ಬೀಯಿಂಗ್‌ ಹ್ಯೂಮನ್‌ ರಿಸೋರ್ಸ್‌

ಕೆಲಸ ಕೊಡಿಸುವುದೂ ಒಂದು ಕೆಲಸ!

Team Udayavani, Jul 30, 2019, 3:00 AM IST

bieng-human

ಸಂಸ್ಥೆ ಸಣ್ಣದಿರಬಹುದು, ಅಥವಾ ಅಂತಾರಾಷ್ಟ್ರೀಯ ಮಟ್ಟದ್ದೇ ಇರಬಹುದು, ಆದರೆ ಅದರ ಬೆನ್ನೆಲುಬಾಗಿ ಸಂಸ್ಥೆಯನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯುವುದು ಮಾನವ ಸಂಪನ್ಮೂಲ ವಿಭಾಗ. ಉದ್ಯೋಗಿ ಮತ್ತು ಆಡಳಿತ ಮಂಡಳಿಯ ನಡುವೆ ಸೇತುವೆಯಂತೆ ಕೆಲಸ ನಿರ್ವಹಿಸುತ್ತದೆ ಎಚ್‌.ಆರ್‌ ವಿಭಾಗ.

ಯಾವುದೇ ಸಂಸ್ಥೆ ಸರಾಗವಾಗಿ ಕೆಲಸ ಮಾಡಬೇಕಾದರೆ ಅದರ ಮಾನವ ಸಂಪನ್ಮೂಲ ವಿಭಾಗ (ಎಚ್‌ಆರ್‌- ಹ್ಯೂಮನ್‌ ರಿಸೋರ್ಸ್‌) ಸಮರ್ಥವಾಗಿ ತನ್ನ ಕಾರ್ಯ ನಿರ್ವಹಿಸಬೇಕು. ಸಂಬಳ ಸವಲತ್ತುಗಳೂ ಮೊದಲ್ಗೊಂಡು ಸಿಬ್ಬಂದಿ ನಿಯಮಾವಳಿ ಹಾಗೂ ಇತರೆ ಭತ್ಯೆಗಳು, ರಜೆಯ ವಿಚಾರ, ಶಿಸ್ತಿಗೆ ಸಂಬಂಧಿಸಿದ ನಿಯಮಾವಳಿ- ಈ ಎಲ್ಲವನ್ನೂ ರೂಪಿಸುವುದು ಮಾನವ ಸಂಪನ್ಮೂಲ ವಿಭಾಗ. ಸಂಸ್ಥೆ ಸಣ್ಣದಿರಬಹುದು, ಅಥವಾ ಅಂತಾರಾಷ್ಟ್ರೀಯ ಮಟ್ಟದ್ದೇ ಇರಬಹುದು, ಆದರೆ ಅದರ ಬೆನ್ನೆಲುಬಾಗಿ ಸಂಸ್ಥೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವುದು ಮಾನವ ಸಂಪನ್ಮೂಲ ವಿಭಾಗ. ಉದ್ಯೋಗಿ ಮತ್ತು ಆಡಳಿತ ಮಂಡಳಿಯ ನಡುವೆ ಸೇತುವೆಯಂತೆ ಕೆಲಸ ನಿರ್ವಹಿಸುತ್ತದೆ ಎಚ್‌.ಆರ್‌ ವಿಭಾಗ.

