ಎ ಒನ್‌ ಬದುಕಿಗೆ ಸ್ಕೇಲ್‌ ಒನ್‌!

Team Udayavani, Nov 7, 2017, 11:36 AM IST

udyoga.jpg

ವಿವಿಧ ಬ್ಯಾಂಕ್‌ಗಳಲ್ಲಿ 1,319 ಹುದ್ದೆಗಳಿಗೆ ಅವಕಾಶಇಂಟ್ರೋ: ಬದುಕಿಗೆ ಭದ್ರತೆ ಒದಗಿಸುವ ನೌಕರಿ ಎಂಬ ಹೆಗ್ಗಳಿಕೆ ಬ್ಯಾಂಕ್‌ ಕೆಲಸಕ್ಕೆ ಮೊದಲಿನಿಂದ ಲೂ ಇದೆ. ಐಟಿ-ಬಿಟಿಯ ಅಬ್ಬರದ ಈ ದಿನಗಳಲ್ಲೂ ಹಳೇ ಚಾರ್ಮ್ ಉಳಿ ಸಿ ಕೊಂಡ ನೌಕರಿಯೆಂದ ರೆ, ಬ್ಯಾಂಕ್‌ ಕ್ಷೇತ್ರವೊಂದೇ. ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ನೌಕರಿ ಪಡೆಯಲು ಎಂಜಿನಿಯರಿಂಗ್‌ ಹಾಗೂ ಕೃಷಿ ಪದವೀಧರರೂ ಸಾಲುಗಟ್ಟಿ ನಿಲ್ಲುವುದೇ ಈ ಮಾತಿ ಗೆ ಸಾಕ್ಷಿ. ಇದೀಗ ಇನ್ಸ್‌ಟಿಟ್ಯೂಟ್‌ ಆಫ್ ಬ್ಯಾಂಕಿಂಗ್‌ ಪರ್ಸನಲ್ ಸೆಲೆಕ್ಷನ್‌ (ಐಬಿಪಿಎಸ್‌ ) ದೇಶಾದ್ಯಂತ ವಿವಿಧ ರಾಷ್ಟ್ರೀಯ ಬ್ಯಾಂಕುಗಳಲ್ಲಿ 1,319 ಸ್ಕೇಲ್ ಒನ್‌ ಆಫೀಸರ್‌ ಹುದ್ದೆಗೆ ಆನ್‌ಲೈನ್‌ ಮೂಲಕ ಪರೀಕ್ಷೆ ನಡೆಸುತ್ತಿದೆ… 

ಈಗ ಬಹಳಷ್ಟು ಜನ ಪರೀಕ್ಷೆಗಳನ್ನು ಬರೆದು, ಸಂದರ್ಶನಗಳಿಗೆ ಹಾಜರಾಗಿ ಸು ಸ್ತಾ ಗಿ, ಎಲ್ಲರೂ ಏನು ಕೆಲ್ಸ ಮಾಡ್ತಿದ್ದೀ ಯಾ ಅಂತ  ಕೇಳ್ತಾರೆ ಅನ್ನೋ ಸೋಶಿಯಲ್ ಪ್ರಷರ್‌ಗೆ ತುತ್ತಾ ಗಿ, ಅಂದು ಕೊಂಡ ಕೆಲ ಸ ಸಿಗ ಲಿ ಲ್ಲ ಎಂದು ಹೇಳ ಲು ಸಾಧ್ಯ ವಾ ಗ ದೆ ಒದ್ದಾ ಡಿ ಹೋಗುತ್ತಾ ರೆ. ನಂತರ ತಮ್ಮ ಓದಿಗೂ, ಮಾಡುವ ಕೆಲಸಕ್ಕೂ ಸಂಬಂಧವಿಲ್ಲದ ಮತ್ಯಾ  ವು ದೋ ಹುದ್ದೆಗೆ ಸೇರುತ್ತಾರೆ. ಇನ್ನು ಕೆಲವರು ಬಿ.ಕಾಂ, ಎಂ.ಕಾಂ ಮಾಡಿದ್ದರೂ ಜೀವ ನ ದ ಲ್ಲಿ ಒಂ ದು ನೆಲೆ ಕಾಣದೆ “ನಮ್ಮ ಹಣೆ ಬರಹವೇ ಚೆನ್ನಾಗಿಲ್ಲ ’ ಎಂದು  ವ್ಯ ರ್ಥಾ ಲಾ ಪ ಮಾಡು ತ್ತಿರುತ್ತಾರೆ.

