Udayavni Special

ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಮತ್ತೆ ಬಂತು ವಿಆರ್‌ಎಸ್‌!


Team Udayavani, Sep 14, 2020, 8:21 PM IST

isiri-tdy-5

ಸಾಂದರ್ಭಿಕ ಚಿತ್ರ

ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಹಲವು ಬದಲಾವಣೆಗಳಿಗೆ ಕಾರಣವಾಗಿದ್ದ ವಿಆರ್‌ಎಸ್‌ ಯೋಜನೆ, ಎರಡು ದಶಕಗಳ ನಂತರ ಮತ್ತೆ ಸದ್ದು ಮಾಡತೊಡಗಿದೆ.

1999-2000 ರಲ್ಲಿ ಮೊದಲ ಬಾರಿಬ್ಯಾಂಕಿಂಗ್‌ ಉದ್ಯಮದಲ್ಲಿ ಸ್ವಯಂ ನಿವೃತ್ತಿ ಯೋಜನೆಯನ್ನು( ವಿ ಆರ್‌ಎಸ್‌ ) ಜಾರಿಗೆತರಲಾಯಿತು. ಈ ಯೋಜನೆಯಡಿಯಲ್ಲಿ ಆಗ 126714 ಸಿಬ್ಬಂದಿ ನಿವೃತ್ತಿ ಪಡೆದಿದ್ದರು. ಮಾನವ ಸಂಪನ್ಮೂಲದ ಗರಿಷ್ಠ ಬಳಕೆ ಮತ್ತು ಬ್ಯಾಂಕುಗಳ ನಿರ್ವಹಣಾ ವೆಚ್ಚವನ್ನು ಕಡಿತಗೊಳಿಸುವುದು ಇದರ ಹಿಂದಿನ ಉದ್ದೇಶವಾಗಿತ್ತು. ಹೀಗೆ ನಿವೃತ್ತಿ ಪಡೆದವರಿಗೆ ಒಳ್ಳೆಯ ಪ್ಯಾಕೇಜ್‌ ನೀಡಲಾಗಿತ್ತು ಎಂಬುದುಗಮನಿಸಬೇಕಾದ ಸಂಗತಿ.

ಎರಡು ದಶಕಗಳ ನಂತರ, ಈ ಸ್ವಯಂ ನಿವೃತಿ ಯೋಜನೆ ಬ್ಯಾಂಕಿಂಗ್‌ ಉದ್ಯಮವನ್ನು ಮರು ಪ್ರವೇಶಿಸಿದೆ. ಬ್ಯಾಂಕುಗಳ ದೊಡ್ಡಣ್ಣ ಎನಿಸಿದ “ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ’ಇದನ್ನು ಪ್ರಕಟಿಸಿದೆ. ಇದರ ಪ್ರಕಾರ 25 ವರ್ಷಗಳ ಸೇವೆಯನ್ನು ಪೂರ್ತಿ ಮಾಡಿದವರು ಮತ್ತು 55 ವರ್ಷ ದಾಟಿದವರು ಈಗ ವಿಆರ್‌ಎಸ್‌ ಪಡೆಯಲು ಅರ್ಹರು. ಈ ಯೋಜನೆ ಅಡಿಯಲ್ಲಿ, ಬಾಕಿ ಇರುವ ವರ್ಷಗಳ ಸೇವೆಯ 50% ಅಥವಾ ಗರಿಷ್ಠ 18 ತಿಂಗಳ ಸಂಬಳವನ್ನು ಎಕ್ಸ್‌ಗ್ರೇಶಿಯ ಎಂದು ಕೊಡಲಾಗುವುದು. ಜೊತೆಗೆ, ಪಿಂಚಣಿ, ಗ್ರಾಚುಯಿಟಿ, ಪ್ರಾವಿಡೆಂಟ್‌ ಫ‌ಂಡ್‌ ಮತ್ತು ಮೆಡಿಕಲ್‌ ಚಿಕಿತ್ಸಾ ವೆಚ್ಚವೂ ಸಿಗುತ್ತದೆ. ಈ ಯೋಜನೆ ಡಿಸೆಂಬರ್‌ 1, 2020 ರಿಂದ ಫೆಬ್ರವರಿ 2021ವರಗೆ ಓಪನ್‌ ಇರುತ್ತದೆ ಎನ್ನಲಾಗಿದೆ.

