Udayavni Special

ತೆಂಗಿನ ಮಧ್ಯೆ ಸಪೋಟ ಸಮ್ಮಿಶ್ರ ಆದಾಯ


Team Udayavani, May 28, 2018, 6:00 AM IST

teng.jpg

ತೆಂಗಿನ ಮರಗಳ ನಡುವೆ ಸಪೋಟ ಗಿಡಗಳನ್ನು ಹಾಕಿದರೆ, ಅತಿಯಾಗಿ ಬೀಳುವ ನೆರಳಿನ ಕಾರಣಕ್ಕೆ ಒಳ್ಳೆಯ ಫ‌ಸಲು ಸಿಗುವುದಿಲ್ಲ ಎನ್ನುವವರೇ ಹೆಚ್ಚು. ಅದೆಲ್ಲಾ ಸುಳ್ಳು ಎಂದು ಶಿವಮೊಗ್ಗ ಜಿಲ್ಲೆಯ ರೈತ ಶ್ರೀನಿವಾಸ್‌ ತೋರಿಸಿಕೊಟ್ಟಿದ್ದಾರೆ. ಸಪೋಟ ಬೆಳೆದು ಸಾವಿರಾರು ರೂಪಾಯಿ ಲಾಭಗಳಿಸುತ್ತಿದ್ದಾರೆ. 

ಅಂದುಕೊಂಡಂತೆ ಆಗದೇ ಇದ್ದರೆ ಕೃಷಿ ಬದುಕು ಕಷ್ಟವೇ. ಮಾರುಕಟ್ಟೆಯ ಅತಂತ್ರ ಪರಿಸ್ಥಿತಿಯಿಂದ ಬೆಲೆಗಳ ಏರುಪೇರಾಗುತ್ತದೆ. ಹೀಗಾಗಿ ಬಹುತೇಕ ರೈತರು ಅಂತರಬೇಸಾಯ ಪದ್ಧತಿಗೆ ಮೊರೆ ಹೋಗುತ್ತಾರೆ.  ಒಂದು ಬೆಳೆ ಕೈ ಕೊಟ್ಟರೆ, ಇನ್ನೊಂದರಲ್ಲಿ ಹಣ ತೆಗೆಯಬಹುದು ಅನ್ನೋದು ಅವರ ಲೆಕ್ಕಾಚಾರವಾಗಿರುತ್ತದೆ.

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರಂ ಹೋಬಳಿ ವ್ಯಾಪ್ತಿಯ ಅತ್ಯಂತ ಕುಗ್ರಾಮ ಜಂಬೂರಮನೆ. ಇಲ್ಲಿನ ಯುವ ರೈತ ಶ್ರೀನಿವಾಸ್‌ ಅವರ ಪ್ರಯೋಗಶೀಲತೆ ಎಲ್ಲರ ಗಮನ ಸೆಳೆಯುತ್ತಿದೆ. ಹೊಸೂರು-ಚೆನ್ನಶೆಟ್ಟಿಕೊಪ್ಪ-ಜಂಬೂರಮನೆ-ತ್ಯಾಗರ್ತಿ ಗ್ರಾಮ ಸಂಪರ್ಕಿಸುವ  ರಸ್ತೆಗೆ ಹೊಂದಿಕೊಂಡಂತೆ ಇವರ ಜಮೀನು ಇದೆ.

ಸುಮಾರು 2 ಎಕರೆ ವಿಸ್ತೀರ್ಣದ ಜಮೀನಿನಲ್ಲಿ ತೆಂಗಿನ ಮರ ಬೆಳೆಸಿದ್ದಾರೆ. ಈ ತೆಂಗಿನ ಮರಗಳ ನಡುವೆ ಸಪೋಟ ಹಾಕಿದ್ದರಿಂದ ಈಗ ಅದು ಉತ್ತಮ ಫ‌ಸಲು ನೀಡುತ್ತಿದೆ.  

ಕೃಷಿ ಹೇಗೆ?: ಇವರು ತಮ್ಮ ಮನೆಯ ಮುಂಭಾಗದ ಖುಷ್ಕಿ ಭೂಮಿಯಲ್ಲಿ ತೆಂಗಿನ ತೋಟ ಮಾಡಿದ್ದಾರೆ. ಮರದಿಂದ ಮರಕ್ಕೆ  20 ಅಡಿ ಅಂತರ ಬರುವಂತೆ ಒಟ್ಟು 200 ತೆಂಗಿನ ಸಸಿಗಳನ್ನು ನೆಟ್ಟಿದ್ದಾರೆ. ಈ ಮರಗಳ ನಡುವೆ 10 ಅಡಿ ಅಂತರದಲ್ಲಿ ಒಟ್ಟು 200 ಸಪೋಟ ಮರಗಳಿವೆ. 8 ವರ್ಷ ಪ್ರಾಯದ ಸಪೋಟ ಕ್ರಿಕೆಟ್‌ ಬಾಲ್‌ ಮತ್ತು ಲೋಕಲ್‌ ತಳಿಯ ಮರಗಳು.

