ಒಗ್ಗಟ್ಟಿಗೆ ಹುಡುಗಿಯರೆಲ್ಲ ಮಾಯ!

Team Udayavani, Jul 9, 2019, 5:32 AM IST

ಪಿಯುಸಿ ಮುಗಿಸಿ ಬಿ.ಎಸ್ಸಿಗೆ ಹೆಜ್ಜೆ ಇಟ್ಟ ದಿನಗಳು. ಮೊಬೈಲ್‌ ಕೊಂಡು ತಿಂಗಳು ಕಳೆದಿತ್ತು. ವಾಟ್ಸಾéಪ್‌ ಇತ್ತಾದರೂ, ದಿನಕ್ಕೆ ಹತ್ತಿಪ್ಪತ್ತು ಮೆಸೇಜ್‌ ಮಾತ್ರ ಬರುತ್ತಿದ್ದುದರಿಂದ ಅಷ್ಟೊಂದು ಆಸಕ್ತಿ ಇರಲಿಲ್ಲ. ಆದರೆ,ದಿನ ಕಳೆದಂತೆ ಗೆಳೆಯರ ಸಂಖ್ಯೆ ಬೆಳೆಯುತ್ತಾ ಸಾಗಿತು.ಗೆಳೆಯರು ಏನಾದರೂ ¤. ವಾಟ್ಸಾéಪ್‌ ಸಂದೇಶ ಮಾಡಿದಾಗ, ಅದು ನನಗೆ ತಪ್ಪೆಂದು ಅನಿಸಿದರೆ ಸಾಕು: ಅವರು ನಿನ್ನದೇ ಸತ್ಯವೆಂದು ಹೇಳುವರೆಗೂ ಕೈಗೆ ಬಿಡುವೇ ಕೊಡುತ್ತಿರಲಿಲ್ಲ. ಇಬ್ಬರು ಗೆಳೆಯರಂತೂ ಕೆಲವು ದಿನ ಮಾತು ಬಿಟ್ಟಿದ್ದೂ ಉಂಟು!

ಅಂದು ತರಗತಿ ಮುಗಿದು ವಿರಾಮದ ಸಮಯ. ಕಿರಣ ತನ್ನ  ವಾಟ್ಸಾಪ್‌ ತೋರಿಸುತ್ತಾ ಹುಡುಗ-ಹುಡುಗಿಯರಿರುವ ಈ ಗ್ರೂಫ್ ಮಾಡಿದ್ದೇವೆ. ಪ್ರತಿ ಸಲವೂ ಒಂದು ವಿಷಯಕ್ಕೆ ಏನಾದರೂ ತಕರಾರು-ಜಗಳ ನಡೆದಾಗ ಎಷ್ಟೇ ಪ್ರಯತ್ನಿಸಿದರೂ ನಮಗೆ ಗೆಲುವು ಸಿಕ್ಕಿಲ್ಲ. ಈ ಗ್ರೂಪ್‌ಗೆ ನಿನ್ನ ಸೇರಿಸುವೆ. ಹೇಗಾದರೂ ಮಾಡಿ ಗೆಲುವು ನಮ್ಮದಾಗಿಸಬೇಕು ಎಂದು’ ನನ್ನ ಸೇರಿಸಿಯೇ ಬಿಟ್ಟ! ಮುಂಜಾನೆ ಮತ್ತು ರಾತ್ರಿ ಮಾತ್ರ ವಾಟ್ಸಾéಪ್‌ ಬಳಸುತ್ತಿದ್ದ ವಳು, ಅಂದು ರಾತ್ರಿ ನೆಟ್‌ ಆನ್‌ ಮಾಡುವುದೇ ತಡ ಈ ಗ್ರೂಪಿನ ಸಂದೇಶಗಳು ಸೆಂಚುರಿ ಹೊಡೆದಿದ್ದು ಕಂಡು ಬೆರಗಾದೆ!.ಓದುತ್ತಾ ಹೋದೆ ಹುಡುಗರಿಗೆ ಸೋಲಿನ ಕಿರೀಟ ಕೊಟ್ಟು ಕೇಕೆ ಹಾಕಿದ್ದರು! ನಾನೂ ಸಹ ಮಧ್ಯದಲ್ಲಿ ಒಂದೊಂದೇ ಸಂದೇಶ ಮಾಡ ತೊಡಗಿದೆ… ಒಂದೆರಡು ದಿನ ಕಳೆಯಿತು.

