ತರಕಾರಿ, ನೀನಾದೆ ಉಪಕಾರಿ

Team Udayavani, Jul 15, 2019, 6:00 AM IST

ಭೂಮಿ ತಾಯಿ, ತನ್ನನ್ನು ನಂಬಿದವರನ್ನು ಯಾವತ್ತೂ ಕೈಬಿಡುವುದಿಲ್ಲ ಎಂಬ ಒಂದು ಮಾತಿದೆ. ವೃದ್ಧರೈತರೊಬ್ಬರು ತಮ್ಮ ತುಂಡು ಭೂಮಿಯನ್ನೇ ನಾಲ್ಕು ಭಾಗಗಳನ್ನಾಗಿ ವಿಂಗಡಿಸಿಕೊಂಡು, ಅಷ್ಟರಲ್ಲೇ ವಿವಿಧ ಬಗೆಯ ತರಕಾರಿ ಬೆಳೆಗಳನ್ನು ಬೆಳೆದು ಜೀವನೋತ್ಸಾಹ ತೋರಿರುವುದೇ ಅದಕ್ಕೆ ಸಾಕ್ಷಿ!

ಉದರಕ್ಕೆ ತುತ್ತು ಅನ್ನ ಕಂಡುಕೊಂಡು ಸಮಾಜದ ಎದುರು ತಲೆಯೆತ್ತಿ ನಿಲ್ಲಬೇಕು ಎನ್ನುವ ಛಲ ಪ್ರತಿಯೊಬ್ಬ ಮನುಷ್ಯನದೂ ಆಗಿರುತ್ತದೆ. ಹದಿಹರೆಯದವರೇ ಆಗಿರಲಿ, ಇಳಿ ವಯಸ್ಸಿನವರೇ ಆಗಿರಲಿ ಎಲ್ಲರನ್ನೂ ಸಮಾನರಾಗಿ ನೋಡುತ್ತಾಳೆ ಭೂಮಿ ತಾಯಿ. ತನ್ನನ್ನು ನಂಬಿದವರನ್ನು ಯಾವತ್ತೂ ಕೈಬಿಡುವುದಿಲ್ಲ ಎಂಬ ಒಂದು ಮಾತಿದೆ. ಅದಕ್ಕೆ ಸಾಕ್ಷಿಯೆಂಬಂತೆ ವೃದ್ಧ ರೈತನೊಬ್ಬ ತನ್ನ ತುಂಡು ಭೂಮಿಯಲ್ಲೇ ವಿವಿಧ ಬಗೆಗಳ ತರಕಾರಿ ಬೆಳೆಗಳನ್ನು ಜೀವನೋತ್ಸಾಹ ತೋರಿರುವುದೇ ಸಾಕ್ಷಿ.

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಟಿ ಬಸಾಪುರ ಗ್ರಾಮದ ವಯೋವೃದ್ಧ ಸುಮಾರು 70 ವರ್ಷದ ಆಸುಪಾಸಿನಲ್ಲಿರುವ ಜಿ. ಬಸಪ್ಪ ಮೂಲತ ಕೃಷಿ ಕುಟುಂಬದ ಹಿನ್ನಲೆಯವರು. ಪ್ರಾರಂಭದಲ್ಲಿ ಸಾಂಪ್ರಾದಾಯಿಕ ಬೆಳೆಗಳಾದ ಸಜ್ಜೆ, ನವಣೆ,ರಾಗಿಯಂತಹ ಬೆಳೆಗಳನ್ನು ಮಾತ್ರವೇ ಬೆಳೆಯುತ್ತಿದ್ದರು. ಅದರಿಂದ ಹೇಳಿಕೊಳ್ಳುವಂಥ ಲಾಭವೇನು ಬರುತ್ತಿರಲಿಲ್ಲ. ಬಂದ ಬೆಳೆ ತಮ್ಮ ಮನೆಗೆ ಸಾಕಾಗುತ್ತಿತ್ತು. ಇಷ್ಟನ್ನೇ ಬೆಳೆಯುವುದರಿಂದ ಆರ್ಥಿಕ ಸಂಕಷ್ಠಗಳು ಬಗೆಹರಿಯುವುದಿಲ್ಲ ಎಂಬುದು ಅರ್ಥವಾಗಿದ್ದು ಆಗಲೇ. ಪ್ರತಿ ವಾರ ಸಮೀಪದ ಸಂತೆಗೆ ತರಕಾರಿ ಕೊಳ್ಳಲು ಹೋಗುತ್ತಿದ್ದ ಇವರು, ತರಕಾರಿಗಳ ಮಾರುಕಟ್ಟೆ ಮೌಲ್ಯಗಳನ್ನು ತಿಳಿಯುತ್ತಾ ಹೋದರು.

