ಎ ಕಪ್‌ ಆಫ್ ಕಾಪಿ !


Team Udayavani, Mar 10, 2020, 6:00 AM IST

A cup of copy!

ಎಪ್ಪತ್ತರ ದಶಕಗಳಲ್ಲಿ ಪರೀಕ್ಷೆ ಅಂದರೆ ಜಾತ್ರೆ. ವಿದ್ಯಾರ್ಥಿಯ ಕಡೆಯವರು ಎಷ್ಟು ಜನ ಇದ್ದಾರೆ ಅನ್ನೋದರ ಮೇಲೆ ಗೌರವ. ಡಿಸ್ಟಿಂಕ್ಷನ್‌ ಬಂದರೆ ಕಾಪಿ ಹೊಡೆಯಲು ಸಹಾಯ ಮಾಡಿದವನಿಗೂ ತನ್ನ ನೆರವಿನ ಬಗ್ಗೆ ದೊಡ್ಡ ಖುಷಿ. ಹೀಗೆಲ್ಲಾ ನಡೆಯುತ್ತಿದ್ದ ಪರೀಕ್ಷೆಯಲ್ಲಿ ಮಜ ಮಜವಾದ ಕಥೆಗಳಿವೆ. ಓದಿ ಕೊಳ್ಳಿ…

ಎಪ್ಪತ್ತು-ಎಂಭತ್ತರ ದಶಕದಲ್ಲಿ ಹತ್ತನೇ ತರಗತಿ (ಮ್ಯಾಟ್ರಿಕ್‌) ಪರೀಕ್ಷೆಗಳನ್ನು ನೋಡಬೇಕಿತ್ತು. ಥೇಟ್‌ ಜಾತ್ರೆನೇ ಅದು. ಒಬ್ಬೊಬ್ಬ ವಿದ್ಯಾರ್ಥಿಯ ಹಿಂದೆ ಎಷ್ಟು ಜನ ಕಾಫಿ ಕೊಡಲು ಬಂದಿರುತ್ತಾರೋ ಅದರ ಮೇಲೆ ಅವರ ಘನತೆಯನ್ನು ಅಳೆಯಲಾಗುತ್ತಿತ್ತು. ಅಂಗಡಿ, ಹೊಟೇಲ್‌, ಸಿನಿಮಾ ಮಂದಿರ, ರಸ್ತೆಗಳಲ್ಲಿ ಜನಜಂಗುಳಿ. ಪರೀಕ್ಷೆ ಆರಂಭಕ್ಕೂ ಮುಂಚೆ ಹಾಗೂ ಮುಕ್ತಾಯದ ವೇಳೆ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ, ವ್ಯಾಪಾರ ವಹಿವಾಟು ಭರ್ಜರಿ.

