ಲಾಭದ ಬದನೆ


Team Udayavani, Mar 25, 2019, 6:00 AM IST

21-BNT-1A

ಬರ, ನೀರಿಲ್ಲ ಅಂತೆಲ್ಲ ನೆಪವೊಡ್ಡಿ ನಾವಲಗಿ ರೈತ ಮಲ್ಲಿಕಾರ್ಜುನ ಸುಮ್ಮನೆ ಕೂರಲಿಲ್ಲ. ಬದಲಿಗೆ ಬದನೆ ನೆಟ್ಟು ಕೈ ತುಂಬ ಸಂಪಾದನೆ ಮಾಡಿದರು. ವರ್ಷದಲ್ಲಿ 6 ತಿಂಗಳ ಕಾಲ ಬದನೆ ಕೈ ಹಿಡಿದರೆ, ಉಳಿದ ಸಮಯದಲ್ಲಿ ಇತರೆ ತರಕಾರಿ ಬೆಳೆಗಳು ಮಲ್ಲಿಯವರ ಬದುಕನ್ನು ಹಸನು ಮಾಡುತ್ತಿದೆ.

ಬನಹಟ್ಟಿಯ ನಾವಲಗಿ ಗ್ರಾಮದ ಮಲ್ಲಿಕಾರ್ಜುನ ಹನುಮಂತ ಜನವಾಡರನ್ನು ನೋಡಿದರೆ ಖುಷಿಯಾಗುತ್ತದೆ. ಕಾರಣ ಇಷ್ಟೇ, ಅವರಿಗಿರುವ ಕೃಷಿ ಪ್ರೀತಿ. ಕಲ್ಲುಗುಡ್ಡುಗಳನ್ನು ಸಮತಟ್ಟು ಮಾಡಿ, ಕೃಷಿ ಜಮೀನಿಗೆ ಬೇಕಾದಂತೆ ಹದ ಮಾಡಿಕೊಂಡು ಇಲ್ಲೇ ಏನಾದರೂ ಬೆಳೆಯಬಹುದಲ್ಲಾ? ಅಂತ ಯೋಚಿಸಿದಾಗ ಅವರಿಗೆ ಹೊಳೆದದ್ದು ಬದನೆಕಾಯಿ ಬೇಸಾಯ.

ಮಲ್ಲಿಕಾರ್ಜುನ ಓದಿದ್ದು ಎಸ್‌.ಎಸ್‌.ಎಲ್‌.ಸಿ. ಆದರೆ ಸಾಧನೆ ಮಾತ್ರ ಮುಗಿಲೆತ್ತರದ್ದು. ಕೃಷಿಗೆ ಇಳಿದಾಗ ಅವರಿಗೆ ಸಾಂಗ್ಲಿಯ ಚಂದ್ರಶೇಖರ ಗಾಯಕವಾಡರ ನೆರವು ಸಿಕ್ಕಿತು. ಕೇವಲ 1.15 ಗುಂಟೆ ಜಾಗದಲ್ಲಿ ಗ್ಯಾಲನ್‌ ತಳಿಯ ಬದನೆಕಾಯಿಗಳನ್ನು ಬೆಳೆದು ಆರು ತಿಂಗಳಲ್ಲಿ ಹೂಡಿದ ಹಣಕ್ಕಿಂತ ಎರಡು- ಮೂರು ಪಟ್ಟು ಲಾಭ ಮಾಡಿದಾಗ ಸುತ್ತಮುತ್ತಲ ರೈತರು ನಿಬ್ಬೆರಗಾಗಿ ಇವರ ಜಮೀನಿನ ಕಡೆಗೆ ಮುಖ ಮಾಡಲು ಶುರು ಮಾಡಿದರು. ಆರಂಭದಲ್ಲಿ ಬದನೆಕಾಯಿ ಕೆ.ಜಿ.ಗೆ 30ರೂ.ನಿಂದ 35ರೂ. ಬೆಲೆ ಇತ್ತು. ಈಗ ರೂ.20 ರಿಂದ 25ರೂ ಬೆಲೆ ದೊರಕುತ್ತಿದೆ. ಒಂದು ಪಕ್ಷ ಬೆಲೆ ಕುಸಿದರೂ ಯಾವುದೇ ರೀತಿಯ ಹಾನಿ ಆಗುವುದಿಲ್ಲ ಎನ್ನುತ್ತಾರೆ ಮಲ್ಲಿಕಾರ್ಜುನ. ಮೊದಲ ಬೆಳೆಯ ಖರ್ಚು ಅಂದಾಜು ಮೂರು ಲಕ್ಷ ಆಗಿದೆ. ಆದರೆ, ಆರು ತಿಂಗಳಲ್ಲಿ ಎಲ್ಲ ರೀತಿಯ ಖರ್ಚನ್ನು ತೆಗೆದು 4ರಿಂದ 5 ಲಕ್ಷ ಲಾಭ ಮಾಡಿದ್ದಾರೆ ಮಲ್ಲಿಕಾರ್ಜುನ.

