ಡಿಸೈನ್‌ ಯುವರ್‌ ಲೈಫ್

Team Udayavani, Sep 17, 2019, 5:59 AM IST

ಜಾಸ್ತಿ ಬರಬೇಕು ಅನ್ನೋದು ಉದ್ಯೋಗದ ನಿಯಮ. ಹೀಗಾಗಿ, ನಮ್ಮ ಬದುಕನ್ನು ನಾವೇ ಚಂದಗಾಣಿಸಿಕೊಳ್ಳಬೇಕು. ಅದಕ್ಕೆ ಡಿಸೈನಿಂಗ್‌ ಕೋರ್ಸ್‌ ಮಾಡಬೇಕು. ಬೆಳಗ್ಗೆ ಎದ್ದು ಹಲ್ಲುಜ್ಜುವ ಬ್ರಷ್‌ನಿಂದ ಹಿಡಿದು, ಓಡಾಡುವ ಕಾರಿನ ತನಕ ಎಲ್ಲದರಲ್ಲಿಯೂ ಡಿಸೈನಿಂಗ್‌ನದ್ದೇ ಮೇಲು ಗೈ. ಹೀಗಾಗಿ, ಡಿಸೈನ್‌ ಕೋರ್ಸ್‌ಗಳನ್ನು ಮಾಡಿದರೆ ಕೆಲಸ, ಸಂಬಳ ಗ್ಯಾರಂಟಿ.

ನೀವು ಮೊನ್ನೆ ಹೊಸದಾಗಿ ಬಂದ ಆ್ಯಪಲ್‌ ಮೊಬೈಲ್‌ ಗಮನಿಸಿದ್ದೀರಾ? ಕೈಯಲ್ಲಿ ಹಿಡಿದಾಕ್ಷಣ ಸರ್ರನೆ ಕಂಗಳನ್ನು ಸೆಳೆಯುತ್ತದೆ. ಭಾರವಿಲ್ಲದ, ಆಕರ್ಷಣೀಯ ನೋಟ ಅದರದು. ಹಾಗೇನೇ, ವೆಸ್ಪಾ ಕಂಪನಿಯ ಟೂ ವ್ಹೀಲರ್‌ ನೋಡಿದ್ದೀರ? ಅದರ ಮೈಲೇಜನ್ನೆಲ್ಲಾ ಪಕ್ಕಕ್ಕೆ ಇಡಿ. ಅದರ ಹೊರ ನೋಟ ಎಂಥವರನ್ನೂ ಆಕರ್ಷಿಸುತ್ತದೆ. ಎಷ್ಟೋ ಜನ ಅದರ ಲುಕ್ಕಿಗೆ ಲವ್ವಾಗಿ ಸ್ಕೂಟರ್‌ ಕೊಂಡದ್ದೂ ಉಂಟು.

ಹೆಚ್ಚು ಕಮ್ಮಿ ಇವತ್ತಿನ ಬೈಕ್‌ಗಳು, ಕಾರ್‌ಗಳು ಮಾರಾಟವಾಗುತ್ತಿರುವುದು ಹೊರನೋಟದ ಮಾಟಕ್ಕೆ. ಅಂದರೆ, ಔಟ್‌ಲುಕ್‌ ಡಿಸೈನಿಂಗ್‌ಗೆ. ಆ್ಯಪಲ್‌ ಮೊಬೈಲ್‌ ಅನ್ನು ಅಂದಗೊಳಿಸಿದ್ದು ಜಾನಿ ಅನ್ನೋ ಎಂಜಿನಿಯರ್‌. ವೆಸ್ಪಾ ಬೈಕಿನ ಅಂದ ತೀಡಿದ್ದು ಕಾರ್ಡಿನೋ. ಡಿ ಅನ್ನೋ ವ್ಯಕ್ತಿ. ಇವರನ್ನು ಎಂಜಿನಿಯರ್‌ ಅನ್ನೋದಕ್ಕಿಂತ ಪ್ರಾಡಕ್ಟ್ ಡಿಸೈನರ್‌ ಅಂದರೇನೆ ಹೆಚ್ಚು ಸೂಕ್ತ.