ಕಾಫಿ ಸರಬರಾಜು
ಮಗ ಅಥವಾ ಮಗಳಿಗೆ ಚೀಟಿ ಕೊಡಲು ಬಂದವರಿಗೆ ಊಟೋಪಚಾರ ಮಾಡಲೆಂದು ಪೋಷಕರು ಬುತ್ತಿ ಕಟ್ಟಿಕೊಂಡು ಬರುತ್ತಿದ್ದರು. ಒಬ್ಬೊಬ್ಬ ಪರೀಕ್ಷಾರ್ಥಿಯ ಹಿಂದೆ ಏಳೆಂಟು ಮಂದಿಯ ದಂಡು. ವಿಷಯ ಪರಿಣಿತನೊಬ್ಬ, ಗೋಡೆ ಜಿಗಿಯಲೊಬ್ಬ, ಪೊಲೀಸರಿಗೆ ಪರಿಚಯದವನೊಬ್ಬ, ಪ್ರಶ್ನೆಗೆ ಉತ್ತರ ಹುಡುಕಲೊಬ್ಬ, ಉತ್ತರ ಹೇಳಲು, ಬರೆಯಲು, ಉತ್ತರದ ಚೀಟಿ ಒಯ್ದು ಮುಟ್ಟಿಸಲು, ಪ್ರಶ್ನೆ ಔಟ್‌ ಮಾಡಿಕೊಂಡು ಬರಲು… ಹೀಗೆ ವಿವಿಧ ಕಾರ್ಯಗಳನ್ನು ನಿರ್ವಹಿಸಲು ಪರಿಣಿತರಾದವರನ್ನು ಕರೆದುಕೊಂಡು ಹೋಗುವುದು ಸಾಮಾನ್ಯವಾಗಿತ್ತು. ಯಾರು ಯಾರು ಕಾಫಿ ಸರಬರಾಜು ಮಾಡಲೆಂದು ನಿಗದಿಪಡಿಸಲಾಗಿರುತ್ತದೆಯೋ ಅವರನ್ನು ಪರೀಕ್ಷೆಯ ಹಿಂದಿನ ದಿನ ಪರೀಕ್ಷಾರ್ಥಿಯ ಮನೆಗೆ ಬರಮಾಡಿಕೊಂಡು ಅವರಿಗೆ ಚಹಾ-ತಿಂಡಿಯ ವ್ಯವಸ್ಥೆ ಮಾಡಲಾಗುತ್ತಿತ್ತು. ಇದೊಂಥರ ಓಟಿಗಾಗಿ ಮತದಾರರನ್ನು ಸೆಳೆಯುವ ತಂತ್ರಗಾರಿಕೆ ಇದ್ದಂತೆ. ಇದರಲ್ಲಿ ಆಸೆ ಆಮಿಷಗಳನ್ನೂ ಈಡೇರಿಸಿಕೊಳ್ಳುವ ಅವಕಾಶವಿತ್ತು. ಇಲ್ಲಿಯೂ ಪಕ್ಷಾಂತರ, ಭಿನ್ನಮತ, ಅಪಹರಣದಂಥ ಪ್ರಕರಣಗಳೂ ನಡೆಯುತ್ತಿದ್ದವು.

ಎಲ್ಲಿಲದ ಬೇಡಿಕೆ
ಜಾಣರಿಗಂತೂ ಎಲ್ಲಿಲ್ಲದ ಬೇಡಿಕೆ. ಅಂಥವರು ಊರಲ್ಲಿ ಬೆರಳೆಣಿಕೆಯಷ್ಟು ಮಾತ್ರ ಇರುತ್ತಿದ್ದರು. ಅವರ ಪಾಡಂತೂ ಹೇಳತೀರದು! ಇವರು ಯಾರಿಗೂ ಕೆಟ್ಟದಾಗಬಾರದೆಂದು ತಮ್ಮದೇಯಾದ ಮಾರ್ಗಸೂಚಿ ಅನುಸರಿಸಲು ಸಲಹೆ ಮಾಡುತ್ತಿದ್ದರು. ಊರಲ್ಲಿನ ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳ ಪಾಲಕರನ್ನು ಸೇರಿಸಿ ಎಲ್ಲರಿಗೂ ಬೇಕಾಗುವಷ್ಟು ಪ್ರತಿಗಳನ್ನು ತಯಾರಿಸಲು ಬೇಕಾಗುವ ಪೆನ್ನು, ಕಾರ್ಬನ್‌, ಹಾಳಿ ಮತ್ತು ಗೌಪ್ಯ ಸ್ಥಳ ಮೊದಲಾದವುಗಳ ಖರ್ಚು ವೆಚ್ಚಗಳನ್ನು ಎಲ್ಲರೂ ಸೇರಿ ಮಾಡುವಂತೆ ತಿಳಿಸುತ್ತಿದ್ದರು. ಜೊತೆಗೆ, ಪೊಲೀಸರಿಂದ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಹೇಳುತ್ತಿದ್ದರು. ಪಾಲಕರು ಒಪ್ಪಿ, ಇಂಥವರನ್ನು ವಿಐಪಿಗಳಂತೆ ಪರಿಗಣಿಸಿ ಪರೀಕ್ಷೆಗಳು ಮುಗಿಯುವವರೆಗೆ ಸಕಲ ವ್ಯವಸ್ಥೆಗಳನ್ನು ಪೂರೈಸುತ್ತಿದ್ದರು.

