ಇಕೋ ಬಂತು ಪೋಕೋ ಎಕ್ಸ್ – 2


Team Udayavani, Feb 10, 2020, 1:22 PM IST

isiri-tdy-4

ಸಾಂಧರ್ಬಿಕ ಚಿತ್ರ

ಚೀನಾದ ಶಿಯೋಮಿ ಮೊಬೈಲ್‌ ಕಂಪೆನಿ ಎಂಐ, ರೆಡ್‌ಮಿ ಮತ್ತು ಪೋಕೋ ಎಂಬ ಮೂರು ಪ್ರತ್ಯೇಕ ಬ್ರಾಂಡ್‌ಗಳಡಿ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. 2018ರಲ್ಲಿ ಪೋಕೋ ಬ್ರಾಂಡ್‌ನ‌ಡಿ ಪೋಕೋ ಎಫ್1 ಎಂಬ ಫ್ಲಾಗ್‌ಶಿಪ್‌ ಗುಣಮಟ್ಟದ ಫೋನ್‌ ಬಿಡುಗಡೆ ಮಾಡಲಾಗಿತ್ತು. ಸುಮಾರು 22 ಸಾವಿರ ಬೆಲೆಯ ಆ ಫೋನ್‌ 50- 60 ಸಾವಿರದ ಫ್ಲಾಗ್‌ಶಿಪ್‌ ಫೋನ್‌ಗಳಿಗೆ ಸ್ಪರ್ಧೆ ನೀಡಿತ್ತು. ಬಳಿಕ ಆ ಬ್ರಾಂಡ್‌ನ‌ಡಿ ಯಾವುದೇ ಫೋನ್‌ ಬಿಡುಗಡೆ ಆಗಿರಲಿಲ್ಲ.

ಈಗ ಕಂಪೆನಿ, ಮಿಡಲ್‌ ರೇಂಜಿನ ಮೊಬೈಲೊಂದನ್ನು ಕೆಲ ದಿನಗಳ ಹಿಂದೆ ಭಾರತದಲ್ಲಿ ಬಿಡುಗಡೆ ಮಾಡಿದೆ. ಅದುವೇ “ಪೋಕೋ ಎಕ್ಸ್‌ 2′. ಅದರಲ್ಲಿ ಮೂರು ಮಾದರಿಗಳಿವೆ. ಬೆಲೆ, 16 ಸಾವಿರ ರೂ.ಗಳಿಂದ ಆರಂಭವಾಗಿ 20 ಸಾವಿರದವರೆಗೂ ನಿಗದಿಪಡಿಸಲಾಗಿದೆ. ಈ ಫೋನ್‌ನಲ್ಲಿರುವ ಸ್ಪೆಸಿಫಿಕೇಷನ್‌ ಆ ದರಕ್ಕೆ ಹೋಲಿಸಿದರೆ ಚೆನ್ನಾಗಿವೆ. ಈ ಮಾಡೆಲ್‌ ಚೀನಾದಲ್ಲಿ ರೆಡ್‌ಮಿ ಕೆ30 ಹೆಸರಿನಲ್ಲಿ ಮಾರಾಟವಾಗುತ್ತಿದೆ. ಅದೇ ಫೋನನ್ನು ಪೋಕೋ ಎಕ್ಸ್‌2 ಎಂದು ಮರುನಾಮಕರಣ ಮಾಡಿ ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ.

