ಸುಂದರಾಂಗ ಸಿಡುಕನೇ, ಕೇಳುವಂಥವನಾಗು…


Team Udayavani, Jun 25, 2019, 5:00 AM IST

10

ಸಮಯ ಇರುವುದೇ ಪಾಸ್‌ ಮಾಡಲು ಎಂಬ ಮನಸ್ಥಿತಿಯ ನಾನು, ಸಮಯಕ್ಕೆ ಅತಿ ಮಹತ್ವ ಕೊಡುವ ನಿನ್ನನ್ನು ಅದು ಹೇಗೆ ಇಷ್ಟಪಟ್ಟೆನೆಂದು ನನಗೇ ಆರ್ಥವಾಗುತ್ತಿಲ್ಲ. ಭಾವನೆಗಳಿಗೆ ಸೋಲುವ ನಾನು, ವಾಸ್ತವದ ಚೌಕಟ್ಟಿನೊಳಗೆ ಬಂಧಿಯಾಗಿರುವ ನೀನು, ಭಲೇ ಜೋಡಿ ಕಣೋ ನಮ್ಮದು!

ಡಿಯರ್‌ ನನ್ನವನೆ,
ಮದುವೆಗೆ ಮುಂಚೆ ಎಲ್ಲ ಹೆಣ್ಮಕ್ಕಳಿಗೂ ತನ್ನ ಹುಡುಗನ ಬಗ್ಗೆ ರಾಶಿ ರಾಶಿ ಕನಸುಗಳಿರುತ್ತವೆ. ಮರುಳು ಮಾತುಗಳಿಂದ ಕಚಗುಳಿಯಿಡಬೇಕು, ನನ್ನ ಮಾತನ್ನು ಲಕ್ಷಗೊಟ್ಟು ಕೇಳಬೇಕು, ನಾನು ಬಯಸಿದ್ದನ್ನು ಆಕಾಶ, ಭೂಮಿ ಒಂದು ಮಾಡಿಯಾದರೂ ತಂದು ಕೊಡಬೇಕು, ಲೇಟಾದಾಗ ಕ್ಷಮೆ ಕೇಳಬೇಕು, ದಿನದ ಹೆಚ್ಚಿನ ಸಮಯವನ್ನು ನನ್ನೊಂದಿಗೇ ಕಳೆಯಬೇಕು, ಸರ್‌ಪ್ರೈಸ್‌ ಆಗಿ ಗಿಫ್ಟ್ ಕೊಟ್ಟು ಚಕಿತಗೊಳಿಸಬೇಕು, ನನ್ನ ಫೋನ್‌ ಕರೆಗಾಗಿ ಕಾಯ್ತಾ ಇರಬೇಕು, ಒಂದೇ ರಿಂಗ್‌ಗೆ ಫೋನ್‌ ಎತ್ತಬೇಕು, ವಾಟ್ಸಾಪ್‌ನಲ್ಲಿ ಕಚಗುಳಿ ಇಡುವ ಜೋಕುಗಳನ್ನು, ಮೆಸೇಜುಗಳನ್ನು ಕಳಿಸುತ್ತಾ ನಾನು ಕೊಡುವ ಉತ್ತರಕ್ಕಾಗಿ ಹಾತೊರೆಯಬೇಕು, ವಾರಕ್ಕೊಮ್ಮೆಯಾದರೂ ಲಾಂಗ್‌ ಡ್ರೆ„ವ್‌ ಹೋಗಬೇಕು, ಇಬ್ಬರೂ ಕೈಕೈ ಹಿಡಿದು ಸಮಯದ ಪರಿವೆ ಇಲ್ಲದೆ ಸುತ್ತಬೇಕು… ಹೀಗೆ ಸಾವಿರಾರು ಹುಚ್ಚು ಆಸೆಗಳಿರುತ್ತವೆ. ನನಗೂ ಅಂಥ ಆಸೆಗಳಿವೆ.

ಆದ್ರೆ, ನೀನೂ ಇದ್ದೀಯ! ಮಾತೆಂದರೆ ಏಕ್‌ ಮಾರ್‌ ದೋ ತುಕಡಾ ಥರ. ಸಿಟ್ಟಂತೂ ಮೂಗಿನ ತುದಿಯಲ್ಲಿ ಪರ್ಮನೆಂಟ್‌ ಆಗಿ ಮನೆ ಮಾಡಿ ಕೂತಿರುತ್ತೆ. ದೂರ್ವಾಸ ಮುನಿಯ ಅಪರಾವತಾರ ನೀನು. ನನ್ನ ಹುಟ್ಟು ಹಬ್ಬವೂ ನೆನಪಿರುವುದಿಲ್ಲ. ನಾನಾಗಿಯೇ ನೆನಪು ಮಾಡಿದರೂ ವಿಶ್‌ ಮಾಡಿ ಸುಮ್ಮನಾಗ್ತಿàಯ. ಗಿಫ್ಟ್ ಕೊಡಿಸಬೇಕೆಂದು ನಿಂಗೆ ಅರ್ಥವೇ ಆಗುವುದಿಲ್ಲ. ಬಾಯಿಬಿಟ್ಟು ಕೇಳಿದರೆ, ನಿನ್ನ ಪರ್ಸು ತೋರಿಸಿ- “ಇಷ್ಟರೊಳಗೆ ನೀನು ಏನು ಬೇಕಾದರೂ ತಗೋ. ಇದಕ್ಕಿಂತ ಹೆಚ್ಚಿನ ಬೆಲೆಯದ್ದನ್ನು ನಿರೀಕ್ಷಿಸಬೇಡ. ಸಾಲ ಮಾಡಿ ಗಿಫ್ಟ್ ಕೊಡಿಸಲು ನನಗಿಷ್ಟವಿಲ್ಲ’ ಅಂತೀಯಲ್ಲಾ, ಆಗ ಸಿಟ್ಟು ನೆತ್ತಿಗೇರಿದರೂ, ನಿನ್ನ ನೇರ ಮಾತುಗಳಿಗೆ ಸೋತು ಹೋಗುತ್ತೇನೆ.