ಪರೀಕ್ಷೆ ನಡೆಯುವ ದಿನ ಪರೀಕ್ಷಾ ಕೇಂದ್ರಗಳ ಸುತ್ತ ಬಿಗಿ ಬಂದೋಬಸ್ತ್ ಮಾಡಿದ್ದರೂ ಅಲ್ಲಿ ಗದ್ದಲ ನಡದೇ ಇರುತ್ತಿತ್ತು. ವಾರ್ನಿಂಗ್‌ ಬೆಲ್‌ ಬಾರಿಸುವವರೆಗೆ ಪರೀಕ್ಷೆ ಬರೆಯುವವರ ಹತ್ತಿರ ಹೋಗಿ ಅವರಿಗೆ ಕಾಫಿ ತಲುಪಿಸುವ ಮಾರ್ಗ, ಪ್ರಶ್ನೆಗಳನ್ನು ಔಟ್‌ ಮಾಡುವ ರೀತಿ, ಉತ್ತರ ಗೊತ್ತಿದ್ದರೂ ಚೀಟಿ ನೋಡಿಯೇ ಬರೆಯುವ ಕೌಶಲ, ಯಾವ ಚೀಟಿ ಮೊದಲು ಬಂದಿರುತ್ತದೋ ಅದೇ ನಂಬರ್‌ ಹಾಕಿ ಉತ್ತರ ಬರೆಯುವ ಜಾಣ್ಮೆ, ಮೇಲಾಧಿಕಾರಿಗಳು ಬಂದಾಗ ನಡೆದುಕೊಳ್ಳುವ ರೀತಿ, ಸುತ್ತಮುತ್ತಲಿರುವ ಪರೀಕ್ಷಾರ್ಥಿಗಳೊಂದಿಗೆ ಒಳ್ಳೆಯ ಬಾಂಧವ್ಯ ಮುಂತಾದ ಸಲಹೆಗಳನ್ನು ಕಾಫಿ ಕೊಡಲು ಬಂದವರು ನೀಡುತ್ತಿದ್ದರು. ಈ ವೇಳೆ ಪೋಲೀಸರು ಬಂದು ಲಾಟಿ ರುಚಿ ತೋರಿಸಿ ಹೊರ ದಬ್ಬುತ್ತಿದ್ದದ್ದೂ ಉಂಟು. ಕಿಟಕಿಗೊಬ್ಬರಂತೆ ಪೊಲೀಸ್‌ ಸಿಬ್ಬಂದಿ ಸರ್ಪಗಾವಲಾಗಿ ನಿಲ್ಲುತ್ತಿದ್ದರು. ಪೋಲಿಸ್‌ ಅಧಿಕಾರಿಯ ಬುಲೆಟ್‌ ಗಾಡಿಯ ಸದ್ದು ಕೇಳುತ್ತಿದ್ದಂತೆ ಹೊರಗೆ ಗದ್ದಲ, ಚೀರಾಟ, ಓಡಾಟ ಜೋರಾಗಿ ನಡೆದರೆ, ಒಳಗೆ ಕೊಠಡಿ ಮೇಲ್ವಿಚಾರಕರ ಕಣ್ತಪ್ಪಿಸಿ ಚೀಟಿಯಲ್ಲಿ ಪ್ರಶ್ನೆಗಳನ್ನು ಬರೆದು ಹೊರಗೆ ದಾಟಿಸುವ ಹವಣಿಕೆ ಪರೀಕ್ಷೆಗೆ ಕುಳಿತವರಿಂದ ನಡೆಯುತ್ತಿತ್ತು.

