ಮಕ್ಕಳ ಭವಿಷ್ಯ ಬಂಗಾರವಾಗಲಿ!

Team Udayavani, Apr 29, 2019, 5:02 PM IST

ಮಕ್ಕಳ ಭವಿಷ್ಯಕ್ಕಾಗಿ ತಾವು ಯಾವಾಗ ಹೂಡಿಕೆ ಆರಂಭಿಸಬೇಕು ಎಂಬ ಗೊಂದಲದಲ್ಲೇ ಹಲವರು ಬದುಕುತ್ತಿರುತ್ತಾರೆ. ಇನ್ನು ಕೆಲವರು, ಹೂಡಿಕೆಯ ಆಲೋಚನೆಯಲ್ಲಿ ಕಾಲ ಕಳೆಯುತ್ತಿರುತ್ತಾರೆ. ಮತ್ತೂಂದಷ್ಟು ಜನ, ತಡವಾಗಿಯಾದರೂ ಆರಂಭಿಸಿಯೇ ತೀರೋಣ ಎಂಬ ನಿರ್ಧಾರಕ್ಕೆ ಸಾಕಷ್ಟು ನಿಧಾನವಾಗಿಯೇ ಬಂದಿರುತ್ತಾರೆ.

ಮಕ್ಕಳ ಭವಿಷ್ಯದ ಗುರಿಯನ್ನು ಸಾಧಿಸಲು ದೀರ್ಘಾವಧಿ ಹೂಡಿಕೆ ಅತ್ಯವಶ್ಯ. ಹಾಗಿದ್ದರೂ, ಶೇ.35ರಷ್ಟು ಹೆತ್ತವರಿಗೆ ಯಾವ ಮಾಧ್ಯಮದಲ್ಲಿ ದೀರ್ಘಾವಧಿ ಹೂಡಿಕೆ ಮಾಡಬೇಕು ಎಂಬ ಬಗ್ಗೆ ಗೊಂದಲ ಅಥವಾ ತಿಳಿವಳಿಕೆಯ ಕೊರತೆ ಇರುತ್ತದೆ.

ತಮ್ಮ ಮಕ್ಕಳ ಭವಿಷ್ಯಕ್ಕಾಗಿ ತಾವು ಯಾವಾಗ ಹೂಡಿಕೆಯನ್ನು ಆರಂಭಿಸಬೇಕು ಎಂಬ ಗೊಂದಲದಲ್ಲೇ ಕೆಲವರು ಬದುಕುತ್ತಿರುತ್ತಾರೆ. ಇನ್ನು ಹಲವರು ಹೂಡಿಕೆಯ ಆಲೋಚನೆಯಲ್ಲಿ ಕಾಲ ಕಳೆಯುತ್ತಿರುತ್ತಾರೆ. ಮತ್ತೂಂದಷ್ಟು ಜನ, ತಡವಾಗಿಯಾದರೂ ಆರಂಭಿಸಿಯೇ ತೀರೋಣ ಎಂಬ ನಿರ್ಧಾರಕ್ಕೆ ಸಾಕಷ್ಟು ನಿಧಾನವಾಗಿಯೇ ಬಂದಿರುತ್ತಾರೆ.

ಹಾಗಾದರೆ ಇದಕ್ಕೆ ಈ ಯುಲಿಪ್‌ ಯೋಜನೆ ಒಳ್ಳೆಯದೇ, ಸುಕನ್ಯಾ ಸಮೃದ್ಧಿ ಯೋಜನೆ ಆದೀತೇ, ಪಿಪಿಎಫ್ ಆದೀತೇ, ಬ್ಯಾಂಕ್‌ ನಿರಖು ಠೇವಣಿ ಒಳ್ಳೆಯದೇ, ಚಿನ್ನ ಖರೀದಿಸಿಡುವುದು ಬುದ್ಧಿವಂತಿಕೆಯಾದೀತೇ, ರಿಯಲ್ ಎಸ್ಟೇಟ್ (ಭೂ ಹೂಡಿಕೆ) ಉತ್ತಮವಾದೀತೇ ? ಎಂಬ ಪ್ರಶ್ನೆಗಳು ಕಾಡುತ್ತಿರುತ್ತವೆ. ಆದರೆ ಬಹಳಷ್ಟು ಮಂದಿ ತಪ್ಪು ಸಲಹೆಗಳಿಗೆ ಮಾರು ಹೋಗಿ ಕೈ ಸುಟ್ಟುಕೊಳ್ಳುತ್ತಾರೆ.

