ಇಂಟ್ರಡಕ್ಷನ್‌ ಬೇಕಾ?


Team Udayavani, Jun 5, 2017, 3:45 AM IST

introduction.jpg

ಖಾತೆ ತೆರೆಯುವಾಗ ನಿಮಗೆ ಪರಿಚಯದವರು ಇವರು ನಮಗೆ ಗೊತ್ತು ಎನ್ನುವ ಇಂಟ್ರಡಕ್ಷನ್‌ ಸಹಿ ಮಾಡಿಕೊಡಬೇಕು. ಇದು ಏಕೆ ಮಾಡುತ್ತಾರೆ, ಬ್ಯಾಂಕಿಗೆ ಇದರಿಂದ ಲಾಭ ಏನು?

ಬ್ಯಾಂಕುಗಳಲ್ಲಿ ಖಾತೆಗಳನ್ನು ತೆರೆಯುವಾಗ ನಿಮ್ಮನ್ನು  ಬ್ಯಾಂಕಿಗೆ ಪರಿಚಯಿಸಲು ಒಬ್ಬರು ಬೇಕು. ಇದನ್ನು ಬ್ಯಾಂಕಿನ ಪರಿಭಾಷೆಯಲ್ಲಿ  ಇಂಟ್ರಡಕ್ಷನ್‌ ಎನ್ನುತ್ತಾರೆ. ಇದನ್ನು ನಿಮಗೆ ಪರಿಚಯ ಇದ್ದವರು, ಬ್ಯಾಂಕಿಗೆ ಗೊತ್ತಿದ್ದವರು, ಬ್ಯಾಂಕಿನಲ್ಲಿ ಖಾತೆ ಇದ್ದವರು ತಮ್ಮ ಖಾತೆ  ನಂಬರ್‌ ನಮೂದಿಸಿ ಮಾಡಬೇಕಾಗುತ್ತದೆ. ಈ ರೀತಿ ಪರಿಚಯಿಸುವವರು, ಬ್ಯಾಂಕಿನ ಅದೇ ಶಾಖೆಯುಲ್ಲಿ ಅಥವಾ ಬೇರೆ ಯಾವುದಾದರೂ ಶಾಖೆಯಲ್ಲಿ ಖಾತೆಗಳನ್ನು ಹೊಂದಿರಬೇಕಾಗುತ್ತದೆ. ಬ್ಯಾಂಕಿವನರು  ಈ ರೀತಿ ಪರಿಚಯಿಸುವವರ ಸಹಿ, ಗುರುತನ್ನು ತಮ್ಮಲ್ಲಿ ಇರುವ ಖಾತೆದಾರನ ದಾಖಲೆಯಿಂದ ಅಥವಾ ಬೇರೆ  ಶಾಖೆಗಳ ಮೂಲಕ ದೃಢೀಕರಿಸಿಕೊಳ್ಳುತ್ತಾರೆ.