ಆನ್‌ಲೈನ್‌ ಫ್ಲಾಶ್‌ಸೇಲ್‌ನಲ್ಲಿ… ಈ ಮೊಬೈಲ್‌ನ 6 ಜಿಬಿ ರ್ಯಾಮ್‌ ಮತ್ತು 64 ಜಿಬಿ ಆಂತರಿಕ ಸಂಗ್ರಹವುಳ್ಳ ಆವೃತ್ತಿಯ ಬೆಲೆ 16,000 ರೂ., 6 ಜಿಬಿ ರ್ಯಾಮ್‌ ಮತ್ತು 128 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯವುಳ್ಳ ಆವೃತ್ತಿಯ ಬೆಲೆ 17,000 ರೂ. ಮತ್ತು 8 ಜಿಬಿ ರ್ಯಾಮ್‌ ಹಾಗೂ 256 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯದ ಫೋನ್‌ ಬೆಲೆ 20,000 ರೂ. ಇದು, ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರ ಲಭ್ಯ. ನಾಳೆ ಅಂದರೆ ಫೆ.11 ರ ಮಧ್ಯಾಹ್ನ 12ಕ್ಕೆ ಫ್ಲಾಶ್‌ಸೇಲ್‌ ಆರಂಭ. ಆದರೆ ಫ್ಲಾಶ್‌ಸೇಲ್‌ನಲ್ಲಿ ಶಿಯೋಮಿ ಮೊಬೈಲ್‌ಗ‌ಳನ್ನು ಕೊಳ್ಳುವುದು ಕಷ್ಟದ ಕೆಲಸ. ಅವರು ಘೋಷಿಸಿದ ದಿನದಂದು ಮಧ್ಯಾಹ್ನ 12ಕ್ಕೆ ಮೊದಲೇ ಅಂದರೆ 11.45ಕ್ಕೇ ಮೊಬೈಲ್‌ ಅಥವಾ ಕಂಪ್ಯೂಟರ್‌ ಆನ್‌ ಮಾಡಿಕೊಂಡು, , ಫ್ಲಿ ಪ್‌ಕಾರ್ಟ್‌ ನಲ್ಲಿ ಕಾದು ಸರಿಯಾಗಿ 12ಕ್ಕೆ ಆರ್ಡರ್‌ ಬಟನ್‌ ಒತ್ತಿದರೆ ಸಿಕ್ಕಿದರೆ ಸಿಕ್ಕೀತು, ಇಲ್ಲವಾದರೆ ಇಲ್ಲ. ಇನ್ನು ಮುಂದಿನ ವಾರಕ್ಕೇ ಕಾಯಬೇಕು. ಐದಾರು ವಾರ ಇದೇ ಪರಿಸ್ಥಿತಿ ಮುಂದುವರಿಯುತ್ತದೆ.

ಸ್ನಾಪ್‌ಡ್ರಾಗನ್‌ ಪ್ರೊಸೆಸರ್‌ :  ಈ ಫೋನಿನಲ್ಲಿ ಕ್ವಾಲ್‌ಕಾಂ ಸ್ನಾಪ್‌ಡ್ರಾಗನ್‌ 730ಜಿ ಹೆಸರಿನ ಎಂಟು ಕೋರ್‌ಗಳ, 2.2 ಗಿಗಾಹಟ್ಜ್ì ವೇಗದ ಪ್ರೊಸೆಸರ್‌ ಅಳವಡಿಸಲಾಗಿದೆ. ಇದು ಮಿಡಲ್‌ ರೇಂಜಿನ ಫೋನ್‌ಗಳ ಅತಿ ಶಕ್ತಿಶಾಲಿ ಪ್ರೊಸೆಸರ್‌. ಗೇಮ್‌ಗಳನ್ನು ಅಡೆತಡೆಯಿಲ್ಲದೇ ಆಡಲು ಸಹಕಾರಿಯಾಗಿದೆ. ಹೊಸ ಅಂಡ್ರಾಯ್ಡ 10 ಒ.ಎಸ್‌. ಜೊತೆಗೇ ಫೋನ್‌ ಹೊರಬಂದಿದ್ದು, ಎಂಐಯುಐ ಕಾರ್ಯಾ ಚರಣಾ ವ್ಯವಸ್ಥೆಯನ್ನು ಅಂಡ್ರಾಯ್ಡ ಜೊತೆ ಮಿಶ್ರಣ ಮಾಡಲಾಗಿದೆ.

 