ಮಕ್ಕಳ ಭವಿಷ್ಯದ ಗುರಿ ಸಾಧನೆಗೆ ಹಣ ಹೂಡಿಕೆ ಆರಂಭಿಸುವ ಮೊದಲು ಸಾಧಿಸಬೇಕಾದ ಗುರಿಯ ಬಗ್ಗೆ ನಿಖರತೆ ಇರುವುದು ಒಳ್ಳೆಯದು. ಹೆತ್ತವರಲ್ಲಿ ಶೇ.35 ಮಂದಿಗೆ ತಮ್ಮ ಮಕ್ಕಳ ಶಿಕ್ಷಣವೇ ತಮ್ಮ ಬದುಕಿನ ಬಲುದೊಡ್ಡ ಸವಾಲಿನ ಪ್ರಶ್ನೆಯಾಗಿರುತ್ತದೆಯಂತೆ. ಮ್ಯೂಚುವಲ್ ಫ‌ಂಡ್‌ನ‌ಲ್ಲಿ ಸಿಸ್ಟಮ್ಯಾಟಿಕ್‌ ಇನ್ವೆಸ್ಟ್‌ಮೆಂಟ್‌ಪ್ಲಾನ್‌( ಸಿಪ್‌) ಮೂಲಕ ಆರಂಭಿಸ­ಲಾಗುವ ಹೂಡಿಕೆ ನಿಯಮಿತವಾಗಿ­ರುತ್ತದೆ ಎಂಬುದು ಖರೆ.

ತಿಂಗಳ ನಿರ್ದಿಷ್ಟ ಕಂತಿನ ಸಿಪ್‌ ಮೂಲಕ ಹಣ ಹೂಡುವ ಸೌಕರ್ಯ ಮ್ಯೂಚುವಲ್ ಫ‌ಂಡ್‌ ಹೂಡಿಕೆಯಲ್ಲಿ ಇರುತ್ತದೆ. ಆದರೆ ನಮ್ಮ ಗುರಿ ಕಿರು ಅವಧಿಯದ್ದೇ, ಮಧ್ಯಮಾ­ವಧಿ­ಯದ್ದೇ ಅಥವಾ ದೀರ್ಘಾವಧಿ­ಯದ್ದೇ ಎಂಬುದನ್ನು ಮೊದಲು ತೀರ್ಮಾನಿಸಬೇಕಿರುತ್ತದೆ.

ಎಂಟರಿಂದ ಹತ್ತು ವರ್ಷಗಳ ದೀರ್ಘಾವಧಿಯ ಗುರಿ ಸಾಧನೆಯ ಉದ್ದೇಶವಿದ್ದರೆ ಈಕ್ವಿಟಿ ಫ‌ಂಡ್‌ ಅಥವಾ ಡೈವರ್ಸಿಫೈಡ್‌ ಈಕ್ವಿಟಿ ಫ‌ಂಡ್‌ಗಳಲ್ಲಿ ಹೂಡಿಕೆ ಆಕರ್ಷಕವಾಗಿರುತ್ತದೆ. ಏಕೆಂದರೆ ಇದರಲ್ಲಿ ಶೇ.12ರ ಗರಿಷ್ಠ ಇಳುವರಿ, ಹೂಡಿಕೆ ರಿಸ್ಕ್ ಎಂಬುದು ನಗಣ್ಯವಾಗಿರುತ್ತದೆ. ಹಾಗಿದ್ದರೂ, ಹೂಡಿಕೆಯ ವಿಷಯದಲ್ಲಿ ಲಾರ್ಜ್‌ ಮತ್ತು ಮಿಡ್‌ ಕ್ಯಾಪ್‌ ಫ‌ಂಡ್‌ಗಳ ಮಿಶ್ರಣವನ್ನು ಆಯ್ಕೆ ಮಾಡುವುದೇ ಲೇಸು.

ಇ.ಎಲ್.ಎಸ್‌.ಎಸ್‌. ಮೂಲಕದ ಹೂಡಿಕೆಯಲ್ಲಿ , ಅಂದರೆ ಈಕ್ವಿಟಿ ಲಿಂಕ್ಡ್ ಸೇವಿಂಗ್‌ ಸ್ಕೀಮ್ ಮೂಲಕದ ಹೂಡಿಕೆಯಲ್ಲಿ ಆದಾಯ ತೆರಿಗೆ ಕಾಯಿದೆಯ ಸೆ.80ಸಿ ಅಡಿ ತೆರಿಗೆ ವಿನಾಯಿತಿ ಇರುತ್ತದೆ ಮತ್ತು ಹೂಡಿಕೆಯ ಲಾಕ್‌ ಇನ್‌ ಪೀರಿಯಡ್‌ ಕೇವಲ ಮೂರು ವರ್ಷಗಳ ಅವಧಿಗಿರುತ್ತದೆ. ಮ್ಯೂಚುವಲ್ ಫ‌ಂಡ್‌ ಹೂಡಿಕೆಯ ಇಳುವರಿಯು ಮಾರುಕಟ್ಟೆಗೆ ಅನುಗುಣವಾಗಿ ಅತ್ಯುತ್ತಮ ಇಳುವರಿಯನ್ನು ಕೊಡುವುದರಿಂದ ಇವು ಆಕರ್ಷಕ ಹೂಡಿಕೆಯ ಮಾಧ್ಯಮಗಳಾಗಿರುತ್ತವೆ.