ಜೊತೆಯಾಗಿ ನಡೆವಾಗ, ಮೆಲ್ಲಗೆ ನಿನ್ನ ಕೈ ಒಳಗೆ ನನ್ನ ಕೈ ಬೆಸೆದರೂ, “ಮದುವೆಯ ತನಕ ಇದೆಲ್ಲ ಬೇಡ’ ಎನ್ನುವಂತೆ ಕಣ್ಣಲ್ಲೇ ಸನ್ನೆ ಮಾಡಿ, ತಲೆಯಾಡಿಸಿ ಮುಂದೆ ಹೋಗುತ್ತೀಯಲ್ಲ, ನಿನ್ನನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ. ಪ್ರತಿದಿನ ಭೇಟಿಯಾದರೂ, ಇಂತಿಷ್ಟೇ ಹೊತ್ತು ಎಂದು ಟೈಮ್‌ ಟೇಬಲ್‌ ಹಾಕುವ ನಿನ್ನನ್ನು ನೋಡಿದರೆ, ಇಂಥವನನ್ನು ಪ್ರೀತಿಸಿ ತಪ್ಪು ಮಾಡಿದೆನಾ ಅಂತ ಕೆಲವೊಮ್ಮೆ ಅನ್ನಿಸುತ್ತದೆ.

ಸಮಯ ಇರುವುದೇ ಪಾಸ್‌ ಮಾಡಲು ಎಂಬ ಮನಸ್ಥಿತಿಯ ನಾನು, ಸಮಯಕ್ಕೆ ಅತಿ ಮಹತ್ವ ಕೊಡುವ ನಿನ್ನನ್ನು ಅದು ಹೇಗೆ ಇಷ್ಟಪಟ್ಟೆನೆಂದು ನನಗೇ ಆರ್ಥವಾಗುತ್ತಿಲ್ಲ. ಭಾವನೆಗಳಿಗೆ ಸೋಲುವ ನಾನು, ವಾಸ್ತವದ ಚೌಕಟ್ಟಿನೊಳಗೆ ಬಂಧಿಯಾಗಿರುವ ನೀನು, ಭಲೇ ಜೋಡಿ ಕಣೋ ನಮ್ಮದು! ನೀನಾಗೇ ಫೋನು ಮಾಡುವುದಿರಲಿ, ನಾನಾಗೇ ಅದೆಷ್ಟು ಸಲ ಕರೆ ಮಾಡಿದರೂ, ಆಫೀಸಿನ ಟೈಮ್‌ನಲ್ಲಿ ಉತ್ತರಿಸುವುದೇ ಇಲ್ಲ. ಹೋಗಲಿ, ಸಂಜೆಯಾದರೂ ಅದಕ್ಕಾಗಿ ಕ್ಷಮೆ ಕೇಳುತ್ತಾನೇನೋ ಅಂತ ನಾನು ಭಾವಿಸಿದ್ದರೆ ನನ್ನಂಥ ಮೂರ್ಖಳು ಮತ್ತೂಬ್ಬಳಿಲ್ಲ. ಯಾಕಂದ್ರೆ, ಅನಗತ್ಯ ಕ್ಷಮೆ ಕೇಳುವ ಜಾಯಮಾನವೇ ನಿನ್ನದಲ್ಲ. ಇದ್ದುದ್ದನ್ನು ಇದ್ದಂತೆಯೇ ಮುಲಾಜಿಲ್ಲದೆ ಹೇಳುವ ನಿನ್ನ ಗುಣವೇ ನಿನ್ನನ್ನು ಪ್ರೀತಿಸುವಂತೆ ಮಾಡಿದ್ದು.

ಅದೇನೇ ಇರಲಿ, “ಈ ಸಿಡುಕನ ಹತ್ತಿರ ಮುಂದೆ ಹೇಗೆ ಸಂಸಾರ ಮಾಡ್ತೀಯೆ?’ ಎನ್ನುವ ಗೆಳತಿಯರ ಹಾಸ್ಯಕ್ಕೆ ನನ್ನದೊಂದೇ ಉತ್ತರ. ಏನು ಗೊತ್ತಾ- “ಸಿಡುಕನಿರಬಹುದು ನನ್ನ ಚೆಲುವ…ಆದರೆ ದುಡುಕನಲ್ಲ ಗೊತ್ತಾ!’
ನೀನು ನೀನಾಗಿಯೇ ಇರು ಹುಡುಗಾ, ನನಗದೇ ಇಷ್ಟ.

 -ನಳಿನಿ, ಧಾರವಾಡ

ಟಾಪ್ ನ್ಯೂಸ್

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.