ಬೆಳೆದದ್ದು ಹೇಗೆ?
ಮೊದಲು ಜಮೀನಿಗೆ ತಿಪ್ಪೆಗೊಬ್ಬರ, ಸರಕಾರಿ ಗೊಬ್ಬರ, ಬೇವಿನ ಹಿಂಡಿ 1.5 ಕ್ವಿಂಟಾಲ್‌, ಡಿಎಪಿ 1 ಬ್ಯಾಗ್‌, ಒಪಿ 1 ಬ್ಯಾಗ್‌, ಜಿಂಕ್‌ 10 ಕೆಜಿ, ಪ್ಯಾರಾಸ್‌ 10 ಕೆಜಿ, ಬೋರಾನ್‌ 2.5ಕೆಜಿ ಎಲ್ಲವನ್ನೂ ಹಾಕಿ ಬೆಡ್‌ ಮಾಡಿಕೊಂಡರು. ಮೂರು ಅಡಿ ಹೆಜ್ಜೆ ಅಂತರದಲ್ಲಿ ಒಂದು ಸಸಿಯಂತೆ 40,000 ಸಸಿಗಳನ್ನು ನಾಟಿ ಮಾಡಿದ್ದಾರೆ. ಹನಿ ನೀರಾವರಿ ಮೂಲಕ ನೀರು ಪೂರೈಸಲಾಗಿದ್ದು, ಇದಕ್ಕೆ ಬರುವ ರೋಗಗಳಿಗೆ ತಕ್ಕಂತೆ ಕೆಲವು ಸಿಂಪರಣೆ ಮಾಡಲಾಗಿದೆ. ಹುಳಗಳಿಂದ ರಕ್ಷಿಸಲು ಸೋಲಾರ್‌ ಲ್ಯಾಂಪ್‌ಗ್ಳನ್ನು ಅಳವಡಿಸಿದ್ದಾರೆ. ಬದನೆಕಾಯಿ, 6 ತಿಂಗಳ ಬೆಳೆಯಾಗಿದ್ದು, ನಾಟಿ ಮಾಡಿದ 60 ದಿನಗಳಲ್ಲಿ ಫ‌ಸಲು ಬಿಡಲಾರಂಭಿಸುತ್ತದೆ. ನಂತರದ ಎರಡೂವರೆ ತಿಂಗಳುಗಳ ಕಾಲ ಸತತವಾಗಿ ಬದನೆಕಾಯಿಗಳು ಬಿಡುತ್ತವೆ. ಒಂದು ಗಿಡ ಅಂದಾಜು 15 ರಿಂದ 17 ಕೆ.ಜಿಯವರೆಗೆ ಬದನೆ ನೀಡುತ್ತದೆ ಎನ್ನುತ್ತಾರೆ ಮಲ್ಲಿಕಾರ್ಜುನ.

