ಮನೆಗೆ ಬಾರೋ, ಬೆರಳು ತೋರೋ

Team Udayavani, Apr 16, 2019, 6:00 AM IST

ಕೆಲಸ ಕೆಲಸ ಅಂತ ಬೆಂಗಳೂರಿನಂಥ ನಗರಗಳ ಪಂಜರಗಳಲ್ಲಿ ಸಿಲುಕಿರುವ ಮಗನನ್ನು ಇಲ್ಲೊಬ್ಬಳು ತಾಯಿ ಪತ್ರದ ಮೂಲಕ ಊರಿಗೆ ಕರೆಯುತ್ತಿದ್ದಾಳೆ. ಅದಕ್ಕೂ ನೆಪ, ಈ ಮತದಾನವೆಂಬ ಹಬ್ಬ…

ಹೇಗಿದ್ದೀಯಾ ಮಗನೇ?
ನಿನ್ನನ್ನು ನೋಡಿ 6 ತಿಂಗಳಾದವು. ಯುಗಾದಿಗೆ ಬರುತ್ತೀ ಅಂದುಕೊಂಡಿದ್ದೆ. ಕಡೇ ಘಳಿಗೆಯಲ್ಲಿ ಅದೇನೋ ತುರ್ತು ಕೆಲಸ ಬಂತೆಂದು ಬರಲಾಗುತ್ತಿಲ್ಲವೆಂದು ತಿಳಿಸಿದೆ. “ಫೈನಾನ್ಷಿಯಲ್‌ ಇಯರ್‌ ಎಂಡ್‌, ಹೆವೀ ಕೆಲಸ’ ಅಂತೆಲ್ಲ ಹೇಳಿ ತಪ್ಪಿಸಿಕೊಂಡೆ. ನಾನೂ ಅದನ್ನು ಕೇಳಿ, ಸುಮ್ಮನಿದ್ದೆ. ಮೊನ್ನೆ ರಾಮನವಮಿಗೂ ನಿನ್ನನ್ನು ನೆನೆಸಿಕೊಂಡೆ ಕಣೋ. ಕೊನೆಗೆ, ನಿನ್ನ ಪಾಲಿನ ಕೋಸಂಬರಿಯನ್ನು, ನಿನ್ನ ತಂಗಿಗೆ ಕೊಟ್ಟು ಸಮಾಧಾನ ಪಟ್ಟೆ.

ಪ್ರತಿ ಹಬ್ಬಗಳನ್ನೂ ಹೀಗೇ “ಕೆಲ್ಸ ಕೆಲ್ಸ’ ಎನ್ನುತ್ತಾ ತಪ್ಪಿಸಿಕೊಳ್ಳುತ್ತೀ. ಯಾವ ಹಬ್ಬವನ್ನಾದರೂ ತಪ್ಪಿಸಿಕೋ. ನನಗೆ ಬೇಜಾರಿಲ್ಲ. ಮತದಾನದ ಹಬ್ಬವನ್ನು ಮಾತ್ರ ತಪ್ಪಿಸಿಕೊಳ್ಬೇಡ ಮಗನೇ. ಕಡೇಪಕ್ಷ ವೋಟ್‌ ಹಾಕುವುದಕ್ಕಾದರೂ ಮನೆಗೆ ಬಾರೋ. ನೀನೇನೋ ಆ ಬೆಂಗಳೂರಿನಲ್ಲಿ ಹೋಗಿ ಕೂರುತ್ತೀಯ. ಇಲ್ಲಿ ನಾವು ಓಡಾಡುವ ದಾರಿ ನೋಡಿದೆಯಾ? ನಮ್ಮ ಜತೆ ನಿನ್ನ ಮತವೂ ಸೂಕ್ತ ಅಭ್ಯರ್ಥಿಗೆ ಬಿದ್ದರೆ, ಆ ರಸ್ತೆ ಸರಿ ಆಗುವುದೆಂಬ ಭರವಸೆ ನನಗೆ.

