ಖುಷಿ ಕೊಡುವ ಕೃಷಿ ಎಂಜಿನಿಯರಿಂಗ್‌

Team Udayavani, Jan 14, 2020, 5:31 AM IST

ಕೈ ಕೆಸರು ಮಾಡಿಕೊಂಡು, ಬಾಯಿಗೆ ಮೊಸರು ಹಾಕಿಕೊಳ್ಳುವುದು ಇವತ್ತು ಎಂಜಿನಿಯರಿಂಗ್‌ ಆಗಿದೆ. ಕೃಷಿ ಎಂದರೆ, ಅಪ್ಪ ಹಾಕಿದ ಆಲದ ಮರದಂತಲ್ಲ. ಅದರ ಸುತ್ತಲೂ ನಮ್ಮ ತಂತ್ರಜ್ಞಾನದ ಮೂಲಕ ವಿಶೇಷ ಬೆಳೆಗಳನ್ನು ತೆಗೆಯಬಹುದು. ಕೃಷಿಗೆ ತಂತ್ರಜ್ಞಾನವನ್ನು ಜೋಡಿಸುವವನು ಕೃಷಿ ಎಂಜಿನಿಯರ್‌. ಈಗ ಈ ಕೋರ್ಸ್‌ಗೆ, ಅದನ್ನು ಪೂರೈಸಿದೆ ಎಂಜಿನಿಯರ್‌ಗೆ ಒಳ್ಳೊಳ್ಳೆ ಕಂಪೆನಿಗಳಲ್ಲಿ ಉದ್ಯೋಗ ದೊರೆಯುತ್ತಿದೆ.

ಎಂಜಿನಿಯರಿಂಗ್‌ ವಿಭಾಗಗಳಲ್ಲಿ ಅತ್ಯಂತ ಆಕರ್ಷಕವಾಗಿ ಕಾಣುವುದು ಕೃಷಿ ಇಂಜಿನಿಯರಿಂಗ್‌ ಪದವಿ. ಕೃಷಿಗೆ ಸಂಬಂಧಿಸಿದ ಕಾಮಗಾರಿ, ಕೃಷಿ ಉಪಕರಣಗಳ ವಿನ್ಯಾಸ, ನಿರ್ಮಾಣ; ಕೃಷಿ ಯಂತ್ರಗಳ ಆವಿಷ್ಕಾರ-ಇವೆಲ್ಲವೂ ಕೃಷಿ ಇಂಜಿನಿಯರಿಂಗ್‌ನ ಕೊಡುಗೆ. ತಂತ್ರಜ್ಞಾನವನ್ನು ಕೃಷಿಯೊಂದಿಗೆ ಮೇಳೈಸುವುದೇ ಕೃಷಿ ಇಂಜಿನಿಯರಿಂಗ್‌. ಸಾಂಪ್ರದಾಯಿಕ ಕೃಷಿ, ಉಪಕರಣಗಳ ಬಳಕೆಯಿಂದ ಆಧುನಿಕ ಜಗತ್ತಿನ ಆಹಾರ ಬೇಡಿಕೆಗಳನ್ನು ಪೂರೈಸಲಾಗುವುದಿಲ್ಲ. ಹೊಸ ಮಾದರಿಯಲ್ಲಿ ನೀರಿನ ಸಂಗ್ರಹವಾಗಬೇಕು, ಜಲಸಂರಕ್ಷಣೆಯಾಗಬೇಕು. ಹೊಸಕಾಲದ ಸಂಗ್ರಹಕೋಠಿಗಳು, ಅಣೆಕಟ್ಟುಗಳು ಮತ್ತಿತರ ಸೌಕರ್ಯಗಳನ್ನು ಸೃಜಿಸುವುದರ ಅಗತ್ಯವಿದೆ. ಈ ಅಗತ್ಯವನ್ನು ಪೂರೈಸುವುದೇ ಕೃಷಿ ಇಂಜಿನಿಯರಿಂಗ್‌. ಕೇವಲ ಸೌಕರ್ಯಗಳನ್ನಷ್ಟೇ ಅಲ್ಲದೆ ಹೊಸ ಕಾಲದ ಸವಾಲುಗಳನ್ನು ಕೂಡ ಅದು ಸ್ವೀಕರಿಸುತ್ತದೆ. ಕೃಷಿ ತ್ಯಾಜ್ಯದ ಸಂಸ್ಕರಣ, ಕೃಷಿಯ ಕಾರಣದಿಂದ ಉಂಟಾಗಬಹುದಾದ ಮಾಲಿನ್ಯ ನಿವಾರಣೆ, ನಿಯಂತ್ರಣ ಇವೆಲ್ಲವೂ ಕೂಡ ಈ ಕಲಿಕೆಗೆ ಸಂಬಂಧಿಸಿದ್ದೇ ಪಾಚಿ, ಕೃಷಿ ತ್ಯಾಜ್ಯದ ಸಂಸ್ಕರಣಗಳಿಂದ ಹೊಸ ಬಗೆಯ ಜೈವಿಕ ಇಂಧನಗಳನ್ನು ಕೆಲವು ಕೃಷಿ ಇಂಜಿನಿಯರ್‌ಗಳು ಉತ್ಪಾದಿಸುವ ಪ್ರಯತ್ನಕ್ಕೂ ಕೈ ಹಾಕಿದ್ದಾರೆ.