ಪ್ರತಿದಿನ ನಾವು ಬಳಸುವ ಟೂತ್‌ ಬ್ರಷ್‌ನಿಂದ ಹಿಡಿದು, ಓಡಾಡುವ ಕಾರುಗಳ ಅಂದವನ್ನು ತೀಡಿ, ತೀಡುವುದು, ತೀರ್ಮಾನಿಸುವುದು ಇವರೇ. ಇಂದು ನಾವು ನೋಡುವ, ಉಪಯೋಗಿಸುವ ಪ್ರತಿಯೊಂದು ವಸ್ತುವೂ ಸಹಾ ವಿನ್ಯಾಸದ ವ್ಯಾಖ್ಯಾನ ಪರಿಮಿತಿಗೆ ಒಳಪಡಿಸುತ್ತದೆ. ಅದು ವಸ್ತ್ರವಾಗಿರಬಹುದು, ಉಡುಗೆ ತೊಡುಗೆಗಳಾಗಿರಬಹುದು. ಗ್ಲಾಸ್‌, ಚರ್ಮಚ ಉತ್ಪನ್ನ, ಆಭರಣ, ಪಿಂಗಾಣಿ, ಪೀಠೊಪಕರಣ, ವಾಹನಗಳು, ಪುಸ್ತಕದ ಮುಖಪುಟ… ಹೀಗ,ೆ ಮಾನವನಿಂದ ಉಪಯೋಗಿಸಲ್ಪಡುವ ಪ್ರತಿಯೊಂದು ವಸ್ತುವೂ ಕೂಡ ವಿನ್ಯಾಸಕಾರನ ಮಾಂತ್ರಿಕ ಸ್ಪರ್ಷಕ್ಕೆ ಒಳಗಾಗಿ ವಿನೂತನ ಶೈಲಿಯಿಂದ ಮಾರುಕಟ್ಟೆಗೆ ಪ್ರವೇಶಿಸುತ್ತದೆ. ಈ ರೀತಿ ವೈವಿಧ್ಯಮಯ ಡಿಸೈನ್‌ ಮೂಲಕ ಗ್ರಾಹಕರನ್ನು ಸೆಳೆಯಲು ಕೋರ್ಸ್‌ಗಳಿವೆ.

ಹೌದು, ಇವತ್ತು ನೋಟ ಪರರಿಚ್ಚೆ ಅನ್ನೋ ಮಾತಿಗೆ ಬೆಲೆ ಬಂದಿದೆ. ಒಳಗೇನಿದೆ ಅನ್ನೋದಕ್ಕಿಂತ, ಹೊರಗೆ ಹೇಗೆ ಕಾಣುತ್ತದೆ ಅನ್ನೋದು ಬಹಳ ಮುಖ್ಯ. ನೀವು ಮನೆ ಕಟ್ಟಿದರೆ, ಮನೆ ಹೇಗಿದೆ ಅನ್ನೋದಕ್ಕಿಂತ, ಮನೆ ಹೇಗೆ ಕಾಣಬೇಕು ಅನೋದು ಬಹಳ ಮುಖ್ಯವಾಗುತ್ತಿದೆ. ಹೊರನೋಟಗಳೇ ಇವತ್ತಿನ ಮಾರ್ಕೆಟ್‌ನ ಬ್ರಾಂಡಿಂಗ್‌ ಕಂಟೆಂಟ್‌. ಹಾಗಾಗಿ, ಎಲ್ಲ ರೀತಿಯ ಡಿಸೈನರ್‌ಗಳಿಗೆ ಬಹಳ ಬೆಲೆ ಇದೆ. ಮನೆ ಕಟ್ಟುವುದು ಎಂಜಿನಿಯರ್‌ ಆದರೂ, ಒಳಾಂಗಣವನ್ನು ಸುಂದರಗೊಳಿಸುವುದು ಆರ್ಕಿಟೆಕ್‌ ಎಂಜಿನಿಯರ್‌.

ಪಿಯುಸಿ ಪ್ಲಸ್‌
ಇಂದಿನ ವ್ಯಾಪಾರ, ಕೈಗಾರಿಕೆ ಮತ್ತು ಉದ್ಯಮಿಗಳು ತಮ್ಮ ಉದ್ಯಮಕ್ಕೆ ಸಂಬಂಧಿಸಿದಂತೆ ಮತ್ತು ವಸ್ತು ನಿಷ್ಟ ದೃಷ್ಟಿಕೋನವನ್ನು ವಿನ್ಯಾಸಕರ ಹುಡುಕಾಟದಲ್ಲಿದ್ದಾರೆ. ನೀವು ಯಾವುದೇ ವಸ್ತುವನ್ನು ವಿಷಯವನ್ನು ವಿಭಿನ್ನ ದೃಷ್ಟಿಕೋನದಿಂದ ವಿಶಿಷ್ಟ ಆಯಾಮದಿಂದ ನೋಡಬಲ್ಲಿರಾದರೆ, ನಿಮಗೆ ವಿನ್ಯಾಸ ಕ್ಷೇತ್ರದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ.

