ಓಡಾಡ್ಕೊಂಡಿರೋಕೆ ಟ್ರಾವೆಲ್‌ ಕಾರ್ಡ್‌


Team Udayavani, Feb 12, 2018, 5:20 PM IST

travel-card.jpg

ನಮ್ಮ ಹಲವು ಖರ್ಚುಗಳನ್ನು ಸರಿದೂಗಿಸಲು ಸ್ಟೂಡೆಂಟ್‌, ಸೆಕ್ಯೂರ್‌, ಬ್ಯಾಲೆನ್ಸ್‌ ಟ್ರಾನ್ಸ್‌ಫ‌ರ್‌, ಬಿಸಿನೆಸ್‌ ಹೀಗೆ ಅನೇಕ ಮಾದರಿ ಕ್ರೆಡಿಟ್‌ ಕಾರ್ಡ್‌ಗಳು ಚಾಲ್ತಿಯಲ್ಲಿವೆ.  ಇದರ ಜೊತೆಗೆ ದೇಶ ವಿದೇಶ ಪ್ರವಾಸಕ್ಕೂ ಪ್ರವಾಸಿ ಕ್ರೆಡಿಟ್‌ ಕಾರ್ಡ್‌ಗಳಿವೆ. ಇಂತಹ ಪ್ರವಾಸಿ ಕ್ರೆಡಿಟ್‌ ಕಾರ್ಡ್‌ ಖರೀದಿಗೆ ಮುನ್ನ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ… 

ದೇಶ, ವಿದೇಶಿ ಪ್ರವಾಸ ಮಾಡುವಾಗ ಅನೇಕ ಮಾದರಿಯ ಖರ್ಚುಗಳು ಎದುರಾಗುತ್ತವೆ. ಅವುಗಳನ್ನು ನಿರ್ವಹಿಸಲು ಡಿಬಿಟ್‌ ಕಾರ್ಡ್‌ಗಳು ಸೋತಾಗ ಸಹಾಯಕ್ಕೆ ಬರುವುದು ಕ್ರೆಡಿಟ್‌ ಕಾರ್ಡ್‌ಗಳು. ಅದರಲ್ಲೂ ನಿತ್ಯ ಪ್ರವಾಸಿಗರಿಗೆ ಪ್ರವಾಸಿ ಕ್ರೆಡಿಟ್‌ ಕಾರ್ಡ್‌ಗಳೇ ಇವೆ. ಈ ಸೂಕ್ಷ್ಮವನ್ನು ಅರಿಯದೆ ಯಾವುದೋ ಒಂದು ಪ್ರವಾಸಿ ಕ್ರೆಡಿಟ್‌ ಕಾರ್ಡ್‌ ಖರೀದಿಸಿದರೆ ಜೇಬಿಗೆ ಕತ್ತರಿ ಬೀಳುವುದಂತೂ ಗ್ಯಾರಂಟಿ. ಅದಕ್ಕಾಗಿ ಪ್ರವಾಸಿ ಕ್ರೆಡಿಟ್‌ ಕಾರ್ಡ್‌ಕೊಳ್ಳುವ ಮುನ್ನ ಅನುಸರಿಸಬೇಕಾದ ಒಂದಷ್ಟು ಮಾಹಿತಿ ಇಲ್ಲಿದೆ.