ನಾನು ಗಮನಿಸಿದಂತೆ ನಾನು ಮತ್ತು ಕಿರಣ ಆನ್ಲçನ್‌ ಬರುವುದೇ ತಡ ಕೀರ್ತಿ ಮುಸ್ಕಾನ್‌,ಮಯೂರಿ ಮತ್ತು ಪುಷ್ಪಾ ಆಫ್ಲೆçನ್‌ ಆಗುತ್ತಿದ್ದದ್ದು ನಮ್ಮಲ್ಲಿ ಧೈರ್ಯ ಹೆಚ್ಚಿಸುತ್ತಿತ್ತು ಆದರೆ ಸಮ್ರಿàನ್‌, ಭಾವನಾ ಮತ್ತು ಇಬ್ಬರು ಅಡ್ಮಿನ್‌ಗಳು ಆನ್ಲçನ್‌ ಬಂದರೆ ನಾನು ನೆಟ್‌ ಆಫ್ ಮಾಡುತ್ತಿದ್ದೆ! ಏಕೆಂದರೆ ಅವರ ವಿಚಾರ ಚಿಂತನೆಯ ಚಾಟ್‌ಗಳು ಮರು ಸಂದೇಶ ಕೊಡಲು ವಿಚಾರಗಳೇ ಹೋಳೆಯುತ್ತಿರಲಿಲ್ಲ.ಕೊನೆಗೊಮ್ಮೆ ನಾವು ಕೇಕೆ ಹಾಕುವುದಾದರೆ ‘ಒಗ್ಗಟ್ಟೆ ಮೂಲತಂತ್ರ’ವೆಂದು. ಗ್ರೂಪಿನಲ್ಲಿದ್ದ ಎಲ್ಲಾ ಗೆಳೆಯರು(ರೋಹಿತ್‌, ಪ್ರಶಾಂತ್‌,ಸೌರಭ, ಪ್ರಮೋದ್‌, ಮಲ್ಲಿಕಾರ್ಜುನ, ಬಸವರಾಜ, ಜಿನೇಂದ್ರ ಹಾಗೂ ಇತರರು) ಒಗ್ಗಟ್ಟಾಗಿ ಎಲ್ಲರೂ ಒಂದೇ ಸಮಯಕ್ಕೆ ಆನ್‌ಲೈನ್‌ನಲ್ಲಿ ಬರೋಣವೆಂದು ಒಪ್ಪಂದ ಮಾಡಿಕೊಂಡೆವು.
ಅದರಂತೆಯೇ ರಾತ್ರಿ 9:00 ಕ್ಕೆ ಬಂದೆವು.ದಿನದಂತೆ ನಮ್ಮದೇ ಸತ್ಯವೆಂದು ನಾವು ಮತ್ತು ಅವರದು ಸತ್ಯವೆಂದು ಅವರು ಸಾಧಿಸಲು ಶುರು ಆಯ್ತು. ಸಮಯ ಹತ್ತರ ಗಡಿ ದಾಟಿದ್ದು ಗೊತ್ತೇ ಆಗಿರಲಿಲ್ಲ! ಗೆಲುವು ನಮ್ಮ ಹತ್ತಿರ ಬರುತ್ತಿದ್ದಂತೆ ಅವರು ಒಬ್ಬರ ಹಿಂದೆ ಒಬ್ಬರು ಆಫ್ಲೆçನ್‌ ಆಗತೊಡಗಿದರು. ಕೊನೆಗೆ ಅವರಲ್ಲಿ ಉಳಿದದ್ದು ಇಬ್ಬರೇ…ನಂತರ ನಾವೇಲ್ಲಾ ಗೆಲುವಿನ ಕೇಕೆ ಹಾಕುತ್ತಿದ್ದಂತೆ ಅವರೂ ಆಫ್ಲೆçನ್‌. ಸಮಯ ಹನ್ನೊಂದಾಗಿತ್ತು. ಖುಷಿಯಲ್ಲಿ ಮಲಗಿದ್ದೆವು. ಮುಂಜಾನೆ ಎದ್ದು ವಾಟ್ಸಾಪ್‌ ನೋಡಿದರೆ ಎಲ್ಲ ಹುಡುಗಿಯರೂ ಲೆಫ್ಟ್!