ಬ್ಯಾಂಕುಗಳಲ್ಲಿ ಎÇÉಾ ತರದ ಖಾತೆಗಳಿಗೂ  ಈ ರೀತಿಯ ಪರಿಚಯಿಸುವಿಕೆ  ಬೇಕಿದ್ದರೂ, ಬ್ಯಾಂಕುಗಳಲ್ಲಿ  ಚಾಲ್ತಿ ಖಾತೆ, ಉಳಿತಾಯ ಖಾತೆ ಮತ್ತು ನಿರಂತರ ವ್ಯವಹಾರ ಇರುವ ಖಾತೆಗಳಿಗೆ ಇದು ಕಾನೂನಾತ್ಮಕವಾಗಿ ಕಡ್ಡಾಯವಾಗಿರುತ್ತದೆ. ಆದರೆ ಸ್ಥಿರ ಮತ್ತು ನಿಶ್ಚಿತ ಠೇವಣಿ ಖಾತೆಗಳಿಗೆ ಇದು ಕಡ್ಡಾಯವಲ್ಲ. ಈ ನಿಟ್ಟಿನಲ್ಲಿ ಬ್ಯಾಂಕುಗಳು ಯಾವುದೇ ರೀತಿಯ ವಿನಾಯಿತಿ ತೋರಿಸುವುದಿಲ್ಲ. ಆದರೆ, ಕೆಲ ಸಲ ವಿದೇಶಿ ವಿದ್ಯಾರ್ಥಿಗಳಿಗೆ  ಮತ್ತು ದೇಶೀಯ ವಿಧ್ಯಾರ್ಥಿಗಳಿಗೆ introductionಗೆ ಒತ್ತಾಯ ಮಾಡದೇ,  ಸಂಬಂಧಪಟ್ಟ  ಶಿಕ್ಷಣ ಸಂಸ್ಥೆಯ ಪ್ರಿನ್ಸಿಪಾಲರ ಶೀಫಾರಸ್ಸು ಮತ್ತು  ಪಾಸ್‌ ಪೋರ್ಟ್‌ ಅಧಾರದ ಮೇಲೆ ಖಾತೆಯನ್ನು ತೆರೆಯಲಾಗುವುದು. ಆದರೆ, ಈ ಖಾತೆಗಳಲ್ಲಿನ ಆಪರೇಷನ್‌  ಕೆಲವು ನಿಬಂಧನೆಗಳಿಗೆ  ಒಳಪಟ್ಟಿರುತ್ತದೆ. ಹಾಗೆಯೇ ಕೆಲವು ಸರ್ಕಾರಿ  ಯೋಜನೆ ಪ್ರೇರಿತ  ಖಾತೆಗಳಿಗೆ introduction ಅನ್ನು ಒತ್ತಾಯಿಸುವುದಿಲ್ಲ.  

ಇವು ಕೂಡಾ ಕೆಲವು ನಿರ್ಬಂಧಗಳಿಗೆ ಒಳಪಟ್ಟಿದ್ದು, ಹೆಚ್ಚಿನ ಕಮರ್ಷಿಯಲ… ವ್ಯವಹಾರಗಳಿಗೆ ಆಸ್ಪದವಿಲ್ಲ. 
ಬ್ಯಾಂಕ್‌ ಖಾತೆಗಳಿಗೆ ಆಧಾರ ನಂಬರ್‌ ಜೋಡಿಸುತ್ತಿರುವುದರಿಂದ  ಕೆಲವು  ಬ್ಯಾಂಕುಗಳು ಈ ನಿಟ್ಟಿನಲ್ಲಿ ನಿಯಮಾವಳಿಯನ್ನು ಸಡಿಲಗೊಳಿಸುತ್ತಿವೆಯಂತೆ.  ಹೊಸ ಗ್ರಾಹಕನ ಬಗೆಗೆ ಬ್ಯಾಂಕ್‌ ಮ್ಯಾನೇಜರ್‌ಗೆ  ತೃಪ್ತಿಯಾದರೆ, ಗ್ರಾಹಕ know your customer ದಾಖಲೆಗಳನ್ನು  ಸಲ್ಲಿಸಿದರೆ, ಇಂಟ್ರಡಕ್ಷನ್‌ಗೆ  ಒತ್ತಾಯಿಸಬಾರದು ಎನ್ನುವ ಚಿಂತನೆ  ಕ್ರಮೇಣ ಬ್ಯಾಂಕುಗಳಲ್ಲಿ ಕಾಣುತ್ತಿದೆ. ದಶಕಗಳ ಹಿಂದೆ ಒಬ್ಬನನ್ನು ಗುರುತಿಸಲು ಯಾವುದೇ ರೀತಿಯ ದಾಖಲೆಗಳು ಇರುತ್ತಿರಲಿಲ್ಲ. ಅಂತೆಯೇ ಒಬ್ಬರನ್ನು ಗುರುತಿಸಲು ಇನ್ನೊಬ್ಬರು ಬೇಕಾಗಿದ್ದು, ಈ ಪರಿಕಲ್ಪನೆಯೇ ಬ್ಯಾಂಕಿನಲ್ಲಿ ಮುಂದುವರಿದಿತ್ತು. ಆದರೆ, ಇಂದು ಒಬ್ಬರನ್ನು ಗುರುತಿಸಲು ಮತದಾರರ ಗುರುತಿನ ಚೀಟಿ, ಚಾಲನಾ ಅನುಮತಿ ಪತ್ರ ಮತ್ತು ತೀರಾ ಇತ್ತೀಚೆಗಿನ ಆಧಾರ ಕಾರ್ಡ್‌ಗಳು ಇದ್ದು, ಲಾಗಾಯ್ತನಿಂದ ಬಂದ introduction ಪ್ರಕ್ರಿಯೆ  ಔಟ್‌ಡೇಟೆಡ್‌ ಅನಿಸುತ್ತದೆ. ಪರಿಚಯಿಸುವಿಕೆಯ ಪ್ರಕ್ರಿಯೆ  ಮುಂದಿನ ದಿಗಳಲ್ಲಿ  ಕ್ರಮೇಣ ಇತಿಹಾಸದ  ಪುಟ ಸೇರಿದರೆ ಆಶ್ಚರ್ಯವಿಲ್ಲ.