ಏಕೆ ಈ ನಿರ್ಧಾರ? :  ಬ್ಯಾಂಕಿಂಗ್‌ ಉದ್ಯಮದಲ್ಲಿ ಸಿಬ್ಬಂದಿಗಳ ಸಂಖ್ಯೆ ಹೆಚ್ಚಾಗಿದೆ (over staff ed) ನಿರ್ವಹಣಾ ವೆಚ್ಚ ಕಡಿಮೆ ಆಗಬೇಕೆಂದರೆ, ಸಿಬ್ಬಂದಿಯ ಸಂಖ್ಯೆ ಕೂಡ ತಗ್ಗಬೇಕಾದದ್ದು ಅನಿವಾರ್ಯ. ಸ್ಟೇಟ್‌ ಬ್ಯಾಂಕ್‌ ಸಹವರ್ತಿ ಬ್ಯಾಂಕ್‌ ಗಳ ವಿಲೀನದ ನಂತರ, ಸಿಬ್ಬಂದಿ ಸಂಖ್ಯೆ ಹೆಚ್ಚಾಗಿದೆ ಎಂಬ ಮಾತೂ ಇದೆ. ಅದಕ್ಕಿಂತ ಹೆಚ್ಚಾಗಿ, ಈಗ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಡಿಜಿಟಲೀಕರಣ ಆಳವಾಗಿ ಬೇರು ಬಿಡುತ್ತಿದ್ದು, ಆಫೀಸುಗಳಲ್ಲಿ ಸಿಬ್ಬಂದಿಗಳ ಸಂಖ್ಯೆ ಹೆಚ್ಚು ಬೇಕಾಗುತ್ತಿಲ್ಲ. ಸ್ಟೇಟ್‌ ಬ್ಯಾಂಕಿನಲ್ಲಿ ಪ್ರತಿ ಒಂದು ನೂರು ವ್ಯವಹಾರದಲ್ಲಿ ಕೇವಲ 9 ವ್ಯವಹಾರ ಬ್ರಾಂಚ್‌ನಲ್ಲಿ ನಡೆಯುತ್ತದೆಯಂತೆ. ಒಟ್ಟು ವ್ಯವಹಾರದಲ್ಲಿ 55% ಮೊಬೈಲ್‌ನಲ್ಲಿ ನಡೆಯುತ್ತದೆಯಂತೆ. ಸುಮಾರು 30% ನಗದು ವ್ಯವಹಾರ ಎಟಿಎಂನಲ್ಲಿ ನಡೆಯುತ್ತದೆ ಎಂದು ಹೇಳಲಾಗುತ್ತಿದೆ.

ಹೊರೆ ತಗ್ಗಿಸುವ ಪ್ರಯತ್ನ :  ಶಾಖೆಯಲ್ಲಿ ಒಂದು ವ್ಯವಹಾರಕ್ಕೆ 60 ರೂ. ವೆಚ್ಚವಾದರೆ, ಎಟಿಎಂನಲ್ಲಿ 9 ರೂಪಾಯಿ ಮತ್ತು ಮೊಬೈಲ್‌ನಲ್ಲಿ 1 ರುಪಾಯಿ ವೆಚ್ಚ ಆಗುತ್ತದಂತೆ. ಮಾನವ ಸಂಪನ್ಮೂಲಗಳಿಗಿಂತ ಯಂತ್ರಗಳ ಬಳಕೆ ಹೆಚ್ಚಾಗುತ್ತಿರುವದನ್ನು ನೋಡಿ ಮತ್ತು ತನ್ಮೂಲಕ ವೆಚ್ಚವನ್ನು ತಗ್ಗಿಸುವ ನಿಟ್ಟಿನಲ್ಲಿ ಬ್ಯಾಂಕ್‌ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗುತ್ತಿದೆ. ಇಂಥ ಕ್ರಮಗಳು ಒಂದು ರೀತಿಯ

