ಆಚೆ, ಈಚೆ, ಎಲ್ಲೆಲ್ಲೂ “ಚೆ’!


Team Udayavani, Aug 29, 2017, 6:05 AM IST

JOSH-PAGE-02.jpg

ಅವನ ಫೋಟೋ ನಿಮ್ಮ ಕಣ್ಣಿಗೂ ಬಿದ್ದಿರುತ್ತೆ! ಜಗತ್ತಿನಲ್ಲಿ ಇಷ್ಟೊಂದು ಅಪಾರ ಸಂಖ್ಯೆಯಲ್ಲಿ ಮುದ್ರಿತವಾದ ಫೋಟೋ ಬೇರೊಬ್ಬರದ್ದಿಲ್ಲ. ಲ್ಯಾಟಿನ್‌ ಅಮೆರಿಕದ ಹೋರಾಟಗಾರ ಅರ್ನೆಸ್ಟೋ ಚೆ ಗುವಾರ ಈಗಲೂ ಜೀವಂತವಾಗಿ ಯುವಕರ ಟಿಶರ್ಟಿನ ಮೇಲೆ ಅರಳಿ ದುರುಗುಟ್ಟುತ್ತಾನೆ. ಆ ಫೋಟೋ ಲೋಕಕ್ಕೆ ಜಾಹೀರಾಗಿ ಇದೀಗ 50 ವರುಷ. ಚೆ ಎಂದಾಕ್ಷಣ ನೆನಪಾಗುವ ಈ ಫೋಟೋದ ಹಿಂದಿನ ಕತೆಯೇನು? ಚೆ ಯಾರೆಂದು ಗೊತ್ತೇ ಇಲ್ಲದ ಭಾರತದ ಹುಡುಗರೂ ಏಕೆ ಆ ಟಿ ಶರ್ಟನ್ನೇ ಇಷ್ಟಪಡುತ್ತಾರೆ? ಅದರ ಹಿಂದಿನ ಕತೆ..

ಆ ಕಣ್ಣುಗಳ ಮೂಲಕ ಈಗಲೂ ಮಿಂಚೊಂದು ದಾಟುತ್ತದೆ. ಅದು ಐಕಾನಿಕ್‌ ಫೋಟೋವೊಂದರ ಕಣ್ಣುಗಳು. ಆ ಚಿತ್ರವುಳ್ಳ ಟಿ ಶರ್ಟುಧಾರಿಗೆ, “ನಿನ್ನ ಎದೆ ಮೇಲೆ ಅಂಟಿಕೊಂಡ ಆ ಫ‌ಕೀರ ಯಾರು?’ ಎಂದು ಪ್ರಶ್ನಿಸಿದವರು ಕಡಿಮೆ. ಅವನೊಬ್ಬ ಸಾಮಾಜಿಕ ರೂಪದರ್ಶಿ. ಉದ್ದನೆ ಕೂದಲು ಬಿಟ್ಟ, ನಿಷ್ಠುರ ಕಣ್ಣಿನ ರೆಪ್ಪೆಗಳನ್ನು ತೆರೆದ, ದಟ್ಟ ಗೆರಿಲ್ಲಾ ಗಡ್ಡದ ಮಾಡೆಲ್ಲು. ಗಲ್ಲದ ತನಕ ಜಿಪ್ಪೆಳೆದ ಜಾಕೆಟ್‌, ಮೇಲೆದ್ದ ಕಾಲರ್‌- ಆತನ ಸೊಗಸು. ಕೂದಲಿಗೆ ಬಾಚಣಿಗೆ ಮುಟ್ಟಿಸದ ಸುಂದರ ಸೋಮಾರಿ. ದವಡೆಗಳಲ್ಲಿ ದಟ್ಟ ಕೋಪವನು ಸಾಕಿಕೊಂಡ “ದೂರ್ವಾಸ’ನ ದೂತನೋ? ಸಣ್ಣ ಶಂಕೆ! ತಲೆಮೇಲಿನ ರೌಂಡು ಟೋಪಿ, ಒಂದ್ಹತ್ತು ಡಿಗ್ರಿ ಓರೆಯಾಗಿ ಕುಳಿತು, ಕೆಂಪು ನಕ್ಷತ್ರವನ್ನು ಬೀಳದಂತೆ ಹಿಡಿದಿದೆ. ಆತ ಕೊಟ್ಟ ಪೋಸ್‌ನಲ್ಲಿ ಅದೇನೋ ಹೈ ಟೆನÒನ್‌. ಭುಜದ ದಿಕ್ಕಿಗೂ, ಅವನ ಮೋರೆಯ ದಿಕ್ಕಿಗೂ ಪುಟ್ಟ ವ್ಯತ್ಯಾಸವಿದೆ. ಮರುಕದ ಜತೆಗೆ ಉದ್ಧಟತನ ತುಂಬಿಕೊಂಡ ಆ ಕಣ್ಣುಗಳ ದೃಷ್ಟಿಗೆ ಇಲ್ಲಿಯ ತನಕ ಸಾವು ಬಂದಿಲ್ಲ.

