Udayavni Special

ಪಾಲಿಗೆ ಬಂದದ್ದು ಪಾಲಿಹೌಸ್‌!

ತಪಸ್ಸಿಗೊಲಿದ ತಾರಸಿ ಕೃಷಿ

Team Udayavani, Jul 29, 2019, 9:16 AM IST

poly

ಮಂಗಳೂರು – ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಣಂಬೂರು ಬಂದರು
ದಾಟಿದ ನಂತರ ಸಿಗುವ ಊರು ಹೊಸಬೆಟ್ಟು. ಅಲ್ಲಿನ ಬಸ್‌ ನಿಲ್ದಾಣದ ಪಕ್ಕದಲ್ಲಿ ಪೂರ್ವ ದಿಕ್ಕಿಗೆ ಕಾಂಕ್ರೀಟು ರಸ್ತೆಯಲ್ಲಿ ಸುಮಾರು ಅರ್ಧ ಕಿ.ಮೀ. ಸಾಗಿದರೆ ಸಿಗುತ್ತದೆ ಶ್ರೀನಗರ ಬಡಾವಣೆ. ಅಲ್ಲಿ ವಿ. ರಾಜಕುಮಾರ್‌ ಅವರ ಮನೆಯಿರುವ ಕಾಂಪೌಂಡಿಗೆ ಇತ್ತೀಚಿಗೆ ಕಾಲಿಟ್ಟಾಗ ಒಂದು ಪಾಲಿಹೌಸ್‌ ಕಾಣಿಸಿತು. ಒಂದು ಸೆಂಟ್ಸ್‌ ವಿಸ್ತೀರ್ಣವಿದ್ದ ಪಾಲಿಹೌಸ್‌ ಒಳ ಹೊಕ್ಕರೆ
ಕೃಷಿಲೋಕವೊಂದರ ದರ್ಶನವಾಗಿತ್ತು.

ಬಳ್ಳಿಗಳು, ಗಿಡ ತೊಟ್ಟಿಗಳು
ಕಳೆದ ಆರು ವರ್ಷಗಳಿಂದ ಐದಾರು ಮನೆಗಳಿಗೆ ಸಾಕಾಗುವಷ್ಟು ತರಕಾರಿ ಬೆಳೆಯುತ್ತಿದ್ದಾರೆ ರಾಜಕುಮಾರ್‌. ಸುಮಾರು ಇಪ್ಪತ್ತು ಅಡಿ ಅಗಲದ ಪಾಲಿಹೌಸಿನ ಎರಡೂ ಬದಿಗಳಲ್ಲಿ ಪಾಲಿಥಿನ್‌ ಶೀಟಿನ ಛಾವಣಿಯಿಂದ
ನೆಲದವರೆಗೆ ನೇತಾಡುತ್ತಿರುವ ಪ್ಲಾಸ್ಟಿಕ್‌ ಬಲೆಗೆ ಹಬ್ಬಿಕೊಂಡಿವೆ ಅಲಸಂದೆ ಬಳ್ಳಿಗಳು. ಪಾಲಿಹೌಸಿನ ಮಧ್ಯದಲ್ಲಿ ಐದಡಿ ಅಂತರದಲ್ಲಿ ತಲಾ ಐದು ಕುಂಡಗಳಎರಡು ಸಾಲುಗಳು. ಆ ಕುಂಡಗಳಲ್ಲಿ ಆಳೆತ್ತರ ಬೆಳೆದಿರುವ ಬೆಂಡೆಕಾಯಿ ಮತ್ತುಟೊಮೆಟೊ ಗಿಡಗಳು.ಕುಂಡಗಳ ನಡುವೆಪುಟ್ಟ ಹರಿವೆ ಸಸಿಗಳು. ಕುಂಡಗಳ ಪಕ್ಕದಲ್ಲಿ ಪ್ಲಾಸ್ಟಿಕ್‌ ಬಲೆಯ ಚಪ್ಪರಕ್ಕೆ ಹಬ್ಬಿರುವ ಕುಂಬಳಕಾಯಿ ಬಳ್ಳಿಗಳು.ಅಲ್ಲಿ ಗಮನ ಸೆಳೆದದ್ದು ಮೂರಡಿ ವ್ಯಾಸದ ತೆಂಗಿನ ನಾರಿನ ಮೂರು ಸಿಲಿಂಡರ್‌ಗಳು. ಡ್ರಿಪ್‌ ಪೈಪಿಗೆ ತೆಂಗಿನ ನಾರು ಸುತ್ತಿ, ಆ ಪೈಪನ್ನು ಸಿಲಿಂಡರಿನಂತೆ ಸುತ್ತಿ ಅವನ್ನು ರಚಿಸಿ¨ದ್ದಾರೆ ರಾಜಕುಮಾರ್‌. ಚೀನಿಕಾಯಿ ಬಳ್ಳಿ ನೂರಡಿ ಉದ್ದಕ್ಕೆ ಬೆಳೀತದೆ. ಅದನ್ನು ಹಾಗೇ ಬಿಟ್ಟರೆ, ಯಾವ್ಯಾವುದೋ ದಿಕ್ಕಿನಲ್ಲಿ ಬೆಳೀತದೆ. ಅದರ ಬದಲಾಗಿ ಈ ತೆಂಗಿನ ನಾರಿನ ಸಿಲಿಂಡರಿಗೆ ದಿನದಿನವೂ ಅದರ ತುದಿಯನ್ನು ಸುತ್ತಿದರೆ, ನೂರಡಿ ಉದ್ದದ ಬಳ್ಳಿ ಆರಡಿ ಎತ್ತರದ ಸಿಲಿಂಡರ್‌ ಆಕಾರದಲ್ಲಿ ಬೆಳೀತದೆ ಎಂದು
ವಿವರಿಸುತ್ತಾರೆ ರಾಜಕುಮಾರ್‌.