ಮಲ್ಲಿಕಾರ್ಜುನ ತಾವು ಬೆಳೆದ ಬದನೆಯನ್ನು ಗೋವಾ, ಮುಂಬಯಿ ಮತ್ತು ಬೆಳಗಾವಿಯ ಮಾರುಕಟ್ಟೆಗಳಿಗೆ ಕಳುಹಿಸುತ್ತಾರೆ. ಯಾವುದೇ ಏಜೆಂಟರುಗಳ ಮೊರೆ ಹೋಗದೆ ತಮ್ಮದೇ ವಾಹನಗಳ ಮೂಲಕ ನೇರವಾಗಿ ಮಾರುಕಟ್ಟೆಗೆ ಹಾಕುವುದರಿಂದ ಖರ್ಚು ಕಡಿಮೆ.

ಆರು ತಿಂಗಳ ನಂತರ ಬದನೆ ಗಿಡಗಳನ್ನು ತೆಗೆದು ಅದೇ ಸ್ಥಳದಲ್ಲಿ ಸೌತೆ ಮತ್ತು ಹಿರೇಕಾಯಿಯನ್ನು ನಾಟಿ ಮಾಡುತ್ತಾರೆ. ಇದರಿಂದ ಆರಂಭದ ಹೂಡಿಕೆ ಮತ್ತಷ್ಟು ಕಡಿಮೆಯಾಗುತ್ತದೆ. ಜನವಾಡರ ತೋಟದಲ್ಲಿ 25ಕ್ಕಿಂತ ಹೆಚ್ಚು ಮಹಿಳಾ ಕೂಲಿ ಕಾರ್ಮಿಕರು ವರ್ಷ ಪೂರ್ತಿ ಕೆಲಸ ಮಾಡುತ್ತಾರೆ.

– ಕಿರಣ ಶ್ರೀಶೈಲ ಆಳಗಿ

ಟಾಪ್ ನ್ಯೂಸ್

ವಿ.ಶ್ರೀನಿವಾಸ್ ಪ್ರಸಾದ್

ಸಿದ್ಧರಾಮಯ್ಯರನ್ನು ಆಫ್ಘಾನಿಸ್ತಾನಕ್ಕೆ ಕಳುಹಿಸಿ: ಶ್ರೀನಿವಾಸ್ ಪ್ರಸಾದ್

ಯುವಕರು ರಾಷ್ಟ್ರದ, ಸಮಾಜದ ಋಣ ತೀರಿಸುವ ಕೆಲಸ ಮಾಡಬೇಕು: ದತ್ತಾತ್ರೇಯ ಹೊಸಬಾಳೆ

ಯುವಕರು ರಾಷ್ಟ್ರದ, ಸಮಾಜದ ಋಣ ತೀರಿಸುವ ಕೆಲಸ ಮಾಡಬೇಕು: ದತ್ತಾತ್ರೇಯ ಹೊಸಬಾಳೆ

ಕೋವಿಡ್ -19- ಭಾರತದಲ್ಲಿ ಎರಡು ವರ್ಷಗಳಷ್ಟು ಜೀವಿತಾವಧಿ ಕಡಿಮೆ ಮಾಡಿದೆಯೇ..-

ಕೋವಿಡ್ -19: ಭಾರತದಲ್ಲಿ ಎರಡು ವರ್ಷಗಳಷ್ಟು ಜೀವಿತಾವಧಿ ಕಡಿಮೆ ಮಾಡಿದೆಯೇ..?

