ಸಂಬಳ ನಾಟ್‌ ರೀಚಬಲ್‌


Team Udayavani, Mar 17, 2019, 12:28 PM IST

s-4.jpg

10ಜಿ ವೇಗದಲ್ಲಿ ಸಂಬಳ ಪಡೆಯುತ್ತಿದ್ದ ಬಿಎಸ್‌ಎನ್‌ಎಲ್‌ ಉದ್ಯೋಗಿಗಳು ಆತಂಕದಲ್ಲಿದ್ದಾರೆ. ಅವರಿಗೆ ಕಳೆದ ತಿಂಗಳ ಸಬಂಳ ಬಂದಿಲ್ಲ. ಮಾರ್ಚ್‌ ತಿಂಗಳ ಸಂಬಳ ಇನ್ನೂ ನಿಕ್ಕಿಯಾಗಿಲ್ಲ. ಒಂದು ಕಾಲದಲ್ಲಿ ಭಾರತದ ಸಂಪರ್ಕಸೇತುವೆಯಾಗಿದ್ದ ಈ ಸಂಸ್ಥೆ ಈಗ ಎಲ್ಲರ ಕಣ್ಣ ಮುಂದೆಯೇ ಮಂಡಿಯೂರಿ, ಬೀಳುವ ಸ್ಥಿತಿಗೆ ತಲುಪಿದೆ. ಇದಕ್ಕೆ ಕಾರಣರು ಯಾರು?  ಕಾರಣ ಏನು?

ಭಾರತೀಯರ ಹೆಮ್ಮೆಯ ಭಾರತ್‌ ಸಂಚಾರ ನಿಗಮ ಲಿಮಿಟೆಡ್‌,  (ಬಿಎಸ್‌ಎನ್‌ಎಲ್‌) ಆರ್ಥಿಕ ಸಂಕಷ್ಟಕ್ಕೆ  ಸಿಲುಕಿದೆ. ಕಳೆದ ತಿಂಗಳಿಂದ ಸಂಬಂಳವಿಲ್ಲದೇ  1,75,000 ಉದ್ಯೋಗಿಗಳು ಕಂಗಾಲಾಗಿದ್ದಾರೆ.  ಇದರ ಮಧ್ಯೆ  ಮಾರ್ಚ್‌ ತಿಂಗಳ  ಸಂಬಳವೂ ವಿಳಂಬವಾಗಬಹುದೆನ್ನುವ ಮಾತು ಕೇಳಿಬರುತ್ತಿದೆ. ಸರ್ಕಾರ, ಯಾವುದೇ ಹಣಕಾಸು ಸಹಾಯ ನೀಡದಿರುವುದರಿಂದ, ಸಂಸ್ಥೆಯು ಗಳಿಸುವ ಆದಾಯದ ಮೇಲೇ ಸಂಬಳ ನೀಡಿಕೆಯ ಸಾಧ್ಯತೆ ಅವಲಂಭಿತವಾಗಿದೆ ಎನ್ನುವ  ಮಾತೂ ಕೇಳಿ ಬರುತ್ತಿದೆ. 

