ಎರ್ರಾ ಟೀಚರ್‌…


Team Udayavani, Jan 29, 2019, 12:30 AM IST

m-11.jpg

“ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರದಲ್ಲಿ ಇನ್ನಿಲ್ಲದಂತೆ ಕಾಡಿದ ಪಾತ್ರ “ಮಮ್ಮೂಟ್ಟಿ’ಯದ್ದು. ಆ ಪುಟಾಣಿಯ ಹೆಸರು ಸಂಪತ್‌. ಅವನು ಓದುತ್ತಿರುವ ಶಾಲೆಗೆ, ಶಿಕ್ಷಕ ತರಬೇತಿಗೆಂದು ಹೋದಾಗ, ಆದ ತಮ್ಮ ಅನುಭವ ಪ್ರಸಂಗಗಳನ್ನು ಇಲ್ಲಿ ಲೇಖಕಿ ಹಂಚಿಕೊಂಡಿದ್ದಾರೆ…

ಕೆಲ ತಿಂಗಳ ಹಿಂದಿನ ಕತೆ. ಆ ಶಾಲೆಗೆ ಹೋಗಿ ಮೂರು ದಿವಸದ ಬಳಿಕ ಪಾಠ ಬೋಧನೆಗೆಂದು, 8ನೇ “ಸಿ’ ತರಗತಿಗೆ ಮಾರ್ಗದರ್ಶಕರೊಂದಿಗೆ ಹೋಗಿದ್ದೆ. ಜೊತೆಯಲ್ಲಿ ಶಿಕ್ಷಕ ತರಬೇತಿ ಕೇಂದ್ರದ ಅಧ್ಯಾಪಕಿಯೂ ಇದ್ದರು. ಅಬ್ಟಾ! ತರಗತಿ ಪೂರ್ತಿ ವಿದ್ಯಾರ್ಥಿಗಳು. ಪಾಠ ಬೋಧಿಸುತ್ತಿರುವ ವೇಳೆ ಕೆಲವು ವಿದ್ಯಾರ್ಥಿಗಳ “ತಾಳಮದ್ದಳೆ’ ಬೇರೆ! ಆ ದಿವಸ ನಾನೇನೂ ಮಾತಾಡಿರಲಿಲ್ಲ.

ಮರುದಿನ ಮತ್ತೆ ಹೋಗಿದ್ದೆ. ಆಗಲೂ ನಿನ್ನೆಯ ಹಾಗೆ ವಿದ್ಯಾರ್ಥಿಗಳು ತಂಟೆ ಮಾಡುತ್ತಿದ್ದರು. ಬೊಬ್ಬೆ ಹೊಡೆದು ಪಾಠ ಮಾಡುತ್ತಿರಬೇಕಾದ್ರೆ ವಿದ್ಯಾರ್ಥಿಗಳು ಗಮನಿಸದೇ ಹೋದರೆ, ಯಾವ ಅಧ್ಯಾಪಕಿಗಾದರೂ ಸಿಟ್ಟು ಬರುವುದು ಸಹಜ ತಾನೆ? ನಾನಂತೂ ಇದ್ದ ಪ್ರಶ್ಶರ್‌ನಲ್ಲಿ ಗದರಿಸಿದ್ದೇ ಗದರಿಸಿದ್ದು. ಅಧ್ಯಾಪಕರಿದ್ದರೂ ನಾನು ಗಮನಿಸಲೇ ಇಲ್ಲ. ವಿದ್ಯಾರ್ಥಿಗಳು ಸುಮ್ಮನಾದರು. ಆದರೆ, ನನ್ನ ಮೇಲೆ ಅವರಿಗೆ ಕೋಪ ಬಂದಿತ್ತು. ಮಧ್ಯಾಹ್ನ ವಿದ್ಯಾರ್ಥಿಗಳ ಮುಖದಲ್ಲಿ ಒಂಚೂರೂ ನಗುವಿರಲಿಲ್ಲ. ಎಲ್ಲರ ಮುಖ ಊದಿಕೊಂಡಿತ್ತು.