ಹೀಗಾಗಿಯೇ, ಇಂಡಸ್ಟ್ರಿಯಲ್‌ ಡಿಸೈನಿಂಗ್‌ನಲ್ಲಿ ಪ್ರಾಡಕ್ಟ್ ಡಿಸೈನಿಂಗ್‌ಗೆ ಒಳ್ಳೆ ಬೇಡಿಕೆ ಇದೆ. ಪಿಯುಸಿ ಮುಗಿಸಿದವರು ಈ ಕೋರ್ಸ್‌ ಮಾಡಬಹುದು, ಆರುತಿಂಗಳ ಸರ್ಟಿಫಿಕೆಟ್‌ ಕೋರ್ಸ್‌ನಿಂದ ಹಿಡಿದು, ಐದು ವರ್ಷಗಳ ಎಂಜಿನಿಯರಿಂಗ್‌, ಪಿಎಚ್‌ಡಿ ಪದವಿ ತನಕ ಶೈಕ್ಷಣಿಕ ಅವಕಾಶಗಳಿವೆ. ವಿನ್ಯಾಸ ಶಿಕ್ಷಣದಲ್ಲಿ ಹಲವಾರು ಉಪಶಾಖೆಗಳಿವೆ. ಡಿಪ್ಲೊಮೊದಿಂದ ಡಿಗ್ರಿಯವರೆಗೂ ಅಭ್ಯಾಸ ಮಾಡುವ ಅವಕಾಶವಿದೆ.

ಪಿಯುಸಿ ಪಾಸಾದವರು ಐದು ವರ್ಷಗಳ ಕಾಲ ಡಿಸೈನಿಂಗ್‌ ಕೋರ್ಸ್‌ ಪೂರೈಸಲು ಅವಕಾಶವಿದೆ. ಅಧ್ಯಯನ ಸಂದರ್ಭದಲ್ಲಿ ಹೆಚ್ಚಾಗಿ- ರಿಸರ್ಚ್‌, ಡಿಸೈನ್‌ ಮತ್ತು ಅಭಿವೃದ್ಧಿ, ಹಿಸ್ಟರ್‌ ಆಫ್ ಇಂಡಸ್ಟ್ರಿಯನ್‌ ಡಿಸೈನ್‌, ಕಂಪ್ಯೂಟರ್‌ ಬಳಸಿ ಮಾಡಬಹುದಾದ ಡಿಸೈನ್‌ಗಳು, ಲಿಬರಲ್‌ ಆರ್ಟ್ಸ್ ಇಂಥ ವಿಚಾರಗಳ ಕಡೆ ಒತ್ತು ಕೊಡುತ್ತಾರೆ.

ಬಿಹೈಂಡ್‌ದ ಬಾಕ್ಸ್‌ ಅಂದರೆ ವಿಭಿನ್ನವಾಗಿ ಚಿಂತಿಸುವವರಿಗೆ ಇಲ್ಲಿ ಹೇರಳ ಅವಕಾಶಗಳು ಉಂಟು. ಇಲ್ಲಿ ಮಾಡಲ್‌ಗ‌ಳನ್ನು ವಿದ್ಯಾರ್ಥಿಗಳ ಕೈಯಿಂದಲೇ ಮಾಡಿಸಿ, ಅದನ್ನು ಉತ್ಪನ್ನಗಳನ್ನಾಗಿಸುವುದರ ಬಗ್ಗೆ ಹೇಳಿಕೊಡುವುದೂ ಉಂಟು.

ಇಂಡಸ್ಟ್ರಿಯಲ್‌ ಡಿಸೈನರ್‌ ಆಗಲು ಗ್ರಾಹಕರ ವಸ್ತುಗಳು, ಮೆಡಿಕಲ್‌ ಡಿವೈಸ್‌ಗಳು, ಡಿಸೈನ್‌ ಪ್ಯಾಕೇಜಿಂಗ್‌, ಫ‌ನೀìಚರ್‌ಗಳು, ಮಕ್ಕಳು ಆಟಿಕೆಗಳ ಡಿಸೈನ್‌… ಹೀಗೆ ವಿಸ್ತಾರವಾಗಿ ಹರಡಿಕೊಂಡಿದೆ. ಇವತ್ತು ಎಲ್ಲವೂ ಪ್ರತ್ಯೇಕ ಕ್ಷೇತ್ರಗಳಾಗಿರುವುದರಿಂದ ಬೇಡಿಕೆಯೂ ಹೆಚ್ಚು.