 20  ದೂರ ಸಂಪರ್ಕ ವೃತ್ತಗಳಿರುವ  ಬಿಎಸ್‌ಎನ್‌ಎಲ್‌ ಸಿಬ್ಬಂದಿಯ ಸಂಬಳಕ್ಕಾಗಿ ಪ್ರತಿ ತಿಂಗಳು 1,200 ಕೋಟಿ ರೂ. ಗಳ ಅಗತ್ಯವಿದೆ. ಪ್ರತಿ ತಿಂಗಳಿನ  ಕೊನೆಯ ದಿನ ಅಥವಾ ಮುಂದಿನ ತಿಂಗಳಿನ ಮೊದಲು ದಿನ ವೇತನ ನೀಡುತ್ತಿದ್ದ ಸಂಸ್ಥೆ,  ಮಾರ್ಚ್‌ 13 ಆದರೂ, ಫೆಬ್ರವರಿ ತಿಂಗಳ ಸಂಬಳ ನೀಡಿಲ್ಲ. ವಿಶ್ಲೇಷಕರ ಪ್ರಕಾರ, ಕೇಂದ್ರ ಸರ್ಕಾರದ ಸ್ವಾಮ್ಯದ  ಈ ಸಂಸ್ಥೆ ಕಳೆದ ಐದು ವರ್ಷಗಳಿಂದ ಆರ್ಥಿಕ  ಸಂಕಷ್ಟದಲ್ಲಿದ್ದು,  ಇದರ ಇತಿಹಾಸದಲ್ಲಿ, ಪ್ರಥಮ ಬಾರಿ  ಸಿಬ್ಬಂದಿಗೆ ಸಂಬಳ ನೀಡುವಲ್ಲಿ ವಿಳಂಬವಾಗುತ್ತಿದೆ. ಸ್ಥಿರದೂರವಾಣಿ, ಮೊಬೈಲ್‌ ಫೋನ್‌, ಬ್ರಾಡ್‌ ಬ್ಯಾಂಡ್‌, ಇಂಟರ್‌ನೆಟ್‌ ಸರಬರಾಜು ಮಾಡುವ ಈ ಸರ್ಕಾರಿ ಸ್ವಾಮ್ಯದ ಸಂಸ್ಥೆ,  94.36 ಮಿಲಿಯನ್‌ ಸೆಲ್ಯುಲರ್‌ ಮತ್ತು 1.02 ಮಿಲಿಯನ್‌  ಗಔಔ ಗ್ರಾಹಕರನ್ನು ಹೊಂದಿದೆ. 2ಎ ಮತ್ತು 3ಎ  ಸೇವೆಯನ್ನು ನೀಡುತ್ತಿದೆ.  ಇದು ದೇಶದ  ಹತ್ತನೇ ಅತಿದೊಡ್ಡ ಸಂಸ್ಥೆಯಾಗಿದ್ದು 70746.75 ಕೋಟಿ ಆಸ್ತಿಯನ್ನು  ಹೊಂದಿದೆ. ಈ ಸಂಸ್ಥೆಯ ಸ್ಥಿರಾಸ್ತಿ  ಮೌಲ್ಯವೇ  ಸುಮಾರು 65,000 ಕೋಟಿಯಂತೆ. 2016ರ ವ್ಯಾಲ್ಯುಯೇಷನ್‌ ಪ್ರಕಾರ ಪ್ರಸ್ತುತ ಮಾರುಕಟ್ಟೆ ಮೌಲ್ಯ 1,00,000 ಕೋಟಿ  ಇರಬಹುದು.