ಪ್ರಶ್ನೆ ಪತ್ರಿಕೆ ವಿತರಣೆಯಾದ ಅರ್ಧ ಗಂಟೆಯೊಳಗೆ ಪ್ರಶ್ನೆಗಳು ಅದು ಹೇಗೋ ಹೊರಗಡೆ ಪ್ರತ್ಯಕ್ಷವಾಗುತ್ತಿದ್ದವು. ಮುಂದಿನ ಕೆಲವು ನಿಮಿಷಗಳಲ್ಲಿ ಉತ್ತರಗಳು ಸಿದ್ಧವಾಗಿ ಅವರವರಿಗೆ, ಅವರವರು ತಲುಪಿಸುತ್ತಿದ್ದರು. ಕಾಪಿ ಚೀಟಿ ಕೊಡುವ ಭರದಲ್ಲಿ ಗೋಡೆ ಜಿಗಿಯಲು ಹೋಗಿ ಕೈಕಾಲುಗಳಿಗೆ ಪೆಟ್ಟಾಗುವುದು, ತಂತಿ ಬೇಲಿ ಜಿಗಿಯುವಾಗ ಬಟ್ಟೆ ಹರಿದುಕೊಳ್ಳುವುದು, ಪೋಲೀಸರ ಕೈಗೆ ಸಿಕ್ಕು ಅರೆ ಬೆತ್ತಲೆಯಾಗಿ ಸ್ಟೇಷನಿಗೆ ಹೋಗುವುದು, ಮಹಡಿಯಲ್ಲಿರುವ ಕೊಠಡಿಗಳಿಗೆ ಹತ್ತಲು ಹೋಗಿ ಜಾರಿ ಬೀಳುವುದು, ಗಡಿಬಿಡಿಯಿಂದ ಚೀಟಿಯಲ್ಲಿ ಕಲ್ಲು ಹಾಕಿ ಒಳಗಿನವರಿಗೆ ಎಸೆಯುವಾಗ, ಆ ಚೀಟಿ ಮತ್ತು ಕಲ್ಲು ಅವರ ತಲೆಗೆ ತಾಗಿ ಗಾಯವಾಗುವುದು ಹೀಗೆ ಅನೇಕ ಅವಘಡಗಳು ಸಂಭವಿಸುವುದು ಸರ್ವೇಸಾಮಾನ್ಯಗಿತ್ತು!.

ಕಾಪಿಚೆಟ್‌
ಕೊಠಡಿಯಲ್ಲಿ ಚೀಟಿ ನೋಡಿ ಉತ್ತರ ಬರೆಯುವವರ ಪಾಡಂತೂ ಹೇಳತೀರದು. ಕೊಠಡಿ ಮೇಲ್ವಿಚಾರಕರು, ಚೀಫ್ ಕಸ್ಟೋಡಿಯನ್‌, ಸ್ಕ್ವಾಡ್‌ ಇವರೆಲ್ಲರ ಭಯ ಅತಿಯಾಗಿ ಕಾಡುತ್ತಿತ್ತು. ಇಷ್ಟೆಲ್ಲಾ ಒತ್ತಡಗಳಿದ್ದರೂ ಬಂದ ಚೀಟಿಗಳಲ್ಲಿನ ಉತ್ತರ ಬರೆದು ಮುಗಿಸದೆ ಬಿಡುತ್ತಿರಲಿಲ್ಲ. ಪ್ರಶ್ನೆಗೂ ಉತ್ತರಕ್ಕೂ ತಾಳೆ ನೋಡುವ ಗೋಜಿಗೆ ಹೋಗದೆ ಇದ್ದದ್ದನ್ನು ಇದ್ದ ಹಾಗೆ ನಂಬರ್‌ ಹಾಕಿ ಬರೆದು ಮುಗಿಸುವ ಆತುರ ಎಲ್ಲರದು. ಆಕಸ್ಮಿಕವಾಗಿ ಸ್ಕ್ವಾಡ್‌ ಬಂದ್ರೆ ಸಾಕು, ಕಿಟಕಿಗಳಿಂದ ರಾಶಿಗಟ್ಟಲೆ ಚೀಟಿ, ಪುಸ್ತಕ, ನೋಟ್ಸ್‌, ಗೈಡ್‌ ಮುಂತಾದವುಗಳು ಹೊರ ಹಾಕಲ್ಪಡುತ್ತಿದ್ದವು. ಹೊರಗಿನವರು ಅವುಗಳನ್ನು ಸಂಗ್ರಹಿಸಲು ಹರಸಾಹಸ ಪಡುತ್ತಿದ್ದರು. ಆಕಸ್ಮಾತ್‌ ಸ್ಕ್ವಾಡ್‌ ಕೇಂದ್ರ ಬಿಟ್ಟು ಒಂದೆರಡು ಗಂಟೆ ಹೋಗದಿದ್ದರೆ ಅಂದಿನ ಪೇಪರ್‌ ಕತೆ ಮುಗಿದಂತೆಯೇ ಸರಿ. ಬಹುತೇಕರು ಆ ವಿಷಯದಲ್ಲಿ ಫೇಲ್‌ ಆಗುವುದು ತಪ್ಪಿದ್ದಲ್ಲ!.ಪರೀಕ್ಷೆಯ ಅವಧಿ ಮುಗಿದ ನಂತರ ಪೇಪರ್‌ ಕೊಟ್ಟು ಹೊರಗೆ ಬರುತ್ತಿದ್ದಂತೆ ಪರೀಕ್ಷಾರ್ಥಿಗಳನ್ನು ಎದುರುಗೊಂಡ ಕಾಫಿ ವಿತರಕರು, ಅವರ ಕೈಯಲ್ಲಿನ ಪ್ರಶ್ನೆ ಪತ್ರಿಕೆ ಪಡೆದು ತಾವು ಕಳಿಸಿಕೊಟ್ಟ ಉತ್ತರಗಳನ್ನು ಬರೆದಿದ್ದರ ಬಗ್ಗೆ ಕೇಳುತ್ತ, ಖುಷಿ ಪಡುತ್ತಿದ್ದರು.

