ಆನ್‌ಲೈನ್‌ ಶಾಪಿಂಗೇ ನಮ್‌ ನೇಚರು!

ಅಮೆಜಾನ್‌.in ಸಫಾರಿ

Team Udayavani, Aug 5, 2019, 5:27 AM IST

c-14

ಬೃಹತ್‌ ಆನ್‌ಲೈನ್‌ ಸಂತೆ ಎಂದೇ ಕರೆಯಬಹುದಾದ ಅಮೆಜಾನ್‌, ತನ್ನ ಗ್ರಾಹಕರಿಗೆ ಕಡಿಮೆ ದರದಲ್ಲಿ ಮೊಬೈಲ್‌ ಫೋನ್‌ಗಳು, ಎಲೆಕ್ಟ್ರಾನಿಕ್ಸ್‌, ಗೃಹೋಪಯೋಗಿ ಉಪಕರಣಗಳು, ದಿನಬಳಕೆಯ ವಸ್ತುಗಳು, ಬಟ್ಟೆಗಳು ಇತ್ಯಾದಿಗಳನ್ನು ಮಾರುವ ಮೂಲಕ ವಿಶ್ವದ ಆನ್‌ಲೈನ್‌ ಮಾರಾಟ ದೈತ್ಯ ಎನಿಸಿಕೊಂಡಿದೆ. ಈ ಅಮೆಜಾನ್‌, ವರ್ಷದಲ್ಲಿ ನಾಲ್ಕೈದು ಬಾರಿ ತನ್ನ ಗ್ರಾಹಕರಿಗೆ ವಿಶೇಷ ಮಾರಾಟ ಮೇಳಗಳನ್ನು ನಡೆಸುತ್ತಿರುತ್ತದೆ. amazon.in ಭಾರತದಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಪ್ರತಿ ವರ್ಷ ವಿಶೇಷ ಮಾರಾಟ ನಡೆಸುತ್ತದೆ. ಈ ಬಾರಿ ಆಗಸ್ಟ್‌ 8ರಿಂದ 11 ರವರೆಗೆ “ಫ್ರೀಡಂ ಸೇಲ್‌’ ಹೆಸರಿನಲ್ಲಿ ತನ್ನ ಮಾರಾಟ ಮೇಳ ನಡೆಸುತ್ತಿದೆ.

ಇಂಥ ಸಂದರ್ಭಗಳಲ್ಲಿ ವಿಶೇಷವಾಗಿ ಗ್ಯಾಜೆಟ್‌ಗಳಿಗೆ ಹೆಚ್ಚಿನ ರಿಯಾಯಿತಿ ದೊರಕುತ್ತದೆ. ನೀವು ಕೊಳ್ಳಬೇಕೆಂದುಕೊಂಡಿದ್ದ ಮೊಬೈಲ್‌ ಫೋನ್‌ಗಳು, ಲ್ಯಾಪ್‌ಟಾಪ್‌, ಕ್ಯಾಮರಾ, ವಾಚ್‌, ಹಾರ್ಡ್‌ಡಿಸ್ಕ್, ಸ್ಮಾರ್ಟ್‌ ಟಿವಿ, ಇಯರ್‌ಫೋನ್‌ ಇತ್ಯಾದಿ ಖರೀದಿಸಲು ಇದು ಉತ್ತಮ ಸಮಯ. ಕೇವಲ ಗ್ಯಾಜೆಟ್‌ಗಳಿಗೆ ಮಾತ್ರವಲ್ಲ, ಗೃಹೋಪಯೋಗಿ ಉಪಕರಣಗಳಾದ ವಾಶಿಂಗ್‌ ಮಶೀನುಗಳು, ಮಿಕ್ಸಿ, ಫ್ರಿಜ್‌, ಮನೆಯ ಪೀಠೊಪಕರಣ ವಸ್ತುಗಳು, ಶರ್ಟ್‌, ಪ್ಯಾಂಟ್‌, ಜೀನ್ಸ್‌, ಮಹಿಳೆಯರ ಉಡುಪುಗಳು, ಶೂಗಳು, ಬ್ಯಾಗ್‌ಗಳು, ದಿನಬಳಕೆಯ ವಸ್ತುಗಳು ಮುಂತಾದುವೆಲ್ಲ ಈ ಸಮಯದಲ್ಲಿ ರಿಯಾಯಿತಿ ದರದಲ್ಲಿ ದೊರಕುತ್ತದೆ.

