ಮರ ಮುಗ್ಗಟ್ಟು; ಬಿಲ್ಟ್ ಇನ್‌ ಫ‌ರ್ನಿಚರ್‌


Team Udayavani, Jan 20, 2020, 5:30 AM IST

LEAD-fu-(3)

ಯಾವ ಯಾವುದೋ ದೇಶಗಳಿಂದ ಬಂದ ಮರಗಳ ಗುಣಾವಗುಣಗಳು ನಮಗೆ ಸುಲಭದಲ್ಲಿ ತಿಳಿಯುವುದಿಲ್ಲ! ಇನ್ನು ಪ್ಲೆ„ವುಡ್‌ ಬಳಸೋಣ ಎಂದರೆ ಅವುಗಳಿಗೆ ವಿಷಕಾರಿ ರಾಸಾಯನಿಕಗಳನ್ನು ಹೊಡೆದಿರುತ್ತಾರೆ. ಅಲ್ಲದೆ ಮರಗಳ ಬೆಲೆಯೂ ದುಬಾರಿ. ಇದಕ್ಕೆಲ್ಲಾ ಪರಿಹಾರವೇನು?

ಮನೆ ಕಟ್ಟುವುದೇ ದುಬಾರಿ ಸಂಗತಿ. ಇನ್ನು ಮನೆ ಕಟ್ಟಿದ ಮೇಲೆ ಅದಕ್ಕೆ ಹೊಂದುವ ಪೀಠೊಪಕರಣಗಳನ್ನು ಮಾಡಿಸಬೇಕೆಂದರೆ ಅದಕ್ಕೊಂದಷ್ಟು ಲಕ್ಷಗಳನ್ನು ಹೊಂದಿಸಬೇಕಾಗುತ್ತದೆ, ಜೊತೆಗೆ ಇತ್ತೀಚಿನ ದಿನಗಳಲ್ಲಿ ಒಳ್ಳೆಯ ಮರಗಳು ಸಿಗುವುದೂ ಕಷ್ಟ, ಕಾಡನ್ನೆಲ್ಲ ಕಡಿದು ಹಾಕಲಾಗಿದೆ. ಮಾರುಕಟ್ಟೆಯಲ್ಲಿ ಸಿಗುವುದು ಬಹುತೇಕ ಪರದೇಶಿ ಮರ, ಅದನ್ನೇ ಅವರು “ಟೀಕು’ ಅಂತಾರೆ, “ಹೊನ್ನೆ’ ಅಂತಾರೆ, – ಆಸ್ಟ್ರೇಲಿಯ, ಮಲೇಷಿಯ, ಆಫ್ರಿಕ… ಎಲ್ಲೆಲ್ಲಿಂದಲೋ ಬಂದವು ಈ ಮರಗಳು. ಅದರ ಗುಣಾವಗುಣಗಳು ನಮಗೆ ಸುಲಭದಲ್ಲಿ ತಿಳಿಯುವುದೂ ಇಲ್ಲ! ಇನ್ನು ಪ್ಲೆ„ವುಡ್‌ ಬ್ಲ್ಯಾಕ್‌ಬೋರ್ಡ್‌ ಬಳಸೋಣ ಎಂದರೆ ಅವು ಕೂಡ ಕಡಿಮೆಗೇನೂ ಸಿಗುವುದಿಲ್ಲ. ಜೊತೆಗೆ ಅವುಗಳಲ್ಲಿ ವಿಪರೀತ ಎನ್ನುವಷ್ಟು ವಿಷಕಾರಿ ರಾಸಾಯನಿಕಗಳನ್ನು ಹುಳಗಳು ಹೊಡೆಯದಿರಲಿ ಎಂದು ಹಾಕಿರುತ್ತಾರೆ. ಇವುಗಳನ್ನು ಬಳಸುವ ಮೊದಲು, ಪ್ರçಮರ್‌ ಕೋಟ್‌ ಜೊತೆಗೆ ಎರಡು ಮೂರು ಪದರ ಎನಾಮೆಲ್‌ ಪೇಂಟ್‌ ಹೊಡೆದೇ ಬಳಸಬೇಕು, ಇಲ್ಲದಿದ್ದರೆ ಅಲರ್ಜಿ ಆಗುವ ಸಾಧ್ಯತೆ ಇರುತ್ತದೆ. ಈ ಎಲ್ಲ ಅಂಶಗಳನ್ನು ಪರಿಶೀಲಿಸಿದರೆ, ನಮ್ಮಲ್ಲಿ ಈ ಹಿಂದೆ ಇದ್ದ ಜಗುಲಿ ಕಟ್ಟೆಗಳ ತರಹ ಇಟ್ಟಿಗೆ ಸಿಮೆಂಟಿನಿಂದಲೇ ಆಸನಗಳನ್ನು ಆದಷ್ಟೂ ಮಾಡಿಕೊಂಡರೆ, ಕಾಡು ನಾಶ ಕಡಿಮೆ ಆಗುವುದರ ಜೊತೆಗೆ ಸಾಕಷ್ಟು ಉಳಿತಾಯವನ್ನೂ ಮಾಡಬಹುದು!