ಜನಸಾಮಾನ್ಯ ಗ್ರಾಹಕರು  ಅರೋಪಿಸುವಂತೆ, ಇದು ಕಾಟಾಚಾರದ ಪ್ರಕ್ರಿಯೆ  ಯಾಗಿರುವುದಿಲ್ಲ. ಗ್ರಾಹಕರನ್ನು ಸತಾಯಿಸುವ, ಗೋಳು  ಹೊಯ್ದು ಕೊಳ್ಳುವ ಉದ್ದೇಶವೂ  ಇದರ ಹಿಂದೆ ಇರುವುದಿಲ್ಲ. ಇನ್ನೊಂದು ದಾಖಲೆ ಇರಲಿ ಎನ್ನುವ  ಕಾರಣವೂ ಅಲ್ಲ. ಇದೊಂದು ಗಂಭೀರ  ಪ್ರಕ್ರಿಯೆಯಾಗಿದ್ದು, ಗ್ರಾಹಕರು ಮಾಡಬಹುದಾದ ಮೋಸ, ವಂಚನೆಯನ್ನು ತಡೆಯುವ ಪ್ರಕ್ರಿಯೆ.  ಬ್ಯಾಂಕನ್ನು ರಕ್ಷಿಸಿ ಕೊಳ್ಳುವ ಮಹಾನ್‌ ಉದ್ದೇಶ   ಇರುತ್ತದೆ.

ಪರಿಚಯಿಸುವಿಕೆಯ ಪ್ರಕ್ರಿಯೆ  ಮುಗಿದು ಖಾತೆ ತೆರೆದ ಮೇಲೆ, ಬ್ಯಾಂಕಿನವರು ಖಾತೆಯನ್ನು ಪರಿಚಯಿಸಿದವನಿಗೆ ಕೃತಜ್ಞತಾ ಪತ್ರವನ್ನು ಕಳುಹಿಸಿ, ಆತನಿಂದ  ಒಪ್ಪಿಗೆ ಪತ್ರ ಪಡೆಯುತ್ತಾರೆ.  ಆ ಪತ್ರ ಬಂದ ಮೇಲೆಯೇ ಖಾತೆಯಲ್ಲಿ ಆಪರೇಷನ್‌ ಮಾಡಲು ಬಿಡಲಾಗುತ್ತದೆ.  

