Udayavni Special

ಬೇವಿನೆಣ್ಣೆ ಯೂರಿಯಾ: ಇದು ಸರಿಯಾ?


Team Udayavani, May 20, 2019, 6:00 AM IST

3

ಯೂರಿಯಾಕ್ಕೆ ಬೇವಿನೆಣ್ಣೆ ಲೇಪಿಸಿದಾಗ ಏನಾಗುತ್ತದೆ? ಸಾರಜನಕದ ಬಿಡುಗಡೆ ನಿಧಾನವಾಗುತ್ತದೆ; ಇದರಿಂದಾಗಿ ಸಸಿಗಳಿಗೆ ಸಾರಜನಕ ಬಳಸಿಕೊಳ್ಳಲು ಹೆಚ್ಚು ಸಮಯ ಸಿಗುತ್ತದೆ. ಆದ್ದರಿಂದಲೇ, ಎನ್‌ಡಿಎ ಸರಕಾರವು 2015ರಲ್ಲಿ ಯೂರಿಯಾಕ್ಕೆ ಬೇವಿನೆಣ್ಣೆ ಲೇಪನ ಕಡ್ಡಾಯ ಮಾಡಿದ್ದು ಚಾರಿತ್ರಿಕ ಕ್ರಮವಾಯಿತು.

“2015ರ ನಂತರ ನಮ್ಮ ದೇಶದಲ್ಲಿ ಉತ್ಪಾದಿಸಿದ ಯೂರಿಯಾ ಮತ್ತು ಆಮದು ಮಾಡಿದ ಯೂರಿಯಾ ಎಲ್ಲದಕ್ಕೂ ಬೇವಿನೆಣ್ಣೆ ಲೇಪಿಸಲಾಗುತ್ತಿದೆ…’ ಇದು, ಈ ವರ್ಷದ ಆರಂಭದಲ್ಲಿ ಕೇಂದ್ರ ಸರಕಾರದ ರಾಸಾಯನಿಕ ಮತ್ತು ಫ‌ರ್ಟಿಲೈಸರ್‌ಗಳ ಸಹಾಯಕ ಸಚಿವ ಇಂದರ್ಜಿತ್‌ ಸಿಂಗ್‌ ನೀಡಿದ ಹೇಳಿಕೆ.

ಕೇಂದ್ರ ಸರಕಾರದ 2015ರ ಆದೇಶದಂತೆ, ರೈತರಿಗೆ ಯೂರಿಯಾ ಮಾರಾಟ ಮಾಡುವ ಮುಂಚೆ, ಉತ್ಪಾದಕರು ಮತ್ತು ಆಮದುಗಾರರು ಯೂರಿಯಾಕ್ಕೆ ಕಹಿಬೇವಿನ ಬೀಜದೆಣ್ಣೆ ಸಿಂಪಡಿಸ ಬೇಕಾದದ್ದು ಕಡ್ಡಾಯ. ಸಹಾಯಕ ಸಚಿವರ ಹೇಳಿಕೆಯು ಈ ಚಾರಿತ್ರಿಕ ಆದೇಶ ಯಶಸ್ವಿಯಾಗಿ ಜಾರಿಯಾಗಿದೆಯೆಂಬ ಭಾವನೆ ಮೂಡಿಸುತ್ತದೆ. ಆದರೆ, ಸರಳ ಲೆಕ್ಕಾಚಾರ ಮಾಡಿದರೆ ತಿಳಿದು ಬರುವ ಸಂಗತಿ: ಸರಕಾರದ ಹೇಳಿಕೆಯು ಉತ್ಪ್ರೇಕ್ಷೆಯಿಂದ ಕೂಡಿದೆ ಅಥವಾ ಉತ್ಪಾದಕರು ಯೂರಿಯಾಕ್ಕೆ ಕಲಬೆರಕೆ ಮಾಡಿದ ಬೇವಿನೆಣ್ಣೆ ಸಿಂಪಡಿಸಿ ಸರಕಾರದ ದಾರಿ ತಪ್ಪಿಸುತ್ತಿ¨ªಾರೆ. ಏಕೆಂದರೆ, ಅತ್ಯಧಿಕ ಸಂಖ್ಯೆಯ ಬೇವಿನ ಮರಗಳಿರುವ ನಮ್ಮ ದೇಶದಲ್ಲಿ ಬೇವಿನೆಣ್ಣೆಯ ಕೊರತೆ ಶೇಕಡಾ 85ರಷ್ಟು.