ಈ ಲೋಕದ ಹೈಕಳಿಗೆಲ್ಲ ಹುಚ್ಚು ಹಿಡಿಸಿದ ಆ ಫೋಟೋವನ್ನು ನೀವು ಎಲ್ಲೆಲ್ಲೂ ನೋಡಿರುತ್ತೀರಿ. ಕ್ಯೂಬಾದ ಫೋಟೋಗ್ರಾಫ‌ರ್‌ ಅಲ್ಬಟೋì ಕೋರ್ಡಾ, 1960ರಲ್ಲಿ ಇದನ್ನು ತೆಗೆದು, ಏಳು ವರುಷದ ತನಕ ಹೊರ ಜಗತ್ತಿನ ಕಣ್ಣಿಗೆ ಮುಟ್ಟಿಸಲಾಗದೆ ಪೇಚಾಡಿದ್ದ. ಆ ಫೋಟೋದ ಒಂದೇ ಒಂದು ಪ್ರತಿ ಅಚ್ಚಾದರೂ ಅಲ್ಲೊಂದು ದಂಗೆ ಏಳುವ ಭೀತಿ, ಚರಿತ್ರೆಯ ಟ್ರಂಕಿನಿಂದ ಹೊಗೆಯಾಡಿದ ಹಾಗೆ ಕಾಣಿಸುತ್ತದೆ. ಹಾಗೆ ಏಳು ವರುಷ ಮೂಲೆಯಲ್ಲಿಟ್ಟ “ಅರ್ನೆಸ್ಟೋ ಚೆ ಗುವಾರ’ನ ಚಿತ್ರಕ್ಕೆ ಈಗ ಅಸಂಖ್ಯ ಹುಟ್ಟು. ಅವನ ಪ್ರತಿರೂಪವನ್ನು ಮೈಮೇಲೆ ಮೂಡಿಸಲೆಂದೇ ಲಕ್ಷಾಂತರ ದೇಹಗಳು ಅದೆಷ್ಟೋ ತೊಟ್ಟುಗಳ ಲೆಕ್ಕದಲ್ಲಿ ಟ್ಯಾಟೂವಿನ ಇಂಕನ್ನು ಕುಡಿದಿವೆ. ಜಗತ್ತಿನಲ್ಲಿ ಇಷ್ಟೊಂದು ಅಪಾರ ಸಂಖ್ಯೆಯಲ್ಲಿ ಮುದ್ರಿತವಾದ ಫೋಟೋ ಬೇರೊಬ್ಬರದ್ದಿಲ್ಲ. ಜೀಸಸ್‌, ಪ್ರಿನ್ಸಸ್‌ ಡಯಾನಾ, ಮಡೋನ್ನಾ, ರೊನಾಲ್ಡೋ, ಮೆಸ್ಸಿ, ತೆಂಡೂಲ್ಕರ್‌… ಊಹೂ, ಯಾವ ದಂತಕತೆಗಳೂ ಈ ಪ್ರಮಾಣದಲ್ಲಿ ಹೈಕಳ ಎದೆಮೇಲೆ ಹುಟ್ಟಿಬರಲೇ ಇಲ್ಲ. ಡ ವಿನ್ಸಿಯ ಮೋನಾಲಿಸಾ, ಹಾಲಿವುಡ್‌ನ‌ ಚೆಂದುಳ್ಳಿ ಮರ್ಲಿನ್‌ ಮನ್ರೊà ಚಿತ್ರಗಳಿಗೂ ಈ ಪರಿಯ ಪುನರ್ಜನ್ಮ ಸಿಕ್ಕಿಲ್ಲ. ಪೇಂಟ್‌ನಲ್ಲಿ, ಪ್ರಿಂಟೆಡ್‌ನ‌ಲ್ಲಿ, ಡಿಜಿಟಲೈಸ್ಡ್ ಆಗಿ, ಎಂಬ್ರಾಯxರಿ ಮಾಡಿಸಿದ, ಟ್ಯಾಟೂವಿನಲ್ಲಿ, ಸಿಲ್ಕ… ಸ್ಕ್ರೀನ್‌ನಲ್ಲಿ, ಸ್ಕೆಚ್‌ ರೂಪದ ಮಾದರಿಗಳಲ್ಲಿನ “ಚೆ’ ಫೋಟೋದ ರೂಪಾಂತರಕ್ಕೆ ಒಂದು ದೀರ್ಘ‌ ದಂಡ ನಮಸ್ಕಾರ. ನಗರದ ಗೋಡೆಯ ಇಟ್ಟಿಗೆ ಮೇಲೆ, ಕಲ್ಲುಗಳ ಮೇಲೆ ಅವನ ಚೆಲುವು ಮಾತಾಡಿಸುತ್ತದೆ. ದೊಡ್ಡ ಸಮೂಹವೊಂದು ಹೋರಾಟಕ್ಕೆ ಹೊರಟಾಗ, ಗಾಳಿಯಲ್ಲಿ ಅವನ ಪೋಸ್ಟರುಗಳು ತೇಲುತ್ತವೆ. ನಟ ಅಮೀರ್‌ಖಾನನ ಎದೆಯಲ್ಲಿ, ಮಾಡೆಲ್‌ ಗಿಸೆಲ್‌ ಬುಂಚೆನ್ನಳ ಮಾದಕ ಬಿಕಿನಿಯಲ್ಲೂ ಅದೇ ನಿಷ್ಠುರ ನೋಟ ಬೀರುವ ಚೆ, “ಕ್ರಾಂತಿ ಎಂದರೆ- ಕ್ಯೂಬಾ ಎಂದರೆ’ ಏನೆಂದು ಗೊತ್ತೇ ಇಲ್ಲದ ಹುಡುಗರ ಎದೆಯಲ್ಲೂ ಅರಳಿ, ದುರುಗುಟ್ಟುವನು.