ಹೀಗೆ ಎರಡು ದಿವಸದ ಬಳಿಕ ಒಬ್ಬ ಬಾಲಕ, “ಟೀಚರ್‌’ ಎಂದು ಕರೆಯುತ್ತಾ, ನನ್ನತ್ತಲೇ ಬಂದು ನಿಂತ. ಆತನ ಕರೆಗೆ ಓಗೊಟ್ಟು ನಾನೂ ನಕ್ಕೆ. ಮರುದಿನ ಭೋಜನದ ವೇಳೆಗೆ ಅದೇ ಬಾಲಕ ಮತ್ತೆ ಕಾಣಿಸಿಕೊಂಡ. ಜೊತೆಯಲ್ಲಿದ್ದ ಆತನ ಗೆಳೆಯನಲ್ಲಿ “ಎರ್ರಾ ಟೀಚರ್‌’ (ಮಲೆಯಾಳದಲ್ಲಿ) ಎಂದು ನನ್ನತ್ತ ಬೆರಳು ತೋರಿ ನಗು ಬೀರಿದ ನನಗಂತೂ ಖುಷಿಯೋ ಖುಷಿ. ನಾನು ಎಲ್ಲೇ ಇದ್ದರೂ ಆ ಬಾಲಕ ಓಡಿಬಂದು, “ಟೀಚರ್‌’ ಎಂದು ಕರೆದು ನಗುತ್ತಿದ್ದ. ಆದರೆ, ಆತನನ್ನು ನನ್ನ ತರಗತಿಯಲ್ಲಿ ನೋಡಿಯೂ ಇರಲಿಲ್ಲ; ನಾನು ಆತನ ತರಗತಿಗೆ ಹೋಗಿಯೂ ಇರಲಿಲ್ಲ. ಆದ್ದರಿಂದ ಅವನ ಹೆಸರನ್ನು ಕೇಳಿದ್ದೆನಷ್ಟೇ. 

ಮರುದಿನ ಮಧ್ಯಾಹ್ನದ ವೇಳೆಗೆ ಆ ಬಾಲಕನ ಜೊತೆಗಿದ್ದ ಗೆಳೆಯನನ್ನು ಮಾತ್ರ ಗಮನಿಸಿದೆ. ಆದರೆ, ನನ್ನ ಬಳಿ ನಗುತ್ತಾ ಬಂದಿದ್ದ ಬಾಲಕನಿರಲಿಲ್ಲ. ಹಾಗಾಗಿ, ಆತನ ಗೆಳೆಯನಲ್ಲಿ ವಿಚಾರಿಸಿದಾಗ, “ಅವನು ಫಿಲ್ಮ್ನಲ್ಲಿ ನಟಿಸಲು ಹೋಗಿದ್ದಾನೆ’ ಎಂಬ ಉತ್ತರ ಬಂತು. ನಾನು ಶಾರ್ಟ್‌ ಫಿಲ್ಮೋ, ನಾಟಕವೋ ಇರಬೇಕೆಂದು ಸುಮ್ಮನಾದೆ. ಇದಾದ ಬಳಿಕ ಆತ ಎಲ್ಲಿ ಹೋದನೋ, ನಾ ತಿಳಿಯದಾದೆ.

ಇಷ್ಟಾಗುವ ಹೊತ್ತಿಗೆ ನನ್ನ ತರಗತಿಯ ವಿದ್ಯಾರ್ಥಿಗಳೆಲ್ಲರ ಮುಖದಲ್ಲಿಯೂ ಹೂ ನಗು ಅರಳಿತ್ತು. ವಿದ್ಯಾರ್ಥಿಗಳೊಂದಿಗೆ ಚೆನ್ನಾಗಿಯೇ ಬೆರೆತು ಹೋಗಿದ್ದೆ. ದಿನಗಳುರುಳಿ ಓಣಂ ಹಬ್ಬದ ಸಲುವಾಗಿ ವಿದ್ಯಾರ್ಥಿಗಳಿಗೆ ರಜೆ ನೀಡಲಾಗಿತ್ತು. ತರಗತಿ, ಪಾಠ- ಇವು ಯಾವುದೂ ಇಲ್ಲದ ಕಾರಣ ಮನೆಯಲ್ಲಿ ಹಾಯಾಗಿದ್ದೆ. ಅದೊಂದು ದಿವಸ ನನ್ನ ಗೆಳತಿಯರಿಬ್ಬರು ಬಂದು, “ಕಾಸರಗೋಡಿನ ಕುರಿತು ಫಿಲ್ಮ್ ನಾಡಿದ್ದು ಬಿಡುಗಡೆ ಆಗ್ತಿದೆ, ಹೋಗೋಣಾÌ?’ ಎಂದು ನನ್ನಲ್ಲಿ ಕೇಳಿದರು. ನನ್ನ ಕೈಯಲ್ಲಿ ನಯಾಪೈಸೆ ಇಲ್ಲದಿದ್ದುದರಿಂದ, “ನಾನಿಲ್ಲಪ್ಪಾ’ ಎಂದು ಕೈಮುಗಿದೆ. ಅವರಿಬ್ಬರೂ ಫಿಲ್ಮ್ನ ಟ್ರೇಲರ್‌ ನೋಡಿದ್ದ ಕಾರಣ ಅದನ್ನೇ ಚರ್ಚಿಸುತ್ತಾ, “ಟ್ರೇಲರ್‌ ತುಂಬಾ ಚೆನ್ನಾಗಿದೆ, ಕಾಸರಗೋಡಿನ ಕುರಿತು ಹೇಳುವ ಆ ವಾಯೆ ಮಜಾ ಇದೆ’ ಎಂದೊಡನೆಯೇ ಟ್ರೇಲರ್‌ ವೀಕ್ಷಿಸಿದ್ದೆ.