ವಾಟ್ಸಾಪ್‌ ಗ್ರೂಪ್‌:-‘‘PCM PLATINUMS’

ಗ್ರೂಪ್‌ ಅಡ್ಮಿನ್‌ಗಳು:-ನಿವೇದಿತಾ,ಜ್ಯೋತಿ, ಭಾಗ್ಯ,ಪ್ರತೀಕ್ಷಾ ಹಾಗೂ ಕಿರಣ್‌,ಅಜಿತ್‌.

– ಮುತ್ತಪ್ಪ ಎಸ್. ಕ್ಯಾಲಕೊಂಡ


ಈ ವಿಭಾಗದಿಂದ ಇನ್ನಷ್ಟು

  • ಗಣಿತ ಸಮ್ಮೇಳನಗಳಲ್ಲಿ ಗಂಭೀರವಾದ ಉಪನ್ಯಾಸವಾದ ಮೇಲೆ ಪ್ರಶ್ನೋತ್ತರ ನಡೆಯುವುದು ರೂಢಿ. ಉಪನ್ಯಾಸದ ತಲೆಬುಡ ಅರ್ಥವಾಗದವರು ಕೂಡ ಆಗ ತಮಗೆಲ್ಲ ಅರ್ಥವಾಗಿದೆ ಎಂದು...

  • ನನ್ನ ಮೊಮ್ಮಗನನ್ನು ಮೂಡಬಿದಿರೆಯ ಆಳ್ವಾಸ್‌ ಕಾಲೇಜಿನ ಹಾಸ್ಟೆಲ್‌ಗೆ ಸೇರಿಸುವ ಸಲುವಾಗಿ ಬಾಡಿಗೆ ಕಾರೊಂದರಲ್ಲಿ ಬೆಳಗಿನ ಜಾವ ಐದು ಘಂಟೆಗೆ ಚಿತ್ರದುರ್ಗದಿಂದ...

  • "ನಮ್ಮ ಕುಟುಂಬ' ಅಂತ ಒಂದು ಗ್ರೂಪ್‌ ರಚನೆ ಮಾಡಿದ್ದು ಚಿಕ್ಕಪ್ಪನ ಮಕ್ಕಳು. ಇದರ ಉದ್ದೇಶ, ಊರಲ್ಲಿದ್ದು, ನಗರಗಳಲ್ಲಿ ಚೆಲ್ಲಾಪಿಲ್ಲಿಯಾಗಿದ್ದ ಅಷ್ಟೂ ಸಂಬಂಧಿಕರನ್ನು...

  • ಬಸ್‌ಸ್ಟಾಪ್‌ ನಲ್ಲಿ ಇಳಿದೆ. ಹಸಿವಾಗಿತ್ತು. ನನ್ನ ಬಳಿ ಹೆಚ್ಚು ಹಣವಿರಲಿಲ್ಲ. ಅದೊಂದು ಚಿಕ್ಕ ಅಂಗಡಿ ಬಳಿ ಹೋದೆ. ಪೇಪರ್‌ ಮತ್ತು ಎರಡು ಬಾಳೆ ಹಣ್ಣು ಕೇಳಿ, ನನ್ನ...

  • ಮಳೆ ಎಂದರೆ ಮನುಷ್ಯರಿಗಷ್ಟೇ ಅಲ್ಲ, ಪರಿಸರದ ಜೀವ ಸಂಕುಲಗಳಿಗೆಲ್ಲ ಸಂಭ್ರಮ. ಕಪ್ಪೆಗಳು ನೀರಿನಲ್ಲಿ ಕುಳಿತು ಗಾಳಿಯೊಂದಿಗೆ ರಾಗ ಭಾವವನ್ನು ತೇಲಿ ಬಿಡುತ್ತವೆ....

ಹೊಸ ಸೇರ್ಪಡೆ