ದೇವ್ರವ್ನೆ ಕಾರ್ಡು ಮರಿ


Team Udayavani, Apr 10, 2017, 1:19 PM IST

atm.jpg

ನಿಮ್ಮದೇ ಖಾತೆ, ನೀವೇ ಹಾಕಿದ ಹಣ ಆದರೂ ಅದನ್ನು ಮೂರು, ನಾಲ್ಕು ಸಲ ಮಾತ್ರ ತೆಗೆಯಬಹುದು ಅನ್ನೋದು ಕಾನೂನು. ಕೆಲವು ಬ್ಯಾಂಕ್‌ಗಳು ಬ್ಯಾಂಕ್‌ ಕಡೆ  ಬರಲೇಬೇಡಿ. ಏನಿದ್ದರೂ ಆನ್‌ಲೈನ್‌ನಲ್ಲಿ ವ್ಯವಹಾರ ಮಾಡಿ ಅಂತಾ ಇದ್ದಾವೆ. ಎಟಿಎಂ ಬಳಸಿ ಅಂತ ಹೇಳಿದ್ದೂ ಇವರೇ, ಈಗ ಹೆಚ್ಚಿಗೆ ಬಳಸಿದರೆ ದಂಡ ಗ್ಯಾರಂಟಿ ಅಂತ ಹೇಳುತ್ತಿರುವುದೂ ಇವರೇ. ಮುಂದೆ ಎಟಿಎಂ ಗತಿ ಏನಪ್ಪ?

ನಿಗದಿತ ಸಂಖ್ಯೆಗಿಂತ ಹೆಚ್ಚಿನ ಟಿಎಂ ವ್ಯವಹಾರಕ್ಕೆ ಶುಲ್ಕವಿಧಿಸುವದರೊಂದಿಗೆ, ದಿನನಿತ್ಯದ  ತುರ್ತು  ಹಣಕಾಸು ಅವಶ್ಯಕತೆಯ ಆಪದಾºಂದವ  ಎಂದು ಬಣ್ಣಿಸಲ್ಪಡುತ್ತಿರುವ ಏಟಿಎಂ ಅನ್ನು ಮುಂದಿನ ದಿನಗಳಲ್ಲಿ ನೇಪಥ್ಯಕ್ಕೆ ಸೇರುವ ಲಕ್ಷಣ ಕಾಣುತ್ತಿದೆ.

ನಿಮ್ಮದೇ ದುಡ್ಡು, ನೀವು ಜಮೆ ಮಾಡಿದ್ದು ಅದನ್ನು ತೆಗೆಯಲು ತಿಂಗಳಿಗೆ ಮೂರು ನಾಲ್ಕು ಸಾಲ ಮಾತ್ರ ಅವಕಾಶ ಅಂತ ಕಾನೂನು ಮಾಡಿದೆ. 

ಹತ್ತು ವರ್ಷದ ಹಿಂದೆ ನಿಮ್ಮ ನೆನಪನ್ನು ತಿರುಗಿಸಿ. ಆಗ ಈ ಬ್ಯಾಂಕುಗಳೇ ಎಟಿಎಂ ಬಳಸಿ ಪೇಪರ್‌ ಉಳಿಸಿ ಅಂತ ಹೇಳುವುದು ಶುರುಮಾಡಿತ್ತು.  ನೋಡ್ತಾ, ನೋಡ್ತಾ ಗಲ್ಲಿಗೆ 7-8 ಎಟಿಂ ಶುರುವಾಯ್ತು. ಬ್ಯಾಂಕ್‌ನ ಅವಶ್ಯಕತೆ ಕಡಿಮೆ ಆಗುತ್ತಾ ಹೋಯಿತು. 

ದುರಂತ ನೋಡಿ, ಈಗ ಎಟಿಂ ಬಳಸಿ, ಬಳಸಿ ಅಂತ ಹೇಳುತ್ತಿದ್ದವರೇ ಕ್ಯಾಷ್‌ಲೆಸ್‌ ವ್ಯವಹಾರಕ್ಕೆ ಉತ್ತೇಜನ ಕೊಡುತ್ತಿದೆ. ಈಗ ಎಲ್ಲವೂ ಆನ್‌ಲೈನ್‌. 

