Udayavni Special

ಕೃಷಿ ಡಾಕ್ಟರ್‌ ಸಮಸ್ಯೆಗೆ ಒಂದು ಪರಿಹಾರ


Team Udayavani, Feb 24, 2020, 4:32 AM IST

krishi-doc-teffa

ನಮ್ಮ ಊರಿನ ಒಬ್ಬ ರೈತರು ಟೆಫ್ ಎಂಬ ಹೊಸ ಬೆಳೆಯನ್ನು ಬೆಳೆಯುತ್ತಿದ್ದಾರೆ. ಅದು ಯಾವ ಬೆಳೆ, ಹೇಗೆ ಬೆಳೆಯಬೇಕು ಇತ್ಯಾದಿ ಮಾಹಿತಿ ನೀಡುವಿರಾ?
– ಮಂಜುನಾಥ ಪಟೇಲ್‌, ದಾವಣಗೆರೆ

ಟೆಫ್ ಎಂಬುದು ಒಂದು ಹೊಸ ಸಿರಿಧಾನ್ಯ ಬೆಳೆ. ಇದನ್ನು ಕಡಿಮೆ ಮಳೆ ಬೀಳುವ ಪ್ರದೇಶದಲ್ಲೂ ಬೆಳೆಯಬಹುದು. ಇದನ್ನು, ಮೊಟ್ಟೆಯ ಸಿರಿಧಾನ್ಯ ರೂಪ ಎಂದು ಕರೆಯಬಹುದು. ಗೋಧಿ, ಬಾರ್ಲಿ ಮುಂತಾದ ಧಾನ್ಯಗಳಲ್ಲಿ ಗ್ಲುಟೆನ್‌ ಎನ್ನುವ ಅಂಶವಿರುತ್ತದೆ. ಅದು ಕರುಳು ಸಂಬಂಧಿ ಕಾಯಿಲೆಗೆ ಕಾರಣವಾಗುತ್ತದೆ ಎನ್ನುತ್ತಾರೆ ಪರಿಣತರು. ಟೆಫ್ನಲ್ಲಿ ಗ್ಲುಟೆನ್‌ ಇರುವುದಿಲ್ಲ ಎನ್ನುವುದು ಅದರ ಹೆಗ್ಗಳಿಕೆ. ಬದಲಾಗಿ ಟೆಫ್ನಲ್ಲಿ ರೋಗ ನಿರೋಧಕ ಗುಣ, ಜೀರ್ಣಕ್ರಿಯೆ ಹೆಚ್ಚಿಸುವ ಅಂಶ ಇರುವುದಲ್ಲದೆ ಕ್ಯಾಲ್ಸಿಯಂ, ವಿಟಮಿನ್‌ “ಸಿ’ ಮತ್ತಿತ್ತರ ಪೋಷಕಾಂಶಗಳ ಆಗರವಿರುತ್ತದೆ. ಈ ಕಾರಣಗಳಿಗೇ ಇದೊಂದು ಸಮತೋಲಿತ ಎನ್ನುವ ದೃಷ್ಟಿಯಿಂದ ಟೆಫ್ಅನ್ನು- “ಮೊಟ್ಟೆಯ ಸಿರಿಧಾನ್ಯ ರೂಪ’ ಎನ್ನುತ್ತಾರೆ.

