ಮನೆಯ ನೀರಿನ ಸಂಗ್ರಹ ಎಲ್ಲಿ, ಹೇಗೆ?


Team Udayavani, Feb 19, 2018, 8:15 AM IST

rooftop-watertank-in-punjab-02.jpg

ಮನೆಯ ಈಶಾನ್ಯ ಮೂಲೆಯ ಸಂಪಿನಿಂದ, ಪ್ರದಕ್ಷಿಣಾಕಾರದಲ್ಲಿ ಓವರ್‌ ಹೆಡ್‌ ಟ್ಯಾಂಕಿಗೆ ನೀರು ಪೂರೈಕೆಗೊಳ್ಳುವಂತಿರಲಿ. ಈ
ವಿಷಯವನ್ನು ಅವಶ್ಯವಾಗಿ ಗಮನಿಸಬೇಕು. ಉದಾಸೀನತೆ ಖಂಡಿತ ಬೇಡ. ಪ್ರಾಣಿಕ್‌ ಹೀಲಿಂಗ್‌ ಅನ್ನುವ ವಿಚಾರದ ಸಕಾರಾತ್ಮಕ ಬಲ ಈ ರೀತಿಯ ಪ್ರದಕ್ಷಿಣಾತ್ಮಕವಾದ ನೀರಿನ ಓಡಾಟದಿಂದಾಗಿ ದೊರಕುತ್ತಿರುತ್ತದೆ.

ಮನೆಯಲ್ಲಿನ ನೀರಿನ ವಿಚಾರದಲ್ಲಿ ಹೆಚ್ಚು ಎಚ್ಚರಬೇಕು. ಈಗ ಬಾವಿಗಳನ್ನು ತೆಗೆಸುವ ವಿಚಾರದಲ್ಲಿ, ಬೋರು ತೆಗೆಸುವ
ಸಂದರ್ಭದಲ್ಲಿ, ಬೇಕಾದ ನೀರನ್ನು ಕಾರ್ಪೋರೇಶನ್‌, ನಗರಸಭೆ, ಮುನಸೀಪಾಲ್ಟಿ ಅಥವಾ ನಗರ ಪಂಚಾಯತಿಗಳು ಬಿಟ್ಟಾಗ ಸಂಗ್ರಹಿಸುವ ರೀತಿಯಲ್ಲಿ ಯುಕ್ತವಾದ ವಿಧಿ ವಿಧಾನಗಳನ್ನು ಅನುಸರಿಸುವುದಿಲ್ಲ ಜನರು. ಹೇಗೋ ಸಂಗ್ರಹಿಸುತ್ತಾರೆ, ಹೇಗೋ ನೀರಿನ ಪೂರೈಕೆ ಮನೆಯೊಳಗಡೆಗೆ ನಡೆಯುತ್ತಿರುತ್ತದೆ. ಆದರೆ ಇದಕ್ಕೆ ತನ್ನದೇ ಆದ ಸಂವಿಧಾನ ಒಂದು ಇರುವುದರಿಂದ ಮನಸ್ಸಿಗೆ ಬಂದಂತೆ ನೀರಿನ ವ್ಯವಸ್ಥೆ ಮಾಡಿಕೊಳ್ಳಬಾರದು. ಈಗೀಗ ನೀರಿನ ಕೊರತೆಯಿಂದ ಪ್ರತಿನಗರ, ಪ್ರತಿ ಹಳ್ಳಿ ನರಳುತ್ತಿದೆ. ಎಲ್ಲೋ ಕೆಲವು ಊರುಗಳ ಜನ ಸುದೈವಿಗಳಾಗಿದ್ದಾರೆ.