ಆಗಿನ ಕ್ಯಾಮೆರಾಗಳು ಚೆ ಬದುಕಿನ ನೂರಾರು ಫೋಟೋಗಳನ್ನು ಸೆರೆಹಿಡಿದಿದ್ದರೂ, ಈ ಫೋಟೋಗೆ ದಕ್ಕಿದ ರಾಜಮರ್ಯಾದೆಯೇ ಬೇರೆ. ಜಗತ್ತಿನ ಚರಿತ್ರೆಯನ್ನು ಕಂಪಿಸುವಂತೆ ಮಾಡಿದ ಕೆಲವೇ ಕೆಲವು ಸಾರ್ವಕಾಲಿಕ ಚಿತ್ರಗಳ ಪೈಕಿ “ಚೆ’ನ ಈ ಚಿತ್ರವೂ ಒಂದು. ಇದನ್ನು ಕ್ಲಿಕ್ಕಿಸಿದ ಫೋಟೋಗ್ರಾಫ‌ರ್‌ ಅಲ್ಬಟೋì ಕೋರ್ಡಾ ಮೂಲತಃ ನಟಿಯರ, ರೂಪದರ್ಶಿಯರ ಫೋಟೋ ತೆಗೆಯುವವನು. ಹವಾನಾ ದೇಶದ ಸುಂದರಿಯರೆಲ್ಲ ಫೋಟೋಶೂಟ್‌ಗೆ ಈತನ ಸ್ಟುಡಿಯೋ ಎದುರು ಕ್ಯೂ ನಿಲ್ಲುತ್ತಿದ್ದ ದಿನಗಳಲ್ಲಿ, ಈತ ದುಡ್ಡಿಗಾಗಿ ವಿವಾಹ, ಅಂತ್ಯಕ್ರಿಯೆಯ ಫೋಟೋಗಳನ್ನೂ ತೆಗೆಯುತ್ತಿದ್ದ. ಮುಂದೆ “ರೆವಲ್ಯೂಶನ್‌ ಪತ್ರಿಕೆಗೆ ಫೋಟೋಗ್ರಾಫ‌ರ್‌ ಆಗಿ ಸೇರಿದ ಮೇಲೂ, ಅಲ್ಲಿನ ಸಂಪಾದಕರು ಈತನನ್ನು ಕಳುಹಿಸಿಕೊಟ್ಟಿದ್ದು ಒಂದು ಅಂತ್ಯಕ್ರಿಯೆ ಸಮಾರಂಭಕ್ಕೇ..!