ಕೃಷಿ ಇಂಜಿನಿಯರಿಂಗ್‌ ಸೇರುವುದು ಹೇಗೆ?
ಕೃಷಿ ಇಂಜಿನಿಯರಿಂಗ್‌ ಪದವಿಗೆ ಪ್ರವೇಶ ಪಡೆಯಲು ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನವನ್ನು ಐಚ್ಛಿಕವಾಗಿ ಓದಿದವರು, ಅದರಲ್ಲಿ ಕನಿಷ್ಠ ಶೇ. 50 ಅಂಕ ಗಳಿಸಿರುವವರು ಅರ್ಹರು. ಇದರಲ್ಲೇ ಸ್ನಾತಕೋತ್ತರ ಪದವಿ ಪಡೆಯಲು ಕೃಷಿ ಇಂಜಿನಿಯರಿಂಗ್‌ ಪದವೀಧರರಾಗಿದ್ದು, ವಿ.ವಿ. ವಿಧಿಸುವ ಇತರ ಮಾನದಂಡಗಳನ್ನು ಹೊಂದಿರಬೇಕು.ಪದವಿ ಮತ್ತು ಸ್ನಾತಕೋತ್ತರ ಪದವಿಗೆ ಕೆಲವು ಪ್ರವೇಶ ಪರೀಕ್ಷೆಗಳಿರುತ್ತವೆ. ಆಯಾ ರಾಜ್ಯದಲ್ಲಿ ಮತ್ತು ರಾಷ್ಟ್ರಮಟ್ಟದಲ್ಲಿ ನಡೆಯುವ ಈ ಪರೀಕ್ಷೆಗಳಲ್ಲಿ ಮುಖ್ಯವಾದವೆಂದರೆ- ICAR (Indian Council of Agricultural Research), AIEEE, JAT, UPSEAT, NERIST, GAT, IIT-JAM. ಕೃಷಿ ಎಂಜಿನಿಯರಿಂಗ್‌ ಪದವಿಯಲ್ಲಿ, ಸಾಯಿಲ್‌ ಸೈನ್ಸ್‌, ಹೈಡ್ರಾಲಜಿ, ಸಾಯಿಲ್‌ ಆಂಡ್‌ ವಾಟರ್‌ ಕನ್ಸ್‌ರ್ವೆಷನ್‌ ಇಂಜಿನಿಯರಿಂಗ್‌, ಇರಿಗೇಷನ್‌ ಇಂಜಿನಿಯರಿಂಗ್‌, ಗ್ರೌಂಡ್‌ ವಾಟರ್‌ ಅಂಡ್‌ ವೆಲ್‌ ಇಂಜಿನಿಯರಿಂಗ್‌, ಪಂಪ್ಸ್‌ ಎಂಜಿನಿಯರಿಂಗ್‌ ಅಂಡ್‌ ಹೈಡ್ರಾಲಿಕ್‌ ಕಂಟ್ರೋಲ್‌ ಮುಂತಾದ ವಿಷಯಗಳನ್ನು ಕಲಿಯಬಹುದು.

