ಒಪ್ಪೋ ಕೆ ಒನ್‌ ಒಪ್ಪಬಹುದಾದ ಸ್ಮಾರ್ಟ್‌ಫೋನ್‌


Team Udayavani, Feb 18, 2019, 12:30 AM IST

opp-k.jpg

ಸಾಮಾನ್ಯವಾಗಿ ಹುಡುಗಿಯರು, ಮಹಿಳೆಯರು ಒಪ್ಪೋ, ವಿವೋ ಕೊಳ್ಳುವುದೇ ಸೆಲ್ಫಿà ಕ್ಯಾಮರಾದ ಮೆಗಾಪಿಕ್ಸಲ್‌ ನೋಡಿಕೊಂಡು! ಈ ಫೋನ್‌ಗಳಲ್ಲಿ ಸೆಲ್ಫಿ ಕ್ಯಾಮರಾದಲ್ಲಿ ಬ್ಯೂಟಿ ಮೋಡ್‌ ಕೊಟ್ಟು ಮುಖದ ತರಿ ತರಿಗಳನ್ನೆಲ್ಲ ನೈಸ್‌ ಮಾಡುವುದರಿಂದ, ಸುಣ್ಣ ಮೆತ್ತಿದ ಗೋಡೆಯಂತೆ ಮುಖವನ್ನು ಬೆಳ್ಳಗೆ ಕಾಣಿಸುವುದರಿಂದ ಹೆಣ್ಮಕ್ಕಳಿಗೆ ಇಂಥವೇ ಇಷ್ಟ. 

ಹೆಚ್ಚು ಸವಲತ್ತುಗಳಿರುವ ಮೊಬೈಲ್‌ ಫೋನ್‌ಗಳನ್ನು ಆನ್‌ಲೈನ್‌ ಮೂಲಕ ಕಡಿಮೆ ದರದಲ್ಲಿ ಮಾರಾಟ ಮಾಡಲು ಅವಕಾಶವಿರುವುದರಿಂದ ಅನೇಕ ಕಂಪೆನಿಗಳು ಅತ್ತ ಮುಖ ಮಾಡುತ್ತಿವೆ. ಶಿಯೋಮಿ, ಆನರ್‌, ರಿಯಲ್‌ಮಿ, ಮೋಟೋ ಗಳ ಯಶಸ್ವಿ ಆನ್‌ಲೈನ್‌ ಮಾರಾಟದಿಂದ ಚಿಂತಿತವಾದ ಸ್ಯಾಮ್‌ಸಂಗ್‌ ಕಳೆದ ವಾರವಷ್ಟೇ ಎಂ ಸಿರೀಸ್‌ನಲ್ಲಿ ಎರಡು ಮೊಬೈಲ್‌ಗ‌ಳನ್ನು ಅಮೆಜಾನ್‌ ಮೂಲಕ ಆನ್‌ಲೈನ್‌ನಲ್ಲಿ ಮಾರಾಟಕ್ಕೆ ಬಿಟ್ಟಿತು. ಈಗ ಇದೇ ದಾರಿ ಅನುಸರಿಸಿ ಒಪ್ಪೋ ಕಂಪೆನಿ ಕೂಡ ತನ್ನ ಒಪ್ಪೋ ಕೆ1 ಎಂಬ ನೂತನ ಸ್ಮಾರ್ಟ್‌ ಫೋನ್‌ ಅನ್ನು ಇದೀಗ ತಾನೇ ಫ್ಲಿಪ್‌ಕಾರ್ಟ್‌ ಮೂಲಕ ಬಿಡುಗಡೆ ಮಾಡಿದೆ. 

ಈ ಮೊಬೈಲ್‌ ದರ 17 ಸಾವಿರ ರೂ. ಆಗಿದೆ. ಈ ದರಕ್ಕೆ ಒದಗಿಸಬಹುದಾದ ಸವಲತ್ತುಗಳು, ವಿಶೇಷ ಅಂಶಗಳನ್ನು ಒಪ್ಪೋ ನೀಡಿರುವುದು ವಿಶೇಷ. ಒಪ್ಪೋ, ವಿವೋ,  ಸ್ಯಾಮ್‌ ಸಂಗ್‌ ಗಳು ಅಂಗಡಿ ಮಾರಾಟದಲ್ಲಿ ಅತಿ ಹೆಚ್ಚು ದರ ಇಟ್ಟು ಕಡಿಮೆ ವಿಶೇಷಣಗಳಿರುವ ಮೊಬೈಲನ್ನು ಮಾರುತ್ತಿವೆ. ಹೀಗಿರುವಾಗ ಒಪ್ಪೋ ಕೆ1 ಆನ್‌ಲೈನ್‌ ಮಾರಾಟಕ್ಕೆಂದು ಬಿಟ್ಟಿರುವುದರಿಂದ ನ್ಯಾಯಯುತ ಬೆಲೆಗೆ ನೀಡಲಾಗುತ್ತಿದೆ. ಇದೇ ಮೊಬೈಲ್‌ ಆಫ್ಲೈನ್‌ (ಅಂಗಡಿ) ಮಾರಾಟಕ್ಕೆ ಬಿಟ್ಟಿದ್ದರೆ ಇದಕ್ಕೆ ಕಡಿಮೆ ಎಂದರೂ 25 ಸಾವಿರ ರೂ.ಗಳನ್ನು ವಿಧಿಸಲಾಗುತ್ತಿತ್ತು!