ಹಾಗೆ ಬರುವಾಗ ನೀನೊಬ್ಬನೇ ಬರಬೇಡ. ಬೆಂಗಳೂರಿನಲ್ಲಿ ಸೆಟ್ಲ ಆಗಿರುವ ನಮ್ಮೂರಿನ ಗ್ಯಾಂಗ್‌ ಇದೆಯಲ್ಲ… ಅದೇ ನಿನ್ನ ಗೆಳೆಯರು ಅವರನ್ನೂ ಜತೆಗೆ ಕರಕೊಂಡು ಬಾ. ನಿನ್ನ ಮುದ್ದು ಬೆರಳಲ್ಲಿ ಶಾಯಿ ನೋಡುವ ಆಸೆ ನನ್ನದು. ಅದರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು, ನೀನೂ ಸಿದ್ಧನಿದ್ದೀ ಎಂದು ಭಾವಿಸುವೆ.

ನಿನ್ನ ದಾರಿ ಕಾಯುತ್ತಿರುವ
ಅಮ್ಮ


ಈ ವಿಭಾಗದಿಂದ ಇನ್ನಷ್ಟು

  • ಪಕ್ಕದಲ್ಲಿರುವವರೆಲ್ಲ ಗೈಡ್‌ ತೆಗೆದು, ಕದ್ದು ಕದ್ದು ನೋಡಿ ಬರೆಯುತ್ತಿರುವುದನ್ನು ಗಮನಿಸಿದೆ. ನನಗೂ ತಡೆಯಲಾಗಲಿಲ್ಲ. ನಾನು ಓದದೇ ಇದ್ದ ಒಂದು ಗಾದೆ ಮಾತಿನ ವಿವರಣೆಯ...

  • ಅಂದು ಅಮ್ಮನ ಜೊತೆ ಮುಂಬೈಗೆ ಹೊರಟಿದ್ದೆ. ಕುಡಚಿ ರೈಲು ನಿಲ್ದಾಣದಲ್ಲಿ ನಿಂತು ಸಹ್ಯಾದ್ರಿ ಎಕ್ಸ್‌ಪ್ರೆಸ್‌ಗೆ ಕಾಯುತ್ತಿದ್ದೆವು. ಸಮಯ 8 ಗಂಟೆ. ಅಮ್ಮ ಮಣಭಾರದ...

  • ಚಿತ್ರ: ಡೆಸೀರ್ಟೊ ಅವಧಿ: 88 ನಿಮಿಷ ನಿರ್ದೇಶನ: ಜೋನಾಸ್‌ ಕ್ಯುರಾನ್‌ ವಿಶಾಲ ಮರುಭೂಮಿ. ಮೈ ಸುಡುವ ಬಿಸಿಲಿನ ನಡುವೆ, ಆ ಗುಂಪು ಭಾರವಾದ ಹೆಜ್ಜೆ ಹಾಕುತ್ತಿರುತ್ತೆ....

  • ನಿನ್ನನ್ನು ನೋಡಿದ ಆ ಕ್ಷಣದಿಂದ ಇಲ್ಲಿಯವರೆಗೆ, ನಂಗೆ ಏನೇನಾಗ್ತಿದೆಯೋ ನನಗೇ ಗೊತ್ತಾಗ್ತಿಲ್ಲ. ಒಮ್ಮೊಮ್ಮೆ ಹುಚ್ಚನಂತೆ ಒಬ್ಬೊಬ್ಬನೇ ನಕ್ಕರೆ, ಮಗದೊಮ್ಮೆ...

  • ಎಲ್ಲರೂ ಓಡಿ ಹೋಗಿ ಬಸ್‌ಗೆ ಕೈ ಮಾಡಿ ನಿಂತೆವು. ಡ್ರೈವರ್‌, ಬಸ್ಸನ್ನೇನೋ ನಿಲ್ಲಿಸಿದ. ಆದರೆ, ಅದರಲ್ಲಿ ಒಂದು ಸಣ್ಣ ನೊಣ ಕೂಡ ಹೋಗಲು ಜಾಗ ಇಲ್ಲದಷ್ಟು ಜನ. ನನ್ನ ಫ್ರೆಂಡ್‌...

ಹೊಸ ಸೇರ್ಪಡೆ