ಎರಡನೇ ಪಾಲಿಹೌಸ್‌
ಪಕ್ಕದ ಇರುವ ತಮ್ಮ ಇನ್ನೊಂದು ಮನೆಯ ಟೆರೇಸಿನಲ್ಲಿ ಇನ್ನೊಂದು ಪಾಲಿಹೌಸ್‌ ನಿರ್ಮಿಸಿದ್ದಾರೆ. ಕಬ್ಬಿಣದ ಏಣಿ ಹತ್ತಿ, ಎರಡನೇ ಪಾಲಿಹೌಸ್‌ ಪ್ರವೇಶಿಸಿದಾಗ ಅಲ್ಲಿ ಟೆರೇಸಿನ ನಾಲ್ಕೂ ಬದಿಗಳಲ್ಲಿ ವೀಡ್‌ ಮ್ಯಾಟಿನಿಂದ
ರಚಿಸಿದ ಎರಡು ಹಂತಗಳ ಗಿಡತೊಟ್ಟಿಗಳು. ಅದಲ್ಲದೆ, ಟೆರೇಸಿನ ನಡುವಣ ಜಾಗದಲ್ಲಿ ತಲಾ 25 ಅಡಿ ಉದ್ದದ ಆರು ಗಿಡತೊಟ್ಟಿ ಸಾಲುಗಳು.
ಗಿಡತೊಟ್ಟಿಗಳ ಅಗಲ ಎರಡು ಅಡಿ, ಎತ್ತರ ಒಂದೂವರೆ ಅಡಿ. ಆ ತೊಟ್ಟಿಗಳಲ್ಲಿ ತುಂಬಿದ್ದಾರೆ ಕೋಕೊ ಪಿಟ್‌, ಮಣ್ಣು ಮತ್ತು ಸೆಗಣಿಯ ಮಿಶ್ರಣ (1:1:1 ಅನುಪಾತದಲ್ಲಿ). ಅಲ್ಲಿ ಅವರು ಟೊಮೆಟೊ, ಹಸಿರುಮೆಣಸು, ಹರಿವೆ ಗಿಡಗಳನ್ನು ಮತ್ತು ಸೌತೆ, ಮುಳ್ಳುಸೌತೆ, ಅಲಸಂದೆ, ಹಾಗಲಕಾಯಿ, ಚೌಳಿಕಾಯಿ ಮತ್ತು ಚೀನಿಕಾಯಿ ಬೆಳೆದಿದ್ದಾರೆ. ಎಲ್ಲ ಗಿಡ ಬಳ್ಳಿಗಳಲ್ಲಿಯೂ ಫ‌ಸಲು ತೊನೆದಾಡುತ್ತಿತ್ತು. ಪಿ.ವಿ.ಸಿ ಪೈಪಿನಲ್ಲಿ ಹನಿ ನೀರಾವರಿ
ಪಾಲಿಹೌಸಿನಲ್ಲಿ ತರಕಾರಿ ಬೆಳೆಯುವ ತಮ್ಮ ಅನುಭವವನ್ನೆಲ್ಲ ಭಟ್ಟಿ ಇಳಿಸಿ ಗಿಡತೊಟ್ಟಿಗಳಿಗೆ ನೀರುಣಿಸುವ ವ್ಯವಸ್ಥೆ ಮಾಡಿ¨ದ್ದಾರೆ ರಾಜಕುಮಾರ್‌. ಅದು ಹೇಗೆಂದರೆ, ತೊಟ್ಟಿಗಳು ನೆಲ ಮಟ್ಟದಿಂದ ಅರ್ಧ ಅಡಿ ಎತ್ತರದಲ್ಲಿ ಎರಡು ಸಮನಾಂತರ ಕಬ್ಬಿಣದ ಪೈಪುಗಳ ಸ್ಟ್ಯಾಂಡಿನ ಮೇಲೆ ನಿಂತಿವೆ. ಆ ಸಮನಾಂತರ ಪೈಪುಗಳ ನಡುವೆ ಹಾದು ಹೋಗಿದೆ ಮೂರೂವರೆ ಇಂಚು ವ್ಯಾಸದ ಪಿ.ವಿ.ಸಿ ಪೈಪ್‌. ಆ ಪೈಪಿನಲ್ಲಿ ಎರಡು ಅಡಿಗೊಂದರಂತೆ ತೂತುಗಳನ್ನು ಮಾಡಿದ್ದಾರೆ. ಆ ತೂತುಗಳಿಗೆ ಒಂದಡಿ ಉದ್ದದ, ಅರ್ಧ ಇಂಚು ವ್ಯಾಸದ ಸ್ಪಂಜಿನ ಬತ್ತಿಗಳನ್ನು ತೂರಿಸಲಾಗಿದೆ. ಆ ಬತ್ತಿಗಳಿಂದ ನೀರು ನಿಧಾನವಾಗಿ ಮೇಲೇರಿ, ಗಿಡತೊಟ್ಟಿಗಳ ಮಿಶ್ರಣವನ್ನು ಯಾವಾಗಲೂ ತೇವಯುಕ್ತವಾಗಿ ಇರಿಸುತ್ತದೆ. ಮನೆಯ ಟೆರೇಸಿನಲ್ಲಿ ಐದಾರು ಕುಟುಂಬಗಳಿಗೆ ಇಡೀ ವರುಷಕ್ಕೆ ಬೇಕಾದಷ್ಟು ತರಕಾರಿ ಬೆಳೆಯಬಹುದು ಎಂಬುದಕ್ಕೆ ಇದಕ್ಕಿಂತ ಬೇರಾವುದೇ ಪುರಾವೆ ಅಗತ್ಯವಿಲ್ಲ. ಅಂದಹಾಗೆ, ರಾಜಕುಮಾರ್‌ ತಾವು ಬೆಳೆಸಿದ ತರಕಾರಿಗಳನ್ನೂ ಯಾವತ್ತೂ ಮಾರಾಟ ಮಾಡಿಲ್ಲ. ಅಕ್ಕಪಕ್ಕದವರಿಗೆ, ಆತ್ಮೀಯರಿಗೆ ಹಂಚಿರೆ. ತರಕಾರಿ ಕೃಷಿ ನನ್ನ ಹವ್ಯಾಸ ಎಂಬ ಅವರ ವಿನಯದ ಮಾತನ್ನು ಮೀರಿದ ಸತ್ಯ ಏನೆಂದರೆ, ಅದು ಅವರ ತಪಸ್ಸು!

