ಬಂತಿದೋ ರಿಯಲ್‌ ಮಿ 3

Team Udayavani, Apr 8, 2019, 11:45 AM IST

ರಿಯಲ್‌ಮಿ ಬ್ರಾಂಡ್‌ ಭಾರತಕ್ಕೆ ಪರಿಚಿತವಾದ ಅಲ್ಪ ಸಮಯದಲ್ಲೇ ಬಹಳಷ್ಟು ಪ್ರಗತಿ ಸಾಧಿಸಿದೆ. ಒಪ್ಪೋ ಮೊಬೈಲ್‌ ಕಂಪೆನಿಯ ಉಪ ಬ್ರಾಂಡ್‌ ಆಗಿದ್ದ ಇದು, ಈಗ ಪ್ರತ್ಯೇಕ ಬ್ರಾಂಡ್‌ ಆಗಿ, 2018ರ ನವೆಂಬರ್‌ನಿಂದ ಹೊಸ ಲೋಗೋದೊಂದಿಗೆ ತನ್ನ ಮೊಬೈಲ್‌ ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ರಿಯಲ್‌ ಮಿ 1, ರಿಯಲ್‌ಮಿ 2, ರಿಯಲ್‌ ಮಿ ಯೂ 1 ಮತ್ತಿತರ ಫೋನ್‌ ಗಳನ್ನು ಮಾರುಕಟ್ಟೆಗೆ ತಂದು ಆನ್‌ಲೈನ್‌ ಮಾರಾಟದ ಮೂಲಕ ಗ್ರಾಹಕರಿಗೆ
ಮಿತವ್ಯಯದ ದರಕ್ಕೆ ತಕ್ಕಮಟ್ಟಿಗೆ ಉತ್ತಮ ಫೋನ್‌ಗಳನ್ನು ನೀಡುತ್ತಿದೆ.

ಈ ಕಂಪೆನಿಯ ಇನ್ನೊಂದು ಹೊಸ ಮೊಬೈಲ್‌ ರಿಯಲ್‌ಮಿ 3. ಇದು, 10-12 ಸಾವಿರ ರೂ. ವಲಯದ ಆರಂಭಿಕ ಮಧ್ಯಮ ದರ್ಜೆಯ ಫೋನ್‌ ಆಗಿದೆ. ಈ ಮೊಬೈಲ್‌ ಭಾರತಕ್ಕೆ ಬಿಡುಗಡೆಯಾಗಿ ಮೂರು ವಾರಗಳಾಗಿವೆ. ಈ ಅವಧಿಯಲ್ಲಿ 5 ಲಕ್ಷ ಫೋನ್‌ಗಳು ಮಾರಾಟವಾಗಿವೆ ಎಂದುಕಂಪೆನಿ ಹೇಳಿಕೊಂಡಿದೆ. ಫ್ಲಿಪ್ ಕಾರ್ಟ್‌ನಲ್ಲಿ ಫ್ಲಾಶ್‌ಸೇಲ್‌ ಮೂಲಕ ಮಾರಾಟ ಮಾಡಲಾಗುತ್ತಿದೆ. 23,500ಮಂದಿಯ ರೇಟಿಂಗ್‌ನಲ್ಲಿ 5ಕ್ಕೆ 4.5 ಸ್ಟಾರ್‌ಗಳ ರೇಟಿಂಗ್‌ ಇದಕ್ಕೆದೊರೆತಿದೆ. ಅಲ್ಲಿಗೇ ಇದನ್ನುಕೊಂಡ ಗ್ರಾಹಕರಿಗೆ ಈ ಮೊಬೈಲ್‌ ಮೆಚ್ಚುಗೆಯಾಗಿದೆ ಎಂಬುದು ಖಚಿತ.