 2009ರ ವರೆಗೆ ಬಿಎಸ್‌ಎನ್‌ಎಲ್‌ ಸುಮಾರು 10000 ಕೋಟಿ  ಲಾಭಗಳಿಸಿತ್ತು. ಆಗ ಸಿಬ್ಬಂದಿಗಳ ಸಂಖ್ಯೆಯೂ ಹೆಚ್ಚಿತ್ತು. 2009-10ರ ನಂತರ  ಲಾಭದ ಪ್ರಮಾಣ ಇಳಿಯುತ್ತಾ ಹೋಗಿ, ಈಗ ನಿರಂತರ ನಷ್ಟ ಅನುಭವಿಸುತ್ತಿದೆ. ಎಷ್ಟೆಂದರೆ,  2016-17 ರ ಹಣಕಾಸು ವರ್ಷದಲ್ಲಿ 4,786 ಕೋಟಿ ನಷ್ಟವಿದ್ದರೆ, 2017-18 ರಲ್ಲಿ  ಇದು 8,000 ಕೋಟಿ ತಲುಪಿದೆ. 2018- 19 ರಲ್ಲಿ ಇದು  ಇನ್ನೂ ಹೆಚ್ಚಾಗುವ ಸೂಚನೆಗಳಿವೆ.  ಪ್ರತಿವರ್ಷ ಉದ್ಯೋಗಿಗಳ ಸಂಬಳದ ವೆಚ್ಚ ಶೇ.8 ರಷ್ಟು ಹೆಚ್ಚಾಗುತ್ತದೆ. ವಿಶ್ಲೇಷಕರ ಪ್ರಕಾರ, ಸಂಸ್ಥೆಯ ಶೇ.55ರಷ್ಟು ಆದಾಯ ಸಿಬ್ಬಂದಿಗಳಿಗೆ ಸಂಬಳ ನೀಡಲು ವ್ಯಯವಾಗುತ್ತಿದೆಯಂತೆ.   ಖಾಸಗಿ ಕಂಪನಿಗಳಲ್ಲಿ ಇದು  ಶೇ.10ರಷ್ಟಿದೆಯಂತೆ.  ಸಂಸ್ಥೆಯ ಆದಾಯ 2016 ರಲ್ಲಿ 32,411 ಕೋಟಿಯಾಗಿದ್ದರೆ, 2017 ರಲ್ಲಿ ಇದು 31,533 ಕೋಟಿಗೆ ಇಳಿದಿದೆ.  2018 ರಲ್ಲಿ  27,818 ಕೋಟಿ ಯಾಗಿತ್ತು. ಹಾಗೆಯೇ, ವಿಶ್ಲೇಷಕರು ಭಯಪಡುವಷ್ಟು ಗ್ರಾಹಕರ  ಸಂಖ್ಯೆ ಕಡಿಮೆಯಾಗಿಲ್ಲ ಎನ್ನುವ  ಅಭಿಪ್ರಾಯವೂ ಕೇಳಿಬರುತ್ತಿದೆ.  ಕಳೆದ ಅಕ್ಟೋಬರ್‌ ತಿಂಗಳಿನಲ್ಲಿ 3.66 ಲಕ್ಷ ಹೊಸ ಬಿಎಸ್‌ಎನ್‌ಎಲ್‌ ಸಂಪರ್ಕ  ಪಡೆದವರಿದ್ದಾರೆ.  ಅಂದರೆ, ಗ್ರಾಹಕರ ಸಂಖ್ಯೆ  11.34 ಕೋಟಿಗೆ ಏರಿದೆ.

ಈ ಪರಿಸ್ಥಿತಿಗೆ ಕಾರಣ ಏನು?
ಭಾರತದಲ್ಲಿ ಪ್ರತಿಯೊಂದು  ಸಾರ್ವಜನಿಕ ಉದ್ಯಮದಲ್ಲಿರುವ ಸಂಕಷ್ಟಗಳನ್ನೇ  ಬಿಎಸ್‌ಎನ್‌ಎಲ್‌ ಕೂಡ ಅನುಭವಿಸುತ್ತಿರುವುದು. ಇದರ ಪರಿಸ್ಥಿತಿಯನ್ನು  ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ  ಏರ್‌ ಇಂಡಿಯಾಗೆ ಹೋಲಿಸಬಹುದು.  ಬಿಎಸ್‌ಎನ್‌ಎಲ್‌ ಕಾರ್ಮಿಕ ಸಂಘಗಳ ಪ್ರಕಾರ,  ಈ ಸಂಸ್ಥೆಯ ಇಂದಿನ ಹತಾಶ ಸ್ಥಿತಿಗೆ  ಸರ್ಕಾರಿ ಸ್ವಾಮ್ಯದ  ಉದ್ಯಮಗಳನ್ನು  ಬಿಳಿ ಆನೆಯಾಗಿ ತೋರಿಸಿ, ನಂತರ ಮುಚ್ಚಬೇಕು  ಎನ್ನುವ  ಸರ್ಕಾರದ  ಗೌಪ್ಯಕಾರ್ಯ ಸೂಚಿಯೇ ಕಾರಣ.  ಈ ಸಂಸ್ಥೆ ಬಗೆಗೆ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಹೆಚ್ಚಿದೆ. ಉದಾಹರಣೆಗೆ- ಹೆಚ್ಚು ಲಾಭ ತರುವ  4ಎ, 5ಎ ಸ್ಪೆಕ್ಟ್ರಂ ಹಂಚುವುದಕ್ಕೆ ಬಿಎಸ್‌ಎನ್‌ಎಲ್‌ ಅನ್ನು ಕೈ ಬಿಟ್ಟು, ರಿಲಯನ್ಸ್‌ನ ಜಿಯೋಗೆ ಆದ್ಯತೆ ನೀಡಿದ್ದು ಏಕೆ?  ಈ ವಿಚಾರದಲ್ಲಿ ಬಿಎಸ್‌ಎನ್‌ಎಲ್‌ಅನ್ನು  ಮಲ ಮಗನಂತೆ  ನಡೆಸಿಕೊಂಡಿದ್ದಲ್ಲದೇ, ಖಾಸಗಿ ಕಂಪನಿಗಳಿಗೆ ಮಣೆ ಹಾಕಿದ್ದು ಬಿಎಸ್‌ಎನ್‌ಎಲ್ ಗೆ  ಮರ್ಮಾಘಾತ ಕೊಟ್ಟಿದೆ. 