ಉದ್ಯೋಗಿಗಳನ್ನು ಉಳಿಸಿಕೊಳ್ಳುವ ಕಲೆ: ಉದ್ಯೋಗಿಗಳೇ ಸಂಸ್ಥೆಯ ನಿಜವಾದ ಆಸ್ತಿ ಎನ್ನುವುದು ಎಚ್‌.ಆರ್‌.ಗಳ ಧ್ಯೇಯ ವಾಕ್ಯ. ಅದರಂತೆ ಸಂಸ್ಥೆಗೂ ನಷ್ಟವಾಗದಂತೆ, ಉದ್ಯೋಗಿಗಳಿಗೆ ಲಾಭವಾಗುವಂತೆ ಕಾಲ ಕಾಲಕ್ಕೆ ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತವೆ. ಉದ್ಯೋಗಿಯೊಬ್ಬ ಕೆಲಸಕ್ಕೆ ಸೇರಿದಂದಿನಿಂದ, ಅವರ ಸೇವಾ ವಧಿ ಮುಗಿಯುವವರೆಗೂ ಅವರೊಂದಿಗೆ ಎಚ್‌.ಆರ್‌ ವಿಭಾಗ ಸಂಪರ್ಕ ಇರಿಸಿಕೊಂಡಿರುತ್ತದೆ. ಸಿಬ್ಬಂದಿಯ ಎಲ್ಲ ವಿಚಾರಗಳನ್ನೂ ಅಂದರೆ ಸಂಬಳ, ಆರೋಗ್ಯ ತಪಾಸಣೆ, ವೃತ್ತಿಪರ ತರಬೇತಿ, ಮುಂಬಡ್ತಿ, ವಾರ್ಷಿಕ ಅಪ್ರೈಸಲ್‌, ಅವರ ಸಮಸ್ಯೆಗಳು- ಎಲ್ಲವನ್ನೂ ಎಚ್‌.ಆರ್‌ಗಳು ನೋಡಿಕೊ ಳ್ಳುತ್ತಾರೆ. ದೈನಂದಿನ ಚಟುವಟಿಕೆಗಳನ್ನು ಸುಗಮಗೊಳಿ ಸುವುದರ ಜೊತೆಗೆ, ಕಂಪೆನಿಯ ದೂರದರ್ಶಿತ್ವ ಗುರಿಗಳನ್ನು ಗಮನದಲ್ಲಿರಿಸಿಕೊಂಡು ಅವರು ಕರ್ತವ್ಯ ನಿಭಾಯಿಸುತ್ತಾರೆ.

ಎಚ್‌.ಆರ್‌. ಆಗುವುದು ಹೇಗೆ?: ಮಾನವ ಸಂಪನ್ಮೂಲ ವಿಷಯದಲ್ಲಿ ಡಿಪ್ಲೊಮಾ ಪದವಿ, ಸ್ನಾತಕೋತ್ತರ ಪದವಿ ಅಲ್ಲದೆ ಡಾಕ್ಟರೇಟ್‌ ಪಡೆದವರು ಈ ವೃತ್ತಿಕ್ಷೇತ್ರವನ್ನು ಆರಿಸಿಕೊಳ್ಳಬಹುದು. ಡಿಪ್ಲೊಮಾ ಪದವಿ ಹಂತದಲ್ಲಿ ಎಚ್‌.ಆರ್‌ ವಿಷಯವನ್ನು ಆರಿಸಿಕೊಳ್ಳಲು ಅಭ್ಯರ್ಥಿಗಳು ಪಿ.ಯು.ಸಿಯಲ್ಲಿ ಕನಿಷ್ಠ 50% ಅಂಕಪಡೆದು ತೇರ್ಗಡೆಯಾಗಿರಬೇಕು. ಸ್ನಾತಕೋತ್ತರ ಪದವಿ ಪಡೆಯಲು ಅಐಇಖಉ ಯಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆ ಅಥವಾ ವಿಶ್ವದ್ಯಾಲಯಗಳಲ್ಲಿಯೇ ಎಚ್‌.ಆರ್‌ ಕೋರ್ಸು ಪೂರ್ತಿಗೊಳಿಸಿರಬೇಕು.

HRM ಪ್ರವೇಶ ಪರೀಕ್ಷೆಗಳು: ಸ್ನಾತಕೋತ್ತರ ಪದವಿ (MBA – HRM) ಪಡೆಯಲು ಬಯಸುವ ವಿದ್ಯಾರ್ಥಿಗಳು ಕೆಲವು ಪ್ರವೇಶ ಪರೀಕ್ಷೆಗಳನ್ನು ಬರೆಯಬೇಕಾಗುತ್ತದೆ. ಅವುಗಳನ್ನು ಹೀಗೆ ಪಟ್ಟಿ ಮಾಡಬಹುದು: CAT, AIMA – MAT, XAT, IIFT, SNAP, NMAT (GMAC ವತಿಯಿಂದ) CMAT, IBSAT, MICAT. ಇವುಗಳ ರ್‍ಯಾಂಕಿಂಗ್‌ ಆಧಾರದ ಮೇಲೆ ಅಭ್ಯರ್ಥಿಯ ಕಾಲೇಜು, ಶಿಕ್ಷಣ ಶುಲ್ಕ ನಿರ್ಧಾರವಾಗುತ್ತದೆ.