ಸಸಿಗಳ ಬೆಳವಣಿಗೆ ಮಾಲಿನ್ಯಕ್ಕೆ ಕಾರಣ ಮತ್ತು ಅಧಿಕ ಇಳುವರಿಗೆ ಅತ್ಯಗತ್ಯವಾದ ಸಾರಜನಕವನ್ನು ಯೂರಿಯಾ ಒದಗಿಸುತ್ತದೆ. ಆದರೆ, ಸಸಿಗಳು ಬಳಸುತ್ತಿರುವುದು ಯೂರಿಯಾದಲ್ಲಿರುವ ಶೇ.30 -40 ಭಾಗ ಸಾರಜನಕವನ್ನು ಮಾತ್ರ. ಯೂರಿಯಾದ ಉಳಿದ ಸಾರಜನಕವು ಹರಿದು ಹೋಗುವ ನೀರಿನಲ್ಲಿ ಸೇರಿಕೊಂಡು ಜಲಮೂಲಗಳ ಮಾಲಿನ್ಯಕ್ಕೆ ಕಾರಣವಾಗುತ್ತದೆ ಅಥವಾ ಮಾಲಿನ್ಯಕಾರಕ ಅಮೋನಿಯಾದ ರೂಪದಲ್ಲಿ ಆವಿಯಾಗುತ್ತದೆ.

ಯೂರಿಯಾಕ್ಕೆ ಬೇವಿನೆಣ್ಣೆ ಲೇಪಿಸಿದಾಗ ಏನಾಗುತ್ತದೆ? ಸಾರಜನಕದ ಬಿಡುಗಡೆ ನಿಧಾನವಾಗುತ್ತದೆ; ಇದರಿಂದಾಗಿ ಸಸಿಗಳಿಗೆ ಸಾರಜನಕ ಬಳಸಿಕೊಳ್ಳಲು ಹೆಚ್ಚು ಸಮಯ ಸಿಗುತ್ತದೆ. ಆದ್ದರಿಂದಲೇ, ಎನ್‌ಡಿಎ ಸರಕಾರವು 2015ರಲ್ಲಿ ಯೂರಿಯಾಕ್ಕೆ ಬೇವಿನೆಣ್ಣೆ ಲೇಪನ ಕಡ್ಡಾಯ ಮಾಡಿದ್ದು ಚಾರಿತ್ರಿಕ ಕ್ರಮವಾಯಿತು. ಈ ಆದೇಶದ ಉದ್ದೇಶ ಬೆಳೆಗಳ ಉತ್ಪಾದಕತೆ ಹೆಚ್ಚಿಸುವುದು ಮತ್ತು ಸಬ್ಸಿಡಿ ಹೊರೆ ಹಾಗೂ ಸಾರಜನಕ ಮಾಲಿನ್ಯ ಕಡಿಮೆ ಮಾಡುವುದು.

