Udayavni Special

ಮೂಢನಂಬಿಕೆ ನಿಷೇಧ;ಜನಕ್ಕಲ್ಲದೇ,ಇವರಿಗೂ ಬೇಕು 


Team Udayavani, Aug 6, 2018, 6:00 AM IST

mavemsa-1.jpg

2000ದ ಮೊದಲ ತೇದಿಯಿಂದ ಆರಂಭವಾದ ಪ್ರಳಯ ಭಯ ಪ್ರಸಾರ ಈಗಲೂ ನಿಂತಿಲ್ಲ. ಬಾಹ್ಯಾಕಾಶದ ಪ್ರತಿ ವಿಶಿಷ್ಟ ವಿದ್ಯಮಾನಗಳನ್ನು ಪ್ರಳಯ ಸೂಚಕವೆಂಬಂತೆಯೇ ಪ್ರಸ್ತಾಪಿಸಲಾಗುತ್ತಿದೆ. ಅದಕ್ಕೆ ನಕ್ಷತ್ರ, ರಾಶಿಗಳನ್ನು ಅಂಟಿಸಿ ಜನರಲ್ಲಿ ಇನ್ನಿಲ್ಲದ ಭಯವನ್ನು ಉಂಟುಮಾಡುತ್ತಿವೆ. ಅದೆಷ್ಟು ಪ್ರಳಯದ ದಿನಗಳನ್ನು ಗುರುತಿಸಲಾಗಿತ್ತು ಎಂಬುದನ್ನು ಎಣಿಸಿ ಹೇಳಲು ಕೈಬೆರಳುಗಳು ಸಾಲವು.

ಮೊನ್ನೆ ಮೊನ್ನೆ ಚಂದ್ರನಿಗೆ ಗ್ರಹಣ ಹಿಡಿದ ಪ್ರಸಂಗದಲ್ಲಿ ವಸ್ತುಶಃ ಗ್ರಹಣ ಹಿಡಿದಿದ್ದು ಯಾರಿಗೆ ಎಂಬ ಸಂಶಯ ನಿರ್ಮಾಣವಾಗಿತ್ತು. ಗ್ರಹಣ ಸಂದರ್ಭದಲ್ಲಿ ದೇವರಿಗೆ ಪೂಜೆ ಸಲ್ಲಿಸುವುದು ವೈಯಕ್ತಿಕ ಭಕ್ತಿ ಎನ್ನಬಹುದು. ಆದರೆ ಈಗಿನ ವೈಜಾnನಿಕ ಯುಗದಲ್ಲಿ ಗ್ರಹಣಕ್ಕೂ ಐದಾರು ಘಂಟೆಗಳ ಹಿಂದೆಯೇ ಆಹಾರ ಸೇವಿಸುವಂತಿಲ್ಲ ಎಂಬುದು, ಅನ್ನಾಹಾರದ ಬದಲು ಫ‌ಲಾಹಾರ ಮಾತ್ರ ಮಾಡಬಹುದು ಎಂಬುದು, ನಿಮ್ಮ ರಾಶಿ ನಕ್ಷತ್ರಕ್ಕೆ ಗ್ರಹಣ ಹಿಡಿದಿದೆ ಎಂದು ಹೋಮ, ದಾನಗಳನ್ನು ಮಾಡಿಸುವುದು ಓತಪೋ› ತವಾಗಿ ನಡೆದಿರುವುದನ್ನು ನೋಡಿದ ಮೇಲೆ ಈ ಹಿಂದಿನ ಸರ್ಕಾರ ತರಲು ಉದ್ದೇಶಿಸಿದ್ದ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ, ಸ್ವಲ್ಪ ಭಿನ್ನ ಸ್ವರೂಪದಲ್ಲಿ ಜಾರಿಗೆ ಬರುವ ಅಗತ್ಯವಿದೆ ಎನಿಸುವುದು ಸುಳ್ಳಲ್ಲ.

