ಸ್ಮಾರ್ಟ್‌ ಲೈಟ್‌


Team Udayavani, Mar 16, 2020, 5:02 AM IST

smart-gallery

ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ ಟಿ.ವಿ. ಸ್ಮಾರ್ಟ್‌ ಫ್ರಿಜ್‌, ಸ್ಮಾರ್ಟ್‌ ವಾಚ್‌ ಹೀಗೆ ಸ್ಮಾರ್ಟ್‌ ಗ್ಯಾಜೆಟ್‌ಗಳ ಪಟ್ಟಿ ಸಾಗುತ್ತಲೇ ಹೋಗುತ್ತದೆ. ಎಲೆಕ್ಟ್ರಾನಿಕ್‌ ಉಪಕರಣಗಳು “ಸ್ಮಾರ್ಟ್‌’ ಎಂಬ ವಿಶೇಷಣ ಹೊತ್ತುಕೊಂಡೇ ಮಾರುಕಟ್ಟೆಗೆ ಬರುತ್ತಿವೆ. ಒಂದು ಕಂಪನಿ ಸ್ಮಾರ್ಟ್‌ ವಿಶೇಷಣದ ಅಡಿ ಒಂದು ಉತ್ಪನ್ನ ಬಿಡುಗಡೆ ಮಾಡಿದ ಕೂಡಲೆ, ಮಿಕ್ಕ ಸಂಸ್ಥೆಗಳೂ ಅದೇ ರೀತಿಯ ಉತ್ಪನ್ನವನ್ನು ತಯಾರಿಸಿ “ಸ್ಮಾರ್ಟ್‌’ ಎಂಬ ವಿಶೇಷಣದ ಅಡಿಯಲ್ಲೇ ನೀಡದೆ ಬೇರೆ ದಾರಿಯಿಲ್ಲ ಎನ್ನುವ ಪರಿಸ್ಥಿತಿ ಇದೆ. ಇಂದಿನ ದಿನದಲ್ಲಿ ಜನಪ್ರಿಯಗೊಳ್ಳುತ್ತಿರುವ ಮತ್ತೂಂದು ಸ್ಮಾರ್ಟ್‌ ಉಪಕರಣ “ಸ್ಮಾರ್ಟ್‌ ಬಲ್ಬ್’. ಸಾಂಪ್ರದಾಯಿಕ ಬಲ್ಬ್ಗಳನ್ನು ನಿಯಂತ್ರಿಸಲು ಗೋಡೆ ಮೇಲೆ ಸ್ವಿಚ್‌ ಅಳವಡಿಸಿರಲಾಗುತ್ತದೆ. ಅದನ್ನು ಒತ್ತುವ ಮೂಲಕ ಬಳಕೆದಾರ ಬಲ್ಬ್ಅನ್ನು ಉರಿಸುತ್ತಿದ್ದೆವು ಮತ್ತು ಆರಿಸುತ್ತಿದ್ದೆವು. ಇದೀಗ ಸ್ಮಾರ್ಟ್‌ ಬಲ್ಬ್ಅನ್ನು ಸ್ಮಾರ್ಟ್‌ಫೋನ್‌ ಬಳಸಿಯೇ ನಿಯಂತ್ರಿಸಬಹುದಾಗಿದೆ. ಮನೆಯ ಹೊರಗಡೆ ಇದ್ದರೂ ಫೋನ್‌ ಬಳಸಿ ಮನೆಯೊಳಗಿನ ಲೈಟನ್ನು ಆರಿಸಬಹುದಾಗಿದೆ.

ಅವುಗಳ ಉಪಯೋಗವೇನು?
ಸುಲಭ ನಿಯಂತ್ರಣ- ಸ್ಮಾರ್ಟ್‌ಫೋನಿನಲ್ಲಿ ಆಯಾ ಬಲ್ಬ್ ತಯಾರಕ ಸಂಸ್ಥೆಯ ಆ್ಯಪ್‌ ಇನ್‌ಸ್ಟಾಲ್‌ ಮಾಡಿಕೊಳ್ಳಬೇಕು. ನಂತರ ತಾವು ಎಲ್ಲಿದ್ದರೂ ಮನೆಯ ಬಲ್ಬನ್ನು ನಿಯಂತ್ರಿಸಬಹುದು. ಓಡಾಡಲು ಕಷ್ಟ ಪಡುವ ವೃದ್ಧರು ಅಥವಾ ರೋಗಿಗಳು ಮನೆಯಲ್ಲಿದ್ದರೆ, ಅವರಿಗೆ ಕುಳಿತಲ್ಲಿಂದಲೇ ಲೈಟ್‌ ಉರಿಸಲು/ ಆರಿಸಲು ಇದು ತುಂಬಾ ಸಹಾಯಕ.

