Udayavni Special

ನೆಪ ಹೇಳ್ದೆ ಇದ್ದಕ್ಕಿದ್ದಂತೆ ಬಾ…


Team Udayavani, Oct 1, 2019, 5:00 AM IST

a-15

ನಿನ್ನ ನಿರೀಕ್ಷೆಯಲ್ಲಿ ಕಾಲ ಕಳೆಯಲು ಕಷ್ಟ ಆಗುತ್ತೆ. ಈಗ ಬರ್ತಾನೆ, ಆಗ ಬರ್ತಾನೆ ಎಂದು ಕನಸು ಕಾಣುತ್ತಾ ಕೂರುವುದು “ಸಿಲ್ಲಿ’ ಅನಿಸುತ್ತೆ. ಆದರೆ, ಹೀಗೆ ಕಾಯುವುದರಲ್ಲೂ ಒಂದು ಖುಷಿಯಿದೆ, ಪ್ರೀತಿಯಿದೆ…

ನನ್ನ ಹೃದಯವೆಂಬ ಪುಟ್ಟ ಗ್ರಹಕ್ಕೆ ಉಪಗ್ರಹವೊಂದ ಉಡಾಯಿಸಿ, ದೂರ ದೂರ ಹೋಗಿರುವೆ ನೀನು. ಅದು ನಿನಗೆ ಸಂಕೇತಗಳನ್ನು ಕಳುಹಿಸುತಿಹುದೋ, ಇಲ್ಲವೋ ನಾನರಿಯೇ?!

ಸಿಗದೇ ಇರುವುದಕ್ಕಾಗಿಯೇ ತಾನೇ ಈ ನಿನ್ನ ಮೌನ? ಆ ಮೌನ ರಾಗದ ಝೇಂಕಾರವು ಪ್ರತಿ ರಾತ್ರಿ ನನ್ನ ನಿದ್ರೆ ಮಾಡದಂತೆ ಮಾಡಿಬಿಟ್ಟಿದ್ದೆಯಲ್ಲ.

ನಿನ್ನ ನೆನಪಿಗೆ ಹಚ್ಚೆಯನ್ನಾದರೂ ಹಾಕಿಕೊಂಡು ಕೂರೋಣ ಎಂದರೆ ನಿನ್ನ ಹೆಸರೇನೆಂದೇ ತಿಳಿದಿಲ್ಲ ಎನಗೆ. ನಿನ್ನ ಕಾವ್ಯನಾಮವೋ, ಪ್ರೇಮನಾಮವೋ, ಅಂಕಿತನಾಮವೋ ಏನೆನ್ನಲಿ ಅದೊಂದೇ ನನಗೆ ತಿಳಿದುಹುದು. ಆ ಕಾವ್ಯನಾಮದ ಹಚ್ಚೆ ಹಾಕಪ್ಪಾ ಎಂದು ಕುಳಿತರೆ ಹಚ್ಚೆ ಹಾಕುವವನು ನಗುವುದಿಲ್ಲವೆ?

ಹೃದಯದ ಅರಮನೆಗೆ ಬೀಗ ಹಾಕಿ, ಕೀಲಿಕೈ ತೆಗೆದುಕೊಂಡು ಹೋಗಿರುವ ನಿನ್ನನು ಎಲ್ಲಿ ಹುಡುಕಲಿ ಹೇಳು ಗೆಳೆಯ? ಒಮ್ಮೆ ಸಿಕ್ಕಿ ಬಿಡು, ನೀನೊಮ್ಮೆ ಸಿಕ್ಕಿಬಿಟ್ಟರೆ, ನನ್ನ ಹೃದಯದಲ್ಲಿ ಭದ್ರವಾಗಿ ಹಿಡಿದಿಟ್ಟು, ಕೀಲಿ ಹಾಕಿ ಕೀಲಿಕೈಯನ್ನು ದೂರ ಬಿಸಾಡಿ ಬಿಡುವೆ, ಯಾರಿಗೂ ಸಿಗದಂತೆ.

