Udayavni Special

ಅವರೆಕಾಯಿ : ಕಡಿಮೆ ಖರ್ಚು ಅಧಿಕ ಲಾಭ


Team Udayavani, Feb 25, 2019, 12:30 AM IST

avarekalu.jpg

ಮಿಶ್ರಬೆಳೆಯಾಗಿ ಅವರೆಕಾಯಿ ಬೆಳೆದರೆ ಲಾಭ ಹೆಚ್ಚು. ಶ್ರಮ, ಖರ್ಚು ಬೇಡದ ಅವರೇಕಾಯಿ ಬೆಳೆಯನ್ನು ಸಾವಯವ ಪದ್ಧತಿಯಲ್ಲಿ ಬೆಳೆದರೆ ಲಾಭ ಹೆಚ್ಚು. 

ಜಾಸ್ತಿ ಗೊಬ್ಬರ ಬೇಡದ, ನೀರು ಕೇಳದ ಹೆಚ್ಚಿನ ಶ್ರಮವಿಲ್ಲದೆ ಬೆಳೆದುಬಿಡಬಹುದಾದ ತರಕಾರಿ ಯಾವುದು?ಉತ್ತರ ಸುಲಭ. ಅದುವೇ ಅವರೇಕಾಯಿ. 

ಅವರೆಕಾಯಿ ದ್ವಿದಳ ಧಾನ್ಯದ ಬೆಳೆ. ಹೀಗಾಗಿ, ಹೆಚ್ಚು ಮೇಲ್ಗೊಬ್ಬರ ಕೊಡುವ ಅವಶ್ಯಕತೆ ಇಲ್ಲ, ಮಣ್ಣು ಫ‌ಲವತ್ತಾಗಿದ್ದರೆ ಅಷ್ಟೇ ಸಾಕು. ಆದರೆ ತುಂಬಾ ಜನ ರೈತರು ಇದಕ್ಕೂ ಮೂಟೆಗಟ್ಟಲೆ ರಾಸಾಯನಿಕ ಗೊಬ್ಬರ ಸುರಿಯುತ್ತಾರೆ. ಇದರಿಂದ ಬೆಳೆ ವಿಷಕಾರಿಯಾಗುವುದರ ಜೊತೆಗೆ ಸುಮ್ಮನೆ ಗೊಬ್ಬರಕ್ಕೆ ಹಾಕಿದ ದುಡ್ಡು ಹಾಳು; ರೋಗ ಹೆಚ್ಚು.  ಸಾವಯವದಲ್ಲಿ ಬೆಳೆದರೆ ಗಿಡಗಳು ಸದೃಢವಾಗಿ ಬೆಳೆದು,  ಸಣ್ಣ ಪುಟ್ಟ ರೋಗಗಳನ್ನು ಮೆಟ್ಟಿ ನಿಂತು ಸಿಂಪರಣೆಗಾಗಿ ಮಾಡುವ ಖರ್ಚು ಉಳಿಸುತ್ತವೆ.