ಮಾರಾಟಕ್ಕಿಂತ ಬೆಲೆ ಹೆಚ್ಚು
ಗಮನಿಸಿ: ಯೂರಿಯಾದ ಮಾರಾಟ ದರವನ್ನು ಕೇಂದ್ರ ಸರಕಾರ ನಿಯಂತ್ರಿಸುತ್ತಿದೆ. ಯೂರಿಯಾ ಉತ್ಪಾದಿಸುವ ಕಂಪನಿಗಳ ಉತ್ಪಾದನಾ ವೆಚ್ಚವು ಮಾರಾಟ ಬೆಲೆಗಿಂತ ಹೆಚ್ಚಾಗಿದೆ; ಆ ಕಂಪನಿಗಳಿಗೆ ಈ ವೆಚ್ಚದ ವ್ಯತ್ಯಾಸವನ್ನು ತುಂಬಿ ಕೊಡಲಿಕ್ಕಾಗಿ ಕೇಂದ್ರ ಸರಕಾರವು ಪ್ರತಿ ವರುಷ ರೂ.70,000 ಕೋಟಿ ರೂಗಳನ್ನು ಸಬ್ಸಿಡಿಯ ರೂಪದಲ್ಲಿ ಪಾವತಿಸುತ್ತಿದೆ. ಬೇವಿನೆಣ್ಣೆ ಲೇಪಿಸಿದ ಯೂರಿಯಾದ ಮೂಲಕ ಈ ಸಬ್ಸಿಡಿ ಹೊರೆಯನ್ನು ರೂ.20,000 ಕೋಟಿ ಕಡಿಮೆ ಮಾಡ ಬಹುದೆಂಬುದು ಕೇಂದ್ರ ಸರಕಾರದ ಲೆಕ್ಕಾಚಾರ. ಏಕೆಂದರೆ, ಬೇವಿನೆಣ್ಣೆ ಲೇಪಿಸಿದ ಯೂರಿಯಾವನ್ನು ಇತರ ಕೈಗಾರಿಕಾ ಉದ್ದೇಶಗಳಿಗೆ (ಸೌಂದರ್ಯ ಪ್ರಸಾದನಗಳ ಮತ್ತು ಔಷಧಿಗಳ ಉತ್ಪಾದನೆ) ಹಾಗೂ ಹಾಲಿಗೆ ಕಲಬೆರಕೆ ಮಾಡಲಿಕ್ಕಾಗಿ ಬಳಸಲು ಸಾಧ್ಯವಿಲ್ಲ. ಇದರಿಂದಾಗಿ ಯೂರಿಯಾದ ಬೇಡಿಕೆ ಕಡಿಮೆಯಾಗುತ್ತದೆ.

ಆದರೆ, ರಾಸಾಯನಿಕ ಗೊಬ್ಬರ ಮಂತ್ರಾಲಯದ ಬಳಿಯಿರುವ ಮಾಹಿತಿ ಪರಿಶೀಲಿಸಿದಾಗ, ಕೇಂದ್ರ ಸರಕಾರವು ತನ್ನ ಉದ್ದೇಶ ಸಾಧನೆಯಿಂದ ಹಿಂದುಳಿದಿದೆ ಎಂಬುದು ಸ್ಪಷ್ಟವಾಗುತ್ತದೆ. 2015 ರಿಂದೀಚೆಗೆ, ಯೂರಿಯಾ ಬಳಕೆ ಹೆಚ್ಚಾಗಿದೆ: ವರ್ಷಕ್ಕೆ 29.95 ದಶಲಕ್ಷ$ ಟನ್ನುಗಳಿಂದ 31.55 ದಶಲಕ್ಷ ಟನ್ನುಗಳಿಗೆ ಏರಿದೆ. ಯೂರಿಯಾದ ಆಂತರಿಕ ಉತ್ಪಾದನೆ ಸ್ಥಿರವಾಗಿದ್ದು, ಆಮದು ಶೇ.38 ಜಾಸ್ತಿಯಾಗಿದೆ. ಬೃಹತ್‌ ಪರಿಮಾಣದ ಈ ಯೂರಿಯಾಕ್ಕೆ ಲೇಪಿಸಲು ಅಗತ್ಯವಾದ ಬೇವಿನೆಣ್ಣೆ ನಮ್ಮಲ್ಲಿಲ್ಲ.