ಕೃಷಿ ಇಂಜಿನಿಯರಿಂಗ್‌ ಕೆರಿಯರ್‌
ಕೃಷಿ ಎಂಜಿನಿಯರ್‌ಗಳು ಫಾರ್ಮಿಂಗ್‌, ಫಾರೆಸ್ಟ್ರಿ, ಆಹಾರ ಸಂಸ್ಕರಣ ಇತ್ಯಾದಿ ಕ್ಷೇತ್ರಗಳಲ್ಲಿ ತೊಡಗಿಕೊಳ್ಳಬಹುದು. ಉದಾಹರಣೆ-ಪಶುಸಂಗೋಪನೆಗೆ ಸಂಬಂಧಿಸಿದಂತೆ ಕೊಟ್ಟಿಗೆಯ ತಾಪಮಾನ ನಿಯಂತ್ರಿಸುವ ಉಪಕರಣದ ಮೂಲಕ ಪಶುಸಂವರ್ಧನೆಗೆ ಅವರು ನೆರವಾಗಬಹುದು. ಭೂಮಿಯ ಫ‌ಲವತ್ತತೆಯನ್ನು ಅಳೆಯುವ ಆಧುನಿಕ ತಂತ್ರಜ್ಞಾನ ಮತ್ತು ಆರ್ಟಿಫಿಷಿಯಲ್‌ ಇಂಟಲಿಜೆನ್ಸ್‌ನ ಬಳಕೆ ಕೂಡ ಇಲ್ಲಿ ಉಂಟು. ಅಗ್ರಿಕಲ್ಚರಲ್‌ ಇಂಜಿನಿಯರ್‌, ಪ್ಲಾಂಟ್‌ ಫಿಸಿಯಾಲಜಿಸ್ಟ್‌, ಎನ್ವಿರಾನ್‌ಮೆಂಟಲ್‌ ಕಂಟ್ರೋಲ್ಸ್‌ ಎಂಜಿನಿಯರ್‌, ಫ‌ುಡ್‌ ಸೂಪರ್‌ವೈಸರ್‌, ಫಾರ್ಮ್ಶಾಪ್‌ ಮ್ಯಾನೇಜರ್‌, ಅಗ್ರಿಕಲ್ಚರಲ್‌ ಕ್ರಾಪ್‌ ಎಂಜಿನಿಯರ್‌ ಮೊದಲಾದ ಹುದ್ದೆಗಳಿಗೆ ಇವರು ಸೇರಬಹುದು. ಅಂಕಿ ಅಂಶಗಳ ಪ್ರಕಾರ, ಕೃಷಿ ಎಂಜಿನಿಯರಿಂಗ್‌ ಮುಗಿಸಿದ ಪದವೀಧರರಲ್ಲಿ ಶೇ.17ರಷ್ಟು ಅಗ್ರಿಕಲ್ಚರಲ್‌ ಎಂಜಿನಿಯರ್‌ಗಳಾಗಿ, ಶೇ.16ರಷ್ಟು ಮಂದಿ ಸರ್ಕಾರಿ ಇಲಾಖೆಗಳಲ್ಲಿ, ಶೇ.14ರಷ್ಟು ಜನ ಆಹಾರ ತಯಾರಿಕಾ ಘಟಕಗಳಲ್ಲಿ, ಶೇ.13ರಷ್ಟು ಅಗ್ರಿಕಲ್ಚರಲ್‌ ಕನ್ಸ್‌ಟ್ರಕ್ಷನ್‌ ಮತ್ತು ಮೈನಿಂಗ್‌ ಯಂತ್ರಗಳ ಉತ್ಪಾದನೆಗಳಲ್ಲಿ ಮತ್ತು ಶೇ.6ರಷ್ಟು ಜನ ಬೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಮುಲ್‌, ನೆಸ್ಲೆ, ಐಟಿಸಿ, ಎಸ್ಕಾರ್ಟ್ಸ್, ಪೊ› ಆಗ್ರೋಸೀಡ್ಸ್‌ ಮೊದಲಾದ ಕಂಪೆನಿಗಳಲ್ಲಿ ಕೃಷಿ ಇಂಜಿನಿಯರ್‌ಗಳ ನೇಮಕಾತಿ ನಡೆಯುತ್ತಿರುತ್ತದೆ. ಆರಂಭದಲ್ಲಿ ಮಾಸಿಕ ಪಗಾರ 30-40 ಸಾವಿರಗಳಷ್ಟಿದ್ದು, ಕ್ರಮೇಣ ಹೆಚ್ಚುತ್ತದೆ. ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು ಎನ್ನುವುದು ಈ ಕೃಷಿ ಎಂಜಿಯರಿಂಗ್‌ ಮಟ್ಟಿಗೆ ನಿಜ!