 ಟೆಲಿಕಾಮ್  ವಲಯದಲ್ಲಿ  ಜಿಯೋ  ಪ್ರವೇಶವಾದನಂತರ  30,000 ಉದ್ಯೋಗಿಗಳು ಉದ್ಯೋಗವನ್ನು ಕಳೆದುಕೊಂಡಿದ್ದಾರಂತೆ. ಯೂನಿನಾರ್‌, ಏರ್‌ಸೆಲ್, ಟಾಟಾ  ಟೆಲಿ ಸರ್ವೀಸ್‌ದಂಥ ಕಂಪನಿಗಳು ಬಾಗಿಲು ಮುಚ್ಚಿದೆ. ಈಗ   ಬಿಎಸ್‌ಎನ್‌ಎಲ್ ಸರದಿ. ನೀತಿ ಆಯೋಗವು ಬಿಎಸ್‌ಎನ್‌ಎಲ್  ಅನ್ನು  ಪುನರುಜ್ಜೀವನ ಗೊಳಿಸುವ ಸಲಹೆಯನ್ನು ತಿರಸ್ಕರಿಸಿ, ಅದನ್ನು ನಷ್ಟ ಅನುಭವಿಸುವ  ಸಾರ್ವಜನಿಕ ರಂಗದ  ಉದ್ಯಮಗಳ  ಪಟ್ಟಿಗೆ ಸೇರಿಸಿದ್ದಂತೂ ದೊಡ್ಡ ಹಿನ್ನಡೆಯೇ ಸರಿ.  ಖಾಸಗಿ  ಟೆಲೆಕಾಮ್ ಕಂಪನಿಗಳು 4ಎ ಮತ್ತು 5ಎ  ಸ್ಪೆಕ್ಟ್ರಂ ಅಪರೇಟ್ ಮಾಡುತ್ತಿದ್ದು, ಬಿ.ಎಎಸ್‌ಎನ್‌ಎಲ್ ಗೆ ಅದರ ಅಗತ್ಯವಿಲ್ಲ. ಒಂದು ಪಕ್ಷ ಅದು ದೊರಕಿದರೂ ಲಾಭ ಮಾಡಲು ಸಾಧ್ಯವಿಲ್ಲ ಎನ್ನುವ ಕೇಂದ್ರ ಸರ್ಕಾರದ ಧೋರಣೆಯೇ ಬಿಎಸ್‌ಎನ್‌ಎಲ್ ತನ್ನ ಮಾರುಕಟ್ಟೆಯಲ್ಲಿ ಶೇರ್‌ ಕಳೆದುಕೊಳ್ಳುವಂತೆ ಮಾಡಿದೆ.  ಸ್ಪರ್ಧಿಗಳ ಸರಕು ಮತ್ತು ಸೇವೆಗಳಿಗಿಂತ  ಕಡಿಮೆ ದರ ನಿಗದಿ ಮಾಡಿ , ಸ್ಪರ್ಧಿಸದಂತೆ ಮಾಡಿ, ಅವು ಮಾರುಕಟ್ಟೆ ಬಿಟ್ಟು ಹೋಗುವಂತೆ ಮಾಡುವ  ರಿಲಯನ್ಸ್‌ ಜಿಯೋ ಕಂಪೆನಿಯ  ಟrಛಿಛಚಠಿಟ್ಟy ಟrಜಿcಜಿnಜ  ಬಿಎಸ್‌ಎನ್‌ಎಲ…ಅನ್ನು ಈ ಸ್ಥಿತಿಗೆ ತಂದಿದೆ ಎಂದು ಟೆಲೆಕಾಮ…  ಕಾರ್ಮಿಕ ಸಂಘ  ಆಪಾದಿಸುತ್ತಿದೆ.