ಆಗಸ್ಟ್‌ 8ರಿಂದ 11ರವರೆಗೆ ನಡೆಯುವ ಈ ಫ್ರೀಡಂ ಸೇಲ್‌ನಲ್ಲಿ ವಸ್ತುಗಳಿಗೆ ರಿಯಾಯಿತಿ ದೊರಕುವುದರ ಜೊತೆಗೆ ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ ಮೂಲಕ ಮಾಡಿದ ಖರೀದಿಗಳಿಗೆ ಹೆಚ್ಚುವರಿ ಶೇ. 10ರಷ್ಟು ರಿಯಾಯಿತಿ ಕೂಡ ದೊರಕಲಿದೆ. ಅಲ್ಲದೇ ಕ್ರೆಡಿಟ್‌ ಕಾರ್ಡ್‌ ಮೂಲಕ ಖರೀದಿಗೆ ಬಡ್ಡಿ ರಹಿತ ಇಎಂಐ ಸಹ ಸಿಗುತ್ತದೆ. ಸಾಮಾನ್ಯವಾಗಿ ಆನ್‌ಲೈನ್‌ ಖರೀದಿ ಮಾಧ್ಯಮಗಳಾದ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ಗಳಲ್ಲಿ ವಸ್ತುಗಳ ಬೆಲೆ ಸ್ಪರ್ಧಾತ್ಮಕವಾಗಿರುತ್ತದೆ. ಇಂಥ ಸೇಲ್‌ ಸಂದರ್ಭಗಳಲ್ಲಿ ಇನ್ನೂ ಕಡಿಮೆಗೆ ನೀಡಲಾಗುತ್ತದೆ. ಹೀಗೆ, ಕೆಲವು ಮೊಬೈಲ್‌ ಮತ್ತು ಗ್ಯಾಜೆಟ್‌ಗಳಿಗೆ ಗರಿಷ್ಠ ರಿಯಾಯಿತಿ ನೀಡುವ ಮುನ್ಸೂಚನೆಯನ್ನು ಈಗಾಗಲೇ ಅಮೆಜಾನ್‌ ತನ್ನ ಆ್ಯಪ್‌ನಲ್ಲಿ ನೀಡಿದೆ. ಪ್ರಸ್ತುತ ಎಷ್ಟು ದರ ಕಡಿಮೆಯಾಗಬಹುದು ಎಂಬುದನ್ನು ಅಮೆಜಾನ್‌ ಇನ್ನೂ ಬಹಿರಂಗಗೊಳಿಸಿಲ್ಲ. ಆದರೆ ಗ್ರಾಹಕನಿಗೆ ಬೇರೆ ದಿನಗಳಿಗಿಂತ ಹೆಚ್ಚು ರಿಯಾಯಿತಿ ದೊರಕುವುದಂತೂ ಖಚಿತ.

ಲ್ಯಾಪ್‌ಟಾಪ್‌, ಕ್ಯಾಮರಾ, ಸ್ಮಾರ್ಟ್‌ವಾಚ್‌
ಎಚ್‌ಪಿ ಕೋರ್‌ ಐ3 ವಿಂಡೋಸ್‌ 10, 14 ಇಂಚಿನ ಲ್ಯಾಪ್‌ಟಾಪ್‌ಗೆ ಈಗ 30 ಸಾವಿರ ರು. ದರವಿದ್ದು, ಅದು ಕನಿಷ್ಟ ನಾಲ್ಕೈದು ಸಾವಿರ ಕಡಿಮೆಗೆ ದೊರಕಲಿದೆ. ಕ್ಯಾನನ್‌ ಇಓಎಸ್‌ 1500ಡಿ ಡಿಜಿಟಲ್‌ ಎಸ್‌ಎಲ್‌ಆರ್‌ ಕ್ಯಾಮರಾಕ್ಕೆ 27-28 ಸಾವಿರ ರು. ದರವಿದ್ದು, ಇದಕ್ಕೂ ಮೂರ್ನಾಲ್ಕು ಸಾವಿರ ರೂ. ರಿಯಾಯಿತಿ ದೊರೆಯಲಿದೆ. ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ ಆಕ್ಟಿವ್‌, ಅಮೇಜ್‌ಫಿಟ್‌ ಬೀಪ್‌ ಸ್ಮಾರ್ಟ್‌ ವಾಚ್‌, ಹುವಾವೇ ವಾಚ್‌ ಜಿಟಿ, ಆನರ್‌ ವಾಚ್‌ ಮ್ಯಾಜಿಕ್‌, ಅಮೇಜ್‌ಫಿಟ್‌ ಸ್ಟ್ರಾಟೋಸ್‌ ಮತ್ತು ಎಂಐ ಸ್ಮಾರ್ಟ್‌ ಬ್ಯಾಂಡ್‌ಗಳಿಗೆ ರಿಯಾಯಿತಿ ದೊರೆಯಲಿದೆ.

