ಇವತ್ತಿನದಷ್ಟೇ ಚಿಂತೆ; ಕಾಡುತ್ತಿಲ್ಲ ಕಾಡಿನ ಭವಿಷ್ಯ!


Team Udayavani, Jul 2, 2018, 12:41 PM IST

kadina-bavishya.jpg

ಕಳೆದ ಎರಡು ದಶಕಗಳಲ್ಲಿ ನಾಶವಾಗುತ್ತಿರುವ ಕಾಡುಗಳಿಗೆ ವಿಲನ್‌ ಕೇವಲ ಮನುಷ್ಯನೇ ವಿನಃ ಪ್ರಕೃತಿಯಲ್ಲ. ಹೆಚ್ಚಿನ ಸಂದರ್ಭದಲ್ಲಿ ಮಾನವನೇ ವಿನಃ ನೈಸರ್ಗಿಕ ಕಾರಣದಿಂದ ಕಾಡು ನಾಶವಾಗಿಲ್ಲ. ಆದರೆ ಇದೇ ವೇಳೆ ಕಾಡಿನ ಪುನರುಜ್ಜೀವನಕ್ಕೆ ಖಾಸಗಿಯವರ ಸಹಭಾಗಿತ್ವ ಪಡೆಯಬಹುದು ಎಂಬುದು ಸರ್ಕಾರದ ದೂರಗಾಮಿ ಯೋಚನೆಗಿಂತ ದುರಾಲೋಚನೆಯಂತೆ ಕಾಣುತ್ತದೆ.

ಸರ್ಕಾರದ ನೀತಿಗಳು ವರ್ತಮಾನದ ಆಗುಹೋಗುಗಳನ್ನು ಮಾತ್ರ ಆಧರಿಸುತ್ತಿವೆ. ಭವಿಷ್ಯದ ಕಿಂಚಿತ್‌ ಆಲೋಚನೆಯನ್ನೂ ಮಾಡುತ್ತಿಲ್ಲ ಎಂದು ಆರೋಪಿಸಲು ಮೇಲ್ನೋಟಕ್ಕೇ ಸಾಕಷ್ಟು ದೃಷ್ಟಾಂತಗಳು ಲಭ್ಯವಾಗುತ್ತಿವೆ. ಇತ್ತೀಚೆಗಂತೂ ಸರ್ಕಾರದ ಕರಡು ಕಾಯ್ದೆ, ಕಾನೂನುಗಳನ್ನು ನಿರ್ದಿಷ್ಟ ಹಿತಾಸಕ್ತಿಗಳ ಗುಂಪುಗಳು ವಿರೋಧಿಸುವುದಕ್ಕಿಂತ ಜನಸಾಮಾನ್ಯರು, ಜನಪರ ಸಂಘಟನೆಗಳೇ ವಿರೋಧಿಸುತ್ತಿವೆ ಎಂಬುದರ ಅರ್ಥ ವಿಶ್ಲೇಷಿಸಲು ಹೆಚ್ಚಿನ ಪಾಂಡಿತ್ಯ ಬೇಡ. ಆ ಬಂಡವಾಳ ಶಾಹಿ ಗುಂಪುಗಳಿಗೇ ಸರ್ಕಾರ ಹೇಳುತ್ತಿದೆ, ನಾವಿರುವುದು ನಿಮಗಾಗಿ!