ಈಗ ಒಪ್ಪೋ ಕೆ1ನಲ್ಲಿ ಏನೇನಿದೆ ನೋಡೋಣ. ಇದು 64 ಜಿಬಿ ಆಂತರಿಕ ಸಂಗ್ರಹ ಹಾಗೂ 4 ಜಿಬಿ ರ್ಯಾಮ್‌ ಹೊಂದಿದೆ. ಜೊತೆಗೆ 256 ಜಿಬಿವರೆಗೂ ಮೆಮೊರಿ ಕಾರ್ಡ್‌ ಕೂಡ ಹಾಕಿಕೊಳ್ಳಬಹುದು. ಅಂದರೆ ಎರಡು ಸಿಮ್‌ ಹಾಕಿ, ಮೆಮೊರಿ ಕಾರ್ಡ್‌ ಸಹ ಬಳಸಬಹುದು. 16 ಮೆ.ಪಿ. ಮತ್ತು 2 ಮೆ.ಪಿ. ಹಿಂಬದಿ ಕ್ಯಾಮರಾ ಇದೆ. ಎಂದಿನಂತೆ ಒಪ್ಪೋ ಸೆಲ್ಫಿàಗೆ ಆದ್ಯತೆ ನೀಡುವುದರಿಂದ ಇದರಲ್ಲಿ 25 ಮೆ.ಪಿ. ಮುಂಬದಿ ಕ್ಯಾಮರಾ ಇದೆ. 

ಸಾಮಾನ್ಯವಾಗಿ ಹುಡುಗಿಯರು, ಮಹಿಳೆಯರು ಒಪ್ಪೋ, ವಿವೋ ಕೊಳ್ಳುವುದೇ ಸೆಲ್ಫಿà ಕ್ಯಾಮರಾದ ಮೆಗಾಪಿಕ್ಸಲ್‌ ನೋಡಿಕೊಂಡು! ಈ ಫೋನ್‌ಗಳಲ್ಲಿ ಸೆಲ್ಫಿà ಕ್ಯಾಮರಾದಲ್ಲಿ ಬ್ಯೂಟಿ ಮೋಡ್‌ ಕೊಟ್ಟು ಮುಖದ ತರಿ ತರಿಗಳನ್ನೆಲ್ಲ ನೈಸ್‌ ಮಾಡುವುದರಿಂದ, ಸುಣ್ಣ ಮೆತ್ತಿದ ಗೋಡೆಯಂತೆ ಮುಖವನ್ನು ಬೆಳ್ಳಗೆ ಕಾಣಿಸುವುದರಿಂದ ಹೆಣ್ಮಕ್ಕಳಿಗೆ ಇಂಥವೇ ಇಷ್ಟ. ಅದರಲ್ಲಿ ಎಂಥದ್ದಾದರೂ ಪ್ರೊಸೆಸರ್‌ ಇರಲಿ, ಅದು ಸ್ಲೋ ಇರಲಿ, ಅದು ಅವರಿಗೆ ಮುಖ್ಯವಲ್ಲ! ಅದಕ್ಕೇ ಮಾಮೂಲಿ ಸೆಲ್ಫಿà, ವಿವೋ, ಒಪ್ಪೋ ಸೆಲ್ಫಿà ಎಂಬ ವಿಭಾಗ ಮಾಡಿ ತಮಾಷೆ ಮಾಡುವ ಫೋಟೋಗಳನ್ನು ನೀವು ನೋಡಿರಬಹುದು. 