ಕ್ಯಾಮರಾ ಆಕರ್ಷಣೆ :  ಹಿಂಬದಿಯಲ್ಲಿ ನಾಲ್ಕು ಕ್ಯಾಮರಾಗಳನ್ನು ಈ ಫೋನ್‌ ಹೊಂದಿದೆ. 64 ಮೆಗಾಪಿಕ್ಸೆಲ್‌ ಸೋನಿ ಐಎಂಎಕ್ಸ್‌ 686 ಹೊಸ ಮಸೂರ (ಲೆನ್ಸ್‌)ವನ್ನು ಮುಖ್ಯ ಕ್ಯಾಮರಾಕ್ಕೆ ಅಳವಡಿಸಲಾಗಿದೆ. 8 ಮೆಗಾಪಿಕ್ಸೆಲ್‌ ವಿಸ್ತೃತ ಕೋನ ಮಸೂರ (ವೈಡ್‌ ಆ್ಯಂಗಲ್‌ ಲೆನ್ಸ್‌) 2 ಮೆ.ಪಿ. ಸೂಕ್ಷ್ಮ ಮಸೂರ, 2 ಮೆ.ಪಿ.! (ಡೆಪ್ತ್) ಮಸೂರಗಳಿವೆ. ಮುಂಬದಿಯಲ್ಲಿ ಎರಡು ಕ್ಯಾಮರಾ ಇರುವುದು ಇದರ ವಿಶೇಷಗಳಲ್ಲೊಂದು. ಫೋನಿನ ಬಲ ತುದಿಯಲ್ಲಿ ಪಂಚ್‌ಹೊàಲ್‌ನೊಳಗೆ ಎರಡು ಲೆನ್ಸ್‌ನ ಕ್ಯಾಮರಾ ಇದೆ. 20 ಮೆಗಾಪಿಕ್ಸೆಲ್‌ ಮತ್ತು 2 ಮೆಗಾಪಿಕ್ಸೆಲ್‌ ಲೆನ್ಸ್  ಗಳಿವೆ. ಇಷ್ಟೆಲ್ಲಾ ವಿಶೇಷಗಳಿದ್ದ ಮೇಲೆ ಕ್ಯಾಮರಾ ಈ ದರಕ್ಕೆ ಚೆನ್ನಾಗಿಯೇ ಇರುತ್ತದೆ ಎನ್ನಲಡ್ಡಿಯಿಲ್ಲ.

ದೊಡ್ಡ ಬ್ಯಾಟರಿ :  ಶಿಯೋಮಿ ಫೋನ್‌ಗಳು ಬ್ಯಾಟರಿಗೆ ಫೇಮಸ್ಸು. ಹೀಗಾಗಿ ಈ ಫೋನು ಕೂಡ ದೊಡ್ಡ ಬ್ಯಾಟರಿ ಹೊಂದಿದೆ. 4500 ಎಂಎಎಚ್‌ ಬ್ಯಾಟರಿಯಿದೆ. ಇದಕ್ಕೆ 27 ವ್ಯಾಟ್‌ ವೇಗದ ಚಾರ್ಜಿಂಗ್‌ ಸೌಲಭ್ಯ ಇದೆ. ಹೌದು, ಆ ಜಾರ್ಜರ್‌ಅನ್ನೂ ಫೋನ್‌ ಜೊತೆಗೆ ನೀಡಲಾಗುತ್ತಿದೆ! ಇನ್ನು ಫಿಂಗರ್‌ಪ್ರಿಂಟ್‌ ಸ್ಕ್ಯಾನರ್‌, ಫೋನಿನ ಪವರ್‌ ಬಟನ್‌ ಮೇಲೆ ಇದೆ. ಅಂದರೆ, ಅದು ಫೋನಿನ ಪರದೆ ಮೇಲೆ ಅಥವಾ ಹಿಂಬದಿಯಲ್ಲಿ ಇಲ್ಲ. ಫೋನಿನ ಬಲ ಬದಿಯಲ್ಲಿದೆ. ಟೈಪ್‌ ಸಿ ಚಾರ್ಜಿಂಗ್‌ ಪೋರ್ಟ್‌ ಹೊಂದಿದೆ. ಆಡಿಯೋಗಾಗಿ 3.5 ಎಂಎಂ ಜಾಕ್‌ ನೀಡಲಾಗಿದೆ.

 

