ಕಳೆದು ಹೋದ ಐಶ್ವರ್ಯಕ್ಕಾಗಿ ಚಿಂತಿಸಲಾರೆ…

Team Udayavani, Oct 15, 2019, 5:00 AM IST

l-14

ಸುಮಾರು ಆರು ವರುಷಗಳ ಪ್ರೇಮ ನಮ್ಮಿಬ್ಬರದು. ಆದರೆ, ಕೆಲ ದಿನಗಳ ಹಿಂದೆ ಫೋನ್‌ ಮಾಡಿದಾಗ ನಮ್ಮ ಪ್ರೀತಿಯನ್ನು ಇಲ್ಲಿಗೇ ನಿಲ್ಲಿಸಿ ಬಿಡೋಣ ಅಂದಳು. ಈ ಮಾತು ಕೇಳಿದಾಗ ಎದೆಯಲ್ಲಿ ನಡುಕ, ಭಯ, ಒಂದೇ ಸಮನೆ ಹೃದಯ ಬಡಿದುಕೊಳ್ಳಲು ಪ್ರಾರಂಭಿಸಿತು. ಕಣ್ಣಿನಿಂದ ಒಂದು ಹನಿ ಜಾರಿ ಬಿತ್ತು.

ಮೊದಲು ಬಸ್‌ ನಿಲ್ದಾಣದಲ್ಲಿ ಅವಳನ್ನ ನೋಡಿದ್ದೆ. ನಂತರ ವಿಚಾರಿಸಿದಾಗ ಅವಳು ನಮ್ಮ ಕಾಲೇಜು ಅಂತ ತಿಳಿದು, ಪ್ರತಿದಿನ ಅವಳನ್ನು ನೋಡಬೇಕು ಅಂತ ಟ್ಯೂಷನ್‌ ನೆಪ ಮಾಡಿ ಬೆಳಿಗ್ಗೆನೇ ಬರುತ್ತಿದ್ದೆ. ಏಕೆಂದರೆ, ಅವಳ ಕಾಲೇಜು ಸಮಯ ಬೆಳಗ್ಗೆ ಇತ್ತು, ಅವಳನ್ನ ಮಾತಾಡಿಸಬೇಕು,ಅವಳಿಗೆ ನನ್ನ ಪ್ರೇಮದ ವಿಷಯ ಹೇಳಬೇಕು ಅಂತ ಪ್ರತಿದಿನ ಅವಳ ಹಿಂದೆ ಸುತ್ತುತ್ತಿದ್ದೆ, ಕೊನೆಗೆ ಅವಳೇ ಬಂದು ಮಾತಾಡಿಸಿದಳು. ನಂತರ, ನಮ್ಮಿಬ್ಬರ ನಡುವೆ ಸಲಿಗೆ ಬೆಳೆದು, ಸಲಿಗೆ ಸ್ನೇಹಕ್ಕೆ ತಿರುಗಿ, ಸ್ನೇಹ ನಿಧಾನವಾಗಿ ಪ್ರೀತಿಯ ರೂಪ ಪಡೆದುಕೊಂಡಿತು.

ಎಲ್ಲ ಪ್ರೇಮಿಗಳಂತೆ ನಾವು ಪಾರ್ಕ್‌, ಸಿನೆಮಾ, ಹೋಟೆಲ್‌ ಎಲ್ಲ ಕಡೆ ಸುತ್ತಾಡುತ್ತಿದ್ದೆವು. ಅವಳ ಕಣ್ಣಿನ ನೋಟ ಯಾವಾಗಲೂ ಸೆಳೆಯುತ್ತಿತ್ತು, ಕಾರಣವಿಲ್ಲದೆ ಸತಾಯಿಸುವುದು, ರೇಗಿಸುವುದು, ಕೆಣಕುವುದು, ನಂಗೆ ಫೋನ್‌, ಮೆಸೇಜ್‌ ಮಾಡದೇ ಇರುವುದು ಅವಳಲ್ಲಿನ ಕೆಟ್ಟ ಗುಣಗಳು.

ನಮ್ಮ ಹುಡುಗಿ ಸುಂದ್ರಿನೇ, ಆದರೆ ವಿಶ್ವಸುಂದರಿ ಏನಲ್ಲ, ಅವಳಿಗೆ ಅಹಂಕಾರವಿತ್ತು. ಆದರೆ ದುರಹಂಕಾರ ಇರಲಿಲ್ಲ. ಮನಸ್ಸಿನಲ್ಲಿ ನೂರಾರು ನೋವುಗಳು ನರ್ತನ ಮಾಡುವಾಗ ನಗುವುದನ್ನು ಕಲಿಸಿದಳು, ಹೆಜ್ಜೆ ಹೆಜ್ಜೆಗೂ ಹರ್ಟ್‌ ಆದರೂ ಹೆದರದೇ ಹೆಜ್ಜೆ ಇಡುವುದನ್ನು ಕಲಿಸಿದಳು. ಸಹನೆ ನಿನ್ನದಾದರೆ ಸಕಲವೂ ನಿನ್ನದು, ವಿನಯ ನಿನ್ನದಾದರೆ ವಿಜಯವೂ ನಿನ್ನದು ಎಂದು ಉಪದೇಶ ಮಾಡಿದವಳು. ಅಂಥವಳು ಈಗ ಯಾವುದೋ ಕುಂಟು ನೆಪಹೇಳಿ, ನನ್ನ ಬದುಕಿಂದಲೇ ಎದ್ದು ಹೋಗುವ ಮಾತನಾಡಿದ್ದಾಳೆ. ಅದಕ್ಕಾಗಿ ಚಿಂತಿಸಲಾರೆ. ಕಳೆದು ಹೋದ ಐಶ್ವರ್ಯಕ್ಕಾಗಿ ಅಳುತ್ತಾ ಕೂರಲಾರೆ. ಆದರೆ, “ಮಿಸ್‌ ಯೂ’ ಎಂಬ ಮಾತನ್ನು ಸಂಕಟದಿಂದಲೇ ಹೇಳಿ, ಹೊಸ ಕನಸಿಗಾಗಿ ಹಂಬಲಿಸುತ್ತಿರುವೆ.

ಇಂತಿ ನಿನ್ನವ

ಸಂತೋಷ ಯ ಮೆಟಗುಪ್ಪಿ

ಟಾಪ್ ನ್ಯೂಸ್

Lok Sabha Election; Vigorous fight of new faces in Dakshina Kannada

Lok Sabha Election; ದಕ್ಷಿಣ ಕನ್ನಡದಲ್ಲಿ ಹೊಸ ಮುಖಗಳ ಹುರುಪಿನ ಸೆಣಸಾಟ

Defense Expenditure: India to rank fourth in the world by 2023

Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Bhojshala: ASI seeks 8 weeks time for scientific survey

Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್‌ಐ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Lok Sabha Election; Vigorous fight of new faces in Dakshina Kannada

Lok Sabha Election; ದಕ್ಷಿಣ ಕನ್ನಡದಲ್ಲಿ ಹೊಸ ಮುಖಗಳ ಹುರುಪಿನ ಸೆಣಸಾಟ

Defense Expenditure: India to rank fourth in the world by 2023

Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Bhojshala: ASI seeks 8 weeks time for scientific survey

Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್‌ಐ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.