ಮೈಸೂರಿನ ADUSM ಸಂಸ್ಥೆಯು ಈ ಬೆಳೆಯನ್ನು ಸ್ಥಳೀಯವಾಗಿ ಎಲ್ಲರಿಗೂ ಕೈಗುಟುಕುವ ಬೆಲೆಯಲ್ಲಿ ಮೊದಲ ಬಾರಿಗೆ ಪರಿಚಯಿಸಿತು. ಇದು, ಎಲ್ಲಾ ರೀತಿಯ ಹವಾಮಾನಗಳಿಗೂ ಹೊಂದಿಕೊಳ್ಳುತ್ತದೆ. ಒಣಬೇಸಾಯ ಪದ್ಧತಿಯಲ್ಲೂ ಮುಂಗಾರಿನ (ಜೂನ್‌- ಜುಲೈ) ಮತ್ತು ಹಿಂಗಾರಿನ (ಅಕ್ಟೋಬರ್‌- ನವೆಂಬರ್‌) ಬೆಳೆಯಾಗಿಯೂ ಬೆಳೆಯಬಹುದಾಗಿದೆ. ಎಕರೆಗೆ 50 ಗ್ರಾಂ ಟೆಫ್ ಬೀಜಗಳನ್ನು ತೆಗೆದುಕೊಂಡು ಅದೇ ಪ್ರಮಾಣದ ಮರಳಿನೊಂದಿಗೆ ಮಿಶ್ರಗೊಳಿಸಿ ಮಡಿಯಲ್ಲಿ ಬೆಳೆಸಬೇಕು. ಆದಾದ 21 ದಿನಗಳಲ್ಲಿ ಸಸಿಗಳ ನಾಟಿ ಮಾಡಲು ಸಾಲಿನಿಂದ ಸಾಲಿಗೆ 20 ಸೆಂ.ಮೀ. ಗಿಡದಿಂದ ಗಿಡಕ್ಕೆ 8-10 ಸೆಂ.ಮೀ ಅಂತರದಲ್ಲಿ ನಾಟಿ ಮಾಡಬೇಕು. ಮಣ್ಣಿನ ತೇವಾಂಶ ನೋಡಿಕೊಂಡು 7- 10 ದಿನಗಳಿಗೊಮ್ಮೆ ಅವಶ್ಯಕತೆ ಇದ್ದಲ್ಲಿ ತೆಳುವಾಗಿ ನೀರು ಹಾಯಿಸಬೇಕು. ಕೀಟ ಮತ್ತು ರೋಗ ಬಾಧೆ ಅಷ್ಟಾಗಿ ಕಂಡುಬರುವುದಿಲ್ಲ. ಈ ಬೆಳೆ 90ರಿಂದ 110 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಸಂಪೂರ್ಣ ಗಿಡವನ್ನು ಕತ್ತರಿಸಿ/ ಕಟಾವು ಮಾಡಿ ಧಾನ್ಯಗಳನ್ನು ರಾಶಿ ಮಾಡಬೇಕು. ಪ್ರತಿ ಎಕರೆಗೆ 250- 300 ಕಿ.ಗ್ರಾಂ ಟೆಫ್ ಧಾನ್ಯವನ್ನು ಪಡೆಯಬಹುದು. ಈ ಧಾನ್ಯ ಹೊಸ ಬೆಳೆಯಾಗಿರುವುದರಿಂದ ಹೆಚ್ಚಿನ ಮಾರುಕಟ್ಟೆ ಸೌಲಭ್ಯವಿಲ್ಲ. ಉತ್ತರಕನ್ನಡ ಜಿಲ್ಲೆಯ ಶಿರಸಿಯ ಕದಂಬ ಸೊಸೈಟಿಯಲ್ಲಿ ಒಪ್ಪಂದ ಕೃಷಿ ಮೂಲಕ ಈ ಬೆಳೆಯನ್ನು ಬೆಳೆಯಬಹುದಾಗಿದೆ. ಈ ಬೆಳೆಯ ಬಗ್ಗೆ ಸಂಶೋಧನೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ರೈತರಿಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

-ಡಾ. ಅಶೋಕ್‌ ಪಿ.,
ಹಿರಿಯ ವಿಜ್ಞಾನಿ ಹಾಗೂ
ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ, ಹನುಮನಮಟ್ಟಿ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ನನಗೆ ಗೌರವ ಬೇಡ, ಬದಲಿಗೆ ಒಂದು ಬಡ ಕುಟುಂಬದ ಜವಾಬ್ದಾರಿ ವಹಿಸಿಕೊಳ್ಳಿ: ಮೋದಿ ಕರೆ