ಮಾರುಕಟ್ಟೆ ಅಧ್ಯಯನ
ಫೆಬ್ರವರಿಯಿಂದ ಜೂನ್‌ವರೆಗೆ ಎಲ್ಲಾ ಬಗೆಯ ತರಕಾರಿಗಳಿಗೂ ಬಹುಬೇಡಿಕೆಯಿರುತ್ತದೆ ಮತ್ತು ಇದೇ ಸಮಯದಲ್ಲಿ ಅವುಗಳ ಬೆಲೆಯೂ ಗಗನ ಮುಟ್ಟಿರುತ್ತದೆ ಎಂಬುದು ಅವರ ಅನುಭವದ ಮಾತು. ಅದಕ್ಕೆ ಕಾರಣವನ್ನೂ ಅವರು ನೀಡುತ್ತಾರೆ. ಬೇಸಗೆಯಿಂದ ಮಳೆಗಾಲದವರೆಗೆ ರೈತರು ಹೊಲಗಳನ್ನು ಮಾಗಿ ಕಾಯಲು ಬಿಟ್ಟಿರುತ್ತಾರೆ. ಮದುವೆ- ಮುಂಜಿಗಳು ಈ ತಿಂಗಳಲ್ಲೇ ಹೆಚ್ಚಾಗಿ ನಡೆದು ಹೋಗುತ್ತವೆ. ಸೊಪ್ಪು ಕಾಯಿಪಲ್ಯಗಳು, ಕ್ಯಾರೆಟ್‌, ಬೆಂಡೆಕಾಯಿ ತರಕಾರಿಗಳಿಗೆ ಗ್ರಾಹಕ ಹೆಚ್ಚು ಹಣ ತೆತ್ತಾದರೂ ಕಾರ್ಯಕ್ರಮ ಮಾಡುತ್ತಾರೆ. ಹೀಗಾಗಿ ತರಕಾರಿ ಬೆಳೆಗಾರರಿಗೆ ಇದು ಸುಗ್ಗಿಯ ಕಾಲ.

ಕಳೆದ 6 ವರ್ಷಗಳಿಂದ ಬಸಪ್ಪ ತನ್ನ ಒಂದೆಕೆರೆ ತುಂಡು ಭೂಮಿಯಲ್ಲಿ ಥರಹೇವಾರಿ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಯಾವ ಕಾಲಮಾನದಲ್ಲಿ ಯಾವ ತರಕಾರಿಗೆ ಬಹುಬೇಡಿಕೆ ಇರುತ್ತದೆ ಎಂಬುದನ್ನು ಅನುಭವದ ಮೇಲೆ ಅರಿತಿರುವ ಬಸಪ್ಪ ಅವನ್ನೇ ಬೆಳೆದು ಲಾಭ ಪಡೆಯುತ್ತಾರೆ.

ಜಮೀನಿನ ವಿಂಗಡಣೆ
ಈ ವರ್ಷ ಕ್ಯಾರೆಟ್‌, ಜವಳಿಕಾಯಿ, ಆಗಲಕಾಯಿ, ಮೆಣಸಿನಕಾಯಿ, ಸಿಫಾಲ್ಕ, ಮೆಂತೆ, ಕೊತ್ತಂಬರಿ ರಾಜಗಿರಿ ಸೊಪ್ಪುಗಳನ್ನು ಬೆಳೆದು ಸಮೀಪದ ಮಾರುಕಟ್ಟೆ, ಸಂತೆಗಳಿಗೆ ಸರಬರಾಜು ಮಾಡಿದ್ದಾರೆ. ಇದರಿಂದಲೇ ಪ್ರತಿದಿನ 300 ರು. ಗಳಿಂದ 400 ರು. ಗಳನ್ನು ಗಳಿಸುತ್ತಾನೆ. ಈತನ ಬೆಳೆಗೆ ತಗಲುವ ವಾರ್ಷಿಕ ಖರ್ಚು ಬಹಳ ಕಡಿಮೆ. ಒಂದು ಎಕರೆ ಜಮೀನನ್ನು 4 ಭಾಗಗಳಾಗಿ ವಿಂಗಡಿಸಿಕೊಂಡು ಪ್ರತಿ ಭಾಗದಲ್ಲಿಯೂ ಮಡಿ ಮಾಡಿ ಬೇರೆ ಬೇರೆ ತರಕಾರಿಗಳನ್ನು ಹಾಕುತ್ತಾರೆ. ಹೊಲಕ್ಕೆ ಕೊಟ್ಟಿಗೆ ಗೊಬ್ಬರವನ್ನು ಹಾಕಿಸಲು, ಉಳುಮೆ ಮಾಡಲು, ತರಕಾರಿ ಬೀಜಗಳನ್ನು ಕೊಳ್ಳಲು ಒಟ್ಟು 1500 ರು. ಗಳನ್ನು ವಿನಿಯೋಗಿಸುತ್ತಾನೆ. ಬೆಳೆಯ ಮಧ್ಯದ ಅವಧಿಯಲ್ಲಿ ಒಂದು ಬಾರಿ ಮಾತ್ರ ಯುರಿಯಾ ಗೊಬ್ಬರವನ್ನು ಬೆಳೆಗೆ ಒದಗಿಸುತ್ತಾರೆ.