ಬಡ್ಡಿ ದರ ವೀಕ್ಷಿಸಿ
ಸಾಮಾನ್ಯವಾಗಿ ಎಲ್ಲ ಕ್ರೆಡಿಟ್‌ ಕಾರ್ಡ್‌ ಖರೀದಿಯಲ್ಲಿ ವಾರ್ಷಿಕ ಶೇಕಡಾವಾರು ದರ (ಎಪಿಆರ್‌) ಪಾವತಿಸುವುದುಂಟು. ಇದರಲ್ಲಿ ಎರಡು ಮಾದರಿಯಿದೆ. ಏರಿಳಿತದಿಂದ ಕೂಡಿದ ಬಡ್ಡಿದರ ಮತ್ತು ಸ್ಥಿರಬಡ್ಡಿದರ. ಎÇÉಾ ಬ್ಯಾಂಕುಗಳು ನೀಡುವ ಬಹಳಷ್ಟು ಕ್ರೆಡಿಟ್‌ ಕಾರ್ಡಿನಲ್ಲಿ ಏರಿಳಿತದಿಂದ ಕೂಡಿದ ಬಡ್ಡಿದರದ ಮಾದರಿಯೇ ಹೆಚ್ಚು. ಈ ಬಡ್ಡಿದರಗಳು ಮತ್ತೂಂದು ಬಡ್ಡಿ ದರಗಳನ್ನು ಅವಲಂಬಿಸಿರುತ್ತವೆ. ಅಂದರೆ ಶೇರು ಸೂಚ್ಯಂಕದ ಏರಿಳಿತ ಇದರ ಮೇಲೆ ಪ್ರಭಾವ ಬೀರುತ್ತದೆ. ಜೊತೆಗೆ ಸೂಚ್ಯಂಕದ ಬದಲಾವಣೆಯಿಂದಾಗಿ ಕ್ರೆಡಿಟ… ಕಾರ್ಡಿನ ಬಡ್ಡಿದರದÇÉಾದ ಏರಿಳತಕ್ಕೆ ಕ್ರೆಡಿಟ್‌ ಕಾರ್ಡಿನ ಕಂಪನಿ ಯಾವುದೇ ಜವಾಬ್ದಾರಿ ಹೊರುವುದಿಲ್ಲ. ಸಾಲದ್ದಕ್ಕೆ ಬಡ್ಡಿದರದ ಬದಲಾವಣೆ ಕುರಿತು ಸೂಚನೆಯನ್ನೂ ನೀಡುವುದಿಲ್ಲ. ಹೀಗಾಗಿ ಸ್ಥಿರ ಬಡ್ಡಿದರ ಇರುವ ಕ್ರೆಡಿಟ್‌ ಕಾರ್ಡ್‌… ಖರೀದಿ ಮಾಡುವುದು ಸೂಕ್ತ. ಅದರಲ್ಲೂ ಸ್ಥಿರ ಬಡ್ಡಿದರ ಯಾವ ಕಂಪನಿಯಲ್ಲಿ ಕಡಿಮೆ ಇದೆ ಎಂಬುದನ್ನು ಪ್ರಾರಂಭ ಹಂತದಲ್ಲಿಯೇ ವೀಕ್ಷಿಸಿ ನಿರ್ಧಾರ ತೆಗೆದುಕೊಳ್ಳುವುದು ಒಳಿತು. ಕಂಪನಿಯು ಸ್ಥಿರ ಬಡ್ಡಿದರಗಳನ್ನು ಬದಲಾಯಿಸುತ್ತದೆ ಎಂಬುದು 
ನೆನಪಿರಲಿ. 

ವಾರ್ಷಿಕ ಶುಲ್ಕ
ಪ್ರವಾಸಿ ಕ್ರೆಡಿಟ್‌ ಕಾರ್ಡ್‌ ಖರೀದಿ ಮಾಡುವ ಯಾವುದೇ ವ್ಯಕ್ತಿ ಕಾರ್ಡ್‌ಗೆ ಸಂಬಂಧಿಸಿದಂತೆ ವಾರ್ಷಿಕ ಶುಲ್ಕ ಎಷ್ಟಿದೆ ಎಂಬುದನ್ನು ತಿಳಿಯಲೇಬೇಕು. ಸಾಮಾನ್ಯವಾಗಿ ಪ್ರವಾಸಿ ಕಾರ್ಡ್‌ಗಳನ್ನು ಆಫ‌ರ್‌ ಮಾಡುವ ಕಂಪನಿಗಳು ಟ್ರಾವೆಲ… ಇನುÏರೆನ್ಸ್‌, ಕಂಪನಿ ಸದಸ್ಯತ್ವ, ಸಹಾಯ ಸೇವೆ ಇತ್ಯಾದಿ ಪ್ರಯೋಜನಗಳನ್ನು ನಮ್ಮ ಮುಂದಿಡುತ್ತದೆ. ಆದರೆ ಈ ಎಲ್ಲ ಸೇವೆಯನ್ನು ಬಳಸಿಕೊಂಡರೆ ಮಾತ್ರ ವಾರ್ಷಿಕ ಶುಲ್ಕಕ್ಕೆ ಮಾನ್ಯತೆ. ಅಂದರೆ, ಕಂಪನಿ ನೀಡಿದ ಎÇÉಾ ಆಫ‌ರ್‌ಗಳನ್ನು ಸಾಮಾನ್ಯ ವ್ಯಕ್ತಿ ಬಳಸಿಕೊಳ್ಳದೆ ವಾರ್ಷಿಕ ಶುಲ್ಕವನ್ನು ಪಾವತಿ ಮಾಡಿದ ಎಂದಾದರೆ ಅದು ಆ ಕಂಪನಿಗೆ ಆತ ನೀಡುತ್ತಿರುವ ಹೆಚ್ಚಿನ ಪಾವತಿ ಎಂದೇ ಪರಿಗಣಿಸಬೇಕಾಗುತ್ತದೆ.  