ವರ್ಷಕ್ಕೆ ಎರಡು ಸಲ ಸಪೋಟ ಫ‌ಸಲು ಸಿಗುತ್ತದೆ. ಚಿಕ್ಕ, ಉದ್ದನೆಯ ಮತ್ತು ದುಂಡಾಗಿ ದೊಡ್ಡದಾಗಿರುವ…ಹೀಗೆ ಬೇರೆ ಬೇರೆ ಮರಗಳು  ಬಗೆ ಬಗೆಯ ಗಾತ್ರದ ಕಾಯಿ ಬಿಡುತ್ತವೆ. ಮರದ ತರಗೆಲೆ, ಸಗಣಿ ಗೊಬ್ಬರ ಸೇರಿದಂತೆ ಸಂಪೂರ್ಣ ಸಾವಯವ ಗೊಬ್ಬರ ಬಳಸುವ ಕೃಷಿ ಇವರದಾಗಿದ್ದು ತಮ್ಮ ಜಮೀನಿಗೆ ಈವರೆಗೂ ರಾಸಾಯನಿಕ ಗೊಬ್ಬರ ಬಳಸಿಲ್ಲ.

ಲಾಭದ ಲೆಕ್ಕಾಚಾರ: ತೆಂಗಿನ ಮರಗಳ ನಡುವೆ ಬೆಳೆಸಿದ ಸಪೋಟ ಮರಗಳ ಫ‌ಸಲನ್ನು ಸಾಗರದ ಹಣ್ಣಿನ ಅಂಗಡಿಯವರಿಗೆ ಗುತ್ತಿಗೆ ನೀಡುತ್ತಿದ್ದಾರೆ. ಫ‌ಸಲು ಕೀಳುವುದು, ಸಾಗಿಸುವುದು ಹಣ್ಣಿನ ವ್ಯಾಪಾರಿಯ ಜವಾಬ್ದಾರಿ. ಕಿ.ಗ್ರಾಂ. ಒಂದಕ್ಕೆ  ಸರಾಸರಿ ರೂ.5 ರಂತೆ ಮಾರಾಟ ಮಾಡುತ್ತಾರೆ. ಪ್ರತಿ ಮರದಿಂದ ವರ್ಷಕ್ಕೆ ಎರಡು ಬೆಳೆ ಸೇರಿ ಸರಾಸರಿ 40 ರಿಂದ 50 ಕಿ.ಗ್ರಾಂ.ಸಪೋಟ ಫ‌ಸಲು ದೊರೆಯುತ್ತದೆ. ಸಪೋಟ ಹಣ್ಣಿನ ಮಾರಾಟದಿಂದ ವರ್ಷಕ್ಕೆ ಇವರಿಗೆ 1 ಲಕ್ಷದ 20 ಸಾವಿರ ರೂ.ಆದಾಯವಿದೆ.

ಕೃಷಿ ವೆಚ್ಚ ಲೆಕ್ಕ ಹಾಕಿದರೆ ಸುಮಾರು 20 ಸಾವಿರ ಖರ್ಚಾಗುತ್ತದೆ. ಆದರೂ ಒಂದು ಲಕ್ಷ ರೂ.ಲಾಭ ದೊರೆಯುತ್ತದೆ.  ತೆಂಗಿನ ತೋಟದಲ್ಲಿ ಸಪೋಟ ಮರ ಬೆಳೆಸಿದ ಜಮೀನಿನಲ್ಲೇ ಕಳೆದ ವರ್ಷ ಅಂತರ್‌ ಬೆಳೆಯಾಗಿ  12 ಕ್ವಿಂಟಾಲ್‌ ಶುಂಠಿ ಬೀಜ ನಾಟಿ ಮಾಡಿದ್ದರಿಂದ, 250 ಕ್ವಿಂಟಾಲ್‌ ಶುಂಠಿ ಫ‌ಸಲು ದೊರೆತಿತ್ತು. ಕ್ವಿಂಟಾಲ್‌ಗೆ ರೂ.2000 ದಂತೆ ಫೆಬ್ರವರಿಯಲ್ಲಿ ಶುಂಠಿ ಫ‌ಸಲು ಕಿತ್ತು ಮಾರಾಟ ಮಾಡಿದ್ದಾರೆ. ಇದರಿಂದ ಇವರಿಗೆ 3 ಲಕ್ಷರೂ. ಆದಾಯ ಜೇಬು ಸೇರಿದೆ. 

