ಐ.ಎ.ಎಸ್‌. ಆಫೀಸರ್‌ ಆಗ್ತೀರಾ?

ಪರೀಕ್ಷೆಯ ರೂಪುರೇಷೆಗಳು

Team Udayavani, Jun 18, 2019, 5:00 AM IST

“ಮರಳಿ ಯತ್ನವ ಮಾಡು’ ಎನ್ನುವುದು ಪ್ರಸಿದ್ಧ ಕವಿವಾಣಿ. ಇದು ಐ.ಎ.ಎಸ್‌ ಕನಸು ಹೊತ್ತವರಿಗೆ ಚೆನ್ನಾಗಿ ಹೊಂದುತ್ತದೆ. ಅದೊಂದು ತಪಸ್ಸು ಎನ್ನುವುದರಲ್ಲಿ ಅನುಮಾನವೇ ಇಲ್ಲ. ಯುಪಿಎಸ್‌ಸಿ (ಯೂನಿಯನ್‌ ಪಬ್ಲಿಕ್‌ ಸರ್ವೀಸ್‌ ಕಮಿಷನ್‌) ಪ್ರತಿವರ್ಷ ನಾಗರಿಕ ಸೇವಾ ಹುದ್ದೆಗಳಾದ ಐ.ಪಿ.ಎಸ್‌, ಐ.ಎಫ್.ಎಸ್‌, ಐ.ಎ.ಎ.ಎಸ್‌, ಐ.ಆರ್‌.ಎಸ್‌, ಐ.ಡಿ.ಎಸ್‌, ಸಿ.ಎ.ಪಿ.ಎಫ್- ಎ.ಎಫ್ ಹಾಗೂ ಇನ್ನಿತರ ಕ್ಷೇತ್ರಗಳ ಅಭ್ಯರ್ಥಿ ನೇಮಕಾತಿ ಭರ್ತಿಗಾಗಿ, ಐ.ಎ.ಎಸ್‌ (ಇಂಡಿಯನ್‌ ಅಡ್ಮಿನಿಸ್ಟ್ರೇಟಿವ್‌ ಸರ್ವೀಸ್‌) ರಾಷ್ಟ್ರ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಿಕೊಂಡು ಬಂದಿದೆ.

ಈ ಪರೀಕ್ಷಾ ನಮೂನೆಯು ಮೂರು ಹಂತಗಳನ್ನು ಒಳಗೊಂಡಿದೆ…
* ಹಂತ 1- ಐ.ಎ.ಎಸ್‌ ಪ್ರಿಲಿಮ್ಸ… (ಪೂರ್ವಭಾವಿ ಪರೀಕ್ಷೆ)
* ಹಂತ 2- ಐ.ಎ.ಎಸ್‌ ಮೇನ್ಸ್ (ಮುಖ್ಯ ಪರೀಕ್ಷೆ)
* ಹಂತ 3- ಇಂಟರ್‌ವ್ಯೂ/ ವ್ಯಕ್ತಿತ್ವ ಪರೀಕ್ಷೆ

ಪ್ರಿಲಿಮ್ಸ… ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಮಾತ್ರ ಐ.ಎ.ಎಸ್‌ ಮೈನ್ಸ್ ಪರೀಕ್ಷೆಯಲ್ಲಿ ಕೂರಲು ಅರ್ಹರಾಗಿರುತ್ತಾರೆ. ಐ.ಎ.ಎಸ್‌ ಮೇನ್ಸ್ ಪ್ರಶ್ನೆ ಪತ್ರಿಕೆಯು ಏಳು ಮೆರಿಟ್‌ ಡಿರೈವಿಂಗ್‌ ಪತ್ರಿಕೆಗಳು ಹಾಗೂ ಎರಡು ಕ್ವಾಲಿಫೈಯಿಂಗ್‌ ಲಾಂಗ್ವೇಜ್‌ ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಐ.ಎ.ಎಸ್‌ ಪಠ್ಯಕ್ರಮವನ್ನು ಪರಿಶೀಲಿಸಿ..