ಎಲ್ಲೆಲ್ಲಿ ಡಿಸೈನಿಂಗ್‌ ಕೋರ್ಸ್‌?
ತಮ್ಮ ಅಭಿರುಚಿ ಮತ್ತು ಆಸಕ್ತಿಗೆ ಅನುಗುಣವಾಗಿ ವಿದ್ಯಾರ್ಥಿಗಳು ಬೇಕಾದುದನ್ನು ಆಯ್ಕೆ ಮಾಡಿಕೊಳ್ಳಬಹುದು. ವಿನ್ಯಾಸ ಕ್ಷೇತ್ರದಲ್ಲಿ ಶಿಕ್ಷಣ ಪಡೆದ ಪರಿಣತರು ಸಂಬಂಧಪಟ್ಟ ಕಂಪನಿಗಳನ್ನು ಉದ್ಯೋಗಕ್ಕಾಗಿ ಪರಿಗಣಿಸಬಹುದು ಅಥವಾ ತನ್ನದೇ ಆದ ಸಲಹಾ ಕಂಪನಿಗಳನ್ನು ಸ್ಥಾಪಿಸಿ ಸ್ವಯಂ ಉದ್ಯೋಗ ಮಾಡಬಹುದು. ಇಂದು ಹೆಚ್ಚಿನ ಉದ್ಯೋಗಗಳು ಯಾಂತ್ರೀಕೃತವಾಗುತ್ತಿವೆ. ಆದರೆ, ಸೃಜನಶೀಲ, ವಿನ್ಯಾಸಗಳಿಗೆ ಸಂಬಂಧಿಸಿದ ಕ್ಷೇತ್ರ ಎಂದಿಗೂ ಯಾಂತ್ರೀಕೃತ ಗೊಳ್ಳಲು ಸಾಧ್ಯವೇ ಇಲ್ಲ. ಈ ಕ್ಷೇತ್ರದಲ್ಲಿ ಮಾನವ ಬುದ್ಧಿ ಮತ್ತೆಗೆ ಮಾತ್ರ ಪ್ರಾಶಸ್ತ್ಯ. ಹಾಗಾಗಿ, ವಿನ್ಯಾಸಕಾರರಿಗೆ ಉದ್ಯೋಗ ಬರ ಆಗಲು ಸಾಧ್ಯವೇ ಇಲ್ಲ. ಅವರೆಲ್ಲಾ ತಮ್ಮ ಸೃಜನಶೀಲತೆಯಿಂದಾಗಿ ಹೆಚ್ಚಿನ ಹಣ ಮತ್ತು ಹೆಸರು ಸಂಪಾದಿಸಬಹುದು.

ಇಂದು ಕರ್ನಾಟಕದಲ್ಲಿ ಹಲವಾರು ವಿನ್ಯಾಸಕ್ಕೆ ಸಂಬಂಧಿಸಿದ ಕೋರ್ಸ್‌ ನಡೆಸುವ ಶೈಕ್ಷಣಿಕ ಸಂಸ್ಥೆಗಳು ಹೀಗಿವೆ. ಬೆಂಗಳೂರಿನಲ್ಲಿ, ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಫ್ಯಾಷನ್‌ ಟೆಕ್ನಾಲಜಿ, ಎಂ.ಎಸ್‌. ರಾಮಯ್ಯ ಇನ್‌ಸ್ಟಿಟ್ಯೂಟ್‌ ಆಫ್ ಅಪ್ಲಾಯ್ಡ ಸೈನ್ಸ್‌, ಪಿಇಎಸ್‌ ವಿವಿ, ಜೈನ್‌ಕಾಲೇಜು, ಅಲ್ಲದೇ ಮುಂಬೈನಲ್ಲಿ ಡಿಸೈನಿಂಗ್‌ ಕೋರ್ಸ್‌ಗಾಗಿ ಇಂಡಿಯ್‌ ಸ್ಕೂಲ್‌ ಆಫ್ ಡಿಸೈನಿಂಗ್‌ ಅಂಡ್‌ ಇನೋವೇಷನ್‌ ಕಾಲೇಜಿದೆ. ಮೊಬೈಲ್‌, ವಾಹನ ತಯಾರಿಕಾ ಕಂಪೆನಿಗಳು. ಸಿವಿಲ್‌ ಎಂಜಿನಿಯರಿಂಗ್‌ ಮಾಡಿರುವವರು ಕ್ಯಾಡ್‌, ಥ್ರಿ ಡೈಮನ್ಸ್ ನಲ್‌ ಮಾಡಲಿಂಗ್‌ ತಿಳಿದಿರಬೇಕು.