ಎಟಿಎಂ ಬಳಕೆ ಇಷ್ಟೇ ಇರಬೇಕು ಎನ್ನುವ ತೀರ್ಮಾನದಿಂದ ಗ್ರಾಹಕರಲ್ಲಿಒಂದು ರೀತಿಯ ವಿವೇಚನೆ ಉಂಟುಮಾಡಿದೆ. ಎಟಿಂಗಳಲ್ಲಿ  ಕೆಲವು ನಿರ್ದಿಷ್ಟ   ಹಿಂತೆಗೆತದ ನಂತರ ಶುಲ್ಕ ವಿಧಿಸಲಾಗುವುದು ಎನ್ನುವುದಕ್ಕಿಂತ  ಎಟಿಂ  ಇಲ್ಲದಿದ್ದರೆ ಎನ್ನುವ ಭಯ ಅವರನ್ನು ಆವರಿಸಿದೆ. ಹಣದ ಅವಶ್ಯಕತೆ ಇರುವಾಗ, ಅದಕ್ಕಾಗಿ ತೆರುವ  ಶುಲ್ಕದ ಬಗೆಗೆ ಯಾರೂ ಗಮನಿಸುವುದಿಲ್ಲ. ಅದಕ್ಕೂ ಮಿಗಿಲಾಗಿ ಎಟಿಎಂ ನೇಪಥ್ಯಕ್ಕೆ  ಸೇರಿದರೆ ಬದಲಿ  ಏನು  ವ್ಯವಸ್ಥೆ ಎನ್ನುವುದರೆ ಬಗೆಗೆ ಯಾವುದೇ ಮಾಹಿತಿ ಇಲ್ಲ.

ಇಂದು ಬ್ಯಾಂಕುಗಳ ಗ್ರಾಹಕರ ಸಂಖ್ಯೆಯಲ್ಲಿ ಸುಮಾರು ಶೇ.80ರಷ್ಟು  ನಗದು ವ್ಯವಹಾರಕ್ಕೆ ಬರುವವರು.  ಗ್ರಾಹಕರ ಸಂಖ್ಯೆಯಲ್ಲಿ ಅವರೇ ಹೆಚ್ಚು. ಎಟಿಎಂ ವ್ಯವಸ್ಥೆ ಆರಂಭವಾದಾಗಿನಿಂದ, ಶಾಖೆಗಳಲ್ಲಿ ಇವರ ಸಂಖ್ಯೆ ಗಣನೀಯವಾಗಿ   ಇಳಿದಿದೆ.  ಕಮರ್ಷಿಯಲ… ವ್ಯವಹಾರ ಮಾಡುವ ಗ್ರಾಹಕರು, ದೊಡ್ಡ ಪ್ರಮಾಣದ ನಗದು ವ್ಯಹಹಾರ ಮಾಡುವವರು  ಮತ್ತು  ನಗದೇತರ ವ್ಯವಹಾರ ಮಾಡುವವರು  ಬ್ಯಾಂಕಿಗೆ ಹೆಚ್ಚಿನ ಸಂಖ್ಯೆಯಲ್ಲಿ  ಬರುತ್ತಾರೆ. ಸಣ್ಣ ಪುಟ್ಟ ನಗದು ವ್ಯವಹಾರ ಮಾಡುವವರಿಗೆ  ಶಾಖೆಗೆ ಭೇಟಿಕೊಡುವ ವ್ಯವಧಾನ ಇರುವುದಿಲ್ಲ. ಅಂತೆಯೇ ಅವರು ಎಟಿಂನ  ಗರಿಷ್ಟ ಉಪಯೋಗ ಮಾಡಿಕೊಳ್ಳುತ್ತಾರೆ. ಬ್ಯಾಂಕಿನ ಬಹುತೇಕ ನಗದು ವ್ಯವಹಾರಗಳು  ಡಿಜಿಟಲ…  ಆಗುತ್ತಿರುವುದರಿಂದ ಮತ್ತು ಗ್ರಾಹಕರು ಮನೆಯಲ್ಲಿಯೇ ಕುಳಿತು ಈ ವ್ಯವಹಾರಗಳನ್ನು ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗುತ್ತಿರುವುದರಿಂದ, ಬ್ಯಾಂಕುಗಳಿಗೆ  ಈಗ ಇರುವಂಥ  ಕಟ್ಟಡಗಳ  ನಿತ್ಯ ಠೇವಣಿ ಮಾಡುವ  ನಿತ್ಯ ನಿಧಿಯಂಥ  ಯೋಜನೆಗಳೂ ಹಳ್ಳ ಹಿಡಿಯಬಹುದೋ ಏನೋ?