ಫೋಟೋ ಸೆರೆಯಾದದ್ದು…
ಅದು ಮಾರ್ಚ್‌ 4, 1960. ಹವಾನಾದಲ್ಲಿ ಲಂಗರು ಹಾಕಿದ್ದ ಫ್ರೆಂಚ್‌ ಸ್ಟೀಮರ್‌ ನೌಕೆ “ಲ ಕ್ಯೂಬರ್‌’ ಮೇಲೆ ಪ್ರಬಲ ಬಾಂಬ್‌ ಒಂದು ಸ್ಫೋಟಗೊಂಡಿತು. ಅದು ಅಮೆರಿಕದ ಇಂಟೆಲಿಜೆನ್ಸ್‌ನ ಕೈವಾಡ ಎಂಬ ಶಂಕೆ ಈಗಲೂ ಇದೆ. ಆಗ ಅಲ್ಲಿ 136 ಮಂದಿ ಸಾವನ್ನಪ್ಪಿದ್ದರು. ಹಾಗೆ ಮಡಿದವರನ್ನೆಲ್ಲ ಮರುದಿನ ಒಂದೇ ಜಾಗದಲ್ಲಿ ಸಮಾಧಿ ಮಾಡುವಾಗ, ಕ್ಯೂಬಾದ ಕಮ್ಯುನಿಸ್ಟ್‌ ಹೋರಾಟಗಾರ ಫಿಡೆಲ್‌ ಕ್ಯಾಸ್ಟ್ರೋ ಒಂದು ಐತಿಹಾಸಿಕ ಭಾಷಣ ಮಾಡಿದ್ದರು. ಅದಕ್ಕಾಗಿ ಅಲ್ಲೊಂದು ದೊಡ್ಡ ವೇದಿಕೆಯನ್ನೇ ಹಾಕಲಾಗಿತ್ತು. ಕ್ಯಾಸ್ಟ್ರೋ, “ತಾಯ್ನೆಲ ಇಲ್ಲವೇ ಮರಣ’ ಎಂದು ಕರೆಕೊಟ್ಟ ಆ ಐತಿಹಾಸಿಕ ಭಾಷಣದಿಂದ ಅಲ್ಲಿ ಹೋರಾಟದ ಚಿತ್ರಣವೇ ಬದಲಾಗಿತ್ತು. ಕ್ಯಾಸ್ಟ್ರೋ ಭಾಷಣ ಮಾಡಿದ ಅದೇ ವೇದಿಕೆಯ ಹಿಂಬದಿಯಲ್ಲಿ ಚೆ ಗುವಾರ ನಿಂತಿದ್ದರು. ಚೆ ಕಣ್ಣುಗಳು ಏನನ್ನೋ ಹೇಳಲು ಹೊರಟಿದ್ದವು. ಆ ಮುಖದಲ್ಲಿ ಕಂಡ ಕ್ರಾಂತಿಯ ಕಾವ್ಯವನ್ನೇ ಕೋರ್ಡಾ, ಎರಡೇ ಎರಡು ಶಾಟ್‌ಗಳಲ್ಲಿ ಸೆರೆಹಿಡಿದಿದ್ದರು. ಅಂದು ಕೋರ್ಡಾ ಬಳಸಿದ್ದು, ಪ್ಲಸ್‌- ಎಕ್ಸ್‌ ಫಿಲ್ಮ್ ರೀಲ್‌ ಲೋಡ್‌ ಮಾಡಿದ್ದ, 90 ಎಂಎಂ ಟೆಲಿಫೋಟೋ ಲೆನ್ಸ್‌ ಅಳವಡಿಸಿದ್ದ, ಲೀಕಾ ಎಂ2 ಕ್ಯಾಮೆರಾವನ್ನ.