ಕೆಲದಿನಗಳ ಹಿಂದೆ ಸರ್ಕಾರ ಪ್ರಕಟಿಸಿದ 2018ರ ರಾಷ್ಟ್ರೀಯ ಅರಣ್ಯ ನೀತಿಯೂ ಇದೇ ಮಾರ್ಗದಲ್ಲಿದೆ. ಏಪ್ರಿಲ್‌ 14ಕ್ಕೆ ಸರ್ಕಾರದ ಕರಡಿಗೆ ಆಕ್ಷೇಪ ಸಲ್ಲಿಸುವ ಕಡೆಯ ದಿನ ಮುಗಿದಿದೆ. ಈ ವೇಳೆಗಾಗಲೇ ನೂರಕ್ಕೂ ಹೆಚ್ಚು ಪರಿಸರಾಸಕ್ತ ಸರ್ಕಾರೇತರ ಸಂಸ್ಥೆಗಳು ಹಾಗೂ ಸಾವಿರಾರು ಸಂಖ್ಯೆಯಲ್ಲಿ ವೈಯುಕ್ತಿಕ ನೆಲೆಯ ಪರಿಸರ ಪ್ರೇಮಿಗಳು ಸರ್ಕಾರದ ಯೋಚನೆಗಳನ್ನು ವಿರೋಧಿಸಿದ್ದಾರೆ. ಅವರ ಆಕ್ಷೇಪಗಳು ಗಂಭೀರವಾಗಿವೆ. ದುರಂತ ಎಂದರೆ, ಲೋಕಸಭೆ, ರಾಜ್ಯಸಭೆಗಳಲ್ಲಿರುವ ಜನಪ್ರತಿನಿಧಿಗಳು “ಅಭಿವೃದ್ಧಿ’ ವಿಷಯದಲ್ಲಿ ಭಾಯಿ ಭಾಯಿ. ಇಂತಹ ಮಸೂದೆಗಳು ಅಧಿವೇಶನದಲ್ಲಿ ಮಂಡಿಸಲ್ಪಟ್ಟಾಗ ಹೆಚ್ಚಿನ ವಿರೋಧ ಬಿಡಿ, ಚರ್ಚೆಯೂ ಇಲ್ಲದೆ ಅಂಗೀಕರಿಸಲ್ಪಡುತ್ತವೆ!

ಅರಣ್ಯ ಹೆಚ್ಚುತ್ತಿದೆ!
ದೇಶದ ಅರಣ್ಯ ನೀತಿ 1952ರ ವೇಳೆಯಲ್ಲಿಯೇ ರೂಪುಗೊಂಡಿತ್ತು. ಇನ್ನೂ ಹಿಂದೆ ಹೋದರೆ 1894ರಲ್ಲಿಯೇ ಬ್ರಿಟಿಷ್‌ ಸಾಮ್ರಾಜ್ಯದ ಅರಣ್ಯ ನೀತಿಯೊಂದು ಜಾರಿಯಲ್ಲಿತ್ತು. 1988ರಲ್ಲಿ ಹೊಸದಾದ ಅರಣ್ಯ ನೀತಿ ಹಳೆಯ ನೀತಿಯ ಅಂಶಗಳನ್ನು ಬದಿಗಿಟ್ಟು ಜಾರಿಗೆ ಬಂದಿತು. ಒಂದರ್ಥದಲ್ಲಿ ಈ ನೀತಿ ಹೆಚ್ಚು ಹಸಿರುವಾಸಿಯಾಗಿತ್ತು. ಅಂಕಿಅಂಶಗಳನ್ನೇ ನಂಬುವುದಾದರೆ, ಅರಣ್ಯ ಸ್ಥಿತಿಗತಿ ವರದಿಯಲ್ಲಿ 2015ರಿಂದ ಅರಣ್ಯ ಪ್ರಮಾಣದಲ್ಲಿ ಶೇ. 0.21ರ ವೃದ್ಧಿ ಕಂಡಿದೆ ಎಂದು ಹೇಳಲಾಗಿದೆ. ದೇಶದ 32,87,569 ಚದರ ಕಿ.ಮೀ ಪ್ರದೇಶದಲ್ಲಿ 7,08,273 ಚದರ ಕಿ.ಮೀ ಕಾಡು ಕಾಣಿಸುತ್ತದೆ ಎಂದು ಅದು ಹೇಳಿದೆ. 1989ರಲ್ಲಿ ದೇಶದಲ್ಲಿ ಶೇ. 19.47ರಷ್ಟಿದ್ದ ಕಾಡು ಶೇ. 33ಕ್ಕೆ ಬರಬೇಕು ಎಂಬುದು ಅವತ್ತಿನ ಜನಪ್ರತಿನಿಧಿಗಳ ಆಶಯವಾಗಿತ್ತು!