ಪರದೆಯ ರಿಫ್ರೆಶ್‌ ರೇಟ್‌ 120 ಹರ್ಟ್ಜ್ :  ಪೋಕೋ ಎಕ್ಸ್‌2 ಫೋನು 6.67 ಇಂಚಿನ ‌ಫುಲ್  ಎಚ್‌ಡಿ ಪ್ಲಸ್‌ ಐಪಿಎಸ್‌ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದೆ. ಪರದೆಯ ಬಲದ ಕಡೆಯಲ್ಲಿ ಎರಡು ಕ್ಯಾಮರಾಗಳ ಪಂಚ್‌ ಹೋಲ್‌ಗ‌ಳಿವೆ. ಪರದೆ ಸುಲಭಕ್ಕೆ ಒಡೆಯಬಾರದೆಂದು ಗೊರಿಲ್ಲಾ ಗ್ಲಾಸ್‌5 ರಕ್ಷಣಾತ್ಮಕ ಲೇಪನ ನೀಡಲಾಗಿದೆ. ಈ ಪರದೆಯ ರಿಫ್ರೆಶ್‌ರೇಟ್‌ 120 ಹರ್ಟ್ಜ್ ಇರುವುದನ್ನು ಕಂಪೆನಿ ಹೆಮ್ಮೆಯಿಂದ ಹೇಳಿಕೊಂಡಿದೆ. ಸಾಮಾನ್ಯವಾಗಿ ಸ್ಮಾರ್ಟ್‌ಫೋನ್‌ಗಳ ಪರದೆಯ ರಿಫ್ರೆಶ್‌ರೇಟ್‌ 60 ಹರ್ಟ್ಜ್ ಇರುತ್ತದೆ. ಇತ್ತೀಚಿಗೆ ಬಂದ ಒನ್‌ಪ್ಲಸ್‌ 7 ಪ್ರೊದಲ್ಲಿ 90 ಹರ್ಟ್ಜ್ ರಿಫ್ರೆಶ್‌ರೇಟ್‌ ಇತ್ತು.

ಪೋಕೋ ಎಕ್ಸ್‌ 2ದಲ್ಲಿ 120 ಹರ್ಟ್ಜ್ ರಿಫ್ರೆಶ್‌ ರೇಟ್‌ ಇದೆ.  ರಿಫ್ರೆಶ್‌ ರೇಟ್‌ ಹೆಚ್ಚಿದ್ದಷ್ಟೂ ಪರದೆಯ ಮೇಲೆ ಮೂಡುವ ಚಿತ್ರಗಳು ಸ್ಪಷ್ಟವಾಗಿ, ಸ್ಫುಟವಾಗಿ ಕಾಣಿಸುತ್ತದೆ. ಅಲ್ಲದೆ ಇದು ಹೈಡೆಫೆನಿಷನ್‌ ಗ್ರಾಫಿಕ್ಸ್‌ ಉಳ್ಳ ದೊಡ್ಡ ದೊಡ್ಡ ಗೇಮ್‌ಗಳನ್ನು ಸರಾಗವಾಗಿ ಆಡಲು ಅನುಕೂಲ ಮಾಡಿಕೊಡುತ್ತದೆ. ಭಾರತದಲ್ಲಿ ಏಸುಸ್‌ ಸಂಸ್ಥೆಯ “ರೋಗ್‌ ಫೋನ್‌ 2′ ಬಿಟ್ಟರೆ 120 ರಿಫ್ರೆಶ್‌ರೇಟ್‌ ಇರುವ ಫೋನ್‌ ಪೋಕೋ ಎಕ್ಸ್‌2 ಮಾತ್ರ. 20 ಸಾವಿರದೊಳಗಿನ ಫೋನ್‌ಗಳಲ್ಲಿ ಈ ಸವಲತ್ತನ್ನು ಒದಗಿಸಿರುವುದು ಸಹ ವಿಶೇಷವೇ.

 

-ಕೆ.ಎಸ್‌. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

sreeleela

ಟಾಲಿವುಡ್‌ ನಲ್ಲಿ ಶ್ರೀಲೀಲಾಗೆ ಬೇಡಿಕೆ

ಒಂದು ಸೋಲಿನಿಂದ ನಮ್ಮ ವಿಶ್ವಕಪ್‌ ಅಭಿಯಾನ ಅಂತ್ಯವಾಗಿಲ್ಲ: ವಿರಾಟ್

ಒಂದು ಸೋಲಿನಿಂದ ನಮ್ಮ ವಿಶ್ವಕಪ್‌ ಅಭಿಯಾನ ಅಂತ್ಯವಾಗಿಲ್ಲ: ವಿರಾಟ್

fgjhgfd

ಜರ್ಮನಿಯಲ್ಲಿ ನಡೆಯಿತು ಗಡ್ಡದ ಒಲಿಂಪಿಕ್ಸ್‌

rwytju11111111111

ಮಂಗಳವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ನೈಋತ್ಯ ಮುಂಗಾರು ವಾಪಸ್‌; 1975ರ ಬಳಿಕ ಇಷ್ಟೊಂದು ವಿಳಂಬ 17ನೇ ಬಾರಿ