ಈ ಮೊಬೈಲ್‌ ಯಾವ ಯಾವ ತಾಂತ್ರಿಕ ಅಂಶಗಳನ್ನು ಒಳಗೊಂಡಿದೆ?:
ರಿಯಲ್‌ಮಿ 3 6.2 ಇಂಚಿನ ಎಚ್‌ಡಿ ಪ್ಲಸ್‌, (1520720 ಪಿಕ್ಸಲ್‌, 271 ಪಿಪಿಐ) ವಾಟರ್‌ ಡ್ರಾಪ್‌ ವಿನ್ಯಾಸದ ಪರದೆ ಹೊಂದಿದೆ. ಪರದೆ ಮತ್ತು ಬೆಜೆಲ್ಸ್‌ನ ಅನುಪಾತ 19:9 ಇದೆ. 4 ಜಿಬಿ ರ್ಯಾಮ್‌, 64 ಜಿಬಿ ಆಂತರಿಕ ಸಂಗ್ರಹ ಹಾಗೂ 3ಜಿಬಿ ರ್ಯಾಮ್‌ ಹಾಗೂ 32 ಜಿಬಿ ಆಂತರಿಕ ಸಂಗ್ರಹದ ಎರಡು ಆವೃತ್ತಿಗಳಿವೆ.
ಇದು ಮೀಡಿಯಾಟೆಕ್‌ ಹೀಲಿಯೋ ಪಿ70 ಎಂಟು ಕೋರ್‌ಗಳ ಪ್ರೊಸೆಸರ್‌ ಹೊಂದಿದೆ. (2.1 ಗಿ.ಹ. ಕ್ಲಾಕ್‌ ಸ್ಪೀಡ್‌) ಒಪ್ಪೋ, ವಿವೋ ಮಾತೃ ಕಂಪೆನಿಯದ್ದಾದ ಕಲರ್‌ ಆಪರೇಟಿಂಗ್‌ ಸಿಸ್ಟಂ ಒಳಗೊಂಡಿದೆ. ನೂತನ ಆಂಡ್ರಾಯ್ಡ 9 ಪೈ ಆವೃತ್ತಿ ಹೊಂದಿದೆ. ಎರಡು ಸಿಮ್‌ ಹಾಕಿಕೊಂಡು, ಮೆಮೊರಿ ಕಾರ್ಡ್‌ ಕೂಡ ಹಾಕಿಕೊಳ್ಳಬಹುದು. ಎರಡು ಸಿಮ್‌ ಸ್ಲಾಟ್‌ ಗಳಲ್ಲೂ 4ಜಿ ಸಿಮ್‌ ಹಾಕಿಕೊಳ್ಳಬಹುದು. ಅರ್ಥಾತ್‌ ಜಿಯೋ ವೋಲ್ಟ್ ಸಿಮ್‌ ಹಾಕಿ ಬಳಸಬಹುದು. ಕ್ಯಾಮರಾ ವಿಭಾಗಕ್ಕೆ ಬಂದರೆ 13 ಮತ್ತು 2 ಮೆಗಾ ಪಿಕ್ಸಲ್‌ ಹಿಂಬದಿ ಪ್ರಾಥಮಿಕ ಕ್ಯಾಮರಾ ಇದೆ.

ಸೆಲ್ಫಿಗಾಗಿ 13 ಮೆಗಾಪಿಕ್ಸಲ್‌ ಕ್ಯಾಮರಾ ಇದೆ.ಮೊಬೈಲ್‌ನ ಹಿಂಬದಿಯಲ್ಲಿ ಬೆರಳಚ್ಚು ಸ್ಕ್ಯಾನರ್‌ ಇದೆ. 3.5 ಎಂ.ಎಂ. ಆಡಿಯೋ ಜಾಕ್‌ ಇದೆ. ಮೈಕ್ರೋ ಯುಎಸ್‌ಬಿ ಚಾರ್ಜಿಂಗ್‌ ಪೋರ್ಟ್‌ ಹೊಂದಿದೆ. ಎಲ್ಲ ಸರಿ, ಬ್ಯಾಟರಿ ಎಷ್ಟು ಎಂಬ ,ಕುತೂಹಲ ಇದ್ದೇ ಇರುತ್ತದೆ. ನಿಮ್ಮ ಕುತೂಹಲಕ್ಕೆ ಈ ಮೊಬೈಲ್‌ ಮೋಸ ಮಾಡುವುದಿಲ್ಲ. ಇದು 4230 ಎಂಎಎಚ್‌ ಬ್ಯಾಟರಿ ಹೊಂದಿದೆ! ನಾನು ಹೆವಿ ಯೂಸರ್‌. ನನಗೆ ಜಾಸ್ತಿ ಬ್ಯಾಟರಿ ಇರುವ ಮೊಬೈಲ್‌ ಬೇಕು ಎನ್ನುವಂಥವರು ಈ ಮೊಬೈಲ್‌ ಅನ್ನು ಸಹ ಪರಿಗಣಿಸಬಹುದು.

