ಹಾಗಲ ಹೀಗೆ…ಹಾಗಲಕಾಯಿ ಬೆಳೆಯುವ ಕ್ರಮ

Team Udayavani, Nov 18, 2019, 5:22 AM IST

ಹಾಗಲಕಾಯಿ, ಬಹೂಪಯೋಗಿ ತರಕಾರಿ. ಅದನ್ನು ಬಹುತೇಕ ರಾಜ್ಯದ ಎಲ್ಲಾ ಕಡೆ ಬೆಳೆಯುತ್ತಾರೆ. ಇದು ಕಬ್ಬಿಣಾಂಶ ಮತ್ತು ಹಲವು ಜೀವಸತ್ವಗಳನ್ನು ಹೇರಳವಾಗಿ ಹೊಂದಿದೆ. “ಕಹಿಯಾಗಿದ್ದರೂ ವಾರಕ್ಕೆ ಒಂದು ಬಾರಿಯಾದರೂ ಹಾಗಲಕಾಯಿ ತಿನ್ನಬೇಕು’ ಎನ್ನುವ ಮಾತು ಹಳ್ಳಿಗಳಲ್ಲಿ ಜನಜನಿತ. ಈ ಬೆಳೆಯನ್ನು ಸರಿಯಾದ ಕ್ರಮದಲ್ಲಿ ಬೆಳೆಯುವುದು ಹೇಗೆ ಗೊತ್ತಾ?

ಹಾಗಲಕಾಯಿಯನ್ನು ಬೆಳೆಯಲು ಮಣ್ಣಿನ ಗುಣಮಟ್ಟವನ್ನು ತಿಳಿಯಬೇಕು. ಸಾಮಾನ್ಯವಾಗಿ ಎಲ್ಲಾ ಬಗೆಯ ಮಣ್ಣುಗಳಲ್ಲಿಯೂ ಇದನ್ನು ಬೆಳೆಯಬಹುದು. ಆದರೆ ಗೋಡುಮಣ್ಣು ಹಾಗೂ ನೀರು ಬಸಿದುಕೊಳ್ಳುವ ಮಣ್ಣು ಈ ಬೆಳೆಗೆ ಹೆಚ್ಚು ಸೂಕ್ತ. ಮುಂಗಾರಿನ ಬೆಳೆಯನ್ನು ಜೂನ್‌- ಜುಲೈ ತಿಂಗಳಲ್ಲಿ, ಬೇಸಿಗೆ ಬೆಳೆಯನ್ನು ಜನವರಿ- ಫೆಬ್ರವರಿಯಲ್ಲಿ ಒಣ ಪ್ರದೇಶದ ಭೂಮಿಗಳಲ್ಲಿ ಬೆಳೆಯಬಹುದು. ಕರಾವಳಿ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ನವೆಂಬರ್‌- ಡಿಸೆಂಬರ್‌ ತಿಂಗಳುಗಳಲ್ಲಿ ಅಂದರೆ, ಸದ್ಯದ ಅವಧಿಯಲ್ಲಿ ಬೆಳೆಯಬಹುದು. ಅಲ್ಲದೇ ಗುಡ್ಡಗಾಡು ಪ್ರದೇಶಗಳಲ್ಲಿ ಕೂಡ ಈ ಅವಧಿಯಲ್ಲಿಯೇ ಬೆಳೆಯುವ ಬೆಳೆಯಾಗಿದೆ.

ಬೇಸಾಯ ಪ್ರಕ್ರಿಯೆ
ಪ್ರತಿ ಹೆಕ್ಟೇರಿಗೆ 8 ಕೆ.ಜಿ ಬೀಜ, ಕೊಟ್ಟಿಗೆ ಗೊಬ್ಬರ 25 ಟನ್‌, ರಾಸಾಯನಿಕ ಗೊಬ್ಬರಗಳಾದ ಸಾರಜನಕ-63 ಕೆ.ಜಿ, ರಂಜಕ-50 ಕೆ.ಜಿ ಹಾಗೂ ಪೊಟ್ಯಾಷ್‌-50 ಕೆ.ಜಿ. ಬೇಕಾಗುತ್ತದೆ.

