ಕುಕ್ಕೆ ಇಡ್ಲಿ ತಿನ್ಬೇಕಾ? ಬನ್ನಿ ಹಲಗೂರಿಗೆ…


Team Udayavani, Sep 16, 2019, 5:00 AM IST

a1

ಪುಟ್ಟು ಇಡ್ಲಿ, ತಟ್ಟೆ ಇಡ್ಲಿ, ಮಲ್ಲಿಗೆ, ರವೆ ಇಡ್ಲಿ, ತುಪ್ಪದ ಇಡ್ಲಿ ಹೀಗೆ… ತರಹೇವಾರಿ ಇಡ್ಲಿ ರಾಜ್ಯದ ವಿವಿಧ ವಿವಿಧ ಹೋಟೆಲ್‌ಗ‌ಳಲ್ಲಿ ಸಿಗುತ್ತದೆ. ಆದರೆ, ಕುಕ್ಕೆ ಅಥವಾ ಚಿಬ್ಲು ಇಡ್ಲಿ ಸಿಗುವುದು ಮೈಸೂರು ಭಾಗದಲ್ಲಿ ಮಾತ್ರ. ಇಲ್ಲಿಯೂ ಈ ಚಿಬ್ಲು ಇಡ್ಲಿ ಮಾಡುವ ಹೋಟೆಲ್‌ಗ‌ಳು ವಿರಳವಾದ್ರೂ, ಹಳೇ ಹೋಟೆಲ್‌ಗ‌ಳಲ್ಲಿ ಈಗಲೂ ಸಿಗುತ್ತದೆ. ಅಂತಹ ಹೋಟೆಲ್‌ ಒಂದು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಗ್ರಾಮದಲ್ಲಿದೆ.

ಯಾವುದೇ ನಾಮಫ‌ಲಕವಿಲ್ಲದೆ, ಶೆಡ್‌ನ‌ಲ್ಲಿ 50 ವರ್ಷಗಳ ಹಿಂದೆ ಶಿವಣ್ಣ ಎಂಬಾತ ಈ ಹೋಟೆಲ್‌ ಪ್ರಾರಂಭ ಮಾಡಿದ್ದರು. ಅವರ ನಂತರ, ಶಿವಣ್ಣನ ಮಗ ವೀರಭದ್ರಸ್ವಾಮಿ ಈ ಹೋಟೆಲ್‌ ಮುನ್ನಡೆಸಿದರು. ಈಗ ಇವರ ಪುತ್ರರಾದ ಭಕ್ತ ವತ್ಸಲ(ಬಾಬು), ಮಹದೇವಸ್ವಾಮಿ (ದೀಪು) ಹೋಟೆಲ್‌ ನೋಡಿಕೊಳ್ಳುತ್ತಿದ್ದಾರೆ. ಭಕ್ತ ವತ್ಸಲ ಹೋಟೆಲ್‌ ಜೊತೆಗೆ ಕನ್ನಡ ಸಾಹಿತ್ಯ ಕೆಲಸದಲ್ಲೂ ತೊಡಗಿಸಿಕೊಂಡಿದ್ದು, ಕಸಾಪ ಹಲಗೂರು ಹೋಬಳಿ ಘಟಕದ ಕಾರ್ಯಾಧ್ಯಕ್ಷರೂ ಆಗಿದ್ದಾರೆ.


ಕುಕ್ಕೆ(ಚಿಬ್ಲು ) ಇಡ್ಲಿ ಫೇಮಸ್ಸು:

ಸಾಮಾನ್ಯವಾಗಿ ಇಡ್ಲಿಗೆ ಬಳಸುವ ಪದಾರ್ಥಗಳನ್ನು ಕುಕ್ಕೆ ಇಡ್ಲಿಗೂ ಹಾಕಲಾಗುತ್ತದೆ. ಆದರೆ, ಇಲ್ಲಿ ಕುಚಲಕ್ಕಿ ಬಿಟ್ರೆ ಬೇರೆ ಬಳಸುವುದಿಲ್ಲ. ಕಟ್ಟಿಗೆ ಒಲೆಯಲ್ಲೇ ಅಡುಗೆ ಮಾಡಲಾಗುತ್ತದೆ. ಇದರಿಂದ ತಿಂಡಿ ತುಂಬಾ ರುಚಿಕರವಾಗಿರುತ್ತದೆ. ಈ ಕುಕ್ಕೆ ಇಡ್ಲಿಯನ್ನು ದೊಡ್ಡದಾದ ಇಡ್ಲಿ ಪಾತ್ರೆಯಲ್ಲಿ ಸ್ವಲ್ಪ ನೀರುಹಾಕಿ, ಬಿದುರಿನ ಬಿಬ್ಲು (ಕುಕ್ಕೆ)ಗಳ ಮೇಲೆ ಬಟ್ಟೆ ಹಾಸಿ, ಉದ್ದಿನ ಬೇಳೆ ಮುಂತಾದ ಪದಾರ್ಥಗಳನ್ನು ಬೆರೆಸಿ ರುಬ್ಬಿಕೊಂಡ ಅಕ್ಕಿಯ ಹಿಟ್ಟನ್ನು ಹಾಕಲಾಗುತ್ತದೆ. ನಂತರ ಒಂದೊಂದನ್ನೇ ಇಡ್ಲಿ ಪಾತ್ರೆಯೊಳಗೆ ಜೋಡಿಸಿ, ಮುಚ್ಚಳ ಮುಚ್ಚಿ 15 ರಿಂದ 20 ನಿಮಿಷ ಬೇಯಿಸಿದ್ರೆ ರುಚಿಕರವಾದ ಚಿಬ್ಲು ಇಡ್ಲಿ ರೆಡಿಯಾಗುತ್ತದೆ.

ಅಡುಗೆ ಉಸ್ತುವಾರಿ ತಾಯಿಯದ್ದೇ:
ಹೋಟೆಲ್‌ ಉಸ್ತುವಾರಿ ಮಕ್ಕಳದ್ದೇ ಆದ್ರೂ, ಅಡುಗೆ ಮಾತ್ರ ಜಗದಾಂಬ ಅವರಿಂದಲೇ ತಯಾರಾಗುತ್ತೆ. ಚಟ್ನಿ, ಪಲ್ಯ, ಚಿತ್ರಾನ್ನವನ್ನು ಮನೆಯಲ್ಲೇ ಜಗದಾಂಬ ಸಿದ್ಧ ಮಾಡಿಕೊಡುತ್ತಾರೆ. ಹೋಟೆಲ್‌ ಕೆಲಸಕ್ಕೆ ಯಾವುದೇ ಆಳು ಕಾಳು ಇಲ್ಲ. ಎಲ್ಲವನ್ನೂ ಮನೆಯವರೇ ಮಾಡಿಕೊಳ್ಳುತ್ತಾರೆ. ಪ್ರತಿದಿನ ನಿಗದಿತ ತಿಂಡಿಯನ್ನಷ್ಟೇ ಮಾಡ್ತಾರೆ. ಒಮ್ಮೆ ಖಾಲಿಯಾದ್ರೆ ಹೊಸದಾಗಿ ಮಾಡುವುದಿಲ್ಲ.


ಡಾ.ರಾಜ್‌ ಕುಟುಂಬದ ಫೇವರೇಟ್‌ ಹೋಟೆಲ್‌:

ವರನಟ ಡಾ.ರಾಜ್‌ಕುಮಾರ್‌, ಹಲಗೂರಿನಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಬಂದಾಗ ವೀರಭದ್ರೇಶ್ವರ ಭವನಕ್ಕೆ ಬಂದು ಚಿಬುÉ ಇಡ್ಲಿ ರುಚಿ ನೋಡದೇ ಹೋಗುತ್ತಿರಲಿಲ್ಲ. ಇತ್ತೀಚೆಗೆ ನಟ ಶಿವರಾಜ್‌ಕುಮಾರ್‌, ಚಿ.ಗುರುದತ್‌, ನಿರ್ಮಾಪಕ ಶ್ರೀಕಾಂತ್‌ ಕೂಡ ಈ ಹೋಟೆಲ್‌ಗೆ ಭೇಟಿ ನೀಡಿ ಕುಕ್ಕೆ ಇಡ್ಲಿ, ಬೆಣ್ಣೆ ದೋಸೆ ರುಚಿ ನೋಡಿದ್ದರು.