ಗೃಹೋಪಯೋಗಿ ಉಪಕರಣಗಳು
ವಾಶಿಂಗ್‌ ಮೆಶೀನ್‌ಗಳಿಗೆ 11 ಸಾವಿರ ರೂ.ಗಳವರೆಗೂ, ಟೆಲಿವಿಷನ್‌ಗಳಿಗೆ ಶೇ.50ರವರೆಗೂ ರಿಯಾಯಿತಿ ನೀಡುವುದಾಗಿ ತಿಳಿಸಿದೆ. ಕೆಂಟ್‌ ವಾಟರ್‌ ಪ್ಯೂರಿಫ‌ಯರ್‌, ಪ್ರಸ್ಟೀಜ್‌ ಮಿಕ್ಸಿ, ಗ್ಯಾಸ್‌ ಸ್ಟವ್‌, ವಾಶಿಂಗ್‌ ಮೆಶೀನ್‌ಗಳಿಗೂ ರಿಯಾಯಿತಿ ನೀಡಲಾಗುವುದೆಂದು ಅಮೆಜಾನ್‌ ತಿಳಿಸಿದೆ.

ಇದಲ್ಲದೇ ಅಮೆಜಾನ್‌ನ ಅಲೆಕ್ಸಾ ಸ್ಮಾರ್ಟ್‌ ಸ್ಪೀಕರ್‌ಗಳಿಗೆ ಹೆಚ್ಚಿನ ರಿಯಾಯಿತಿ ದೊರಕಲಿದೆ. ನಿಮ್ಮ ಮಾಮೂಲಿ ಟಿವಿಯನ್ನು ಸ್ಮಾರ್ಟ್‌ ಟಿವಿಯನ್ನಾಗಿ ಪರಿವರ್ತಿಸುವ ಅಮೆಜಾನ್‌ ಫೈರ್‌ ಸ್ಟಿಕ್‌ಗೆ 4 ಸಾವಿರ ರೂ. ದರವಿದ್ದು, ಇನ್ನಷ್ಟು ಕಡಿಮೆ ದರಕ್ಕೆ ದೊರಕಲಿದೆ.
ಒಟ್ಟಾರೆ, ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಅಮೆಜಾನ್‌ ನೀಡಲಿರುವ ಮಾರಾಟ ಮೇಳದಲ್ಲಿ ನೀವು ಕೊಳ್ಳಬೇಕೆಂದಿರುವ ವಸ್ತು ಮಾಮೂಲಿ ದರಕ್ಕಿಂತ ಕಡಿಮೆ ದರಕ್ಕೆ ದೊರಕುವುದಂತೂ ನಿಶ್ಚಿತ. ಈಗಲೇ ನೀವು ಕೊಳ್ಳಬೇಕೆಂದಿರುವ ವಸ್ತುವನ್ನು “ಆ್ಯಡ್‌ ಟು ಕಾರ್ಟ್‌’ ಮಾಡಿಟ್ಟುಕೊಳ್ಳಿ!.

ಸ್ಮಾರ್ಟ್‌ “ಫೋನ್‌’ ಆಫ‌ರ್‌ಗಳು
ಸ್ಯಾಮ್‌ಸಂಗ್‌ ಎಂ 40, ಎಂ 30, ರೆಡ್‌ಮಿ ಐ3, ಒಪ್ಪೋ ಎ7, ಸ್ಯಾಮ್‌ಸಂಗ್‌ ಎಸ್‌ 10, ರೆಡ್‌ಮಿ 7, ಆನರ್‌ 8 ಎಕ್ಸ್‌, ನೋಕಿಯಾ 6.1, ರಿಯಲ್‌ ಮಿ ಯು 1, ಸ್ಯಾಮ್‌ಸಂಗ್‌ ಎಂ 20, ಮಿ ಎ2, ರೆಡ್‌ಮಿ 6ಎ, ಎಲ್‌ಜಿ ಡಬ್ಲೂ 30, ಎಲ್‌ ಐ ಡಬ್ಲೂ 10, ಆನರ್‌ 10 ಲೈಟ್‌, ರೆಡ್‌ಮಿ ವೈ2, ಆನರ್‌ 8 ಸಿ ಇತ್ಯಾದಿ ಮೊಬೈಲ್‌ಗ‌ಳಿಗೆ ಹಿಂದೆಂದಿಗಿಂತಲೂ ಹೆಚ್ಚಿನ ರಿಯಾಯಿತಿ ನೀಡಲಾಗುವುದು ಎಂದು ಅಮೆಜಾನ್‌ ತಿಳಿಸಿದೆ.