ಪರೀಕ್ಷೆಯ ಹೆಸರು : ಸಿವಿಲ್‌ ಸರ್ವಿಸ್‌ ಎಕ್ಸಾಮಿನೇಷನ್‌
ಪರೀಕ್ಷೆಯ ಮಟ್ಟ: ರಾಷ್ಟ್ರ ಮಟ್ಟ
ನಿರ್ವಹಣಾ ಸಂಸ್ಥೆ: ಯೂನಿಯನ್‌ ಪಬ್ಲಿಕ್‌ ಸರ್ವೀಸ್‌ ಕಮಿಷನ್‌ (ಯು.ಪಿ.ಎಸ್‌.ಸಿ)
ಅಧಿಕೃತ ಜಾಲತಾಣ: www.upsconline.nic.in
ಪರೀಕ್ಷಾ ಆವೃತ್ತಿ: ವಾರ್ಷಿಕ
ಪರೀಕ್ಷಾ ವಿಧಾನ: ಆಫ್ಲೈನ್‌ (ಬರವಣಿಗೆ)
ನಿರೀಕ್ಷಿತ ನೋಂದಣಿ: ಸುಮಾರು 3 ಲಕ್ಷ

ವಯೋಮಿತಿ ಹಾಗೂ ಶೈಕ್ಷಣಿಕ ಅರ್ಹತೆ
ಪರೀಕ್ಷಾ ಅಧಿಕಾರಿಗಳು ನಿಗದಿಪಡಿಸಿದ ಕೆಲವು ನಿರ್ಣಾಯಕ ಅಂಶಗಳನ್ನು ಹೊಂದಿದ ಅಭ್ಯರ್ಥಿಗಳು ಮಾತ್ರ ಪರೀಕ್ಷೆಗೆ ಕೂರಲು ಅರ್ಹರಾಗಿರುತ್ತಾರೆ..

ಅರ್ಹತೆಯ ಮಾನದಂಡಗಳು
ರಾಷ್ಟ್ರೀಯತೆ, ವಯೋಮಿತಿ, ಶೈಕ್ಷಣಿಕ ಅರ್ಹತೆ, ದೈಹಿಕ ದೃಢತೆ, ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಪ್ರಯತ್ನಿಸಿದ ಸಂಖ್ಯೆ ಇವೆಲ್ಲವನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ..

ರಾಷ್ಟ್ರೀಯತೆ (ನ್ಯಾಷನಾಲಿಟಿ)
ಐ.ಎ.ಎಸ್‌ ಹಾಗೂ ಐ.ಪಿ.ಎಸ್‌ ಪರೀಕ್ಷೆ ಬರೆಯಲಿಚ್ಛಿಸುವ ಅಭ್ಯರ್ಥಿಗಳು ಭಾರತೀಯ ನಾಗರಿಕರಾಗಿರಬೇಕು. ಇನ್ನಿತರ ಹುದ್ದೆಗಳಿಗೆ ಪರೀಕ್ಷೆ ಬರೆಯಲಿಚ್ಛಿಸುವವರು ಕೆಳಗೆ ನೀಡಿರುವ ಯಾವುದಾದರೊಂದು ಕೆಟಗರಿಗೆ ಸೇರಿರಬೇಕು.
-ಭಾರತೀಯ ನಾಗರಿಕರು
-ನೇಪಾಳ ,ಭೂತಾನ್‌ ನಾಗರಿಕರು
-ಟಿಬೆಟಿಯನ್‌ ನಿರಾಶ್ರಿತರು (ಜನವರಿ 1, 1962ರ ಮುನ್ನ ಭಾರತಕ್ಕೆ ಬಂದು ನೆಲೆಸಿದವರು)
– ಭಾರತೀಯ ಮೂಲದವರಾಗಿದ್ದು, ಪಾಕಿಸ್ತಾನ, ಬರ್ಮಾ, ಶ್ರೀಲಂಕಾ, ಕೀನ್ಯಾ, ಉಗಾಂಡಾ ಇನ್ನೂ ಕೆಲ ದೇಶಗಳಿಂದ ಭಾರತಕ್ಕೆ ಶಾಶ್ವತವಾಗಿ ನೆಲೆಸಲು ವಲಸೆ ಬಂದವರು ಅರ್ಹರಾಗಿರುತ್ತಾರೆ.