ಟ್ರೇಲರ್‌ನಲ್ಲಿ ಕಣ್ಣುಗಳು ಮುಂದಿನ ದೃಶ್ಯಗಳನ್ನು ಸವಿಯುತ್ತಿರಲು, ಟೊಪ್ಪಿ ಹಾಕಿಕೊಂಡ ಹುಡುಗನನ್ನು ಕೂಡಲೇ ಗಮನಿಸಿತು. ಅವನೇ, ನನ್ನಲ್ಲಿ ನಗುತ್ತಿದ್ದ ಆ ಪುಟ್ಟ ಬಾಲಕ. ಆ ಕ್ಷಣಗಳಲ್ಲಿ ನನ್ನ ಕಣ್ಣುಗಳನ್ನೇ ನಂಬಲಾಗಲಿಲ್ಲ. ಅದೆಷ್ಟು ಖುಷಿಯಾಗಿತ್ತು ಗೊತ್ತಾ? ಜತೆಯಲ್ಲಿದ್ದ ಗೆಳತಿಯರಲ್ಲಿ ಆತನ ಕುರಿತು ಹೇಳಿಕೊಂಡು ಸಂಭ್ರಮಿಸಿದೆ. ಅವತ್ತೇ ನಿರ್ಧರಿಸಿದೆ- ಸಾಲ ಮಾಡಿಯಾದರೂ ಫಿಲ್ಮ್ ನೋಡಲೇಬೇಕೆಂದು. ಆ ರಾತ್ರಿ ಕಣ್ಣಿಗೆ ನಿದ್ದೆ ಹತ್ತಲು ಗಂಟೆಗಳೇ ಬೇಕಾದವು. ಹೀಗೆ ಶಾಲಾ ಬಾಗಿಲು ತೆರೆಯುವುದಕ್ಕೆ ಮುನ್ನ ಗೆಳತಿಯರೊಂದಿಗೆ “ಸರಕಾರಿ ಹಿರಿಯ ಪ್ರಾಥಮಿಕ ಶಾಲೆ- ಕಾಸರಗೋಡು’ ಚಿತ್ರ ನೋಡಲು ಹೋಗಿದ್ದೆ.