ಧರ್ಮದ ವಿಚಾರವೇ ಸೂಕ್ಷ್ಮ
ಧಾರ್ಮಿಕ ನಂಬಿಕೆಗಳು ಆಯಾ ಜಾತಿ, ಧರ್ಮದವರದ್ದು. ಆದರೆ, ಇದು ಈ ನೆಲದ ಕಾನೂನುಗಳನ್ನು ಉಲ್ಲಂ ಸುವಂತಿರಬಾರದು. ಜಾತಿಯೊಂದರಲ್ಲಿ ಕುರಿ ಬಲಿ ಕೊಡುವ ಆಚರಣೆ ಇದ್ದರೂ ಈಗಿನ ಕಾನೂನುಗಳ ಅಡಿಯಲ್ಲಿ ಕುರಿ, ಕೋಣಗಳನ್ನು ಬಲಿ ಹಾಕುವುದು ನ್ಯಾಯಬದ್ಧವಲ್ಲ ಎಂತಾದರೆ ಅದನ್ನು ನಿಷೇಧಿಸಲೇಬೇಕು. ಆವತ್ತು ಹಿಂದಿನ ಸರ್ಕಾರದ ಮಂತ್ರಿಮಂಡಲ ಒಪ್ಪಿಗೆ ನೀಡಿದ ಕರ್ನಾಟಕ ಪ್ರಿವೆಂಶನ್‌ ಎಂಡ್‌ ಎರಾಡಿಕೇಶನ್‌ ಆಫ್ ಇನ್‌ಹ್ಯೂಮನ್‌ ಎಲ್‌ ಪ್ರಾಕ್ಟೀಸಸ್‌ ಅಂಡ್‌ ಬ್ಲಾಕ್‌ ಮ್ಯಾಜಿಕ್‌ ಬಿಲ್‌, 2017 ಅಥವಾ ಸರಳವಾಗಿ ಹೇಳುವುದಾದರೆ, ಮೂಢನಂಬಿಕೆ ವಿರೋಧಿ ಕಾಯ್ದೆಯ ಪ್ರಕಾರ ಕೂದಲು ತೆಗೆಸುವುದು, ವಾಸ್ತು ಹಾಗೂ ಆಸ್ಟ್ರಾಲಜಿಯನ್ನು ಇದರ ವ್ಯಾಪ್ತಿಗೆ ಸೇರಿಸಿಲ್ಲ. ಅಷ್ಟೇಕೆ, ದೇಗುಲಗಳಲ್ಲಿನ ಪ್ರದಕ್ಷಿಣೆ, ಯಾತ್ರೆ, ಹರಿಕಥೆ, ಕೀರ್ತನೆ, ಪ್ರವಚನ, ಭಜನೆ, ಧಾರ್ಮಿಕ ಪ್ರಚಾರಗಳು ಕೂಡ ಮೂಢನಂಬಿಕೆ ಆಗುವುದಿಲ್ಲ. ನಿರ್ದಿಷ್ಟ ಸ್ಥಳಕ್ಕೆ ಹೋಗಿ ಮೂರು ಸುತ್ತು ಸುತ್ತಿದರೆ ಮಕ್ಕಳಾಗುತ್ತವೆ ಎಂಬಂತಹ ದೈಹಿಕವಾಗಿ ಗಾಯ ಮಾಡದ ಧಾರ್ಮಿಕ ಅದ್ಭುತಗಳನ್ನು ಕೂಡ ಕಾನೂನು ಬಾಹಿರಗೊಳಿಸಿರಲಾಗಿರಲಿಲ್ಲ.

ಮನೆ, ದೇಗುಲ, ಚರ್ಚ್‌, ಮಸೀದಿಗಳಲ್ಲಿ ಪ್ರಾರ್ಥನೆ ಮಾಡಬಹುದು. ಎಲ್ಲಾ ಧಾರ್ಮಿಕ ಆಚರಣೆಗಳಿಗೂ ಸೈ. ಧಾರ್ಮಿಕ ಆಚರಣೆಗಳಾದ ಮೂಗುತಿಗಾಗಿ ಮೂಗು, ಕಿವಿ ಚುಚ್ಚಿಸಿಕೊಳ್ಳುವುದು ನಿಷಿದ್ಧವಲ್ಲ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಹಾಗೂ ಆಸ್ಟ್ರಾಲಜಿಯ ಸಲಹೆಗಳನ್ನು ಪಾಲಿಸುವುದಕ್ಕೆ ಕೂಡ ಕಾಯ್ದೆ ನಿರ್ಬಂಧ ಹೇರಿರಲಿಲ್ಲ. ಎಲ್ಲ ಧಾರ್ಮಿಕ ಹಬ್ಟಾಚರಣೆಗಳೂ ಕಾಯ್ದೆಯಿಂದ ಮುಕ್ತ ಮುಕ್ತ!

