ ಯುವಕನ ಬರ್ಬರ ಹತ್ಯೆ

jee main exam in regional languages

ಇನ್ನು ಮುಂದೆ ಪ್ರಾದೇಶಿಕ ಭಾಷೆಗಳಲ್ಲೂ ಜೆಇಇ ಮೈನ್: ಕನ್ನಡದಲ್ಲೂ ಸಿಗುತ್ತಾ ಅವಕಾಶ?

ಭಾರತದಲ್ಲಿ ಗಾಳಿ ಕಲುಷಿತವಾಗಿದೆ: ಹವಾಮಾನ ಬದಲಾವಣೆ ಸಮರ್ಥನೆಗೆ ಭಾರತವನ್ನು ಟೀಕಿಸಿದ ಟ್ರಂಪ್

ಭಾರತದಲ್ಲಿ ಗಾಳಿ ಕಲುಷಿತವಾಗಿದೆ: ಹವಾಮಾನ ಬದಲಾವಣೆ ಸಮರ್ಥನೆಗೆ ಭಾರತವನ್ನು ಟೀಕಿಸಿದ ಟ್ರಂಪ್

swachh bharat mission

ಸ್ವಚ್ಛ ಭಾರತ್‌: ಪ್ರತಿ ಕುಟುಂಬಕ್ಕೆ 53000 ರೂ. ಉಳಿತಾಯ

ಭಾರತ-ಆಸೀಸ್‌ ಪಂದ್ಯಗಳಿಗೆ ಸಿಡ್ನಿ ಸಮ್ಮತಿ: ಆಸೀಸ್ ಗೆ ತೆರಳಲಿದೆ 32 ಸದಸ್ಯರ ಜಂಬೋ ತಂಡ

ಭಾರತ-ಆಸೀಸ್‌ ಪಂದ್ಯಗಳಿಗೆ ಸಿಡ್ನಿ ಸಮ್ಮತಿ: ಆಸೀಸ್ ಗೆ ತೆರಳಲಿದೆ 32 ಸದಸ್ಯರ ಜಂಬೋ ತಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.