ಹೋಟೆಲ್‌ ಸಮಯ:
ಬೆಳಗ್ಗೆ 7ರಿಂದ 11 ಗಂಟೆಯವರೆಗೆ ಮಾತ್ರ. ವಾರದ ರಜೆ ಇಲ್ಲ.

ಹೋಟೆಲ್‌ ವಿಳಾಸ:
ಕನಕಪುರ ಮುಖ್ಯ ರಸ್ತೆ, ಸ್ಕೂಲ್‌ ಕಾಂಪೌಂಡ್‌ ಪಕ್ಕ, ಹಲಗೂರು ಗ್ರಾಮ. ಹೋಟೆಲ್‌ಗೆ ನಾಮಫ‌ಲಕವಿಲ್ಲದ ಕಾರಣ, ವೀರಭದ್ರೇಶ್ವರ ಭವನ ಅಥವಾ ಬಾಬು ಹೋಟೆಲ್‌ ಅಂದ್ರೆ ತೋರಿಸುತ್ತಾರೆ.

ತಿಂಡಿ ಮಾತ್ರ:
ಚಿಬ್ಲು (ಕುಕ್ಕೆ) ಇಡ್ಲಿ, ಬೆಣ್ಣೆ ದೋಸೆ, ಸೆಟ್‌ ದೋಸೆ, ಮಸಾಲೆ ದೋಸೆ, ಚಿತ್ರಾನ್ನ ಹೀಗೆ… ಕೆಲವು ತಿಂಡಿ ಮಾತ್ರ ಹೋಟೆಲ್‌ನಲ್ಲಿ ಸಿಗುತ್ತದೆ. ಇಡ್ಲಿ ಒಂದಕ್ಕೆ 8 ರೂ., ದೋಸೆ 5 ರೂ., ಚಿತ್ರಾನ್ನ (ಒಂದು ಪ್ಲೇಟ್‌)20 ರೂ. ಜೊತೆಗೆ ಚಟ್ನಿ, ಈರುಳ್ಳಿ ಫ‌ಲ್ಯ, ಬೆಣ್ಣೆ ಕೊಡಲಾಗುತ್ತದೆ. ಕಾಫಿ, ಟೀ, ಹಾಲು ಮಾಡಲಾಗುತ್ತದೆ. ದರ 5 ರೂ.

– ಭೋಗೇಶ ಆರ್‌. ಮೇಲುಕುಂಟೆ

ಟಾಪ್ ನ್ಯೂಸ್

ತಾಟಗೇರ ಸಮೀಪ ರಾಜ್ಯ ಹೆದ್ದಾರಿಯಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರ

ತಾಟಗೇರ ಸಮೀಪ ರಾಜ್ಯ ಹೆದ್ದಾರಿಯಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರ

safty belt

ಬೈಕಲ್ಲಿ ಮಕ್ಕಳ ಬೆಲ್ಟ್ ಕಡ್ಡಾಯ?

ವಿನಾಯಕ ನಗರದ ಮೃತ ಬಾಲಕನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಎಸ್.ಎಲ್.ಘೋಟ್ನೇಕರ್

