ಆದರ್ಶ ಪ್ರಪಂಚ

Team Udayavani, Oct 20, 2020, 8:04 PM IST

josh-tdy-2

ಗ್ರೆಗೊರಿ ಪೆರೆಲ್ಮನ್‌ ರಷ್ಯದ ಗಣಿತ ಪ್ರತಿಭೆ.ಕ್ಲೇ ಗಣಿತ ಸಂಸ್ಥೆ ಜಗತ್ತಿನ ಮುಂದಿಟ್ಟಿದ್ದ ಏಳು ಸಮಸ್ಯೆಗಳ ಪೈಕಿ ಒಂದನ್ನು ಪೂರ್ತಿಯಾಗಿ ಪರಿಹರಿಸಿದವನು ಪೆರೆಲ್ಮನ್‌ (ಉಳಿದ ಆರು ಇನ್ನೂ ಬಿಡಿಸಲಾರದ ಬ್ರಹ್ಮಗಂಟಾಗಿಯೇ ನಿಂತಿವೆ!).

ಈ ಸಮಸ್ಯೆಗಳ ವಿಶೇಷವೇನೆಂದರೆ, ಪ್ರತಿ ಸಮಸ್ಯೆಯನ್ನು ಬಿಡಿಸಿದವರೂ ಹತ್ತು ಲಕ್ಷ ಡಾಲರುಗಳನ್ನು ಬಹುಮಾನವಾಗಿ ಪಡೆಯುತ್ತಾರೆ. ವಾಗ್ಧಾನದ ಪ್ರಕಾರ, ಕ್ಲೇ ಸಂಸ್ಥೆ ಪೆರೆಲ್ಮನ್‌ಗೆ ಬಹುಮಾನ ಕೊಡಲು ಮುಂದೆ ಬಂದಿತು. ಅಂತಾರಾಷ್ಟ್ರೀಯ ಗಣಿತ

ಸಮ್ಮೇಳನದಲ್ಲಿ ಅವನಿಗೆ ಗಣಿತದ ನೊಬೆಲ್ ಎಂದೇ ಖ್ಯಾತವಾದ ಫೀಲ್ಡ್ಸ್ ಪದಕವನ್ನುಕೊಡುವುದೆಂದೂ ತೀರ್ಮಾನಿಸಲಾಯಿತು. ಆದರೆ, ಇವೆಲ್ಲ ಪ್ರಸಿದ್ಧಿ-ಸಂಪತ್ತುಗಳಿಂದ ವಿಮುಖನಾದ ಪೆರೆಲ್ಮನ್‌, ನಾನು ಸಮಸ್ಯೆಗಳನ್ನು ಪರಿಹರಿಸುವುದು ಮನಃಸಂತೋಷಕ್ಕಾಗಿ. ದುಡ್ಡಿನ ಆಸೆ ನನಗಿಲ್ಲ ಎಂದು, ಯಾರನ್ನೂ ಒಳ ಬರಗೊಡದೆ, ಯಾರಿಗೂ ಸಂದರ್ಶನ ಮಾಡಲು ಅನುಮತಿ ಕೊಡದೆ, ಮನೆಯೊಳಗೆ ಉಳಿದುಕೊಂಡುಬಿಟ್ಟ! ಜಗತ್ತಿನ ಎಲ್ಲ ಸಮಸ್ಯೆಗಳಿಗೂ ಮೂಲ ಹಣ. ಅದಿಲ್ಲದ ಪ್ರಪಂಚ ರೂಪುಗೊಳ್ಳಬೇಕು ಎನ್ನುವುದೇ ಪೆರೆಲ್ಮನ್‌ ನುಡಿ.ಕೈಯಲ್ಲಿಕೆಲಸವಿಲ್ಲದ ಸಮಯದಲ್ಲಿ ಒಮ್ಮೆ ಅವನಿಗೆ ಯಾವುದಾದರೂ ಉದ್ಯೋಗ ಹಿಡಿಯಬೇಕು ಅನ್ನಿಸಿತು. ಇನ್ನೊಂದು ಬೀದಿಯಲ್ಲಿರುವ ಬೇಕರಿಗೆ ಹೋಗಿ ಅದರ ಮಾಲೀಕನನ್ನು ಭೇಟಿಯಾಗಿ- ಏನಾದರೂ ಕೆಲಸಕೊಡಿ ಎಂದು ಕೇಳಿಕೊಂಡ.