ಹೊಸ ಖಾತೆದಾರನಿಗೂ ಇಂಥ ಕಾಗದ  ಕಳಿಸುತ್ತಿದ್ದು, ಆತ  ಪತ್ರವನ್ನು ಹಿಡಿದು ಬ್ಯಾಂಕಿಗೆ  ಬಂದಾಗಲೇ ಚೆಕ್‌ ಬುಕ್‌ ನೀಡಲಾಗುವುದು. ಇದು ಬ್ಯಾಂಕುಗಳು ತೆಗೆದು ಕೊಳ್ಳುವ ಮುನ್ನೆಚ್ಚರಿಕೆ ಕ್ರಮ ಮತ್ತು ಸಂಭವನೀಯ  ಅನಾಹುತಗಳಿಂದ ರಕ್ಷಿಸಿಕೊಳ್ಳುವ   ಮಾರ್ಗ. ಒಂದು ಕಾಲದಲ್ಲಿ ಖಾತೆ  ತೆರೆಯವಾಗ ಬ್ಯಾಂಕ್‌ ಮ್ಯಾನೇಜರ್‌  ಬ್ಯಾಂಕಿನಲ್ಲಿರುವ ಯಾವುದಾದರೂ  ಗ್ರಾಹಕರಿಂದ ಪರಿಚಯದ ಸಹಿ ಮಾಡಿಸಿ  ಖಾತೆಗಳನ್ನು ತೆರೆಯತ್ತಿದ್ದರು. ಅದು ಪರಸ್ಪರ ನಂಬಿಕೆ  ಉತ್ತುಂಗದಲ್ಲಿ¨ªಾಗ ನಡೆಯುತ್ತಿದ್ದ ಕಾರ್ಯ. ಆದರೆ, ಇಂದು ಕಾಲ ಬದಲಾಗಿದ್ದು, ಯಾವ ಮ್ಯಾನೇಜರ್‌ ಕೂಡಾ  ಈ ಸಾಹಸಕ್ಕೆ ಕೈ ಹಾಕುವುದಿಲ್ಲ. ಯಾವ ಗ್ರಾಹಕರೂ ಈ  ಪರಿಚಯಿಸುವಿಕೆಗೆ  ಸಹಿ ಮಾಡಲು ಮುಂದೆ ಬರುವುದಿಲ್ಲ. ತಮಗೇಕೆ ಈ  ಉಸಾಬರಿ ಎನ್ನುವ  ಪ್ರತಿಕ್ರಿಯೆ ತೀರಾ ಸಾಮಾನ್ಯವಾಗಿ  ಕಾಣುತ್ತದೆ.

ಉದ್ದೇಶ, ಹೊಣೆಗಾರಿಕೆ ಏನು?
ತನ್ನ ಬ್ಯಾಂಕಿನಲ್ಲಿ ಖಾತೆ ತೆರೆಯುವ  ವ್ಯಕ್ತಿ ನಕಲಿಯಲ್ಲ. ಅ ವ್ಯಕ್ತಿ ಇ¨ªಾನೆ ಎಂದು ದೃಢೀಕರಿಸಲು ಬ್ಯಾಂಕುಗಳು  ಈ ಪರಿಚಯಿಸುವಿಕೆಯನ್ನು ಒತ್ತಾಯಿಸುತ್ತಾರೆ. ಇಲ್ಲದ ವ್ಯಕ್ತಿಯ ಹೆಸರಿನಲ್ಲಿ ಖಾತೆ  ತೆರೆದು ಬ್ಯಾಂಕುಗಳಿಗೆ ಮೋಸ ಮಾಡುವುದನ್ನು ತಡೆಗಟ್ಟಲು, ಬ್ಯಾಂಕುಗಳಲ್ಲಿ ಬೇನಾಮಿ ವ್ಯವಹಾರವನ್ನು ನಿಯಂತ್ರಿಸಲು ಬ್ಯಾಂಕುಗಳು ಈ ಮಾರ್ಗವನ್ನು ಬಳಸುತ್ತಾರೆ.

