ಆತ್ಮೀಯ ಗೆಳೆತನ

Team Udayavani, Oct 15, 2019, 4:02 AM IST

ಮನೆಯನೆಂದೂ ಕಟ್ಟದಿರು, ಕೊನೆಯನೆಂದೂ ಮುಟ್ಟದಿರು ಎನ್ನುವ ಹಾಗೆ, ಮನೆಮಠ ಏನೂ ಇಲ್ಲದೆ ತನ್ನ ಜೀವನಪೂರ್ತಿ ಜಗತ್ತು ಸುತ್ತುತ್ತಿದ್ದ ಗಣಿತಜ್ಞ ಪಾಲ್‌ ಏರ್ಡಿಶ್‌. ನಿಮಗೆ ಏರ್ಡಿಶ್‌ರನ್ನು ಭೇಟಿಯಾಗಬೇಕೆ? ನೀರುವಲ್ಲೇ ಇದ್ದು ಕಾಯಿರಿ. ಒಂದಿಲ್ಲೊಂದು ದಿನ ಏರ್ಡಿಶ್‌ ನಿಮ್ಮ ಊರನ್ನೂ ಹಾದುಹೋಗಬಹುದು! ಎಂಬ ಮಾತು ಗಣಿತ ವಲಯದಲ್ಲಿ ಪ್ರಚಲಿತದಲ್ಲಿತ್ತು. ಅವರಿಗೆ, ಪ್ರಪಂಚದ ತುಂಬಾ ಗೆಳೆಯರಿದ್ದರು. ಯಾವ ಊರಿಗೆ ಹೋದರೂ ಅವರನ್ನು ಗೆಳೆಯರು ಸ್ಪರ್ಧೆಗೆ ಬಿದ್ದಂತೆ ಮುಗಿಬಿದ್ದು ಆತಿಥ್ಯದ ವ್ಯವಸ್ಥೆ ಮಾಡುತ್ತಿದ್ದರು. ಅಲ್ಲದೆ, ಏರ್ಡಿಶ್‌ 500ಕ್ಕೂ ಹೆಚ್ಚು ಜನರೊಡನೆ ಸೇರಿ ಸಂಶೋಧನಾ ಲೇಖನಗಳನ್ನು ಬರೆದರು. ಆ ಅಷ್ಟೂ ಜನರೊಡನೆ ಪತ್ರ, ಫೋನುಗಳ ಮೂಲಕ ನಿರಂತರ ಸಂಪರ್ಕದಲ್ಲಿದ್ದರು. ತಮಾಷೆಯೆಂದರೆ, ತನ್ನ ಎಲ್ಲಾ ಗೆಳೆಯರ ಫೋನ್‌ ನಂಬರುಗಳನ್ನು ಪುಸ್ತಕ ನೋಡದೆಯೇ ಡಯಲ್‌ ಮಾಡುವಷ್ಟು ಅವರ ನೆನಪಿನ ಶಕ್ತಿ ಚುರುಕಾಗಿತ್ತು. ಒಮ್ಮೆ ಯಾವುದೋ ಸಂಕಿರಣದಲ್ಲಿ ಸಿಕ್ಕಿದ ಗಣಿತಜ್ಞನೊಡನೆ ಮಾತಾಡುತ್ತ ನೀವೆಲ್ಲಿಯವರು? ಎಂದು ಕೇಳಿದರು ಏರ್ಡಿಶ್‌. ವ್ಯಾಂಕೋವರ್‌ನವನು – ಉತ್ತರಿಸಿದ ಆತ. ಓಹ್‌ ಹೌದೆ? ಹಾಗಾದರೆ, ನಿಮಗೆ ಅಲ್ಲಿನ ಗಣಿತಜ್ಞ ಎಲಿಯೆಟ್‌ ಮೆಂಡೆಲ್ಸನ್‌ ಪರಿಚಯ ಇದೆ ಅಂದುಕೊಳ್ಳುತ್ತೇನೆ. ನನ್ನ ತೀರಾ ಆತ್ಮೀಯ ಗೆಳೆಯ ಆತ ಎಂದರು ಏರ್ಡಿಶ್‌. ಪ್ರೊಫೆಸರ್‌ ಏರ್ಡಿಶ್‌ ಅವರೆ, ನಾನು ನಿಮ್ಮ ಗೆಳೆಯ ಎಲಿಯೆಟ್‌ ಮೆಂಡೆಲ್ಸನ್‌! – ಉತ್ತರ ಬಂತು.

– ರೋಹಿತ್‌ ಚಕ್ರತೀರ್ಥ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಅದೇ ಬಸ್‌ ಸ್ಟ್ಯಾಂಡ್‌ನ‌ 10ನೇ ಫ್ಲಾಟ್‌ ಫಾರಂನಲ್ಲಿ ಕೈಯಲ್ಲೊಂದು ಮೊಬೈಲ್‌ ಹಿಡಿದು ಕೂತಿದ್ದೆ. ಕ್ಲಿಕ್‌ ಶಬ್ದದೊಂದಿಗೆ ಎರಡು ವರ್ಷದಿಂದಿನ ಫೋಟೋಗಳನ್ನು...

  • ಮೌಲ್ಯಮಾಪನ ಮಾಡುವಾಗ ನವರಸ ಪ್ರಸಂಗಗಳು ನಡೆಯುತ್ತವೆ. ಕೆಲವು ಸಲ ನಗಬೇಕು, ಕೆಲವು ಸಲ ಅಳಬೇಕು ಅನಿಸುತ್ತದೆ. ಇನ್ನೂ ಕೆಲ ಬಾರಿ ಸಿಟ್ಟು ಬಂದು, ಇವರಿಗೆಲ್ಲ ಹೇಗೆ...

  • ಬಹಳಷ್ಟು ಯುವಕರು ಮುಲಾಜಿಗೆ ಬೀಳುತ್ತಾರೆ. ಹಿಂಜರಿಕೆ ಇದಕ್ಕೆ ಕಾರಣ. ಇಷ್ಟ ಇಲ್ಲ ಅಂತ ಅದ್ಹೇಗೆ ಹೇಳ್ಳೋದು? ನಾಳೆಯಿಂದ ನಮ್ಮ ಬಿಜಿನೆಸ್‌ ನಿಲ್ಲಿಸಿಬಿಡೋಣ. ನಾನು...

  • ಕ್ರೀಂ, ಪೌಡರ್‌ ಹಾಕಿ ಮುಖದ ಅಂದವನ್ನು ತೀಡುತ್ತೀವಲ್ಲ. ಅದೇ ರೀತಿ, ನಮ್ಮ ಮನೆಯ ಒಳಾಂಗಣವನ್ನು ಶೃಂಗಾರ ಮಾಡುವವರು ಈ ಇಂಟೀರಿಯರ್‌ ಡಿಸೈನರ್‌ಗಳು. ಮನೆಗೆ ಬಳಿಯುವ...

  • "ನೀನು ಸಗಣಿ ಎತ್ತಾಕೋಕ್ಕೆ, ಗಂಜಲ ಬಾಚಕ್ಕೆ ಹೋಗಬೇಕಾಗುತ್ತೆ' ಮಕ್ಕಳು ಓದದೇ ಇದ್ದರೆ ನಮ್ಮ ಹಿರಿಯರು ಹೀಗಂಥ ಹೇಳ್ಳೋರು. ನಿಜ ಏನೆಂದರೆ, ಈ ರೀತಿ ಸಗಣಿ, ಗಂಜಲದ ಸಂಘ...

ಹೊಸ ಸೇರ್ಪಡೆ