ಎಟಿಎಂ ಬಳಕೆ ನಿರ್ಬಂಧದ ಮೂಲಕ ಬ್ಯಾಂಕಿಂಗ್‌ ಮೂಲ ಉದ್ದೇಶ ಬದಲಾದಂತೆ ಕಾಣುತ್ತಿದೆ. ಗ್ರಾಹಕರನ್ನು ಪುನಃ, ಪುನಃ ಬ್ಯಾಂಕಿಗೆ ಬರುವಂತೆ ಮಾಡಿ ಅವರಲ್ಲಿ ಬ್ಯಾಂಕಿಂಗ್‌  ಹವ್ಯಾಸವನ್ನು ಹೆಚ್ಚಿಸುವ ಮತ್ತು  ಗ್ರಾಹಕರಲ್ಲಿ ಉಳಿತಾಯ ಪ್ರವೃತ್ತಿ ಉಂಟುಮಾಡುವ    ಬ್ಯಾಂಕುಗಳ ಲಾಗಾಯ್ತದಿಂದ ಬಂದ ಉದ್ದೇಶ   ಕ್ರಮೇಣ ನಶಿಸುತ್ತಿರುವಂತೆ ಕಾಣುತ್ತಿದೆ. ಗ್ರಾಹಕ  ಮುಂದಿನ ದಿನಗಳಲ್ಲಿ ಬ್ಯಾಂಕುಗಳಲ್ಲಿ ಅಪರೂಪದ ಅತಿಥಿಯಾಗುವ ಸಾಧ್ಯತೆಯೇ ಹೆಚ್ಚು.   ಬ್ಯಾಂಕ್‌ ಶಾಖೆಗಳಲ್ಲಿ ಆಡಳಿತ ವರ್ಗ ಸದಾ ಒತ್ತಾಯಿಸುವ  ಸಿಬ್ಬಂದಿ ಕಡಿತಕ್ಕೆ ಅನುಕೂಲವಾಗಬಹುದು.  ಎಟಿಂ ಬ್ಯಾಂಕಿನ ಒಂದು ರೀತಿಯ vಚluಛಿ ಚಛಛಛಿಛ sಛಿrvಜಿcಛಿ ಅಗಿದ್ದು, ಎಟಿಎಂ ನ ನಿರ್ವಹಣಾ ವೆಚ್ಚದಲ್ಲಿ  ಗಮನಾರ್ಹವಾಗಿ ಕಡಿಮೆಯಾಗುವ ಸಾಧ್ಯತೆಗಳನ್ನು ತಳ್ಳಿಹಾಕಲಾಗದು.

ಬ್ಯಾಂಕ್‌ ಡಿಜಿಟಲೀಕರಣ ಮತ್ತು ನಗದು ವ್ಯವಸ್ಥೆಯನ್ನು ನಿಯಂತ್ರಿಸುವ ಸರ್ಕಾರದ  ಮಹೋನ್ನತ ಉದ್ದೇಶದ ಮೊದಲ ಬಲಿ ಎಟಿಎಂ ವ್ಯವಸ್ಥೆ. ಇದನ್ನು ನಿಯಂತ್ರಿಸಲು   ಮೊದಲ ಹೆಜ್ಜೆಯಾಗಿ  ಇದನ್ನು ತುಟ್ಟಿ ಮಾಡಲಾಗುತ್ತಿದೆ. ಎಟಿಎಂ ವ್ಯವಸ್ಥೆಯನ್ನು ಇಂದಿನ ಯುವ ಜನಾಂಗ ದುರುಪಯೋಗ ಮಾಡಿಕೊಳ್ಳುತ್ತಿದ್ದು ಕೊಳ್ಳು ಬಾಕ ಸಂಸ್ಕೃತಿ ಉತ್ತುಂಗಕ್ಕೇರಿದೆ ಎನ್ನುವ ಅಭಿಪ್ರಾಯ ಕೂಡಾ ಇದೆ. ಬ್ಯಾಂಕುಗಳಲ್ಲಿ ನಗದು  ನಿರ್ವಹಣೆಯ  ಮುಂದಿನ ದಿನಗಳಲ್ಲಿ ಇನ್ನೂ  ಸುಗಮವಾಗಲಿದೆ.