ಇದರ ದರ ಮಿತವ್ಯಯಕಾರಿಯಾಗಿದೆ. ಅದರಂತೆಯೇ 3 ಜಿಬಿ ರ್ಯಾಮ್‌ 32 ಜಿಬಿ ಆಂತರಿಕ ಸಂಗ್ರಹದ ಆವೃತ್ತಿಗೆ 9 ಸಾವಿರ ರೂ. ಹಾಗೂ 4 ಜಿಬಿ ರ್ಯಾಮ್‌ ಹಾಗೂ 64 ಜಿಬಿ ಆಂತರಿಕ ಸಂಗ್ರಹದ ಆವೃತ್ತಿಗೆ 11 ಸಾವಿರ ರೂ. ಇಡಲಾಗಿದೆ. ಈ ದರದಿಂದಾಗಿಯೇ ಇದು ಚೆನ್ನಾಗಿ ಮಾರಾಟವಾಗಿರುವುದು. ಇದು ಫ್ಲಿಪ್ ಕಾಟ್‌ ನಲ್ಲಿ ಮಾತ್ರ ಲಭ್ಯವಿದ್ದು, ಕಪ್ಪು ಮತ್ತು ನೀಲಿ ಬಣ್ಣಗಳಲ್ಲಿ ದೊರಕುತ್ತದೆ. ಹಾಂ, ತಡೆಯಿರಿ, ರಿಯಲ್‌ ಮಿ ಕಂಪೆನಿ, ಶಿಯೋಮಿ ಕಂಪೆನಿಯ ಜೊತೆ ಪೈಪೋಟಿ ನೀಡಲು ಕಡಿಮೆ ದರಕ್ಕೆ ಫೋನ್‌ ಗಳನ್ನು ನೀಡುತ್ತಿದೆ ಎಂಬುದೇನೋ ನಿಜ. ಆದರೆ….! ಈ ದರಕ್ಕೆ ನೀಡುವ ಸಲುವಾಗಿ ಗುಣಮಟ್ಟದಲ್ಲಿ ಕೆಲವು ರಾಜಿ ಮಾಡಿಕೊಂಡಿದೆ ಎಂಬುದನ್ನೂ ಒಮ್ಮೆ ಗಮನಿಸಿ ಮುಂದುವರೆಯಿರಿ. ಇದರಲ್ಲಿ ಸ್ನಾಪ್‌ಡ್ರಾಗನ್‌ ಪ್ರೊಸೆಸರ್‌ ಇಲ್ಲ. ಕಡಿಮೆ ದರಕ್ಕೆ ಮೊಬೈಲ್‌ ನೀಡಲು ಕೆಲವು ಕಂಪೆನಿಗಳು ಮೀಡಿಯಾಟೆಕ್‌
ಪ್ರೊಸೆಸರ್‌ ಬಳಸುತ್ತವೆ. ಸ್ನಾಪ್‌ಡ್ರಾಗನ್‌ ಗೆ ಹೋಲಿಸಿದರೆ ಮೀಡಿಯಾಟೆಕ್‌ ಪ್ರೊಸೆಸರ್‌ ಗಳು ಕಾರ್ಯಾಚರಣೆಯಲ್ಲಿ ಅಷ್ಟೊಂದು ಮುಂದಿಲ್ಲ. ಇನ್ನು, ರಿಯಲ್‌ಮಿಯಲ್ಲಿ ಇನ್ನೊಂದು ಇಷ್ಟವಾಗದ ಅಂಶವೆಂದರೆ, ಸಾಮಾನ್ಯವಾಗಿ ಈಗಿನ ಮೊಬೈಲ್‌ಗ‌ಳೆಲ್ಲಾ ಲೋಹದ ದೇಹ ಅಥವಾ ಗಾಜಿನ ದೇಹ ಹೊಂದಿರುತ್ತವೆ. ಕಡಿಮೆ ದರಕ್ಕೆ ಕೊಡುವ ಸಲುವಾಗಿ ರಿಯಲ್‌ಮಿ ಪ್ಲಾಸ್ಟಿಕ್‌
ಪ್ಯಾನೆಲ್‌ಗ‌ಳನ್ನು ಬಳಸುತ್ತಿದೆ.