ಹಿಂದೆಲ್ಲಾ ಹಳ್ಳಿಯಲ್ಲಿ ವಾಹನ ಸೌಕರ್ಯ ಇರಲಿಲ್ಲ. ಹೀಗಾಗಿ ತರಕಾರಿಗಳ ಸಾಗಾಣಿಕೆಗೆ ಕಷ್ಟವಾಗುತ್ತಿತ್ತು. ಈಗ ಸಾರಿಗೆ ವ್ಯವಸ್ಥೆ ಅನುಕೂಲಕರವಾಗಿರುವುದರಿಂದ ನಿಗದಿತ ಸಮಯಕ್ಕೆ ಸಂತೆಗೆ ತೆರಳಿ ಉತ್ತಮ ದರ ನಿಗದಿಯಾದರೆ ಮಾತ್ರ ಮಾರಾಟ ಮಾಡುತ್ತಾರೆ. ಪ್ರತಿ 45 ದಿನಗಳಿಗೊಮ್ಮೆ ಬೆಳೆಗಳನ್ನು ಬದಲಾಯಿಸಿ ತನ್ನ ಜಮೀನಿನ ಜಾಗವನ್ನು ಸ್ವಲ್ಪವೂ ವ್ಯರ್ಥ ಮಾಡದೇ ಸಂಪೂರ್ಣವಾಗಿ ಬಳಸಿಕೊಂಡು 4 ರಿಂದ 5 ಬಗೆಯ ತರಕಾರಿಗಳನ್ನು ಒಂದು ಎಕರೆ ಜಮೀನಿನಲ್ಲಿ ಬೆಳೆಯುತ್ತಿರುವುದು ಸಾಹಸವೇ ಸರಿ.
– ಪ್ರದೀಪ ಎಂ.ಬಿ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

 • ಕೇಂದ್ರ ಸರ್ಕಾರ, "ಸಹಮತಿ' ಎಂಬ ಹೊಸ ಸವಲತ್ತೂಂದನ್ನು ಪರಿಚಯಿಸುತ್ತಿದೆ. ಸಾಲ ಪಡೆಯುವುದು, ಮ್ಯೂಚುವಲ್‌ ಫ‌ಂಡ್‌ ಖರೀದಿಸುವುದು ಸೇರಿದಂತೆ, ಯಾವುದೇ ಹಣಕಾಸು ವಹಿವಾಟುಗಳನ್ನು...

 • ಸದ್ಯದ ಸನ್ನಿವೇಶದಲ್ಲಿ ಉತ್ತಮ ಬಡ್ಡಿದರ ನೀಡುವ ಭದ್ರವಾದ ಸರಕಾರಿ ಯೋಜನೆ ಯಾವುದಿದೆ ಎನ್ನುವ ಪ್ರಶ್ನೆಗೆ ಉತ್ತರ- 8.6% ಬಡ್ಡಿ ನೀಡುವ ಸೀನಿಯರ್‌ ಸಿಟಿಜನ್‌ ಸ್ಕೀಮ್‌. ಕಳೆದ...