ಮೊದಲು ಭೂಮಿಯನ್ನು ಹದ ಮಾಡಿಕೊಂಡು, 3 ಫೀಟ್‌ಗೆ ಒಂದು ಸಾಲನ್ನು (ಹರಿಯನ್ನು) ತೆಗೆಯಬೇಕು. ಸಂಗ್ರಹಿಸಿದ ಕೊಟ್ಟಿಗೆ ಗೊಬ್ಬರವನ್ನು, ಅರ್ಧದಷ್ಟು ಸಾರಜನಕ, ಪೂರ್ತಿಯಷ್ಟು ರಂಜಕವನ್ನು ಆ ಸಾಲುಗಳಲ್ಲಿ ಬೆರೆಸಬೇಕು. ಬಿತ್ತುವುದಕ್ಕೂ ಮುಂಚೆ ಬೀಜಗಳನ್ನು 6 ತಾಸು ನೀರಿನಲ್ಲಿ ನೆನೆಸಬೇಕು. ನಂತರ 90 ಸೆಂ.ಮೀ ಅಂತರದಲ್ಲಿ ಮೂರ್‍ನಾಲ್ಕು ಬೀಜಗಳನ್ನು ಊರಬೇಕು. ಮೂರು ವಾರಗಳ ಬಳಿಕ ಅದರಲ್ಲಿ ಎರಡು ಸಸಿಗಳನ್ನು ಉಳಿಸಿ. ಕಿತ್ತಿದ ಸಸಿಗಳನ್ನು 3 ಫೀಟ್‌ ಅಂತರದ ಸಾಲುಗಳಲ್ಲಿ 90 ಸೆಂ.ಮೀ. ಅಂತರದಲ್ಲಿ ಮಡಿಗಳನ್ನು ತಯಾರಿಸಿ ಬಿತ್ತನೆ ಮಾಡಬಹುದು. ಬೀಜಗಳನ್ನು ಪ್ರಮಾಣೀಕರಿಸಿದ ಕೇಂದ್ರಗಳಿಂದ ತಂದರೆ ಸೂಕ್ತ. ಬಿತ್ತಿದ ನಾಲ್ಕು ವಾರಗಳ ಬಳಿಕ ರೆಡಿಯಾದ ಅರ್ಧದಷ್ಟು ಸಾರಜನಕ ಗೊಬ್ಬರವನ್ನು ಮೇಲು ಗೊಬ್ಬರವಾಗಿ ಕೊಡಬೇಕು ಮತ್ತು ಅದರ ಬಳ್ಳಿಯನ್ನು ಹಬ್ಬಲು ಚಪ್ಪರ ತರಹದ ವ್ಯವಸ್ಥೆಯನ್ನು ಮಾಡಬೇಕು.

ಕಟಾವು ಮತ್ತು ಇಳುವರಿ
ಮೂರ್‍ನಾಲ್ಕು ದಿನಗಳಿಗೊಮ್ಮೆ ಕಾಯಿ ಕೀಳಬೇಕು, ಹಾಗಲಕಾಯಿಗಳು ಎಳೆಯದ್ದಾಗಿದ್ದಾಗ ಕೊಯ್ಯಬೇಕು, ಹೀಗೆ ಮಾಡುವ ಬೇಸಾಯದಿಂದ ಪ್ರತಿ ಹೆಕ್ಟೇರಿಗೆ 10- 12 ಟನ್‌ ಇಳುವರಿ ಬರುತ್ತದೆ. ಮಾರುಕಟ್ಟೆಗೆ ಉತ್ಪನ್ನಗಳನ್ನು ಸಾಗಿಸಬೇಕಾದರೆ ಸೂಕ್ತ ಕ್ರಮಗಳನ್ನು ಅನುಸರಿಸಬೇಕು, ಪದಾರ್ಥಗಳನ್ನು ಕೊಳೆಯಲು ಬಿಡಬಾರದು.

ಹಾಗಲಕಾಯಿ ತಳಿಗಳು
ಹಿರ್ಕಾನಿ: ಈ ತಳಿಯು ಮಧ್ಯಮ ಗಾತ್ರದ ಕಾಯಿಗಳನ್ನು ಬಿಡುವುದರ ಜತೆಗೆ ಅಧಿಕ ಇಳುವರಿಯನ್ನು ನೀಡುತ್ತದೆ. ಇವು ಗಾತ್ರದಲ್ಲಿ ಕೊಂಚ ದಪ್ಪವಾಗಿದ್ದ, ಒಂದು ಕಾಯಿ 150-200 ಗ್ರಾಂ ತೂಗುತ್ತದೆ.