ಅಂತರ ಬೇಸಾಯ ಕೃಷಿ ಪದ್ಧತಿಯಿಂದ ಲಾಭ ಮಾಡುವುದು ಹೇಗೆ ಅನ್ನೋದನ್ನು ಶ್ರೀನಿವಾಸ್‌ ಈ ರೀತಿ ತೋರಿಸಿದ್ದಾರೆ. ಇವರ ಸಾಹಸ ಹಲವು ಮಂದಿಗೆ ಮಾರ್ಗದರ್ಶನವಾಗಲಿ. 

ಮಾಹಿತಿಗೆ-8762241703 

* ಎನ್‌.ಡಿ.ಹೆಗಡೆ ಆನಂದಪುರ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಸರ್ಕಾರದ ವಿರುದ್ಧದ ಪ್ರತಿಪಕ್ಷದ ಅವಿಶ್ವಾಸ ನಿರ್ಣಯ ಪ್ರಸ್ತಾಪ ಧ್ವನಿ ಮತದಿಂದ ತಿರಸ್ಕೃತ

ಸರ್ಕಾರದ ವಿರುದ್ಧದ ಪ್ರತಿಪಕ್ಷದ ಅವಿಶ್ವಾಸ ನಿರ್ಣಯ ಪ್ರಸ್ತಾಪ ಧ್ವನಿ ಮತದಿಂದ ತಿರಸ್ಕೃತ

ಹಾವೇರಿ : ಕೋವಿಡ್ ಸೋಂಕಿಗೆ ಮೂವರು ಸಾವು! 127 ಹೊಸ ಪ್ರಕರಣ ದೃಢ

ಹಾವೇರಿ : ಕೋವಿಡ್ ಸೋಂಕಿಗೆ ಮೂವರು ಸಾವು! 127 ಹೊಸ ಪ್ರಕರಣ ದೃಢ

ಅರಣ್ಯದಲ್ಲಿ ಟ್ರಕ್ಕಿಂಗ್ ಗೆ ತೆರಳಿ ಹಿಂತಿರುವಾಗ ದಾರಿ ತಪ್ಪಿದ ಯುವಕರು! ಸಹಾಯಕ್ಕಾಗಿ ಮೊರೆ

ರಾಯನದುರ್ಗಕ್ಕೆ ಟ್ರಕ್ಕಿಂಗ್ ತೆರಳಿ ಹಿಂತಿರುವಾಗ ದಾರಿ ತಪ್ಪಿದ ಯುವಕರು! ಸಹಾಯಕ್ಕಾಗಿ ಮೊರೆ

ಕೆಕೆಆರ್‌ ಬಿಗಿ ಬೌಲಿಂಗ್‌; 142 ರನ್ ಪೇರಿಸಿದ ಸನ್‌ರೈಸರ್ ಹೈದರಾಬಾದ್

ಕೆಕೆಆರ್‌ ಬಿಗಿ ಬೌಲಿಂಗ್‌; 142 ರನ್ ಪೇರಿಸಿದ ಸನ್‌ರೈಸರ್ ಹೈದರಾಬಾದ್

ಮನೆಯ ಸಂಪುಗಳಿಗೆ ಅಳವಡಿಸಿದ ನೀರಿನ ಪಂಪುಗಳೇ ಈತನ ಟಾರ್ಗೆಟ್!

ಮನೆಯ ಸಂಪುಗಳಿಗೆ ಅಳವಡಿಸಿದ ನೀರಿನ ಪಂಪುಗಳೇ ಈತನ ಟಾರ್ಗೆಟ್!

ಮಂಡ್ಯ: 259 ಮಂದಿಗೆ ಕೋವಿಡ್ ದೃಢ ! 10 ಸಾವಿರ ಗಡಿದಾಟಿದ ಸೋಂಕಿತರ ಸಂಖ್ಯೆ

ಮಂಡ್ಯ: 259 ಮಂದಿಗೆ ಕೋವಿಡ್ ದೃಢ ! 10 ಸಾವಿರ ಗಡಿದಾಟಿದ ಸೋಂಕಿತರ ಸಂಖ್ಯೆ

ICU

20 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ನಾಲಗೆ ಕತ್ತರಿಸಿದ ದುರುಳರು !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೆಸೇಜ್‌ ಮಾಡಿ ಕಾಸು ಕೇಳ್ತಾರೆ, ಹುಷಾರ್‌

