ಸೋಲಾರ್‌ ಕೀಟನಾಶಕ

ರಾಸಾಯನಿಕ ಮುಕ್ತ ಕೃಷಿಗಾಗಿ!

Team Udayavani, Jul 15, 2019, 5:34 AM IST

as

ಸೂರ್ಯನ ಬಳಸಿ ಬೆಳಕು ಪಡೆಯುವುದನ್ನು, ನೀರಿ ಬಿಸಿ ಮಾಡುವುದನ್ನು, ಆಹಾರ ತಯಾರಿಯಲ್ಲಿ ತೊಡಗುವುದನ್ನು ನೋಡಿರುತ್ತೀರಿ. ಇದೀಗ ಕೀಟನಾಶಕವಾಗಿಯೂ ಸೋಲಾರ್‌ ಶಕ್ತಿಯನ್ನು ಬಳಸಬಹುದು ಎಂದು ತೋರಿಸಿಕೊಟ್ಟಿದೆ ಈ ಯಂತ್ರ!

ರೈತರು ಹತ್ತಾರು ಸಮಸ್ಯೆಗಳನ್ನು ಎದುರಿಸಿಕೊಂಡು ಕಷ್ಟಪಟ್ಟು ಬೆಳೆ ಬೆಳೆಯುತ್ತಾರೆ. ಅಲ್ಲಿಯ ತನಕದ ಸಮಸ್ಯೆಗಳದು ಒಂದು ಪಟ್ಟಿಯಾದರೆ. ಬೆಳೆ ಬಂದ ನಂತರ ಅದನ್ನು ಕಾಪಾಡಿಕೊಳ್ಳುವುದು ಮತ್ತೂಂದು ಸಾಹಸ. ಅನೇಕಾನೇಕ ಕೀಟಗಳು ಹುಟ್ಟಿಕೊಂಡು ಬೆಳೆಗಳೆಲ್ಲವೂ ಹೆಚ್ಚಾಗಿ ರೋಗಭಾದೆಗೆ ತುತ್ತಾಗಿ ನಾಶವಾಗುತ್ತಿವೆ. ಅದರ ನಿವಾರಣೆಗಾಗಿ ಕೀಟ ನಾಶಕಗಳ ಮೊರೆ ಹೋಗಿ ಅದಕ್ಕೊಂದಿಷ್ಟು ಖರ್ಚು ಮಾಡಬೇಕಾಗುತ್ತದೆ. ರಾಸಾಯನಿಕ ಕೀಟನಾಶಕಗಳ ಬಳಕೆಯಿಂದ ಆಹಾರ ವಿಷಪೂರಿತಗೊಳ್ಳುವುದಲ್ಲದೆ, ಕೃಷಿ ಭೂಮಿಯು ತನ್ನ ಸತ್ವವನ್ನು ಕಳೆದುಕೊಳ್ಳುವ ಅಪಾಯವೂ ಇರುತ್ತದೆ.


ಇದಕ್ಕೆಲ್ಲಾ ಪರಿಹಾರ ಒದಗಿಸುವ ಸಲುವಾಗಿ ಹೊಸದೊಂದು ಕೀಟನಾಶಕ ಉತ್ಪನ್ನವೊಂದನ್ನು ಅಭಿವೃದ್ಧಿಪಡಿಸಲಾಗಿದೆ. ಅದುವೇ ಸೋಲಾರ್‌ ಕೀಟನಾಶಕ! ಇದನ್ನು SOLAR INSECTS TRAP ಎಂದೂ ಕರೆಯಬಹುದು.

ಹೇಗೆ ಕೆಲಸ ಮಾಡುತ್ತೆ?
ರಾಸಾಯನಿಕ ವಸ್ತುಗಳನ್ನು ಒಳಗೊಳ್ಳದೆ, ಕೇವಲ ಸೂರ್ಯನ ಬೆಳಕಿನ ಶಕ್ತಿಯನ್ನು ಬಳಸಿಕೊಂಡು ಈ ವ್ಯವಸ್ಥೆ ಕಾರ್ಯಾಚರಿಸುತ್ತದೆ. ಸಂಶೋಧನೆ, ಅಧ್ಯಯನಕ್ಕೆ ಒಳಪಟ್ಟಿರುವ ಈ ಯಂತ್ರವನ್ನು ಈಗಾಗಲೇ ಅನೇಕ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಪರೀಕ್ಷೆಗೊಳಪಡಿಸಲಾಗಿದೆ. ಅಲ್ಲದೆ ಕೃಷಿ ವಿಜ್ಞಾನಿಗಳಿಂದಲೂ ಇದರ ಕಾರ್ಯಕ್ಷಮತೆಯನ್ನು ಖಾತರಿ ಪಡಿಸಿಕೊಳ್ಳಲಾಗಿದೆ. ರೈತರಿಗೆ ಕೈಗೆಟುಕುವ ದರವನ್ನು ನಿಗದಿಪಡಿಸಲಾಗಿದೆ.