ನಿನ್ನ ಹೆಸರು,ವಿಳಾಸವನ್ನು ನಾನರಿಯದಿದ್ದರೆ ಏನಾಯ್ತು? ನನ್ನ ಪತ್ರಗಳಿಂದ ನಿನಗದು ತಿಳಿದಿದೆಯಲ್ಲ, ಒಮ್ಮೆ ಯಾರಿಗೂ ಹೇಳದಂತೆ ಅನಿರೀಕ್ಷಿತವಾಗಿ ನೀನು ಬಂದೇ ಬರುತ್ತೀಯ ಎಂಬ ನಿರೀಕ್ಷೆ ಇದೆ. ನಿನಗಾಗಿ ನಿರೀಕ್ಷೆ ಮಾಡುತ್ತಾ ಕೂರುವುದು ಒಮ್ಮೊಮ್ಮೆ ಅಸಹನೀಯ ಅನಿಸುತ್ತದೆ. ಆದರೆ ಕಾಯುವುದು ಕಷ್ಟವೇನೂ ಅಲ್ಲ. ಹಿಂದೆ ರಾಮನ ಬರುವಿಕೆಗಾಗಿ ಕಾದ ಶಬರಿ, ಅಹಲ್ಯೆಯರಿಗೆ ಕಾದು ಕಾದು ಸುಸ್ತಾದರೂ ಅವನು ಬಂದಾಗ ಖುಷಿಯಾಗಲಿಲ್ಲವೇನು?ಜಯ ವಿಜಯರು ಮೂರು ಜನುಮಗಳನ್ನು ಕಾದು ವಿಷ್ಣುವಿನ ಬಳಿ ಸೇರಲಿಲ್ಲವೇನು? ಹಾಗೇ, ಒಂದು ದಿನ ನೀನು ಬರುವೆ. ಇಂದಲ್ಲ ದಿದ್ದರೆ ನಾಳೆ,ನಾಳೆ ಯಲ್ಲದಿದ್ದರೆ ನಾಡಿದ್ದು, ವಾರ,ತಿಂಗಳು,ಋತು,ಆಯನಗಳ ಗಡಿ ರೇಖೆ ದಾಟಿ ನೀನು ಬಂದೇ ಬರುವೆ ಎಂಬ ಭರವಸೆ ಇದೆ.

ಭರವಸೆಯ ಹುಸಿ ಮಾಡದೆ ಎಂದಾದರೂ ಒಂದು ದಿನ ಬಾ.

ಉಲೂಚಿ

ಟಾಪ್ ನ್ಯೂಸ್

gangavati-1

ಗಂಗಾವತಿ: ಐದು ದಿನಗಳ ಲಾಕ್ ಡೌನ್ ಘೋಷಣೆ ಹಿನ್ನೆಲೆ, ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ

gffvc

ಸರ್ಕಾರ, ಜನರ ನಿರ್ಲಕ್ಷ್ಯವೇ ಇಂದಿನ ಕೋವಿಡ್ ಪರಿಸ್ಥಿತಿಗೆ ಕಾರಣ : ಮೋಹನ್ ಭಾಗವತ್

ತೌಖ್ತೆಗೆ ನಲುಗಿದ ಕರಾವಳಿ : ಕರಾವಳಿಯ ಮೂರು ಜಿಲ್ಲೆಗಳಲ್ಲಿ ಮಳೆ ಅಬ್ಬರ

ತೌಖ್ತೆಗೆ ನಲುಗಿದ ಕರಾವಳಿ : ಮೂರು ಜಿಲ್ಲೆಗಳಲ್ಲಿ ಮಳೆ ಅಬ್ಬರ, ಇಂದು ರೆಡ್‌ ಅಲರ್ಟ್‌

ಇನ್ನೇನು ಸುಡಲು ಸಿದ್ಧವಾಗಿದ್ದಾಗ, ಅಜ್ಜಿ ಎಚ್ಚರಾಗಿ ಅತ್ತಳು!

