ನಡೆಯದ ಉಪನ್ಯಾಸ

ಬಾರೋ ಸಾಧಕರ ಕೇರಿಗೆ

Team Udayavani, Jan 21, 2020, 5:42 AM IST

19ನೇ ಶತಮಾನದ ಶ್ರೇಷ್ಠ ತಣ್ತೀಜ್ಞಾನಿಗಳಲ್ಲಿ ಒಬ್ಬನಾಗಿದ್ದ ಎ.ಎನ್‌. ವೈಟ್‌ಹೆಡ್‌ ಗಣಿತಜ್ಞನೂ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಗಣಿತದ ಪೊ›ಫೆಸರನೂ ಆಗಿದ್ದ. ಒಮ್ಮೆ ಅವನು ಕೇಂಬ್ರಿಡ್ಜ್ನಲ್ಲಿ ತನ್ನ ತರಗತಿಗೆ ಐದು ನಿಮಿಷ ಮೊದಲೇ ಬಂದುಬಿಟ್ಟ. ಇಡೀ ಉಪನ್ಯಾಸ ಕೊಠಡಿ ಖಾಲಿ ಇತ್ತು. ವಿದ್ಯಾರ್ಥಿಗಳೆಲ್ಲ ಬೇರಾವುದೋ ಕ್ಲಾಸಿಗೆ ಹೋಗಿದ್ದರಿಂದ ಅವರು ಬರುವುದಕ್ಕಿನ್ನೂ ಸ್ವಲ್ಪ ಸಮಯ ಇದೆ ಅಂದುಕೊಂಡ ವೈಟ್‌ಹೆಡ್‌ ಅದುವರೆಗೆ ತನ್ನ ತಲೆ ತಿನ್ನುತ್ತಿದ್ದ ಸಮಸ್ಯೆಯನ್ನು ಬಿಡಿಸುತ್ತ ಕೂರೋಣ ಎಂದು ಬೋರ್ಡಿನತ್ತ ತಿರುಗಿದ. ಅಲ್ಲಿ ಅವನು ಯೋಚಿಸುತ್ತ ಸೂತ್ರ- ಸಮೀಕರಣ-ಚಿತ್ರಗಳನ್ನು ಬರೆಯುತ್ತ ಕೂತಿದ್ದಾಗ ಕ್ಲಾಸಿಗೆ ಒಬ್ಬೊಬ್ಬರಾಗಿ ವಿದ್ಯಾರ್ಥಿಗಳು ಬಂದು ಕೂತರು. ಇಡೀ ತರಗತಿಯೇ ಭರ್ತಿಯಾದರೂ ಅದ್ಯಾವುದೂ ಅವನ ಗಮನಕ್ಕೆ ಬರಲಿಲ್ಲ.

ವಿದ್ಯಾರ್ಥಿಗಳು ತುಂಬ ಸಹನಾಶೀಲರಾಗಿ ಮೌನವಾಗಿ ಕೂತು ಪೊ›ಫೆಸರ್‌ ಎಂದಾದರೂ ಹಿಂತಿರುಗಿ ನೋಡಿಯಾರು ಎಂದು ಪ್ರತೀಕ್ಷಿಸಿದರು. ಉಪನ್ಯಾಸದ ಅವಧಿ ಮುಗಿದರೂ ಬೋರ್ಡಿನತ್ತ ಮುಖಮಾಡಿ ಯೋಚಿಸುತ್ತ ತಲೆ ತುರಿಸುತ್ತ ಕಣ್ಮುಚ್ಚಿ ಧ್ಯಾನಿಸುತ್ತ ಏನೇನೋ ಸೂತ್ರ ಬರೆಯುತ್ತ ನಿಂತ ವೈಟ್‌ಹೆಡ್‌ನ‌ ಕೆಲಸ ಮುಗಿಯಲಿಲ್ಲ. ವಿದ್ಯಾರ್ಥಿಗಳು ಅವಧಿ ಮುಗಿದ ಮೇಲೆ ನಿಧಾನಕ್ಕೆ ಎದ್ದು ಹೊರಟುಹೋದರು. ಅದಾಗಿ ಸ್ವಲ್ಪ ಹೊತ್ತಿನಲ್ಲಿ ವೈಟ್‌ಹೆಡ್‌ನ‌ ಸಮಸ್ಯೆ ಬಗೆಹರಿಯಿತು. ತನ್ನ ಲೆಕ್ಕವನ್ನು ತೃಪ್ತಿಯಿಂದ ನೋಡಿ ಅವನು ಆ ಕೊಠಡಿಯಿಂದ ನಿರ್ಗಮಿಸಿದ. ಅಂದು ಸಂಜೆ ಮನೆಯಲ್ಲಿ ತನ್ನ ಪತ್ನಿಯೊಡನೆ ಮಾತಾಡುತ್ತ ವೈಟ್‌ಹೆಡ್‌, ಇಂದು ಒಂದು ವಿಚಿತ್ರ ನಡೆಯಿತು ಗೊತ್ತಾ? ಒಬ್ಬ ಹುಡುಗನೂ ನನ್ನ ಉಪನ್ಯಾಸಕ್ಕೆ ಬರಲಿಲ್ಲ! ಎಂದು ಆಶ್ಚರ್ಯ ಹಂಚಿಕೊಂಡ.