ಪರೀಕ್ಷೆ ಎಂಬ ಸಮರ ಮುಗಿದು ಒಂದಷ್ಟು ದಿನಗಳು ಕಳೆದ ತರುವಾಯ ಫ‌ಲಿತಾಂಶ ಪ್ರಕಟವಾತ್ತಿದ್ದಂತೆ, ಕಲಿತ ಶಾಲೆಗಳಿಗೆ ಹೋಗಿ ಸೂಚನಾ ಫ‌ಲಕ ನೋಡುವುದು ಆಗಿನ ಕಾಲದು ರೂಢಿಯಾಗಿತ್ತು. ಮೊದಲ ದೃಷ್ಟಿ ಪಾಸ್‌ ಕ್ಲಾಸ್‌ ನಂಬರುಗಳ ಮೇಲೆ ಹರಿದಾಡಿ, ನಂತರ ಸೆಕೆಂಡ್‌ ಕ್ಲಾಸ್‌, ಫ‌ಸ್ಟ್‌ಕ್ಲಾಸ್‌, ಡಿಸ್ಟಿಂಕ್ಷನ್‌ ಗಳತ್ತ ಹೊರಳಾಡುತ್ತಿದ್ದವು. ಫ‌ಸ್ಟ್‌ ಕ್ಲಾಸ್‌, ಸೆಕೆಂಡ್‌ ಕ್ಲಾಸ್‌ ಬಂದವರಿಗೆ ಊರಲ್ಲಿ ಗೌರವ ಹೆಚ್ಚು. ಡಿಸ್ಟಿಂಕ್ಷನ್‌ ಬಂದವರಿಗಂತೂ ಆನೆಯ ಮೇಲೆ ಮೆರವಣಿಗೆ ನಡೆಯುತ್ತಿತ್ತು!. ಇಂಥವರಿಗೆ ಕಾಫಿ ಕೊಟ್ಟವರ ಸಂಭ್ರಮ ಹೇಳತೀರದು. ಅವರಿಗೆ ಹೊಗಳಿಕೆಯ ಮಹಾಪೂರವೇ ಹರಿದು ಬರುತ್ತಿತ್ತು.