ಲಿವಿಂಗ್‌ ರೂಮಿನಲ್ಲಿ ಜಗುಲಿ ಕಟ್ಟೆ
ಒಮ್ಮೆ ಮನೆಯ ವಿವಿಧ ಕೋಣೆಗಳನ್ನು ಹಾಗೂ ಅವುಗಳಲ್ಲಿ ಬರುವ ಪೀಠೊಪಕರಣಗಳನ್ನು ನಿರ್ಧರಿಸಿದ ಮೇಲೆ, ಪದೇಪದೆ ಅವುಗಳ ಸ್ಥಳವನ್ನು ಬದಲಾಯಿಸುವ ಅಗತ್ಯ ಬರುವುದಿಲ್ಲ! ಈ ರೀತಿಯಾಗಿ ನಿರ್ಧಾರಿತ ಫ‌ನೀìಚರ್‌ಗಳನ್ನು ಸಿಮೆಂಟ್‌ ಹಾಗೂ ಇಟ್ಟಿಗೆ ಬಳಸಿಯೂ ಕಟ್ಟಿಕೊಳ್ಳಬಹುದು. ಚೌಕಾಕಾರವಾಗಿ ಕೋಣೆಗಳನ್ನು ಮೊದಲು ಕಟ್ಟಿ, ಅದಕ್ಕೆ ನೆಲಹಾಸು- ಫ್ಲೋರಿಂಗ್‌ ಹಾಕಿ, ಅದರ ಮೇಲೆ ಪೀಠೊಪಕರಣಗಳನ್ನು ಇಡುವ ಬದಲು, ನಮಗೆ ಬೇಕಾದ ರೀತಿಯಲ್ಲಿ ಎತ್ತರಿಸಿಕೊಂಡು, ನೆಲಹಾಸು ಹಾಕಿದರೆ, ಅದೇ ಆಸನವಾಗಿಬಿಡುತ್ತದೆ. ಹಾಗೆಯೇ ಒರಗಲೂ ಕೂಡ ಸೂಕ್ತ ರೀತಿಯಲ್ಲಿ ಇಳಿಜಾರು ಮಾಡಿಕೊಂಡರೆ- ಮರಮುಟ್ಟುಗಳ ಅಗತ್ಯವೇ ಇಲ್ಲದೆ ಕೂರಲು ವಿಶಾಲವಾದ ಆಸನಗಳು ತಯಾರಾಗಿಬಿಡುತ್ತವೆ. ಹೀಗೆ ಮಾಡುವಾಗ ನಾವು ನಮಗೆ ಯಾವ ಎತ್ತರದ ಆಸನ ಹಾಗೂ ಎಷ್ಟು ಇಳಿಜಾರಿನ ಒರಗಲು ಬೇಕು ಎಂಬುದನ್ನು ಮೊದಲೇ ನಿರ್ಧರಿಸಬೇಕು. ಸಾಮಾನ್ಯವಾಗಿ ನಾವು ಕೂರುವ ಆಸನ ಒಂಬತ್ತು ಇಂಚಿನಿಂದ ಒಂದು ಅಡಿಯಷ್ಟು ಎತ್ತರ ಇರುತ್ತದೆ. ಅದರ ಮೇಲೆ ಮೆದು ಹಾಸನ್ನು ಹಾಕಲಾಗುತ್ತದೆ. ಅದೇ ರೀತಿ, ಒರಗಲು ಒಂದೂವರೆ ಅಡಿಯಿಂದ ಎರಡು ಅಡಿಗಳ ವರೆಗೆ ಇಳಿಜಾರು ಮಾಡಿಕೊಳ್ಳಬಹುದು, ಅಲ್ಲಿಗೂ ಕುಷನ್‌ ಬರುತ್ತದೆ.