ಬಿತ್ತನೆ ಕಾಲ 
ಅವರೆಯನ್ನು ವರ್ಷದಲ್ಲಿ ಎರಡು ಸಲ ಬೆಳೆಯಬಹುದು, ಏಪ್ರಿಲ್‌, ಮೇ, ಜೂನ್‌ ಹಾಗೂ ಡಿಸೆಂಬರ್‌-ಜನವರಿ ಅವರೆ ಬಿತ್ತನೆಗೆ ಸೂಕ್ತ.  ಒಂದು ಎಕರೆ ಅವರೆ ಬೆಳೆಯಲು 12 ರಿಂದ 15 ಕೆ.ಜಿಯಷ್ಟು ಬೀಜ ಬೇಕಾಗುತ್ತದೆ. ಒಂದೂವರೆ ಅಡಿಯ ಸಾಲು ಬಿಟ್ಟು ಅರ್ಧ ಅಡಿಗೊಂದು ಬೀಜ ಬರುವಂತೆ ಬಿತ್ತನೆ ಮಾಡಬೇಕು. ಬಿತ್ತನೆಗೂ ಮೊದಲು ಒಂದು ಎಕರೆ ಜಮೀನಿಗೆ ಸುಮಾರು ಎಂಟು ಟನ್‌ನಷ್ಟು ಕೊಟ್ಟಿಗೆ ಗೊಬ್ಬರ ಹಾಕಬೇಕು.  ಅದು ಲಭ್ಯವಿಲ್ಲದಿದ್ದರೆ ಹಾಗೇ ಬಿತ್ತನೆ ಮಾಡಿ ನಂತರ ಮೊದಲ ಸಲ ಉಳುಮೆ ಮಾಡುವಾಗ ಒಂದು ಟನ್‌ನಷ್ಟು ಒಳ್ಳೆ ಗುಣಮಟ್ಟದ ಎರೆಹುಳು ಗೊಬ್ಬರ ಕೊಡಬೇಕು.  ಹೊಲ ತೀರ ಫ‌ಲವತ್ತಾಗಿರದೇ ಹೋದಲ್ಲಿ ಮಾತ್ರ ಬಿತ್ತನೆ ಮಾಡುವಾಗ 10 ಕೆ.ಜಿ ಯೂರಿಯಾ, 20 ಕೆ.ಜಿ ಡಿ….ಎ.ಪಿ, 10 ಕೆ.ಜಿ ಪೊಟ್ಯಾಶ್‌ ಗೊಬ್ಬರ ಕೊಡಿ. ಇದಕ್ಕೂ ಹೆಚ್ಚಿಗೆ ಬೇಡ. ಅರ್ಕಾ ಜಯ್‌ ಹೆಬ್ಟಾಳ,  ಅರ್ಕಾ ವಿಜಯ್‌ ಪ್ರಮುಖ ಅವರೆ ತಳಿ. ಇದರ ಜೊತೆಗೆ ಅರ್ಕಾ ಸಂಭ್ರಮ್‌, ಶಿಲ್ಪ, ಹೆಚ್‌.ಎ ಹಲವಾರು ಖಾಸಗಿ ಕಂಪನಿಯ ಅಧಿಕ ಇಳುವರಿ ಕೊಡುವ ಬೀಜಗಳು ಈಗ ಲಭ್ಯ.

ನಿರ್ವಹಣೆ 
ಸಾವಯದಲ್ಲಿ ಬೆಳೆಯುವುದಾದರೆ, ಅವರೆ ಒಂದು ತಿಂಗಳಿಗೂ ಮೊದಲು ಸಾಲಿನಲ್ಲಿ ಎರೆಹುಳು ಗೊಬ್ಬರ ಹಾಕಿ, ಮಣ್ಣು ಬುಡಕ್ಕೆ ಏರುವ ಹಾಗೆ ಸಾಲು ಮಾಡಿ ನೀರು ಕೊಡಿ. ಹಾಗೆಯೇ 15 ದಿನಕ್ಕೊಮ್ಮೆ ಜೀವಾಮೃತ ಸಿಂಪರಣೆ ಮಾಡಿ.