ಆನರ್‌ ವ್ಯೂ 20 ಮಾಡೆಲ್‌ ಅತ್ಯುನ್ನತ ದರ್ಜೆ (ಫ್ಲಾಗ್‌ಶಿಪ್‌) ಮೊಬೈಲ್‌ ಇದಕ್ಕೆ 38 ಸಾವಿರ ರೂ. ದರವಿದ್ದು, ಪ್ರಸ್ತುತ 28 ಸಾವಿರ ರೂ.ಗಳಿಗೆ ಅಮೆಜಾನ್‌ನಲ್ಲಿ ದೊರಕುತ್ತಿದೆ. ಈ ಫೋನ್‌ ಅನ್ನು ಹಿಂದೆಂದಿಗಿಂತ ಕಡಿಮೆ ದರದಲ್ಲಿ ನೀಡುವುದಾಗಿ ಅಮೆಜಾನ್‌ ತಿಳಿಸಿದೆ. ಅಂದಾಜು 23 ಸಾವಿರ ದರದಲ್ಲಿ ದೊರಕುವ ಸಾಧ್ಯತೆಯಿದೆ. ಎಸ್‌ಬಿಐ ಕಾರ್ಡ್‌ ರಿಯಾಯಿತಿ ಸೇರಿ.

ಒನ್‌ ಪ್ಲಸ್‌ 7 ಪ್ರೊ ಮತ್ತು 7 ಮಾಡೆಲ್‌ಗ‌ಳು ಅಮೆಜಾನ್‌ನಲ್ಲಿ ಹಾಟ್‌ ಫೇವರಿಟ್‌ ಮಾರಾಟದ ಮೊಬೈಲ್‌ಗ‌ಳು. ಇವುಗಳ ದರ ಕಡಿಮೆಯಿರುವುದಿಲ್ಲ. ಆದರೆ ಎಸ್‌ಬಿಐ ಕಾರ್ಡ್‌ಗೆ ಶೇ. 10ರಷ್ಟು ರಿಯಾಯಿತಿ ದೊರಕುತ್ತದೆ. ಜೊತೆಗೆ ನಿಮ್ಮ ಹಳೆಯ ಮೊಬೈಲ್‌ಗೆ ಹೆಚ್ಚುವರಿ ವಿನಿಮಯ ದರ ದೊರಕುತ್ತದೆ. ಅಂದರೆ ಈಗ ನಿಮ್ಮ ಹಳೆಯ ಫೋನ್‌ಗೆ ಉದಾಹರಣೆಗೆ 6 ಸಾವಿರ ಮೌಲ್ಯ ನೀಡಿದರೆ, ಫ್ರೀಡಂ ಸೇಲ್‌ನಲ್ಲಿ 8 ಸಾವಿರ ಮೌಲ್ಯ ನೀಡಲಾಗುತ್ತದೆ.

ಹಾಗೆಯೇ ಒಪ್ಪೋ ರೆನೋ, ವಿವೋ ವಿ 15, ಸ್ಯಾಮ್‌ಸಂಗ್‌ ನೋಟ್‌ 9, ವಿವೋ ವಿ 15 ಪ್ರೊ, ಒಪ್ಪೋ ಎಫ್11 ಪ್ರೊ. ಮೊಬೈಲ್‌ಗ‌ಳಿಗೂ ಆಕರ್ಷಕ ವಿನಿಮಯ ಮೌಲ್ಯ ದೊರಕುತ್ತದೆ.

ಪ್ರೀಮಿಯಂ, ಫ್ಲಾಗ್‌ಶಿಪ್‌ ಅಂದರೆ ಅತ್ಯುನ್ನತ ದರ್ಜೆಯ ಫೋನ್‌ಗಳಿಗೆ 20 ಸಾವಿರ ರೂ.ಗಳವರೆಗೂ ರಿಯಾಯಿತಿ ನೀಡುವುದಾಗಿ ಹಾಗೂ ಈಗಿರುವ ವಿನಿಮಯ ಮೌಲ್ಯಕ್ಕೆ ಹೆಚ್ಚುವರಿಯಾಗಿ 6 ಸಾವಿರ ರೂ.ಗಳವರೆಗೂ ವಿನಿಮಯ ಮೌಲ್ಯವನ್ನು ನೀಡುವುದಾಗಿ ತಿಳಿಸಿದೆ. ಗಮನಿಸಿ: ಈ ಹೆಚ್ಚುವರಿ 6 ಸಾವಿರ, ಪ್ರೀಮಿಯಂ ಫೋನ್‌ಗಳನ್ನು ಕೊಂಡಾಗ ಮಾತ್ರ ದೊರಕುವಂಥದ್ದು!

ಕೆ.ಎಸ್‌. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.