1996ರ ಪಂಚಾಯತ್‌ ಕಾಯ್ದೆ, 2006ರ ಬುಡಕಟ್ಟು ಮತ್ತು ಇತರ ಸಾಂಪ್ರದಾಯಿಕ ಅರಣ್ಯ ನಿವಾಸಿಗಳ ಅರಣ್ಯ ಹಕ್ಕು ಕಾಯ್ದೆ ಕಾಡನ್ನು ಕಾಪಾಡುವ ಹಾಗೂ ಅಲ್ಲಿನ ಮೂಲನಿವಾಸಿಗಳ ಹಿತ ಕಾಯುವ ವಿಚಾರದಲ್ಲಿ ಹೆಚ್ಚು ಕಟಿಬದ್ಧವಾಗಿತ್ತು. ಹೊಸ ಕರಡಿನ ಬಗ್ಗೆ ಈ ಮಾತು ಹೇಳುವಂತಿಲ್ಲ. ದೇಶದಲ್ಲಿ ಅತಿ ಹೆಚ್ಚಿನ ಕಾಡು ಹೊಂದಿದೆ ಎಂದು ಅಂದಾಜಿಸಲಾಗಿರುವ ಮಧ್ಯಪ್ರದೇಶ ಹಾಗೂ ದ್ವಿತೀಯ ಸ್ಥಾನದಲ್ಲಿರುವ ಅರುಣಾಚಲ ಪ್ರದೇಶದಲ್ಲಿ ಈಗಾಗಲೇ ಗಣಿಗಾರಿಕೆಯ ಬಿಸಿತುಪ್ಪ ಅಲ್ಲಿನ ಕಾಡುಗಳ ಹಸಿರಿನ ಮೇಲಾಗಿದೆ. ಇತ್ತ ಕೇಂದ್ರ ಸರ್ಕಾರವು ತನ್ನ ಕರಡು ಅರಣ್ಯ ನೀತಿಯಲ್ಲಿ, ಕಾಡು ಬೆಳೆಸುವ ಕೆಲಸವನ್ನು ಖಾಸಗಿಯವರ ಸಹಭಾಗಿತ್ವ ವಹಿಸಿಕೊಡಲು ಉತ್ಸುಕವಾಗಿದೆ!

ಸರ್ಕಾರದ ಮಾಹಿತಿಯ ಪ್ರಕಾರ, ಕಳೆದ 30 ವರ್ಷಗಳಲ್ಲಿ 14 ಸಾವಿರ ಚದರ ಕಿ.ಮೀ ಕಾಡಿಗೆ ಮಂಗಳ ಹಾಡಿ 23,716 ಉದ್ಯಮಗಳನ್ನು ಆಹ್ವಾನಿಸಲಾಗಿದೆ. ಪ್ರಸ್ತುತ 134.4 ಕೋಟಿ ಜನಸಂಖ್ಯೆಯ ದೇಶದಲ್ಲಿ 2025ರ ವೇಳೆಗೆ ಜನಸಂಖ್ಯೆ 145 ಕೋಟಿಗೆ ಏರಬಹುದು. ಅಷ್ಟೇ ಅಲ್ಲ, ಇದೇ ರೀತಿ ಮುಂದುವರಿದರೆ 2050ರ ಸಮಯದಲ್ಲಿ ಬರೋಬ್ಬರಿ 166 ಕೋಟಿ ಜನಸಂಖ್ಯೆ ನಮ್ಮದಾಗಬಹುದು ಎಂದು ಅಂದಾಜಿಸಲಾಗಿದೆ. ಜನಸಂಖ್ಯೆಯ ವೃದ್ಧಿ ಆಗುವ ವೇಗಕ್ಕೆ ಅನುಸಾರವಾಗಿ ಎರಡು ಪಟ್ಟು ಕಾಡು ನಾಶವಾಗುವುದು ಬಹುತೇಕ ಖರೆ.