ಇದನ್ನು ಪರಿಚಯಿಸಲು ನಾನು ಹೊರಟಿದ್ದು ಇದರಲ್ಲಿ ದರಕ್ಕೆ ತಕ್ಕಂತೆ ಉತ್ತಮ ಅಂಶಗಳನ್ನು ನೀಡಿರುವುದರಿಂದ. ಇದರಲ್ಲಿ ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್‌ 660 ಪ್ರೊಸೆಸರ್‌ ಇದೆ! ಇದು ಮಧ್ಯಮ ವರ್ಗದ ಪ್ರೊಸೆಸರ್‌ಗಳಲ್ಲಿ ವೇಗದ್ದಾಗಿದೆ. 2.2 ಗಿ.ಹ. ಸಾಮರ್ಥ್ಯದ ಈ ಪ್ರೊಸೆಸರ್‌°ಲ್ಲಿ ಪಬ್‌ಜಿಯಂಥ ಗೇಮ್‌ಗಳನ್ನು ಸರಾಗವಾಗಿ ಆಡಬಹುದು. ಇನ್ನೊಂದು ವಿಶೇಷವೆಂದರೆ, ಪರದೆಯ ಮೇಲೇ ಫಿಂಗರ್‌ಪ್ರಿಂಟ್‌ ಸೆನ್ಸರ್‌ ನೀಡಲಾಗಿದೆ. (ಇನ್‌ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್‌ ಸೆನ್ಸರ್‌).

ಇದು 6.4 ಇಂಚಿನ,  ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. (1080*2340, 403 ಪಿಪಿಐ) ಪರದೆ ಸುಲಭವಾಗಿ ಒಡೆದು ಹೋಗದಂತೆ ಕಾರ್ನಿಂಗ್‌ ಗೊರಿಲ್ಲಾ ಗ್ಲಾಸ್‌ 5 ರಕ್ಷಣೆ ಸಹ ಇದಕ್ಕಿದೆ. ಈಗಿನ ಫೋನ್‌ಗಳ ಸಾಮಾನ್ಯ ಟ್ರೆಂಡ್‌ ಆದ  ವಾಟರ್‌ ಡ್ರಾಪ್‌ ಪರದೆ ಇದೆ. ಪರದೆಯ ಅನುಪಾತ ಶೇ. 91ರಷ್ಟಿದೆ, ಅಂದರೆ ಫೋನಿನ ಅಂಚುಪಟ್ಟಿ ಪ್ರದೇಶ ಶೇ. 9ರಷ್ಟು  ಇದೆ. ಬ್ಯಾಟರಿ 3600 ಎಂಎಎಚ್‌ ಇದೆ.ಸಾಧಾರಣ ಬಳಕೆಗೆ ಒಂದು ದಿನ ಬ್ಯಾಟರಿ ಬರಲು ಅಡ್ಡಿಯಿಲ್ಲ. ಅಂಡ್ರಾಯ್ಡ 8.1 ಓರಿಯೋ, ಕಲರ್‌ ಓಎಸ್‌ ಇದೆ. ಲೋಹ ಮತ್ತು ಗಾಜಿನ ಹಿಂಬದಿಯಿರುವ ದೇಹ ಹೊಂದಿದೆ.  ಎರಡು ಸಿಮ್‌ಗಳಲ್ಲೂ 4ಜಿ ವೋಲ್ಟ್ ಬಳಸಬಹುದು. ಇದರಲ್ಲಿ ಮೈಕ್ರೋ ಯುಎಸ್‌ಬಿ ಚಾರ್ಜರ್‌ ಇದೆ. ಫಾಸ್ಟ್‌ ಚಾರ್ಜರ್‌ ಇಲ್ಲ.