ಎಟಿಎಂ ನಿರ್ವಹಣೆ  ಬಿಳಿ ಆನೆ ಸಾಕಿದಂತೆ?
ಒಂದು  ಸ್ಟ್ಯಾಂಡರ್ಡ್‌ ಕಂಪನಿಯ  ಎಟಿಎಂ ಯಂತ್ರದ  ಬೆಲೆ ಸುಮಾರು 7 ರಿಂದ 10 ಲಕ್ಷ$ಗಳು. ಬ್ಯಾಂಕಿನ  ಹೊರಗಡೆ ಸ್ಥಾಪಿಸಿದರೆ  ಬಾಡಿಗೆ ವೆಚ್ಚ ಬೇರೆ. ಎಟಿಎಂ ಹಾರ್ಡ್‌ ವೇರ್‌ ಮತ್ತು  ಸಾಫ್ಟ್ ವೇರ್‌ ನಿರ್ವಹಣೆ ವೆಚ್ಚ,  ವಿದ್ಯುತ್‌ ಶುಲ್ಕ, ಸೆಕ್ಯುರಿಟಿ ಸಂಬಳ,  ಎಟಿಎಂನಲ್ಲಿ  ಹಣ ತುಂಬುವ ಕೆಲಸವನ್ನು ಹೊರಗುತ್ತಿಗೆ ಕೊಟ್ಟರೆ ಆ ಶುಲ್ಕ ಬೇರೆ. ಹೀಗೆ ಈ  ಎÇÉಾ  ವೆಚ್ಚಗಳನ್ನು  ಸೇರಿಸಿದರೆ ಒಂದು ಎಟಿಎಂ ನ ಮಾಸಿಕ  ನಿರ್ವಹಣಾ ವೆಚ್ಚವೇ ಸುಮಾರು  ಲಕ್ಷ$ ರೂಪಾಯಿಗಳವರೆಗೆ ಇರುತ್ತದೆ.  ಒಂದು ಎಟಿಎಂ ಲಾಭ ನಷ್ಟ ಸರಿದೂಗಿಸಿಕೊಳ್ಳಬೇಕಾದರೆ  ತಿಂಗಳಿಗೆ ಕನಿಷ್ಟ 6,000 ಸಾವಿರ ಹಿಟ್ಸ್‌ಗಳಾಗಬೇಕು ಎನ್ನುವ  ಲೆಕ್ಕಾಚಾರ ಬ್ಯಾಂಕುಗಳಲ್ಲಿ ಇದೆ.  ಆದರೆ, ಇದು ಕಷ್ಟ ಸಾಧ್ಯ ಎನ್ನುವ  ಅಭಿಪ್ರಾಯವೂ ಕೇಳಿಬರುತ್ತಿದೆ. ಇದಕ್ಕೆ ಕಾರಣ ನಗರ- ಪಟ್ಟಣ ಪ್ರದೇಶಗಳಲ್ಲಿ ಪರಸ್ಪರರ  ವ್ಯವಹಾರವನ್ನು ನುಂಗಿ ಹಾಕುವ ಎಟಿಎಂಗಳ  ಭಾರೀ ದಟ್ಟಣೆಯಂತೆ. ಅಂತೆಯೇ ಈ ಸೇವೆಯನ್ನು  vಚluಛಿ ಚಛಛಛಿಛ sಛಿrvಜಿcಛಿ ಅಗಿ ನೀಡಲು ಬ್ಯಾಂಕುಗಳು ಸ್ವಲ್ಪ  ಹಿಂಜರಿಯುತ್ತಿದ್ದು, ಕನಿಷ್ಟ  ನಿರ್ವಹಣಾ  ವೆಚ್ಚವಾದರೂ  ಬರಲಿ ಎಂದು  ಶುಲ್ಕ ವಿಧಿಸಲು ಚಿಂತಿಸುತ್ತವೆ. ಇದನ್ನು ಭರಿಸಲೂ ಆಗದೇ,  ರಿಸರ್ವ ಬ್ಯಾಂಕ್‌  ನಿರ್ದೇಶನದಂತೆ ಗ್ರಾಹಕರಿಗೆ ವರ್ಗಾಯಿಸಲೂ ಆಗದೇ ಬ್ಯಾಂಕುಗಳು ಗೊಂದಲದಲ್ಲಿವೆ ಎನ್ನುವುದೇನೂ ಸುಳ್ಳಲ್ಲ. 

