ಆಗ ಬರಡು ಬಾಳು, ಈಗ ಹಸಿರು ಬದುಕು


Team Udayavani, Jan 30, 2017, 3:45 AM IST

adike.jpg

ದಿನದಿನವೂ ಸುಮಾರು 40ಕಿಮೀ. ಬಸ್ಸಿನ ಪ್ರಯಾಣ – ಬೊಳಂತೂರಿನ ಮನೆಯಿಂದ ಹೊರಟು ಮಂಗಳೂರು ಹಾಗೂ ಪಣಂಬೂರುಹಾದು ಬೈಕಂಪಾಡಿಯ ಕೈಗಾರಿಕಾಘಟಕಕ್ಕೆ. ಡಿಪ್ಲೊಮಾ ಕಲಿತದ್ದಕ್ಕಾಗಿ ಅÇÉೊಂದು ಉದ್ಯೋಗ. ದಿನವಿಡೀ ದುಡಿತ. ಸಂಜೆ ಮತ್ತೆಮನೆಗೆ ಪಯಣ. ಇದು, ಭಾನುವಾರಗಳ ಹೊರತಾಗಿ, ಸುಮಾರು 13ವರ್ಷ ಸಂದೀಪ್ರೈ (35) ಅವರ ದಿನಚರಿ. ಕೊನೆಗೊಮ್ಮೆ, ಮೂರು ವರುಷಗಳ ಮುಂಚೆ, ಸಂದೀಪರಿಗೆ ಇದು ಸಾಕೆನಿಸಿತು.

ಅವರನ್ನು ಕೃಷಿ ಕೈಬೀಸಿ ಕರೆಯುತ್ತಿತ್ತು. ಬೊಳಂತೂರಿನಲ್ಲಿ ಅವರಿಗೆ ಜಮೀನಿದೆ. ಜಮೀನಿನ ಗಡಿಯಲ್ಲಿ ತೊರೆಯಿದೆ. ಅಲ್ಲಿ ತಂದೆ ನರಸಿಂಹರೈ (67) ಬೆಳೆಸಿದ ಐವತ್ತು ವರುಷ ಹಳೆಯ ಅಡಿಕೆ ತೋಟವಿದೆ. ಅದರಲ್ಲಿ 2,000ಅಡಿಕೆ ಮರಗಳಿವೆ. ಪತ್ನಿ ಯೋಗಿತಾ ಅವರ ಸಹಕಾರವಿದೆ. ಹಾಗಾಗಿ, ವಾರಕ್ಕೊಮ್ಮೆ ಭಾನುವಾರಗಳಂದು ಮಾತ್ರ ತೋಟಕ್ಕಿಳಿಯುತ್ತಿದ್ದ ಸಂದೀಪ್‌ ಈಗ ದಿನದಿನವೂ ಕೃಷಿಯಲ್ಲಿಮುಳುಗಿದರು – ಅಡಿಕೆ ತೋಟದಲ್ಲಿ ಬಾಳೆಕೃಷಿ. ಕದಳಿ, ಗಾಳಿ, ಬೂದು, ತರಕಾರಿಬಾಳೆ – ಈದೇಸಿ ತಳಿಗಳನ್ನೇ ಹೆಚ್ಚೆಚ್ಚು ಬೆಳೆಸಿದರು. ಜೊತೆಗೆ, ಅಡಿಕೆ ಮರಗಳಿಗೆ ಹಬ್ಬಿರುವ ಕರಿಮೆಣಸಿನ ಬಳ್ಳಿಗಳ ಪೋಷಣೆ.