ಅರಣ್ಯವೂ ದುಡಿಮೆಯ ಬಾಬ್ತು!
ಕರಡು ಅರಣ್ಯ ನೀತಿ ಕೂಡ ವಾಣಿಜ್ಯೀಕೃತವಾದ ಸರ್ಕಾರದ ನಿಲುವುಗಳನ್ನು ಪದೇ ಪದೇ ದೃಢಪಡಿಸುತ್ತದೆ. ಅರಣ್ಯದ ಮರ ಸಂಪತ್ತಿನಿಂದ ಯಾವ ರಾಜ್ಯಗಳೂ ಈ ಸಂದರ್ಭದಲ್ಲಿ ಹೆಚ್ಚಿನ ಆದಾಯವನ್ನು ಪಡೆಯುತ್ತಿಲ್ಲ. ಈ ಮೂಲದಿಂದ ಹೆಚ್ಚು ಆದಾಯವನ್ನು ಪಡೆಯುವಂತೆ ಯೋಜನೆಗಳನ್ನು ರೂಪಿಸಬೇಕು ಎಂದು ಈ ಅರಣ್ಯ ನೀತಿ ಒಂದೆಡೆ ಹೇಳುತ್ತದೆ. ಈ ಹತ್ತು ಪುಟಗಳ ಕರಡು ಅರಣ್ಯಾಧಾರಿತ ಉದ್ಯಮ ಬೆಳವಣಿಗೆಗೆ ಒತ್ತು ನೀಡುತ್ತದೆ. ಇದರಿಂದ ಹಸಿರು ಉದ್ಯೋಗಗಳು ಜಾಸ್ತಿಯಾಗುತ್ತವೆ ಎಂಬ ಪದ ವಿಜೃಂಭಣೆಯನ್ನೂ ನಾವು ಕಾಣಬಹುದು. ಇದೇ ವೇಳೆ ಕಾಡು ಉದ್ಯಮ ಎಂಬ ವ್ಯಾಖ್ಯೆಯನ್ನೂ ಮಾಡಿ ಉದ್ಯಮಕ್ಕಾಗಿಯೇ ಪ್ಲಾಂಟೇಷನ್‌ಗಳನ್ನು ಮಾಡುವುದಕ್ಕೆ ಅರಣ್ಯ ನೀತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ದುಃಸ್ಥಿತಿಯಲ್ಲಿರುವ ಕಾಡನ್ನು ವಿವರಿಸುವುದು ಕಷ್ಟ. ಶೇ. 100ರಷ್ಟು ಮೇಲ್ಭಾಗ ಆವರಿಸಿರುವುದನ್ನು ಕಾಡು ಎಂಬುದನ್ನು ಕಾಡು ಎಂಬುದು, ಶೇ. 40ರಷ್ಟಿದ್ದರೆ ಅದು ನಿರ್ನಾಮ ಹಂತದಲ್ಲಿರುವ ವನ ಎಂದು ವಿಶ್ಲೇಷಿಸುವುದು ತಪ್ಪಾಗುತ್ತದೆ. ಕಳೆದ ಎರಡು ದಶಕಗಳಲ್ಲಿ ನಾಶವಾಗುತ್ತಿರುವ ಕಾಡುಗಳಿಗೆ ವಿಲನ್‌ ಕೇವಲ ಮನುಷ್ಯನೇ ವಿನಃ ಪ್ರಕೃತಿಯಲ್ಲ. ಹೆಚ್ಚಿನ ಸಂದರ್ಭದಲ್ಲಿ ಮಾನವನೇ ವಿನಃ ನೈಸರ್ಗಿಕ ಕಾರಣದಿಂದ ಕಾಡು ನಾಶವಾಗಿಲ್ಲ. ಆದರೆ ಇದೇ ವೇಳೆ ಕಾಡಿನ ಪುನರುಜ್ಜೀವನಕ್ಕೆ ಖಾಸಗಿಯವರ ಸಹಭಾಗಿತ್ವ ಪಡೆಯಬಹುದು ಎಂಬುದು ಸರ್ಕಾರದ ದೂರಗಾಮಿ ಯೋಚನೆಗಿಂತ ದುರಾಲೋಚನೆಯಂತೆ ಕಾಣುತ್ತದೆ. ನಿಜಕ್ಕಾದರೆ ಒಂದು ಕಾಡು, ಸಂಪೂರ್ಣ ಸುರಕ್ಷೆಗೆ ಒಪ್ಪಿಸಿಬಿಟ್ಟರೆ ಕೇವಲ ಎರಡು ವರ್ಷಗಳಲ್ಲಿ ಹೊಸ ಚೈತನ್ಯ ಪಡೆದು ಮತ್ತೆ ಪುನರುಜ್ಜೀವನಗೊಳ್ಳುತ್ತದೆ.