ಸಂಬಳ ಎಷ್ಟುಕೊಡಬೇಕು? ಬೇಕರಿಯವನ ಪ್ರಶ್ನೆ. ಇಲ್ಲ, ಒಂದು ದುಗ್ಗಾಣಿಯೂ ಬೇಡ. ದುಡ್ಡಿಲ್ಲದ ಪ್ರಪಂಚದಲ್ಲಿ ಬದುಕಬೇಕೆಂದು ನನ್ನಅಪೇಕ್ಷೆ, ಪೆರೆಲ್ಮನ್‌ ಖಚಿತ ನುಡಿ. ಸರಿ ಹಾಗಾದರೆ! ಗಣಿತವೂ ಅಲ್ಪಸ್ವಲ್ಪ ಬರುತ್ತೆ ಅನ್ನುತ್ತೀಯ. ನಿನಗೆ ಕ್ಯಾಶಿಯರ್‌ಕೆಲಸಕೊಡುತ್ತೇನೆ ಎಂದು ಬೇಕರಿಯವನು ಅವನಿಗೆಕೆಲಸ ಕೊಟ್ಟ. ಆದರೆ ಸ್ವಲ್ಪ ಹೊತ್ತಲ್ಲೇ ಅವನಿಗೆ ತಾನೆಂಥ ಪ್ರಮಾದವೆಸಗಿದ್ದೇನೆಂದು ಗೊತ್ತಾಯಿತು. ಪೆರೆಲ್ಮನ್‌ ಗ್ರಾಹಕರಿಗೆ ಬೇಕಾದ ತಿಂಡಿ ತಿನಿಸುಗಳನ್ನು ಕೊಟ್ಟರೂ, ದುಡ್ಡು ಮಾತ್ರ ಪಡೆಯುತ್ತಿರಲಿಲ್ಲ. ತುಂಬ ಅನುನಯದಿಂದ ನಗುತ್ತ ದುಡ್ಡುಕೊಡಬೇಡಿ ಎಂದು ಹೇಳುತ್ತಿದ್ದ. ಬೇಕರಿ ಮಾಲೀಕ ಬಂದು ನೋಡಿದಾಗ,ಕ್ಯಾಶ್‌ಕೌಂಟರಿನ ಎದುರಲ್ಲಿ, ಆರ್ಡರ್‌ ಮಾಡಲು ಒಂದು ಉದ್ದನೆ ಸಾಲು ಆಗಲೇ ಸಿದ್ಧವಾಗಿ ನಿಂತಿತ್ತು! ­