ಸಂದೀಪರ ತೋಟಕ್ಕೆ ನಾವು, ಸಾವಯವ ಕೃಷಿಕ ಗ್ರಾಹಕ ಬಳಗದ ಸದಸ್ಯರು,ಭೇಟಿಯಿತ್ತದ್ದು 29ನವಂಬರ್‌ 2016ರಂದು. ಆಗ ತೋಟದಂಚಿನ ತೊರೆಯಲ್ಲಿದ್ದ ನಾಲ್ಕು ಇಂಚು ಆಳದ ನೀರನ್ನು ತೋರಿಸುತ್ತಾ ನರಸಿಂಹ ರೈಯವರು ಹೇಳಿದಮಾತು- ಹತ್ತು ವರುಷಗಳ ಹಿಂದೆಯೂ ಈ ತೊರೆಯಲ್ಲಿ ಏಪ್ರಿಲ್‌ ತಿಂಗಳ ತನಕ ಮೂರು – ನಾಲ್ಕು ಅಡಿ ನೀರು ಹರಿಯುತ್ತಿತ್ತು. ಈಗನೋಡಿ – ನವೆಂಬರಿನಲ್ಲಿ ಇರೋದು ನಾಲ್ಕು ಬೆರಳಿನಷ್ಟುನೀರು! ನಾವೆಲ್ಲ ಈ
ಭೂಮಿಗೆ ಇಷ್ಟೆಲ್ಲ ಹಾನಿಮಾಡಿದ್ದೇವೆ. ಆದರೂ ಅದು ನಮಗೆ ಅನ್ನಕೊಡುತ್ತದೆ. ನಾನು ಒಂದು ವಿಷಯ ಕಣ್ಣಾರೆ ಕಂಡಿದ್ದೇನೆ: ಕೆಲವೊಮ್ಮೆ ಎರಡು – ಮೂರು ದಿನಕರೆಂಟ್‌ ಇರೋದಿಲ್ಲ. ಹಾಗಾಗಿ ಬೋರ್ವೆಲ್ಲಿನಿಂದ ಇಲ್ಲಿ ಯಾರೂ ನೀರು ಎತ್ತಲಿಕ್ಕೆ ಆಗೋದಿಲ್ಲ. ಆಗ, ಈ ತೊರೆಯಲ್ಲಿಮೂರು – ನಾಲ್ಕು ಇಂಚು ನೀರು ಏರುತ್ತದೆ. ಬೋರ್ವೆಲ್ಲಿನ ಮೂಲಕ ನೆಲದಾಳದ ನೀರು ಎತ್ತುವುದರಿಂದ ಆಗುವ ಪರಿಣಾಮವನ್ನು ಬೊಟ್ಟು ಮಾಡಿತೋರಿಸಿದ ಮಾತು. 

ಈಗ ಸಂದೀಪರಿಗೆ ಅಡಿಕೆ ತೋಟದಲ್ಲಿ ದಿನವಿಡೀ ಬಿಡುವಿಲ್ಲದ ಕೆಲಸ. ನವೆಂಬರಿನಿಂದ ಮೇ ತಿಂಗಳ ತನಕ ಅಡಿಕೆ ಮರಗಳಿಗೆ ಸ್ಪ್ರಿಂಕ್ಲರಿನಲ್ಲಿ ನೀರು ಹಾಯಿಸುವ ಕೆಲಸ; ಒಮ್ಮೆ ಚಾಲೂ ಮಾಡಿದರೆ ಸತತ ಎರಡು ಗಂಟೆ. ತೋಟದಲ್ಲಿ ಬಿದ್ದ ಅಡಿಕೆ ಹೆಕ್ಕುವುದು, ಮಳೆಗಾಲದ ಆರಂಭದಲ್ಲಿ ಅಡಿಕೆ ಮರಗಳಿಗೆ ಬೋಡೋì ದ್ರಾವಣದ ಸಿಂಪಡಣೆ. ಅನಂತರ ಅಡಿಕೆ ಕೊಯ್ಲು, ಅಡಿಕೆ ಒಣಗಿಸುವುದು, ಸಿಪ್ಪೆ ಸುಲಿಯುವುದು, ದಿನದಿನವೂ ಅಡಿಕೆ ಹಾಳೆಗಳನ್ನುಕತ್ತರಿಸಿ ಅಡಿಕೆ ಮರಗಳ ಬುಡಕ್ಕೆ ಹಾಕುವುದು – ಹೀಗೆ ವರುಷ ವಿಡೀ ಅಡಿಕೆ ತೋಟದಲ್ಲಿ ಮುಗಿಯದ ಕೆಲಸ. ಇಬ್ಬರು ಖಾಯಂ ಕೆಲಸಗಾರರ ಸಹಾಯದಿಂದ, ತಂದೆಯವರ ಮಾರ್ಗದರ್ಶನದಿಂದ, ಎಲ್ಲ ಕೆಲಸಗಳನ್ನೂಸರಿದೂಗಿಸಿ ಕೊಂಡು ತೋಟದ ನಿರ್ವಹಣೆ ಮಾಡುತ್ತಿ¨ªಾರೆ ಸಂದೀಪ್‌. ಅವರು ಸಾಕಿದ ಎರಡು ದನಗಳಿಂದ ಮನೆಗೆ ಹಾಲು ಮತ್ತು ತೋಟಕ್ಕೆ ಗೊಬ್ಬರ ಸಿಗುತ್ತಿದೆ. 