ಮಾಡುವುದಾದ ರೆ ಉನ್ನತ ಹುದ್ದೆಯ ಕೆಲ ಸ  ವ  ನ್ನೇ  ಎಂದು ಮತ್ತೆ ಮತ್ತೆ ಯತ್ನಿಸುತ್ತಿರುವವರೂ ಇದ್ದಾ ರೆ. ಇಂಥ ಕನ ಸು ಗಾ ರರಿಗಾಗಿಯೇ ಇ ನ್ಸ್‌ ಟಿಟ್ಯೂ ಟ್‌ ಆಫ್ ಬ್ಯಾಂಕಿಂಗ್‌ ಪರ್ಸನಲ್ ಸೆಲೆಕ್ಷನ್‌ ಅಲಹಾಬಾದ್‌ ಬ್ಯಾಂಕ್‌, ಆಂಧ್ರ ಬ್ಯಾಂಕ್‌, ಬ್ಯಾಂಕ್‌ ಆಫ್ ಇಂಡಿಯಾ, ಕೆನರಾ ಬ್ಯಾಂಕ್‌, ಇಂಡಿಯನ್‌ ಬ್ಯಾಂಕ್‌, ಯೂಕೋ ಬ್ಯಾಂಕ್‌, ವಿಜಯಾ ಬ್ಯಾಂಕ್‌ ಸೇರಿದಂತೆ ವಿವಿಧ ಬ್ಯಾಂ ಕ್‌ಗಳಲ್ಲಿ ದೇಶಾದ್ಯಂತ 1,319 ಸ್ಕೇಲ್ ಒನ್‌ ಆಫೀಸರ್‌ ಹುದ್ದೆಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾರ್ಹತೆ, ವಯೋಮಿತಿ
– ಐಟಿ ಆಫೀಸರ್‌ ಆಗಲು ನಾಲ್ಕು ವರ್ಷದ ಎಂಜಿನಿಯರಿಂಗ್‌, ತಾಂತ್ರಿಕ ಜ್ಞಾನ ಅವಶ್ಯ.

– ಅಗ್ರಿಕಲ್ಚರ್‌ ಫೀಲ್ಡ್ ಆಫೀಸರ್‌ ಹುದ್ದೆಗೆ ನಾಲ್ಕು ವರ್ಷದ ಸ್ನಾತಕೋತ್ತರ ಪದವಿಯೊಂದಿಗೆ ಆ ಕ್ಷೇತ್ರದ ಅನುಭವ ಮುಖ್ಯ. ರಾಜ್ಯಭಾಷಾ ಅಧಿಕಾರಿಗೆ ಹಿಂದಿ, ಇಂಗ್ಲಿಷ್‌ ಭಾಷೆಯಲ್ಲಿ ಪದವಿ, ಸ್ನಾತಕೋತ್ತರ ಪದವಿ ಮಾಡಿರಬೇಕು. ಲಾ ಆಫೀಸರ್‌ಗೆ ಎಲ್‌ಎಲ್‌ಬಿ ಕಡ್ಡಾಯ, ಎಚ್‌ಆರ್‌/ ಪರ್ಸನಲ್ ಆಫೀಸರ್‌ಗೆ ಪದವಿ, ಸ್ನಾತಕೋತ್ತರ ಪದವಿ ಜೊತೆಗೆ ಕೆಲಸ ಮಾಡಿದ ಅನುಭವ ಮುಖ್ಯ. ಮಾರ್ಕೆಟಿಂಗ್‌ ಆಫೀಸರ್‌ಗೂ ಪದವಿ ಜೊತೆಗೆ ಆ ಕ್ಷೇತ್ರದ ಅನುಭವ ಕಡ್ಡಾಯ.