ಪ್ರೊ. ರಘು. ವಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಸರ್ಕಾರಿ ಶಾಲೆ ಶಿಕ್ಷಕರು ಅಂದರೆ, ಬರೀ ಮೀಟಿಂಗ್‌, ರಜೆ ಇಷ್ಟರಲ್ಲೇ ಕಾಲ ಕಳೆಯುತ್ತಾರೆ ಅಂತ ಸುಲಭವಾಗಿ ಆರೋಪಿಸಬಹುದು. ಆದರೆ, ಮೂಡಿಗೆರೆ ತಾಲೂಕಿನ ಈ ಶಿಕ್ಷಕರ...

  • 19ನೇ ಶತಮಾನದ ಶ್ರೇಷ್ಠ ತಣ್ತೀಜ್ಞಾನಿಗಳಲ್ಲಿ ಒಬ್ಬನಾಗಿದ್ದ ಎ.ಎನ್‌. ವೈಟ್‌ಹೆಡ್‌ ಗಣಿತಜ್ಞನೂ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಗಣಿತದ ಪೊ›ಫೆಸರನೂ ಆಗಿದ್ದ....

  • ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಶಾಲೆಗೆ ಶಿಕ್ಷಕನಾಗಿ ಸೇರಿದೆ. ಗ್ರಾಮೀಣ ಹಿನ್ನೆಲೆಯಿಂದ ಬಂದ ನನ್ನ ಬೋಧನಾ ಶೈಲಿ, ಇಂಗ್ಲೀಷ್‌ ಭಾಷೆ ಆರಂಭದಲ್ಲಿ ಅಲ್ಲಿಯ ಶ್ರೀಮಂತ...

  • ಗ್ರೂಪ್‌ಸ್ಟಡಿ ಮಾಡಬೇಕಾ ಬೇಡವಾ? ಈ ಮಕ್ಕಳು ಗ್ರೂಪ್‌ ಸ್ಟಡಿ ಅಂತ ಹೇಳ್ಕೊಂಡು ಏನೂ ಓದಲ್ಲ. ಬೇಡದ್ದೇ ಮಾಡ್ತವೆ ಅನ್ನೋ ಆರೋಪವೂ ಇದೆ. ಇಂಥ ಸಂದರ್ಭದಲ್ಲೇ ಗ್ರೂಪ್‌...

  • ಹಳ್ಳಿಗೆ ಹೋಗಿ ಕೆಲ್ಸ ಮಾಡೋದು ವೈದ್ಯ ವೃತ್ತಿಗೆ ಕಡ್ಡಾಯ. ದೇಶದ ಎಕಾನಿಮಿಯ ಹೃದಯ ಗ್ರಾಮೀಣ ಭಾಗ. ಎಲ್ಲರೂ ಹಳ್ಳಿಯ ಕಡೆ ನೋಡುತ್ತಿರುವುದು ಇದೇ ಕಾರಣಕ್ಕೆ. ಹೀಗಾಗಿ,...

ಹೊಸ ಸೇರ್ಪಡೆ