ಬ್ಯಾಂಕ್‌ ಸಾಲ ಆಗುತ್ತದಾ ಬಡ್ಡಿಮನ್ನಾ?


Team Udayavani, Oct 5, 2020, 8:34 PM IST

ಬ್ಯಾಂಕ್‌ ಸಾಲ ಆಗುತ್ತದಾ ಬಡ್ಡಿಮನ್ನಾ?

ಕೋವಿಡ್ ದಿಂದ ಅರ್ಥಿಕ ಸಂಕಷ್ಟಕ್ಕೆ ಸಿಲುಕಿದವರಿಗೆ ಸಾಲ ಮರುಪಾವತಿ ಕಂತುಗಳನ್ನು (ಇಎಂಐ) ಮುಂದೂಡಲುಕೇಂದ್ರ ಸರ್ಕಾರ ಮತ್ತು ರಿಸರ್ವ್‌ ಬ್ಯಾಂಕ್‌ (ಅರ್‌ಬಿಐ)6 ತಿಂಗಳುಗಳಕಾಲ ಅವಕಾಶನೀಡಿದೆ. ಮುಂದೂಡಿಕೆ ಮಾಡಿದ ಸಾಲದಕಂತುಗಳಿಗೆ ಬಡ್ಡಿ ವಿನಾಯಿತಿಯನ್ನೂ ನೀಡಬೇಕೆಂದು ಹಲವಾರು ಗ್ರಾಹಕರು ನ್ಯಾಯಾಲಯದ ಮೆಟ್ಟಲೇರಿದ್ದಾರೆ. ಇದರ ವಿಚಾರಣೆ ನಡೆಸಿದನ್ಯಾಯಾಲಯ, ಬಡ್ಡಿ ವಿಧಿಸುವುದನ್ನು ಮರು ಪರಿಶೀಲಿಸುವಂತೆ ಸೂಚಿಸಿದೆ.  ಮಾತ್ರವಲ್ಲ, ಮುಂದಿನಆದೇಶದವರೆಗೆ ಈ ಸಾಲದ ಖಾತೆಗಳನ್ನುಅನುತ್ಪಾದಕ ಅಸ್ತಿ ಎಂದು ಘೋಷಿಸುವಂತಿಲ್ಲ ಎಂದೂ ಆದೇಶಿಸಿದೆ.

ಬ್ಯಾಂಕುಗಳ ವಾದವೇನು? : ತಾವು ನೀಡಿದ ಸಾಲಕ್ಕೆ ಸಿಗುವ ಬಡ್ಡಿಯೇ ಬ್ಯಾಂಕುಗಳ ಬೆನ್ನೆಲುಬು. ಬ್ಯಾಂಕುಗಳ ಅಸ್ತಿತ್ವ ಇರುವುದೇ ಈ ಬೆನ್ನೆಲುಬಿನ ಮೇಲೆ. ಬಡ್ಡಿಯನ್ನು ಮನ್ನಾ ಮಾಡುವುದು ರಿಸರ್ವ್‌ ಬ್ಯಾಂಕ್‌ ನಿಯಮಾವಳಿ ಮತ್ತುಕಾನೂನಿಗೆ ವಿರುದ್ದ. ಗ್ರಾಹಕರಕೋರಿಕೆಯಂತೆ ಬಡ್ಡಿಯನ್ನು ಮನ್ನಾ ಮಾಡಿದರೆ, ಸುಮಾರು ಒಂದು ಲಕ್ಷ ಕೋಟಿ ನಷ್ಟವನ್ನು ಭರಿಸಬೇಕಾಗುತ್ತದೆ ಎನ್ನುವುದು ಬ್ಯಾಂಕುಗಳ ವಾದ. ಈ ಮಾತಿನಲ್ಲಿ ಸತ್ಯವಿಲ್ಲದಿಲ್ಲ. ಸರ್ಕಾರದ – ಸುಸ್ತಿ ಸಾಲದ ಭಾರದಲ್ಲಿ ತತ್ತರಿಸುತ್ತಿರುವ ಬ್ಯಾಂಕುಗಳ ವಾದದಲ್ಲಿ ಸತ್ಯವಿದೆ.