ಪ್ರಿಯ: ತಿಳಿ ಹಸಿರು ಬಣ್ಣದ ಕಾಯಿಯಾಗಿದ್ದು, ಮಧ್ಯಮ ಗಾತ್ರದ್ದಾಗಿರುತ್ತದೆ. ಪ್ರತಿ ಹೆಕ್ಟೇರ್‌ಗೆ ಅಂದಾಜು 15 ಟನ್‌ ಇಳುವರಿಯನ್ನು ನೀಡುತ್ತದೆ.
ಅರ್ಕಾ ಹರಿತ್‌: ಇದರ ತಿರುಳು ದಪ್ಪವಾಗಿದ್ದು, 12,500 ಕೆ.ಜಿ ಸಿಳುವರಿ ಕೊಡುತ್ತದೆ. ಇದು 120-130 ದಿನಗಳ ಬೆಳೆಯಾಗಿದೆ.

– ಶ್ರೀನಾಥ ಮರಕುಂಬಿ, ಗಂಗಾವತಿ


ಈ ವಿಭಾಗದಿಂದ ಇನ್ನಷ್ಟು

  • ನಮ್ಮಲ್ಲಿ ಸೀಸನಲ್‌ ಹಣ್ಣುಗಳಿರುವಂತೆಯೇ ವೃತ್ತಿಗಳಲ್ಲಿ ಸೀಸನಲ್‌ ವೃತ್ತಿಗಳಿವೆ. ಅವುಗಳಲ್ಲಿ ಒಂದು ಅಡಕೆ ಕೊನೆ (ಗೊನೆ) ಕೀಳುವ "ಕೊನೆಗಾರ'ನದ್ದು. ಅಡಕೆ ಕೊಯ್ಲು...

  • ಏರ್‌ಟೆಲ್‌ ಮತ್ತು ವೊಡಾಫೋನ್‌ ಮೊಬೈಲ್‌ ಕಂಪನಿಗಳು ಡಿಸೆಂಬರ್‌ ಮೊದಲ ವಾರದಿಂದ ತಮ್ಮ ಮೊಬೈಲ್‌ ಶುಲ್ಕವನ್ನು ಹೆಚ್ಚಿಸಲಿವೆ ಎಂಬುದು ಸದ್ಯದ ಸುದ್ದಿ. ಜಿಯೋ...

  • ಕರಿಬೇವಿನ ಎಲೆಯಲ್ಲಿರುವ ಗಂಧಕಯುಕ್ತ ಎಣ್ಣೆಯ ಅಂಶವೇ "ಘಮ್‌' ಎನ್ನುವ ಸುವಾಸನೆಗೆ ಕಾರಣ. ಇದನ್ನು ಅಡುಗೆ ಮನೆಯಲ್ಲಿ ಮಾತ್ರವೇ ಅಲ್ಲದೆ, ಆಯುರ್ವೇದ ಔಷಧಗಳ ತಯಾರಿಕೆಗೂ...

  • ದೇಗುಲ ನಿರ್ಮಾಣಕ್ಕೆ ಒಂದು ಶಾಸ್ತ್ರವಿದೆ. ಇದರಂತೆ, ಕೆರೆಯ ಸ್ಥಳದ ಆಯ್ಕೆಗೂ ಇಂಥದ್ದೊಂದು ಪರಿಕಲ್ಪನೆ ಇದೆ. ರಾಜ್ಯದ ಕೆರೆಗಳನ್ನು ಸುತ್ತಿದರೆ ಬಂಡೆ ಬೆಟ್ಟದ...

  • ಮಲೆನಾಡು, ಕರಾವಳಿ ಭಾಗದ ಮನೆಗಳಲ್ಲಿ ಮಾಡುವ ಊಟಕ್ಕೆ ಅದರದ್ದೇ ಆದ ವಿಶೇಷ ಇದೆ. ಅದರಲ್ಲೂ ಹವ್ಯಕ ಬ್ರಾಹ್ಮಣರ ಮನೆಯ ಊಟ ಅಂದ್ರೆ ಕೇಳಬೇಕಾ?, ಅಕ್ಕಿರೊಟ್ಟಿ, ಚಪಾತಿ,...

ಹೊಸ ಸೇರ್ಪಡೆ