ಕಿತ್ತೂರು ಉತ್ಸವ ಮಾಡುವ ಭಾಗ್ಯ ದೊರೆತಿರುವುದು ಪುಣ್ಯದ ಕಾರ್ಯ: ಸಿಎಂ ಬೊಮ್ಮಾಯಿ

ಕಿತ್ತೂರು ಉತ್ಸವ ಮಾಡುವ ಭಾಗ್ಯ ದೊರೆತಿರುವುದು ಪುಣ್ಯದ ಕಾರ್ಯ: ಸಿಎಂ ಬೊಮ್ಮಾಯಿ

ಮುದ್ದೇಬಿಹಾಳ: ಮಗಳ ಜನ್ಮದಿನ ಸ್ಮರಣೆಗೆ ಬೀದಿ ದೀಪ ಅಳವಡಿಸಿದ ತಂದೆ

ಮುದ್ದೇಬಿಹಾಳ: ಮಗಳ ಜನ್ಮದಿನ ಸ್ಮರಣೆಗೆ ಬೀದಿ ದೀಪ ಅಳವಡಿಸಿದ ತಂದೆ

ಯಾವುದೇ ಪಕ್ಷದ ಬಗ್ಗೆ ಸಾಫ್ಟ್ ಕಾರ್ನರ್ ಹೊಂದಿಲ್ಲ: ಎಚ್ ಡಿ ಕುಮಾರಸ್ವಾಮಿ

ಯಾವುದೇ ಪಕ್ಷದ ಬಗ್ಗೆ ಸಾಫ್ಟ್ ಕಾರ್ನರ್ ಹೊಂದಿಲ್ಲ: ಎಚ್ ಡಿ ಕುಮಾರಸ್ವಾಮಿ

ಹೊಸಪೇಟೆ: ಸೀರೆ ಖರೀದಿ ನೆಪದಲ್ಲಿ ಮನೆಗೆ ನುಗ್ಗಿ ವೃದ್ಧೆ ಕೊಲೆಗೈದು ಪರಾರಿಯಾದ ದರೋಡೆಕೋರರು.!

ಹೊಸಪೇಟೆ: ಸೀರೆ ಖರೀದಿ ನೆಪದಲ್ಲಿ ಮನೆಗೆ ನುಗ್ಗಿ ವೃದ್ಧೆ ಕೊಲೆಗೈದು ಪರಾರಿಯಾದ ದರೋಡೆಕೋರರು.!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಸಿಡಿಲಿನ ಹೊಡೆತಕ್ಕೆ ಕುಸಿದ ಮನೆಯ ಗೋಡೆ : ತಪ್ಪಿದ ಭಾರೀ ಅನಾಹುತ

udayavani youtube

ಆಟೋ ಚಾಲಕನ ನತದೃಷ್ಟ ಕಥೆಯಿದು

udayavani youtube

ನಮ್ಮ ದೇಶ ಕರ್ತವ್ಯ ಪಾಲಿಸಿದೆ : ಪ್ರಧಾನಿ ನರೇಂದ್ರ ಮೋದಿ

udayavani youtube

ಶೆಟ್ಟಿ ನೀನು ಹುಡುಗಿ ತರ ಮಾತಾಡ್ತೀಯ

udayavani youtube

POLYHOUSE ನಲ್ಲಿ ಸೌತೆಕಾಯಿ ತರಕಾರಿ ಕೃಷಿ; ಇಲ್ಲಿದೆ ಸಂಪೂರ್ಣ ಮಾಹಿತಿ…

ಹೊಸ ಸೇರ್ಪಡೆ

ನಕಲಿ food inspector

ಫುಡ್‌ ಇನ್ಸ್‌ಪೆಕ್ಷರ್‌ ಎಂದು ನಂಬಿಸಿ ಮೋಸ

ವಿ.ಶ್ರೀನಿವಾಸ್ ಪ್ರಸಾದ್

ಸಿದ್ಧರಾಮಯ್ಯರನ್ನು ಆಫ್ಘಾನಿಸ್ತಾನಕ್ಕೆ ಕಳುಹಿಸಿ: ಶ್ರೀನಿವಾಸ್ ಪ್ರಸಾದ್

21police

ಡಿವೈಎಸ್ಪಿ ದೇವರಾಜ ಅಧಿಕಾರ ಸ್ವಿಕಾರ

20bus

ಬಸ್‌ ಸೌಲಭ್ಯ ಕಲ್ಪಿಸಲು ಕಕ ಸಾರಿಗೆ ನಿಗಮಕ್ಕೆ ಮನವಿ

ಯುವಕರು ರಾಷ್ಟ್ರದ, ಸಮಾಜದ ಋಣ ತೀರಿಸುವ ಕೆಲಸ ಮಾಡಬೇಕು: ದತ್ತಾತ್ರೇಯ ಹೊಸಬಾಳೆ

ಯುವಕರು ರಾಷ್ಟ್ರದ, ಸಮಾಜದ ಋಣ ತೀರಿಸುವ ಕೆಲಸ ಮಾಡಬೇಕು: ದತ್ತಾತ್ರೇಯ ಹೊಸಬಾಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.