ಅರಣ್ಯ ಪ್ರದೇಶ ಹೆಚ್ಚುತ್ತಿದೆ ಎಂಬ ಮಾತು ಪದೇ ಪದೆ ಕೇಳಿಬರುತ್ತಿದೆ. ಸ್ಯಾಟಲೈಟ್‌ ಆಧಾರಿತವಾಗಿ ಕಾಡನ್ನು ಅಂದಾಜಿಸಲು ಹೊರಟ ಸಂದರ್ಭಗಳಲ್ಲಂತೂ ಕಾಡಿನ ಪ್ರಮಾಣದ ಲೆಕ್ಕ ಹಳಿತಪ್ಪಿದ್ದೇ ಜಾಸ್ತಿ. ಅಡಿಕೆ, ತೆಂಗು, ಅಕೇಶಿಯಾ, ನೀಲಗಿರಿಯ ನೆಡುತೋಪುಗಳನ್ನು ಕೂಡ ಈ ತಂತ್ರಜಾnನ ಕಾಡು ಎಂತಲೇ ಪರಿಗಣಿಸುತ್ತದೆ. ಪ್ರಶ್ನೆ ಬರೀ ಕಾಡಿನ ಪ್ರಮಾಣದಲ್ಲಷ್ಟೇ ಇಲ್ಲ, ಕಾಡಿನ ದಟ್ಟತೆ ಬಗ್ಗೆ ರಾಜಧಾನಿಯಲ್ಲಿ ಕುಳಿತು ಅಂಕಿಅಂಶ ಬರೆದುಕೊಳ್ಳುವವನಿಗೆ ಅರ್ಥವಾಗುವುದಿಲ್ಲ. ಇಂದು ಸಂರಕ್ಷಿತ ಅರಣ್ಯಗಳಲ್ಲೂ ಕೂಡ ಹೊರಭಾಗದಿಂದ ದಟ್ಟವಾಗಿ ಕಾಣುವ ಮರಗಳ ಸಂಖ್ಯೆ ನಡುವಿನಲ್ಲಿ ಕ್ಷೀಣಿಸಿರುತ್ತದೆ. ಕ್ಯಾನೋಪಿ ವಿಶ್ಲೇಶಿಸುವಾಗಲೂ ಈ ಕಾಡನ್ನು ದಟ್ಟ ಕಾನನ ಎಂದೇ ಪರಿಗಣಿಸಲಾಗುತ್ತದೆ. ವಾಸ್ತವದಲ್ಲಿ ಅರಣ್ಯ ದೊಡ್ಡ ಪ್ರಮಾಣದಲ್ಲಿ ವಿನಾಶವಾಗಿದೆ. ಮಲೆನಾಡು ಭಾಗದಲ್ಲಂತೂ ಇದರ ಶೇಕಡಾವಾರು ಇನ್ನಷ್ಟು ಹೆಚ್ಚು, ಥ್ಯಾಂಕ್ಸ್‌ ಟು ಪೊಲಿಟಿಷಿಯನ್‌ ಅಂಡ್‌ ಬಗರ್‌ಹುಕುಂ ಕಾಯ್ದೆ!