ಅವರೆಕಾಯಿ ಬೆಳೆಯನ್ನು ಕಾಡುವುದು ಕಾಯಿ ಕೊರೆಯುವ ಹುಳ ಹಾಗೂ ಸಸ್ಯ ಹೇನು ಮಾತ್ರ. ಸಾವಯವದಲ್ಲಿ ಇವೆರಡೂ ಕೀಟಬಾಧೆ ಹತೋಟಿ ಮಾಡುವುದಾದರೆ : ಪ್ರತಿ ಹದಿನೈದು ದಿನಕ್ಕೊಮ್ಮೆ ಹಸುವಿನ ಗಂಜಲ  ಅರಿಷಿಣ ಪುಡಿ  ಹಸಿ ಮೆಣಸಿನಕಾಯಿ ಕಷಾಯ ಹಾಗೂ ಜಜ್ಜಿ ಹಿಂಡಿದ ಬೆಳ್ಳುಳ್ಳಿ ಕಷಾಯ ಮಿಕ್ಸ್‌ ಮಾಡಿ ಸಿಂಪರಣೆ ಮಾಡಿ. ಇದರಿಂದ ಸಸ್ಯ ಹೇನು ಹಾಗೂ ಕಾಯಿಕೊರಕ ಹತ್ತಿರ ಸುಳಿಯುವುದಿಲ್ಲ. ಹಸಿಮೆಣಸಿನಕಾಯಿ ಹಾಗೂ ಸೋಪಿನ ಪುಡಿ ದ್ರಾವಣವನ್ನೂ ಸಿಂಪಡಿಸಿ ಕೀಟಗಳ ಹಾವಳಿ ತಡೆಯಬಹುದು. ಅಷ್ಟಾಗಿಯೂ ಕೀಟ ಕಾಡತೊಡಗಿದರೆ ಸಾವಯವ ಕೀಟನಾಶಕ ಕೊಂಡು ತಂದು ಬಳಸಿ.

ಲಾಭ ಜಾಸ್ತಿ
ಒಂದು ಎಕರೆಯಿಂದ ಗರಿಷ್ಠ ಆರು ಟನ್‌ ಅವರೆಕಾಯಿ ಇಳುವರಿ ಪಡೆಯಬಹುದು. ತೆಂಗಿನ, ಇತರೆ ತೋಟಗಾರಿಕಾ ಗಿಡಗಳ ನಡುವೆ ಮಿಶ್ರಬೆಳೆಯಾಗಿಯೂ ಅವರೆ ಬೆಳೆಯಬಹುದು. ಇದರಿಂದ ಒಂದೇ ಖರ್ಚಿನಲ್ಲಿ ಎರಡು ಆದಾಯ ಪಡೆಯುವುದರ ಜೊತೆಗೆ ಅವರೆ ಬೆಳೆಯುವುದರಿಂದ ಭೂಮಿ ಫ‌ಲವತ್ತಾಗುವುದು.

– ಎಸ್‌.ಕೆ ಪಾಟೀಲ್‌

ಟಾಪ್ ನ್ಯೂಸ್

giyuytrewq

ಕನ್ನಡ ರಾಜ್ಯೋತ್ಸವ ; ಪರಭಾಷಿಕರು 100 ಕನ್ನಡ ಪದ ಬಳಸುವಂತೆ ಸುನಿಲ್ ಕುಮಾರ್ ಮನವಿ

ಸರಕಾರಿ ಆಸ್ತಿ ಉಳಿಸದ ಅಧಿಕಾರಿ ವಿರುದ್ದ ಕ್ರಿಮಿನಲ್ ಮೊಕದ್ದಮೆ : ಶಾಸಕ ಎಚ್ಚರಿಕೆ

ಸರಕಾರಿ ಆಸ್ತಿ ಸಂರಕ್ಷಿಸದ ಅಧಿಕಾರಿ ವಿರುದ್ದ ಕ್ರಿಮಿನಲ್ ಮೊಕದ್ದಮೆ : ಶಾಸಕ ಎಚ್ಚರಿಕೆ

‘ಹೇಳುವುದು ಆಚಾರ, ಮಾಡುವುದು ಅನಾಚಾರ’: ಬಿಜೆಪಿ ವಿರುದ್ಧ ಕಿಡಿಕಾರಿದ ಜೆಡಿಎಸ್

‘ಹೇಳುವುದು ಆಚಾರ, ಮಾಡುವುದು ಅನಾಚಾರ’: ಬಿಜೆಪಿ ವಿರುದ್ಧ ಕಿಡಿಕಾರಿದ ಜೆಡಿಎಸ್

ಮಂಗಳೂರಿನ ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಯತ್ನ: ಸಂತ್ರಸ್ತೆ-ವಕೀಲರ ಆಡಿಯೋ ವೈರಲ್