ಮಡೆಸ್ನಾನ, ಬೆಂಕಿ ಹಾಯುವುದು, ಕೆನ್ನೆಯಿಂದ ಕೆನ್ನೆಗೆ ಕಬ್ಬಿಣದ ಸರಳನ್ನು ತೂರಿಸುವುದು, ಮಾಟಮಂತ್ರ, ಗಂಡಾಂತರಗಳನ್ನು ಹೇಳಿ ವೈದ್ಯಕೀಯ ಸೇವೆ ಪಡೆಯುವುದರಿಂದ ತಡೆಯುವಂತದ್ದು, ಭಾನಾಮತಿಯ ಹೆಸರಿನಲ್ಲಿ ಮನೆಯ ಮೇಲೆ ಕಲ್ಲು ತೂರುವುದು, ಪ್ರಾಣಿ ಬಲಿ, ಭೂತ ಬಿಡಿಸುವ ದೌರ್ಜನ್ಯ, ಮಕ್ಕಳನ್ನು ಧಾರ್ಮಿಕ ವಿಧಿ ವಿಧಾನಗಳ ಹೆಸರಿನಲ್ಲಿ ದೈಹಿಕ ಶೋಷಣೆ ಮಾಡುವುದು ಸಲ್ಲದು ಎಂದು ಹೇಳಿರುವ ಕಾಯ್ದೆ, ಇಂಥ ಹಲವು ಸಂದರ್ಭಗಳನ್ನು ಸ್ಪಷ್ಟವಾಗಿ ಉಲ್ಲೇಖೀಸಿದೆ.

ಕಾಯ್ದೆ ಕಾರ್ಯಾಚರಣೆಯಾದರೆ ಶಕ್ತಿ!
ಈ ರೀತಿ ವಿವರವಾಗಿ ಕಾಯ್ದೆ ನಿರ್ಬಂಧದ, ಕಾಯ್ದೆಯ ವ್ಯಾಪ್ತಿಗೆ ಬಾರದ ವಿಷಯಗಳನ್ನು ಗುರ್ತಿಸಲು ಹೊರಡುವುದರಿಂದಲೇ ಸಮಸ್ಯೆ ಗಾಢವಾಗುವುದು. ರಂಗೋಲಿ ಕೆಳಗೆ ನುಸುಳಲು ಕಾಯ್ದೆಯ ಉಲ್ಲೇಖಗಳನ್ನೇ ಬಳಸುತ್ತಾರೆ. ಕಾಯ್ದೆ ಹೆಚ್ಚು ಸರಳವಾಗಿದ್ದರೆ ವಿವಿಧ ಮೂಢನಂಬಿಕೆಗಳ ಮೂಲಕ ಜನರನ್ನು ವಂಚಿಸುವವರಿಗೆ ಕಾನೂನಿನ ಉರುಳು ಬಿಗಿಯಬಹುದಾಗಿತ್ತು. ಇತ್ತೀಚಿನ ದಿನಗಳಲ್ಲಿ ಜನರನ್ನು ಪ್ರಾಜ್ಞರನ್ನಾಗಿಸಬೇಕಾದ ಮಾಧ್ಯಮಗಳು, ಪ್ರಮುಖವಾಗಿ ದೃಶ್ಯ ಮಾಧ್ಯಮಗಳು ಜನರನ್ನು 17ನೇ ಶತಮಾನಕ್ಕೆ ಕೊಂಡೊಯ್ಯುತ್ತಿವೆ. ಸಮತೋಲನ ಕಾಪಾಡಿಕೊಳ್ಳುವ ಪ್ರತಿಪಾದನೆಯ ಆಧಾರದಲ್ಲಿ ಅವು ವಿಜಾnನ ಕಾರ್ಯಕ್ರಮಗಳನ್ನು ಪ್ರಸಾರ ಮಾಡಬಲ್ಲವು, ಅದೇ ವೇಳೆ ವಿಜಾnನ ಕಾರ್ಯಕ್ರಮದ ಪಕ್ಕದ ಟೈಮ್‌ ಸ್ಲಾಟ್‌ನಲ್ಲಿ ಗ್ರಹಣದಿಂದ ಕಾದಿದೆ ಗ್ರಹಚಾರ ಎಂದು ಪುಂಖಾನುಪುಂಖವಾಗಿ ಸಾರಬಲ್ಲವು.