ಮಲ್ಟಿ ಕಲರ್‌
ಸ್ಮಾರ್ಟ್‌ ಬಲ್ಬ್ಗಳಲ್ಲಿ ಒಂದೇ ಬಣ್ಣದ್ದು ಮತ್ತು ಹಲವು ಬಣ್ಣಗಳ ಬೆಳಕನ್ನು ಹೊರಸೂಸಬಲ್ಲ ಸಾಮರ್ಥ್ಯ ಇರುವ ಬಲ್ಬ್ಗಳೂ ಇವೆ. ಮಲ್ಟಿ ಕಲರ್‌ ಬಲ್ಬ್ಗಳಿಗೆ ಬೆಲೆ ಕೊಂಚ ದುಬಾರಿ ಮಲ್ಟಿ ಕಲರ್‌ ಬಲ್ಬ್ಗಳಿಂದ ತಮಗೆ ಬೇಕೆಂದ ಬಣ್ಣವನ್ನು ಬಳಕೆದಾರ ಆರಿಸಿಕೊಳ್ಳಬಹುದು.

ಆಟೋಮ್ಯಾಟಿಕ್‌ ಅಡ್ಜಸ್ಟ್‌ಮೆಂಟ್‌
ಇನ್ನು ಕೆಲ ಬಲ್ಬ್ಗಳು ಬೆಳಗ್ಗೆ ಮತ್ತು ರಾತ್ರಿಯ ವೇಳೆ ತನ್ನಷ್ಟಕ್ಕೇ ಪ್ರಕಾಶವನ್ನು ಹೊಂದಿಸಿಕೊಳ್ಳುತ್ತವೆ. ಬಳಕೆದಾರನ ಕಣ್ಣುಗಳಿಗೆ ತ್ರಾಸವಾಗದಿರಲಿ ಎಂಬ ಕಾರಣಕ್ಕೆ.

ಅಲೆಕ್ಸಾ ಸಂಪರ್ಕ
ಲೈಟ್‌ ಸ್ವಿಚ್‌ ಆನ್‌- ಆಫ್ ಮಾಡುವುದು ಮಾತ್ರವಲ್ಲ, ಬಲ್ಬ್ ಎಷ್ಟು ಪ್ರಮಾಣದ ಬೆಳಕನ್ನು(ತೀವ್ರತೆ) ಬೀರಬೇಕು ಎನ್ನುವುದನ್ನೂ ನಿಯಂತ್ರಿಸಬಹುದಾಗಿದೆ. ಬಳಕೆದಾರರಿಗೆ ಬೇಕೆಂದಾಗ ಮಂದ ಅಥವಾ ಪ್ರಕಾಶಮಾನ ಬೆಳಕನ್ನು ಪಡೆಯಬಹುದಾಗಿದೆ. ಅಲ್ಲದೆ 10 ಲಕ್ಷಕ್ಕೂ ಅಧಿಕ ಶೇಡ್‌ಗಳ ಆಯ್ಕೆಯನ್ನು ಬಳಕೆದಾರರು ಮಾಡಿಕೊಳ್ಳಬಹುದಾಗಿದೆ. ಈ ಬಲ್ಬನ್ನು ಟಾಕ್‌ ಅಸಿಸ್ಟೆಂಟ್‌ಗಳಾದ, ಅಮೆಝಾನ್‌ನ ಅಲೆಕ್ಸಾ, ಗೂಗಲ್‌ ಅಸಿಸ್ಟೆಂಟ್‌ ಜೊತೆ ಸಂಪರ್ಕ ಕಲ್ಪಿಸಬಹುದಾಗಿದೆ. ಅದರಿಂದ ಬಳಕೆದಾರ ತನ್ನ ಸ್ಮಾರ್ಟ್‌ಫೋನ್‌ನಲ್ಲಿ ಬಲ್ಬ್ನ ಆ್ಯಪ್‌ ತೆರೆದು ಬಟನ್‌ ಒತ್ತಬೇಕಿಲ್ಲ. ಅಲೆಕ್ಸಾಗೆ ಧ್ವನಿ ಮುಖೇನ ಸೂಚನೆ ನೀಡಿದರಾಯಿತು. ಮಾರುಕಟ್ಟೆಯಲ್ಲಿ ಫಿಲಿಪ್ಸ್‌, ವಿಪ್ರೊ, ಸಿಸ್ಕಾ, ಶಿಯೋಮಿ ಮತ್ತಿತರ ಕಂಪನಿಗಳು ಸ್ಮಾರ್ಟ್‌ ಬಲ್ಬ್ ಗಳನ್ನು ನೋಡಬಹುದಾಗಿದೆ.