ರಿಯಲ್‌ಮಿ 3 ಕೂಡ ಪ್ಲಾಸ್ಟಿಕ್‌ ದೇಹದ ಫೋನ್‌. ನಿಮಗೆ ಲೋಹ ಅಥವಾ ಗಾಜಿನ ಅನುಭವ ಇದರಲ್ಲಿ ದೊರಕುವುದಿಲ್ಲ. ಈ ದರಕ್ಕೆ ಅನೇಕ ಫೋನ್‌ಗಳು ಫ‌ುಲ್‌ ಎಚ್‌ ಡಿ ಪ್ಲಸ್‌ (19201080) ಪರದೆ ನೀಡುತ್ತಿವೆ. 401 ಪಿಪಿಐ (ಪಿಕ್ಚರ್‌ ಪರ್‌ ಇಂಚ್‌) ಯ ಸಮೃದ್ಧ ಚಿತ್ರಗಳು ದೊರಕುತ್ತವೆ. ಆದರೆ ರಿಯಲ್‌ಮಿ 3 ಯಲ್ಲಿ 1520720 ರೆಸ್ಯೂಲೇಶನ್‌ನ 271 ಪಿಪಿಐ ಪರದೆ ಇದೆ. ಅಂದರೆ ಪರದೆಯಲ್ಲಿ ವಿಡಿಯೋ ಮತ್ತು ಫೋಟೋಗಳು ಅತಿಹೆಚ್ಚು ಸೂಕ್ಷ್ಮತೆ, ಸ್ಪಷ್ಟತೆ ಹೊಂದಿರುವುದಿಲ್ಲ.

ಕೆ.ಎಸ್‌. ಬನಶಂಕರ ಆರಾಧ್ಯ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಹೊಸದಿಲ್ಲಿ : ಭಾರತದ ವರಿಷ್ಠ ನ್ಯಾಯಮೂರ್ತಿ (ಸಿಜೆಐ) ರಂಜನ್‌ ಗೊಗೊಯ್‌ ಅವರಿಂದು ಶನಿವಾರ ಸುಪ್ರೀಂ ಕೋರ್ಟಿನ ವಿಶೇಷ ಪೀಠದಲ್ಲಿದ್ದುಕೊಂಡು ತನ್ನ ವಿರುದ್ಧ...

  • ಇಂದು ನಿತ್ಯ ಹರಿದ್ವರ್ಣ ಕಾಡುಗಳಲ್ಲಷ್ಟೇ ಬೃಹತ್‌ ಗಾತ್ರದ ದೇವದಾರು, ತೇಗ, ಬೀಟೆ ಮೊದಲಾದ ಮರಗಳನ್ನು ಕಾಣಬಹುದು. ಆದರೆ ಸವಣೂರಿನ ಕಲ್ಮಠದಲ್ಲಿ ಸಾವಿರಾರು ವರ್ಷಗಳ...

  • Gadwall (Anas strepera) M -Duck + ಗದ್ವಾಲ್‌ ಬಾತನ್ನು ಚರ್ಲೆ ಅಥವಾ ಸರಳೆ ಬಾತು ಎಂದು ಕರೆಯಲಾಗುತ್ತದೆ. ಈ ಹಕ್ಕಿ, ನೀರಿನಲ್ಲಿ ಮುಳುಗಿ ಅಲ್ಲಿರುವ ಕ್ರಿಮಿ ಕೀಟಗಳನ್ನು ಬೇಟೆಯಾಡುತ್ತದೆ....

  • ವೃತ್ತಿಯಲ್ಲಿ ಶಿಕ್ಷಕರಾದ ಕಲ್ಯಾಣ್‌ ಕುಮಾರ್‌ ಅವರಿಗೆ ಪತ್ರಿಕೆ ಸಂಗ್ರಹಿಸುವ ಹವ್ಯಾಸ. ಇದು ಹುಟ್ಟಿದ್ದು ಪರ ಊರಿಗೆ ಪ್ರಯಾಣಿಸುವಾಗ . ಬೇಜಾರು ಕಳೆಯಲಿಕ್ಕೆ...

  • ಉದ್ದಾನ ವೀರಭದ್ರಸ್ವಾಮಿಗಳು ಈ ಆಂಜನೇಯನಿಗೆ ಲಿಂಗಧಾರಣೆ ಮಾಡಿದ್ದು, ಕೊರಳಿನಲ್ಲಿ ರುದ್ರಾಕ್ಷಿ ಮಾಲೆ ಇರುವುದು ಒಂದು ವಿಶೇಷ. ಸೊಂಟದಲ್ಲಿ ಕತ್ತಿ ಇರುವುದು...

  • ಅರಳಿಮರದ ಬುಡದಲ್ಲಿ ಕುಳಿತು ಸರ್ವಾಂತರ್ಯಾಮಿಯಾದ ಭಗವಂತನ ಸ್ವರೂಪವನ್ನು ಯೋಗಿಗಳಿಂದ ಕೇಳಿ ತಿಳಿದ ರೀತಿಯಲ್ಲೇ ಧ್ಯಾನ ಮಾಡತೊಡಗಿದ್ದರು. ಏಕಾಗ್ರಚಿತ್ತದಿಂದ...