ಸಮೂಹ ಸನ್ನಿ ಇದ್ದಂತೆ. ಇಂದು ಸ್ಟೇಟ್‌ ಬ್ಯಾಂಕ್‌ನಲ್ಲಿ ಬಂದಿದ್ದು, ನಾಳೆ ಉಳಿದ ಬ್ಯಾಂಕ್‌ಗಳಿಗೆ ಹರಡುತ್ತದೆ. ಕೊರೊನಾ ಕಾಟದ ಈ ದಿನಗಳಲ್ಲಿ ಬ್ಯಾಂಕುಗಳು ತೀವ್ರ ಸಂಕಷ್ಟದಲ್ಲಿ ಇವೆ. ಸುಸ್ತಿ ಸಾಲ ಗಗನಕ್ಕೇರುತ್ತಿದೆ. ಸಾಲ ವಸೂಲಾತಿ ನಿರೀಕ್ಷೆಯಂತೆ ಆಗುತ್ತಿಲ್ಲ. ಇಂಥ ಸಂದರ್ಭದಲ್ಲಿ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡಲೇಬೇಕಾದ ಅಗತ್ಯವಿದೆ. ವಿಆರ್‌ಎಸ್‌ ಯೋಜನೆಯನ್ನು ಮತ್ತೆ ಜಾರಿಗೆ ತಂದಿರುವುದು ಸರಿಯಲ್ಲ. ಇದು ಬ್ಯಾಂಕುಗಳ ಖಾಸಗೀಕರಣದ ಮೊದಲ ಹಂತ ಎಂಬುದು ಕಾರ್ಮಿಕ ಸಂಘಗಳ ಆಪಾದನೆ. ಅದರೆ, ಪ್ರತಿಭೆ ಉಳ್ಳವರಿಗೆ ಇನ್ನೊಂದು ಉನ್ನತ ಸ್ಥಾನಕ್ಕೆಜಿಗಿಯಲು ವಿಆರ್‌ ಎಸ್‌ ಅವಕಾಶ ಮಾಡಿಕೊಡುತ್ತದೆ ಎಂಬ ವಾದವೂ ಇದೆ. ಒಂದು ಸಮಾಧಾನ ಎಂದರೆ, ವಿಆರ್‌ಎಸ್‌ ಪಡೆವ ಬ್ಯಾಂಕ್‌ ನೌಕರರು ಒಂದು ದೊಡ್ಡ ಗಂಟಿನೊಂದಿಗೇ ಮನೆಗೆ ಬರುತ್ತಾರೆ. ­

 

 

-ರಮಾನಂದ ಶರ್ಮಾ

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಆರೋಗ್ಯ ಸೇತು ಆ್ಯಪ್‌ ಅಭಿವೃದ್ಧಿಪಡಿಸಿದ್ಯಾರು?

ಆರೋಗ್ಯ ಸೇತು ಆ್ಯಪ್‌ ಅಭಿವೃದ್ಧಿಪಡಿಸಿದ್ಯಾರು?