ಬ್ಯಾಂಕ್‌ಗಳಿಗೆ ಎಟಿಎಂಗಳ ಭದ್ರತೆ ಮತ್ತು ಸುರಕ್ಷಿತತೆ ಕೂಡಾ  ಒಂದು  ಡೊಡ್ಡ  ತಲೆನೋವಾಗಿದೆ. ಹಾಗೆಯೇ ಅವುಗಳನ್ನು  ಕಾಯುವವರ ರಕ್ಷಣೆಯೂ ಸವಾಲಾಗುತ್ತಿರುವುದು ಇನ್ನೊಂದು ವಿಪರ್ಯಾಸ.  ಎಟಿಎಂಗೆ ಹಣ ತುಂಬುವ ಹೊರಗುತ್ತಿಗೆದಾರರು  ಮತ್ತು ಸೆಕ್ಯುರಿಟಿಗಳು ಬ್ಯಾಂಕಿಗೆ ವಂಚಿಸಿದ ಕೆಲವು ಪ್ರಕರಣಗಳು ಇವೆ.  ಎಟಿಎಂಗಳ ದರೋಡೆ, ಲೂಟಿ, ಕಾವಲುಗಾರರ ಮೇಲೆ ಹÇÉೆ ಮತ್ತು  ಕಾವಲು ಗಾರರ ಕೊಲೆಗಳ ಪ್ರಕರಣಗಳು  ಬ್ಯಾಂಕುಗಳ ನೆಮ್ಮದಿಯನ್ನು ಕೆಡಿಸುವಷ್ಟು  ನಡೆದಿವೆ. 

ಈ ಕಾರಣದಿಂದ ತುರ್ತು ಅಗತ್ಯಗಳಿಗಾಗಿ ರೈಲು, ಬಸ್‌,  ವಿಮಾನ ನಿಲ್ದಾಣ ಮತ್ತು  ಅಸ್ಪತ್ರೆಗಳ ಹತ್ತಿರ  ಮಾತ್ರ  24 ತಾಸು ಎಟಿಎಂಗಳನ್ನು ತೆರದಿಡಬಹುದು ಎನ್ನುವ ರಚನಾತ್ಮಕ   ಸಲಹೆಗಳು ಬಂದಿದ್ದವು. ಆದರೆ, ಈ ನಿಟ್ಟಿನಲ್ಲಿ ಯಾವುದೇ ನಿರ್ಣಯ ತೆಗೆದುಕೊಂಡಂತಿಲ್ಲ.