ಭಾನುವಾರಗಳಂದು ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗ ನಡೆಸುವ ಸಾವಯವ ತರಕಾರಿ ಸಂತೆಗೆ ತಪ್ಪದೆ ಬರುತ್ತಾರೆ ಸಂದೀಪ್‌ – ತಾವು ಬೆಳೆಸಿದ ಬಾಳೆಗೊನೆಗಳೊಂದಿಗೆ. ಅದಕ್ಕಾಗಿಯೇ ಕಾದಿದ್ದು ಖರೀದಿಸಿ ಒಯ್ಯುವ ಗ್ರಾಹಕರು ಹಲವರು. 

ಆ ದಿನ ಸಂದೀಪರೈಗಳ ತೋಟದಿಂದ ಹೊರಟು, ಒಂದು ಕಿಮೀ. ದೂರದಲ್ಲಿರುವ ಕೇಶವ ಪ್ರಭುಗಳ ಕೈತೋಟಕ್ಕೆ ಸಾಗಿದೆವು. ಮೂರು ದಶಕಗಳ ಕಾಲ ಮಂಗಳೂರಿನ ಪಾಲಿಟೆಕ್ನಿಕಿನಲ್ಲಿ ಕಲಿಸುತ್ತಿದ್ದ ಕೇಶವಪ್ರಭುಗಳಿಗೆ ಆರಂಭದಿಂದಲೂ ತರಕಾರಿ ಕೃಷಿಯಲ್ಲಿ ಆಸಕ್ತಿ. ವಾರಾಂತ್ಯಗಳಲ್ಲಿ ತಮ್ಮ ಪುಟ್ಟ ಜಮೀನಿಗೆ ಧಾವಿಸುತ್ತಿದ್ದರು ಪ್ರಭುಗಳು – ಗಿಡಗಳೊಂದಿಗೆ ಒಡನಾಡಲಿಕ್ಕಾಗಿ. ಈಗ ಮೂರು ವರುಷಗಳ ಮುನ್ನಸೇವೆಯಿಂದ ನಿವೃತ್ತಿ. ಆಗಿನಿಂದ ಪೂರ್ಣಾವಧಿ ತರಕಾರಿ ಕೃಷಿಯಲ್ಲಿ ತೊಡಗಿ¨ªಾರೆ – ಮನೆಯವರ ಪೂರ್ಣ ಸಹಕಾರದೊಂದಿಗೆ. 

ಅವರ ಮನೆ ಪಕ್ಕದ ಅರ್ಧ ಎಕರೆ ಜಮೀನಿನಲ್ಲಿ ಬಸಳೆ, ಬದನೆ ಗಿಡಗಳೂ ಸೌತೆ, ಅಲಸಂಡೆ, ಹೀರೆಕಾಯಿ ಬಳ್ಳಿಗಳೂ ನಳನಳಿಸುತ್ತಿವೆ. ಜೊತೆಗೆ ಬಾಳೆ ಹಾಗೂ ಪಪ್ಪಾಯಿ ಗಿಡಗಳು ಸೊಂಪಾಗಿ ಬೆಳೆದುನಿಂತಿವೆ. 