ಬೇವಿನ ಎಣ್ಣೆಗೆ ಕೊರತೆ ಇದೆ
ಬೇವಿನೆಣ್ಣೆ ಲೇಪಿಸಿದ ಯೂರಿಯಾ ಉತ್ಪಾದಿಸಲಿಕ್ಕಾಗಿ, ಒಂದು ಟನ್‌ ಯೂರಿಯಾಕ್ಕೆ 600 ಗ್ರಾಮ… ಬೇವಿನೆಣ್ಣೆ ಸಿಂಪಡಿಸ ಬೇಕೆಂಬ ಮಾನಕವನ್ನು (ಸ್ಟಾಂಡರ್ಡ…) ರಾಸಾಯನಿಕ ಗೊಬ್ಬರಗಳ ಮಂತ್ರಾಲಯ ಘೋಷಿಸಿದೆ. ಇದರ ಪ್ರಕಾರ, ನಮ್ಮ ದೇಶದಲ್ಲಿ ಪ್ರತಿ ವರ್ಷ ಉಪಯೋಗಿಸುವ 32 ದಶಲಕ್ಷ$ ಟನ್‌ ಯೂರಿಯಾಕ್ಕೆ ಲೇಪಿಸಲಿಕ್ಕಾಗಿ ಕನಿಷ್ಠ 20,000 ಟನ್‌ ಬೇವಿನೆಣ್ಣೆ ಅಗತ್ಯ ಎನ್ನುತ್ತಾರೆ ತಮಿಳುನಾಡಿನ ಬೇವಿನೆಣ್ಣೆ ಮತ್ತು ಹಿಂಡಿ ಅಸೋಸಿಯೇಷನಿನ ರಾಜ್ಯಾಧ್ಯಕ್ಷ ರವೀಂದ್ರನಾಥನ್‌. ಆದರೆ ನಮ್ಮ ದೇಶದಲ್ಲಿ ಸಂಗ್ರಹಿಸುವ 30,000 ಟನ್‌ ಬೇವಿನೆಣ್ಣೆ ಬೀಜದ ಶೇಕಡಾ 10ರಷ್ಟು ಮಾತ್ರ ಸಂಸ್ಕರಿಸಲಾಗುತ್ತದೆ. ಇದರಿಂದ ಸಿಗುವ ಬೇವಿನೆಣ್ಣೆ ಕೇವಲ 3,000 ಟನ್‌ ಎಂದು ವಿವರಿಸುತ್ತಾರೆ ರವೀಂದ್ರನಾಥನ್‌. ಇದು 32 ದಶಲಕ್ಷ ಟನ್‌ ಯೂರಿಯಾದ ಶೇ.15ರಷ್ಟಕ್ಕೆ ಲೇಪಿಸಲು ಮಾತ್ರ ಸಾಕಾಗುತ್ತದೆ. ಅಂದರೆ, ನಮ್ಮ ದೇಶದಲ್ಲಿ ಬೇವಿನೆಣ್ಣೆಯ ಕೊರತೆ ಶೇ.85.

ಬೇವಿನೆಣ್ಣೆಯ ಬೇಡಿಕೆ ಮತ್ತು ಪೂರೈಕೆಯ ಅಂತರದಿಂದಾಗಿ ಕಲಬೆರಕೆ ಬೇವಿನೆಣ್ಣೆಯ ದಂಧೆ ಬೆಳೆಯುತ್ತಿದೆ. ಇದನ್ನು ಗಮನಿಸಿದ ರಾಸಾಯನಿಕ ಗೊಬ್ಬರಗಳ ಮಂತ್ರಾಲಯವು ಬೇವಿನೆಣ್ಣೆಯ ಕಲಬೆರಕೆ ತಡೆಯಲಿಕ್ಕಾಗಿ 2017ರಲ್ಲಿ ಸೂಕ್ತ ಆದೇಶ ನೀಡಿದೆ. ಆದರೆ ಸರಕಾರದ ಆದೇಶ ಕಟ್ಟುನಿಟ್ಟಾಗಿ ಜಾರಿಯಾಗಿಲ್ಲ.