ಮನೆಯಲ್ಲಿ ಬಾವಿಯನ್ನು ನೋಡುವುದಾದರೆ ಈಶಾನ್ಯ ಮೂಲೆಯಲ್ಲಿ ( ಉತ್ತರ ಹಾಗೂ ಪೂರ್ವ ದಿಕ್ಕುಗಳ ಸಮಾವೇಶವಾಗುವ ಸ್ಥಳ) ಬಾವಿಯನ್ನು ತೋಡಬೇಕು. ಹಾಗೆಯೇ ನೀರಿನ ಬೋರನ್ನು ತೋಡುವುದಾದರೂ ಈಶಾನ್ಯ ಮೂಲೆಯೇ ಪ್ರಶಸ್ತ ಜಾಗೆಯಾಗಿದೆ.
ಒಳಾಂತರ್ಗತವಾಗಿ ಮನೆಯಲ್ಲಿ ನೀರಿನ ಸಂಪನ್ನು ನಿರ್ಮಾಣ ಮಾಡಿಕೊಳ್ಳುವ ದಿಕ್ಕು ಕೂಡ ಈಶಾನ್ಯ ಮೂಲೆಯಲ್ಲೇ ಇರಬೇಕು. ಹೀಗೆ ನಿರ್ಮಿಸಿಕೊಳ್ಳುವ ಸಂಪು ಈಶಾನ್ಯ ಮೂಲೆಯಲ್ಲಿರಬೇಕು ಎಂಬುದು ಮುಖ್ಯವೇ ವಿನಾ ಕಾಂಪೌಂಡ್‌ ಗೋಡೆಗಳಿಗೆ ಹೊಂದಿರಬೇಕೋ, ಮೂಲೆಗೇ ನಿರ್ದಿಷ್ಟವಾಗಿ ಸಮಾವೇಶವಾಗಬೇಕೋ ಎಂಬುದೆಲ್ಲ ತಲೆಕೆಡಿಸಿಕೊಳ್ಳುವ ವಿಚಾರವಲ್ಲ. ಮನೆಯ ಸುಮಾರು ಒಟ್ಟೂ ವಿಸ್ತೀರ್ಣದ ಶೇಕಡ ಒಂದು ಭಾಗದಷ್ಟು ಉದ್ದಗಲಗಳು ಸಂಪ್‌ಗೆ ಒದಗಿರಲಿ. ಸಂಪ್‌ನ ಆಳ ಆರಡಿಗಳನ್ನು
ಮೀರದಂತಿರಲಿ. ಇನ್ನಿಷ್ಟು ಆಳ ತುಸು ಅಪಾಯಕಾರಿ ಹಾಗೂ ಸ್ವತ್ಛಗೊಳಿಸುವ ಕಾರ್ಯಕ್ಕೆ ಸಹಕಾರಿಯಾಗುವುದಿಲ್ಲ. ಸಂಪ್‌ ಅನ್ನು ಆಗಾಗ ಸ್ವತ್ಛಗೊಳಿಸುವುದು ನಡೆಯಬೇಕಲ್ಲ? ಆರೋಗ್ಯಕ್ಕೆ ಇದು ಮುಖ್ಯ.

ಮಳೆ ನೀರಿನ ಕೊಯ್ಲನ್ನು ಅಳವಡಿಸಿಕೊಳ್ಳುವುದಾದರೆ ಮುಕ್ತವಾಗಿ ತೆರೆಯಲ್ಪಟ್ಟ ಬಾವಿಯ ರೀತಿಯ ಕ್ರಮವನ್ನು ಅನುಸರಿಸುವುದೇ ಸೂಕ್ತ. ಈ ರೀತಿಯ ಬಾವಿ ಕೂಡ ಈಶಾನ್ಯ ಮೂಲೆಗೆ ಸ್ಥಾಯಿಗೊಳ್ಳಲಿ. ಇನ್ನು ಮನೆಯ ಲಕ್ಷಣಗಳಿಗೆ ಅಂದವನ್ನು ಹೆಚ್ಚಿಸುವ 
ಅಂಶವಾಗಿ ಕಿರುಗಾತ್ರದ ಕೊಳವೆಯನ್ನೋ, ಚಿಮ್ಮುವ ಕಾರಂಜಿಯನ್ನೋ ನಿರ್ಮಿಸಿಕೊಳ್ಳುವ ಅಪೇಕ್ಷ ಹಲವರದ್ದಿರುತ್ತದೆ. ಈಜುಗೊಳವನ್ನು ಕೂಡ ನಿರ್ಮಿಸುವ ವಿಚಾರ ಇಟ್ಟುಕೊಂಡಿರುತ್ತಾರೆ. ಈ ಏನೇ, ಇತರ, ನೀರಿಗೆ ಸಂಬಂಧಿಸಿದ ವಿಚಾರಗಳಲ್ಲಿ
ಈಶಾನ್ಯದಿಕ್ಕಿನ ಜಾಗೆಯನ್ನೇ ಲಕ್ಷ್ಯದಲ್ಲಿಟ್ಟು ಕೊಳ್ಳಬೇಕು. ನೀರಿನ ಸಂಬಂಧವಾದ ಎಲ್ಲ ಮೂಲಗಳು ಮನೆಯ ವಿಚಾರವಾಗಿ ಈಶಾನ್ಯ ಮೂಲೆಯಿಂದ ಹೊರಹೊಮ್ಮುವ ಅಂಶಗಳನ್ನು ಒಳಗೊಳ್ಳುವಂತಿರಬೇಕು.

