ಬಿಡು ಬಿಡು.. ಕೋಪವಾ…


Team Udayavani, Oct 13, 2020, 7:49 PM IST

josh-tdy-4

ಹೋಯ್‌ ಸಿಟ್ಟಿನ ಸಿಡುಕ, ಅದೇನು ಕೋಪವೋ ಮಾರಾಯ ನಿಂಗೇ. ನಿನ್ನ ಆ ಮುದ್ದುಕೋಪಕ್ಕೇ ನಿನ್ನನ್ನು ಇನ್ನೂ ಇನ್ನೂ ಹೆಚ್ಚು ಹೆಚ್ಚು ಹುಚ್ಚಾಗಿ ಪ್ರೀತಿಸಬೇಕೆಂದು ಅನಿಸುತ್ತದೆ ನೋಡು. ಪ್ರೀತಿಯಿರುವಕಡೆಯೇ ಕೋಪವೂ ಇರುತ್ತದೆ ಎನ್ನುವುದು ಸುಳ್ಳಲ್ಲ. ಮೊನ್ನೆ ಮಾತ್ರ ತುಂಬಾ ಕೋಪ ಬಂದಿತ್ತು ನಿನ್ನ ಮೇಲೆ. ಅದ್ಯಾರೋ ಫೇಸ್ಬುಕ್ಕಿನಲ್ಲಿ ನನ್ನ ಫೋಟೋಕ್ಕೆ ಹಾಕಿರುವಕಮೆಂಟ್‌ ನೋಡಿ, ಅಂತವರನ್ಯಾಕೆ ಫ್ರೆಂಡ್‌ ಮಾಡಿಕೊಂಡಿದ್ದೀ ಅಂತಾ ವಾಟ್ಸಪ್ಪಿನಲ್ಲಿ ಮುಖ ಊದಿಸಿದ ಈಮೋಜಿ ಕಳಿಸಿದ್ದೆ.

ನೋಡು, ನನಗೂ ಕೋಪ ತಡೆಯಲಾರದೆ ಯಾರ್ಯಾರ ಬುದ್ಧಿ ಹೇಗೆ ಅಂತ ನನಗೇನು ಗೊತ್ತಿರುತ್ತೆ? ಯಾರ ಜೊತೆಗೂ ನನಗೆ ಪರ್ಸನಲ್‌ ಚಾಟಿಂಗ್‌ ಇಲ್ಲ ತಿಳ್ಕೋ ಅಂದಿದ್ದಕ್ಕೆ, ನೀನೇನೋ ಸಿಟ್ಟಾಗಿ ಕೈಮುಗಿವ ಇಮೋಜಿ ಕಳಿಸಿ ತಣ್ಣಗೆಕುಳಿತುಬಿಟ್ಟೆ. ಆದರೆ ನನ್ನಕಥೆ ಹೇಳು, ಆಮೇಲೆ ಎಷ್ಟು ಒದ್ದಾಡಿದೆ ಗೊತ್ತಾ? ನಿನ್ನ ಪ್ರೀತಿ,ಕಾಳಜಿ ನನಗೆ ಅರ್ಥವಾಗುತ್ತದೆಕಣೋ. ನಾನೂ ಹಾಗೆ ಖಡಕ್‌ ಉತ್ತರ ಕೊಡಬಾರದಿತ್ತು…ಸಾರಿ… ವ್ಯಾಲೆಂಟೈನ್‌ ದಿವಸ ಜ್ಯೂನಿಯರ್‌ ಒಬ್ಬ ಡೈರಿಮಿಲ್ಕ್ ಕೊಟ್ಟಿದ್ದನ್ನು ನನಗೆ ತಿನ್ನಲು ಬಿಡದೆ ನೀನೇ ತಿಂದು, ನನಗೆ ಬೇರೆಕೊಡಿಸಿದ್ದು ನೆನಪಾದರೆ ನಗು ಬರುತ್ತದೆ. ಬಸ್ಸಿನಲ್ಲಿ ನನಗಾಗಿ ಹುಡುಗನೊಬ್ಬ ಬದಿಗೆ ಸರಿದು ಜಾಗ ಮಾಡಿಕೊಟ್ಟದ್ದನ್ನು ದೂರದಿಂದಲೇ ಗಮನಿಸಿ ಮುಖ ಸಿಂಡರಿಸಿದ ನೀನು, ಅಲ್ಲಿ ಕುಳಿತು ಕೊಳ್ಳಲೂ ಬಿಡದೆ ಮುಂದಿನ ಸ್ಟಾಪಿನಲ್ಲಿ ಇಳಿಸಿ ಬೇರೆ ಬಸ್‌ ಹತ್ತಿಸಿಕೊಂಡು ಹೋದಾಗ ನಿನ್ನ ಪೆದ್ದು ಪ್ರೀತಿಗೊಂದು ಗುದ್ದು ಕೊಡಬೇಕು ಎನಿಸಿತ್ತು. ಸ್ಯಾರಿಡೇ ದಿನವಂತೂ,ಕಣ್ಣುಗಳಲ್ಲೇ ನನ್ನನ್ನು ಇಡಿಯಾಗಿ ತುಂಬಿಕೊಂಡು ಬಿಟ್ಟಿಹೆಯೇನೋ ಎನಿಸಿದ್ದು ಸುಳ್ಳಲ್ಲ. ಕಾರ್ಯಕ್ರಮ ಮುಗಿದ ಮೇಲೆ ಮನೆಯ ತನಕ ಡ್ರಾಪ್‌ ಮಾಡಿದವ, ಹೋಗಿ ದೃಷ್ಟಿ ತೆಗೆಸಿಕೋ ಎಂದು, ತಿರುಗಿ ನೋಡದೆ ಹೋಗಿದ್ದು ಅಚ್ಚರಿ.