ಬಹುಶಃ 2000ದ ಮೊದಲ ತೇದಿಯಿಂದ ಆರಂಭವಾದ ಪ್ರಳಯ ಭಯ ಪ್ರಸಾರ ಈಗಲೂ ನಿಂತಿಲ್ಲ. ಬಾಹ್ಯಾಕಾಶದ ಪ್ರತಿ ವಿಶಿಷ್ಟ ವಿದ್ಯಮಾನಗಳನ್ನು ಪ್ರಳಯ ಸೂಚಕವೆಂಬಂತೆಯೇ ಪ್ರಸ್ತಾಪಿಸಲಾಗುತ್ತಿದೆ. ಅದಕ್ಕೆ ನಕ್ಷತ್ರ, ರಾಶಿಗಳನ್ನು ಅಂಟಿಸಿ ಜನರಲ್ಲಿ ಇನ್ನಿಲ್ಲದ ಭಯವನ್ನು ಉಂಟುಮಾಡುತ್ತಿವೆ. ಅದೆಷ್ಟು ಪ್ರಳಯದ ದಿನಗಳನ್ನು ಗುರುತಿಸಲಾಗಿತ್ತು ಎಂಬುದನ್ನು ಎಣಿಸಿ ಹೇಳಲು ಕೈಬೆರಳುಗಳು ಸಾಲವು. ಒಂದು ಸುದ್ದಿ ವಾಹಿನಿ, ನಾಳೆ ಪ್ರಳಯ ಎಂದು ಕಾರ್ಯಕ್ರಮ ಪ್ರಸಾರ ಮಾಡಿದ ಮೇಲೆ ನಾಡಿದ್ದಿನಿ ಕಾರ್ಯಕ್ರಮದ ಪೋಮೋ ತೋರಿಸಬಾರದು! 

ನಿಜಕ್ಕೂ ಇವನ್ನು ನಿಲ್ಲಿಸಲಾದರೂ ಮೂಢನಂಬಿಕೆ ವಿರೋಧಿ ಕಾಯ್ದೆ ಬೇಕಾಗಿದೆ. ಗ್ರಹಣ ಪ್ರಭಾವ, ಯುಗಾದಿ ಫ‌ಲ ಹೆಸರುಗಳನ್ನು ಪತ್ರಿಕೆಗಳಲ್ಲಿ ಬರುವ ಜ್ಯೋತಿಷ್ಯ ಸಲಹೆಗಳಿಗೂ ಪ್ರತಿಬಂಧ ಹಾಕಬೇಕಾಗಿದೆ. ನಂಬಿದವರು ಹಳ್ಳಕ್ಕೆ ಬಿದ್ದರೂ ಅವರಿಗದು ಆಪ್ಯಾಯಮಾನ, ಅದನ್ನು ಪ್ರತಿಬಂಧಿಸಲಾಗದು. ಆದರೆ ಈ ರೀತಿಯ ಬಹಿರಂಗ ಪ್ರತಿಕ್ರಿಯೆ, ಪ್ರತಿಪಾದನೆಗಳು ಹೆಚ್ಚು ಜನರನ್ನು ಪರಿಹಾರದ ಆಮಿಷಕ್ಕೆ ಒಡ್ಡಿದಂತಾಗುತ್ತದೆ. ಅದಕ್ಕೊಂದು ಕೊನೆ ಹಾಡಲೇಬೇಕು.