– ಈ ಎಲ್ಲಾ ಹುದ್ದೆಗಳಿಗೂ ಕನಿಷ್ಠ 20ರಿಂದ ಗರಿಷ್ಠ 30 ವರ್ಷ ವಯೋಮಿತಿ ನಿಗದಿಗೊಳಿಸಲಾಗಿದೆ. ಪರಿಶಿಷ್ಟ ಜಾತಿ/ ವರ್ಗಕ್ಕೆ 5ವರ್ಷ, ಅಂಗವಿಕಲರಿಗೆ 10 ವರ್ಷ ವಯೋಮಿತಿಯಲ್ಲಿ ಸಡಿಲಿಕೆಯಿದೆ.

ಆಯ್ಕೆ ಪ್ರಕ್ರಿಯೆ ಹೇಗೆ?
ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಪರೀಕ್ಷೆ ನಡೆಸುವುದರಿಂದ ಪ್ರಾಥಮಿಕ ಮತ್ತು ಮುಖ್ಯ ಪರೀಕ್ಷೆ ಎಂದು ವಿಭಾಗಿಸಲಾಗಿದೆ. ಪ್ರಾಥಮಿಕ ಕಡ್ಡಾಯ ಇಂಗ್ಲಿಷ್‌ನೊಂದಿಗೆ ಆಯಾ ಹುದ್ದೆಗಳಿಗನುಗುಣವಾಗಿ ಬೇರೆ ಬೇರೆ ಪತ್ರಿಕೆಗಳನ್ನು ನೀಡಲಾಗುತ್ತದೆ. ಎಲ್ಲ ಸೇರಿ ಒಟ್ಟು 250 ಅಂಕಗಳಿಗೆ ಪರೀಕ್ಷೆ ನಡೆಯುತ್ತದೆ. ಇಲ್ಲಿ ಗರಿಷ್ಠ ಪ್ರಮಾಣದ ಅಂಕ ಗಳಿಸಿದವರಿಗೆ ಮುಖ್ಯ ಪರೀಕ್ಷೆಯಲ್ಲಿ ಅವಕಾಶ. ಅಲ್ಲಿಯೂ 120 ಅಂಕಗಳಿಗೆ ಆಯಾ ಹುದ್ದೆಯ ಪ್ರೊಫೆಶನಲ್ ನಾಲೆ ಕುರಿತಾಗಿ ಪ್ರಶ್ನೆಗಳಿರುತ್ತವೆ. ಜೊತೆಗೆ ಸಂದರ್ಶನವನ್ನೂ ನಡೆಸಲಾಗುತ್ತದೆ.

ಅರ್ಜಿ ಸಲ್ಲಿಕೆ
ಅರ್ಜಿ ಸಲ್ಲಿಕೆಗೆ ಮುನ್ನ ಅಗತ್ಯ ದಾಖಲೆ (ಅಂಕಪಟ್ಟಿಗಳು, ಭಾವಚಿತ್ರ)ಗಳ ಸಾಫ್ಟ್ ಕಾಪಿಯನ್ನು ಒಂದು ಪೆನ್‌ಡ್ರೈವ್‌ನಲ್ಲಿ ಹೊಂದಿಸಿಟ್ಟುಕೊಳ್ಳುವುದು ಒಳಿತು. ಮೊದಲು goo.gl/viL3Bc ಇಲ್ಲಿ ಪರೀಕ್ಷೆ ಆಯ್ಕೆ ಮಾಡಿಕೊಂಡು ರಿಜಿಸ್ಟರ್‌ ಆಗಿ. ನಂತರದ ಪರದೆಯ ನಿಮ್ಮ ಅಪ್ಲಿಕೇಶನ್‌ ಅಲ್ಲಿ ಹೆಸರು, ಫೋನ್‌ ನಂಬರ್‌, ಇ ಮೇಲ್ ವಿಳಾಸ, ಸಾಮಾನ್ಯ ಮಾಹಿತಿ ತುಂಬಿ ಸಬಿಟ ಮಾಡಿ,