ಇವತ್ತು ಇಂಡಸ್ಟ್ರಿಯಲ್‌ ಡಿಸೈನರ್‌ಗೆ ಬೆಲೆ ಇದೆ. ಆದರೆ, ಅವರು ಭಿನ್ನವಾಗಿ ಯೋಚಿಸಬೇಕು. ಮೊಬೈಲ್‌ ಕ್ಷೇತ್ರದ ಆ್ಯಪಲ್‌, ಸ್ಯಾಮ್‌ಸಂಗ್‌ನಂಥ ಕಂಪನಿಗಳು, ಟಾಟಾ, ಹುಂಡೈನಂಥ ಕಾರು ಉತ್ಪಾದಿಸುವ ಕಂಪನಿಗಳಲ್ಲಿ ಅತ್ಯುತ್ತಮ ಡಿಸೈನರ್‌ಗಳಿಗೆ ಅವಕಾಶಗಳಿವೆ. ಅಲ್ಲದೇ, ಟಿ.ವಿಯಲ್ಲಿ ಬರುವ ಜಾಹೀರಾತು ಕ್ಷೇತ್ರದಲ್ಲೂ ಕೂಡ ಪ್ರಾಡಕ್ಟ್ ಡಿಸೈನರ್‌ ಆಗಬಹುದು.

ಕೆ.ಜಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಸಂಗೀತ ಅನ್ನೋದು ದೇವರನ್ನು ಒಲಿಸಿಕೊಳ್ಳಲು ಇರುವ ಸಮೀಪದ ಹಾದಿ ಅಂತ ಅಂದುಕೊಳ್ಳುವ ಕಾಲ ಇದಲ್ಲ. ಈಗ ಸಂಗೀತ ಅನ್ನೋದು ಬದುಕಿನ ಬಂಡಿ ಹೊಡೆಯಲು ಇರುವ ಸಾಧನ. ಟಿ.ವಿಗಳಲ್ಲಿ,...

  • ಶಾಲೆ ಎಂದರೆ ಕೇವಲ ಸಿಲಬಸ್‌ ಸುತ್ತುತ್ತಲೇ ಓಡಾಡಿಕೊಂಡಿರುವ ಮೇಷ್ಟ್ರು, ವಿದ್ಯಾರ್ಥಿಗಳ ಕೂಟವಲ್ಲ.  ಇದ್ರ ‌ ಜೊತೆಗೆ, ಪಠ್ಯೇತರ ಚಟುವಟಿಕೆ ಕೂಡ ಮುಖ್ಯ. ಇದಕ್ಕೆ...

  • ಇಂಟರ್ವ್ಯೂ ಗೆ ಅಂತ ಹೋದಲ್ಲೆಲ್ಲ ಕರೆಯುತ್ತಿದ್ದ. ಸಿಕ್ಕಾಗಲೆಲ್ಲ ಡಬ್ಬ ಕೊಡುತ್ತಿದ್ದ. "ಇವೆಲ್ಲ ಮಾಮೂಲು ಗುರು' ಅಂತ ಆತ್ಮ ವಿಶ್ವಾಸ ತುಂಬುತ್ತಿದ್ದ. "ಅವತ್ತೂಂದು...

  • ಇತ್ತೀಚೆಗೆ ಯುವಕರು ಪ್ರತಿಯೊಂದು ವಿಚಾರವನ್ನೂ ಗೂಗಲ್‌ ಮಾಡಿ ನೋಡಿ ಕುತೂಹಲ ತಣಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ, ಅನಾರೋಗ್ಯ ಪೀಡಿತರಾಗಿದ್ದವರಲ್ಲಿ ಶೇ....

  • ಎಸ್‌ಎಸ್‌ಎಲ್‌ಸಿಯಲ್ಲಿ ಫೇಲಾದಾಗ ಇಡೀ ಸಮಾಜ ಅಂಕಗಳ ತಕ್ಕಡಿಯಲ್ಲಿ ಈ ಚಿದಾನಂದರನ್ನು ತೂಕ ಹಾಕಿತು. ಆಗ ಅವರು ತೀರ್ಮಾನ ಮಾಡಿದ್ದು; ನನ್ನಂತೆ ಫೇಲಾದವರು ಬದುಕಲ್ಲಿ...

ಹೊಸ ಸೇರ್ಪಡೆ