ಫ‌ಲಿತಾಂಶ ಆಧಾರಿತವಾದ ಜ್ಯೋತಿಷ್ಯ, ಭವಿಷ್ಯ, ವಾಸ್ತುಶಾಸ್ತ್ರಗಳನ್ನು ಸ್ವಾಗತಿಸಬಹುದು. ಒಬ್ಬ ವ್ಯಕ್ತಿಯ ನಿರ್ದಿಷ್ಟ ಸಮಸ್ಯೆಯ ಪರಿಹಾರಕ್ಕೆ ಒಂದು ಹೋಮ ಮಾಡಿಸಿದ್ದಾನೆ ಎಂದುಕೊಳ್ಳೋಣ. ಆ ಹೋಮ ಸಂಪನ್ನವಾದ ನಿರ್ದಿಷ್ಟ ದಿನಗಳಲ್ಲಿ ಆ ಸಮಸ್ಯೆಯಿಂದ ಆತ ಹೊರಬಂದಿರಬೇಕು. ಇಲ್ಲದಿದ್ದರೆ ಹೋಮ ಮಾಡಿಸಲು ಸಲಹೆ ನೀಡಿ ಹಣ ವೆಚ್ಚಕ್ಕೆ ಕಾರಣನಾದ ವ್ಯಕ್ತಿಯ ವಿರುದ್ಧ ಪ್ರಕರಣ ಹೂಡಬಹುದೇ?

ವಾಸ್ತು ಸರಿಹೋಗಲಿಲ್ಲ!
ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯಲ್ಲಿ ಭದ್ರಾವತಿಯ ಯಾಲಕ್ಕಿ ಗೌಡ ಕೆ. ಎಂಬಾತ ಒಂದು ದೂರನ್ನು ಸರಳವಾಸ್ತು ಖಾಸಗಿ ವಾಹಿನಿಯ ಡಾ. ಚಂದ್ರಶೇಖರ್‌ ಗುರೂಜಿ ಅವರ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ದೂರು ದಾಖಲಿಸುತ್ತಾರೆ. ಅವರ ದೂರಿನ ಪ್ರಕಾರ, ಸದರಿ ಟಿವಿ ಚಾನೆಲ್‌ನ ಸರಳವಾಸ್ತು ಕಾರ್ಯಕ್ರಮ ವೀಕ್ಷಿಸುತ್ತಾರೆ. ತಮ್ಮ ಸಂಸಾರದ ಸಮಸ್ಯೆಯನ್ನು ವಿವರಿಸಿ ಗುರೂಜಿಯವರನ್ನು ಸಂಪರ್ಕಿಸುತ್ತಾರೆ. ಇದರಿಂದ ಸರಳವಾಸ್ತು ಸಂಸ್ಥೆಯ ವಾಸ್ತುತಜ್ಞರು 2016ರ ಸೆ. 22ರಂದು ಮನೆಗೆ ಬಂದು ನಕಾಶೆ ಸಿದ್ಧಪಡಿಸಿ ಹಿರಿಯ ತಜ್ಞರಿಗೆ ಕಳುಹಿಸಿಕೊಡುತ್ತಾರೆ. ಸರಳವಾಸ್ತುವನ್ನು ಅಳವಡಿಸಿಕೊಂಡರೆ ಮುಂದಿನ ಪರಮಾವಧಿ ಎಂಟು ತಿಂಗಳೊಳಗೆ ಕಷ್ಟ ಪರಿಹಾರವಾಗಿ ಸುಖ ಜೀವನ ಕಾಣುತ್ತೀರಿ ಎಂದು ಭರವಸೆ ಇತ್ತು 11,500 ರೂ. ಶುಲ್ಕ ಪಡೆಯುತ್ತಾರೆ. ಕಷ್ಟ ಪರಿಹಾರವಾಗದಿದ್ದರೆ ಹಣ ವಾಪಾಸು ಎಂಬ ಆಶ್ವಾಸನೆಯನ್ನೂ ನೀಡಿರಲಾಗಿರುತ್ತದೆ.