-ರೋಹಿತ್‌ ಚಕ್ರತೀರ್ಥ

ಟಾಪ್ ನ್ಯೂಸ್

1-asds-a

ಮಂಗಳೂರು: ವಿದ್ಯುತ್ ಕಂಬಕ್ಕೆ ಢಿಕ್ಕಿ; 18 ರ ತರುಣ ಸಾವು

ಮಾರಕಾಸ್ತ್ರಗಳಿಂದ ಕೊಚ್ಚಿ ಬಿಜೆಪಿ ಕಾರ್ಯಕರ್ತನ ಬರ್ಬರ ಕೊಲೆ

ಮಾರಕಾಸ್ತ್ರಗಳಿಂದ ಕೊಚ್ಚಿ ಬಿಜೆಪಿ ಕಾರ್ಯಕರ್ತನ ಬರ್ಬರ ಕೊಲೆ

h d kumaraswamy

ನಕಲಿ ಜಾತ್ಯತೀತ ಶೂರನ ಅಸಲಿರೂಪ ಕಳಚಿದೆ.. ಆಟ ಈಗ ಆರಂಭ..!: ಎಚ್ ಡಿಕೆ

ಪಾಕಿಸ್ತಾನ: ನಾಲ್ವರು ಯುವತಿಯರನ್ನು ನಗ್ನಗೊಳಿಸಿ ಮೆರವಣಿಗೆ, ಹಲ್ಲೆ; ಐವರ ಬಂಧನ

ಪಾಕಿಸ್ತಾನ: ನಾಲ್ವರು ಯುವತಿಯರನ್ನು ನಗ್ನಗೊಳಿಸಿ ಮೆರವಣಿಗೆ, ಹಲ್ಲೆ; ಐವರ ಬಂಧನ

ಸಿಎಂ ಬೊಮ್ಮಾಯಿ

ರಾಜ್ಯಕ್ಕೆ ಅನ್ವಯವಾಗುವಂತೆ ಹೊಸ ಮಾರ್ಗಸೂಚಿ: ಸಿಎಂ ಬೊಮ್ಮಾಯಿ

ಆ್ಯಶಸ್ ಟ್ರೋಫಿ: ಆಸೀಸ್ ವೇಗದ ದಾಳಿಗೆ ತತ್ತರಿಸಿದ ಇಂಗ್ಲೆಂಡ್

ಆ್ಯಶಸ್ ಟ್ರೋಫಿ: ಆಸೀಸ್ ವೇಗದ ದಾಳಿಗೆ ತತ್ತರಿಸಿದ ಇಂಗ್ಲೆಂಡ್

ಭಾರತದ ವಿಕೆಟ್‌ ಬೀಳುತ್ತಿದ್ದಾಗ ಕಪಿಲ್‌ ಸ್ನಾನ ಮಾಡುತ್ತಿದ್ದರು!

ಕೀರ್ತಿ ಆಜಾದ್ ಮೆಲುಕು:ಭಾರತದ ವಿಕೆಟ್‌ ಬೀಳುತ್ತಿದ್ದಾಗ ಕಪಿಲ್‌ ಸ್ನಾನ ಮಾಡುತ್ತಿದ್ದರು!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಮನೆಯಲ್ಲಿದ್ದ ಹಾವುಗಳನ್ನು ಓಡಿಸಲು ಹೋಗಿ 13 ಕೋಟಿ ಮೌಲ್ಯದ ಬಂಗಲೆಯನ್ನೇ ಸುಟ್ಟ ಆಸಾಮಿ!

udayavani youtube

ಹಾವುಗಳು ಬರುತ್ತದೆ ಎಂದು ಮನೆಗೇ ಬೆಂಕಿಯಿಟ್ಟ! 13 ಕೋಟಿಯ ಬಂಗಲೆ ಸುಟ್ಟು ಭಸ್ಮ

udayavani youtube

ಸಿದ್ಧಿ ಸಮುದಾಯದ ಮೊದಲ DOCTORATE ಪದವೀಧರೆ, ಇವರೇ !!

udayavani youtube

ಬಿಯರ್ ಬಾಟಲಿಗೆ ಬಾಯಿ ಹಾಕಿದ ನಾಗರಹಾವು!

udayavani youtube

ರಾತ್ರೋರಾತ್ರಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು !

ಹೊಸ ಸೇರ್ಪಡೆ

1-asds-a

ಮಂಗಳೂರು: ವಿದ್ಯುತ್ ಕಂಬಕ್ಕೆ ಢಿಕ್ಕಿ; 18 ರ ತರುಣ ಸಾವು

ಮಾರಕಾಸ್ತ್ರಗಳಿಂದ ಕೊಚ್ಚಿ ಬಿಜೆಪಿ ಕಾರ್ಯಕರ್ತನ ಬರ್ಬರ ಕೊಲೆ

ಮಾರಕಾಸ್ತ್ರಗಳಿಂದ ಕೊಚ್ಚಿ ಬಿಜೆಪಿ ಕಾರ್ಯಕರ್ತನ ಬರ್ಬರ ಕೊಲೆ

h d kumaraswamy

ನಕಲಿ ಜಾತ್ಯತೀತ ಶೂರನ ಅಸಲಿರೂಪ ಕಳಚಿದೆ.. ಆಟ ಈಗ ಆರಂಭ..!: ಎಚ್ ಡಿಕೆ

ಪಾಕಿಸ್ತಾನ: ನಾಲ್ವರು ಯುವತಿಯರನ್ನು ನಗ್ನಗೊಳಿಸಿ ಮೆರವಣಿಗೆ, ಹಲ್ಲೆ; ಐವರ ಬಂಧನ

ಪಾಕಿಸ್ತಾನ: ನಾಲ್ವರು ಯುವತಿಯರನ್ನು ನಗ್ನಗೊಳಿಸಿ ಮೆರವಣಿಗೆ, ಹಲ್ಲೆ; ಐವರ ಬಂಧನ

ಸಿಎಂ ಬೊಮ್ಮಾಯಿ

ರಾಜ್ಯಕ್ಕೆ ಅನ್ವಯವಾಗುವಂತೆ ಹೊಸ ಮಾರ್ಗಸೂಚಿ: ಸಿಎಂ ಬೊಮ್ಮಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.