ಎಟಿಎಂ ಭವಿಷ್ಯ ಹೇಗೆ?
ಈ ಎÇÉಾ ಒಳಿತು -ಕೆಡುಕು  ಮತ್ತು ಸಮಸ್ಯೆಗಳ  ಮಧ್ಯೆಯೂ ಎಟಿಎಂ ಅನ್ನು  ಬ್ಯಾಂಕುಗಳು  ಗ್ರಾಹಕರಿಗೆ ನೀಡುತ್ತಿರುವ  ಅತ್ಯುತ್ತಮ ಗ್ರಾಹಕ ಸ್ನೇಹಿ ಸೌಲಭ್ಯ ಎನ್ನಬಹುದು. ಆದರೆ, ನಗದು ವ್ಯವಹಾರಗಳ ಮೇಲೆ   ಮಿತಿ ಹೇರುತ್ತಿರುವಾಗ ಏಟಿಎಂ  ಪರಿಕಲ್ಪನೆ ಮತ್ತು ಅದರ  ಮುಂದಿನ ದಿನಗಳಲ್ಲಿ  ದೇಶವ್ಯಾಪಿ ಹರಡಿರುವ ಏಟಿಎಂಗಳು ಬಿಕೋ ಎನಿಸಬಹುದೇನೋ?  ವೆಚ್ಚ ಕಡಿತದ ದೃಷ್ಟಿಯಲ್ಲಿ ಬ್ಯಾಂಕುಗಳು  ತಮ್ಮೊಳಗೇ    ಏಟಿಎಂಗಳ  rಚಠಿಜಿಟnಚlಜಿzಚಠಿಜಿಟn ಮಾಡಬೇಕಾಗಬಹುದು. ಗ್ರಾಹಕರಿಗೆ ಏಟಿಎಂ  ಸೌಲಭ್ಯ ನೀಡಲು ಅಪಾರ  ಹೂಡಿಕೆ ಮಾಡಿದ ಬ್ಯಾಂಕುಗಳು, ಹೂಡಿಕೆಯನ್ನು  ಮರಳಿ ಪಡೆಯುವ ಬಗೆಗೆ ಚಿಂತಿಸಬಹುದು. ಬ್ಯಾಂಕಿಂಗ್‌ ನೀತಿ ಆಯೊಗದ ಮುಖ್ಯ ಕಾರ್ಯನಿರ್ವಾಹಕ   ಅಧಿಕಾರಿ ಅಮಿತಾಬ… ಕಾಂತ್‌ -ಇನ್ನು 3-4  ವರ್ಷಗಳಲ್ಲಿ ಬ್ಯಾಂಕಿನ ಎÇÉಾ ಡಿಜಿಟಲ… ವ್ಯವಹಾರಗಳು ಮೊಬೈಲ… ವಾಲೆಟ್‌ ಅಪ್ಲಿಕೇಷನ್‌ ಮತ್ತು ಬೈಯೋ ಮೆಟ್ರಿಕ್‌  ಮೋಡ್‌ಗಳ ಮೂಲಕ  ಆಗಲಿದೆ.  ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ಮತ್ತು ಎಟಿಎಂಗಳು  ನಿರುಪಯುಕ್ತ ಅಗಬಹುದು’  ಅಂತ ಬಹಳ ಸೂಚ್ಯವಾಗಿ ಹೇಳಿದ್ದಾರೆ. ಏನೇ ಹೇಳಿ, ಏಟಿಎಂ  ವ್ಯವಹಾರಗಳು  ನಿರೀಕ್ಷೆಯಂತೆ ಆಗದಿದ್ದರೂ ನಿರ್ವಹಣಾ ವೆಚ್ಚ  ತಗ್ಗುವುದಿಲ್ಲ. ಗ್ರಾಹಕರಿಗೆ  ಏಟಿಎಂ ಸೌಲಭ್ಯ  ನೀಡಲು  ಸಾವಿರಾರು ಕೋಟಿ ವ್ಯಯಿಸಿದ ಬ್ಯಾಂಕಿಂಗ್‌ ಉದ್ಯಮ ಇದನ್ನು ಮರಳಿ ಪಡೆಯುವುದು ಹೇಗೆ? ದೇವರೇ ಬಲ್ಲ.