ಭಾರತವು 25 ದಶಲಕ್ಷ ಬೇವಿನ ಮರಗಳ ದೇಶ. ಶೇ.80ರಷ್ಟು ಮರಗಳು ಸಹಜವಾಗಿ ಒಣ ಪ್ರದೇಶಗಳಲ್ಲಿ ಬೆಳೆದವುಗಳು. ನಮ್ಮ ದೇಶದಲ್ಲಿ ಬೇವಿನ ಬೀಜಗಳ ಸಂಗ್ರಹ ಮತ್ತು ಸಂಸ್ಕರಣಾ ವ್ಯವಸ್ಥೆ ಸರಿಯಾಗಿಲ್ಲ. ಹಾಗಾಗಿ, ಬೇವಿನ ಮರಗಳ ಬೀಜದ ಶೇ.10 ಮಾತ್ರ ಬೇವಿನೆಣ್ಣೆ ಉತ್ಪಾದನೆಗೆ ಲಭ್ಯ. (ಉಳಿದ ಶೇ.90ರಷ್ಟು ಸಾವಯವ ಗೊಬ್ಬರವಾಗಿ ಬಳಕೆಯಾಗುವ ಬೇವಿನಹಿಂಡಿ ಉತ್ಪಾದನೆಗೆ ಹೋಗುತ್ತಿದೆ.)

ಲಾಭ ನಷ್ಟದ ಲೆಕ್ಕಾಚಾರ
ಯೂರಿಯಾ ಉತ್ಪಾದಕರಿಗೆ ಬೇವಿನೆಣ್ಣೆ ಮಾರಾಟ ಮಾಡುವುದು ಲಾಭದಾಯಕವಲ್ಲ ಎಂಬುದು ಬೇವಿನೆಣ್ಣೆ ಉತ್ಪಾದಕರ ಅಭಿಪ್ರಾಯ. ಕಹಿಬೇವಿನ ಬೀಜಗಳಿಂದ ಬೇವಿನೆಣ್ಣೆ ತೆಗೆಯುವುದಕ್ಕೆ ದೊಡ್ಡ ಪ್ರಮಾಣದ ಬಂಡವಾಳ ಹೂಡಿಕೆ ಅಗತ್ಯ. ಒಂದು ಲೀಟರ್‌ ಬೇವಿನೆಣ್ಣೆ ಉತ್ಪಾದಿಸಲು ನಾವು ಮಾಡುವ ವೆಚ್ಚ 150 ರೂಪಾಯಿ – ಬೇವಿನ ಬೀಜ ಸಂಗ್ರಹಣೆ ಮತ್ತು ಸಂಸ್ಕರಣೆಗಾಗಿ. ಆದರೆ, ಯೂರಿಯಾ ಉತ್ಪಾದಕರು ಪಾವತಿಸುವುದು ಲೀಟರಿಗೆ 80ರಿಂದ 90 ರೂಪಾಯಿ ಎನ್ನುತ್ತಾರೆ ರವೀಂದ್ರನಾಥನ್‌. ಹಾಗಾಗಿ, ಅನೇಕ ಬೇವಿನೆಣ್ಣೆ ಉತ್ಪಾದಕರು ಅದನ್ನು ಸೌಂದರ್ಯ ಪ್ರಸಾದನಗಳು, ಸಾಬೂನು ಮತ್ತು ಔಷಧಿ ತಯಾರಕರಿಗೆ ಮಾರುತ್ತಾರೆ ಅಥವಾ ರಫ್ತು ಮಾಡುತ್ತಾರೆ.