ರಜೆ ಕಳೆದು ತರಗತಿಗಳು ಆರಂಭಗೊಂಡವು. ಮತ್ತೆ ನನ್ನ ಪುಟ್ಟ ನಾಯಕನಿಗಾಗಿ ಕಾದು ಕುಳಿತೆ. ಅದೊಂದು ದಿವಸ ಊಟ ಮುಗಿಸಿಕೊಂಡು ಕೈ ತೊಳೆಯುತ್ತಿರುವಾಗ ಒಬ್ಟಾಕೆ ಬಂದು, “ಟೀಚರ್‌, ಶಾಲೆಗೆ ಮಮ್ಮೂಟ್ಟಿ ಬಂದಿದ್ದಾನೆ’ ಎಂದೊಡನೆಯೇ 8ನೇ “ಸಿ’ ತರಗತಿಯತ್ತ ಓಡಿದ್ದೆ. ಸಂಪತ್‌ ತನ್ನ ಸಹಪಾಠಿಗಳ ಜತೆ ಮಾತಾಡುತ್ತಿದ್ದ. ನಾನು ಹೋಗಿ ಬಾಗಿಲ ಬಳಿ ನಿಂತಿರುವುದನ್ನು ಗಮನಿಸಿದ ಆತನ ಗೆಳೆಯ ವೈಶಾಖ್‌, ಸಂಪತ್‌ನಲ್ಲಿ ವಿಷಯ ತಿಳಿಸಿದ. ತತ್‌ಕ್ಷಣ ಆತ ಓಡಿ ಬಂದು “ಟೀಚರ್‌ ಹೇಳಿ’ ಎನ್ನುತ್ತಾ ಮಾತಾಡಿಸಿದ. ಶಾಲಾ ವಿದ್ಯಾರ್ಥಿ ಸಮೂಹವೇ ಮೈದಾನದಲ್ಲಿ ಸೇರಿತ್ತು. ಹೆಚ್ಚೇನೂ ಮಾತಾಡಲು ಸಾಧ್ಯವಾಗಲಿಲ್ಲ. ಕಾರಣ, ಉಳಿದವರೆಲ್ಲ “ಮಮ್ಮೂಟ್ಟಿ… ಮಮ್ಮೂಟ್ಟಿ’ ಎನ್ನುತ್ತಾ ಮಾತಾಡೋಕೆ ಪ್ರಯತ್ನಿಸುತ್ತಿದ್ದರು. ಇದನ್ನೆಲ್ಲ ಆತನ ಹೆತ್ತವರು ಮೂಕವಿಸ್ಮಿತರಾಗಿ ವೀಕ್ಷಿಸುತ್ತಿದ್ದರು. ಆಗ ಸಂಪತ್‌ನ ಅಮ್ಮ, “ಅವನು ಸೋಮವಾರದಿಂದ ಶಾಲೆಗೆ ಬರ್ತಾನೆ’ ಅಂದರು. “ಇನ್ನು ಬರ್ತಾನಲ್ಲ’ ಎಂಬ ಖುಷಿಯಲ್ಲಿ “ಸರಿ’ ಎನ್ನುತ್ತಾ ಹೆತ್ತವರಿಗೂ, ಸಂಪತ್‌ಗೂ ವಿದಾಯ ಹೇಳಿದೆ. 

ಮುಂದೆ ಸಂಪತ್‌ ನಮ್ಮೊಂದಿಗಿದ್ದ ದಿನಗಳಾಗಿದ್ದವು. ನಾನು ಎಲ್ಲೇ ಇದ್ದರೂ ಓಡಿಬಂದು ಕೈಹಿಡಿದು, “ಟೀಚರ್‌’ ಎಂದು ಅವನದ್ದೇ ಧಾಟಿಯಲ್ಲಿ ಹೇಳುತ್ತಿದ್ದ. ಆವಾಗ ನಮ್ಮ ಮಾತುಕತೆ ಶುರುವಾಗುತ್ತಿತ್ತು. ಕೆಲವೊಂದು ಸಲ ಏನು ಮಾತಾಡಬೇಕೆಂದೂ ತೋಚುತ್ತಿರಲಿಲ್ಲ. ಇದರಿಂದ ನನ್ನ ಸಹಪಾಠಿಗಳಿಗೆ ಕೊಂಚ ಅಸೂಯೆ ಆಗಿದ್ದೂ ಉಂಟು. ನಾನು ಅವನಿಗೆ ಹೇಗೆ, ಯಾಕೆ ಇಷ್ಟವಾದೆನೋ ಗೊತ್ತಿಲ್ಲ. ಆದರೆ, ಆತ ನನ್ನ ಪಾಲಿಗೆ, “ಟೀಚರ್‌’ ಎಂದು ಕರೆದು ಪ್ರೀತಿ ತೋರಿದ ಮೊದಲ ವಿದ್ಯಾರ್ಥಿ, “ಮೈ ಪೆಟ್‌ ಸ್ಟೂಡೆಂಟ್‌’.

ಅರ್ಪಿತಾ, ಬಿ.ಇಡಿ ವಿದ್ಯಾರ್ಥಿನಿ, ಕಾಸರಗೋಡು

ಟಾಪ್ ನ್ಯೂಸ್

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.