ಕೆಲವೊಂದು ಕಂಪನಿಗಳು ವಾರ್ಷಿಕ ಶುಲ್ಕವನ್ನು ತೆಗೆದುಕೊಳ್ಳದೇ ಕಾರ್ಡ್‌ನೀಡುತ್ತವೆಯಾದರೂ, ಶುಲ್ಕ ಆಧಾರಿತ ಕಾರ್ಡ್‌ಗಳು ನಿಮ್ಮ ಕಾರ್ಡಿನ ಅಂಕಗಳನ್ನು ವೇಗವಾಗಿ ಹೆಚ್ಚಿಸುತ್ತವೆ ಎಂಬುದು ವಿಶೇಷ. ಕಾರ್ಡಿನ ಅಂಕಗಳ ಹೆಚ್ಚಳದಿಂದ ಆಗಾಗ ನೀವು ಕೊಂಡ ಕಾರ್ಡಿಗೆ ವಿಶೇಷ ರಿಯಾಯಿತಿ, ಆಫ‌ರ್‌ಗಳು ಬರುತ್ತಿರುತ್ತವೆ. ಆದರೆ ಇವೆಲ್ಲವೂ ನಿಮ್ಮ ಪ್ರವಾಸಿ ಕ್ರೆಡಿಟ್‌ ಕಾರ್ಡ್‌ ಹೇಗೆ ಬಳಕೆಯಾಗುತ್ತಿದೆ ಎಂಬುದನ್ನು ಅವಲಂಬಿಸಿರುತ್ತದೆ. 

ಸೈನ್‌ ಅಪ್‌ ಬೋನಸ್‌ 
ಸೈನ್‌ ಅಪ್‌ ಬೋನಸ್‌ ಎಂಬುದು ಕಂಪನಿಗಳು ತಾವು ನೀಡುವ ಕ್ರೆಡಿಟ… ಕಾರ್ಡ್‌ದಾರರಿಗೆ ತಮ್ಮ ಜಾಲತಾಣಗಳನ್ನು ವೀಕ್ಷಿಸಲು ಪ್ರೇರೇಪಿಸುವ ಒಳ ಒಪ್ಪಂದವಾಗಿರುತ್ತದೆ. ಸೈನ್‌ ಅಪ್‌ ಮಾಡಿದಾಗಲೆÇÉಾ ಟ್ರಾವೆಲ… ಕ್ರೆಡಿಟ… ಕಾರ್ಡ್‌ ಕಂಪನಿಯ ಬಳಕೆ ಹೆಚ್ಚಿ ಕಂಪನಿಯ ಜಾಹೀರಾತುಗಳು ಬರುತ್ತವೆ. ಅಂತೆಯೇ ಗ್ರಾಹಕನಿಗೆ ಕ್ಯಾಶ್‌ ಬ್ಯಾಕ್‌, ಹೆಚ್ಚಿನ ಟ್ರಾವೆಲ… ಮೀಲ್ಸ…, ರಿವಾರ್ಡ್‌ ಅಂಕಗಳು ದೊರೆಯುತ್ತವೆ ಇದು ಕಾರ್ಡ್‌ದಾರನ ಬೋನಸ್‌. ಕೆಲವೊಮ್ಮೆ ಬೋನಸ್‌ ಆಫ‌ರ್‌ ಗಳನ್ನು ಗ್ರಾಹಕ ಬಳಸಿದ ಕಾರ್ಡಿನ ಬಳಕೆ ಮತ್ತು ಜಾಲತಾಣದ ಬಳಕೆ ಆಧಾರದ ಮೇಲೆ ನೀಡುವುದುಂಟು. ಅಲ್ಲದೆ ಕೆಲವು ವಿಶೇಷ ಸಮಯದಲ್ಲಿ ಕಂಪನಿಗಳೇ ಬೋನಸ್‌ ರಿವಾಡ್ಡ್ ಕಾರ್ಯಕ್ರಮ ನೀಡಿ ಗ್ರಾಹಕರನ್ನು ಓಲೈಸುತ್ತವೆ. ಇಂತಹ ಸಮಯದಲ್ಲಿ ರಿವಾರ್ಡ್‌ಗಳ ಬಗ್ಗೆ ತುಸು ಯೋಚಿಸುವುದು ಒಳಿತು. ಕಾರ್ಡ್‌ಗಳನ್ನು ಖರೀದಿ ಮಾಡುವಾಗ ಸೈನ್‌ ಅಪ್‌ ಬೋನಸ್‌ ಅವಕಾಶವನ್ನು ತಪ್ಪದೇ ವೀಕ್ಷಿಸಬೇಕು. ಕೆಲವೊಮ್ಮೆ ವಾರ್ಷಿಕ ಶುಲ್ಕ ವಿನಾಯಿತಿ ಸಿಗಬಹುದು. ಟ್ರಾವೆಲ… ಕ್ರೆಡಿಟ್‌ ಕಾರ್ಡ್‌ ಖರೀದಿ ಮಾಡಿದವರಿಗೆ ದೊಡ್ಡ ಮಟ್ಟದ ಸೈನ್‌ ಅಪ್‌ ಬೋನಸ್‌ ಎಂದು ಹೋಟೆಲ… ರಿವಾರ್ಡ್‌ ಮತ್ತು ಉಚಿತ ಪ್ರಯಾಣಗಳನ್ನು ನೀಡುವುದೂ ಇದೆ. 