ಸಾಮಾನ್ಯವಾಗಿ ಮ್ಯೂಚುವಲ್ ಫ‌ಂಡ್‌ಗಳಲ್ಲಿ ಮಕ್ಕಳ ಭವಿಷ್ಯದ ಗುರಿಯನ್ನು ನಿರ್ಧರಿಸಿ ಈ ಕೆಳಗಿನ ರೀತಿಯಲ್ಲಿ ಹೂಡಿಕೆಗೆ ತೊಡಗುವುದು ಸಮಂಜಸವಾಗಿರುತ್ತದೆ: ಲಾಂಗ್‌ ಟರ್ಮ್: ಎಂಟಕ್ಕಿಂತ ಹೆಚ್ಚು ವರ್ಷದ ಅವಧಿ : ಈಕ್ವಿಟಿ ಅಥವಾ ಈಕ್ವಿಟಿ ಓರಿಯೆಂಟೆಡ್‌ ಫ‌ಂಡ್‌, ಇಎಲ್.ಎಸ್‌.ಎಸ್‌. – ಈಕ್ವಿಟಿ : ಶೇ.80-85, ಡೆಟ್ : ಶೇ.15-20. ಮಧ್ಯಮಾವಧಿ: 5ರಿಂದ 7 ವರ್ಷ : ಬ್ಯಾಲೆನ್ಸ್‌ ಅಥವಾ ಹೈಬ್ರಿಡ್‌ ಫ‌ಂಡ್‌ ಹೂಡಿಕೆ ಹಂಚಿಕೆ : ಈಕ್ವಿಟಿ ಶೇ.60-65; ಡೆಟ್‌ : ಶೇ.35-40 ಕಿರು ಅವಧಿ : 2 ರಿಂದ 3 ವರ್ಷ ಅವಧಿ : ಹೂಡಿಕೆ ಹಂಚಿಕೆ : ಈಕ್ವಿಟಿ : ಶೇ.25 ರಿಂದ ಶೇ.30; ಡೆಟ್ : ಶೇ.70-75.

— ಸತೀಶ್‌ ಮಲ್ಯ


ಈ ವಿಭಾಗದಿಂದ ಇನ್ನಷ್ಟು

  • ಮೊದಲ ಅವಧಿಯಲ್ಲಿ ಚಿನ್ನದ ವಹಿವಾಟಲ್ಲಿ ಚೇತರಿಕೆ ಕಂಡಿರುವುದರಿಂದ ಮುಂಬರುವ ಹಬ್ಬ ಹರಿದಿನ, ಮದುವೆ- ಮುಂಜಿಗಳು ಚಿನ್ನದ ಮಾರುಕಟ್ಟೆಯಲ್ಲಿ ಮನ್ವಂತರ ಸೃಷ್ಟಿಸಬಹುದು...

  • ಈ ಡಾಬಾದಲ್ಲಿ ಸಿಗುವ ಶಾವಿಗೆ ಖೀರು ತಿನ್ನುವುದಕ್ಕೆ ಲಾರಿ ಡ್ರೈವರ್‌ಗಳು ಮಾತ್ರವಲ್ಲ, ಲಾರಿಯ ಮಾಲೀಕರು ಕೂಡ ಬರುವುದುಂಟು. ಇನ್ನು, ಇಲ್ಲಿ ಸಿಗುವ ಚಿಕನ್‌, ಮಟನ್‌,...

  • ಜಿಯೋ ನೆಟ್‌ವರ್ಕ್‌ ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ರಿಲಯನ್ಸ್‌ ಕಂಪನಿ ಮಾಡಿದ ಸಾಧನೆ ಎಲ್ಲರಿಗೂ ಗೊತ್ತು. ಇದೀಗ, ಕಿರಾಣಿ ಅಂಗಡಿಯ ವ್ಯವಹಾರದಲ್ಲೂ ಅಧಿಪತ್ಯ...

  • ಇಪ್ಪತ್ತು ವರ್ಷ ಅವಧಿಯ ಜೀವ ವಿಮಾ ಪಾಲಿಸಿಯೊಂದಕ್ಕೆ ಕಂತು ಕಟ್ಟಲು ಆರಂಭಿಸುತ್ತೀರಿ. ಆದರೆ, ನಾಲ್ಕು ವರ್ಷ ಮುಗಿಯುವುದರೊಳಗೆ, ಹಣ ಕಟ್ಟಲು ಸಾಧ್ಯವಿಲ್ಲ ಅನಿಸುತ್ತದೆ....

  • ಒನ್‌ ಪ್ಲಸ್‌ ಕಂಪೆನಿಯ ಅಭಿಮಾನಿಗಳು ಬಹಳ ದಿನಗಳಿಂದ ಕಾಯುತ್ತಿದ್ದ ಒನ್‌ ಪ್ಲಸ್‌ 7 ಮತ್ತು 7 ಪ್ರೊ ಫೋನ್‌ಗಳ ಬಿಡುಗಡೆ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಏರ್ಪಡಿಸಲಾಗಿತ್ತು....

ಹೊಸ ಸೇರ್ಪಡೆ