ಅವತ್ತು ಕೋರ್ಡಾ, ಒಂದು ವರ್ಟಿಕಲ್‌ ಮತ್ತೂಂದು ಹಾರಿಝಾಂಟಲ್‌ ಆಗಿ ಒಟ್ಟು ಎರಡು ಫೋಟೋ ಕ್ಲಿಕ್ಕಿಸಿದ್ದರು. ಒಂದರಲ್ಲಿ ಚೆ ಗುವಾರ ಒಂಟಿಯಾಗಿ ನಿಂತಿದ್ದರೂ, ಯಾರ¨ªೋ ನೆರಳು ಆತನ ಹಿಂಬದಿಯಲ್ಲಿ ಮೂಡಿತ್ತು. ತೊನೆದಾಡುತ್ತಿದ್ದ ತಾಳೆಮರದ ಗರಿಗಳ ನೆರಳೂ ಅವನ ಭುಜದ ಮೇಲೆ ಇಣುಕಿದ್ದವು. ಮತ್ತೂಂದು ಚಿತ್ರದಲ್ಲಿ, ಚೆ ಮುಂಭಾಗದಲ್ಲಿ ಯಾರ¨ªೋ ತಲೆ ಕಾಣಿಸಿಕೊಂಡಿತ್ತು. ಕೋರ್ಡಾ ಇವೆರಡೂ ಚಿತ್ರಗಳನ್ನೂ ತಮ್ಮ ಪತ್ರಿಕೆಯ ಫೋಟೋ ಎಡಿಟರ್‌ ಮುಂದಿಟ್ಟಿದ್ದರು.

ಆದರೆ, ಇವು ಮುಂದೊಂದು ದಿನ ಜಗತ್ತನ್ನು ಪ್ರಭಾವಿಸುವ, ಯುವ ಮನಸ್ಸುಗಳು ಅಪ್ಪಿಕೊಳ್ಳುವ ಚಿತ್ರಗಳು ಎಂಬುದನ್ನು ಅಂದು ಗುರುತಿಸದೇ ಹೋಯಿತು “ರೆವಲ್ಯೂಶನ್‌’ ಪತ್ರಿಕೆ. ಅಂತ್ಯಕ್ರಿಯೆ ಸಮಾರಂಭದ ಸಚಿತ್ರ ವರದಿಯಲ್ಲಿ ಫಿಡೆಲ… ಕ್ಯಾಸ್ಟ್ರೋನ ಭಾಷಣಗಳ ಫೋಟೋ ಜೊತೆಗೆ ಇನ್ನಿಬ್ಬರು ಕ್ರಾಂತಿಕಾರಿಗಳಾದ ಸಾಟ್ರೆì ಮತ್ತು ಡಿ ಬ್ಯೂವೊಯೆರ್‌ ಇದ್ದ ಫೋಟೋಗಳನ್ನಷ್ಟೇ ಹಾಕಿಕೊಂಡಿತ್ತು. ಒಂದು ವರ್ಷದ ಬಳಿಕ ಕೋರ್ಡಾ ಆ ಮೊದಲ ಫೋಟೋವನ್ನು ತಮ್ಮ ಸ್ಟುಡಿಯೋದ ಗೋಡೆಗೆ ನೇತುಹಾಕಿದರು. ಆಪ್ತಸ್ನೇಹಿತರಿಗೆ ನೆಗೇಟಿವ್‌ ಕಾಪಿಗಳನ್ನು ಮುದ್ರಿಸಿ, ಫ್ರೆಮ… ಹಾಕಿಸಿ, ಗಿಫ್ಟ್ ಕೊಡುತ್ತಿದ್ದರು.