ಕಷ್ಟ ಈ ಅವಧಿಯಲ್ಲಿ ಪರಿಹಾರವಾಗದೆ ದುಪ್ಪಟ್ಟಾಗುತ್ತದೆ. ಕೊನೆಪಕ್ಷ ಕಟ್ಟಿದ ಹಣ ವಾಪಾಸು ಕೇಳಿದರೆ ಉದಾಸೀನವೇ ಉತ್ತರವಾಗುತ್ತದೆ. ಯಾಲಕ್ಕಿ ಗೌಡರು ಇವರ ವಿರುದ್ಧ ಗ್ರಾಹಕ ನ್ಯಾಯಾಲಯಕ್ಕೆ ಹೋದರು. ಖರ್ಚು, ಫೀ, ನಷ್ಟ, ಪರಿಹಾರ ಸೇರಿ 3,37,500 ರೂ. ಸಂಸ್ಥೆಯಿಂದ ಕೊಡಿಸಬೇಕು ಎಂಬುದು ಅವರ ಅಹವಾಲು. ಚಾನೆಲ್‌ನಲ್ಲಿ ಸಿಜಿ ಪರಿವಾರ ಸರಳ ವಾಸ್ತುವಿನ ಹಿರಿಮೆ ಹೇಳಿದ್ದು ಹೌದು, ಎಂಟು ತಿಂಗಳ ಅವಧಿ ತಿಳಿಸಿದ್ದು ನಿಜ, ಇಲ್ಲದಿದ್ದರೆ ಹಣ ಮರಳಿಸುತ್ತೇವೆ ಎಂದಿದ್ದು ಸತ್ಯ. ಆದರೆ ಸರಳ ವಾಸ್ತುವನ್ನು ಅಳವಡಿಸಿಕೊಳ್ಳಲು ನಾವು ಸೂಚಿಸಿದ ಕ್ರಮವನ್ನು ದೂರುದಾರರು ಪಾಲಿಸಿರದಿದ್ದರಿಂದ ಸಮಸ್ಯೆ ಬಾಕಿ ಉಳಿದಿದೆ. ಹಾಗಾಗಿ ಪ್ರಕರಣವನ್ನು ಕೈಬಿಡಬೇಕು ಎಂಬ ವಾದ ಹೂಡಿಬಿಟ್ಟರು.  ಈ ತರಹ ಷರತ್ತು ನಿಯಮಗಳನ್ನು ದೂರುದಾರನಿಗೆ ಕೊಟ್ಟಿದ್ದಕ್ಕೆ ದಾಖಲೆ ಇಲ್ಲ. ಆತನ ಮನೆಗೆ ತಿಂಗಳಿಗೊಮ್ಮೆ ಪರಿಶೀಲನೆ ನಡೆಸಿ ಮಾರ್ಪಾಡು, ಅಳವಡಿಕೆಗೆ ಸಲಹೆ ಕೊಟ್ಟಿದ್ದಕ್ಕೆ ಸಾಕ್ಷಿ$ ಊಹೂn!

ದೂರು ಸಂಖ್ಯೆ ಸಿಸಿ 113/2017ರ ತೀರ್ಪು ತುಂಬಾ ದೂರಗಾಮಿ ಪರಿಣಾಮಗಳನ್ನು ಹೊಂದಿರುವಂತದು. ಫೀ 11,500, ವಾಸ್ತು ಸಾಮಗ್ರಿಯ ಖರೀದಿಗೆ ಮಾಡಿದ ವೆಚ್ಚ 3,500 ರೂ.ಗಳಿಗೆ 2017ರ ಆ. 7ರಿಂದ ಶೇ. 12ರ ಬಡ್ಡಿ ಸೇರಿಸಿ ಪಾವತಿ, ಮಾನಸಿಕ ಹಿಂಸೆಗೆ 12 ಸಾವಿರ, ಖರ್ಚು 2 ಸಾವಿರ ಸೇರಿಸಿ ಒಟ್ಟು 29 ಸಾವಿರ ರೂ. ದೂರುದಾರರಿಗೆ ನೀಡಬೇಕೆಂಬ ತೀರ್ಪು 2018ರ ಮಾರ್ಚ್‌ ಒಂದರಂದು ಹೊರಬಿದ್ದಿದೆ. ಈ ತರಹದ ತೀರ್ಪು ಬರುವಂತಾಗಲು ಯಾರ ಮನೆಯ ವಾಸ್ತು ಸರಿಯಾಗಿರಲಿಲ್ಲವೋ?!