ವಿದೇಶಿ ವಿನಿಮಯ ಶುಲ್ಕ
 ಕ್ರೆಡಿಟ್‌ ಕಾರ್ಡ್‌ ಬಳಕೆ ದಾರರಿಗೆ ಸಾಮಾನ್ಯವಾಗಿ ವಿದೇಶದಲ್ಲಿ ಖರೀದಿ ಮಾಡಿದ ಮತ್ತು ಕಾರ್ಡ್‌ ಬಳಕೆ ಮಾಡಿದ ಸಂದರ್ಭದಲ್ಲಿ ವಿದೇಶಿ ವಿನಿಮಯ ಶುಲ್ಕವನ್ನು ವಿಧಿಸುವುದುಂಟು. ನಿಜವಾಗಿ ಹೇಳಬೇಕೆಂದರೆ ನಗದಿನ ವಿನಿಮಯಶುಲ್ಕವು ನೀವು ಕ್ರೆಡಿಟ್‌ ಕಾರ್ಡ್‌ ಖರೀದಿ ಮಾಡಿದ ಬ್ಯಾಂಕಿನಿಂದಲೇ ವಿಧಿಸಲ್ಪಡುತ್ತದೆ. ಹೀಗಾಗಿ ಪ್ರವಾಸಿ ಕ್ರೆಡಿಟ್‌ ಕಾರ್ಡ್‌ ಖರೀದಿ ಮಾಡುವ ಮುನ್ನ ಶೂನ್ಯ ವಿದೇಶಿ ವಿನಿಮಯ ಶುಲ್ಕವಿರುವ ಕಾರ್ಡ್‌ ಅನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ. ಕೆಲವೊಮ್ಮೆ ಇಂತಹ ಕಾರ್ಡ್‌ನ್ನು ಆಯ್ಕೆ ಮಾಡಿಕೊಳ್ಳುವುದರಿಂದ ನಿಮ್ಮ ಕಾರ್ಡಿನ ಅಂಕಗಳು ಕಡಿಮೆಯಾದರೂ ನಿಮ್ಮ ಕಾರ್ಡಿನ ಸಮಗ್ರ ಬಳಕೆಯಿಂದಾಗುವ ವಿಶೇಷ ರಿಯಾಯತಿ ಅಥವಾ ಆಫ‌ರ್‌ ಗಳಿಗೆ ನೀವು ಸದಾ ಭಾಜನರಾಗುತ್ತೀರಿ ಎಂಬುದು ನೆನಪಿರಲಿ.