ಮನೆಯಲ್ಲೇ ಕೀಟನಾಶಕ ತಯಾರಿ
ಪಾಲಿಹೌಸಿನಲ್ಲಿ ಕೀಟಗಳ ನಿಯಂತ್ರಣಕ್ಕೆ ಇನ್ನೊಂದು ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ. ತೆಂಗಿನಕಾಯಿಯ ನೀರನ್ನು ಒಂದು ಪ್ಲಾಸ್ಟಿಕ್‌ ಪಾತ್ರೆಯಲ್ಲಿ ಹಾಕಿಡುವುದು. ಐದಾರು ದಿನಗಳಲ್ಲಿ ಅದು ಬುರುಗು ಬಂದು, ಘಾಟು ವಾಸನೆ ಬರುತ್ತದೆ. ಅದನ್ನು ಒಂದು ಟೀ-ಚಮಚದಷ್ಟು ಮತ್ತು ಗೋಮೂತ್ರ ಒಂದು ಟೀ-ಚಮಚದಷ್ಟು ಒಂದು ಲೀಟರ್‌ ನೀರಿಗೆ ಹಾಕಿ. ಈ ಮಿಶ್ರಣವನ್ನು ಗಿಡಬಳ್ಳಿಗಳಿಗೆ ಸಿಂಪಡಿಸಿದರೆ ನೈಸರ್ಗಿಕ ಕೀಟನಾಶಕ ರೆಡಿ.

