ಅಜ್ಜ- ಅಜ್ಜಿ ಕೊಟ್ಟ ಒಂದು ಡ್ರಾಪ್
Team Udayavani, Jul 3, 2018, 6:00 AM IST
ಸುಮಾರು 22 ವರ್ಷಗಳ ಹಿಂದಿನ ಘಟನೆ. ನಾನು ಆಗ ಪ್ರೈಮರಿ ಸ್ಕೊಲ್ನಲ್ಲಿ ಓದ್ತಾ ಇದ್ದೆ. ಒಂದು ದಿನ ಕೋ ಕೋ ಪ್ರಾಕ್ಟೀಸ್ ಮುಗಿಸಿ ಮನೆಗೆ ಬರ್ತಾ ಇದ್ದೆ. ಸ್ವಲ್ಪ ಲೇಟ್ ಆಗಿತ್ತು. ಅಷ್ಟರಲ್ಲಾಗಲೇ ಕತ್ತಲೆ ಆವರಿಸಿತ್ತು. ಅರ್ಧ ದಾರಿಯವರೆಗೆ ನಡೆದು ಬರುವಾಗ ಯಾಕೋ ಹೆದರಿಕೆ ಶುರುವಾಯ್ತು. ಅಷ್ಟರಲ್ಲೇ ಅಮ್ಮ ಹೇಳಿದ್ದು ನೆನಪಾಯ್ತು; “ಲೇಟ್ ಆದ್ರೆ ಒಬ್ಬಳೇ ಬರಬೇಡ. ಯಾರಾದ್ರೂ ನಮ್ಮೂರಿಗೆ ಬರುವವರು ಸಿಗ್ತಾರೆ’ ಅಂತ.
ಆದರೆ, ಅವತ್ತು ನನ್ನ ಗ್ರಹಚಾರಕ್ಕೆ ಯಾವ ನರಪಿಳ್ಳೇನೂ ಬರಲೇ ಇಲ್ಲ. ಅಷ್ಟರಲ್ಲೇ ಒಂದು ಕಾರು ಬಂದು ನನ್ನ ಬಳಿ ನಿಂತಿತು. ಅದರಲ್ಲಿ ವಯಸ್ಸಾದ ಅಜ್ಜ- ಅಜ್ಜಿ ಇದ್ರು. ನನ್ನ ಬಳಿ ಆ ಅಜ್ಜ, ಸುಬ್ರಮಣ್ಯ ದೇವಸ್ಥಾನದ ದಾರಿ ಕೇಳಿದ್ರು. ನಾನು ಸ್ವಲ್ಪ ಟೆನ್ಸ್ನ್ನಲ್ಲಿ ಇದ್ದರೂ ಸರಿಯಾಗಿಯೇ ದಾರಿ ಹೇಳಿದ್ದೆ. ಅಜ್ಜಿ ನನ್ನ ಹತ್ರ ಕೇಳಿದ್ರು, “ಯಾಕೆ ಈ ಸಂಜೆಗತ್ತಲಲ್ಲಿ ಒಬ್ಬಳೇ ಇಲ್ಲಿ ನಿಂತಿದೀಯಾ?’. ನಾನು ಇದ್ದ ವಿಷಯ ಹೇಳಿದೆ. ಆಗ ಅವರು, “ಹೀಗೆಲ್ಲಾ ಒಬ್ಬಳೆ ನಿಲ್ಲಬೇಡ. ನಿನ್ನ ಮನೆ ತೋರಿಸು, ಬಾ… ನಿನ್ನನ್ನು ಮನೆಗೆ ಬಿಟ್ಟು ನಾವು ದೇವಸ್ಥಾನಕ್ಕೆ ಹೋಗ್ತಿವಿ’ ಅಂತ ನನ್ನನ್ನು ಮನೆಗೆ ಮುಟ್ಟಿಸಿದರು. ಅವರಿಬ್ಬರ ಹೆಸರು ಕೇಳಲು ಅಂದು ನಾನು ಮರೆತೇಬಿಟ್ಟೆ. ಆದರೆ, ಇವತ್ತು ಎಲ್ಲಾದರೂ ಸಂಜೆಗತ್ತಲಿನಲ್ಲಿ ಒಬ್ಬಂಟಿಯಾಗಿದ್ದೇನೆ ಎಂದಾಗಲೆಲ್ಲ ಆ ಅಜ್ಜ- ಅಜ್ಜಿಯ ಮುಖಗಳು ಕಣ್ಮುಂದೆ ಬರುತ್ತವೆ. ಅವರಿಗೆ ನನ್ನ ದೊಡ್ಡ ಥ್ಯಾಂಕ್ಸ್.
ಪ್ರೇಮಾ ಲಿಂಗದಕೋಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ
Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ
Gobi Manchurian ಬ್ಯಾನ್ ಎಫೆಕ್ಟ್: ಚಾಟ್ಸ್ ಮಾರಾಟ ಕುಸಿತ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು
Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