ರೆಡ್‌ ಆಕ್ಸೆçಡ್‌ ಫಿನಿಶ್‌
ಈ ರೀತಿಯ ಬಿಲ್ಟ್ ಇನ್‌ ಫ‌ನೀìಚರ್‌- ಕಟ್ಟಿಟ್ಟ ಪೀಠೊಪಕರಣಗಳು ನಮಗೇನೂ ಹೊಸದಲ್ಲ! ಅನೇಕ ಪುರಾತನ ದೇವಸ್ಥಾನಗಳಲ್ಲಿ, ಬೇಲೂರು- ಹಳೇಬೀಡು ದೇವಸ್ಥಾನಗಳಲ್ಲೂ ಕೂಡ ಈ ಮಾದರಿಯ ಕೂರುವ ವ್ಯವಸ್ಥೆ ಮಾಡಿರುವುದನ್ನು ನೋಡಬಹುದು. ಈ ಆಸನಗಳನ್ನು ಕಲ್ಲಿನಲ್ಲಿ ಕಡೆದು ಮಾಡಿದ್ದರೂ ಅವುಗಳ ಅಳತೆ ಮಾನವರ ಅಂಗಾಂಗಗಳಿಗೆ ಸರಿಹೊಂದುವಂತೆ ಮಾಡಿರುವುದರಿಂದ, ಕೂತರೆ ತುಂಬಾ ಆರಾಮ ಎನಿಸುತ್ತದೆ! ನೂರಾರು ವರ್ಷ ಕಳೆದರೂ ಇನ್ನೂ ಉಪಯೋಗಿಸಬಹುದಾದ ರೀತಿಯಲ್ಲೇ ಇವೆ! ಇನ್ನು ಹಳೆ ಮನೆಗಳ ಮುಂದೆ ಜಗುಲಿ ಕಟ್ಟೆಗಳಿದ್ದು, ಅವೆಲ್ಲವೂ ಇಂದಿಗೂ ಬಳಕೆಯಲ್ಲಿವೆ! ಇವಕ್ಕೆಲ್ಲ ರೆಡ್‌ ಆಕ್ಸೆçಡ್‌ ಫಿನಿಶ್‌ ಮಾಡಿರುತ್ತಿದ್ದರು.

ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಬಿಲ್ಟ್ ಇನ್‌ ಇರುತ್ತದೆ!
ಎಲ್ಲರ ಮನೆಯಲ್ಲೂ ಒಂದು ಸ್ಥಳದಲ್ಲಂತೂ ಕಟ್ಟಿಟ್ಟ ಪೀಠೊಪಕರಣ ಖಂಡಿತವಾಗಿಯೂ ಕಂಡುಬರುತ್ತದೆ, ಅದು ಅಡುಗೆ ಮನೆಯಲ್ಲಿ! ಇಲ್ಲಿ ಈ ಮಾದರಿಯವು ಅನಿವಾರ್ಯ ಎಂದು ಎಲ್ಲರೂ ಸಿದ್ಧ ಪೀಠೊಪಕರಣಗಳ ಮೊರೆ ಹೋಗುತ್ತಾರೆ. ಒಮ್ಮೆ ಕೊಳಾಯಿ ಸ್ಥಳ ನಿಗದಿಯಾದರೆ, ಸಿಂಕ್‌ ಡ್ರೆçನ್‌ ಬೋರ್ಡ್‌ ಇತ್ಯಾದಿಗಳ ಸ್ಥಳವೂ ಫಿಕ್ಸ್‌ ಆಗಿಬಿಡುತ್ತದೆ. ಹಾಗಾಗಿ, ನಾವು ಅಡುಗೆ ಮನೆಯಲ್ಲಿ ಕಟ್ಟಿಡುವ ಫ‌ನೀìಚರ್‌ ಬಳಸುವುದು. ಇದೇ ರೀತಿಯಲ್ಲಿ ನಾವು ಇತರೆ ಕೋಣೆಗಳಿಗೂ ಕಟ್ಟಿಡುವ ಪೀಠೊಪಕರಣಗಳನ್ನು ವಿಸ್ತರಿಸಬಹುದು.