ಪ್ರತ್ಯೇಕ ವಿಶ್ವಾಸಾರ್ಹತೆಯ ಅನುಕೂಲ
ಪ್ರವಾಸಿ ಕ್ರೆಡಿಟ್‌ ಕಾರ್ಡ್‌ ಬಳಕೆದಾರ ಆದ್ಯತೆಗೆ ಅನುಗುಣವಾಗಿ ಕಂಪನಿಗಳು ಅನೇಕ ಆಮಿಷಗಳನ್ನು ಒಡ್ಡುತ್ತವೆ. ಆದಾಗ್ಯೂ ಕಂಪನಿಗಳು ತಮ್ಮ ವಿಶಿಷ್ಟ(ಬಡ್ಡಿದರ, ವಾರ್ಷಿಕ ಶುಲ್ಕ ಸರಿಯಾಗಿ ಪಾವತಿಸಿದ) ಗ್ರಾಹಕನಿಗಾಗಿ ಹೆಚ್ಚಿನ ಕಾಳಜಿ ಮತ್ತು ಅನುಕೂಲವನ್ನು ನೀಡುತ್ತವೆ. ಅಭಿನಂದನಾಯುಕ್ತ ಹೋಟೆಲ… ಸ್ಟೇಗಳು, ಇತರರಿಂದ ಪತ್ಯೇಕವಾದ ಶೂನ್ಯ ವಿನಿಮಯ ಶುಲ್ಕ, ಉಚಿತ ಪ್ರವಾಸ ಅಥವಾ ಕೆಲವೊಂದು ದೇಶಗಳಿಗೆ ನಿಗದಿತ ಉಚಿತ ಪ್ರವಾಸ, ಕೆಲವು ದೇಶದ ಪ್ರವಾಸದ ಶುಲ್ಕದಲ್ಲಿ ಲೈಫ್ ಟೈಮ… ರಿಯಾಯಿತಿಗಳನ್ನು ನೀಡುವುದು ಇದೆ. ಹೀಗಾಗಿ ಇಂತಹ ವಿಶ್ವಾಸಾರ್ಹತೆಯ ಅನುಕೂಲವನ್ನು ನೀಡುವ ಕ್ರೆಡಿಟ್‌ ಕಾರ್ಡ್‌ ಕಂಪನಿಗಳ ಆಯ್ಕೆ ಮಾಡಿಕೊಳ್ಳುವುದು ಒಳಿತು. ಜೊತೆಗೆ ನಿಮ್ಮ ಪ್ರಯಾಣಕ್ಕೆ ಅವಶ್ಯಕವಾದ, ಬಳಕೆಗೆ ಯೋಗ್ಯವಾದ ಆಯ್ಕೆ ನಿಮ್ಮದಾಗಲಿ.

ಖಾತೆ ಬಗ್ಗೆ ಗಮನವಿರಲಿ
ಎÇÉಾ ಕ್ರೆಡಿಟ್‌ ಕಾರ್ಡಿನಂತೆ ಪ್ರವಾಸಿ ಕ್ರೆಡಿಟ್‌ ಕಾರ್ಡ್‌ ಸಹ ತಮ್ಮ ಬ್ಯಾಂಕ್‌ ಖಾತೆಯ ಆರ್ಥಿಕ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ತಮ್ಮ ಖಾತೆಯಲ್ಲಿ ಹಣವಿದ್ದು, ಕ್ರೆಡಿಟ್‌ ಕಾರ್ಡಿನ ಬಳಕೆ ನಿಗದಿತವಾಗಿ ಮಾಡುತ್ತಾ ವಾರ್ಷಿಕ ಶುಲ್ಕ, ಬಡ್ಡಿದರವನ್ನು ಸರಿಯಾಗಿ ಪಾವತಿಸುತ್ತಿದ್ದರೆ ವಿಶ್ವಾಸಾರ್ಹತೆ ಹೆಚ್ಚು. ಇಲ್ಲದಿದ್ದರೆ ಕಾರ್ಡಿನ ಅಂಕ ಕುಸಿಯುತ್ತದೆ. ಹೀಗಾಗಿ ತಮ್ಮ ಖಾತೆಯಲ್ಲಿ ಬಡ್ಡಿದರ.  ಪಾವತಿಗೆ ಅಗತ್ಯವಿರುವಷ್ಟು ಹಣ ಮೀಸಲಿಡಿ.