ರೋಹಿತ್‌ ಚಕ್ರತೀರ್ಥ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಇವತ್ತು ನಮ್ಮ ಸಮಾಜ ಹೇಗಿದೆ ಅಂದರೆ, 99 ಅಂಕ ಪಡೆದವರನ್ನು ಬಹಳ ಚೆನ್ನಾಗಿ ಆದರಿಸುತ್ತದೆ. 50 ಅಂಕ ಪಡೆದವರನ್ನು ಕ್ಯಾರೇ ಅನ್ನೋದಿಲ್ಲ. 90 ಅಂಕ ಪಡೆದ ವಿದ್ಯಾರ್ಥಿಗೆ...

  • ವಸ್ತುವಿನ ಮೇಲೆ ಬಿದ್ದ ಬೆಳಕು ಪ್ರತಿಫ‌ಲಿಸಿ ನೋಡುಗನ ಕಣ್ಣಿಗೆ ಕಂಡಾಗ ಆ ಚಿತ್ರಣದಲ್ಲಿ ಕಪ್ಪು ನೆರಳಿನ ಭಾಗ ಬಿಟ್ಟು ಇನ್ನುಳಿದವು ಕೆಂಪು, ಕಿತ್ತಳೆ ಅಥವಾ ಹಳದಿ...

  • ಭಾರತದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಒಂದು ಸೇವಾ ಉದ್ಯಮವೆಂದರೆ ಆರೋಗ್ಯ ಸೇವಾ ಉದ್ಯಮ. ಅರ್ಥಾತ್‌ ಆಸ್ಪತ್ರೆ, ರೋಗ ಶುಶ್ರೂಷೆ. ಕೇವಲ ಕಟ್ಟಡ, ಉಪಕರಣ, ದಾದಿಯರು...

  • ಹುತಾತ್ಮರಾದ ಯೋಧರ ಅಂತ್ಯಕ್ರಿಯೆಗೆ ಹೆಗಲು ಕೊಡುವ ಶಹಾಪುರದ ಈಶ್ವರ್‌, ನಡು ರಾತ್ರಿಯೋ, ಬೆಳಗಿನ ಜಾವವೋ ಬರುವ ಯೋಧರು ವಿಶ್ರಾಂತಿ ತೆಗೆದುಕೊಳ್ಳುವಂತೆ ಏರ್ಪಾಟು...

  • ನಿನ್ನೊಂದಿಗೆ ಮಾತಿಗಿಳಿದರೆ ಯಾವ ಟ್ರಾಫಿಕ್‌ ಜಾಮ್‌ ಕೂಡಾ ವಿಳಂಬವೆನಿಸದು. . ನಿನ್ನ ಹೆಜ್ಜೆಗಳೊಂದಿಗೆ ಹೆಜ್ಜೆಗೂಡಿಸಿ ನಡೆಯುತ್ತಿದ್ದರೆ ಗೋಜಲ ಹಾದಿಯೇ ನಮ್ಮ...

ಹೊಸ ಸೇರ್ಪಡೆ