ಪರಾಗ ವ್ಯವಸ್ಥೆ
“ನಿಮ್ಮ ಪಾಲಿಹೌಸ್‌ ಎಲ್ಲ ದಿಕ್ಕಿನಲ್ಲಿಯೂ ಮುಚ್ಚಿಕೊಂಡಿದೆ. ತರಕಾರಿ ಹೂಗಳ ಪರಾಗಸ್ಪರ್ಶ ಹೇಗೆ ಆಗುತ್ತಿದೆ?’ ಎಂದು ಕೇಳಿದಾಗ ರಾಜಕುಮಾರ್‌ ತೋರಿಸಿದ್ದು ಮುಜಂಟಿ (ಕೊಂಡಿ ಇಲ್ಲದ) ಜೇನ್ನೊಣಗಳ ಕುಟುಂಬಗಳನ್ನು. ಬಿದಿರಿನ ಮತ್ತು ಮರದ ಜೇನುಪೆಟ್ಟಿಗೆಗಳಲ್ಲಿ ಸಾಕಿರುವ ಪುಟ್ಟ ಜೇನ್ನೊಣಗಳು ಅಲ್ಲಿ ಹಾರಾಡುತ್ತಿದ್ದವು

ಅಡ್ಡೂರು ಕೃಷ್ಣರಾವ್‌

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

“ಯಾರೂ ಅಲ್ಲಾ, ಯಡಿಯೂರಪ್ಪಾನೇ ವಿಲನ್”: ಸಚಿವ ಸೋಮಶೇಖರ್ ಹೇಳಿಕೆ

“ಯಾರೂ ಅಲ್ಲಾ, ಯಡಿಯೂರಪ್ಪಾನೇ ವಿಲನ್”: ಸಚಿವ ಸೋಮಶೇಖರ್ ಹೇಳಿಕೆ

ಪೇಶಾವರ: ಭಾರೀ ಸ್ಫೋಟ, ಏಳು ಮಕ್ಕಳ ಸಾವು, 70 ಮಂದಿಗೆ ಗಾಯ

ಪೇಶಾವರ: ಭಾರೀ ಸ್ಫೋಟ, ಏಳು ಮಕ್ಕಳ ಸಾವು, 70 ಮಂದಿಗೆ ಗಾಯ

ನಟಿ ಖುಷ್ಬೂ ಸೇರಿ ಹಲವು ಬಿಜೆಪಿ ನಾಯಕರನ್ನು ಬಂಧಿಸಿದ ತಮಿಳುನಾಡು ಪೊಲೀಸರು

ನಟಿ ಖುಷ್ಬೂ ಸೇರಿ ಹಲವು ಬಿಜೆಪಿ ನಾಯಕರನ್ನು ಬಂಧಿಸಿದ ತಮಿಳುನಾಡು ಪೊಲೀಸರು

ಮಾಜಿ ಸಚಿವ ಡಾ. ವೈ. ನಾಗಪ್ಪ ನಿಧನ

ಮಾಜಿ ಸಚಿವ ಡಾ. ವೈ. ನಾಗಪ್ಪ ನಿಧನ

ಅನುರಾಗ್ ಕಶ್ಯಪ್ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದ ನಟಿ ಪಾಯಲ್ ಘೋಷ್ ಅಠವಳೆ ಪಕ್ಷ ಸೇರ್ಪಡೆ

ಅನುರಾಗ್ ಕಶ್ಯಪ್ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದ ನಟಿ ಪಾಯಲ್ ಘೋಷ್ ಅಠವಳೆ ಪಕ್ಷ ಸೇರ್ಪಡೆ

