ಭೂತಯ್ಯನ ಹೋಟೆಲ್‌

Team Udayavani, Feb 11, 2019, 12:30 AM IST

hotel10.jpg

ತುಮಕೂರು ಜಿಲ್ಲೆಯ ಪ್ರಮುಖ ತಿಂಡಿ ಎಂದರೆ ತಟ್ಟೆ ಇಡ್ಲಿ, ಚಿತ್ರಾನ್ನ ಮುಂತಾದವು, ಊಟಕ್ಕೆ ಅಂದ್ರೆ ಪ್ರಮುಖವಾದದ್ದು ಮುದ್ದೆ, ಚಪಾತಿ. ಕ್ಯಾತಸಂದ್ರ ಬಳಿಯ ಪವಿತ್ರಾ ಹೋಟೆಲ್‌ ತಟ್ಟೆ ಇಡ್ಲಿಗೆ ಹೇಗೆ ಫೇಮಸೊ ಅದೇ ತರಹದ ಹೋಟೆಲ್‌ಗ‌ಳು ಜಿಲ್ಲೆಯ ಇತರೆ ತಾಲೂಕುಗಳಲ್ಲೂ ಇವೆ. ಅಂತಹ ಹೋಟೆಲ್‌ಗ‌ಳಲ್ಲಿ ಕುಣಿಗಲ್‌ನ ಭೂತಯ್ಯನ ಹೋಟೆಲ್‌ ಕೂಡ ಒಂದು.

ಕುಣಿಗಲ್‌ ಪಟ್ಟಣದ ಪೊಲೀಸ್‌ ಠಾಣೆ ಪಕ್ಕದಲ್ಲೇ 45 ವರ್ಷಗಳ ಹಿಂದೆ ಸ್ಥಳೀಯರೇ ಆದ ಮಹದೇವಯ್ಯ(ಭೂತಯ್ಯ) ಪುಟ್ಟದಾಗಿ ಪೆಟ್ಟಿಗೆ ಹೋಟೆಲ್‌ ಇಟ್ಟುಕೊಂಡು ಮನೆಯಲ್ಲೇ ಅಡುಗೆ ಮಾಡಿಕೊಂಡು ತಂದು ಗ್ರಾಹಕರಿಗೆ ಬಡಿಸುತ್ತಿದ್ದರು. ಕಡಿಮೆ ದರದಲ್ಲಿ ಮನೆಯಲ್ಲೇ ಮಾಡಿದ ಆಹಾರ ಸಿಗುತ್ತಿದ್ದ ಕಾರಣ, ಜನರು ಮಹದೇವಯ್ಯರ ಹೋಟೆಲ್‌ಗೆ ಬರುತ್ತಿದ್ದರು. ಬೆಂಗಳೂರಿಂದ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ಹೋಗುವ ಪ್ರವಾಸಿಗರು, ವಾಹನ ಸವಾರರು ಬೆಳಗ್ಗಿನ ತಿಂಡಿಗೆ ರಸ್ತೆ ಪಕ್ಕದಲ್ಲೇ ಇದ್ದ ಭೂತಯ್ಯನ ಹೋಟೆಲ್‌ಗೆ ಬರುತ್ತಿದ್ದರು. ಈಗ ಮಹದೇವಯ್ಯ ಅವರ ಮಗ ಶಿವಕುಮಾರ್‌ ಹೋಟೆಲ್‌ ನೋಡಿಕೊಳ್ಳುತ್ತಿದ್ದು, ಇವರಿಗೆ ಪತ್ನಿ ರೂಪಾ ಸಾಥ್‌ ನೀಡುತ್ತಾರೆ. ಮನೆಯ ಮುಂಭಾಗದಲ್ಲೇ ಗೋಡೆ ಕಟ್ಟಿ, ಜಂಕ್‌ಶೀಟ್‌ ಹಾಕಿಕೊಂಡು ಅದಕ್ಕೆ ಸಿದ್ದಲಿಂಗೇಶ್ವರ ಹೋಟೆಲ್‌ ಎಂದು ನಾಮಕರಣ ಮಾಡಿದ್ದಾರೆ.   