ಸಿಮೆಂಟ್‌ ಮಂಚಗಳು ಬೆಟರ್‌
ಒಂದು ಮಂಚ ಮಾಡಲು ಸಾಕಷ್ಟು ಮರಮುಟ್ಟುಗಳನ್ನು ಬಳಸಬೇಕಾಗುತ್ತದೆ. ಇವುಗಳ ಕಾಲು ಹಾಗೂ ಹಲಗೆಗಳ ದಪ್ಪ ಸಾಕಷ್ಟು ಇರಬೇಕಾಗುತ್ತದೆ, ಜೊತೆಗೆ ಜಾಯಿಂಟ್ಸ್‌- ಜೋಡಣೆಯೂ ಗಟ್ಟಿಮುಟ್ಟಾಗಿರಬೇಕಾಗುತ್ತದೆ. ಇಲ್ಲದಿದ್ದರೆ ಮಂಚ ಪ್ರತಿಬಾರಿ ಅಲುಗಾಡಿದರೂ “ಕ್ರೀಂ ಕ್ರೂಮ್‌’ ಎಂದು ಕೀರಲು ಶಬ್ದ ಬರುವ ಸಾಧ್ಯತೆ ಇರುತ್ತದೆ. ಹಾಗೆಯೇ ಮರಮುಟ್ಟುಗಳು ಬಾಗಿದರೆ, ಬೆನ್ನಿಗೆ ಸರಿಯಾಗಿ ಆಧಾರ ಸಿಗದೆ, ಬೆನ್ನುಹುರಿ ನೋವು ಕಾಣಿಸಿಕೊಳ್ಳಬಹುದು. ಇದೆಲ್ಲದಕ್ಕೆ ಉತ್ತರ- ಸಿಮೆಂಟ್‌ ಮಂಚಗಳು! ಸುಮಾರು ಒಂದು ಅಡಿಯಿಂದ ಒಂದೂವರೆ ಅಡಿಯವರೆಗೆ- ನಮ್ಮ ಅನುಕೂಲಕ್ಕೆ ತಕ್ಕಂಥ ಎತ್ತರದಲ್ಲಿ ಮೂರು ಇಂಚು ದಪ್ಪದ ಆರ್‌.ಸಿ.ಸಿ ಹಲಗೆಯನ್ನು ಹಾಕಿಕೊಂಡರೆ- ಮಂಚ ತಯಾರು. ಇದನ್ನೇ ಸ್ವಲ್ಪ ಕಲಾತ್ಮಕವಾಗಿಯೂ ಮಾಡಿಕೊಳ್ಳಬಹುದು. ತಲೆಬದಿಯ ಗೋಡೆ ಕಡೆ ಸ್ವಲ್ಪ ಇಳಿಜಾರು ನೀಡಬಹುದು, ಸೊಳ್ಳೆ ಪರದೆ ಕಟ್ಟಿಕೊಳ್ಳಲು ಸೂಕ್ತ ಕಂಬಗಳನ್ನೂ ನಿರ್ಮಿಸಿಕೊಳ್ಳಬಹುದು! ಮಂಚದ ಹಲಗೆಯ ಕೆಳಗೆ ಬೆಡ್‌ಶೀಟ್‌ ಇತ್ಯಾದಿ ಇಟ್ಟುಕೊಳ್ಳಲು ಕಪಾಟುಗಳನ್ನೂ ಮಾಡಿಕೊಳ್ಳಬಹುದು. ಸಿಮೆಂಟ್‌ನಿಂದ ಮಾಡಿದ ಮಂಚಕ್ಕೆ ಹುಳ ಹೊಡೆಯುವುದಾಗಲೀ, ಬಾಗುವುದಾಗಲೀ ಆಗುವುದೇ ಇಲ್ಲ. ನಮಗೆ ಇಷ್ಟವಾದ ಬಣ್ಣಗಳನ್ನೂ ಈ ಸಿಮೆಂಟ್‌ ಮಂಚಗಳಿಗೆ ಬಳಿದುಕೊಳ್ಳಬಹುದು!