ಮಂಗಳೂರಿನ ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಯತ್ನ: ಸಂತ್ರಸ್ತೆ-ವಕೀಲರ ಆಡಿಯೋ ವೈರಲ್

d-k-shi

ಮೋದಿ ಹೆಬ್ಬೆಟ್ಟ್ ಗಿರಾಕಿ ಎಂದ ಕಾಂಗ್ರೆಸ್ ಟ್ವೀಟ್ ಗೆ ಡಿಕೆ ಶಿವಕುಮಾರ್ ವಿಷಾದ

ಲಖೀಂಪುರ ಖೇರಿ ಘಟನೆ: ಬಿಜೆಪಿ ನಾಯಕ ಸೇರಿ ನಾಲ್ಕು ಮಂದಿಯ ಬಂಧನ

ಲಖೀಂಪುರ ಖೇರಿ ಘಟನೆ: ಬಿಜೆಪಿ ನಾಯಕ ಸೇರಿ ನಾಲ್ಕು ಮಂದಿಯ ಬಂಧನ

gjhgfds

ಓಟಿಟಿಯಲ್ಲಿ ‘ಸಲಗ’ ದರ್ಶನವಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ತೆರೆದ ಹೊಂಡದಲ್ಲಿ ಬಿದ್ದು ಸಾಯುತ್ತಿವೆ ಪ್ರಾಣಿಗಳು : ಕಣ್ಣು ಮುಚ್ಚಿ ಕುಳಿತ ನಗರ ಸಭೆ

udayavani youtube

ದುರಸ್ತಿಗೊಂಡು ಎರಡೇ ದಿನಕ್ಕೆ ಹಳೆ ಚಾಳಿಯನ್ನು ಮುಂದುವರಿಸಿದ ವಾಚ್ ಟವರ್

udayavani youtube

ಕೊನೆಗೂ ರಾಜ್ಯದಲ್ಲಿ 1 ರಿಂದ 5ನೇ ತರಗತಿ ಶಾಲೆ ಆರಂಭಕ್ಕೆ ಸರಕಾರದ ಗ್ರೀನ್ ಸಿಗ್ನಲ್

udayavani youtube

ಮಹಿಳೆಯರಿಗೆ ಉದ್ಯೋಗ ಕಲ್ಪಿಸಿದ ಯಶಸ್ವೀ ಮಹಿಳಾ ಉದ್ಯಮಿ

udayavani youtube

ಹಳೆ ದ್ವೇಷ : ICU ವಾರ್ಡ್ ನಲ್ಲೆ ನಡೆಯಿತು ಎರಡು ತಂಡಗಳ ಮಾರಾಮಾರಿ

ಹೊಸ ಸೇರ್ಪಡೆ

giyuytrewq

ಕನ್ನಡ ರಾಜ್ಯೋತ್ಸವ ; ಪರಭಾಷಿಕರು 100 ಕನ್ನಡ ಪದ ಬಳಸುವಂತೆ ಸುನಿಲ್ ಕುಮಾರ್ ಮನವಿ

9

ಗ್ರಾಪಂ ಗ್ರಂಥಾಲಯಕ್ಕೆ ನವರೂಪ

ಸರಕಾರಿ ಆಸ್ತಿ ಉಳಿಸದ ಅಧಿಕಾರಿ ವಿರುದ್ದ ಕ್ರಿಮಿನಲ್ ಮೊಕದ್ದಮೆ : ಶಾಸಕ ಎಚ್ಚರಿಕೆ

ಸರಕಾರಿ ಆಸ್ತಿ ಸಂರಕ್ಷಿಸದ ಅಧಿಕಾರಿ ವಿರುದ್ದ ಕ್ರಿಮಿನಲ್ ಮೊಕದ್ದಮೆ : ಶಾಸಕ ಎಚ್ಚರಿಕೆ

8

ನಾಗಾವಿ ಯಲ್ಲಮ್ಮ ಪಲ್ಲಕ್ಕಿ ಉತ್ಸವಕ್ಕೆ ಸಕಲ ಸಿದ್ದತೆ

7

ಕಬ್ಬಿನ ಬಾಕಿ ಪಾವತಿಗೆ ಒತ್ತಾಯಿಸಿ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.