ಟಾಪ್ ನ್ಯೂಸ್

NEET ಬೃಹತ್‌ ಹಗರಣ: ವಿಪಕ್ಷ ಆಕ್ರೋಶ ತೀವ್ರ

NEET ಬೃಹತ್‌ ಹಗರಣ: ವಿಪಕ್ಷ ಆಕ್ರೋಶ ತೀವ್ರ

1-24–monday

Daily Horoscope: ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳಿಂದ ತೊಂದರೆ, ಉದ್ಯಮದಲ್ಲಿ ಪ್ರಗತಿ

Renuka Swamy Case;ಸ್ಥಳ ಮಹಜರು ವೇಳೆ ಮುಗುಳು ನಕ್ಕ ಪವಿತ್ರಾ ಗೌಡ

Renuka Swamy Case;ಸ್ಥಳ ಮಹಜರು ವೇಳೆ ಮುಗುಳು ನಕ್ಕ ಪವಿತ್ರಾ ಗೌಡ

Monsoon ಮಳೆ ಅಧಿಕ ಸರಿದ ಬರದ ಕಾರ್ಮೋಡ

Monsoon ಮಳೆ ಅಧಿಕ ಸರಿದ ಬರದ ಕಾರ್ಮೋಡ

Government ಪೊಲೀಸ್‌ ವರ್ಗ: ಹೊಸ ನೀತಿ ಶೀಘ್ರ?

Government ಪೊಲೀಸ್‌ ವರ್ಗ: ಹೊಸ ನೀತಿ ಶೀಘ್ರ?

PM Vishwakarma Yojana: ಉಭಯ ಜಿಲ್ಲೆಗಳಲ್ಲಿ ನಿರೀಕ್ಷಿತ ನೋಂದಣಿ ಆಗಿಲ್ಲ

PM Vishwakarma Yojana: ಉಭಯ ಜಿಲ್ಲೆಗಳಲ್ಲಿ ನಿರೀಕ್ಷಿತ ನೋಂದಣಿ ಆಗಿಲ್ಲ

ರೇಣುಕಾಸ್ವಾಮಿಗೆ ಕರೆಂಟ್‌ ಶಾಕ್‌ ಕೊಟ್ಟಿದ್ದ ಮೆಗ್ಗರ್‌ಗೆ ತಲಾಶ್‌!

ರೇಣುಕಾಸ್ವಾಮಿಗೆ ಕರೆಂಟ್‌ ಶಾಕ್‌ ಕೊಟ್ಟಿದ್ದ ಮೆಗ್ಗರ್‌ಗೆ ತಲಾಶ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಕೆ‌ಎಸ್‌ಆರ್‌ಟಿಸಿ‌ ಬಸ್- ಬೈಕ್ ಮುಖಾಮುಖಿ ಢಿಕ್ಕಿ ; ಸವಾರ ಮೃತ್ಯು

udayavani youtube

ಇಡ್ಲಿ, ವಡೆ, ಚಟ್ನಿ ಗೆ ತುಂಬಾ ಫೇಮಸ್ ಈ ಹೋಟೆಲ್

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಹೊಸ ಸೇರ್ಪಡೆ

NEET ಬೃಹತ್‌ ಹಗರಣ: ವಿಪಕ್ಷ ಆಕ್ರೋಶ ತೀವ್ರ

NEET ಬೃಹತ್‌ ಹಗರಣ: ವಿಪಕ್ಷ ಆಕ್ರೋಶ ತೀವ್ರ

1-24–monday

Daily Horoscope: ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳಿಂದ ತೊಂದರೆ, ಉದ್ಯಮದಲ್ಲಿ ಪ್ರಗತಿ

Renuka Swamy Case;ಸ್ಥಳ ಮಹಜರು ವೇಳೆ ಮುಗುಳು ನಕ್ಕ ಪವಿತ್ರಾ ಗೌಡ

Renuka Swamy Case;ಸ್ಥಳ ಮಹಜರು ವೇಳೆ ಮುಗುಳು ನಕ್ಕ ಪವಿತ್ರಾ ಗೌಡ

Monsoon ಮಳೆ ಅಧಿಕ ಸರಿದ ಬರದ ಕಾರ್ಮೋಡ

Monsoon ಮಳೆ ಅಧಿಕ ಸರಿದ ಬರದ ಕಾರ್ಮೋಡ

Government ಪೊಲೀಸ್‌ ವರ್ಗ: ಹೊಸ ನೀತಿ ಶೀಘ್ರ?

Government ಪೊಲೀಸ್‌ ವರ್ಗ: ಹೊಸ ನೀತಿ ಶೀಘ್ರ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.