ಅರಣ್ಯ ನೀತಿ ಅತ್ಲಾಗಿರಲಿ, ಜಾರಿ?
ಔಷಧ ಮಾತ್ರೆಗಳು ಸಿಹಿ ಲೇಪಿತವಾಗಿರುತ್ತವೆ. ಸರ್ಕಾರವೊಂದು ಹೊಸದಾದ ನೀತಿಯನ್ನು ಹೇಳುವಾಗ ಅದು ಬಾಹ್ಯವಾಗಿ ಸಿಹಿಲೇಪಿತವೇ ಆಗಿರುತ್ತದೆ. ಒಂದು ನೀತಿಯನ್ನು ಹೇಳುವುದು ಬೇರೆ, ಜಾರಿಗೊಳಿಸುವುದು ಭಿನ್ನ. ಕರಡು ಅರಣ್ಯ ನೀತಿಯಲ್ಲೂ ಮೇಲ್ನೋಟಕ್ಕೆ ಗಮನ ಸೆಳೆಯುವ ಹತ್ತಾರು ಒಳ್ಳೆಯ ಅಂಶಗಳನ್ನು ಹೆಕ್ಕಿ ತೆಗೆಯಬಹುದು. ಅಹುದಹುದು ಎನ್ನಲು ಬಯಸದವರಿಗೆ ಬೇಕಾದ ಅಡ್ಡ ಅಂಶಗಳು ಕೂಡ ಇಲ್ಲಿ ದಂಢಿಯಾಗಿ ಸಿಗುತ್ತವೆ. ಒಂದು ನೀತಿ, ಅದು ಅರಣ್ಯ ಸಂಬಂಧಿಸಿದ್ದೇ ಆಗಿರಲಿ ಅಥವಾ ಮತ್ತಾವುದೇ ಆಗಿರಲಿ, ಅದರ ಜಾರಿಯಲ್ಲಿ ಸರ್ಕಾರ ತೋರುವ ಬದ್ಧತೆ ಮೇಲೆ ಅದರ ಪರಿಣಾಮ ನಿಗದಿಯಾಗುತ್ತದೆ. ಅರಣ್ಯ ನೀತಿಯ ವಿಚಾರದಲ್ಲೂ ನಮ್ಮ ನಾಡಿನ ಕಾಡಿನ ಸಂರಕ್ಷಣೆ ಮಾಡಿಕೊಳ್ಳುವುದೇ ಪ್ರಪ್ರಥಮ ಆದ್ಯತೆ ಎಂಬುದು ಕಾಣುವುದಿಲ್ಲ.

ಆರ್ಥಿಕ ತಜ್ಞರಲ್ಲಿ ಅಭಿವೃದ್ಧಿಯ ಮಾನದಂಡ ಜಿಡಿಪಿ ಎಂಬ ಕಲ್ಪನೆ ಹಾಸುಹೊಕ್ಕಾಗಿದೆ. ಒಂದು ಎಕರೆ ಜಾಗದಲ್ಲಿರುವ ಮರಗಳ ಸಂಖ್ಯೆ ಎಷ್ಟು, ಅದನ್ನು ಟಿಂಬರ್‌ ಆಗಿ ಮಾರಾಟ ಮಾಡಿದರೆ ಸಿಗುವ ಆದಾಯವೆಷ್ಟು ಎಂಬುದರ ಆಧಾರದ ಮೇಲೆಯೇ ಮೌಲ್ಯಗಿಟ್ಟುತ್ತದೆ. ಒಂದು ವರ್ಷ ಮರ ಮಾರಾಟದಿಂದಲೇ ಅತ್ಯಧಿಕ ಆದಾಯ ಬಂದರೆ ಆ ದೇಶದ ಜಿಡಿಪಿ ಸರಕ್ಕೆಂದು ಏರಬಹುದು. ಆದರೆ ಅರಣ್ಯ ವಿನಾಶದಿಂದಾಗುವ ದೂರಗಾಮಿ ಪರಿಣಾಮ, ಇತರ ಆದಾಯ ಮೂಲಗಳನ್ನು ಪ್ರಭಾವಿಸುವ ಅಂಶಗಳತ್ತ ಈ ಜಿಡಿಪಿ ಮಾನದಂಡ ಮೌನವಾಗುತ್ತದೆ. ಹಾಗಾಗಿ ಮುಂದಿನ ದಿನಗಳಲ್ಲಿ ಕಾಡೇ ಇಲ್ಲದಿದ್ದರೆ ವಯಸ್ಸಾದವರನ್ನು ಕಾಡು ಕರೆಯುತ್ತಿದೆ ಎಂದು ಹೇಳುವುದು ಸುಳ್ಳಾಗಿಯೂ ಬಿಡಬಹುದು!

-ಮಾ.ವೆಂ.ಸ.ಪ್ರಸಾದ್‌, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.