ಕಳ್ಳದಾಸ್ತಾನು ವಿರುದ್ಧ ಕ್ರಮದ ಎಚ್ಚರಿಕೆ ಬೆನ್ನಲ್ಲೇ ಈರುಳ್ಳಿ ದರ ಇಳಿಕೆ

ಕಳ್ಳದಾಸ್ತಾನು ವಿರುದ್ಧ ಕ್ರಮದ ಎಚ್ಚರಿಕೆ ಬೆನ್ನಲ್ಲೇ ಈರುಳ್ಳಿ ದರ ಇಳಿಕೆ

ದುರ್ಗಾ ಮೂರ್ತಿ ವಿಸರ್ಜನೆ ವೇಳೆ ದೋಣಿ ಅವಘಡ: ನಾಲ್ವರು ಸಾವು

ದುರ್ಗಾ ಮೂರ್ತಿ ವಿಸರ್ಜನೆ ವೇಳೆ ದೋಣಿ ಅವಘಡ: ನಾಲ್ವರು ಸಾವು, ಹಲವರು ನಾಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

isiri-tdy-3

ಬಾಳು ಜೇನು! ಖರ್ಚು ಕಡಿಮೆ, ಲಾಭ ಜಾಸ್ತಿ…

isiri-tdy-2

ಭೂಮಿಗೆ ಸಿಗುತ್ತದೆ ಬಂಗಾರದ ಬೆಲೆ…

isiri-tdy-1

ಲೈಫ್ ಈಸ್‌ ಬುಟ್ಟಿ ಫ‌ುಲ್‌

isiri-tdy-5

ಕೀ ಬೋರ್ಡ್‌ ಮೇಲೆ ಸಿಟ್ಟಾಗಿ ಕುಟ್ಟಬೇಡಿ ಮಾರಾಯ್ರೇ.

ಆನ್‌ಲೈನ್ ‌ಕ್ಲಾಸಿಗೆ ಲ್ಯಾಪಿ

ಆನ್‌ಲೈನ್ ‌ಕ್ಲಾಸಿಗೆ ಲ್ಯಾಪಿ

MUST WATCH

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!

udayavani youtube

The Sharada statue embodied in the artist’s finesse | Navaratri Specialಹೊಸ ಸೇರ್ಪಡೆ

ಆರ್‌.ಆರ್‌. ನಗರದಲ್ಲಿ ಡಿ.ಕೆ.ಸುರೇಶ್‌ ಕಾರ್ಯತಂತ್ರ

ಆರ್‌.ಆರ್‌. ನಗರದಲ್ಲಿ ಡಿ.ಕೆ.ಸುರೇಶ್‌ ಕಾರ್ಯತಂತ್ರ

ಹುಬ್ಬಳ್ಳಿ: ವಿಭವ ಇಂಡಸ್ಟ್ರೀಸ್‌ನಲ್ಲಿ ಅಗ್ನಿಅನಾಹುತ; ಕೋಟ್ಯಂತರ ರೂ. ಮೌಲ್ಯದ ವಸ್ತು ಹಾನಿ

ಹುಬ್ಬಳ್ಳಿ: ವಿಭವ ಇಂಡಸ್ಟ್ರೀಸ್‌ನಲ್ಲಿ ಅಗ್ನಿಅನಾಹುತ; ಕೋಟ್ಯಂತರ ರೂ. ಮೌಲ್ಯದ ವಸ್ತು ಹಾನಿ

“ಯಾರೂ ಅಲ್ಲಾ, ಯಡಿಯೂರಪ್ಪಾನೇ ವಿಲನ್”: ಸಚಿವ ಸೋಮಶೇಖರ್ ಹೇಳಿಕೆ

“ಯಾರೂ ಅಲ್ಲಾ, ಯಡಿಯೂರಪ್ಪಾನೇ ವಿಲನ್”: ಸಚಿವ ಸೋಮಶೇಖರ್ ಹೇಳಿಕೆ

ಕೋವಿಡ್‌ ಹಿನ್ನೆಲೆ: ಧಾರವಾಡ ಬಂಡೆಮ್ಮ ದೇವಸ್ಥಾನದಲ್ಲಿ ಕೃತಕ ಆನೆ ಬಳಸಿ ಜಂಬೂ ಸವಾರಿ!

ಕೋವಿಡ್‌ ಹಿನ್ನೆಲೆ: ಧಾರವಾಡ ಬಂಡೆಮ್ಮ ದೇವಸ್ಥಾನದಲ್ಲಿ ಕೃತಕ ಆನೆ ಬಳಸಿ ಜಂಬೂ ಸವಾರಿ!

ಪೇಶಾವರ: ಭಾರೀ ಸ್ಫೋಟ, ಏಳು ಮಕ್ಕಳ ಸಾವು, 70 ಮಂದಿಗೆ ಗಾಯ

ಪೇಶಾವರ: ಭಾರೀ ಸ್ಫೋಟ, ಏಳು ಮಕ್ಕಳ ಸಾವು, 70 ಮಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.