ಮನೆಗಳಲ್ಲಿ ಹುಳ ಹುಪ್ಪಟೆಗಳನ್ನು ಆಕರ್ಷಿಸುವ ಬಲ್ಬ್ ಉರಿಸುವುದನ್ನು ನೀವು ನೋಡಿರಬಹುದು. ಆ ಬಲ್ಬಿನ ಸುತ್ತಲೂ ವಿದ್ಯುತ್‌ ಹರಿಬಿಟ್ಟ ಕಂಬಿಗಳಿರುತ್ತವೆ. ಬೆಳಕಿಗೆ ಆಕರ್ಷಿತಗೊಳ್ಳುವ ಹುಳ ಹುಪ್ಪಟೆಗಳು ಈ ಕಂಬಿಗಳಿಗೆ ತಗುಲಿ ಮರಣವನ್ನಪುತ್ತವೆ. ಅದೇ ರೀತಿಯ ತಂತ್ರಜ್ಞಾನ ಈ ಸೋಲಾರ್‌ ಕೀಟನಾಶಕದ್ದು. ಇಲ್ಲಿ ಅಳವಡಿಸಲಾಗಿರುವ ಬಲ್ಬ್ ಸೂರ್ಯನ ಶಕ್ತಿಯಿಂದ ಚಾಲೂ ಆಗುತ್ತದೆ.

ತನ್ನಷ್ಟಕ್ಕೆ ಆನ್‌ ಆಗುತ್ತದೆ
ಈ ಯಂತ್ರದಲ್ಲಿ ಕೀಟಗಳನ್ನು ಆಕರ್ಷಿಸುವಂಥ ವಿಶೇಷ ತಂತ್ರಜ್ಞಾನವನ್ನು ಒಳಗೊಂಡಂತಹ ಬೆಳಕು ಬಲ್ಬ್ಅನ್ನು ಅಭಿವೃದ್ಧಿಪಡಿಸಿದ್ದು , ಅದರಿಂದ ಹೊಮ್ಮುವ ಬೆಳಕಿಗೆ ಆಕರ್ಷಿತಗೊಳ್ಳುವ ಕೀಟಗಳು ಬಳಿ ಬಂದು ಕೆಳಗಿಟ್ಟಿರುವ ಬುಟ್ಟಿಯಲ್ಲಿನ ನೀರಿನನಲ್ಲಿ ಬಿದ್ದು ಸಾಯುವವು. ಬಲ್ಬ್ ತನ್ನಷ್ಟಕ್ಕೆ ತಾನೇ ಆನ್‌ ಆಗುತ್ತವೆ, ಮತ್ತು ತನ್ನಷ್ಟಕ್ಕೆ ತಾನೇ ಆಫ್ ಕೂಡಾ ಆಗುತ್ತದೆ. ಸಾಮಾನ್ಯವಾಗಿ ಸಂಜೆ 7ಕ್ಕೆ ಆನ್‌ ಆಗಿ ರಾತ್ರಿ 10ಕ್ಕೆ ಆಫ್ ಆಗುತ್ತದೆ.

– ಬೆಳೆಗಳ ಎತ್ತರಕ್ಕನುಗುಣವಾಗಿ 1.5 ಎಕರೆಯಿಂದ 2 ಎಕರೆ ವಿಸ್ತೀರ್ಣದ ತನಕದ ಕೀಟಗಳನ್ನು ಆಕರ್ಷಿಸಬಲ್ಲದು
– ಹಣ್ಣು, ತರಕಾರಿ, ತೋಟಗಾರಿಕೆ, ಅರಣ್ಯ ಬೆಳೆಗಳಂಥವಕ್ಕೆಲ್ಲಾ ಇದನ್ನು ಬಳಸಬಹುದು
– ಸೈನಿಕ ಹುಳು, ರಸ ಹೀರುವ ಕೀಟ, ಕಾಯಿ ಕೊರಕ, ಕಾಂಡ ಕೊರಕ, ಬೇರು ಹುಳ, ಥ್ರಿಪ್ಸ್‌, ಎಲೆ ತಿನ್ನುವ ಕೀಟ, ಧ್ವಮರಿ, ಲೀಫ್ ಮೈನರ್ಸ್‌, ಮಾತ್‌, ಮುಂತಾದವನ್ನು ಬಲಿ ಪಡೆಯಬಲ್ಲುದು
-3ರಿಂದ 5 ವರ್ಷ ಯಂತ್ರದ ವಾರೆಂಟಿ

ಉಪಯೋಗಗಳು
ಕೃಷಿ ಭೂಮಿಯ ಮಣ್ಣು ಮಲಿನಗೊಳ್ಳುವುದು ತಪ್ಪುತ್ತದೆ
ಆಹಾರ ಕಲುಷಿತಗೊಳ್ಳುವುದನ್ನು ತಡೆಗಟ್ಟಬಹುದು
ರೈತರಿಗೆ 80% ರಿಂದ 95% ವರೆಗೂ ರಾಸಾಯನಿಕ ಕೀಟನಾಶಕಗಳ ಖರ್ಚು ಉಳಿಯುವುದು

ವಿ.ಸೂ- ಈ ವ್ಯವಸ್ಥೆ ಹಾರಾಡುವ ಕೀಟಗಳಿಗೆ ಮಾತ್ರ ರಾಮಬಾಣವಾಗಬಲ್ಲುದು. ಓಡಾಡುವ ಕೀಟಗಳು ನಾಶವಾಗುವುದಿಲ್ಲ, ಆದರೆ ಮುಖ್ಯವಾಗಿ ತಿಳಿಯಬೇಕಾಗಿರುವ ವಿಷಯವೇನೆಂದರೆ, ಓಡಾಡುವ ಕೀಟಗಳು ಜನಿಸುವುದು ಹಾರಾಡುವ ಕೀಟಗಳ ಮೊಟ್ಟೆಗಳಿಂದ! ಆದ್ದರಿಂದ ಪರೋಕ್ಷವಾಗಿ ಓಡಾಡುವ ಕೀಟಗಳ ನಿಯಂತ್ರಣವನ್ನು ಮಾಡುತ್ತದೆ ಎನ್ನಬಹುದು.

-ನಾಗರಾಜ್‌

ಟಾಪ್ ನ್ಯೂಸ್

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.