ನೈಋತ್ಯ ಮುಂಗಾರು ವಾಪಸ್‌; 1975ರ ಬಳಿಕ ಇಷ್ಟೊಂದು ವಿಳಂಬ 17ನೇ ಬಾರಿ

ಬಿಸಿಯೂಟ ದಿನಸಿಗಾಗಿ 8 ಕಿ.ಮೀ ನಡೆಯುವ ಶಿಕ್ಷಕರು

ಬಿಸಿಯೂಟ ದಿನಸಿಗಾಗಿ 8 ಕಿ.ಮೀ ನಡೆಯುವ ಶಿಕ್ಷಕರು

ಯೋಗಕ್ಕೆ ಸಿಗಲಿದೆ ವಿಮಾ ಡಿಸ್ಕೌಂಟ್‌? ವಿಮಾ ಪ್ರಾಧಿಕಾರದಿಂದ ಕರಡು ಮಾರ್ಗಸೂಚಿ

ಯೋಗಕ್ಕೆ ಸಿಗಲಿದೆ ವಿಮಾ ಡಿಸ್ಕೌಂಟ್‌? ವಿಮಾ ಪ್ರಾಧಿಕಾರದಿಂದ ಕರಡು ಮಾರ್ಗಸೂಚಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಪತ್ತೆಯಾಗದ ಬಾಲಕನ ದೇಹ : ಕಾಳಿ ನದಿಯಲ್ಲಿ ಮುಂದುವರಿದ ಶೋಧ ಕಾರ್ಯಾಚರಣೆ

udayavani youtube

ಬಾಲಕನನ್ನು ಮೊಸಳೆ ಎಳೆದೊಯ್ದ ಪ್ರಕರಣ : ಬಾಲಕನ ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ

udayavani youtube

ಸೋತವನ ವಿರುದ್ದವೇ ಶರಣಾಗಿದ್ದೀಯ‌: ಸಿದ್ದರಾಮಯ್ಯಗೆ ಶ್ರೀನಿವಾಸ ಪ್ರಸಾದ್ ಟಾಂಗ್

udayavani youtube

ಚಿಕ್ಕಮಗಳೂರು : ಕೆರೆಯಲ್ಲಿ ಈಜಲು ಹೋದ ಬಾಲಕ ನೀರಲ್ಲಿ ಮುಳುಗಿ ಸಾವು

udayavani youtube

ಶ್ರೀರಂಗಪಟ್ಟಣ ತಾಲೂಕಿನಾದ್ಯಂತ ಭಾರೀ ಮಳೆಗೆ ಸೇತುವೆ ಮುಳುಗಡೆ ರೈತರ ಬೆಳೆ ನಾಶ

ಹೊಸ ಸೇರ್ಪಡೆ

sreeleela

ಟಾಲಿವುಡ್‌ ನಲ್ಲಿ ಶ್ರೀಲೀಲಾಗೆ ಬೇಡಿಕೆ

ಒಂದು ಸೋಲಿನಿಂದ ನಮ್ಮ ವಿಶ್ವಕಪ್‌ ಅಭಿಯಾನ ಅಂತ್ಯವಾಗಿಲ್ಲ: ವಿರಾಟ್

ಒಂದು ಸೋಲಿನಿಂದ ನಮ್ಮ ವಿಶ್ವಕಪ್‌ ಅಭಿಯಾನ ಅಂತ್ಯವಾಗಿಲ್ಲ: ವಿರಾಟ್

fgjhgfd

ಜರ್ಮನಿಯಲ್ಲಿ ನಡೆಯಿತು ಗಡ್ಡದ ಒಲಿಂಪಿಕ್ಸ್‌

rwytju11111111111

ಮಂಗಳವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ನೈಋತ್ಯ ಮುಂಗಾರು ವಾಪಸ್‌; 1975ರ ಬಳಿಕ ಇಷ್ಟೊಂದು ವಿಳಂಬ 17ನೇ ಬಾರಿ

ನೈಋತ್ಯ ಮುಂಗಾರು ವಾಪಸ್‌; 1975ರ ಬಳಿಕ ಇಷ್ಟೊಂದು ವಿಳಂಬ 17ನೇ ಬಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.