ಕೇಶವ ಪ್ರಭುಗಳು ಮೂರು ದನಗಳನ್ನು ಸಾಕಿ¨ªಾರೆ.  ಅವುಗಳ ಸೆಗಣಿಯಿಂದ ಗೋಬಗ್ಯಾìಸ ಘಟಕದ ಮೂಲಕ ಅನಿಲ ಉತ್ಪಾದನೆ; ಅಡುಗೆಗೆ ಬಳಕೆ. ಸ್ಲರಿಯನ್ನುತರಕಾರಿ ಗಿಡಗಳ ಸಾಲುಗಳಿಗೆ ಹಾಯಿಸುತ್ತಾರೆ. ಈಸ್ಲರಿಯ ಪೋಷಕಾಂಶ ಭರಿತ ಮಣ್ಣಿನಲ್ಲಿ ತರಕಾರಿ ಗಿಡಗಳ ಸಮೃದ್ಧ ಬೆಳವಣಿಗೆ. ದನಗಳಿಗಾಗಿ ಬೆಳೆಸಿದ ಹಸಿರು ಮೇವು ಹಸಿರು ತುಂಬಿ ಬೆಳೆದಿದೆ. 

ಅವರು ವಾರದ ದಿನಗಳಲ್ಲಿ ಕೊಯ್ದ ತರಕಾರಿಗಳ ಮಾರಾಟ ಸ್ಥಳೀಯ ಸೊಸೈಟಿಯಲ್ಲಿ; ವಾರಾಂತ್ಯದಲ್ಲಿ ಕೊಯ್ದ ತರಕಾರಿಗಳ ಮಾರಾಟ ಮಂಗಳೂರಿನ ಸಾವಯವ ತರಕಾರಿ ಸಂತೆಯಲ್ಲಿ. 

ನಗರದಲ್ಲಿ ಉದ್ಯೋಗ ಮಾಡಿದವರು ನಿವೃತ್ತಿಯ ನಂತರ ಅÇÉೇ ನೆಲೆಸುತ್ತಾರೆ. ಹಾಗಿರುವಾಗ,  ಮಂಗಳೂರಿನಂತಹ ನಗರದಲ್ಲಿ ಮೂವತ್ತು ವರುಷ ಉದ್ಯೋಗ ಮಾಡಿದ ನೀವು ನಿವೃತ್ತಿಯ ನಂತರ ಈಹಳ್ಳಿಗೆ ಬಂದು ಕೃಷಿ ಮಾಡುತ್ತಿದ್ದೀರÇÉಾ ಎಂದು ಬೀಳೊYಡುವಾಗನಾವುಕೇಳಿದೆವು. ಆಗ ಕೇಶವ ಪ್ರಭುಗಳು ಹೇಳಿದ ಮಾತು, ಕೃಷಿಯಿಂದ ಸಿಗುವ ನೆಮ್ಮದಿ ಬೇರೆಯಾವ ವೃತ್ತಿಯಿಂದಲೂ ಸಿಗಲು ಸಾಧ್ಯವಿಲ್ಲ. 

ಅವರಮಾತಿಗೆ ಸಾಕ್ಷಿಯಾಗಿ ಮನೆಯೆದುರು ನಿಂತಿತ್ತು ಎರಡುತಿಂಗಳದನದ-ಕರು; ಹುಟ್ಟುವಾಗಲೇ ಅದರ ಹೊಕ್ಕಳಿನ ಹತ್ತಿರ ಒಂದು ತೂತು. ಕರುವಿನ ಕರುಳು ಆತೂತಿನಿಂದ ಹೊರಬರುವ ವಿಚಿತ್ರ ಸಮಸ್ಯೆ. ನಂತರ ಕರುವಿಗೆ ಪಶುವೈದ್ಯರಿಂದ ಶಸ್ತ್ರಚಿಕಿತ್ಸೆ ಮಾಡಿಸಿದರು. ಅದನ್ನು ಮಗುವಿನಂತೆ ಆರೈಕೆ ಮಾಡಿ ಉಳಿಸಿಕೊಂಡರು – ಕೇಶವ ಪ್ರಭು ಮತ್ತು ಅವರ ಪತ್ನಿಜಯಲಕ್ಷಿ$¾.

– ಅಡ್ಕೂರು ಕೃಷ್ಣರಾವ್ 

ಟಾಪ್ ನ್ಯೂಸ್

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

9-fusion

Drama: ಪ್ರೇಕ್ಷಕರ ಮನಗೆದ್ದ “ಸೀತಾರಾಮ ಚರಿತಾ”

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

jagadish shettar

Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.