ಅಂತೂ ನಮ್ಮ ದೇಶದಲ್ಲಿ ಉತ್ಪಾದನೆಯಾಗುವ ಶೇ.85ಷ್ಟು ಯೂರಿಯಾಕ್ಕೆ ಬೇವಿನೆಣ್ಣೆ ಲೇಪಿಸಲಾಗುತ್ತಿಲ್ಲ ಅಥವಾ ಕಲಬೆರಕೆ ಬೇವಿನೆಣ್ಣೆ ಲೇಪಿಸಲಾಗುತ್ತಿದೆ. ಇಂಥ ಯೂರಿಯಾದಿಂದ ಬೆಳೆಗಳ ಉತ್ಪಾದಕತೆ ಹೆಚ್ಚುವುದಿಲ್ಲ ಹಾಗೂ ಯೂರಿಯಾ ಬಳಕೆ ಕಡಿಮೆ ಆಗೋದಿಲ್ಲ. ಆದರೂ ನಮ್ಮ ಸರಕಾರ ಎಚ್ಚೆತ್ತಿಲ್ಲ. ಬೇವಿನ ಉತ್ಪನ್ನಗಳ ಪೂರೈಕೆ ದೇಶವಾಗಿ ಚೀನಾ ದಾಪುಗಾಲಿಟ್ಟಿದೆ. ವಿಶ್ವಸಂಸ್ಥೆ ಕಹಿಬೇವನ್ನು 21ನೆಯ ಶತಮಾನದ ಮರವೆಂದು ಘೋಷಿಸಿದ್ದು, ಚೀನಾ ಇದರ 20 ದಶಲಕ್ಷ ಸಸಿಗಳನ್ನು ನೆಟ್ಟು ಬೆಳೆಸಿದೆ. ಆದ್ದರಿಂದ, ಜಾಗತಿಕ ಮಾರುಕಟ್ಟೆಯಲ್ಲಿ ಬೇವಿನ ಉತ್ಪನ್ನಗಳ ಶೇ.40ರಷ್ಟು ಪೂರೈಸಲು ಚೀನಾಕ್ಕೆ ಸಾಧ್ಯವಾಗಿದೆ.

ಇನ್ನಾದರೂ ನಮ್ಮ ಸರಕಾರ ಬೇವಿನ ಮರಗಳನ್ನು ಬೆಳೆಸಲು ಆದ್ಯತೆ ನೀಡಿ, ಮಹಾತ್ವಾಕಾಂಕ್ಷಿ$ ಯೋಜನೆಯಾದ ಬೇವಿನೆಣ್ಣೆ ಲೇಪಿತ ಯೂರಿಯಾದ ಘನ ಉದ್ದೇಶಗಳ ಸಾಧನೆಗೆ ಒತ್ತು ನೀಡುತ್ತದೆಂದು ಹಾರೈಸೋಣ.

ಅಡ್ಡೂರು ಕೃಷ್ಣ ರಾವ್‌

ಟಾಪ್ ನ್ಯೂಸ್

jghjgyj

ಕೋವಿಡ್ ಮದ್ದು, ಅನ್ಯ ಕಾಯಿಲೆಗೂ ಗುದ್ದು?  

ಮಲ್ಲಿಕಾರ್ಜುನ ಖರ್ಗೆಯ ಭ್ರಷ್ಟ ಸಂಪತ್ತಿನ ಮುಂದೆ ಮಿಕ್ಕವರೆಲ್ಲ ಲೆಕ್ಕಕ್ಕಿಲ್ಲ: ಬಿಜೆಪಿ ಆರೋಪ

ಮಲ್ಲಿಕಾರ್ಜುನ ಖರ್ಗೆಯ ಭ್ರಷ್ಟ ಸಂಪತ್ತಿನ ಮುಂದೆ ಮಿಕ್ಕವರೆಲ್ಲ ಲೆಕ್ಕಕ್ಕಿಲ್ಲ: ಬಿಜೆಪಿ ಆರೋಪ

1-aa

ತೃತೀಯ ಲಿಂಗಿಗಳನ್ನು ಒಪ್ಪಿಕೊಳ್ಳದ ಕಾರಣ ನೀವು ದಂಡ ಕಟ್ಟಬೇಕು: ಪದ್ಮಶ್ರೀ ಮಂಜಮ್ಮ ಜೋಗತಿ

“ಜಾಗೃತ ಭಾರತ, ಸಮೃದ್ಧ ಭಾರತ”