ಇದರಲ್ಲಿನ ಕೊರತೆಗಳು: ಈ ದರಕ್ಕೆ ವೇಗದ ಚಾರ್ಜರ್‌ ಹಾಗೂ ಯುಎಸ್‌ಬಿ  ಟೈಪ್‌ ಸಿ ಪೋರ್ಟ್‌ ನೀಡಬಹುದಿತ್ತು.  ಪರದೆಯ ಮೇಲೇ ಬೆರಳಚ್ಚು ಬಳಸಿ ಮೊಬೈಲ್‌ ತೆರೆಯುವ ಇನ್‌ಡಿಸ್‌ಪ್ಲೇ ಫಿಂಗರ್‌ ಪ್ರಿಂಟ್‌ ಸೆನ್ಸರ್‌, ವೇಗವಾಗಿ ಕೆಲಸ ಮಾಡುವುದಿಲ್ಲ. ಬ್ಯಾಟರಿ 4000 ಎಂಎಎಚ್‌ ಇದ್ದರೆ ಚೆನ್ನಾಗಿತ್ತು. ಮುಂಬದಿ ಕ್ಯಾಮರಾ 25 ಮೆ.ಪಿ. ಕೊಟ್ಟು, ಹಿಂಬದಿ ಕ್ಯಾಮರಾ 16 ಮೆ.ಪಿ. ಕೊಡಲಾಗಿದೆ. ಇದರ ಬದಲು ಹಿಂಬದಿ ಕ್ಯಾಮರಾ ಮೆ.ಪಿ. ಜಾಸ್ತಿ ಇದ್ದರೆ ಅನುಕೂಲ ಜಾಸ್ತಿ. ಈಗ ಎಲ್ಲ ಹೊಸ ಅಂಡ್ರಾಯ್ಡ ಫೋನ್‌ಗಳಲ್ಲಿ ಬಾಕ್ಸ್‌ ಜೊತೆಗೇ 9.0 ಪೈ ಓ.ಎಸ್‌. ನೀಡಲಾಗುತ್ತಿದೆ. ಒಪ್ಪೋ 8.1 ಇನ್ನೂ ಓರಿಯೋದಲ್ಲೇ ಇದೆ. ಆದರೂ, ಒಪ್ಪೋ ಕಂಪೆನಿ 17 ಸಾವಿರ ರೂ.ಗಳಿಗೆ ಗ್ರಾಹಕನ ಹಣಕ್ಕೆ ತಕ್ಕ ಮೌಲ್ಯ ನೀಡುವ ಮೊಬೈಲ್‌ ನೀಡಿದೆ. ಇದು ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರ ಲಭ್ಯ. ಈಗ ಕೇಂದ್ರ ಸರ್ಕಾರ ಆನ್‌ಲೈನ್‌ ಮಾರಾಟ ಸಂಸ್ಥೆಗಳಿಗೆ ವಿಧಿಸಿರುವ ಹೊಸ ನಿಯಮದ ಪ್ರಕಾರ ಆನ್‌ಲೈನ್‌ ಕಂಪೆನಿಗಳು ಫ್ಲಿಪ್‌ಕಾರ್ಟ್‌ ಎಕ್ಸ್‌ಕ್ಲುಸಿವ್‌, ಅಮೆಜಾನ್‌ ಎಕ್ಸ್‌ಕ್ಲುಸಿವ್‌ ಎಂದು ಹಾಕಿಕೊಳ್ಳುವಂತಿಲ್ಲ. ಹಾಗಾಗಿ ಫ್ಲಿಪ್‌ಕಾರ್ಟ್‌ ಒಪ್ಪೋ ಕೆ1 ಪುಟದಲ್ಲಿ, ಜಸ್ಟ್‌ ಹಿಯರ್‌ ಎಂದು ಹಾಕಿಕೊಂಡಿದೆ! ನನಗೆ ಚಾಪೆ-ರಂಗೋಲಿ ಗಾದೆ ನೆನಪಿಗೆ ಬಂತು!

– ಕೆ.ಎಸ್‌. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

ಎಂಎನ್‌ಎಸ್‌ ಅಧ್ಯಕ್ಷ ರಾಜ್‌ ಠಾಕ್ರೆಗೆ ಕೋವಿಡ್

ಎಂಎನ್‌ಎಸ್‌ ಅಧ್ಯಕ್ಷ ರಾಜ್‌ ಠಾಕ್ರೆಗೆ ಕೋವಿಡ್

ಪಾಕ್‌ ಚಾನೆಲ್‌ಗಳಲ್ಲಿ “ಆಲಿಂಗನ’ ಕಟ್‌!

ಪಾಕ್‌ ಚಾನೆಲ್‌ಗಳಲ್ಲಿ “ಆಲಿಂಗನ’ ಕಟ್‌!