ಒಂದು ಪ್ರಕರಣ, ಅದೇ ದಾರಿ!
ಸಾವಿರ ಬಾರಿ ಜನರಿಗೆ ಜಾಗೃತಿ ಮೂಡಿಸುವ ಕ್ರಮಕ್ಕೆ ಮುಂದಾದರೂ ಎದುರಾಗುವ ಕಷ್ಟಗಳು ಬುದ್ಧಿಗೆ ಮಂಕುಬೂದಿ ಎರಚುತ್ತವೆ. ಈ ಹಿನ್ನೆಲೆಯಲ್ಲಿ ಜನಪರ ಸಂಘಟನೆಗಳು ಈ ಮಾದರಿಯ ತೀರ್ಪು ಹೆಚ್ಚು ಹೆಚ್ಚು ಪ್ರಕರಣಗಳಲ್ಲಿ ಹೊರಬರುವಂತಾಗಲು ಶ್ರಮಿಸಬೇಕು. ಆಗ ಮೂಢನಂಬಿಕೆಯ ಗ್ರಹಣ ಸ್ವಲ್ಪವಾದರೂ ಬಿಟ್ಟಿàತು!

– ಮಾ.ವೆಂ.ಸ.ಪ್ರಸಾದ್‌,
ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ

 

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಸೊರಬದಲ್ಲಿ ಲಕ್ಷಾಂತರ ರೂ. ಮೌಲ್ಯದ ಗಾಂಜಾ ವಶ: ಮೂವರು ಆರೋಪಿಗಳು ಪರಾರಿ

ಸೊರಬದಲ್ಲಿ ಲಕ್ಷಾಂತರ ರೂ. ಮೌಲ್ಯದ ಗಾಂಜಾ ವಶ: ಮೂವರು ಆರೋಪಿಗಳು ಪರಾರಿ

ಕಾಲೇಜು ಆರಂಭಕ್ಕೆ ದಿನಾಂಕ ನಿಗದಿ: ಮಾರ್ಗಸೂಚಿ ಪ್ರಕಟಿಸಿದ ಯುಜಿಸಿ

ಕಾಲೇಜು ಆರಂಭಕ್ಕೆ ದಿನಾಂಕ ನಿಗದಿ: ಮಾರ್ಗಸೂಚಿ ಪ್ರಕಟಿಸಿದ ಯುಜಿಸಿ

ಮಂಗಳೂರು: ಲೈಟ್ ಹೌಸ್ ರೋಡ್ ಗೆ ‘ಮುಲ್ಕಿ ಸುಂದರರಾಮ ಶೆಟ್ಟಿ’ ಹೆಸರಿಡಲು ಸರ್ಕಾರ ಆದೇಶ

ಮಂಗಳೂರು: ಲೈಟ್ ಹೌಸ್ ರೋಡ್ ಗೆ ‘ಮುಲ್ಕಿ ಸುಂದರರಾಮ ಶೆಟ್ಟಿ’ ಹೆಸರಿಡಲು ಸರ್ಕಾರ ಆದೇಶ

ಕೋವಿಡ್ 19 ಸೋಂಕು: ಚಿಕಿತ್ಸೆ ಫಲಕಾರಿಯಾಗದೆ ಹಿರಿಯ ನಟಿ ಆಶಾಲತಾ ವಿಧಿವಶ

ಕೋವಿಡ್ 19 ಸೋಂಕು: ಚಿಕಿತ್ಸೆ ಫಲಕಾರಿಯಾಗದೆ ಹಿರಿಯ ನಟಿ ಆಶಾಲತಾ ವಿಧಿವಶ

ಸುರತ್ಕಲ್ ಕಳ್ಳತನ ಪ್ರಕರಣ: ಕೇರಳದ ಇಬ್ಬರು ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

ಸುರತ್ಕಲ್ ಕಳ್ಳತನ ಪ್ರಕರಣ: ಕೇರಳದ ಇಬ್ಬರು ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