 • ಹಿಂದೆಲ್ಲಾ ಒಂದು ಸಿನಿಮಾ ನೋಡಲು ಥಿಯೇಟರ್‌ಗೆ ಹೋಗುವ ಜರೂರತ್ತಿತ್ತು. ಟಿ.ವಿಯ ಆವಿಷ್ಕಾರದ ನಂತರ ವಾರಕ್ಕೊಂದು ಬಾರಿ ಪ್ರಸಾರವಾಗುತ್ತಿದ್ದ ಸಿನಿಮಾ ನೋಡಲು ಊರ...

 • ಎಸ್‌ ಪೆನ್‌ ಎನ್ನುವ ಡಿಜಿಟಲ್‌ ಲೇಖನಿ ಜೊತೆ ಬಿಡುಗಡೆಯಾಗುತ್ತಿರುವ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ನೋಟ್‌, ಸ್ಮಾರ್ಟ್‌ಪೋನುಗಳಲ್ಲಿ ಉತ್ಕೃಷ್ಟ ಗುಣಮಟ್ಟವನ್ನು...

 • ಮಳೆ ಯಾರಿಗೆ ತಾನೆ ಬೇಡ ಹೇಳಿ? ಆದರೆ ಅದು ನಮ್ಮ ಮನೆಗೆ ಹಾನಿ ಉಂಟು ಮಾಡುತ್ತದೆ ಎಂದರೆ ಒಂದಷ್ಟು ಗಲಿಬಿಲಿ ಸಾಮಾನ್ಯ. ಇಂಥ ಸಂದರ್ಭಗಳಲ್ಲಿ ಮೊದಲೇ ಎಚ್ಚೆತ್ತುಕೊಂಡು...

ಹೊಸ ಸೇರ್ಪಡೆ

 • ಪ್ರತಿ ಅಡಿಯ ಗಣಪತಿಗೆ 1.5ರಿಂದ 2 ಕೆ.ಜಿ ಪ್ಲಾಸ್ಟರ್‌ ಆಫ್ ಪ್ಯಾರಿಸ್‌ ಬಳಕೆಯಾಗುತ್ತದೆ. ಇನ್ನು ಸರಾಸರಿ 5 ಅಡಿ ಗಣಪನಿಗೆ ಕನಿಷ್ಠ 20 ಕೆಜಿ ಪ್ಲಾಸ್ಟರ್‌ ಆಫ್ ಪ್ಯಾರಿಸ್‌...

 • ಚಾಮರಾಜನಗರ: ಜಿಲ್ಲೆಯ ಬಂಡೀಪುರ ಹುಲಿ ರಕ್ಷಿತ ಅರಣ್ಯದಲ್ಲಿ ತಕ್ಷಣ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು, ಲಂಟಾನ ತೆರವುಗೊಳಿಸಬೇಕು, ಬಿದಿರು ಬೆಳೆಯಲು ಕ್ರಮ...

 • ರಾಜ್ಯ ರಾಜಕೀಯದಲ್ಲಿ ತಲ್ಲಣ ಉಂಟು ಮಾಡಿರುವ ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐಗೆ ವಹಿಸಲು ನಿರ್ಧರಿಸಿದ್ದು, ಪ್ರಕರಣ ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ...

 • ಬೆಂಗಳೂರು: ಟೆಲಿಫೋನ್‌ ಕದ್ದಾಲಿಕೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐಗೆ ವಹಿಸಿರುವುದು ರಾಜಕೀಯ ಮುಖಂಡರು ಮಾತ್ರವಲ್ಲದೆ, ರಾಜ್ಯದ ಹಿರಿಯ ಪೊಲೀಸ್‌ ಅಧಿಕಾರಿಗಳಲ್ಲಿ...

 • ಬೆಂಗಳೂರು: ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯಾಪ್ತಿಯ ಕಾಲೇಜು ಕ್ಯಾಂಪಸ್‌ಗಳೀಗ ಪ್ಲಾಸ್ಟಿಕ್‌ ಬಳಕೆಯಿಂದ ಮುಕ್ತವಾಗಿವೆ. ವಿದ್ಯಾರ್ಥಿಗಳನ್ನು...

 • ರಾಯಚೂರು: ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 348ನೇ ಆರಾಧನಾ ಮಹೋತ್ಸವದ ಉತ್ತರಾರಾಧನೆ ನಿಮಿತ್ತ ಭಾನುವಾರ ಪ್ರಹ್ಲಾದರಾಜರ ರಥೋತ್ಸವ ಅಸಂಖ್ಯ ಭಕ್ತರ...