ವಯೋಮಿತಿ
ಕನಿಷ್ಠ ವಯೋಮಿತಿ- 21 ವರ್ಷ
ಗರಿಷ್ಠ ವಯೋಮಿತಿ- 32 ವರ್ಷ
ಗರಿಷ್ಠ ವಯೋಮಿತಿಯನ್ನು ಮೀಸಲಾತಿಗೆ ಒಳಪಟ್ಟ ಅಭ್ಯರ್ಥಿಗಳಿಗೆ ಕೆಳಗಿನಂತೆ ವಿಸ್ತರಿಸಲಾಗಿದೆ.
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ- 5 ವರ್ಷಗಳು
ಒಬಿಸಿ- 3 ವರ್ಷಗಳು
ಎಕ್ಸ್ ಸರ್ವಿಸ್‌ಮನ್‌- 5 ವರ್ಷಗಳು

ಶೈಕ್ಷಣಿಕ ಅರ್ಹತೆ
ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ವಿದ್ಯಾಸಂಸ್ಥೆಯಿಂದ, ಯಾವುದೇ ವಿಷಯದಲ್ಲಿ ಪದವಿಯನ್ನು ಪಡೆದಿರತಕ್ಕದ್ದು.

ಅವಕಾಶಗಳೆಷ್ಟು?
ಜನರಲ್‌ ಕೆಟಗರಿಗೆ ಸೇರಿದ ಅಭ್ಯರ್ಥಿ 32 ವರ್ಷ ವಯಸ್ಸಿನವರೆಗೆ, ಗರಿಷ್ಠ ಆರು ಬಾರಿ ಐ.ಎ.ಎಸ್‌ ಪರೀಕ್ಷೆ ಬರೆಯಬಹುದು.
ಒಬಿಸಿ ಅಭ್ಯರ್ಥಿಗಳು 35 ವರ್ಷ ವಯಸ್ಸಿನವರೆಗೆ ಗರಿಷ್ಠ 9 ಬಾರಿ ಪರೀಕ್ಷೆ ಬರೆಯಬಹುದು
ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳು 37 ವರ್ಷ ವಯಸ್ಸಿನವರೆಗೆ ಎಷ್ಟು ಬಾರಿ ಬೇಕಾದರೂ ಪರೀಕ್ಷೆಗೆ ಹಾಜರಾಗಬಹುದು.

ಪರೀಕ್ಷಾ ಕೇಂದ್ರಗಳು
ಐ.ಎ.ಎಸ್‌ ಪೂರ್ವಭಾವಿ(ಪ್ರಿಲಿಮಿನರಿ) ಪರೀಕ್ಷೆಯನ್ನು ಭಾರತದ 72 ನಗರಗಳಲ್ಲಿ ನಡೆಸಲಾಗುತ್ತದೆ. ಕರ್ನಾಟಕದಲ್ಲಿ ಬೆಂಗಳೂರು ಮತ್ತು ಧಾರವಾಡ ಪೂರ್ವಭಾವಿ ಪರೀಕ್ಷಾ ಕೇಂದ್ರಗಳಾಗಿದ್ದವು. ಮುಖ್ಯ ಪರೀಕ್ಷೆ (ಮೇನ್ಸ್‌) ಭಾರತದ 24 ವಿವಿಧ ನಗರಗಳಲ್ಲಿ ನಡೆಯುತ್ತದೆ. ಈ ಕೇಂದ್ರಗಳಲ್ಲಿ ಬೆಂಗಳೂರು ಕೂಡಾ ಒಂದು. ಅಭ್ಯರ್ಥಿಗಳು ತಮಗೆ ಅನುಕೂಲವೆನಿಸಿದ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಬಹುದು. ಆದರೆ ಮಂಜೂರು ಮಾಡುವ ಅಥವಾ ಅದಕ್ಕೆ ಸಮ್ಮತಿ ಸೂಚಿಸುವ ಅಧಿಕಾರ ಯು.ಪಿ.ಎಸ್‌.ಸಿ ಆಯೋಗಕ್ಕಿರುತ್ತದೆ.