ಇನ್ನೂ ಸ್ವಲ್ಪ ಹೊತ್ತು ನಿನ್ನನ್ನು ಹಾಗೆಯೇ ನೋಡುತ್ತಿದ್ದರೆ ಹುಚ್ಚನಾಗಿ ಹೋಗುತ್ತಿದ್ದೆ ಎಂದು ನೀಮೆಸೇಜ್‌ ಮಾಡಿದಾಗ, ನಾ ಪದೇ ಪದೆ ಆಮೆಸೇಜನ್ನು ಮುದ್ದಿಸಿದ್ದು ಸುಳ್ಳಲ್ಲ. ಒಂದು ವಿಷ್ಯ ತಿಳ್ಕೋ;ನೀನೆಷ್ಟೇಕೋಪ ಮಾಡಿಕೊಂಡರೂ ನನಗೆ ಮುದ್ದುದ್ದೇ ನೀನು. ನಿನ್ನ ಪ್ರೀತಿಯನ್ನು ಅರಿತರೂ ಅರಿಯಲಾರದವಳಂತೆ, ಗೊತ್ತಾದರೂ ಗೊತ್ತಿಲ್ಲದಂತೆ ನಟಿಸಿ, ನನ್ನ ಮನದಾಳದ ಮಾತುಗಳನ್ನುಕೇಳಲು ಚಾತಕ ಪಕ್ಷಿಯಂತೆಕಾಯುತ್ತಿರುವ ನಿನಗೆ ಹೇಳದೆ ಸತಾಯಿಸುತ್ತಾ,ಮಾಮೂಲಿ ಬೈಗುಳ ಇದ್ದೇ ಇದೆಯಲ್ಲ, ಅದನ್ನು ಅಂದರೆ ಮಾತ್ರ ನಿನ್ನ ರಿಪ್ಲೈ ಗ್ಯಾರಂಟೀ ಅಂತಾ ಗೊತ್ತು. ಹೇಳಲಾ……ಕಂಜೂಸ್‌… ಕಂಜೂಸ್‌…ಕಂಜೂಸ್‌

 

-ನಳಿನಿ. ಟಿ. ಭೀಮಪ್ಪ, ಧಾರವಾಡ

ಟಾಪ್ ನ್ಯೂಸ್

ಅಂಪೈರ್‌ ನಿತಿನ್‌ ಮೆನನ್‌- ಅಶ್ವಿ‌ನ್‌ ನಡವೆ ಮಾತಿನ ಚಕಮಕಿ

ಅಂಪೈರ್‌ ನಿತಿನ್‌ ಮೆನನ್‌- ಅಶ್ವಿ‌ನ್‌ ನಡವೆ ಮಾತಿನ ಚಕಮಕಿ

2drugs

ಮೂಡಿಗೆರೆ: ಒಣ ಗಾಂಜಾ ಸಹಿತ ಆರೋಪಿ ಬಂಧನ

1-fsdfds

ಹಿಂದೂಗಳು ಹಿಂದೂಗಳಾಗಿ ಉಳಿಯಲು ‘ಅಖಂಡ’ ರಾಷ್ಟ್ರ ಮಾಡಬೇಕು: ಭಾಗವತ್

1jescon

ಕುಷ್ಟಗಿಯಲ್ಲಿ ಜೆಸ್ಕಾಂ ಯಡವಟ್ಟು:  ಗ್ರಾಹಕರಿಗೆ ಬಡ್ಡಿಯ ಹೊರೆ

ಲಾಭಿಲ್ಲದ ವ್ಯಾಪಾರಾ ಮಾಡಾಕ್‌ ಅವರೇನು ರೈತರಾ?