ಭಾರತ -ಬಾಂಗ್ಲಾದೇಶ ನಡುವಿನ ಬಾಂಧವ್ಯ ಭಾವನಾತ್ಮಕ: ಹರ್ಷವರ್ಧನ್‌

ಭಾರತ -ಬಾಂಗ್ಲಾದೇಶ ನಡುವಿನ ಬಾಂಧವ್ಯ ಭಾವನಾತ್ಮಕ: ಹರ್ಷವರ್ಧನ್‌

panchamasali

ಪಂಚಮಸಾಲಿಗಳ ಒತ್ತಡಕ್ಕೆ ಸರ್ಕಾರ ಮಣಿಯಬಾರದು: ಸಿ.ಎಸ್‌ ದ್ವಾರಕಾನಾಥ್‌

ಪ್ರಧಾನಿ ಬದ್ಧತೆಗೆ ಶ್ಲಾಘನೆ : ಮೋದಿ ನಾಯಕತ್ವಕ್ಕೆ ಲಸಿಕೆ ತಯಾರಕ ಕಂಪನಿಗಳ ಮೆಚ್ಚುಗೆ

ಪ್ರಧಾನಿ ಬದ್ಧತೆಗೆ ಶ್ಲಾಘನೆ : ಮೋದಿ ನಾಯಕತ್ವಕ್ಕೆ ಲಸಿಕೆ ತಯಾರಕ ಕಂಪನಿಗಳ ಮೆಚ್ಚುಗೆ

cm

ಬುರುಡೆ ಬೊಮ್ಮಾಯಿ..! : ಬಿಜೆಪಿಗೆ ಸಿದ್ದರಾಮಯ್ಯ ಟ್ವೀಟಾಸ್ತ್ರದ ತಿರುಗೇಟು

ಕಾಲು- ಬಾಯಿ ರೋಗಕ್ಕೆ ಲಸಿಕೆಯೇ ಪರಿಹಾರ: ಸಚಿವ ಪ್ರಭು ಚವ್ಹಾಣ್

ಕಾಲು- ಬಾಯಿ ರೋಗಕ್ಕೆ ಲಸಿಕೆಯೇ ಪರಿಹಾರ: ಸಚಿವ ಪ್ರಭು ಚವ್ಹಾಣ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ರಾಜ್ಯದ ಪಾಲಿಟೆಕ್ನಿಕ್‌ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ : ಸಚಿವ ಡಾ. ಅಶ್ವತ್ಥನಾರಾಯಣ

udayavani youtube

11 ಮಂದಿ ಚಾರಣಿಗರು ಸಾವು, 17,000 ಅಡಿ ಎತ್ತರದಲ್ಲಿ ವಾಯುಪಡೆ ಕಾರ್ಯಾಚರಣೆ

udayavani youtube

ಮುಂದುವರೆದ ಒಂಟಿ ಸಲಗದ ದಾಂಧಲೆ ಕಾಂಪೌಂಡ್, ಮನೆಯ ಮೇಲ್ಚಾವಣಿ ಪುಡಿಪುಡಿ

udayavani youtube

ಕೃಷಿಕರ ಬದುಕಿಗೆ ಆಶಾಕಿರಣವಾಗಿರುವ MO4 ಭತ್ತದ ತಳಿಯನ್ನು ಯಾಕೆ ಬೆಳೆಯಬೇಕು?

udayavani youtube

ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದ ಕಾರು, ಮಹಿಳೆ ಸಾವು

ಹೊಸ ಸೇರ್ಪಡೆ

ಎಂಎನ್‌ಎಸ್‌ ಅಧ್ಯಕ್ಷ ರಾಜ್‌ ಠಾಕ್ರೆಗೆ ಕೋವಿಡ್

ಎಂಎನ್‌ಎಸ್‌ ಅಧ್ಯಕ್ಷ ರಾಜ್‌ ಠಾಕ್ರೆಗೆ ಕೋವಿಡ್

ಕಿತ್ತೂರು ಉತ್ಸವ ಸಿದ್ಧತೆ ಪರಿಶೀಲಿಸಿದ ಡಿಸಿ-ದೊಡಗೌಡ್ರ

ಕಿತ್ತೂರು ಉತ್ಸವ ಸಿದ್ಧತೆ ಪರಿಶೀಲಿಸಿದ ಡಿಸಿ-ದೊಡಗೌಡ್ರ

ನವೆಂಬರ್‌ದೊಳಗೆ ಏತ ನೀರಾವರಿ ಯೋಜನೆ ಪೂರ್ಣ

ನವೆಂಬರ್‌ದೊಳಗೆ ಏತ ನೀರಾವರಿ ಯೋಜನೆ ಪೂರ್ಣ

ಬಸ್‌ ಪಾಸ್‌ಗಾಗಿ ವಿದ್ಯಾರ್ಥಿಗಳ ಪ್ರತಿಭಟನೆ

ಬಸ್‌ ಪಾಸ್‌ಗಾಗಿ ವಿದ್ಯಾರ್ಥಿಗಳ ಪ್ರತಿಭಟನೆ

ಪಾಕ್‌ ಚಾನೆಲ್‌ಗಳಲ್ಲಿ “ಆಲಿಂಗನ’ ಕಟ್‌!

ಪಾಕ್‌ ಚಾನೆಲ್‌ಗಳಲ್ಲಿ “ಆಲಿಂಗನ’ ಕಟ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.