ವಿನಾಯಕ ನಗರದ ಮೃತ ಬಾಲಕನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಎಸ್.ಎಲ್.ಘೋಟ್ನೇಕರ್

hgjghgfd

ಎರಡೂ ಉಪ ಚುನಾವಣೆ ಬಿಜೆಪಿ ಗೆಲುವುದು ನಿಶ್ಚಿತ : ನಾರಾಯಣಸ್ವಾಮಿ

ಪ್ರಧಾನಿ ನರೇಂದ್ರ ಮೋದಿ ಸಾಮಾನ್ಯ ವ್ಯಕ್ತಿಯಲ್ಲ, ಸರ್ವಶಕ್ತನ ಅವತಾರ: ಸಚಿವ ತಿವಾರಿ

ಪ್ರಧಾನಿ ನರೇಂದ್ರ ಮೋದಿ ಸಾಮಾನ್ಯ ವ್ಯಕ್ತಿಯಲ್ಲ, ಸರ್ವಶಕ್ತನ ಅವತಾರ: ಸಚಿವ ತಿವಾರಿ

ತಮಿಳುನಾಡು: ಪಟಾಕಿ ಅಂಗಡಿಯಲ್ಲಿ ಸ್ಫೋಟ, ಮಾಲೀಕ ಸೇರಿ ಐವರು ಸಾವು, ಹಲವರಿಗೆ ಗಾಯ

ತಮಿಳುನಾಡು: ಪಟಾಕಿ ಅಂಗಡಿಯಲ್ಲಿ ಸ್ಫೋಟ, ಮಾಲೀಕ ಸೇರಿ ಐವರು ಸಾವು, ಹಲವರಿಗೆ ಗಾಯ

gjhgfd

ಬಂಟ್ವಾಳ : ಬಿಜೆಪಿ ಮುಖಂಡ ಬೆಳ್ಳೂರು ನಿವಾಸಿ‌ ಪ್ರಕಾಶ್ ಮೇಲೆ ಹಲ್ಲೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಆಧುನಿಕ ಪದ್ಧತಿಯೊಂದಿಗೆ ಬ್ಯಾಡಗಿ ಮೆಣಸಿನಕಾಯಿ ಕೃಷಿಗೆ ಮುಂದಾದ ಅಡಕೆ ಕೃಷಿಕ

udayavani youtube

ಬಸ್ ಕಂಡಕ್ಟರ್‌ನಿಂದ ಸೂಪರ್ ಸ್ಟಾರ್ ಆದ ರಜನಿಕಾಂತ್ ಕಥೆ

udayavani youtube

ಈ ಪ್ರೌಢ ಶಾಲೆಯಲ್ಲಿ ಒಂದಲ್ಲ, ಎರಡಲ್ಲ ಹಲವಾರು ಸಮಸ್ಯೆಗಳು!

udayavani youtube

ಪಾಕಿಸ್ಥಾನದ ವಿಜಯವನ್ನು ಸಂಭ್ರಮಿಸಿದ ರಾಜಸ್ಥಾನದ ಟೀಚರ್

udayavani youtube

ಸಾಮಾಜಿಕ ಸಂದೇಶ ಹೊತ್ತು 3500 ಕಿ.ಮೀ ಸೈಕಲ್ ಪ್ರಯಾಣ!

ಹೊಸ ಸೇರ್ಪಡೆ

ತಾಟಗೇರ ಸಮೀಪ ರಾಜ್ಯ ಹೆದ್ದಾರಿಯಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರ

ತಾಟಗೇರ ಸಮೀಪ ರಾಜ್ಯ ಹೆದ್ದಾರಿಯಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರ

safty belt

ಬೈಕಲ್ಲಿ ಮಕ್ಕಳ ಬೆಲ್ಟ್ ಕಡ್ಡಾಯ?

4chincholi

ಕಟ್ಟಡ ಕಾಮಗಾರಿ ಗುಣಮಟ್ಟದ್ದಿರಲಿ

ವಿನಾಯಕ ನಗರದ ಮೃತ ಬಾಲಕನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಎಸ್.ಎಲ್.ಘೋಟ್ನೇಕರ್

ವಿನಾಯಕ ನಗರದ ಮೃತ ಬಾಲಕನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಎಸ್.ಎಲ್.ಘೋಟ್ನೇಕರ್

3kannada

ಅದ್ದೂರಿ ರಾಜ್ಯೋತ್ಸವಕ್ಕೆ ಒತ್ತಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.