ಲಾಭಿಲ್ಲದ ವ್ಯಾಪಾರಾ ಮಾಡಾಕ್‌ ಅವರೇನು ರೈತರಾ?

president Kovind

ನ್ಯಾಯಾಧೀಶರ ಹೇಳಿಕೆಗಳಲ್ಲಿ ಅತ್ಯಂತ ವಿವೇಚನೆ ಅಗತ್ಯ: ರಾಷ್ಟ್ರಪತಿ ಕೋವಿಂದ್

ಹೆಂಡ್ತಿಗೆ ಹೊಡೆಯೋದು ಸರಿ ಅಂದ್ರು ನಮ್ಮವರು! ಸಮೀಕ್ಷೆ ವರದಿ ಪ್ರಕಟ

ಹೆಂಡ್ತಿಗೆ ಹೊಡೆಯೋದು ಸರಿ ಅಂದ್ರು ನಮ್ಮವರು! ಸಮೀಕ್ಷೆ ವರದಿ ಪ್ರಕಟಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಎರೆಹುಳು ಸಾಕಾಣಿಕೆ ಮಾಡಿ ಭೂಮಿಯ ಫಲವತ್ತತೆ ಹೆಚ್ಚಿಸಿ, ಕೈತುಂಬಾ ಆದಾಯವೂ ಗಳಿಸಿ

udayavani youtube

ಬೆಂಗಳೂರಿನಿಂದ ಪಾಟ್ನಾಕ್ಕೆ 139 ಪ್ರಯಾಣಿಕರನ್ನು ಹೊತ್ತ ವಿಮಾನ ತುರ್ತು ಭೂಸ್ಪರ್ಶ

udayavani youtube

Shree Chamundeshwari Kshetra Arikodi

udayavani youtube

ಮೈಮೇಲೆ ದೇವರು ಬಂದಿದ್ದಾರೆ ಎಂದು ಲಸಿಕೆ ಹಾಕಲು ಬಂದವರನ್ನೇ ಯಾಮಾರಿಸಿದ ವ್ಯಕ್ತಿ

udayavani youtube

ಕಾರು ಶೋರೂಂ ಒಳಗೆ ನುಗ್ಗಿದ ಕಾಡು ಹಂದಿ!

ಹೊಸ ಸೇರ್ಪಡೆ

ಅಂಪೈರ್‌ ನಿತಿನ್‌ ಮೆನನ್‌- ಅಶ್ವಿ‌ನ್‌ ನಡವೆ ಮಾತಿನ ಚಕಮಕಿ

ಅಂಪೈರ್‌ ನಿತಿನ್‌ ಮೆನನ್‌- ಅಶ್ವಿ‌ನ್‌ ನಡವೆ ಮಾತಿನ ಚಕಮಕಿ

2drugs

ಮೂಡಿಗೆರೆ: ಒಣ ಗಾಂಜಾ ಸಹಿತ ಆರೋಪಿ ಬಂಧನ

1-fsdfds

ಹಿಂದೂಗಳು ಹಿಂದೂಗಳಾಗಿ ಉಳಿಯಲು ‘ಅಖಂಡ’ ರಾಷ್ಟ್ರ ಮಾಡಬೇಕು: ಭಾಗವತ್

1jescon

ಕುಷ್ಟಗಿಯಲ್ಲಿ ಜೆಸ್ಕಾಂ ಯಡವಟ್ಟು:  ಗ್ರಾಹಕರಿಗೆ ಬಡ್ಡಿಯ ಹೊರೆ

ಲಾಭಿಲ್ಲದ ವ್ಯಾಪಾರಾ ಮಾಡಾಕ್‌ ಅವರೇನು ರೈತರಾ?

ಲಾಭಿಲ್ಲದ ವ್ಯಾಪಾರಾ ಮಾಡಾಕ್‌ ಅವರೇನು ರೈತರಾ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.