ಬದಲಾಯಿತು
ಕಾಲ ಗತಿಸಿದಂತೆ ಪರೀಕ್ಷಾ ಪದ್ಧತಿಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ನೆಲದ ಮೇಲೆ ಕುಳಿತು ಬರೆಯುವ ಸ್ಥಿತಿ ಈಗಿಲ್ಲ. ನಿರಂತರ ಮೌಲ್ಯಮಾಪನ, ಸರಣಿ ಪರೀಕ್ಷೆಗಳು, ಪ್ರಶ್ನೆ ಪತ್ರಿಕೆಗಳಲ್ಲಿ ಬದಲಾವಣೆ, ಸಿಸಿ ಕ್ಯಾಮರಾ ಅಳವಡಿಕೆ ಮಂತಾದ ಸುಧಾರಣಾ ಕ್ರಮಗಳಿಂದ ಕಾಫಿ ಮತ್ತು ಕಾಪಿ ಹಾವಳಿ ಕ್ಷೀಣಿಸಿದೆ. ಹಿಂದಿನಂತೆ ಜಾತ್ರೆ ನಡೆಯದೆ, ಪಾಲಕ ಪೋಷಕರು ಪರೀಕ್ಷಾ ಕೇಂದ್ರಗಳಿಗೆ ಮಕ್ಕಳನ್ನು ಬಿಟ್ಟು ಧೈರ್ಯ ತುಂಬುವುದು, ಪರೀಕ್ಷೆ ಮುಗಿದ ನಂತರ ಕರೆದುಕೊಂಡು ಹೋಗುವುದು ಮಾಡುತ್ತಿದ್ದಾರೆ. ಪೊಲೀಸರು ಗಲಾಟೆ ಗಳಿಲ್ಲದೆ ನಿಶ್ಚಿಂತರಾಗಿದ್ದಾರೆ. ಈಗ ಫ‌ಲಿತಾಂಶದಲ್ಲಿಯೂ ಸಾಕಷ್ಟು ಪ್ರಗತಿಯಾಗಿದೆ. ಫೇಲ್‌ ಆಗುವವರು ಬೆರಳೆಣಿಕೆಯಷ್ಟು!.

ಹೀಗಿದ್ದರೂ, ಆಗಿನ ಮ್ಯಾಟ್ರಿಕ್‌ ಪರೀಕ್ಷೆಗೆ ಇರುವ ಬೆಲೆ ಈಗಿಲ್ಲ. 70 ರ ದಶಕದಲ್ಲಿ ಮ್ಯಾಟ್ರಿಕ್‌ ಪಾಸು ಮಾಡಿದ್ದಾರೆಂದರೆ ಅವರನ್ನು ಜಾಣರೆಂದೇ ಬಿಂಬಿಸಲಾಗುತ್ತಿತ್ತು. ಕಾಲೇಜುಗಳು ಕೈಮಾಡಿ ಕರೆಯುತ್ತಿದ್ದವು. ಸರ್ಕಾರಿ ಕೆಲಸವೂ ಸಿಕ್ಕಿಬಿಡುತ್ತಿತ್ತು. ಈಗ ಎಷ್ಟೇ ಉನ್ನತ ದರ್ಜೆಯಲ್ಲಿ ಪಾಸಾದರೂ, ಪೈಪೋಟಿ ಮಾಡಬೇಕಾದಂಥ ಸ್ಥಿತಿ ಬಂದಿದೆ. ಅದೇನೇ ಇರಲಿ ಕಾಪಿ ಎಂಬ ಪೆಡಂಭೂತ ಕಣ್ಮರೆಯಾಗುತ್ತಿರುವುದು ಸಂತಸದಾಯಕವಾದರೂ, ಪ್ರಶ್ನೆ ಪತ್ರಿಕೆ ಸೋರಿಕೆಯ ಗುಮ್ಮ ಬಿಡದೇ ಕಾಡುತ್ತಿರುವುದು ಆತಂಕಕಾರಿಯಾಗಿದೆ.

-ಸೋಮಲಿಂಗ ಬೇಡರ, ಬೀಳಗಿ

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.