ಮರೆಯಲು ಇದೂ ಕಾರಣ…
ಇವತ್ತು ಅಂಗೈಯಲ್ಲಿ ವ್ಯವಹಾರ-ಬೆರಳ ತುದಿಯಲ್ಲಿ ಹಣ. ಆನ್‌ಲೈನ್‌ ಬ್ಯಾಂಕಿಂಗ್‌ ಮೀರಿದ ವ್ಯಾಲೆಟ್‌ಗಳು ಹುಟ್ಟಿವೆ. ಆದರೆ  ಆನ್‌ಲೈನ್‌ ಬ್ಯಾಂಕಿಂಗ್‌ ಮತ್ತು ಮೊಬೈಲ್‌ ವ್ಯಾಲೆಟ್‌ಗೆ ಸಾಮ್ಯತೆ ಇದ್ದರೂ ಭಿನ್ನತೆಗಳೂ ಸಾಕಷ್ಟಿವೆ. ವ್ಯಾಲೆಟ್‌ನಲ್ಲಿ ಸಾಮಾಜಿಕ ಜಾಲ ತಾಣಗಳ ಮೂಲಕವೇ ವ್ಯವಹರಿಸಬಹುದು ಅನ್ನೋದು ಮುಖ್ಯ ಪ್ಲಸ್‌ ಪಾಯಿಂಟ್‌. ಆನ್‌ಲೈನ್‌ ಬ್ಯಾಂಕಿಂಗ್‌ನಷ್ಟು ಟೆಕ್ನಿಕಲ್‌ ಸಮಸ್ಯೆಗಳು ಇದರಲ್ಲಿ ಇರುವುದಿಲ್ಲ. ಕೇವಲ ಒನ್‌ವೇ ವ್ಯವಹಾರ. ಕಳಿಸುವ ವ್ಯಕ್ತಿ ಆಕ್ಷಿಜನ್‌ ಸರ್ವೀಸಸ್‌ನಲ್ಲಿ ತನ್ನ ಅಕೌಂಟ್‌ಗೆ ಲಾಗಿನ್‌ ಆಗಿ ವ್ಯಕ್ತಿಯ ಹೆಸರು, ಗುರುತು ಹಾಕಿ ಕಳುಹಿಸಿದರೆ ಒಂದು ಪ್ರೊಸೆಸ್‌ ಮುಗಿದ ಹಾಗೆ. ಆ ಹೊತ್ತಿಗೆ ಹಣಪಡೆಯುವ ವ್ಯಕ್ತಿಯೂ ಅಕೌಂಟ್‌ ಓಪನ್‌ ಮಾಡಬೇಕಾಗಿಲ್ಲ. ಆಮೇಲೆ ಮಾಡಿದ್ರೂ ನಡೆಯತ್ತದೆ.  ಮಾಡದಿದ್ರೂ ಓ.ಕೆ.  ಕ್ಷಣ ಮಾತ್ರದಲ್ಲಿ ನಿಮ್ಮ ಪರ್ಸಿನ ಹಣ ಹಾರಿಹೋಗಿ ಇನ್ನೊಬ್ಬರ ಜೇಬಿನಲ್ಲಿ ಸೇರಿಕೊಳ್ಳಬಹುದು.  ಕೆಲಸದ ಒತ್ತಡದ ನಡುವೆ ಹಣದ ಪಾವತಿಗಾಗಿ ಓಡಾಟ ಮಾಡೋದು ದೊಡ್ಡ ತೊಂದರೆ. ಈ ವ್ಯಾಲೆಟ್‌ ಮೂಲಕ ಈ ತೊಂದರೆ ನಿವಾರಿಸಬಹುದಂತೆ. 

ಎಟಿಎಂ ಹುಟ್ಟಿದ್ದು?

ಎಟಿಎಂ ಎಂಬುದು ಭಾರತ ಮೂಲದ   ಸ್ಕಾಟ್‌ ಲ್ಯಾಂಡ್‌ ವಿಜ್ಞಾನಿ ಜಾನ್‌ ಶೆಫ‌ರ್ಡ್‌ನ ಪರಿಕಲ್ಪನೆ.  1969ರಲ್ಲಿ ಮೊದಲ ಬಾರಿಗೆ  ನ್ಯೂಯಾರ್ಕ್‌ನಲ್ಲಿ ಸ್ಥಾಪಿಸಲಾಯಿತು.  ಇಂಗ್ಲೆಂಡ್‌ ಮೂಲದ ಎಚ್‌.ಎಸ್‌.ಬಿ.ಸಿ   ಬ್ಯಾಂಕ್‌ 1987ರಲ್ಲಿ ಇದನ್ನು ಮುಂಬೈಯಲ್ಲಿ  ಸ್ಥಾಪಿಸುವ ಮೂಲಕ ಭಾರತಕ್ಕೆ ಪರಿಚಯಿಸಿತು.  ತೊಂಭತ್ತರ ದಶಕದ  ಜಾಗತೀಕರಣ, ಉದಾರೀಕರಣ, ಅರ್ಥಿಕ ಸುಧಾರಣೆಯ ನಂತರ ಇದು ದೇಶದ ಎಲ್ಲ ಕಡೆ ವ್ಯಾಪಿಸಿತು. ಇಂದು ಇಡೀ ದೇಶದಲ್ಲಿ ಈಗ ಸುಮಾರು 2,18,000 ಎಟಿಎಂಗಳು  ದೇಶಾದ್ಯಂತ  ಕಾರ್ಯ ನಿರ್ವಹಿಸುತ್ತಿವೆ. 

– ರಮಾನಂದ ಶರ್ಮ

ಟಾಪ್ ನ್ಯೂಸ್

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.