ಮೆಸೇಜ್‌ ಮಾಡಿ ಕಾಸು ಕೇಳ್ತಾರೆ, ಹುಷಾರ್‌

ಕುರಿ ಸಾಕಿದರೆ ಕೈತುಂಬಾ ಕಾಂಚಾಣ

ಕುರಿ ಸಾಕಿದರೆ ಕೈತುಂಬಾ ಕಾಂಚಾಣ

isiri-tdy-2

ಆಸೆ ಇರಬೇಕು ನಿಜ, ಅದು ಅತಿಯಾಗಬಾರದು…

isiri-tdy-1

ಸೆಕೆಂಡ್‌ ಹ್ಯಾಂಡ್‌ ವಾಹನಗಳಿಗೆ ಶುಕ್ರದೆಸೆ

isiri-tdy-5

ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಮತ್ತೆ ಬಂತು ವಿಆರ್‌ಎಸ್‌!

MUST WATCH

udayavani youtube

ಕೋವಿಡ್ ‌ನಿಂದ ಶಬರಿಮಲೆಗೂ ಕೋಟಿ ಕೋಟಿ ನಷ್ಟ!

udayavani youtube

A girl sticthes 300 masks for Indian Army Soldiers | Covid Warrior | Udayavani

udayavani youtube

ಪೊಲೀಸರಿಗೆ ಮುಂದೆಯೂ ಸಹಕಾರ ಕೊಡುತ್ತೇನೆ: ನಾಲ್ಕು ಗಂಟೆ ಸಿಸಿಬಿ ವಿಚಾರಣೆ ಎದುರಿಸಿದ ಅನುಶ್ರೀ

udayavani youtube

Padma Shri SPB: A journey of Legendary Singer | S P Balasubrahmanyam

udayavani youtube

ತೋಟದ ನಡುವೆ ಸಾಗುವ ಮಿನಿ ಟಿಪ್ಪರ್ ಆವಿಷ್ಕಾರ ಮಾಡಿದ ಪಾಲ್ತಾಡಿಯ ಯುವಕಹೊಸ ಸೇರ್ಪಡೆ

ಸರ್ಕಾರದ ವಿರುದ್ಧದ ಪ್ರತಿಪಕ್ಷದ ಅವಿಶ್ವಾಸ ನಿರ್ಣಯ ಪ್ರಸ್ತಾಪ ಧ್ವನಿ ಮತದಿಂದ ತಿರಸ್ಕೃತ

ಸರ್ಕಾರದ ವಿರುದ್ಧದ ಪ್ರತಿಪಕ್ಷದ ಅವಿಶ್ವಾಸ ನಿರ್ಣಯ ಪ್ರಸ್ತಾಪ ಧ್ವನಿ ಮತದಿಂದ ತಿರಸ್ಕೃತ

ಟಾಟಾ ಕೋವಿಡ್‌ ಆಸ್ಪತ್ರೆ ತೆರೆಯಲು ಪಿಣರಾಯಿ ಸರಕಾರ ವಿಫಲ: ಕೆ. ಶ್ರೀಕಾಂತ್‌

ಟಾಟಾ ಕೋವಿಡ್‌ ಆಸ್ಪತ್ರೆ ತೆರೆಯಲು ಪಿಣರಾಯಿ ಸರಕಾರ ವಿಫಲ: ಕೆ. ಶ್ರೀಕಾಂತ್‌

ಬದಿಯಡ್ಕ ಮಂಡಲ ಕಾಂಗ್ರೆಸ್‌: ಅಂಚೆ ಕಚೇರಿ ಮುಂಭಾಗ ಧರಣಿ

ಬದಿಯಡ್ಕ ಮಂಡಲ ಕಾಂಗ್ರೆಸ್‌: ಅಂಚೆ ಕಚೇರಿ ಮುಂಭಾಗ ಧರಣಿ

ಹಾವೇರಿ : ಕೋವಿಡ್ ಸೋಂಕಿಗೆ ಮೂವರು ಸಾವು! 127 ಹೊಸ ಪ್ರಕರಣ ದೃಢ

ಹಾವೇರಿ : ಕೋವಿಡ್ ಸೋಂಕಿಗೆ ಮೂವರು ಸಾವು! 127 ಹೊಸ ಪ್ರಕರಣ ದೃಢ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 96 ಮಂದಿಗೆ ಕೋವಿಡ್ ಸೋಂಕು ದೃಢ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 96 ಮಂದಿಗೆ ಕೋವಿಡ್ ಸೋಂಕು ದೃಢ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.