ಕಲ್ಲಂಗಡಿಯ ಸಿಹಿ ಬದುಕು

ಸಿದ್ಧಾಪುರ ತಾಲೂಕಿನ ಕೋಡಶಿಂಗೆಯ ರಾಮಚಂದ್ರ

Team Udayavani, Apr 8, 2019, 9:49 AM IST

ಬಂಗಾರೇಶ್ವರ ಹೆಗಡೆ ಅವರ ಭಗೀರಥ ಪ್ರಯತ್ನದ ಫ‌ಲ ಇವತ್ತು ಕಲ್ಲಂಗಡಿ ಕೈತುಂಬ ಲಾಭ ತಂದುಕೊಡುತ್ತಿದೆ. ಶಿರಸಿ ತಾಲೂಕಿನ ಕೊಪ್ಪದಲ್ಲಿರುವ ಜಮೀನಿನಲ್ಲಿ ಅಡಿಕೆ, ಕಾಳುಮೆಣಸು,ಬಾಳೆ, ಭತ್ತ, ಕಬ್ಬು, ಅನಾನಸ್‌ ಹೀಗೆ ಹತ್ತಾರು ಬೆಳೆಗಳನ್ನು ಅವರು ಬೆಳೆದರು. ಅದರಲ್ಲೇ ಅನೇಕ ಪ್ರಯೋಗಗಳನ್ನೂ ನಡೆಸಿ ಯಶಸ್ಸು ಪಡೆದರು. ಅವರ ಕೃಷಿ ದಂಡಯಾತ್ರೆಗೆ ಇದೀಗ ಹೊಸ ಸೇರ್ಪಡೆ ಕಲ್ಲಂಗಡಿ. ಸ್ವತಃ ತಾವೇ ಬೆಳೆದು ಮಾರ್ಕೆಟ್‌ ಕೂಡ ಮಾಡುವುದರಿಂದ ಒಂದು ಕಲ್ಲಂಗಡಿ ಮೇಲೆ ನಾಲ್ಕು ಐದು ರೂ. ಲಾಭವಂತೆ.
ರಾಮಚಂದ್ರ ಹೆಗಡೆಯವರು ತಮ್ಮ ಮೂರು ಎಕರೆಯಲ್ಲಿ ಏನಾದರೂ ಹೊಸ ಕೃಷಿ ಸಾಹಸ ಮಾಡಬೇಕು, ಭತ್ತದ ಕೃಷಿಯ ಬಳಿಕ ಎರಡನೇ ಬೆಳೆ ಗಳಿಸಬೇಕು ಎಂದು ಆಲೋಚಿಸಿದರು.

