ಹಳೆಯದೆಲ್ಲಾ ನಿಂಗೆ ನೆನಪಾಗಲ್ವ?

Team Udayavani, Apr 2, 2019, 6:00 AM IST

a-13

ನೀನು ನಿಧಾನಕ್ಕೆ ನನ್ನನ್ನು ನಿರ್ಲಕ್ಷಿಸತೊಡಗಿದೆ. ಮೊದಲು ನನಗದು ಅರ್ಥವೇ ಆಗಲಿಲ್ಲ. ಅರ್ಥವಾಗಿದ್ದರೆ, ಹೇಗಾದರೂ ಮಾಡಿ ನಿನ್ನನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಅರ್ಥವಾಗುವಷ್ಟರಲ್ಲಿ, ಎಲ್ಲವೂ ನನ್ನ ಕೈ ಮೀರಿ ಹೋಗಿತ್ತು.

ಗೆಳತಿ,
ಪರಿಚಯವಾದಾಗ ನಮ್ಮಿಬ್ಬರಿಗೂ ಹದಿ ಹರೆಯದ ವಯಸ್ಸು. ನಾವಾಗ ಪಿಯುಸಿ ಓದುತ್ತಿದ್ದೆವು. ಹಳ್ಳಿಯಲ್ಲಿ ಎಸ್‌ಎಸ್‌ಎಲ್‌ಸಿ ಓದಿ ಬಂದ ನಾನು, ಓದಿನಲ್ಲಿ ನಿನಗಿಂತ ದಡ್ಡನೇ. ಅರ್ಧವಾರ್ಷಿಕ ಪರೀಕ್ಷೆಯ ದಿನ ಏನು ಬರೆಯಬೇಕೆಂದು ಗೊತ್ತಾಗದೆ ಕಣ್‌ ಕಣ್‌ ಬಿಡುತ್ತ ಕುಳಿತಿದ್ದ ನನಗೆ, ನೀನು ಉತ್ತರ ಪತ್ರಿಕೆಯನ್ನೇ ಎತ್ತಿ ಕೊಟ್ಟಿದ್ದೆ!

ಆ ಕ್ಷಣಕ್ಕೆ ನನಗೇನಾಯೊ ಗೊತ್ತಿಲ್ಲ, ಎದೆ ಜೋರಾಗಿ ಹೊಡೆದುಕೊಳ್ಳತೊಡಗಿತು. ಯಾರ ಜೊತೆಯೂ ಮಾತನಾಡದ ನಾನು ಆವತ್ತು ಪರೀಕ್ಷೆ ಮುಗಿಸಿ ಹೊರ ಬಂದ ಮೇಲೆ ನಿನ್ನ ಜೊತೆ ಮಾತಾಡಿದ್ದೆ. ನೀನೂ ಅಷ್ಟೇ ಸಲುಗೆಯಿಂದ ಮಾತನಾಡಿಸಿದೆ. ಹೀಗೇ ಮುಂದುವರಿದ ನಮ್ಮ ಸ್ನೇಹ ವಾರ್ಷಿಕ ಪರೀಕ್ಷೆ ಬರುವಷ್ಟರಲ್ಲಿ ಗಾಢವಾಗಿತ್ತು.
ಹಾಗೂ ಹೀಗೂ ಪರೀಕ್ಷೆ ಮುಗಿಯಿತು. ನಾವಿಬ್ಬರೂ ಪರಸ್ಪರ ಬಿಟ್ಟಿರಲಾರದಷ್ಟು ಹಚ್ಚಿಕೊಂಡಿದ್ದೇವೆ ಅಂತ ನಮಗೆ ಅರ್ಥವಾಗಿದ್ದೇ ಆಗ. ಎರಡು ತಿಂಗಳ ರಜೆಯಲ್ಲಿ ಒಬ್ಬರನ್ನೊಬ್ಬರು ನೋಡದೆಯೇ ಇರಬೇಕಲ್ಲ ಅನ್ನೋ ನೋವು ಇಬ್ಬರನ್ನೂ ಕಾಡತೊಡಗಿತು. ಆಗ ನೀನೇ ಬಂದು, “ನಿನ್ನ ನಂಬರ್‌ ಕೊಡು’ ಅಂತ ಕೇಳಿದೆ.

ಎರಡನೇ ವರ್ಷದ ಪಿ.ಯು.ಸಿ ಕ್ಲಾಸುಗಳು ಪ್ರಾರಂಭವಾದ ಮೇಲೆ, ನಾವು ಕ್ಲಾಸ್‌ನಲ್ಲಿ ಕುಳಿತಿದ್ದಕ್ಕಿಂತ ಹೊರಗಡೆ ಸುತ್ತಾಡಿದ್ದೇ ಹೆಚ್ಚು. ನಾವಿಬ್ಬರೂ ಅಗಲುವುದೇ ಇಲ್ಲ ಅಂತ ಭಾವಿಸಿದ್ದು, ಕೆಲವೇ ದಿನಗಳಲ್ಲಿ ಸುಳ್ಳಾಯಿತು. ಪರೀಕ್ಷೆ ಮುಗಿಯಿತು. ಇಬ್ಬರೂ ಪದವಿ ಓದಲು ಬೇರೆ ಬೇರೆ ಕಾಲೇಜಿನ ದಾರಿ ಹಿಡಿದೆವು. ಒಂದೆರಡು ತಿಂಗಳು ಎಲ್ಲವೂ ಮೊದಲಿನಂತೇ ಇತ್ತು. ಆಮೇಲೆ ನೀನು ನಿಧಾನಕ್ಕೆ ನನ್ನನ್ನು ನಿರ್ಲಕ್ಷಿಸತೊಡಗಿದೆ. ಮೊದಲು ನನಗದು ಅರ್ಥವೇ ಆಗಲಿಲ್ಲ. ಅರ್ಥವಾಗಿದ್ದರೆ, ಹೇಗಾದರೂ ಮಾಡಿ ನಿನ್ನನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಅರ್ಥವಾಗುವಷ್ಟರಲ್ಲಿ, ಎಲ್ಲವೂ ನನ್ನ ಕೈ ಮೀರಿ ಹೋಗಿತ್ತು.

ಅಷ್ಟೊಂದು ಗಾಢವಾಗಿ ಪ್ರೀತಿಸಿದ ನನ್ನನ್ನು ಮರೆತು ಈಗ ಹೇಗಿರುವೆ ಗೆಳತಿ? ಹಳೆಯದೆಲ್ಲಾ ನಿನಗೆ ನೆನಪಾಗದೆ?

ಕೆಂಚಪ್ಪ ಎಸ್‌. ಮುಮ್ಮಿಗಟ್ಟಿ

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.