ಎಲ್ಲಿದ್ದೀಯ ಚೆ?
ಬೊಲಿವಿಯಾದ ದಂಡಯಾತ್ರೆಯಲ್ಲಿ ಇನ್ನೇನು ಚೆ ಸಾಯುತ್ತಾರೆ ಎನ್ನುವ ಎರಡೇ ಎರಡು ತಿಂಗಳ ಮುಂಚೆ, ಅಂದರೆ 1967ರ ಆಗಸ್ಟ್‌ ಕೊನೆಯ ವಾರದಲ್ಲಿ ಈ ಫೋಟೋ ಮೊಟ್ಟ ಮೊದಲ ಬಾರಿಗೆ ಪತ್ರಿಕೆಯಲ್ಲಿ ಅಚ್ಚಾಯಿತು. ಭೂಗತನಾಗಿದ್ದ ಈ ಕ್ರಾಂತಿಕಾರನನ್ನು ನೆನಪಿಸಿಕೊಂಡು, “ಪ್ಯಾರಿಸ್‌ ಮ್ಯಾಚ್‌’ ಎನ್ನುವ ಫ್ರೆಂಚ್‌ ಪತ್ರಿಕೆ ಇದೇ ಫೋಟೋ ಬಳಸಿಕೊಂಡು, “ಎಲ್ಲಿದ್ದೀಯ ಚೆ?’ ಎಂಬ ಲೇಖನ ಪ್ರಕಟಿಸಿತ್ತು. ಆದರೆ, ಫೋಟೋ ತೆಗೆದ ಕೋರ್ಡಾಗೆ ಮಾತ್ರ ಆ ಪತ್ರಿಕೆ ಗೌರವಧನವನ್ನೇ ಕೊಡಲಿಲ್ಲ! ಪೇಪರಿನ ಫೋಟೋದಿಂದ ಪ್ಲಕಾರ್ಡುಗಳನ್ನು ಮಾಡಿಕೊಂಡ ಕ್ರಾಂತಿಕಾರರು, ಹವಾನಾ ಮತ್ತು ಬೊಲಿವಿಯಾದ ಬೀದಿಗಳಲ್ಲಿ ಮೆರವಣಿಗೆ ನಡೆಸಿದ್ದರು. ಅಲ್ಲಿಂದಲೇ ಶುರುವಾಗಿದ್ದು, “ಚೆ’ ಫೋಟೋದ ಚೇತೋಹಾರಿ ಯುಗ.

ಬೊಲಿವಿಯಾದ ತಗ್ಗುಪ್ರದೇಶ “ಯೂರೋ’ದಲ್ಲಿ ಗುಂಡೇಟು ತಿಂದು, ಮರುದಿನ ಮಡಿದ “ಚೆ’ ಈ ಫೋಟೋದ ಮೂಲಕ ಮತ್ತೆ ಜೀವಪಡೆದರು. ನಂತರದ ದಿನಗಳಲ್ಲಿ ಪ್ಯಾರಿಸ್‌, ರೋಮ…, ಬೆಲ್‌ಫಾಸ್ಟ್‌ನ ವಿದ್ಯಾರ್ಥಿ ಚಳವಳಿಗಳಿಗೆ “ಚೆ’ನ ಇದೇ ಫೋಟೋ ಫ‌ಲಕವಾಯಿತು. ಬರೀ ಪಾಶ್ಚಾತ್ಯ ನಗರಿಗಳೇ ಏಕೆ, ಭಾರತದ ಈಗಿನ ಅದೆಷ್ಟೋ ವಿದ್ಯಾರ್ಥಿ ಚಳವಳಿಗಳಲ್ಲೂ “ಚೆ’ನ ಈ ಫೋಟೋ ಕಾಣಿಸಿಕೊಳ್ಳುತ್ತದೆ. ನೀವು ಒಮ್ಮೆ ದೆಹಲಿಯ ಜವಾಹರಲಾಲ್‌ ನೆಹರು ವಿವಿಯ (ಜೆಎನ್‌ಯು) ಹಾಸ್ಟೆಲ್‌ ಕೋಣೆಗಳಿಗೆ ಹೋಗಿಬಂದರೆ, ಅಲ್ಲಿ 10ರಲ್ಲಿ 6 ಮಂದಿಯ ಕೋಣೆಗಳಲ್ಲಿ “ಚೆ’ ಫೋಟೋ ಕಾಣಿಸುತ್ತದೆ. ಥೇಟ್‌ “ಚೆ’ ರೀತಿಯೇ ಗಡ್ಡಬಿಟ್ಟುಕೊಂಡ ಮಾರ್ಕ್ಸ್ವಾದಿ ಹುಡುಗರು ಅಲ್ಲಿ ಸಿಗುತ್ತಾರೆ. ಆದರೆ, “ಚೆ’ಯನ್ನು ಸಿದ್ಧಾಂತದ ಆಚೆಗೂ ನೋಡುವ ಕಣ್ಣುಗಳಿವೆ.