ಕಾನೂನಿನ ಅರಿವೂ ಬೇಕು: ಕಂಪೆನಿಗಳನ್ನು ನಡೆಸುವಾಗ ಕಾನೂನು ನಿಯಮಾವಳಿಗಳನ್ನು ಪಾಲಿಸಬೇಕಾಗುತ್ತದೆ. ಮಾಲೀಕ ಮತ್ತು ಕೆಲಸಗಾರರ ನಡುವಣ ಉದ್ಯೋಗದಾತ – ಉದ್ಯೋಗಿ ಸಂಬಂಧಗಳು “ಲೇಬರ್‌’ ಕಾನೂನಿನ ವ್ಯಾಪ್ತಿಯೊಳಗೆ ಬರುತ್ತವೆ. ಹೀಗಾಗಿ, ಮಾನವ ಸಂಪನ್ಮೂಲ ವಿಭಾಗದವರು ಈ ಎರಡೂ ಬದಿಯವರ ಹಿತರಕ್ಷಣೆಯನ್ನು ಮನಸ್ಸಿನಲ್ಲಿರಿಸಿಕೊಂಡು ಕಾನೂನಿನ ಅರಿವಿನೊಂದಿಗೆ ಸೌಹಾರ್ದ ಸಂಬಂಧ ಸ್ಥಾಪನೆ ಮತ್ತು ಪ್ರಗತಿಪಥದ ಪಯಣ ಎರಡನ್ನೂ ಸಾಧಿಸಬೇಕಾಗುತ್ತದೆ. ಉದ್ಯೋಗದಾತರಿಂದ ಉದ್ಯೋಗಿಯ ಶೋಷಣೆಯಾಗದಂತೆ, ಅದೇ ಸಮಯದಲ್ಲಿ ಉದ್ಯೋಗಿಯಿಂದ ಸಂಸ್ಥೆಗೆ ನಷ್ಟವಾಗದಂತೆ ಏR ವಿಭಾಗ ಸಮತೂಕದ ಸಂಬಂಧ ಕಾಪಾಡಿಕೊಳ್ಳುತ್ತದೆ. ಎಚ್‌.ಆರ್‌. ಕ್ಷೇತ್ರದಲ್ಲಿ ಕೆಲಸಕ್ಕೆ ಸೇರಿದವರಿಗೆ, ಪ್ರಾರಂಭದ ಪಗಾರ ಕಡಿಮೆ ಸಿಕ್ಕರೂ ಬಹಳ ಬೇಗ ಅಭ್ಯರ್ಥಿಯ ಕಾರ್ಯಕ್ಷಮತೆಯ ಆಧಾರದ ಮೇಲೆ ಲಕ್ಷವನ್ನೂ ಸಂಪಾದಿಸಬಹುದು.

ಮುಖ್ಯ ಕರ್ತವ್ಯಗಳು
ಸಿಬ್ಬಂದಿಯ ನೇಮಕಾತಿ: ಸಂಸ್ಥೆಗೆ ಸರಿಹೊಂದುವ ಸಿಬ್ಬಂದಿಯನ್ನು ಆಯ್ಕೆ ಮಾಡುವುದು HR ಸಿಬ್ಬಂದಿಯ ಮುಖ್ಯ ಕರ್ತವ್ಯ. ಸಿಕ್ಕ ಸಿಕ್ಕಂತೆ ಇದನ್ನು ಮಾಡಲಾಗುವುದಿಲ್ಲ. ಅಭ್ಯರ್ಥಿಯನ್ನು ಹಲವಾರು ಆಯಾಮಗಳಲ್ಲಿ ಅಳೆದು, ಆತನ ಕಾರ್ಯಕ್ಷಮತೆ ಪರೀಕ್ಷಿಸಿದ ನಂತರವೇ ಸಂಸ್ಥೆಗೆ ಸೇರಿಸಿಕೊಳ್ಳಬೇಕಾಗುತ್ತದೆ.