ಆಗ ಹೊಳೆದದ್ದು ಕಲ್ಲಂಗಡಿ ಬೇಸಾಯ. ಇದು ಹೊಸತಾಗಿದ್ದರಿಂದ ಏನು ಮಾಡಬೇಕು, ಏನು ಮಾಡಬಾರದು ಎಂದೆಲ್ಲ ಕೃಷಿ ವಿಜಾನಿಗಳಾದ ಶಿವಾನಂದ ಹೊಂಗಲ್‌, ಸತೀಶ ಹೆಗಡೆ, ಗಣೇಶ ಹೆಗಡೆ, ಸುಜಯ್‌ ಹೊಸಳ್ಳಿ ಅವರುಗಳು ಸಲಹೆ ಕೊಟ್ಟರು. ಪೂನಾದಿಂದ ಸಿಂಜೆಂಟಾ ಕಂಪನಿಯ ಕಲ್ಲಂಗಡಿ ಬೀಜಗಳನ್ನು ತರಿಸಿ, ವ್ಯವಸ್ಥಿತವಾಗಿ ಮಡಿ ಮಾಡಿ, ಪ್ಲಾಸ್ಟಿಕ್‌ ಹಾಸು ಹಾಕಿ ನಾಟಿ ಮಾಡಿದರು. ಹನಿ ನೀರಾವರಿ ವ್ಯವಸ್ಥೆಯನ್ನೂ ಮಾಡಿದರು. ಮೂರು ಎಕರೆಯಲ್ಲಿ ಕಲ್ಲಂಗಡಿಯ 15 ಪ್ಯಾಕೆಟ್‌ ಗಳಿಂದ 17ಸಾವಿರ ಸಸಿಗಳು ಕುಳಿತವು. ಕುಳಿ ತೆಗಸಿ, ಜೋಡಿಯಾಗಿ 3-2ರ,ಅಂತರದಲ್ಲಿ ನೆಟ್ಟರು. ದಡ್ಡಿ ಗೊಬ್ಬರ, ಬೇವಿನ ಹಿಂಡಿ, ಗೊಬ್ಬರ, ಕ್ಯಾಲಿÒಯಂ, ರಂಜಕ, ಔಷಧಗಳು ಸೇರಿದ ಕಷಾಯ ಸಿಂಪರಣೆ ಮಾಡಿದರು. ಹಂತ ಹಂತವಾಗಿ ನಾಟಿ ಆರಂಭಿಸಿದ್ದರಿಂದ ಈಗ 65-70ನೇ ದಿನಕ್ಕೆ ಕಲ್ಲಂಗಡಿ ಕೊಯ್ಲಿಗೆ ಬಂದಿದೆ. 80 ದಿನಗಳಲ್ಲಿ ಕೊಯ್ಲು ಮುಗಿಸಿದರೆ ಇಳುವರಿ ಕೂಡ ಹೆಚ್ಚು. ಇನ್ನೂ ಏಪ್ರಿಲ್‌ ಕೊನೆ ತನಕವೂ ಇಲ್ಲಿ ನಿರಂತರ ಕೊಯ್ಲು ನಡೆಯಲಿವೆ. ಈ ಬಾರಿ ಆಲೀಕಲ್ಲು ಮಳೆ ಬೀಳದೇ ಇರುವುದು ತುಸು ನೆಮ್ಮದಿ ಕೊಟ್ಟಿದೆ. ಈಗಾಗಲೇ 7 ಟನ್‌ ಕೊಯ್ಲು ಮಾಡಿರುವ ರಾಮಚಂದ್ರ ಹೆಗಡೆ ಅವರ ಕಲ್ಲಂಗಡಿಗೆ ಸಕ್ಕರೆಯ ಸಿಹಿ ಇದೆ. ಹೀಗಾಗಿ, ಎಲ್ಲ ಮಾರುಕಟ್ಟೆಯಲ್ಲೂ ಬೇಡಿಕೆ ಹೆಚ್ಚಿದೆ. “ಕಲ್ಲಂಗಡಿ ಕೃಷಿಯ ಯಶಸ್ವಿಗೆ ನನ್ನ ಪತ್ನಿ ಲಕ್ಷ್ಮಿ, ಮಗ ಪ್ರಮಥನ ಆಸಕ್ತಿ ಕೂಡ ಕಾರಣ’ ಎನ್ನುತ್ತಾರೆ ರೈತ ರಾಮಚಂದ್ರ.

ಆರಂಭದಲ್ಲಿ ವರ್ತಕರಿಗೆ ಕೊಡುತ್ತಿದ್ದವರು, ಈಗ ಸ್ವತಃ ಇವರೇ ಸಹಕಾರಿ ಸಂಘಗಳಿಗೆ, ಹಾಪ್‌ಕಾಮ್ಸ್‌, ಮೋರ್‌ ನಂಥ ಶಾಪಿಂಗ್‌ ಮಾಲ್‌ಗ‌ಳಿಗೂ ಕೊಡುತ್ತಿರುವುದರಿಂದ ಒಂದು ಕಲ್ಲಂಗಡಿ ಮೇಲೆ 3-4 ರೂ. ಹೆಚ್ಚು ಲಾಭ ಸಿಗುತ್ತಿದೆಯಂತೆ. ಅಂದರೆ, ಪ್ರತಿ ಕೆ.ಜಿಗೆ ಈಗ 12-14 ರೂ. ಸಿಗುತ್ತಿದೆ. mಈ ಸಲ ಹೆಗಡೆಯವರು ಹೆಚ್ಚು ಕಮ್ಮಿ 15 ಟನ್‌ ಬೆಳೆಯ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಎರಡೂವರೆ ಲಕ್ಷ ರೂ. ಖರ್ಚಾಗಿದೆ. ಅಷ್ಟೂ ಕಲ್ಲಂಗಡಿ ಮಾರಾಟವಾದರೆ 2-3 ಲಕ್ಷ ರೂ. ಲಾಭವಾಗುವ ನಿರೀಕ್ಷೆ ಇದೆಯಂತೆ.

ರಾಘವೇಂದ್ರ ಬೆಟ್ಟಕೊಪ್ಪ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