ಗ್ರಾಹಕರ ನಿಲುವು ಏನು? :  ಬಡ್ಡಿ ಮನ್ನಾ ಮಾಡುವುದರಿಂದ ಬ್ಯಾಂಕ್‌ ಗಳಿಗೆ ವಿಪರೀತ ನಷ್ಟ ಉಂಟಾಗುತ್ತದೆ ಎನ್ನುವುದನ್ನು ಗ್ರಾಹಕರು ಒಪ್ಪುತ್ತಿಲ್ಲ.ಕಳೆದ5 ವರ್ಷಗಲ್ಲಿ ಬ್ಯಾಂಕುಗಳು ಹಲವುಕಂಪನಿಗಳ5.70 ಲಕ್ಷಕೋಟಿ ಮತ್ತು10 ವರ್ಷಗಳಲ್ಲಿ ರೈತರ4.70 ಲಕ್ಷಕೋಟಿ ಸಾಲ ಮನ್ನಾ ಮಾಡಿರುವುದನ್ನು ಅವರು ಎತ್ತಿ ತೋರಿಸುತ್ತಿದ್ದಾರೆ. ಪ್ರತಿ ವರ್ಷ ರೈತರ ಸಾಲ ಮನ್ನಾ ಆಗುವುದನ್ನು ನೆನಪಿಸಿದ್ದಾರೆ. ರಿಸರ್ವ್‌ ಬ್ಯಾಂಕ್‌ಕಾನೂನು ಮತ್ತು ನಿಯಮಾವಳಿ ಬಡ್ಡಿ ಮನ್ನಾಕ್ಕೆ ಅವಕಾಶವಿಲ್ಲ ಅನ್ನುವುದಾದರೆ, ಬೇರೆ ಯಾವಕಾನೂನಿನಡಿಯಲ್ಲಿಕಂಪನಿಗಳ ಮತ್ತು ರೈತರ ಸಾಲವನ್ನು ಮನ್ನಾ ಮಾಡಲಾಗುತ್ತಿದೆ ಎಂದು ಪ್ರಶ್ನಿಸುತ್ತಿದ್ದಾರೆ. ತಾವು ಸಾಲ ಮನ್ನಾಮಾಡುವಂತೆ ಖಂಡಿತಕೇಳುತ್ತಿಲ್ಲ. ಬದಲಾಗಿ ಸಾಲ ಮರುಪಾವತಿ ಮಾಡಲಾಗದ ಸಂಕಷ್ಟದ ಸಮಯದಲ್ಲಿ, ಬಡ್ಡಿ ಮನ್ನಾ ಮಾಡುವಂತೆಕೇಳುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ.

ಬ್ಯಾಂಕ್‌ ವಸೂಲಿಗಾಗಿರುವ ಇತ್ತೀಚಿನ ದಿವಾಳಿ ಕಾನೂನು ((Insolvency Bankruptcy Code& IBC) ಯಲ್ಲಿ ಬ್ಯಾಂಕುಗಳು50%ವರೆಗೆ ಕಟ್‌ ಅನುಭವಿಸುವುದನ್ನು ಉಲ್ಲೇಖೀಸಿದ್ದಾರೆ. ಈವರೆಗೆ ಮನ್ನಾ ಅದ ಸಾಲದಲ್ಲಿಕೇವಲ 10% ವಸೂಲಾಗಿರುವದರ ಬಗೆಗೆ ಸರ್ಕಾರದ ಗಮನ ಸೆಳೆದಿದ್ದಾರೆ.ಕೋರೊನಾವು ಯಾರೂ ನಿರೀಕ್ಷಿಸದ ಅರ್ಥಿಕ ಸಂಕಷ್ಟವನ್ನು ತಂದೊಡ್ಡಿದೆ. ಇಂಥ ಸಂದರ್ಭದಲ್ಲಿ ಅರ್ಥಿಕ ಪುನಃಶ್ಚೇತನಕ್ಕ ಬಡ್ಡಿ ಮನ್ನಾದಂಥ ಉತ್ತೇಜನಾ ಪ್ಯಾಕೇಜ್‌ ಘೋಷಿಸಿದರೆ ತಮ್ಮ ಉದ್ಯಮ- ವ್ಯವಹಾರವನ್ನು ಮುಂದುವರಿಸಲು ಅನುಕೂಲವಾಗುತ್ತದೆ ಎಂಬುದು ಬಹುಪಾಲು ಗ್ರಾಹಕರ ವಾದವಾಗಿದೆ.