ಬಿ.ಸಿ. ಪಾಟೀಲ್

ಕೃಷಿ ಕಾಯ್ದೆಯಿಂದ ರೈತರಿಗೆ ಸ್ವಾತಂತ್ರ್ಯ ಸಿಕ್ಕಿದ ಹಾಗಾಗಿದೆ: ಸಚಿವ ಬಿ.ಸಿ. ಪಾಟೀಲ್

ಪಶ್ಚಿಮ ಬಂಗಾಳಕ್ಕೆ ಹೆಚ್ಚು ಅಲ್‌ಖೈದಾ ನಂಟು: ಎನ್‌ಐಎ

ಪಶ್ಚಿಮ ಬಂಗಾಳಕ್ಕೆ ಹೆಚ್ಚು ಅಲ್‌ಖೈದಾ ನಂಟು: ಎನ್‌ಐಎ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೆಸೇಜ್‌ ಮಾಡಿ ಕಾಸು ಕೇಳ್ತಾರೆ, ಹುಷಾರ್‌

ಮೆಸೇಜ್‌ ಮಾಡಿ ಕಾಸು ಕೇಳ್ತಾರೆ, ಹುಷಾರ್‌

ಕುರಿ ಸಾಕಿದರೆ ಕೈತುಂಬಾ ಕಾಂಚಾಣ

ಕುರಿ ಸಾಕಿದರೆ ಕೈತುಂಬಾ ಕಾಂಚಾಣ

isiri-tdy-2

ಆಸೆ ಇರಬೇಕು ನಿಜ, ಅದು ಅತಿಯಾಗಬಾರದು…

isiri-tdy-1

ಸೆಕೆಂಡ್‌ ಹ್ಯಾಂಡ್‌ ವಾಹನಗಳಿಗೆ ಶುಕ್ರದೆಸೆ

isiri-tdy-5

ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಮತ್ತೆ ಬಂತು ವಿಆರ್‌ಎಸ್‌!

MUST WATCH

udayavani youtube

Hospet : Tungabhadra Dam Gates Are Opened | TB Dam | Udayavani

udayavani youtube

ಸುರತ್ಕಲ್ ಕಳ್ಳತನ ಪ್ರಕರಣ: ಕೇರಳದ ಇಬ್ಬರು ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

udayavani youtube

Manipal: Multi-storey building in danger | inspection by DC Jagadeesh

udayavani youtube

ಗೇರು ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

ಪ್ರವಾಹದಲ್ಲಿ ಡೋಣಿ ನದಿ ದಾಟಲು ಮುಂದಾದ ವ್ಯಕ್ತಿಯ ಹುಚ್ಚು ಸಾಹಸಹೊಸ ಸೇರ್ಪಡೆ

ಸದಾಶಿವ ವರದಿ ಜಾರಿಗಾಗಿ ಅಹೋರಾತ್ರಿ ಧರಣಿ

ಸದಾಶಿವ ವರದಿ ಜಾರಿಗಾಗಿ ಅಹೋರಾತ್ರಿ ಧರಣಿ

ಜನತೆ ನಿರ್ಲಕ್ಷ್ಯಕ್ಕೆ ಹೆಚ್ಚುತ್ತಿದೆ ಕೋವಿಡ್ ಸೋಂಕು

ಜನತೆ ನಿರ್ಲಕ್ಷ್ಯಕ್ಕೆ ಹೆಚ್ಚುತ್ತಿದೆ ಕೋವಿಡ್ ಸೋಂಕು

ಸೊರಬದಲ್ಲಿ ಲಕ್ಷಾಂತರ ರೂ. ಮೌಲ್ಯದ ಗಾಂಜಾ ವಶ: ಮೂವರು ಆರೋಪಿಗಳು ಪರಾರಿ

ಸೊರಬದಲ್ಲಿ ಲಕ್ಷಾಂತರ ರೂ. ಮೌಲ್ಯದ ಗಾಂಜಾ ವಶ: ಮೂವರು ಆರೋಪಿಗಳು ಪರಾರಿ

ಗ್ರಾಮೀಣ ಭಾಗದಲ್ಲೂ ಬಸ್‌ ಓಡಿಸಿ

ಗ್ರಾಮೀಣ ಭಾಗದಲ್ಲೂ ಬಸ್‌ ಓಡಿಸಿ

ಶಾಸಕಿಗೆ ಧರಣಿ ಅರ್ಥ ತಿಳಿದಿಲ್ಲ

ಶಾಸಕಿಗೆ ಧರಣಿ ಅರ್ಥ ತಿಳಿದಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.