ಖಾತೆ ಪರಿಚಯಿಸುವವನ ಹೊಣೆಗಾರಿಕೆ ಖಾತೆದಾರನನ್ನು ಗುರುತಿಸುವದಕ್ಕೆ ಮತ್ತು ಆತನ ವಾಸ ಸ್ಥಳವನ್ನು ತೋರಿಸುವುದಕ್ಕೆ  ಮಾತ್ರ ಸೀಮಿತ. ಖಾತೆದಾರನ  ಇನ್ನು  ಯಾವುದೇ ವಿಷಯದಲ್ಲಿ  ಆತನು  ಭಾಗೀದಾರನಲ್ಲ.  ಖಾತೆದಾರ ಮೋಸ ಮಾಡಿ ಓಡಿ ಹೋದರೆ, ಅವನನ್ನು ಹುಡುಕುವ  ಕೆಲಸ  ಇವರಿಗೆ ಇರುವುದಿಲ್ಲ. ಅವನನ್ನು ಹಿಡಿದು ತಂದಾಗ, ಅವಶ್ಯಕತೆ ಬಿದ್ದರೆ ಅವನನ್ನು ಗುರುತಿಸುವದಷ್ಟೇ  ಅವನ  ಹೊಣೆಗಾರಿಕೆ.
 
ಖಾತೆದಾರ ಮೋಸ ಮಾಡಿದರೆ ?
ಬ್ಯಾಂಕುಗಳಲ್ಲಿ  ಹೊಸ ಖಾತೆಗಳನ್ನು ಪರಿಚಯಿಸಲು ಯಾರೂ ಮುಂದೆ ಬರುವುದಿಲ್ಲ. ಇದಕ್ಕೆ ಕಾರಣ ಖಾತೆದಾರನು ಮಾಡಬಹುದಾದ ಮೋಸಕ್ಕೆ ಪರಿಚಯಿಸಿದವರನ್ನು  ಹೊಣೆ ಮಾಡುವ  ಭಯ. ಆದರೆ, ಸುಪ್ರೀಮ…  ಕೋರ್ಟ್‌  ಈ  ನಿಟ್ಟಿನಲ್ಲಿ ಐತಿಹಾಸಿಕ ತೀರ್ಪು ನೀಡಿದ್ದು, ಖಾತೆದಾರನು ಮಾಡಿದ  ಮೋಸಕ್ಕೆ  ಖಾತೆಯನ್ನು   introduce   ಮಾಡಿದವನು ಹೊಣೆಯುಲ್ಲ ಹೇಳಿದೆ. ಅವನನ್ನು ಹೊಣೆ ಮಾಡಲು ಪರಿಚಯಿಸಿದವನು ಖಾತೆದಾರನೊಂದಿಗೆ ಶಾಮೀಲು ಆಗಿದ್ದನ್ನು  ಸಾಕ್ಷಿ$ ಸಮೇತ ತೋರಿಸಬೇಕಾಗುತ್ತದೆ. ಇದು  ಸುಲಭವಲ್ಲ.