ಈ ಬೇಡಿಕೆಯಲ್ಲಿ ಅರ್ಥವಿದೆ ಎಂದು ಭಾವಿಸಿದ ನ್ಯಾಯಾಲಯ, ಸಾಲದಕಂತುಗಳ ಮೇಲೆ ಬಡ್ಡಿ ವಿಧಿಸುವುದನ್ನು ಮರು ಪರಿಶೀಲಿಸುವಂತೆ ಆದೇಶಿಸಿದೆ. ಇನ್ನೂ ಎರಡು ವಾರ ಯಾವ ಖಾತೆಯನ್ನೂ ಅನುತ್ಪಾದಕ- ಸುಸ್ತಿ ಎಂದು ಘೋಷಿಸದಂತೆ ಮಧ್ಯಂತರ ಆದೇಶ ಹೊರಡಿಸಿದೆ. ಈಗ ಚೆಂಡು ಸರ್ಕಾರದ ಅಂಗಳದಲ್ಲಿ ಇದ್ದು, ಸಾಲ ಪಡೆದಿರುವ ಗ್ರಾಹಕರು ಮತ್ತು ಸಾಲ ನೀಡಿರುವ ಬ್ಯಾಂಕುಗಳು ಮುಂದಿನ ಬೆಳವಣಿಗೆ ಬಗೆಗೆಕಾಯುತ್ತಿವೆ.­

 

– ರಮಾನಂದ ಶರ್ಮಾ

ಟಾಪ್ ನ್ಯೂಸ್

ಹುಮನಾಬಾದ: ಊಟಕ್ಕೆ ಹಾಜರಾಗಿ ಲಸಿಕೆಗೆ ಚಕ್ಕಾರ್ ಹೊಡೆದ ಮಕ್ಕಳು

ಹುಮನಾಬಾದ: ಊಟಕ್ಕೆ ಹಾಜರಾಗಿ ಲಸಿಕೆಗೆ ಚಕ್ಕಾರ್ ಹೊಡೆದ ಮಕ್ಕಳು

SUNIL-KUMAR

ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಕೇರಳದ್ದೆಂಬ ಕಾರಣಕ್ಕೆ ತಿರಸ್ಕರಿಸಿಲ್ಲ: ಸಚಿವ ಸುನೀಲ್‍

