ನೀವು ಅಳಬೇಕು..
Team Udayavani, Jan 21, 2020, 4:24 AM IST
ನೀವು ಅಳಬೇಕು. ಅರೆ, ಇದೇನು ಹೀಗೆ ಹೇಳ್ತಾರೆ ಅಂದ್ಕೊಂಬೇಡಿ. ವೈದ್ಯ ಲೋಕ ಹೇಳುತ್ತಿರುವುದೇ ಹೀಗೆ. ಅಳಿ. ಅತ್ತರೆ ನಿಮ್ಮ ಆರೋಗ್ಯ ವೃದ್ದಿಯಾಗುತ್ತಂತೆ. ಅದು ಹೇಗೆ ಅಂತ ಹುಡುಕುತ್ತಾ ಹೋದಾಗ ದಕ್ಕಿದ್ದು ಇಷ್ಟು ಮಾಹಿತಿ- ನಮ್ಮ ಕಣ್ಣೀರು ಬರುವಹಾಗೆ ಮಾಡೋದು ಈ ಕೋರ್ಟಿಸೋಲ್ ಅನ್ನೋ ಹಾರ್ಮೋನ್ ನಿಂದ. ಇದು ಒತ್ತಡ, ಬೇಸರ, ದುಡುಗಳು ಜಾಸ್ತಿಯಾಗಾದ ಉತ್ಪಾದನೆಯಾಗುತ್ತದೆ. ನೀವು ಆ ಸಂದರ್ಭದಲ್ಲಿ ಅತ್ತರೆ, ಕಾರ್ಟಿಸೋಲ್ ಅನ್ನು ಹೆಚ್ಚಿಸುವ ರಾಸಾಯನಿಕಗಳ ಬಿಡುಗಡೆಯಾಗುತ್ತದೆ. ಕಣ್ಣೀರಲ್ಲಿ ಲೈಸೋಜೋಮ್ ಅನ್ನೋ ಹಾರ್ಮೋನ್ ಇದೆ. ಇದಕ್ಕೆ ನಮ್ಮ ದೇಹದಲ್ಲಿರುವ ಬ್ಯಾಕ್ಟೀರಿಯಾಗಳನ್ನು ಬಹಳ ವೇಗವಾಗಿ ಕೊಲ್ಲುವ ಶಕ್ತಿ ಇದೆಯಂತೆ. ಕಣ್ಣೀರಲ್ಲಿ ಇರುವ ಆಂಟಿಮೈಕ್ರೋಬಿಲ್, ಅಂಕ್ಸ್ ಕ್ಸ್ ನಂಥ ವೈರಸ್ ಕೊಂದಾಕಿಬಿಡುತ್ತದೆ. ಇದಕ್ಕೆಲ್ಲಾ ಅಳಲೇ ಬೇಕು.
ಇವೆಲ್ಲ ಬಿಡಿ, ನೀವು ಆಫೀಸಲ್ಲಿ ಕಂಪ್ಯೂಟರ್ ಮುಂದೆ ಕುಳಿತು ಬಿಳಿ ಪರದೆಯನ್ನು ವೀಕ್ಷಿಸುತ್ತಿರುವಾಗ ಕಣ್ಣ ಗುಡ್ಡೆಯ ಸುತ್ತ ನೋವು ಬಂದಂಗೆ ಆಗುತ್ತದೆ ಅಲ್ವಾ? ಆಗ ಸ್ವಲ್ಪ ಅತ್ತು ನೋಡಿ, ಕಣ್ಣ ಗುಡ್ಡೆಯ ಮೇಲಿನ ಈ ಒತ್ತಡ ಕಡಿಮೆಯಾಗಿ, ಕಣ್ಣೀರಿಗೆ ಕಾರಣವಾಗುವ ಲಕ್ರಿಮಲ್ ಗ್ರಂಥಿಗಳ ಬಲಗೊಳ್ಳುತ್ತವೆ. ಗೊತ್ತಾಯ್ತಲ್ಲ. ಕಣ್ಣೀರು ನಕಾರಾತ್ಮಕ ಭಾವನೆಗಳ ಅಣೆಕಟ್ಟನ್ನು ಒಡೆಯುತ್ತದೆ.
ಹಾಗಾದರೆ, ಒಂದು ಸಲ ಅತ್ತು ಬಿಡಿ ಪ್ಲೀಸ್…