ಮೂರನೇ ಹಂತದಲ್ಲಿ ಈಗಾಗಲೇ ಸಿದ್ಧಪಡಿಸಿಕೊಂಡಿರುವ ಅಗತ್ಯ ದಾಖಲೆ, ಭಾವಚಿತ್ರವನ್ನು ಆಯ್ಕೆಗೆ ಅನುಗುಣವಾಗಿ ತುಂಬುತ್ತಾ ಹೋಗಿ. ನಾಲ್ಕನೇ ಹಂತದಲ್ಲಿ ನಿಮ್ಮ ಶೈಕ್ಷಣಿಕ ಮಾಹಿತಿ ಸಾದರಪಡಿಸಿ, ಐದನೇ ಹಂತದಲ್ಲಿ ನೀವು ನಮೂದಿಸಿರುವ ಎಲ್ಲ ದಾಖಲೆ ಮತ್ತು ಮಾಹಿತಿ ಸರಿಯಿದೆಯೇ ಎಂದು ಚೆಕ್‌ ಮಾಡಿ,

ಆರನೇ ಹಂತದಲ್ಲಿ ಅರ್ಜಿ ಸಲ್ಲಿಕೆಗೆ ಆನ್‌ಲೈನ್‌ ಪೇಮೆಂಟ್‌ ಮಾಡಿ (ಸಾಮಾನ್ಯವರ್ಗ- 600 ರೂ, ಪರಿಶಿಷ್ಟರಿಗೆ-100 ರೂ). ಕೊನೆ ಸಬಿಟ್‌ ಬಟನ್‌ ಒತ್ತಿ, ಇಮೇಲ್‌ನಲ್ಲಿ ಯಶಸ್ವಿಯಾಗಿ ಅರ್ಜಿ ಸಲ್ಲಿಕೆಯಾದ ನೋಟಿಫಿಕೇಶನ್‌ ಬಂದಿದೆಯೇ ಖಾತ್ರಿ ಪಡಿಸಿಕೊಳ್ಳಿ ಪರೀಕ್ಷೆಗೆ ತಯಾರಾಗಿ. ಅರ್ಜಿ ಸಲ್ಲಿಕೆಗೆ ನ. 27 ಕೊನೆ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಾಲತಾಣ goo.gl/TRbVUF ಸಂಪರ್ಕಿಸಿ

ಹುದ್ದೆಗಳು ಎಷ್ಟು?
-ಐಟಿ ಆಫೀಸರ್‌ ( ಸ್ಕೇಲ್ 1) – 121
-ಅಗ್ರಿಕಲ್ಚರ್‌ ಫೀಲ್ಡ್ ಆಫೀಸರ್‌ ( ಸ್ಕೇಲ್ 1) – 877
-ರಾಜ್ ಭಾಷಾ ಅಧಿಕಾರಿ ( ಸ್ಕೇಲ್ 1) – 31
-ಕಾನೂನು ಅಧಿಕಾರಿ (ಸ್ಕೇಲ್ 1)- 61
-ಎಚ್‌ಆರ್‌/ ಪರ್ಸನಲ್ ಆಫೀಸರ್‌ (ಸ್ಕೇಲ್ 1) -35
-ಮಾರ್ಕೆಟಿಂಗ್‌ ಆಫೀಸರ್‌ ( ಸ್ಕೇಲ್ 1) – 195
-ಒಟ್ಟು 1,319 ಹುದ್ದೆಗಳಿದ್ದು, ಈ ಎಲ್ಲಾ ಹುದ್ದೆಗಳು ವಿವಿಧ ಬ್ಯಾಂಕುಗಳ ಅವಶ್ಯಕತೆಗಳಿಗೆ ಅನುಗುಣವಾಗಿ ಹಂಚಿಕೆ ಮಾಡಲಾಗಿದೆ.

* ಎನ್‌. ಅನಂತನಾಗ್‌

ಟಾಪ್ ನ್ಯೂಸ್

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫ‌ಯಾಜ್‌: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ

ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫ‌ಯಾಜ್‌: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.