 ಬ್ಯಾಂಕಿಂಗ್‌ ಉದ್ಯಮದಲ್ಲಿ ನವಪೀಳಿಗೆಯ  ಖಾಸಗಿ  ಬ್ಯಾಂಕುಗಳ (new generation private banks) ಆಗಮನದ ನಂತರ  ಸಾರ್ವಜನಿಕ ರಂಗದ ಬ್ಯಾಂಕುಗಳ ವ್ಯವಹಾರದ  ಮೇಲೆ ಪರಿಣಾಮ ಆಗಿದೆ. ಇದೇ ರೀತಿ, ಮಾರುಕಟ್ಟೆ ಶೇರ್‌ ಅನ್ನು ಕ್ರಮೇಣ ಕಳೆದುಕೊಳ್ಳುತ್ತಿರುವಂತೆ ಟೆಲೆಕಾಮ…  ವಲಯದಲ್ಲಿ ಖಾಸಗಿ ತರಂಗಗಳು ಮಿಡಿಯ ತೊಡಗಿದ ಮೇಲೆ ಸಾರ್ವಜನಿಕ ರಂಗದ  ಬಿಎಸ್‌ಎನ್‌ಎಲ…ನ ಟ್ರಿಣ… ಟ್ರಿಣ… ಸದ್ದು ಕಡಿಮೆಯಾಗುತ್ತಾ ಬಂದಿದೆ  ಎನ್ನುವುದು  ರಹಸ್ಯವಲ್ಲ.  ತಮ್ಮ ನವನವೀನ  ಪ್ರಾಡಕ್ಟ್ಗಳು, ಸೇವೆಗಳು ಮತ್ತು ಆವಿಷ್ಕಾರಗಳಿಂದ  ಬಿಎಸ್‌ಎನ್‌ಎಲ್‌ನ ಗ್ರಾಹಕರನ್ನು ಖಾಸಗಿ  ಟೆಲೆಕಾಮ… ಕಂಪನಿಗಳು  ಹಿಂಡು ಹಿಂಡಾಗಿ ಎಳೆಯುತ್ತಿರಲು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬದುಕುಳಿಯಲು, ಬೆಳೆಯಲು innovate, change, modernise or else perish ಎನ್ನುವ ಮಂತ್ರವನ್ನು ಪಠಿಸಬೇಕಿತ್ತು. 