ಗೋಡೆಯಲ್ಲಿ ಗೂಡು ಶೆಲ್ಫ್
ಈಗಿನ ವೇಗದ ದಿನಗಳಲ್ಲಿ ಎಲ್ಲವೂ ದಿಢೀರ್‌ ಎಂದು ಆಗಬೇಕು ಎಂದಿರುತ್ತದೆ, ಅಡುಗೆಮನೆಯಲ್ಲಿ ಬಿಸಿಬಿಸಿಯಾಗಿ ತಿಂಡಿ ತೀರ್ಥ ತಯಾರಾಗುತ್ತಿದ್ದಂತೆ, ತಿಂದು ಕೆಲಸಕ್ಕೆ ಇಲ್ಲವೇ ಶಾಲೆಗೆ ಹೋಗಬೇಕಾಗುತ್ತದೆ. ಹಾಗಾಗಿ, ಒಂದು ಕಾಂಕ್ರೀಟ್‌ ಇಲ್ಲವೇ ಗ್ರಾನೈಟ್‌ ಹಲಗೆಯನ್ನು ಕಿಚನ್‌ ಹತ್ತಿರ ಹಾಕಿಕೊಂಡರೆ, ಅದೇ ಡೈನಿಂಗ್‌ ಟೇಬಲ್‌ ಮಾದರಿಯಾಗಿರುತ್ತದೆ. ಮನೆ ಮಂದಿಯೆಲ್ಲ ಅದನ್ನೇ ಬಳಸಬೇಕು ಎಂದರೆ ಸ್ವಲ್ಪ ವಿಶಾಲವಾಗಿ ಕಟ್ಟಿಕೊಳ್ಳಬೇಕು. ಒಬ್ಬರು ಕೂರಲು ಸುಮಾರು ಎರಡು ಅಡಿ ಅಗಲದ ಜಾಗ ಬೇಕಾಗುತ್ತದೆ. ಎರಡೂ ಬದಿ ಕೂತು ತಿನ್ನಲು ಸುಮಾರು ನಾಲ್ಕು ಅಡಿ ಉದ್ದ ಹಾಗೂ ಎರಡು ಅಗಲ ಇದ್ದರೆ ನಾಲ್ಕೈದು ಜನರಿಗೆ ಸಾಲುತ್ತದೆ. ಜೊತೆಗೆ ಜಾಮ್‌, ಜೆಲ್ಲಿ, ಉಪ್ಪಿನಕಾಯಿ ಇತ್ಯಾದಿ ಡಬ್ಬ, ಬಾಟಲಿಗಳನ್ನು ಇಡಲು ಸಣ್ಣದೊಂದು ಬಿಲ್ಟ್ ಇನ್‌ ಶೆಲ್ಫ್ ಅನ್ನೂ ಸಹ ಗೋಡೆಯಲ್ಲೇ ಗೂಡಿನ ಮಾದರಿಯಲ್ಲಿ ಮಾಡಿಕೊಳ್ಳಬಹುದು.

ಹಣ ಉಳಿಸುವುದರ ಜೊತೆಗೆ ಪರಿಸರಸ್ನೇಹಿಯಾಗಿಯೂ ಆಗಿರುವ ಈ ಬಿಲ್ಟ್ ಇನ್‌ಗಳನ್ನು ಸ್ವಲ್ಪ ಹುಷಾರಾಗಿ ಯೋಚಿಸಿ ನಿರ್ಧರಿಸಬೇಕು, ಒಮ್ಮೆ ಕಟ್ಟಿಕೊಂಡರೆ, ಬದಲಾಯಿಸುವುದು ಮರದ ಪೀಠೊಪಕರಣಗಳನ್ನು ಬದಲಾಯಿಸಿದಷ್ಟು ಸುಲಭವಲ್ಲ!

ಹೆಚ್ಚಿನ ಮಾಹಿತಿಗೆ: 9844132826

 - ಆರ್ಕಿಟೆಕ್ಟ್ ಕೆ. ಜಯರಾಮ್‌

ಟಾಪ್ ನ್ಯೂಸ್

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.