ಮಾರುಕಟ್ಟೆಯ “ಕ್ರಾಂತಿ’!
“ಚೆ’ಯನ್ನೇ ಮುಂದಿಟ್ಟುಕೊಂಡು, ಮಾರುಕಟ್ಟೆಯೂ ಕ್ರಾಂತಿ ಮಾಡುತ್ತದೆ. ನೀವು “ಇಬೇ’ನಲ್ಲಿ “ಚೆ’ ಎಂದು ಟೈಪಿಸಿದರೆ, 26,000 ಫ‌ಲಿತಾಂಶಗಳು ತೆರೆದುಕೊಳ್ಳುತ್ತವೆ. ಅಮೇಜಾನ್‌ನಲ್ಲೂ ಈ ಸಂಖ್ಯೆ 10,000 ದಾಟುತ್ತದೆ. ಭಾವುಟದಿಂದ ಐಫೋನ್‌ ಕೇಸ್‌ವರೆಗೆ, ಸಿಗರೇಟು, ಲೈಟರ್‌, ಟಿ ಶರ್ಟು, ಟೋಪಿ, ಪದಕ, ಟ್ಯಾಟೂ ಸ್ಟಿಕ್ಕರ್‌… ಹೀಗೆ ಯುವ ಸಮೂಹ ಯಾವ ಕ್ರೇಜ್‌ಗೆಲ್ಲ ಅಂಟಿಕೊಂಡಿದೆಯೋ, ಅಲ್ಲೆಲ್ಲ “ಚೆ’ ಅಚ್ಚಾಗಿದ್ದಾನೆ.

ವಿಶ್ವವನ್ನು “ಚೆ’, ಹೀಗೆ ಬಗೆ ಬಗೆಯಲ್ಲಿ ಮುತ್ತಿಕೊಂಡು 50 ವರುಷವಾಗಿದೆ. ಅವನಿಲ್ಲದ ಈ ಜಗತ್ತಿಗೂ 50 ವರುಷವೇ ಆಗಿದೆ. ಕ್ರಾಂತಿಯ, ಸಿದ್ಧಾಂತದ ಎಲ್ಲೆ ಮೀರಿ, ಅವನ ಹೆಸರೇ ಗೊತ್ತಿಲ್ಲದ ಯುವಕರ ಎದೆಯೊಳಗೂ “ಚೆ’ ಅರಳಿದ್ದಾನೆ. ಈಗಿನ ಪೀಳಿಗೆಯ ಕಣ್ಣಿಗೆ ಆತ ಕೇವಲ ಫ್ಯಾಶನ್‌ ಐಕಾನ್‌. ಆ ಫೋಟೋ ನೋಡಿದಾಗ ಅಲ್ಲೊಂದು ಛಲ, ಆತ್ಮನಂಬಿಕೆ ಮಾತ್ರವೇ ಕಾಣಿಸುತ್ತದೆ. ಬದುಕಿಗೆ ಒಂದು ಉದ್ದೇಶವಿದೆ, ಹೋರಾಡಿ ಅದನ್ನು ದಕ್ಕಿಸಿಕೋ ಎಂದು ಆ ಫೋಟೋ ಹೇಳುತ್ತದೆ.ಹಾಗಾಗಿ, ಟಿಶರ್ಟಿನಲ್ಲಿರುವ “ಚೆ’ ಯಾರೆಂದು ಗೊತ್ತೇ ಇಲ್ಲದವನಿಗೂ, ಗುವಾರ ಒಬ್ಬ ಹೀರೋ! ಈ ಕ್ರಾಂತಿಗೆ ಯಾವ ಹೆಸರಿಡೋಣ?

– ಕೀರ್ತಿ ಕೋಲ್ಗಾರ್‌

ಟಾಪ್ ನ್ಯೂಸ್

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

1-wqeweeqwqewq

MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ

congress

Congress; ಕೋಲಾರಕ್ಕೆ ಗೌತಮ್‌ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!

rape

Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ: ರಾಜಸ್ಥಾನಿ ಮಹಿಳೆ !

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ

1ewewwewqqewqeqe

India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್‌ ಹೇಳಿಕೆಗೆ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

1-wqeweeqwqewq

MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ

congress

Congress; ಕೋಲಾರಕ್ಕೆ ಗೌತಮ್‌ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!

32

Politics: ಟಿಕೆಟ್‌ ಹಂಚಿಕೆ ಮರುಪರಿಶೀಲಿಸಿ ಎಂದ ವೀಣಾ ಬೆಂಬಲಿಗರಿಗೆ ಸಿಎಂ ತಿರುಗೇಟು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.