ಇನ್ನೇನು ಸುಡಲು ಸಿದ್ಧವಾಗಿದ್ದಾಗ, ಅಜ್ಜಿ ಎಚ್ಚರಾಗಿ ಅತ್ತಳು!

gthrtht

ಭಾನುವಾರದ ನಿಮ್ಮ ಗ್ರಹಬಲ : ಇಲ್ಲಿದೆ ನೋಡಿ ರಾಶಿಫಲ

home

ಹೋಮ್‌ ಐಸೊಲೇಶನ್‌ : ದ.ಕ.ದಲ್ಲಿ ಸ್ಥಳಾಂತರ ಆರಂಭ; ಉಡುಪಿ ಜಿಲ್ಲೆಯಲ್ಲಿ ಸದ್ಯಕ್ಕಿಲ್ಲ

8,793 ಕೋಟಿ ರೂ. ಸಾಲ: ಏರಿಂಡಿಯಾಗೆ ನೋಟಿಸ್‌

8,793 ಕೋಟಿ ರೂ. ಸಾಲ: ಏರಿಂಡಿಯಾಗೆ ನೋಟಿಸ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೆಹಲಿಯಲ್ಲಿ ಕೋವಿಡ್ 19 ಲಾಕ್ ಡೌನ್ ಮತ್ತೆ ವಿಸ್ತರಿಸಬೇಡಿ

udayavani youtube

ರಾಯಚೂರು ; ಫುಲ್ ಲಾಕ್ ಡೌನ್ ಹಿನ್ನೆಲೆ ಎಣ್ಣೆ ಖರೀದಿಗೆ ಮುಗಿಬಿದ್ದ ಮದ್ಯಪ್ರಿಯರು

udayavani youtube

Oxygen ನಮಗೆ ಬೇಕಿರುವುದಕ್ಕಿಂತ ಜಾಸ್ತಿನೇ ಇದೆ

udayavani youtube

ತೌಖ್ತೆ ಚಂಡಮಾರುತ ಎಫೆಕ್ಟ್ ; ಕಡಲ್ಕೊರೆತದ ಅಬ್ಬರಕ್ಕೆ ಸಮುದ್ರ ಪಾಲಾದ ಮನೆ!

udayavani youtube

ಕೋವಿಡ್ ಸೋಂಕಿತರೊಂದಿಗೆ ಡ್ಯಾನ್ಸ್ ಮಾಡಿ ರಂಜಿಸಿದ ಜೆಡಿಎಸ್ ಶಾಸಕ ಅನ್ನದಾನಿ

ಹೊಸ ಸೇರ್ಪಡೆ

gangavati-1

ಗಂಗಾವತಿ: ಐದು ದಿನಗಳ ಲಾಕ್ ಡೌನ್ ಘೋಷಣೆ ಹಿನ್ನೆಲೆ, ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ

gffvc

ಸರ್ಕಾರ, ಜನರ ನಿರ್ಲಕ್ಷ್ಯವೇ ಇಂದಿನ ಕೋವಿಡ್ ಪರಿಸ್ಥಿತಿಗೆ ಕಾರಣ : ಮೋಹನ್ ಭಾಗವತ್

pregnant-woman-wearing-pink-holding-her-belly

ಮುಟ್ಟಾದ ಮಹಿಳೆ, ಗರ್ಭಿಣಿಯರು ಕೋವಿಡ್ ಲಸಿಕೆ ಪಡೆಯಬಹುದೇ : ವೈದ್ಯರ ಸಲಹೆ ಏನು?

ತೌಖ್ತೆಗೆ ನಲುಗಿದ ಕರಾವಳಿ : ಕರಾವಳಿಯ ಮೂರು ಜಿಲ್ಲೆಗಳಲ್ಲಿ ಮಳೆ ಅಬ್ಬರ

ತೌಖ್ತೆಗೆ ನಲುಗಿದ ಕರಾವಳಿ : ಮೂರು ಜಿಲ್ಲೆಗಳಲ್ಲಿ ಮಳೆ ಅಬ್ಬರ, ಇಂದು ರೆಡ್‌ ಅಲರ್ಟ್‌

ಇನ್ನೇನು ಸುಡಲು ಸಿದ್ಧವಾಗಿದ್ದಾಗ, ಅಜ್ಜಿ ಎಚ್ಚರಾಗಿ ಅತ್ತಳು!

ಇನ್ನೇನು ಸುಡಲು ಸಿದ್ಧವಾಗಿದ್ದಾಗ, ಅಜ್ಜಿ ಎಚ್ಚರಾಗಿ ಅತ್ತಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.