– ರಮಾನಂದ ಶರ್ಮಾ

ಟಾಪ್ ನ್ಯೂಸ್

1-sadsad

ಪಣಜಿ: 53 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರೋಪ

1-SAAS

ಅಫ್ತಾಬ್ ಪೂನವಾಲಾನನ್ನ ಕರೆದೊಯ್ಯುತ್ತಿದ್ದ ಪೊಲೀಸ್ ವ್ಯಾನ್‌ ಮೇಲೆ ದಾಳಿ; ವಿಡಿಯೋ

ಸಿದ್ರಾಮುಲ್ಲಾ ಖಾನ್‌ ಹೆಸರಿಟ್ಟಿದ್ದು ಕೊಡಗು-ಮೈಸೂರು ಜನ: ಸಿ.ಟಿ.ರವಿ

ಸಿದ್ರಾಮುಲ್ಲಾ ಖಾನ್‌ ಹೆಸರಿಟ್ಟಿದ್ದು ಕೊಡಗು-ಮೈಸೂರು ಜನ: ಸಿ.ಟಿ.ರವಿ

tdy-19

2023ರ ದ್ವಿತೀಯ ಪಿಯು ವಾರ್ಷಿಕ ಪರೀಕ್ಷಾ ವೇಳಾಪಟ್ಟಿ ಪ್ರಕಟ

ತೆಕ್ಕಟ್ಟೆ: ರಸ್ತೆ ಬದಿಯ ಹೊಂಡಕ್ಕೆ ಬಿದ್ದ ಈಚರ್‌ ವಾಹನ; ತಪ್ಪಿದ ಭಾರೀ ಅನಾಹುತ

ತೆಕ್ಕಟ್ಟೆ: ರಸ್ತೆ ಬದಿಯ ಹೊಂಡಕ್ಕೆ ಬಿದ್ದ ಈಚರ್‌ ವಾಹನ; ತಪ್ಪಿದ ಭಾರೀ ಅನಾಹುತ

1-daadad

ಸಿನಿಮಾ ರಂಗದಿಂದಲೇ ನಾನು ಚಿರಂಜೀವಿ: ಇಫಿಯಲ್ಲಿ ಚಿರಂಜೀವಿ ಭಾವುಕ

ಮದರಸಾ ವಿದ್ಯಾರ್ಥಿಗಳಿಗೆ ಇನ್ನು ಸ್ಕಾಲರ್‌ಶಿಪ್‌ ಇಲ್ಲ

ಮದರಸಾ ವಿದ್ಯಾರ್ಥಿಗಳಿಗೆ ಇನ್ನು ಸ್ಕಾಲರ್‌ಶಿಪ್‌ ಇಲ್ಲಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

udayavani youtube

ಅಸ್ತಮಾ ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆಯುವುದು ಹೇಗೆ ? |Girija Surgicals

udayavani youtube

ಕುಕ್ಕೆ ಸುಬ್ರಹ್ಮಣ್ಯಕ್ಕೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ

udayavani youtube

ಶಾರೀಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ಪೊಲೀಸ್ ಆಯುಕ್ತರು ಹೇಳಿದ್ದೇನು..

udayavani youtube

ಶಾರಿಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ವೈರಲ್ ಆಗುತ್ತಿದೆ ಸಿಸಿಟಿವಿ ಫೂಟೇಜ್…

ಹೊಸ ಸೇರ್ಪಡೆ

1-sadsad

ಪಣಜಿ: 53 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರೋಪ

1-SAAS

ಅಫ್ತಾಬ್ ಪೂನವಾಲಾನನ್ನ ಕರೆದೊಯ್ಯುತ್ತಿದ್ದ ಪೊಲೀಸ್ ವ್ಯಾನ್‌ ಮೇಲೆ ದಾಳಿ; ವಿಡಿಯೋ

ಸಿದ್ರಾಮುಲ್ಲಾ ಖಾನ್‌ ಹೆಸರಿಟ್ಟಿದ್ದು ಕೊಡಗು-ಮೈಸೂರು ಜನ: ಸಿ.ಟಿ.ರವಿ

ಸಿದ್ರಾಮುಲ್ಲಾ ಖಾನ್‌ ಹೆಸರಿಟ್ಟಿದ್ದು ಕೊಡಗು-ಮೈಸೂರು ಜನ: ಸಿ.ಟಿ.ರವಿ

ಮಲ್ಪೆ: ವಿದ್ಯುತ್‌ ಪ್ರವಹಿಸಿ ಬೋಟ್‌ ಕಾರ್ಮಿಕ ಸಾವು

ಮಲ್ಪೆ: ವಿದ್ಯುತ್‌ ಪ್ರವಹಿಸಿ ಬೋಟ್‌ ಕಾರ್ಮಿಕ ಸಾವು

1-ADDSDASD

ಹಾರನ್ ಹೊಡೆದ ಎಂಬ ಕ್ಷುಲ್ಲಕ ಕಾರಣಕ್ಕೆ ಮನಸೋ ಇಚ್ಛೆ ಚಾಕು ಇರಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.