ನನಗೆ ಗೌರವ ಬೇಡ, ಬದಲಿಗೆ ಒಂದು ಬಡ ಕುಟುಂಬದ ಜವಾಬ್ದಾರಿ ವಹಿಸಿಕೊಳ್ಳಿ: ಮೋದಿ ಕರೆ

ಲಾಕ್‌ಡೌನ್‌ ಬಿಗಿಗೊಳಿಸಲು ಸಿಎಂ ಸೂಚನೆ

ಲಾಕ್‌ಡೌನ್‌ ಬಿಗಿಗೊಳಿಸಲು ಸಿಎಂ ಸೂಚನೆ

ಆನ್‌ಲೈನ್‌ ತರಗತಿಗೂ ಎದುರಾಗುತ್ತಿದೆ ತಾಂತ್ರಿಕ ಸಮಸ್ಯೆ

ಆನ್‌ಲೈನ್‌ ತರಗತಿಗೂ ಎದುರಾಗುತ್ತಿದೆ ತಾಂತ್ರಿಕ ಸಮಸ್ಯೆ

ಕೋವಿಡ್ ಸೋಂಕು ವಿಚಾರದಲ್ಲಿ ನಿರ್ದಿಷ್ಟ ಸಮುದಾಯಕ್ಕೆ ಕಳಂಕ ಬೇಡ: ಕೇಂದ್ರದ ಮನವಿ

ಕೋವಿಡ್ ಸೋಂಕು ವಿಚಾರದಲ್ಲಿ ನಿರ್ದಿಷ್ಟ ಸಮುದಾಯಕ್ಕೆ ಕಳಂಕ ಬೇಡ: ಕೇಂದ್ರದ ಮನವಿ

ಬೆನ್‌ ಸ್ಟೋಕ್ಸ್‌ ವಿಸ್ಡನ್‌ ವರ್ಷದ ಶ್ರೇಷ್ಠ ಕ್ರಿಕೆಟಿಗ

ಬೆನ್‌ ಸ್ಟೋಕ್ಸ್‌ ವಿಸ್ಡನ್‌ ವರ್ಷದ ಶ್ರೇಷ್ಠ ಕ್ರಿಕೆಟಿಗ

ಅಪಾಯ ಕೇಂದ್ರಗಳಲ್ಲಿ ಲಾಕ್‌ಡೌನ್‌ ವಿಸ್ತರಣೆ

ಅಪಾಯ ಕೇಂದ್ರಗಳಲ್ಲಿ ಲಾಕ್‌ಡೌನ್‌ ವಿಸ್ತರಣೆ

ಲಾಕ್‌ಡೌನ್‌ ಮುಂದುವರಿದರೆ ಪರೀಕ್ಷೆಗಳಿಗೆ ಕಂಟಕ

ಲಾಕ್‌ಡೌನ್‌ ಮುಂದುವರಿದರೆ ಪರೀಕ್ಷೆಗಳಿಗೆ ಕಂಟಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದುಡ್ಡೇ ಪ್ರಥಮಾ

ದುಡ್ಡೇ ಪ್ರಥಮಾ

isiri-tdy-7

ಸ್ಯಾನಿಟೈಸರ್ ಸೂರ್ಯಕಿರಣಗಳು

ಇಎಂಐ ಕಟ್ಟಿಲ್ವಾ ?

ಇಎಂಐ ಕಟ್ಟಿಲ್ವಾ ?

ಮನೆಯೇ ಚಿತ್ರಾಲಯ

ಮನೆಯೇ ಚಿತ್ರಾಲಯ

isiri-tdy-4

ಬಂತು ನೋಡಿ ವಾಟ್ಸ್ ಆ್ಯಪ್ ಬ್ಯಾಂಕಿಂಗ್‌

MUST WATCH

udayavani youtube

Coronavirus Lockdown : ಮಟ್ಟುಗುಳ್ಳ ಮಂದಗತಿಯ ಮಾರುಕಟ್ಟೆ Saddens Muttugulla Growers

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

ಹೊಸ ಸೇರ್ಪಡೆ

ನನಗೆ ಗೌರವ ಬೇಡ, ಬದಲಿಗೆ ಒಂದು ಬಡ ಕುಟುಂಬದ ಜವಾಬ್ದಾರಿ ವಹಿಸಿಕೊಳ್ಳಿ: ಮೋದಿ ಕರೆ

ನನಗೆ ಗೌರವ ಬೇಡ, ಬದಲಿಗೆ ಒಂದು ಬಡ ಕುಟುಂಬದ ಜವಾಬ್ದಾರಿ ವಹಿಸಿಕೊಳ್ಳಿ: ಮೋದಿ ಕರೆ

ಲಾಕ್‌ಡೌನ್‌ ಬಿಗಿಗೊಳಿಸಲು ಸಿಎಂ ಸೂಚನೆ

ಲಾಕ್‌ಡೌನ್‌ ಬಿಗಿಗೊಳಿಸಲು ಸಿಎಂ ಸೂಚನೆ

ಇಂದು ಸಚಿವ ಸಂಪುಟ ಸಭೆ

ಇಂದು ಸಚಿವ ಸಂಪುಟ ಸಭೆ

ಲಾಕ್ ಡೌನ್ ಸ್ವಲ್ಪ ಸಡಿಲಿಸಿ ಇಬ್ಬರು ಹೆಂಡ್ತೀರ ಮನೆಗೆ ಹೋಗ್ಬೇಕು ನಂಗೆ!

ಲಾಕ್ ಡೌನ್ ಸ್ವಲ್ಪ ಸಡಿಲಿಸಿ ಇಬ್ಬರು ಹೆಂಡ್ತೀರ ಮನೆಗೆ ಹೋಗ್ಬೇಕು ನಂಗೆ!

ಆನ್‌ಲೈನ್‌ ತರಗತಿಗೂ ಎದುರಾಗುತ್ತಿದೆ ತಾಂತ್ರಿಕ ಸಮಸ್ಯೆ

ಆನ್‌ಲೈನ್‌ ತರಗತಿಗೂ ಎದುರಾಗುತ್ತಿದೆ ತಾಂತ್ರಿಕ ಸಮಸ್ಯೆ