ದೇವರ ಪೂಜೆ ಬಾಡೂಟಕ್ಕೆ ಜಗಳ: ಯುವಕನ ಕೊಲೆ

ದೇವರ ಪೂಜೆ ಬಾಡೂಟಕ್ಕೆ ಜಗಳ: ಯುವಕನ ಕೊಲೆ

ಅಂತಾರಾಷ್ಟ್ರೀಯ ವಿಮಾನ ಸಂಚಾರ ನಿರ್ಬಂಧ: ಫೆಬ್ರವರಿ 28ರವರೆಗೂ ವಿಸ್ತರಣೆ:ಡಿಜಿಸಿಎ

ಅಂತಾರಾಷ್ಟ್ರೀಯ ವಿಮಾನ ಸಂಚಾರ ನಿರ್ಬಂಧ: ಫೆಬ್ರವರಿ 28ರವರೆಗೂ ವಿಸ್ತರಣೆ:ಡಿಜಿಸಿಎ

aravind

ಗೋವಾ ಚುನಾವಣೆಗೂ ಸಿಎಂ ಅಭ್ಯರ್ಥಿ ಘೋಷಣೆ ಮಾಡಿದ ಆಪ್

1-aseqwe

ಲಾಕ್ ಡೌನ್, ಕರ್ಫ್ಯೂ ತೆಗೆಯಿರಿ: ಸರಕಾರದ ವಿರುದ್ಧವೇ ಸಿಂಹ ಘರ್ಜನೆ !

pratap

ಗುಣಮಟ್ಟದ ಆಧಾರದಲ್ಲಿ ಸ್ತಬ್ಧ ಚಿತ್ರ ಆಯ್ಕೆ: ಸಿದ್ದರಾಮಯ್ಯಗೆ ಪ್ರತಾಪ್ ಸಿಂಹ ತಿರುಗೇಟುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಮೊಸಳೆಯ ಜೊತೆ ಯುವಕನ ಮೃತದೇಹ : ದಾಂಡೇಲಿಯ ಕಾಳಿ ನದಿಯಲ್ಲಿ ಘಟನೆ

udayavani youtube

ಕೃಷ್ಣಾಪುರ ಪರ್ಯಾಯ – 2022 Highlights

udayavani youtube

18 ವರ್ಷಗಳ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ ಧನುಷ್ – ಐಶ್ವರ್ಯಾ

udayavani youtube

ಪರ್ಯಾಯ ಮಹೋತ್ಸವ : ದಂಡ ತೀರ್ಥದಲ್ಲಿ ಶ್ರೀ ಕೃಷ್ಣಾಪುರ ಮಠಾಧೀಶರಿಂದ ಪವಿತ್ರ ಸ್ನಾನ

udayavani youtube

ನಿಷೇಧದ ನಡುವೆಯೂ ರಥೋತ್ಸವ : ಜನರನ್ನು ನಿಯಂತ್ರಿಸಲು ಪೊಲೀಸರು ವಿಫಲ

ಹೊಸ ಸೇರ್ಪಡೆ

ಹುಮನಾಬಾದ: ಊಟಕ್ಕೆ ಹಾಜರಾಗಿ ಲಸಿಕೆಗೆ ಚಕ್ಕಾರ್ ಹೊಡೆದ ಮಕ್ಕಳು

ಹುಮನಾಬಾದ: ಊಟಕ್ಕೆ ಹಾಜರಾಗಿ ಲಸಿಕೆಗೆ ಚಕ್ಕಾರ್ ಹೊಡೆದ ಮಕ್ಕಳು

1-sasdsa

ಗಡಿ ವಿವಾದ ಇತ್ಯರ್ಥ : ಸರ್ವ ಪಕ್ಷ ಸಭೆ ಕರೆದ ಆಸ್ಸಾಂ ಸಿಎಂ

SUNIL-KUMAR

ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಕೇರಳದ್ದೆಂಬ ಕಾರಣಕ್ಕೆ ತಿರಸ್ಕರಿಸಿಲ್ಲ: ಸಚಿವ ಸುನೀಲ್‍

ರಾಷ್ಟ್ರೀಯ ಕ್ರೀಡಾಪಟುಗಳಿಂದ ಯುವಕರಿಗೆ ತರಬೇತಿ

ರಾಷ್ಟ್ರೀಯ ಕ್ರೀಡಾಪಟುಗಳಿಂದ ಯುವಕರಿಗೆ ತರಬೇತಿ

ದೇವರ ಪೂಜೆ ಬಾಡೂಟಕ್ಕೆ ಜಗಳ: ಯುವಕನ ಕೊಲೆ

ದೇವರ ಪೂಜೆ ಬಾಡೂಟಕ್ಕೆ ಜಗಳ: ಯುವಕನ ಕೊಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.