ಸಂಬಳ – ಭತ್ಯೆ ನಿರ್ವಹಣೆ: ಆಯ್ಕೆಯಾದ ಸಿಬ್ಬಂದಿಗೆ ಸಮಾಧಾನವಾಗುವಂತೆ, ಸಂಸ್ಥೆಗೆ ಹೊರೆಯಾಗದಂತೆ ಸಂಬಳ- ಭತ್ಯೆಗಳನ್ನು ನಿಗದಿಪಡಿಸುವುದು HR ವಿಭಾಗದ ಜವಾಬ್ದಾರಿ. ಜೊತೆಗೆ ಪಿ.ಎಫ್., ಬೋನಸ್‌ ಇತ್ಯಾದಿಗಳ ಬಗ್ಗೆ ಪೂರ್ಣ ತಿಳಿವಳಿಕೆ ಹೊಂದಿರುವುದು ಎಚ್‌.ಆರ್‌ ವಿಭಾಗದವರ ಜವಾಬ್ದಾರಿ.

ತರಬೇತಿ ಮತ್ತು ಪ್ರಗತಿ: ಸಿಬ್ಬಂದಿಗಳಿಗೆ ಕಂಪೆನಿಯ ವಾತಾವರಣಕ್ಕೆ ಹೊಂದಿಕೊಳ್ಳಲು ಅನುವಾಗುವಂತೆ, ಅವರ ಸಾಮರ್ಥ್ಯವನ್ನು ವೃದ್ಧಿಸಲು ನೆರವಾಗುವಂತೆ ಮತ್ತು ಕಂಪೆನಿಯ ಧ್ಯೇಯೋದ್ದೇಶಗಳಿಗೆ ಅನುಗುಣವಾಗಿ ತರಬೇತಿ ಕಾರ್ಯಕ್ರಮಗಳನ್ನು ಮಾನವ ಸಂಪನ್ಮೂಲ ವಿಭಾಗ ಹಮ್ಮಿಕೊಳ್ಳಬೇಕು. ಕಂಪೆನಿಗೆ, ತರಬೇತಿ ಕೈಪಿಡಿ (Training Planner)ಯನ್ನು ಕೂಡಾ ಮಾಡಿಕೊಡಬೇಕಾಗುತ್ತದೆ.

ಎಚ್‌.ಆರ್‌ ಆಗಬಯಸುವವರು ವ್ಯಕ್ತಿಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಪಡೆದಿರಬೇಕು. ಮನೆಯಲ್ಲಿ ತಾಯಿಯಾದವಳು ಹೇಗೆ ಕುಟುಂಬದ ಸದಸ್ಯರ ಬೇಕು ಬೇಡಗಳನ್ನು ತಿಳಿದುಕೊಳ್ಳುತ್ತಾಳ್ಳೋ, ಅದೇ ರೀತಿ ಒಂದು ಸಂಸ್ಥೆಯಲ್ಲಿ ಎಚ್‌.ಆರ್‌.ಗಳು ಉದ್ಯೋಗಿಗಳ ನೋವು ನಲಿವುಗಳಲ್ಲಿ ಭಾಗಿಯಾಗುತ್ತಾರೆ. ಸಂಸ್ಥೆಯಲ್ಲಿ ಕೌಟುಂಬಿಕ ವಾತಾವರಣವನ್ನು ನಿರ್ಮಿಸುವುದರಿಂದ ಉದ್ಯೋಗಿಗಳ ಕಾರ್ಯಕ್ಷಮತೆಯೂ ಹೆಚ್ಚುತ್ತದೆ. ಇದರಿಂದ ಸಂಸ್ಥೆಗೂ ಪ್ರಯೋಜನವಾಗುತ್ತದೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ಎಲ್ಲರನ್ನೂ ಖುಷಿಯಾಗಿಡುವುದೇ ನಮ್ಮ ಕೆಲಸ.
-ಅಕ್ಷತಾ ದೇವರಾಜ್‌, ಎಚ್‌. ಆರ್‌, ಎಂ.ಎನ್‌.ಸಿ.

* ರಘು ವಿ.

ಟಾಪ್ ನ್ಯೂಸ್

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

7-brijesh

Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.