ಜಾಗೃತ ಭಾರತ, ಸಮೃದ್ಧ ಭಾರತ

ffhjutgfd

ತುಮಕೂರು : ಮದುವೆ ಮಾಡಿಸುವಂತೆ ಡಿಸಿಗೆ ಅರ್ಜಿ ಸಲ್ಲಿಸಿದ ಯುವಕರು

ಇಂದಿನ ರಾಜಕಾರಣ ನನಗೆ ತೃಪ್ತಿ ಎನಿಸುತ್ತಿಲ್ಲ: ಬಸವರಾಜ ಹೊರಟ್ಟಿ

ಇಂದಿನ ರಾಜಕಾರಣ ನನಗೆ ತೃಪ್ತಿ ಎನಿಸುತ್ತಿಲ್ಲ: ಬಸವರಾಜ ಹೊರಟ್ಟಿ

ಇಂದು ಚಿರು ಹುಟ್ಟುಹಬ್ಬ: ಮೇಘನಾ ಹೊಸ ಸಿನಿಮಾ ಆರಂಭ

ಇಂದು ಚಿರು ಹುಟ್ಟುಹಬ್ಬ: ಮೇಘನಾ ಹೊಸ ಸಿನಿಮಾ ಆರಂಭ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಲಾರಿ ಹತ್ತಲು ಅಶ್ವತ್ಥಾಮ ಆನೆ ಹಿಂದೇಟು.

udayavani youtube

ಪರಸ್ಪರ ಮಜ್ಜಿಗೆ ಎರಚಿಕೊಂಡು ಗೌಳಿ ಬುಡಕಟ್ಟು ಸಮುದಾಯದಿಂದ ದಸರಾ ಆಚರಣೆ

udayavani youtube

ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ದ್ರಾವಿಡ್ ನೇಮಕ

udayavani youtube

ಅಸಹಾಯಕ ಸ್ಥಿತಿಯಲ್ಲಿದ್ದ ವ್ಯಕ್ತಿ ಹಾಗೂ ಕೋತಿಯನ್ನು ರಕ್ಷಿಸಿ ಮಾದರಿಯಾದ ಯುವಕರು

udayavani youtube

ರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದವರಿಗೆ ಕುತ್ತು? ಮೈಲಾರಸ್ವಾಮಿ ಕಾರ್ಣಿಕ ನುಡಿ ಏನು ಗೊತ್ತಾ?

ಹೊಸ ಸೇರ್ಪಡೆ

Untitled-1

ಅತ್ತಿಕುಪ್ಪೆಯಲ್ಲಿ ಪಡಿತರ ಉಪಕೇಂದ್ರ ಉದ್ಘಾಟನೆ,ಡೇರಿ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ

jghjgyj

ಕೋವಿಡ್ ಮದ್ದು, ಅನ್ಯ ಕಾಯಿಲೆಗೂ ಗುದ್ದು?  

Dak Seva Award for Achievers

8 ಸಾಧಕರಿಗೆ ಡಾಕ್ ಸೇವಾ ಪ್ರಶಸ್ತಿ ಪ್ರಧಾನ ಮಾಡಿದ ರಾಜ್ಯಪಾಲರು

davanagere news

ಹಿರೇಕಲ್ಮಠದೊಂದಿಗೆ ಅವಿನಾಭಾವ ಸಂಬಂಧ

12

ಕ್ಷಯ ಮುಕ್ತ ದೇಶಕ್ಕೆ ಸಹಕಾರ ಅಗತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.