ಬಿಎಸ್‌ಎನ್‌ಎಲ್ನ ಸೇವಾ ವಿಳಂಬ,  ಯೋಜನಾ ಜಾರಿ, ದೂರು ನಿರ್ವಹಣೆಯ ರೀತಿ  ಈ ಸ್ಥಿತಿಗೆ  ಕಾರಣ ಎನ್ನುವ ಆರೋಪದ ಬಗ್ಗೆ ಗಮನ ಹರಿಸಬೇಕು.  ಆದರೆ, ಕೇಂದ್ರ ಸರ್ಕಾರ ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಹಚ್ಚುತ್ತಿದೆ ಅನ್ನೋದು ಕೂಡ ಸುಳ್ಳೇನಲ್ಲ. ಉದಾಹರಣೆಗೆ, ಏರ್‌ ಇಂಡಿಯಾ. ಇದೂ ಕೂಡ ಬಿಎಸ್‌ಎನ್‌ಎಲ್‌ ರೀತಿಯೇ ಸಾರ್ವಜನಿಕ ರಂಗದಲ್ಲಿದೆ. ಅದು ನಷ್ಟ ಅನುಭವಿಸುತ್ತಿರುವುದರಿಂದ ಉಳಿಸಲು  ತೆರಿಗೆದಾರನ ಹಣವನ್ನು  ಧಾರಾಳವಾಗಿ ನೀಡುತ್ತಿರುವ ಕೇಂದ್ರ ಸರ್ಕಾರವು ಬಿಎಸ್‌ಎನ್‌ಎಲ… ವಿಷಯದಲ್ಲಿ ವಿಭಿನ್ನ  ನಿಲುವು ಹೊಂದಿದೆಯಂತೆ. 

ಹೀಗೊಂದಿಷ್ಟು ಅಂತೆ,ಕಂತೆ…

 ಕೇಂದ್ರ ಸರ್ಕಾರ ಬಿಎಸ್‌ಎನ್‌ಎಲ…ಅನ್ನು ಮುಚ್ಚುವುದಿಲ್ಲ. ಅದರ ಬದಲಿಗೆ  ಪುನರುಜ್ಜೀವನಕ್ಕೆ  ಕ್ರಮ ತೆಗೆದು ಕೊಳ್ಳುತ್ತಿದೆ ಎಂದು  ಹೇಳುತ್ತಿದ್ದರೂ ಈ ಹೇಳಿಕೆಯನ್ನು ಜನರ ಅನುಮಾನದಿಂದ ನೋಡುತ್ತಿ¨ªಾರೆ. ಕೆಲ ಮೂಲಗಳ ಪ್ರಕಾರ, ಏರುತ್ತಿರುವ ನಷ್ಟದಿಂದ  ಬಿಎಸ್‌ಎನ್‌ಎಲ… ಉಳಿಸಲು ಸರ್ಕಾರ  ಕೆಲವು ಕ್ರಮಗಳನ್ನು ಸೂಚಿಸಿದ್ದು ಅವು ಹೀಗಿವೆ. 
1)  ಸಂಸ್ಥೆಯನ್ನು ಪೂರ್ಣವಾಗಿ ಮುಚ್ಚುವುದು.
2) ಈ ಸಂಸ್ಥೆಯಿಂದ ಬಂಡವಾಳ ಹಿಂಪಡೆದು ಖಾಸಗಿಯವರಿಗೆ  ನಡೆಸಲು  ಕೊಡುವುದು.
3) ಏರ್‌ ಇಂಡಿಯಾಕ್ಕೆ ನೀಡಿದಂತೆ  ಹಣಕಾಸು  ಸಹಾಯ ಮಾಡಿ ಸಂಸ್ಥೆಗೆ ಆರ್ಥಿಕ ಪುನಶ್ಚೇತನ ನೀಡುವುದು.
4) ನಿವೃತ್ತಿ  ವಯಸ್ಸನ್ನು  60 ರಿಂದ 58 ಕ್ಕೆ ಇಳಿಸಿ,ವಾರ್ಷಿಕ 3000 ಕೋಟಿ ಉಳಿಸುವುದು.
5)  ಈ ಸಂಸ್ಥೆಗೆಹಲವು ಹಳೆಯ ಕಟ್ಟಡಗಳು ಇದ್ದು ಅವುಗಳನ್ನು  ಕಮರ್ಷಿಯಲ… ಆಗಿ ಬಳಸಿಕೊಳ್ಳುವುದು.
6) ಸುಮಾರು 35,000 ಸಿಬ್ಬಂದಿಗಳಿಗೆ  ಸ್ವಯಂ ನಿವೃತ್ತಿ ಯೋಜನೆಯನ್ನು ಜಾರಿಗೊಳಿಸುವುದು.

 ರಮಾನಂದ ಶರ್ಮಾ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.