ಇರಾನ್‌ ನ್ಯೂಕ್ಲಿಯರ್‌ ಸ್ಥಾವರ ಮತ್ತೆ ಆರಂಭ

ಇರಾನ್‌ ನ್ಯೂಕ್ಲಿಯರ್‌ ಸ್ಥಾವರ ಮತ್ತೆ ಆರಂಭ

ಪಾಕ್‌ ಗೆ ಮತ್ತೂಮ್ಮೆ ಹಿನ್ನೆಡೆ

ಪಾಕ್‌ ಗೆ ಮತ್ತೂಮ್ಮೆ ಹಿನ್ನೆಡೆ

ಕೋವಿಡ್ ಓಡಿಸಲು ಸಿಎಂ ನವಸೂತ್ರ

ಕೋವಿಡ್ ಓಡಿಸಲು ಸಿಎಂ ನವಸೂತ್ರ

iplIPL 2020 : ಆರ್‌ಸಿಬಿ – ಮುಂಬೈ ಕಾದಾಟ : ಮುಂಬೈಗೆ 5 ವಿಕೆಟ್ ಗಳ ಜಯ

IPL 2020 : ಎಡವಿದ ಆರ್‌ಸಿಬಿ; ಪ್ಲೇ ಆಫ್‌ಗೆ ಲಗ್ಗೆಯಿಟ್ಟ ಮುಂಬೈ

ಬಂಟ್ವಾಳ: ಗೂಡ್ಸ್ ಟೆಂಪೊ – ಸ್ಕೂಟರ್ ಢಿಕ್ಕಿ; ಸವಾರ ಮೃತ್ಯು

ಬಂಟ್ವಾಳ: ಗೂಡ್ಸ್ ಟೆಂಪೊ – ಸ್ಕೂಟರ್ ಢಿಕ್ಕಿ; ಸವಾರ ಮೃತ್ಯು

ನನಗೆ ಪ್ರಾಣ ಬೆದರಿಕೆ ಇದೆ: ಶಿವಸೇನೆ ಸಂಸದ ದೂರು

ನನಗೆ ಪ್ರಾಣ ಬೆದರಿಕೆ ಇದೆ: ಶಿವಸೇನೆ ಸಂಸದ ದೂರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

isiri-tdy-3

ಬಾಳು ಜೇನು! ಖರ್ಚು ಕಡಿಮೆ, ಲಾಭ ಜಾಸ್ತಿ…

isiri-tdy-2

ಭೂಮಿಗೆ ಸಿಗುತ್ತದೆ ಬಂಗಾರದ ಬೆಲೆ…

isiri-tdy-1

ಲೈಫ್ ಈಸ್‌ ಬುಟ್ಟಿ ಫ‌ುಲ್‌

isiri-tdy-5

ಕೀ ಬೋರ್ಡ್‌ ಮೇಲೆ ಸಿಟ್ಟಾಗಿ ಕುಟ್ಟಬೇಡಿ ಮಾರಾಯ್ರೇ.

ಆನ್‌ಲೈನ್ ‌ಕ್ಲಾಸಿಗೆ ಲ್ಯಾಪಿ

ಆನ್‌ಲೈನ್ ‌ಕ್ಲಾಸಿಗೆ ಲ್ಯಾಪಿ

MUST WATCH

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!

ಹೊಸ ಸೇರ್ಪಡೆ

ಶ್ರೀ ಸಚ್ಚಿದಾನಂದ ಭಾರತೀ ಪೀಠಾರೋಹಣ

ಶ್ರೀ ಸಚ್ಚಿದಾನಂದ ಭಾರತೀ ಪೀಠಾರೋಹಣ

“ವಿವಾದಕ್ಕೆ ಕೊಲೆ ಪರಿಹಾರವಲ್ಲ’

“ವಿವಾದಕ್ಕೆ ಕೊಲೆ ಪರಿಹಾರವಲ್ಲ’

ಆರೋಗ್ಯ ಸೇತು ಆ್ಯಪ್‌ ಅಭಿವೃದ್ಧಿಪಡಿಸಿದ್ಯಾರು?

ಆರೋಗ್ಯ ಸೇತು ಆ್ಯಪ್‌ ಅಭಿವೃದ್ಧಿಪಡಿಸಿದ್ಯಾರು?

ಇರಾನ್‌ ನ್ಯೂಕ್ಲಿಯರ್‌ ಸ್ಥಾವರ ಮತ್ತೆ ಆರಂಭ

ಇರಾನ್‌ ನ್ಯೂಕ್ಲಿಯರ್‌ ಸ್ಥಾವರ ಮತ್ತೆ ಆರಂಭ

ಪಾಕ್‌ ಗೆ ಮತ್ತೂಮ್ಮೆ ಹಿನ್ನೆಡೆ

ಪಾಕ್‌ ಗೆ ಮತ್ತೂಮ್ಮೆ ಹಿನ್ನೆಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.