ಮನೆಯ ಮೇಲಿನ ಓವರ್‌ ಹೆಡ್‌ ಟ್ಯಾಂಕ್‌ಗಳು ಮಾತ್ರ ನೈಋತ್ಯ ದಿಕ್ಕಿನಲ್ಲಿ ಇರಬೇಕು. ದಕ್ಷಿಣ ಹಾಗೂ ಪಶ್ಚಿಮ ದಿಕ್ಕುಗಳು ಒಗ್ಗೂಡುವ ಜಾಗದಲ್ಲಿದು ಸೂಕ್ತ. ಇದರಿಂದ ಕ್ಷೇಮವೂ ಹೌದು. ಹಾಗೆಯೇ ಮನೆಯ ಈಶಾನ್ಯ ಮೂಲೆಯ ಸಂಪಿನಿಂದ, ಪ್ರದಕ್ಷಿಣಾಕಾರದಲ್ಲಿ ಓವರ್‌ ಹೆಡ್‌ ಟ್ಯಾಂಕಿಗೆ ನೀರು ಪೂರೈಕೆಗೊಳ್ಳುವಂತಿರಲಿ. ಈ ವಿಷಯವನ್ನು ಅವಶ್ಯವಾಗಿ ಗಮನಿಸಬೇಕು. ಉದಾಸೀನತೆ ಖಂಡಿತ ಬೇಡ. ಪ್ರಾಣಿಕ್‌ ಹೀಲಿಂಗ್‌ ಅನ್ನುವ ವಿಚಾರದ ಸಕಾರಾತ್ಮಕ ಬಲ ಈ ರೀತಿಯ ಪ್ರದಕ್ಷಿಣಾತ್ಮಕವಾದ ನೀರಿನ ಓಡಾಟದಿಂದಾಗಿ
ದೊರಕುತ್ತಿರುತ್ತದೆ. ಅಪ್ರದಕ್ಷಿಣಾ ರೂಪದಲ್ಲಿ ನೀರು ಸರಬರಾಜಾಗುವ ವಿಚಾರ ಒಳ್ಳೆಯ ಫ‌ಲ ನೀಡಲಾರದು. ಆರೋಗ್ಯದ ವಿಚಾರದಲ್ಲಿ ಇದು ತುಂಬಾ ಮುಖ್ಯ ತಿಳಿದಿರಿ. ಮುಂದಿನವಾರ ಸಂಪು ಹಾಗೂ ಓವರ್‌ ಹೆಡ್‌ ಟ್ಯಾಂಕ್‌ ವಿಚಾರಗಳಲ್ಲಿ ಪ್ರಧಾನವಾಗಿ ಬಣ್ಣಗಳು ಯಾವೆಲ್ಲಾ ಫ‌ಲಗಳನ್ನು, ಯಶಸ್ಸುಗಳನ್ನು ನೀಡುತ್ತವೆ ಎಂಬ ವಿಚಾರವನ್ನು ಚರ್ಚಿಸೋಣ.

ಅನಂತಶಾಸ್ತ್ರಿ

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.