ಅರ್ಚನಾ ಎಚ್‌.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ನಾವು ಬೆಳಗ್ಗೆ ಎದ್ದಾಕ್ಷಣ ಗಡಿಯಾರ ನೋಡುವುದಿಲ್ಲ. ಹಾಸಿಗೆಯ ಪಕ್ಕದಲ್ಲೇ ಅಲ್ಲೆಲ್ಲೋ ಬಿದ್ದಿರುವ ಮೊಬೈಲನ್ನು ಎತ್ತಿಕೊಂಡು ಅರೆಗಣ್ಣಿನಲ್ಲೇ ಗಂಟೆ ಎಷ್ಟಾಯ್ತು...

  • ಕ್ರಷ್‌ ಮತ್ತು ಲವ್‌, ಇವೆರಡೂ ಒಂದೇನಾ? ಇದು, ಇವತ್ತಿನ ಯುವ ಜನತೆಗಿರುವ ಗೊಂದಲ ಇದು. ಒಂದು ಸಲ ಕ್ರಷ್‌ ಶುರುವಾದರೆ ಮುಗೀತು. ಅದರ ಅಂಗೈಯಲ್ಲಿ ನಾವು. ಇಡೀ ಜಗತ್ತೇ...

  • ಅವನು ಉತ್ತರ, ಇವಳು ದಕ್ಷಿಣ. ಅವನು ಹುಬ್ಬಳ್ಳಿ ಹೈದ, ಇವಳು ಕರಾವಳಿ ಮೀನು. ಇಬ್ಬರ ಭಾಷೆ, ಸಂಪ್ರದಾಯ, ಸಂಸ್ಕೃತಿ, ಆಚಾರ-ವಿಚಾರಗಳೇ ಬೇರೆ ಬೇರೆ. ಆದರೆ ದೇವರು ಬರೆದ ಕಥೆಯಲ್ಲಿ...

  • ಮುದ್ದಿನ ಹುಡುಗಿ ಚೆಂದ ,ಮೌನದ ರೂಪವೇ ಅಂದ. ಚಂದಕ್ಕೆ ಚಂದ ಅಂತೆ ನಿನ್ನ ಅಂದವೂ... ಈ ಹಾಡು, ನಿನ್ನನ್ನು ನೋಡಿದ ಕೂಡಲೇ ಮನದ ಮೂಲೆಯಲ್ಲಿ ಪಲ್ಲವಿಸುತ್ತದೆ.ಮೌನಂ ಸಮ್ಮತಿ...

  • ಅವರ ಜೊತೆಗಾರ ರಾಜಕಾರಣಿಗಳ ಬಳಿ ಎರಡು ಮೂರು ಕಾರುಗಳಿದ್ದವು. ಆದರೆ ಗೃಹಸಚಿವ ಅನ್ನಿಸಿಕೊಂಡ ನಂತರವೂ ಇವರು ಸ್ವಂತದ ಕಾರು ಖರೀದಿಸಲಿಲ್ಲ. ಆಗ ಕೂಡ ಮಕ್ಕಳನ್ನು...

ಹೊಸ ಸೇರ್ಪಡೆ