ಮಲ್ಟಿಪಲ… ಕಾರ್ಡ್‌
ಪ್ರವಾಸಿ ಕ್ರೆಡಿಟ… ಕಾರ್ಡ್‌ ಬಳಕೆದಾರರಾಗಿ ಬಿಸಿನಸ್‌ ಕ್ರೆಡಿಟ… ಕಾರ್ಡ್‌, ಸೆಕ್ಯೂರ್‌ ಕ್ರೆಡಿಟ್‌ ಕಾರ್ಡ್‌ ಬಳಸುತ್ತಿದ್ದರೆ ಪ್ರವಾಸಕ್ಕೆ ಬೇರೆ, ವಿದೇಶಿ ವಿನಿಯಮಕ್ಕೆ ಬೇರೆ ಹೀಗೆ ಕ್ರೆಡಿಟ್‌ ಕಾರ್ಡ್‌ ನ್ನು ಬಳಕೆ ಮಾಡಿಕೊಳ್ಳಬಹುದು. ಆದರೆ ನಿಮ್ಮ ಎÇÉಾ ಮಲ್ಟಿಪಲ… ಕ್ರೆಡಿಟ… ಕಾರ್ಡ್‌ಗಳಿಗೂ ಪ್ರತ್ಯೇಕ ವಾರ್ಷಿಕ ಶುಲ್ಕ ಪಾವತಿಸಬೇಕಾಗುತ್ತದೆ ಎಂಬದು ತಿಳಿದಿರಲಿ. ಅಲ್ಲದೆ ಈಗ ಎÇÉಾ ಖಾತೆ ಗಳಿಗೂ ಪ್ಯಾನ್‌, ಆಧಾರ್‌ ಲಿಂಕ್‌ ಸಾಮಾನ್ಯವಾಗಿರುವುದರಿಂದ ಇವೆಲ್ಲ ವ್ಯವಹಾರಗಳಿಗೆ ತೆರಿಗೆ ಪಾವತಿ ಹೆಚ್ಚಾಗದೇ ಇರದು. 

ರಾಂಗ್‌ ಕಾರ್ಡ್‌
– ಪ್ರವಾಸಿ ಕ್ರೆಡಿಟ್‌ ಕಾರ್ಡಿನಲ್ಲಿ ಪ್ರತಿ ಪ್ರವಾಸಕ್ಕೆ ಗ್ರಾಹಕನಿಗೆ ಪ್ರವಾಸ ಕುರಿತ ಅಂಕಗಳನ್ನು ನಿಗದಿ ಮಾಡುವ ಪ್ರತೀತಿ ಇದೆ. ಇದು ರಿವಾರ್ಡ್‌, ಆಫ‌ರ್‌ ಸಂಬಂಧಿಸಿದಂತೆ ನೀಡುವ ಅಂಕವಾಗಿರುತ್ತದೆ. ನಾನು ಯಾವುದೇ ರಿವಾರ್ಡ್‌ ಬಯಸದವನು. ಆಫ‌ರ್‌ಗಳಿಂದ ನನಗೇನೂ ಆಗಬೇಕಿಲ್ಲ ಎನ್ನುವ ಪ್ರವೃತ್ತಿ ನಿಮ್ಮದಾದರೆ ಈ ಪ್ರವಾಸಿ ಕಾರ್ಡ್‌ ನಿಮಗೆ. 

– ವಿದೇಶಿ ಪ್ರಯಾಣ ಮಾಡುವ ಕ್ರೆಡಿಟ್‌ ಕಾರ್ಡ್‌ದಾರನಿಗೆ ಕೆಲವೊಂದು ವಿಮಾನಗಳಲ್ಲಿ ವಿಐಪಿ ಕೋಟಾದ ಅನುಕೂಲವಿರುತ್ತದೆ. ನೀವು ವಿಐಪಿ ಆಗಿದ್ದೂ ವರ್ಷಕ್ಕೆ ಒಂದು ಅಥವಾ ಎರಡು ಬಾರಿ ಪ್ರವಾಸಿ ಕ್ರೆಡಿಟ… ಕಾರ್ಡ್‌ ಬಳಕೆ ಮಾಡುವಂತಿದ್ದರೆ ಅಂತಹ ಕಾರ್ಡ್‌ ನಿಮಗೆ ರಾಂಗ್‌ ಕಾರ್ಡ್‌. 

–  ಪ್ರತಿ ಪ್ರಯಾಣವನ್ನೂ ದೇಶದಲ್ಲಿಯೇ ಮಾಡುತ್ತಾ ಪ್ರವಾಸಿ ಕಾರ್ಡಿನಲ್ಲಿ ಅನವಶ್ಯಕ ಶುಲ್ಕವನ್ನು ಪಾವತಿ ಮಾಡುವಿರಾದರೆ ಅಂತಹ ಕಾರ್ಡ್‌ ಸಹ ನಿಮಗೆ ರಾಂಗ್‌ ಕಾರ್ಡ್‌ ಆಗಿಯೇ ಪರಿಣಮಿಸುತ್ತದೆ.

– ಅನಂತನಾಗ್‌

ಟಾಪ್ ನ್ಯೂಸ್

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.