ಇಡ್ಲಿ ಜೊತೆ ತುಪ್ಪ:
ಈ ಹೋಟೆಲ್‌ನ ವಿಶೇಷ ತಿಂಡಿ ಅಂದ್ರೆ ಇಡ್ಲಿ. 40 ರೂ.ಗೆ 2 ತಟ್ಟೆ ಇಡ್ಲಿ, ವಡೆ ಜೊತೆಗೆ ಕೆಂಪ್‌ ಚಟ್ನಿ, ಸಾಗು ಹಾಗೂ ತುಪ್ಪ ಕೊಡುತ್ತಾರೆ. ತುಪ್ಪವನ್ನು ಮನೆಯಲ್ಲೇ ತಯಾರಿಸುತ್ತಾರೆ. 25 ರೂ.ಗೆ ರೈಸ್‌ಬಾತ್‌ ಸಿಗುತ್ತದೆ. ಬೆಳಗ್ಗೆ 7ರಿಂದ 12 ರವರೆಗೆ ಚಿತ್ರಾನ್ನ, ಟೊಮೆಟೋ ಬಾತ್‌, ಫ‌ಲಾವ್‌, ಪೂರಿ ಸಹ ಮಾಡಲಾಗುತ್ತದೆ.

ಮಧ್ಯಾಹ್ನಕ್ಕೆ ಮುದ್ದೆ ಊಟ:
ತಿಂಡಿ ಜತೆಗೆ ಮುದ್ದೆ ಊಟಕ್ಕೂ ಹೋಟೆಲ್‌ ಹೆಸರುವಾಸಿ. 50 ರೂ.ಗೆ ಮುದ್ದೆ, ಅನ್ನ ಸೊಪ್ಪಿನ ಸಾರು, ಪಲ್ಯ, ಮಜ್ಜಿಗೆ, ಉಪ್ಪಿನಕಾಯಿ, ಹಪ್ಪಳ, ಸೌತೆ ಕಾಯಿ, ಈರುಳ್ಳಿ ಕೊಡ್ತಾರೆ. ಉಪ್ಸಾರು, ಬಸ್ಸಾರು, ಸಪ್ಪೆಸಾರು, ತರಕಾರಿ ಸಾರು, ಮೊಳಕೆ ಕಟ್ಟಿದ ಸಾರು ಹೀಗೆ ಒಂದೊಂದು ದಿನ ಒಂದೊಂದು ಬಗೆಯ ಸಾಂಬಾರ್‌ ಮಾಡ್ತಾರೆ.

ಪ್ರವಾಸಿಗರೇ ಗ್ರಾಹಕರು:
ಮಂಗಳೂರು ಬೆಂಗಳೂರು ರಸ್ತೆಯ ಪಕ್ಕದಲ್ಲೇ ಈ ಹೋಟೆಲ್‌ ಇರುವ ಕಾರಣ, ಎಡೆಯೂರು, ಮಂಗಳೂರು, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಉಡುಪಿ, ಹಾಸನ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಹೋಗುವ ಪ್ರವಾಸಿಗರು, ಬೈಕ್‌ರೈಡ್‌ ಹೋಗುವವರು, ಇತರೆ ವಾಹನ ಸವಾರರು ಈ ಹೋಟೆಲ್‌ನ ಪ್ರಮುಖ ಗ್ರಾಹಕರು. ಈಗ ಬೈಪಾಸ್‌ ರೋಡ್‌ ಆಗಿದ್ರೂ ಕೆಲವರು ನೆನಪಿಸಿಕೊಂಡು ಈ ಹೋಟೆಲ್‌ನಲ್ಲಿ ತಿಂಡಿ ತಿಂದು ಹೋಗ್ತಾರೆ. 
 
ಹೋಟೆಲ್‌ ಸಮಯ:
ಬೆಳಗ್ಗೆ 7 ಗಂಟೆಯಿಂದ ರಾತ್ರಿ 4 ಗಂಟೆಯವರೆಗೆ, ಭಾನುವಾರ ಮಧ್ಯಾಹ್ನದವರೆಗೆ ರಜೆ.

ಹೋಟೆಲ್‌ ವಿಳಾಸ:
ಬಿ.ಎಂ. ರೋಡ್‌, ಪೊಲೀಸ್‌ ಠಾಣೆ, ಕುಣಿಗಲ್‌ ಟೌನ್‌.

– ಭೋಗೇಶ ಆರ್‌. ಮೇಲುಕುಂಟೆ
– ಫೋಟೋ ಕೃಪೆ ಕುಣಿಗಲ್‌ ಲೋಕೇಶ್‌

ಟಾಪ್ ನ್ಯೂಸ್

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.